Marianne
ಒಬ್ಬರು ತಾಯಿ ತನ್ನ ಕುಟುಂಬವನ್ನು ಕಾಡ್ಗಿಚ್ಚುಗಳಿಂದ ಹೇಗೆ ಸುರಕ್ಷಿತಗೊಳಿಸಿಕೊಂಡರು

ದಕ್ಷಿಣ ಕ್ಯಾಲಿಫೋರ್ನಿಯಾದ ಬ್ರಿಡ್ಜ್ ಫೈರ್ ಮಾರಿಯಾನ್ ಅವರ ಕುಟುಂಬವನ್ನು ತಮ್ಮ ಮನೆಯಿಂದ ಸ್ಥಳಾಂತರಗೊಳ್ಳುವಂತೆ ಮಾಡಿತು.
ಮಾರಿಯಾನ್ ಮತ್ತು ಅವರ ಕುಟುಂಬವು ಟೋಬಿ ಎಂಬ ಹೊಸ ನಾಯಿಮರಿಯನ್ನು ಕ್ಯಾಲಿಫೋರ್ನಿಯಾದ ರೈಟ್‌ವುಡ್‌ನಲ್ಲಿರುವ ತಮ್ಮ ಮನೆಗೆ ಕರೆತಂದಾಗ, ಮರುದಿನವೇ ಅವರು ತಮ್ಮೊಂದಿಗೆ ಸ್ಥಳಾಂತರಗೊಳ್ಳಬೇಕಾಗಬಹುದು ಎಂದವರುು ಊಹಿಸಿಯೇ ಇರಲಿಲ್ಲ. ಸೆಪ್ಟೆಂಬರ್ 10 ರ ಮಂಗಳವಾರ, ಅವರ ಬೆಳಗು ಎಂದಿನಂತೆಯೇ ಇತ್ತು. ಮಾರಿಯಾನ್ ಅವರ ಹೆಣ್ಣುಮಕ್ಕಳು—14, 12 ಮತ್ತು 9 ವರ್ಷ ವಯಸ್ಸಿನವರು—ಶಾಲೆಗೆ ಹೋದರು, ಆಕಾಶ ಶುಭ್ರವಾಗಿತ್ತು ಮತ್ತು ಆಕೆ ತಮ್ಮ ಮನೆಯಂಗಳದಲ್ಲಿ ಕೆಲಸ ಮಾಡುತ್ತಿದ್ದರು.

ಅವರು ಸ್ಥಳಾಂತರಗೊಳ್ಳುವ ಹಿಂದಿನ ದಿನ, ಆ ಕುಟುಂಬವು ಟೋಬಿ ಎಂಬ ಹೊಸ ನಾಯಿಮರಿಯನ್ನು ಮನೆಗೆ ತಂದಿತ್ತು, ಆ ಮರಿಯ ಪೂರ್ಣ ಹಸರು ಟೋಬ್ಲೆರೋನ್.
ಏರುಹಗಲಿನ ಹೊತ್ತಿಗೆ, ಗಾಳಿ ಬಲವಾಗಿ ಬೀಸಿತು ಮತ್ತು ಲೈನ್ ಫೈರ್ ಸಮೀಪಿಸುತ್ತಿರುವಂತೆಯೇ ಆಕಾಶದಿಂದ ಬೂದಿ ಉದುರತೊಡಗಿತು. ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಪ್ರತಿಯೊಬ್ಬರಿಗೂ ಭರವಸೆ ನೀಡಿದ್ದರೂ, ಮಾರಿಯಾನ್ ಮುಂದುವರಿದು ಬಾಲಕಿಯರನ್ನು ಶಾಲೆಯಿಂದ ಮನೆಗೆ ಕರೆತಂದರು. ಹೊರಗಿನ ಪರಿಸ್ಥಿತಿಗಳು ಹದಗೆಡುತ್ತಿರುವುದನ್ನು ಅವರು ಗಮನಿಸಿದರು. "ಅದು ಪ್ರಳಯೋತ್ತರ ಸ್ಥಿತಿಯಂತೆ ಕಾಣಿಸುತ್ತಿತ್ತು" ಎಂದು ಮಾರಿಯಾನ್ ಹೇಳಿದರು. "ನನ್ನ ಗಂಡ ಮತ್ತು ನಾನು, 'ಮಕ್ಕಳೇ, ಚೀಲವನ್ನು ಪ್ಯಾಕ್ ಮಾಡಿಕೊಳ್ಳಿ’" ಎಂದೆವು. ಸ್ವಲ್ಪ ಹೊತ್ತಿನಲ್ಲೇ ಸ್ಥಳಾಂತರಿಸುವ ಆದೇಶವು ಬಂದಿತು.
