ಚಂಡಮಾರುತ ಹೆಲೀನ್
ಚಂಡಮಾರುತದಿಂದ ಚೇತರಿಕೆಯ ಪ್ರಕ್ರಿಯೆಯು ಅಪರಿಚಿತರನ್ನು ಹೀರೋಗಳನ್ನಾಗಿಸುತ್ತಿದೆ.
ನಾರ್ತ್ ಕೆರೊಲಿನಾದ ಓಲ್ಡ್ ಫೋರ್ಟ್ ಒಂದು ಸುಂದರವಾದ ಪುಟ್ಟ ಪಟ್ಟಣವಾಗಿದ್ದು, ಅದರ ಹಿನ್ನೆಲೆಯಲ್ಲಿ ಬ್ಲೂ ರಿಡ್ಜ್ ಪರ್ವತಗಳಿವೆ. ಸಾಮಾನ್ಯ ದಿನದಲ್ಲಿ, ಬೈಕ್ ಸವಾರರು ಮತ್ತು ಪಾದಯಾತ್ರಿಗಳು ಹತ್ತಿರದ ಪಿಸ್ಗಾಹ್ ನ್ಯಾಷನಲ್ ಫಾರೆಸ್ಟ್ ಅನ್ನು ಅನ್ವೇಷಿಸುವಾಗ ಛಾವಣಿ ಹೊಂದಿರುವ ಸೇತುವೆಗಳ ಅಡಿಯಲ್ಲಿ ತೊರೆಯು ಹರಿಯುತ್ತಿರುವುದು ಕಂಡುಬರುತ್ತದೆ.
"ನೀವು ಇಲ್ಲಿ ದೀರ್ಘಕಾಲದಿಂದ ವಾಸಿಸುವವರಾಗಿದ್ದರೆ, ಏನಾದರೂ ಕೊಳ್ಳಲು ಅಂಗಡಿಗೆ ಹೋಗುವಾಗ ನಿಮಗೆ ತಿಳಿದಿರುವ 20 ಜನರನ್ನಾದರೂ ನೋಡುತ್ತೀರಿ," ಎಂದು ಪಟ್ಟಣದ ಬಹುತೇಕ ಎಲ್ಲರ ಪರಿಚಯವಿರುವ ಹಾಗೂ ತಮ್ಮ ಜೀವನವನ್ನು ಅಲ್ಲಿಯೇ ಕಳೆಯುತ್ತಿರುವ ಮೆಲಿಸ್ಸಾ ಹೇಳಿದರು.
ಮೆಲಿಸ್ಸಾ ತಮ್ಮ ಎಲ್ಲಾ ಮೂರು Airbnb ಗಳನ್ನು ನಿರ್ವಸಿತರಾದ ಸ್ಥಳೀಯರಿಗೆ ಮತ್ತು ಸ್ವಯಂಸೇವಕರಿಗೆ ಉಚಿತವಾಗಿ ತೆರೆದರು.
ಸೆಪ್ಟೆಂಬರ್ 26, 2024 ರಂದು, ಹೆಲೀನ್ ಚಂಡಮಾರುತವು ಮೂರು ದಿನಗಳಲ್ಲಿ 15.5 ಇಂಚುಗಳಿಗಿಂತ ಹೆಚ್ಚು ಮಳೆಯನ್ನು ಸುರಿಸಿತು. ಸಣ್ಣ ತೊರೆಗಳು ರೌದ್ರಾವತಾರ ತಾಳಿದ ನದಿಗಳಾಗಿ ರೂಪಾಂತರಗೊಂಡವು, ಮನೆಗಳನ್ನು ತಮ್ಮ ಅಡಿಪಾಯ ಸಮೇತ ನೆಲಸಮಗೊಳಿಸಿದವು ಮತ್ತು ತಲೆಮಾರುಗಳಿಂದ ನಿಂತಿದ್ದ ಮರಗಳನ್ನು ಧರಾಶಾಹಿಯಾಗಿಸಿದವು. ಪರ್ವತದ ಇಳಿಜಾರುಗಳಲ್ಲಿ ಮಣ್ಣು ಕುಸಿತದಿಂದ ಕಾರುಗಳು ಮಣ್ಣಿನಡಿ ಹೂತು ಹೋದವು, ವಿದ್ಯುತ್ ಮತ್ತು ಸೆಲ್ಯುಲಾರ್ ಗೋಪುರಗಳು ಧರಾಶಾಹಿಯಾಗಿ ಸಂಪೂರ್ಣ ಪ್ರದೇಶದಲ್ಲಿ ಸಂಪರ್ಕ ಕಡಿತಗೊಳಿಸಿದವು, ನೆರೆಹೊರೆಯವರೂ ಪರಸ್ಪರ ಸಂಪರ್ಕದಿಂದ ಕಡಿತಗೊಂಡರು.

