ಎಶೆಲ್ ಮತ್ತು ಬ್ರೇಡನ್ ಕಾಡ್ಗಿಚ್ಚಿನ ನಂತರ ಭರವಸೆಯನ್ನು ಕಂಡುಕೊಳ್ಳುತ್ತಾರೆ

ಅಲ್ಟಾಡೆನಾ, CA ನಲ್ಲಿನ ತಮ್ಮ ಮನೆಯ ಸಮೀಪ ಕಾಡ್ಗಿಚ್ಚಿನ ಬಗ್ಗೆ ಎಚ್ಚರಿಕೆ ನೀಡಲು, ಎಶೆಲ್ ಅವರ 11 ವರ್ಷದ ಮಗ ಬ್ರೇಡೆನ್ ತನ್ನ ತಾಯಿಗೆ ಕರೆ ನೀಡಿದಾಗ, ಎಶೆಲ್ ಕೆಲಸದಲ್ಲಿದ್ದರು. ಅವರು ವೈವಾಹಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಚಿಕಿತ್ಸಕಿಯಾಗಿ ಕೆಲಸ ಮಾಡುವ ಕಚೇರಿಯಿಂದ ಹೊರಟು, ಬ್ರೇಡೆನ್ ಮತ್ತು ಅವರ ಚಿವಾವಾ ಕಿಂಗ್ ಟಟ್ ಇರುವ ಮನೆಗೆ ಹೋದರು.
ತಮ್ಮ ಮನೆಯ ಸಮೀಪದಲ್ಲಿ ಪೂರ್ವಕ್ಕೆ ಈಟನ್ ಬೆಂಕಿಯು ಕೆಂಪಾಗಿ ಮಿನುಗುವುದನ್ನು ನೋಡಿದ ಅವರು, ಅಲ್ಲಿಂದ ಸ್ಥಳಾಂತರಗೊಂಡರು. "ನಾವು ಹಿಂತಿರುಗಿ ಬರುವುದಿಲ್ಲ ಎಂಬ ಕಲ್ಪನೆ ಇರಲಿಲ್ಲ" ಎಶೆಲ್ ಹೇಳಿದರು. ಅಲ್ಟಾಡೆನಾದಲ್ಲಿ ಹುಟ್ಟಿ ಬೆಳೆದ ಎಶೆಲ್ ತನ್ನ ತಾಯಿ ಮತ್ತು ಸಹೋದರಿಯರಿಂದ ಕೊಂಚವೇ ದೂರದಲ್ಲಿ ವಾಸಿಸುತ್ತಿದ್ದರು. ಅವರೆಲ್ಲರೂ ಕಾಡ್ಗಿಚ್ಚಿನಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.
ಎಶೆಲ್ ಮತ್ತು ಬ್ರೇಡೆನ್ ಸುಟ್ಟು ಬೂದಿಯಾಗಿರುವ ತಮ್ಮ ಮನೆಯಲ್ಲಿ ಆಭರಣಗಳು ಮತ್ತು ಬ್ರೇಡೆನ್‌ನ ಸುಟ್ಟಿರುವ ನೃತ್ಯ ಪದಕಗಳನ್ನು ಒಳಗೊಂಡಂತೆ ಕೆಲವು ಉಳಿಸಿಕೊಳ್ಳಬೇಕಿದ್ದ ಸ್ಮರಣಿಕೆಗಳನ್ನು ಮರಳಿ ಪಡೆಯಲು ಸಾಧ್ಯವಾಯಿತು.
Airbnb.org ಮೂಲಕ ತುರ್ತು ವಸತಿಯ ಬಗ್ಗೆ ಎಶೆಲ್ ಕಂಡುಕೊಂಡರು ಮತ್ತು Airbnb.org ನ ಪಾಲುದಾರ 211 LA ಮೂಲಕ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದರು. ಬ್ರೇಡೆನ್ ಮತ್ತು ಕಿಂಗ್ ಟಟ್ ಜೊತೆ ಅವರು ಹತ್ತಿರದ ಗ್ಲೆನ್‌ಡೇಲ್‌ನಲ್ಲಿ, ಇನೆಸ್ಸಾ ಅವರು ಹೋಸ್ಟ್ ಮಾಡುತ್ತಿದ್ದ Airbnb ಗೆ ಸ್ಥಳಾಂತರಗೊಂಡರು. ಅವರು ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಅಲ್ಲಿಯೇ ವಾಸ್ತವ್ಯ ಇದ್ದರು. ಆ ಸಮಯದಲ್ಲಿ, ಬ್ರೇಡೆನ್ 11 ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಅದನ್ನು ಆಚರಿಸಲು, Airbnb ಯಲ್ಲಿ ಸ್ಲೀಪ್ ಓವರ್ ಮಾಡಿದರು.