"ಅದು ಪ್ರಳಯೋತ್ತರ ಸ್ಥಿತಿಯಂತೆ ಕಾಣಿಸುತ್ತಿತ್ತು. "ನನ್ನ ಗಂಡ ಮತ್ತು ನಾನು, 'ಮಕ್ಕಳೇ, ಚೀಲವನ್ನು ಪ್ಯಾಕ್ ಮಾಡಿಕೊಳ್ಳಿ’" ಎಂದೆವು.
-ಮಾರಿಯಾನ್, Airbnb.org ಗೆಸ್ಟ್

ಮಾರಿಯಾನ್ ಅವರ ಮನೆಯಿಂದ ಕಂಡಾಗ ಬೆಂಕಿಯು ಎಷ್ಟು ಹತ್ತಿರಕ್ಕೆ ಬಂದಿತ್ತು ಎಂಬುದು ತಿಳಿಯುತ್ತದೆ. (ಮಾರಿಯಾನ್ ತೆಗೆದಿರುವ ಫೋಟೋ)
ಸ್ಯಾನ್ ಬರ್ನಾರ್ಡಿನೊ ಕೌಂಟಿಯಲ್ಲಿ Airbnb.org ಸ್ಥಳೀಯ ಸ್ವಯಂಸೇವಾ ಸಂಸ್ಥೆ , ಹಾರ್ಟ್ಸ್ & ಲೈವ್ಸ್ ಜೊತೆ ಪಾಲುದಾರಿಕೆ ಹೊಂದಿತ್ತು ಮತ್ತು ಬಿಗ್ ಬೇರ್‌ಗೆ ಭೇಟಿ ನೀಡಿ, ಸ್ಥಳಾಂತರಗೊಂಡವರನ್ನು Airbnb ಗಳಲ್ಲಿ ಉಚಿತವಾಗಿ ಇರಿಸಿಕೊಂಡಿತು. ಮೂವರು Airbnb ಹೋಸ್ಟ್‌ಗಳು ಸ್ವಯಂಸ್ಫೂರ್ತಿಯಿಂದ ತಮ್ಮ ಪಾಲುದಾರರಿಗೆ ಗೆಸ್ಟ್‌ಗಳನ್ನು ಕಂಡುಕೊಳ್ಳಲು ಮತ್ತು Airbnb.org ಮೂಲಕ ತುರ್ತು ವಸತಿ ಒದಗಿಸುವ ಬಗ್ಗೆ ಮಾಹಿತಿ ಹರಡಲು ಸಹಾಯ ಮಾಡಿದರು. ತಾರಾ, ಕೇಟೀ, ಮತ್ತು ಮೋನಿಕ್ ಒಳಸೇರಿಸಿಕೊಳ್ಳಲು ಅರ್ಜಿಗಳನ್ನು ಸಿದ್ಧಪಡಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು, ಮತ್ತು ಸ್ಥಳೀಯ ಪಾಲುದಾರರ ಜೊತೆ ನಿರಂತರವಾಗಿ ಕೆಲಸ ಮಾಡುತ್ತಾ, ತಮ್ಮ ಸಮುದಾಯಗಳಲ್ಲಿರುವ ಸ್ಥಳಾಂತರ ಅಗತ್ಯ ಇರುವವರಿಗೆ ಸಹಾಯ ಮಾಡಿದರು. “ಜನ ಬಹಳ ಆತಂಕದಲ್ಲಿದ್ದರು,” ಎಂದು ತಾರಾ ಹೇಳಿದರು. "ತಮ್ಮ ಶಿಶುವಿಗೆ ನೆಲದಲ್ಲಿ ಅಂಬೆಗಾಲಿಡಲು, ಲಾಂಡ್ರಿ ಮಾಡಲು, ಊಟ ಮಾಡಲು ಸ್ಥಳಾವಕಾಶ ಸಿಗಬಹುದು ಎಂಬುದನ್ನು ಕೇಳಿದಾಗ ಅವರ ಧ್ವನಿಯಲ್ಲಿ ಕಾಣಿಸಿದ ನೆಮ್ಮದಿ—ಅದು ನಿಜಕ್ಕೂ ಕೃತಜ್ಞತೆಯೇ ಮೈವೆತ್ತಂತಿತ್ತು." ಹೋಸ್ಟ್‌ಗಳು ಮತ್ತು ಪಾಲುದಾರರ ಸಹಾಯದಿಂದ, ಬ್ರಿಡ್ಜ್ ಮತ್ತು ಲೈನ್ ಫೈರ್‌ನಿಂದ ಸ್ಥಳಾಂತರಗೊಂಡ 1,000 ಕ್ಕೂ ಹೆಚ್ಚು ಸ್ಯಾನ್ ಬರ್ನಾರ್ಡಿನೊ ನಿವಾಸಿಗಳಿಗೆ Airbnb.org ವಸತಿ ಒದಗಿಸಿತು, ಹೀಗೆ ವಸತಿ ಪಡೆದವರಲ್ಲಿ ನೂರಾರು ಮಕ್ಕಳು ಮತ್ತು ಸಾಕುಪ್ರಾಣಿಗಳು ಸೇರಿವೆ.