ಹೆಲೀನ್ ಮತ್ತು ಮಿಲ್ಟನ್ ಚಂಡಮಾರುತಗಳು ಪಶ್ಚಿಮ ಉತ್ತರ ಕೆರೊಲಿನಾದಾದ್ಯಂತ 73,000 ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿವೆ.
"ಆ ಭಾವನೆಯನ್ನು ನಿಮಗೆ ವಿವರಿಸಲು ಸಾಧ್ಯವಿಲ್ಲ—ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಲ್ಲರ ಪ್ರಪಂಚ ಬದಲಾಗಿತ್ತು," ಎಂದು ಮೆಲಿಸ್ಸಾ ಹೇಳಿದರು.
ವಿಶಿಷ್ಟ ಓಲ್ಡ್ ಫೋರ್ಟ್ ಉತ್ಸಾಹದಂತೆ, ಸಮುದಾಯದ ಸ್ಪಂದನೆ ತಕ್ಷಣವಾಗಿತ್ತು. "ಪ್ರತಿಯೊಬ್ಬರೂ ಆಚೀಚೆಗೆ ತೆರಳಲು ಗೇಟರ್ ಅಥವಾ ಮ್ಯೂಲ್ ಹೊಂದಿರುವುದರಿಂದ, ದಾರಿಗಡ್ಡವಾಗಿದ್ದ ವಸ್ತುಗಳನ್ನು ತೆರವುಗೊಳಿಸಲು ತಮ್ಮ ಬಳಿ ಇದ್ದ ಗರಗಸ ಮತ್ತಿತರ ಪರಿಕರಗಳೊಂದಿಗೆ ಈ ಜನರು ದೊಡ್ಡ ಸಂಖ್ಯೆಯಲ್ಲಿ ಬರಲು ಪ್ರಾಂಭಿಸಿದರು." ಮೆಲಿಸ್ಸಾ ಎಂಟು ವರ್ಷಗಳಿಂದ Airbnb ಹೋಸ್ಟ್ ಆಗಿದ್ದಾರೆ. ಓಲ್ಡ್ ಫೋರ್ಟ್, ಆಶೆವಿಲ್ ಮತ್ತು ಬ್ಲ್ಯಾಕ್ ಮೌಂಟೇನ್‌ನಲ್ಲಿ ತಲಾ ಒಂದರಂತೆ ಆಕೆ ಈ ಪ್ರದೇಶಗಳಲ್ಲಿ ಮೂರು Airbnb ಗಳನ್ನು ಹೊಂದಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ. "ನನಗೆ ಪಶ್ಚಿಮ ಉತ್ತರ ಕೆರೊಲಿನಾ ತುಂಬಾ ಇಷ್ಟ ಮತ್ತು ಇಲ್ಲಿಗೆ ರಜಾಕಾಲವನ್ನು ಕಳೆಯಲು ಅಥವಾ ನಮ್ಮ ಸಮುದಾಯವನ್ನು ಮತ್ತೆ ಪುಟಿದೇಳುವಂತೆ ಮಾಡಲು ಸಹಾಯ ಮಾಡಲು ಬಂದಿರುವ ಜನರಿಗೆ ಸಾಧ್ಯವಾದಷ್ಟು ಆರಾಮದಾಯಕವಾಗಿರಲು ಸಹಾಯ ಮಾಡುವುದರಿಂದ ನನಗೆ ದೊರೆಯುವ ಸಂತೋಷ ಬೇರೆ ಯಾವುದರಿಂದಲೂ ದೊರೆಯದು."
ಹೆಲೀನ್ ಮತ್ತು ಮಿಲ್ಟನ್ ಚಂಡಮಾರುತಗಳು ಪಶ್ಚಿಮ ಉತ್ತರ ಕೆರೊಲಿನಾದಾದ್ಯಂತ 73,000 ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿವೆ.
