ಪ್ಯಾರಾಲಿಂಪಿಯನ್ ವ್ಯಾಂಡರ್ಸನ್ ಚಾವೆಸ್
ಬ್ರೆಜಿಲ್ ಪ್ರವಾಹದ ನಂತರ ಪ್ಯಾರಾಲಿಂಪಿಯನ್ ಪ್ಯಾರಿಸ್ 2024ರ ಕನಸುಗಳನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.
ಪ್ಯಾರಿಸ್ 2024 ಪ್ಯಾರಾಲಿಂಪಿಕ್ ಕ್ರೀಡೆಗಳಿಗೆ ಅರ್ಹತೆ ಪಡೆಯುವ ಒಂದು ತಿಂಗಳ ಮುಂಚೆ, ಬ್ರೆಜಿಲ್‌ನ ರಿಯೊ ಡೊ ಸುಲ್‌ನಲ್ಲಿನ ಫೆನ್ಸರ್ ವ್ಯಾಂಡರ್ಸನ್ ಚಾವೆಸ್ ಅವರ ಮನೆಯನ್ನು ಪ್ರವಾಹವು ನಾಶಪಡಿಸಿತು. ಅವರು ಈ ವಿಪತ್ತಿನಿಂದ ಸ್ಥಳಾಂತರಗೊಂಡ 600,000 ಜನರಲ್ಲಿ ಒಬ್ಬರಾಗಿದ್ದರು.
ಅಂತಿಮವಾಗಿ ಪ್ರವಾಹದ ಮಟ್ಟವು ಅವರ ಅಪಾರ್ಟ್ಮೆಂಟ್‌ನ ಸೀಲಿಂಗ್ ಅನ್ನು ತಲುಪಿ, ಅವರ ಫೆನ್ಸಿಂಗ್ ಉಪಕರಣಗಳು, ಪದಕಗಳು ಮತ್ತು ಪಾಸ್‌ಪೋರ್ಟ್ ಅನ್ನು ಕೊಚ್ಚಿಕೊಂಡು ಹೋಯಿತು. 2016 ರಲ್ಲಿ ರಿಯೋ ಡಿ ಜನೈರೋದಲ್ಲಿ ಮತ್ತು 2021 ರಲ್ಲಿ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದ ವ್ಯಾಂಡರ್ಸನ್ ಚಾವೆಸ್ ಅವರು ಪ್ರವಾಹವು ಪ್ಯಾರಿಸ್‌ಗೆ ಹೋಗುವ ಅವರ ಅವಕಾಶಗಳನ್ನು ಹಾಳುಗೆಡವಬಹುದು ಎಂದು ಹೆದರಿದ್ದರು.
2013 ರಿಂದ ಬ್ರೆಜಿಲಿಯನ್ ವೀಲ್‌ಚೇರ್ ಫೆನ್ಸಿಂಗ್ ತಂಡದ ಸದಸ್ಯರಾಗಿರುವ ವ್ಯಾಂಡರ್ಸನ್ ಅವರು ಅಮೆರಿಕಾದಲ್ಲಿ ಅಗ್ರ ಶ್ರೇಯಾಂಕದ ಫಾಯಿಲ್ ಮತ್ತು ಸೇಬರ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಫೆನ್ಸಿಂಗ್ ಅವರ ಜೀವನದಲ್ಲಿ ಕಷ್ಟದ ಸಮಯದಲ್ಲಿ ಬಂದಿತು. “ಇದು ಮೊದಲ ನೋಟದಲ್ಲೇ ಕ್ರೀಡೆಯ ಪ್ರೀತಿಯಾಗಿರಲಿಲ್ಲ,” ಎಂದು ಅವರು ಹೇಳುತ್ತಾರೆ.
ವ್ಯಾಂಡರ್ಸನ್ ಅವರು ಒಬ್ಬ ವೃತ್ತಿಪರ ಸಾಕರ್ ಆಟಗಾರನಾಗುವ ಕನಸು ಕಂಡಿದ್ದರು. ಅವರು 12 ವರ್ಷದವರಾಗಿದ್ದಾಗ, ಹಾರಿ ಬಂದ ಒಂದು ಬುಲೆಟ್ ಅವರ ಕುತ್ತಿಗೆಗೆ ಬಡಿದು, ಅವರು ಸೊಂಟದಿಂದ ಕೆಳಗೆ ನಿಶ್ಚೇತನಗೊಂಡರು. "ಇನ್ನು ಮುಂದೆ ಸಾಕರ್ ಹೇಗೆ ಆಡುವುದು ಎನ್ನುವುದು ನನ್ನ ಮೊದಲ ಆಲೋಚನೆ ಆಗಿತ್ತು" ಎಂದು ಅವರು ಹೇಳುತ್ತಾರೆ.
