ನಮ್ಮ ಕುರಿತು
Airbnb.org ಎಂಬುದು Airbnb ಸ್ಥಾಪಿಸಿದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಜನರನ್ನು ತುರ್ತು ವಸತಿಗಳಿಗೆ ಸಂಪರ್ಕಿಸುತ್ತದೆ.

ಇದು ಎಲ್ಲವೂ ಒಬ್ಬ ಹೋಸ್ಟ್‌ನೊಂದಿಗೆ ಪ್ರಾರಂಭವಾಯಿತು
ಸ್ಯಾಂಡಿ ಚಂಡಮಾರುತದಿಂದ ಪ್ರಭಾವಿತರಾದ ಜನರಿಗೆ 2012ರಲ್ಲಿ ತಮ್ಮ ಸ್ಥಳವನ್ನು ಉಚಿತವಾಗಿ ನೀಡಿದ್ದ Airbnb ಹೋಸ್ಟ್ ಶೆಲ್ ಅವರಿಂದ ಈ ಆಲೋಚನೆ ಬಂದಿದೆ. ಅಂದಿನಿಂದ, 60,000 ಕ್ಕೂ ಹೆಚ್ಚು Airbnb ಹೋಸ್ಟ್‌ಗಳು ಪ್ರಪಂಚದಾದ್ಯಂತ 250,000 ಕ್ಕೂ ಹೆಚ್ಚು ಜನರಿಗೆ ವಸತಿ ಒದಗಿಸಿವೆ.
ನಮ್ಮ ಮಾದರಿಯು ಅನನ್ಯವಾಗಿದೆ
Airbnb ಕಾರ್ಯಾಚರಣೆ ವೆಚ್ಚಗಳನ್ನು ವಹಿಸುತ್ತದೆ, ಆದ್ದರಿಂದ ಎಲ್ಲಾ ಸಾರ್ವಜನಿಕ ದೇಣಿಗೆಗಳಲ್ಲಿ 100% ಅಗತ್ಯವಿರುವವರಿಗೆ ತುರ್ತು ವಾಸಸ್ಥಳವನ್ನು ಪೂರೈಸಲು ಅನುದಾನವಾಗುತ್ತದೆ.

ಬಿಕ್ಕಟ್ಟಿಗೆ ನಮ್ಮ ಪ್ರತಿಸ್ಪಂದನೆ
ಪ್ರತಿವರ್ಷ, ಲಕ್ಷಾಂತರ ಜನ ಜಗತ್ತಿನೆಲ್ಲೆಡೆ ನಿರಾಶ್ರಿತರಾಗುತ್ತಾರೆ. ನಾವು ಗೆಸ್ಟ್‌ಗಳಿಗೆ ಇಲ್ಲಿ ವಸತಿ ಕಲ್ಪಿಸುತ್ತಿದ್ದೇವೆ.
ಪಾರ್ಟ್‌ನರ್‌ಗಳೊಂದಿಗೆ ನಾವು ಹೇಗೆ ಕೆಲಸ ಮಾಡುತ್ತೇವೆ.
ವಿಪತ್ತು ಸಂಭವಿಸಿದಾಗ, ಅತ್ಯಂತ ಕಷ್ಟದಲ್ಲಿರುವ ಗೆಸ್ಟ್‌ಗಳನ್ನು ಹುಡುಕಲು ಮತ್ತು ಅವರನ್ನು ತುರ್ತು ವಸತಿಯೊಂದಿಗೆ ಸಂಪರ್ಕಗೊಳಿಸಲು ನಾವು ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದೇವೆ..







Airbnb ಜೊತೆಗೆ ನಾವು ಹೇಗೆ ಕೆಲಸ ಮಾಡುತ್ತೇವೆ
Airbnb.org ವಿಪತ್ತುಗಳಿಂದ ಹಾನಿಗೊಳಗಾದ ಸ್ಥಳಗಳ ಬಳಿ ಲಭ್ಯವಿರುವ ಸ್ಥಳಗಳನ್ನು ಹೊಂದಿರುವ ಹೋಸ್ಟ್‌ಗಳೊಂದಿಗೆ ತುರ್ತು ವಸತಿ ಅಗತ್ಯವಿರುವ ಜನರಿಗೆ ಹೊಂದಿಸಲು Airbnb ಯ ಜಾಗತಿಕ ತಂತ್ರಜ್ಞಾನ ಪ್ಲಾಟ್‌ಫಾರ್ಮ್, ಸೇವೆಗಳು ಮತ್ತು ಸಮುದಾಯವನ್ನು ಸದುಪಯೋಗಪಡಿಸಿಕೊಳ್ಳುತ್ತದೆ.
Airbnb.org 501(c)(3) ಸಾರ್ವಜನಿಕ ದತ್ತಿ ಸಂಸ್ಥೆಯಾಗಿದ್ದು, Airbnb ಯಿಂದ ಪ್ರತ್ಯೇಕವಾಗಿದೆ ಮತ್ತು ಸ್ವತಂತ್ರವಾಗಿದೆ. Airbnb.org ಬೆಂಬಲಿತ ವಾಸ್ತವ್ಯಕ್ಕೆ Airbnb ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇವಾ ಶುಲ್ಕವನ್ನು ಒಳಗೊಂಡಿದೆ.ನಮ್ಮ ಆಡಳಿತ ಮಂಡಳಿಯನ್ನು ಭೇಟಿ ಮಾಡಿ