"ಆ ಅನುಭವವನ್ನು ನಿಮಗೆ ವಿವರಿಸಲು ಸಾಧ್ಯವಿಲ್ಲ—ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಲ್ಲರ ಪ್ರಪಂಚ ಬದಲಾಗಿತ್ತು."
ಚಂಡಮಾರುತದ ನಂತರ, ಮೆಲಿಸ್ಸಾ ತಮ್ಮ ಮನೆಗಳನ್ನು Airbnb.org ಮೂಲಕ 24 ಸ್ವಯಂಸೇವಕ ಗುಂಪುಗಳಿಗೆ ಮತ್ತು ಚಂಡಮಾರುತದಿಂದ ಸ್ಥಳಾಂತರಗೊಂಡ 13 ಕುಟುಂಬಗಳಿಗೆ ತೆರೆದಿದ್ದಾರೆ.
"ತಮ್ಮ ಚರ್ಚ್ ಅಥವಾ ಲಾಭೋದ್ದೇಶರಹಿತ ಸಂಸ್ಥೆ 2,000 ಜನರಿಗೆ ಸಾಕಾಗುವಷ್ಟು ಆಹಾರ ಒದಗಿಸುತ್ತಿದೆ ಎಂದು ಹೇಳುವ ಗ್ರೂಪ್ ಪೋಸ್ಟ್ ಅನ್ನು ನೀವು ಪ್ರತಿ ದಿನ ನೋಡಬಹುದು," ಎಂದು ಅವರು ಹೇಳಿದರು. "ವಿದ್ಯುತ್ ಅಥವಾ ಉದ್ಯೋಗವಿಲ್ಲದ ಜನರು ಇನ್ನೂ ಇದ್ದಾರೆ."
ಮೆಲಿಸ್ಸಾ ಮತ್ತು ಅವರ ಗೆಸ್ಟ್‌ಗಳಲ್ಲಿ ಒಬ್ಬರಾದ ಅಮಾಂಡಾ ದೀರ್ಘಕಾಲದ ನಿವಾಸಿ ಮಿಸ್ ಜಾಯ್ಸ್ ಅವರೊಂದಿಗೆ ಸ್ನೇಹ ಬೆಳೆಸಿದರು.
"ಮನೆಗಳನ್ನು ಕಳೆದುಕೊಂಡ ಹಲವಾರು ಸ್ಥಳೀಯರಿಗೆ ಮತ್ತು ವಿದ್ಯುತ್, ನೀರು ಮತ್ತು ಇಂಟರ್ನೆಟ್ ಹೊಂದಿರದ ಇತರರಿಗೆ ಆತಿಥ್ಯ ನೀಡಲು ನಮಗೆ ಸಾಧ್ಯವಾಗಿದೆ."
NC ಯ ಜೇಮ್ಸ್‌ಟೌನ್‌ನ ಸ್ವಯಂಸೇವಕಿಯಾಗಿರುವ ಅಮಾಂಡಾ, ಒಂದು ಕಾರು ತುಂಬಾ ಡೈಪರ್‌ಗಳು, ಶಿಶುಗಳಿಗಾಗಿ ಹಾಲಿನ ಪುಡಿ ಮತ್ತು ತುರ್ತು ಸರಬರಾಜುಗಳೊಂದಿಗೆ ಮೆಲಿಸ್ಸಾ ಅವರ Airbnb ಗೆ ಆಗಮಿಸಿದರು. ಏಕ ವಾಸ್ತವ್ಯವಾಗಿ ಆರಂಭವಾದ ಈ ಚಟುವಟಿಕೆ ಈಗ ಕುಟುಂಬದ ಧ್ಯೇಯೋದ್ದೇಶವಾಗಿ ಪರಿವರ್ತನೆಯಾಗಿದೆ. ಅಮಾಂಡಾ ತಮ್ಮ ಮಕ್ಕಳಾದ 13 ವರ್ಷದ ಆವಿಸ್ ಮತ್ತು 10 ವರ್ಷದ ಬ್ರಿಗ್ಸ್ ಅವರನ್ನು ನಂತರದ ಟ್ರಿಪ್‌ಗಳಿಗೆ ಕರೆದುಕೊಂಡು ಬಂದರು ಹಾಗೂ ಮೆಲಿಸ್ಸಾ ಅವರ ಬಾಡಿಗೆ ಸ್ಥಳವನ್ನು ಪರಿಹಾರ ಕಾರ್ಯಾಚರಣೆಗಳ ತಾಣವನ್ನಾಗಿ ಪರಿವರ್ತಿಸಿದರು.