ಅವರು ಸಿಟಿ ಹಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಒಬ್ಬ ವೀಲ್‌ಚೇರ್ ಫೆನ್ಸರ್ ಅವರನ್ನು ಆ ಕ್ರೀಡೆಯನ್ನು ಪ್ರಯತ್ನಿಸುವಂತೆ ಪ್ರೋತ್ಸಾಹಿಸಿದರು. ಫೆನ್ಸಿಂಗ್ ಬಗ್ಗೆ ಹಿಂದೆಂದೂ ಕೇಳಿರದ ವ್ಯಾಂಡರ್ಸನ್, ತಮಗೆ ಅದರಲ್ಲಿ ಆಸಕ್ತಿಯಿಲ್ಲ ಎಂದು ಹೇಳುತ್ತಾರೆ. ಕುತೂಹಲವು ತಡೆಯಲಾರದೆ ಅವರು ತಮ್ಮ ಸಹೋದ್ಯೋಗಿಯ ತಂಡದ ತರಬೇತಿಯನ್ನು ನೋಡಲು ಹೋದರು. ಅನುಭವವು ಗಾಢವಾದ ಪ್ರಭಾವವನ್ನು ಬೀರಿತು.
“ನಾನು ಇನ್ನು ಮುಂದೆ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆಲ್ಲವನ್ನೂ ಹುಡುಗರು ಮಾಡಿದರು.” ವ್ಯಾಂಡರ್ಸನ್ ಅವರು ಫೆನ್ಸಿಂಗ್ ಅನ್ನು ಪ್ರಯತ್ನಿಸಲು ನಿರ್ಧರಿಸಿದರು ಮತ್ತು ತಕ್ಷಣವೇ ಆಸಕ್ತಿ ಹೊಂದಿದರು. ಅಂದಿನಿಂದ ಅವರು ತಮ್ಮ ಕ್ರೀಡೆಯ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುತ್ತಾ ವಿಶ್ವದಾದ್ಯಂತ ಪ್ರಯಾಣಿಸಿದ್ದಾರೆ. 1 ಪುಟಗಳಲ್ಲಿ 1 ನೇ ಪುಟ
ಮೇ 4, 2024 ರಂದು ಪ್ರವಾಹದ ನೀರು ವ್ಯಾಂಡರ್ಸನ್ ಅವರ ಮನೆಯನ್ನು ಮುಳುಗಿಸಿತು. ಅವರು ಪ್ಯಾರಿಸ್‌ಗೆ ಅರ್ಹತೆ ಪಡೆಯಲು ಇನ್ನೂ ಎರಡು ಪ್ರಮುಖ ಸ್ಪರ್ಧೆಗಳು ಬಾಕಿ ಇದ್ದವು. ವಿಪತ್ತಿನಿಂದ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದರ ಜೊತೆಗೆ, ತಮ್ಮ ತರಬೇತಿಯನ್ನು ಮುಂದುವರಿಸಲು ಅವರಿಗೆ ಉಪಕರಣಗಳ ಮತ್ತು ಎಲ್ಲಾದರೂ ವಾಸ್ತವ್ಯ ಹೂಡಲು ಸ್ಥಳದ ಅಗತ್ಯವೂ ಇತ್ತು.
ಬ್ರೆಜಿಲ್ ಮತ್ತು ಯುಎಸ್‌ನ ಫೆನ್ಸರ್‌ಗಳು ಬಟ್ಟೆ ಮತ್ತು ಅಥ್ಲೆಟಿಕ್ ಗೇರ್ ಅನ್ನು ದಾನ ಮಾಡಿದರು ಮತ್ತು Airbnb.org ಮೂಲಕ ಪೋರ್ಟೊ ಅಲೆಗ್ರೆಯಲ್ಲಿ ವ್ಯಾಂಡರ್ಸನ್ ಅವರು ಉಚಿತ, ಪ್ರವೇಶಾವಕಾಶವಿರುವ ವಾಸ್ತವ್ಯ ಹೂಡಬಹುದಾದ ಸ್ಥಳವನ್ನು ಕಂಡುಕೊಂಡರು. ವಸತಿ ವ್ಯವಸ್ಥೆಯಾದ ನಂತರ, ಅವರು ತರಬೇತಿಯನ್ನು ಮುಂದುವರಿಸಲು ಸಾಧ್ಯವಾಯಿತು.