Airbnb ಸೂಪರ್‌ಹೋಸ್ಟ್‌ಗಳಾಗಿರುವ ತಾರಾ ಮತ್ತು ಕೇಟೀ ಸ್ಥಳೀಯ ಸ್ವಯಂಸೇವಾಸಂಸ್ಥೆಗಳಿಗೆ ಸಹಾಯ ಅಗತ್ಯವಿರುವ ಗೆಸ್ಟ್‌ಗಳನ್ನು ಗುರುತಿಸಲು ಮತ್ತು ಅವರನ್ನು Airbnb ವಸತಿಗಳಲ್ಲಿ ಇರಿಸಿಕೊಳ್ಳಲು ಸಹಾಯ ಮಾಡಿದರು.
"ತಮ್ಮ ಶಿಶುವಿಗೆ ನೆಲದಲ್ಲಿ ಅಂಬೆಗಾಲಿಡಲು, ಲಾಂಡ್ರಿ ಮಾಡಲು, ಊಟ ಮಾಡಲು ಸ್ಥಳಾವಕಾಶ ಸಿಗಬಹುದು ಎಂಬುದನ್ನು ಕೇಳಿದಾಗ ಅವರ ಧ್ವನಿಯಲ್ಲಿ ಕಾಣಿಸಿದ ನೆಮ್ಮದಿ—ಅದು ನಿಜಕ್ಕೂ ಕೃತಜ್ಞತೆಯೇ ಮೈವೆತ್ತಂತಿತ್ತು."
—ತಾರಾ, Airbnb ಸೂಪರ್‌ಹೋಸ್ಟ್, ಬಿಗ್ ಬೇರ್, ಸಿಎ

ಸ್ಥಳಾಂತರದ ಆದೇಶದಡಿಯಲ್ಲಿರುವಾಗ Airbnb ಯಲ್ಲಿ ಉಚಿತ ವಾಸ್ತವ್ಯ ಹೂಡಿದವರಲ್ಲಿ ಟೋಬಿ ಸಹಿತ, ಮಾರಿಯಾನ್ ಅವರ ಕುಟುಂಬ ಕೂಡ ಸೇರಿದೆ. "ನಮ್ಮ ಇಡೀ ಜಗತ್ತು ತಲೆಕೆಳಗಾಗಿತ್ತು. ಕಡೆಗೂ ನಾವು ನೆಲೆನಿಲ್ಲಬಹುದಾದ ಸ್ಥಳವನ್ನು ಹೊಂದಿದ್ದು ನಮಗೆ ದೊಡ್ಡ ನೆಮ್ಮದಿ ತಂದಿತ್ತು," ಎಂದು ಆಕೆ ಹೇಳಿದರು. ಹಲವು ದಿನಗಳಲ್ಲಿ ಮೊದಲ ಬಾರಿಗೆ ಕೆಲವು ಶೌಚಾಲಯ ಸಾಮಗ್ರಿಗಳನ್ನು ಬಿಚ್ಚಿದ್ದಾಗಿ ಅವರು ನೆನಪಿಸಿಕೊಂಡರು. "ಇದು ಕೇವಲ ಒಂದು ಸಣ್ಣ ವಿಷಯ, ಆದರೆ ನಾನು ನನ್ನ ವಸ್ತುಗಳನ್ನು ಇರಿಸಿಕೊಳ್ಳಲು ಮತ್ತು ಕಡೆಗೆ ಯೋಚಿಸಲು ಒಂದು ಸ್ಥಳವನ್ನು ಹೊಂದಿರುವುದು ಕೂಡ ಇಂತಹ ಸಂದರ್ಭಗಳಲ್ಲಿ ದೊಡ್ಡ ಸಂಗತಿ."