ಹೆಲೀನ್ ಚಂಡಮಾರುತ ಅಪ್ಪಳಿಸಿ ಮೂರು ತಿಂಗಳ ನಂತರವೂ ಓಲ್ಡ್ ಫೋರ್ಟ್ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿದೆ. ಆದರೆ ಇವೆಲ್ಲದರ ನಡುವೆ, ಮೆಲಿಸ್ಸಾ ಅವರ ಪ್ರಾಪರ್ಟಿಗಳು ಆಕೆಯ ಪ್ರೀತಿಯ ಹುಟ್ಟೂರನ್ನು ಪುನರ್ನಿಮಿಸಲು ಸಹಾಯ ಮಾಡುವವರಿಗೆ ಆಶ್ರಯ ಮತ್ತು ಸಮುದಾಯದ ಬೆಂಬಲವನ್ನು ಒದಗಿಸುತ್ತಿವೆ. "ಮನೆಗಳನ್ನು ಕಳೆದುಕೊಂಡ ಹಲವಾರು ಸ್ಥಳೀಯರಿಗೆ ಮತ್ತು ವಿದ್ಯುತ್, ನೀರು ಹಾಗೂ ಇಂಟರ್ನೆಟ್ ಹೊಂದಿರದ ಇತರರಿಗೆ ಆತಿಥ್ಯ ನೀಡಲು ನಮಗೆ ಸಾಧ್ಯವಾಗಿದೆ. ನಮಗೆ ಸ್ಟಾರ್‌ಲಿಂಕ್ ಸೇವೆಯನ್ನು ಪಡೆದುಕೊಳ್ಳುವುದು ಸಹ ಸಾಧ್ಯವಾಗಿದ್ದರಿಂದ ಬಹಳಷ್ಟು ಸಹಾಯಕವಾಯಿತು. ಮತ್ತು, ಸಹಾಯ ಮಾಡಲೆಂದು ಹೊರರಾಜ್ಯದಿಂದ ಬರುತ್ತಿರುವ ಅನೇಕ ಸ್ವಯಂಸೇವಕರನ್ನೂ ನಾವು ಹೋಸ್ಟ್ ಮಾಡಿದ್ದೇವೆ."
ಅಮಾಂಡಾ ಅವರ ಕುಟುಂಬವು ಸ್ವಯಂಸೇವಕ ಕಾರ್ಯಗಳಲ್ಲಿ ಕೈಜೋಡಿಸಿತು.
ಮಕ್ಕಳು ಪುನರ್ವಸತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಊಟದ ಡೆಲಿವರಿಗಳಲ್ಲಿ ಸೇರಿಸಲು ಅವಿಸ್ ಉತ್ತೇಜಕ ಟಿಪ್ಪಣಿಗಳನ್ನು ಬರೆದರೆ, ಬ್ರಿಗ್ಸ್ ಸಾಲಿನಲ್ಲಿ ಬಂದ ಪ್ರತಿಯೊಂದು ಕಾರನ್ನು ಬರಮಾಡಿಕೊಂಡು ದೇಣಿಗೆ ಕೇಂದ್ರದಲ್ಲಿ "ತಿಂಗಳ ಗೌರವಾನ್ವಿತ ಉದ್ಯೋಗಿ" ಆದರು. "ಅವನು ಅಷ್ಟು ಕಷ್ಟಪಟ್ಟು ದುಡಿಯುವುದನ್ನು ನಾನು ಎಂದಿಗೂ ನೋಡಿಲ್ಲ, "ಎಂದು ಅಮಾಂಡಾ ನೆನಪಿಸಿಕೊಳ್ಳುತ್ತಾರೆ. "ಅದು ಒಂದು ಮಹತ್ತರ ತಿರುವಾಗಿತ್ತು."
ದಿನಗಳು ನಿರಂತರ ಚಟುವಟಿಕೆಯ ಸಮಯಗಳಾಗಿ ಬಿಟ್ಟವು. "ನಾವು ಮುಂಜಾನೆ ಬಹಳ ಬೇಗ ಏಳುತ್ತಿದ್ದೆವು. ಬೆಳಕು ಮೂಡಿದ ಕೂಡಲೇ ನಾವು ಹೊರಬಂದು ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಆರಂಭಿಸುತ್ತಿದ್ದೆವು ಮತ್ತು ಈ ಕೆಲಸ ಕೆಲವೊಮ್ಮೆ ರಾತ್ರಿ 9 ಗಂಟೆಯವರೆಗೆ ಸಾಗುತ್ತಿತ್ತು," ಎಂದು ಮೆಲಿಸ್ಸಾ ಹೇಳಿದರು.