"Airbnb.org ಮೂಲಕ ಪಡೆದಿರುವ ಮನೆಯು ನನಗೆ ತುಂಬಾ ಅವಶ್ಯಕವಾಗಿದೆ, ಏಕೆಂದರೆ ನಾನು ನನ್ನ ತರಬೇತಿಯನ್ನು ಪೂರ್ಣಗೊಳಿಸುತ್ತೇನೆ ಎಂಬ ಅರಿವು ನನಗೆ ಮನಃಶಾಂತಿ ಮತ್ತು ಭದ್ರತೆಯನ್ನು ತಂದುಕೊಟ್ಟಿದೆ. ನಾನು ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ."

ಅನೇಕ ಅಡೆತಡೆಗಳ ಹೊರತಾಗಿಯೂ, ವ್ಯಾಂಡರ್ಸನ್ ಅರ್ಹತಾ ಸುತ್ತು ತಲುಪಿ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಸ್ಪರ್ಧಿಸಲು ಅಗತ್ಯವಿರುವ ಅಂಕಗಳನ್ನು ಗಳಿಸಿದರು. ಅವರು ತಮ್ಮ ಮನೆಗೆ ಯಾವಾಗ ಹಿಂತಿರುಗಲು ಸಾಧ್ಯವಾಗುತ್ತದೆ ಎನ್ನುವುದು ತಿಳಿದಿರಲಿಲ್ಲವಾದರೂ, ಅವರು ಬ್ರೆಜಿಲ್‌ಗೆ ಹೊಸ ಪದಕವನ್ನು ತರಲು ಆಶಿಸುತ್ತಾರೆ.
ಸೆಪ್ಟೆಂಬರ್ 3 ರಂದು 13:00 CET ಗೆ ವ್ಯಾಂಡರ್ಸನ್ ಸ್ಪರ್ಧಿಸುವುದನ್ನು ವೀಕ್ಷಿಸಿ.

Airbnb.org ಬ್ರೆಜಿಲ್‌ನಲ್ಲಿ ಬದುಕುಳಿದವರಿಗೆ ವಸತಿಯನ್ನು ಕಲ್ಪಿಸುತ್ತದೆ
ಪ್ರವಾಹದ ನಂತರ, Airbnb.org ರಿಯೊ ಡೊ ಸುಲ್‌ನಲ್ಲಿ ನಿರಾಶ್ರಿತರಿಗೆ ಉಳಿದುಕೊಳ್ಳಲು ಉಚಿತ ಸ್ಥಳಗಳನ್ನು ಒದಗಿಸಿದೆ. ನಾವು ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಪರ್ಟೆನ್ಸ್‌ನೊಂದಿಗಿನ ಸಹಭಾಗಿತ್ವದಲ್ಲಿ ವಿಶೇಷ ಅಗತ್ಯಗಳು ಮತ್ತು ಅಂಗವಿಕಲತೆಯನ್ನು ಹೊಂದಿರುವ ಮಕ್ಕಳಿರುವ ಕುಟುಂಬಗಳಿಗೆ ವಸತಿಯನ್ನು ಕಲ್ಪಿಸಿದ್ದೇವೆ. ನಾವು UNICEF ನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ವಿಪತ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸುವ ಮೊದಲ ಪ್ರತಿಸ್ಪಂದಕರಿಗೆ ವಸತಿಯನ್ನು ಕಲ್ಪಿಸಿದ್ದೇವೆ.
Airbnb.org ಗೆ ಬೆಂಬಲ ನೀಡಿ
ಬಿಕ್ಕಟ್ಟಿನ ಸಮಯಗಳಲ್ಲಿ ಜನರಿಗೆ ಉಚಿತ ವಾಸ್ತವ್ಯಕ್ಕೆ ಧನಸಹಾಯ ಮಾಡಲು ನೇರವಾಗಿ 100% ದೇಣಿಗೆಗಳು ಹೋಗುತ್ತವೆ.
ದೇಣಿಗೆ ನೀಡಿ