ಜೆನ್ನಿಫರ್ ಬಾಂಡ್
ಜೆನ್ನಿಫರ್ ಒಬ್ಬ ಕಾನೂನು ಪ್ರಾಧ್ಯಾಪಕಿ ಮತ್ತು 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ನಿರಾಶ್ರಿತ ನೀತಿಯಲ್ಲಿ ಜಾಗತಿಕ ಪರಿಣಿತರು. ಅವರು ನಿರಾಶ್ರಿತರ ಕೇಂದ್ರವನ್ನು ಸ್ಥಾಪಿಸಿದರು ಮತ್ತು ವಿವಿಧ ಸಂಸ್ಥೆಗಳೊಂದಿಗೆ ಸಹಯೋಗದೊಂದಿಗೆ ಜಾಗತಿಕ ನಿರಾಶ್ರಿತರ ಪ್ರಾಯೋಜಕತ್ವ ಉಪಕ್ರಮದ ಅಧ್ಯಕ್ಷತೆ ವಹಿಸಿದರು. 20 ಕ್ಕೂ ಹೆಚ್ಚು ದೇಶಗಳಲ್ಲಿ ನಿರಾಶ್ರಿತರ ರಕ್ಷಣೆ ಮಾರ್ಗಗಳನ್ನು ಜೆನ್ನಿಫರ್ ವಿನ್ಯಾಸಗೊಳಿಸಿದ್ದಾರೆ, ಅಫ್ಘಾನಿಸ್ತಾನ ಮತ್ತು ಉಕ್ರೇನ್‌ನಲ್ಲಿನ ಬಿಕ್ಕಟ್ಟುಗಳಿಗೆ ಗಮನಾರ್ಹವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಸಿರಿಯಾದಲ್ಲಿ UNHCR ನೊಂದಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಕೆನಡಾದ ವಲಸೆ ಸಚಿವರಿಗೆ ಸಲಹೆ ನೀಡಿದ್ದಾರೆ.

ಜೇ ಕಾರ್ನೆ
Airbnb ಯ ಜಾಗತಿಕ ನೀತಿ ಮತ್ತು ಸಂವಹನ ತಂಡಗಳನ್ನು ಜೇ ಮುನ್ನಡೆಸುತ್ತಾರೆ. Airbnb ಗೆ ಮೊದಲು, ಅವರು Amazon ನ ಜಾಗತಿಕ ಕಾರ್ಪೊರೇಟ್ ವ್ಯವಹಾರಗಳ ತಂಡವನ್ನು ಮುನ್ನಡೆಸಿದರು, ಸಾರ್ವಜನಿಕ ನೀತಿ, ಸಂವಹನ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ನಿರ್ವಹಿಸಿದರು. ಅವರು ಅಧ್ಯಕ್ಷ ಒಬಾಮಾ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು ಮತ್ತು ಟೈಮ್ ನಿಯತಕಾಲಿಕೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅರ್ಬನ್ ಇನ್‌ಸ್ಟಿಟ್ಯೂಟ್, ಟೆಕ್‌ವೈಸಿ ಮತ್ತು ಹ್ಯೂಮನ್ ರೈಟ್ಸ್ ಫಸ್ಟ್ ಸೇರಿದಂತೆ ಅನೇಕ ಮಂಡಳಿಗಳಲ್ಲಿ ಜೇ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಬಿ .ಎ. ಪದವಿ ಪಡೆದಿದ್ದಾರೆ ಮತ್ತು ಯೇಲ್ ವಿಶ್ವವಿದ್ಯಾಲಯ ಮಂಡಳಿಯ ಸದಸ್ಯರಾಗಿದ್ದಾರೆ.

ಶರ್ಯಾನ್ ಮೆಕ್‌ಸ್ವೈನ್
Sharyanne is the President of Echoing Green, bringing over 40 years of experience in financial services and business operations. She has helped propel the organization to support social innovation leaders advancing racial, ethnic, and other equity globally. Before joining Echoing Green, Sharyanne was the Chief Financial and Administrative Officer at StoryCorps and worked at several banks and financial services firms. She holds an MBA from INSEAD in France and a BA in Urban Studies from Mount Holyoke College.