ಅಮಂಡಾ ಅವರ ಮಕ್ಕಳಾದ ಆವಿಸ್ ಮತ್ತು ಬ್ರಿಗ್ಸ್, ಸಹಾಯಕ ಟಿಪ್ಪಣಿಗಳನ್ನು ನೀಡುವ ಮೂಲಕ ಮಿಸ್ ಜಾಯ್ಸ್ ಅವರನ್ನು ಅಚ್ಚರಿಗೊಳಿಸಿದರು.
ವಿನಾಶದ ಮಧ್ಯೆ, ಮೆಲಿಸ್ಸಾ ಅನಿರೀಕ್ಷಿತ ಸ್ಥಳಗಳಲ್ಲಿ ಆಶಾವಾದವನ್ನು ಕಂಡುಕೊಂಡರು. ತಾನು ಸ್ನೇಹ ಬೆಳೆಸಿದ್ದ ಹಿರಿಯ ನಿವಾಸಿ ಮಿಸ್ ಜಾಯ್ಸ್ ಪಕ್ಕದಲ್ಲೇ ಇರಲು ಮನೆಯಲ್ಲಿ ಅಡಗಿ ಕುಳಿತುಕೊಂಡು ಅಲ್ಲಿಂದ ತೆರಳಲು ಆವಿಸ್ ನಿರಾಕರಿಸಿದಾಗ ಅಥವಾ ಬ್ರಿಗ್ಸ್ ಮುಂಜಾನೆ 6 ಗಂಟೆಗೆ ಎದ್ದು "ನಾವು ಮೆಲಿಸ್ಸಾ ಮನೆಗೆ ಹೋಗುತ್ತಿದ್ದೇವೆಯೇ?" ಎಂದು ತನ್ನನ್ನು ಕೇಳಿದ ಕುರಿತು ಅಮಂಡಾ ಹೇಳಿಕೊಂಡಾಗ, ಮೆಲಿಸ್ಸಾಗೆ ಆಶಾವಾದ ಮೂಡಿತ್ತು. ಇಂದು ನಾವು ಏನು ಮಾಡಲಿದ್ದೇವೆ?"
ಮೆಲಿಸ್ಸಾಗೆ ಪ್ರಯಾಣಿಕರಿಗಾಗಿ ತಾನು ತನ್ನ ಮನೆಯನ್ನು ತೆರೆದ ಹಿಂದಿನ ಉದ್ದೇಶವನ್ನು ಈ ಅನುಭವವು ಇನ್ನಷ್ಟು ಗಟ್ಟಿಗೊಳಿಸಿತು. "ಇಲ್ಲಿಯವರಲ್ಲದ ಯಾರೋ ನಮ್ಮ ಸಮುದಾಯಕ್ಕೆ ಇಂತಹ ಬದ್ಧತೆಯನ್ನು ತೋರಿಸಿದ್ದಾರೆಂಬುದೇ ಅಚ್ಚರಿಯಾಗಿದೆ," ಎಂದು ಅವರು ಹೇಳಿದರು. "ಕೆಲವೇ ಸಮಯದಲ್ಲಿ, ಅವರು ನಮ್ಮ ಕುಟುಂಬದ ಸದಸ್ಯರಂತಾದರು. "
ಚಂಡಮಾರುತ ಅಪ್ಪಳಿಸಿದ ಹಲವು ತಿಂಗಳುಗಳ ನಂತರ, ಆಹಾರ ಮತ್ತು ಸರಬರಾಜು ಪೂರೈಕೆಗಾಗಿ ನಡೆದ ಭೇಟಿಗಳು ಅರ್ಥಪೂರ್ಣ ಗೆಳೆತನಗಳಾಗಿ ಹೊರಹೊಮ್ಮಿದವು.

ತೊಡಗಿಸಿಕೊಳ್ಳಿ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುವ 60,000 ಕ್ಕೂ ಹೆಚ್ಚು ಹೋಸ್ಟ್‌ಗಳ ಸಮುದಾಯಕ್ಕೆ ಸೇರಿ.
ಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ
ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.
1 ಪುಟಗಳಲ್ಲಿ 1 ನೇ ಪುಟ