ಎರಡು ವಾರಗಳ ಕಾಲ ಕಾಡ್ಗಿಚ್ಚಿನ ಮೇಲೆ ನಿಗಾ ಇರಿಸಿಕೊಂಡು ಮತ್ತು ತಮ್ಮ ಮನೆಯ ಬಗ್ಗೆ ಆತಂಕಪಟ್ಟ ಬಳಿಕ, ಮಾರಿಯಾನ್ ಅವರ ಕುಟುಂಬವು ಸುರಕ್ಷಿತವಾಗಿ ಮನೆಗೆ ಮರಳುವುದು ಸಾಧ್ಯವಾಯಿತು.
ಎರಡು ವಾರ ದೂರವಿದ್ದ ಬಳಿಕ, ಕುಟುಂಬವು ಸುರಕ್ಷಿತವಾಗಿ ಮನೆಗೆ ಮರಳುವುದು ಸಾಧ್ಯವಾಯಿತು, ಅಲ್ಲಿ ಅವರು ತಮ್ಮ ಪ್ರಾಣಿಗಳೊಂದಿಗೆ ಮತ್ತೆ ಒಂದಾದರು ಮತ್ತು ಬಾಲಕಿಯರು ಶಾಲೆಗೆ ಮರಳಿದರು. 2015ರಲ್ಲಿ ರೈಟ್‌ವುಡ್‌ಗೆ ಸ್ಥಳಾಂತರಗೊಂಡ ನಂತರ ಮಾರಿಯಾನ್ ಮತ್ತು ಅವರ ಪತಿ ಕಾಡ್ಗಿಚ್ಚುಗಳ ಕಾರಣಕ್ಕೆ ಸ್ಥಳಾಂತರಗೊಂಡಿರುವುದು ಇದು ಎರಡನೇ ಬಾರಿ. ಇದು ಕೊನೆಯದಾಗಿರದೆ ಇರಬಹುದು, ಆದರೆ ಬೆಂಬಲ ತುಂಬಿರುವ, ಅದರಲ್ಲೂ ವಿಶೇಷವಾಗಿ ತುರ್ತು ಪರಿಸ್ಥಿತಿಗಳಲ್ಲಿ ಬೆಂಬಲಕ್ಕೆ ಬರುವ ಸಮುದಾಯದ ಜೊತೆ ವಾಸಿಸಲು ತಾನು ಅದೃಷ್ಟಶಾಲಿ ಅನ್ನಿಸುತ್ತಿದೆ ಎಂದು ಮಾರಿಯಾನ್ ಹೇಳಿದರು.
"ಬಹಳಷ್ಟು ಮಂದಿ ಅಪರಿಚಿತರು ಇದ್ದರು, ಆದರೆ Airbnb.org ಕೇವಲ ನಮ್ಮ ಬಟ್ಟೆಬರೆಗಳು ಮಾತ್ರವಲ್ಲ, ನಮ್ಮನ್ನು ಆರೈಕೆ ಮಾಡುತ್ತೇವೆ ಮತ್ತು ಸಮಸ್ಯೆ ಸುಗಮವಾಗಿ ಪರಿಹಾರ ಆಗುವ ತನಕ ಸಹಕರಿಸುತ್ತೇವೆ ಎಂಬ ಭರವಸೆ ಮತ್ತು ಸಮಾಧಾನಗಳನ್ನು ಒದಗಿಸಿತು."Airbnb.org ಗೆ ಬೆಂಬಲ ನೀಡಿ
ಬಿಕ್ಕಟ್ಟಿನ ಸಮಯಗಳಲ್ಲಿ ಜನರಿಗೆ ಉಚಿತ ವಾಸ್ತವ್ಯಕ್ಕೆ ಧನಸಹಾಯ ಮಾಡಲು ನೇರವಾಗಿ 100% ದೇಣಿಗೆಗಳು ಹೋಗುತ್ತವೆ.
ದೇಣಿಗೆ ನೀಡಿ