ಕ್ಯಾಥರೀನ್ ಪೊವೆಲ್
ಕ್ಯಾಥರೀನ್ ಅವರು Airbnb ಯ ಹೋಸ್ಟ್‌ಗಳ ಜಾಗತಿಕ ಸಮುದಾಯವನ್ನು ಮುನ್ನಡೆಸಿದವರು, ಹೋಸ್ಟ್‌ಗಳ ಸುಧಾರಣೆಗೆ ಮಾನದಂಡಗಳು, ಶಿಕ್ಷಣ ಮತ್ತು ವೈಶಿಷ್ಟ್ಯಗಳತ್ತ ಅವರು ಗಮನಹರಿಸಿದ್ದರು. Airbnb ಗೆ ಸೇರುವ ಮೊದಲು, ಕ್ಯಾಥರೀನ್ ಅವರು 15 ವರ್ಷಗಳಿಗೂ ಹೆಚ್ಚು ಕಾಲ Disney ಯಲ್ಲಿ ಸೇವೆ ಸಲ್ಲಿಸಿದ್ದರು. ತೀರಾ ಇತ್ತೀಚೆಗೆ ಅವರು US ನ Disney Parks ನ ಪಶ್ಚಿಮ ವಲಯಕ್ಕೆ ಮತ್ತು ಡಿಸ್ನಿಲ್ಯಾಂಡ್ ಪ್ಯಾರಿಸ್‌ಗೆ ಅಧ್ಯಕ್ಷರಾಗಿದ್ದರು. ಇದಲ್ಲದೆ, ಅವರು BBC Worldwide ನಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಕ್ಯಾಥರೀನ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ರಿಚ್ ಸೆರಿನೊ
ರಿಚ್ ಅವರು ಹಾರ್ವರ್ಡ್‌ನ ಸಾರ್ವಜನಿಕ ಆರೋಗ್ಯ ಶಾಲೆಯಲ್ಲಿ ಡಿಸ್ಟಿಂಗ್ವಿಷ್ಡ್ ಸೀನಿಯರ್ ಫೆಲೊ ಆಗಿದ್ದು, ನ್ಯಾಷನಲ್ ಪ್ರಿಪ್ಯಾರ್ಡ್‌ನೆಸ್ ಲೀಡರ್‌ಷಿಪ್ ಇನಿಷಿಯೇಟಿವ್ ಜೊತೆ ಕೆಲಸ ಮಾಡುತ್ತಿದ್ದಾರೆ. ತುರ್ತು ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳು ಮತ್ತು ಆಂತರಿಕ ಭದ್ರತೆ ಕ್ಷೇತ್ರಗಳಲ್ಲಿ ಅವರು ಸಾರ್ವಜನಿಕ ರಂಗದಲ್ಲಿ 40 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಅಧ್ಯಕ್ಷ ಒಬಾಮಾ ಅವರಿಂದ ನೇಮಕಗೊಂಡ ಅವರು, FEMA ದ ಎಂಟನೇ ಡೆಪ್ಯುಟಿ ಅಡ್ಮಿನಿಸ್ಟ್ರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. FEMA ಗಿಂತ ಮೊದಲು, ರಿಚ್ ಅವರು ಬಾಸ್ಟನ್ EMS ನಲ್ಲಿ 36 ವರ್ಷಗಳ ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು ಹಂತಹಂತವಾಗಿ ಮುಖ್ಯಸ್ಥರ ಸ್ಥಾನವನ್ನು ಗಳಿಸಿದ್ದರು.

ಜೋಸೆಲಿನ್ ವ್ಯಾಟ್
ಜೋಸೆಲಿನ್ ಅವರು Alight ನ CEO ಆಗಿದ್ದಾರೆ. ಮಾನವ-ಕೇಂದ್ರಿತ ವಿಧಾನಗಳ ಮೇಲೆ ಗಮನ ಹರಿಸಬಲ್ಲ ಕಾರ್ಯತಂತ್ರ ಅಭಿವೃದ್ಧಿಯಲ್ಲಿ ಅವರಿಗೆ ವ್ಯಾಪಕ ಅನುಭವವಿದೆ, 20 ಕ್ಕೂ ಹೆಚ್ಚು ದೇಶಗಳಲ್ಲಿ ವರ್ಷಕ್ಕೆ 35 ಕೋಟಿಗೂ ಹೆಚ್ಚು ನಿರಾಶ್ರಿತರಿಗೆ ಗೌರವಾನ್ವಿತ ಸೇವೆಗಳನ್ನು ರೂಪಿಸಲು ಅವರು ಸಹಾಯ ಮಾಡುತ್ತಾರೆ. Alight ಗೆ ಮೊದಲು, ಜೋಸ್ಲಿನ್ IDEO.org ಅನ್ನು ಸಹ-ಸ್ಥಾಪಿಸಿ CEO ಆಗಿ ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು ಎಲ್ಲರನ್ನೂ ಒಳಗೊಳ್ಳಬಲ್ಲ ಉತ್ಪನ್ನಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸಲು NGO ಗಳೊಂದಿಗೆ ಕೆಲಸ ಮಾಡಿದ್ದರು. ಅವರು Marketplace ಮತ್ತು Drucker Institute ನ ಸಲಹಾ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, Chief ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಣಿಗೆಗಳ ಬಗ್ಗೆ ಪ್ರಶ್ನೆಗಳಿವೆಯೇ?
ನಮ್ಮನ್ನು give@airbnb.org ನಲ್ಲಿ ಸಂಪರ್ಕಿಸಿ

ತೊಡಗಿಸಿಕೊಳ್ಳಿ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುವ 60,000 ಕ್ಕೂ ಹೆಚ್ಚು ಜನರ ಸಮುದಾಯಕ್ಕೆ ಸೇರಿಕೊಳ್ಳಿ.