"ಇಲ್ಲಿರುವುದು ನನಗೆ ನೆಮ್ಮದಿಯಿಂದಿರಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಮತ್ತು ನನಗೆ ಸುರಕ್ಷತೆಯ ಭಾವನೆ ನೀಡಿದೆ" ಎಂದು ಎಶೆಲ್ ಹೇಳಿದರು. ಇನೆಸ್ಸಾ ಮತ್ತು ಅವರ ಕುಟುಂಬವು ನಮ್ಮ ಮುಂದಿರುವ ಕಟ್ಟಡದಲ್ಲಿಯೇ ವಾಸಿಸುತ್ತಾರೆ ಮತ್ತು ಅವರ ಗೆಸ್ಟ್‌ಗಳ ಕ್ಷೇಮಸಮಾಚಾರವನ್ನು ಆಗಾಗ್ಗೆ ವಿಚಾರಿಸುತ್ತಿರುತ್ತಾರೆ. "ಈಗ ನನ್ನ ಕುಟುಂಬವು ಬೇರ್ಪಟ್ಟಿದೆ, ನನಗೆ ಏನಾದರೂ ಅಗತ್ಯವಿದ್ದರೆ ಹತ್ತಿರದಲ್ಲಿ ಯಾರಾದರೂ ಇದ್ದಾರೆ ಎಂಬ ಭಾವನೆ ನೆಮ್ಮದಿ ನೀಡುತ್ತಿದೆ ಮತ್ತು ಜನರು ನಿಜವಾಗಿ ಕಾಳಜಿ ತೋರಿಸುತ್ತಿದ್ದಾರೆ" ಎಂದು ಎಶೆಲ್ ಹೇಳಿದರು.

"ಇಲ್ಲಿರುವುದು ನನಗೆ ನೆಮ್ಮದಿಯಿಂದಿರಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಮತ್ತು ನನಗೆ ಸುರಕ್ಷತೆಯ ಭಾವನೆ ನೀಡಿದೆ."

ಇನೆಸ್ಸಾ ಮತ್ತು ಅವರ ಕುಟುಂಬವು ಇವರ Airbnb ಯ ಮುಂದಿರುವ ಕಟ್ಟಡದಲ್ಲೇ ವಾಸಿಸುತ್ತಾರೆ ಮತ್ತು ವಾಸ್ತವ್ಯದ ಉದ್ದಕ್ಕೂ ಎಶೆಲ್ ಮತ್ತು ಬ್ರೇಡೆನ್ ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದರು.
Airbnb.org ವಾಸ್ತವ್ಯದ ಸಮಯದಲ್ಲಿ, ಎಶೆಲ್ ತಾನು ಚಿಕಿತ್ಸೆ ನೀಡುತ್ತಿದ್ದ ಗ್ರಾಹಕರನ್ನು ಬೆಂಬಲಿಸಿ ಕೆಲಸ ಮಾಡುವುದನ್ನು ಮುಂದುವರೆಸಿದರು, ಅವರಲ್ಲಿ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಡೆಬ್ಬಿ ಅಲೆನ್ ಡ್ಯಾನ್ಸ್ ಅಕಾಡೆಮಿಯಲ್ಲಿ ನಿಪುಣ ನರ್ತಕರಾಗಿದ್ದ ಬ್ರೇಡೆನ್, ನೃತ್ಯ ಮಾಡುವುದನ್ನು ಮುಂದುವರೆಸಿದರು ಮತ್ತು ಫೆಬ್ರವರಿಯಲ್ಲಿ ಅಕಾಡೆಮಿಗೆ ನಿಧಿಸಂಗ್ರಹಣೆಗಾಗಿ ನೃತ್ಯ ಮಾಡಿದರು. ಸ್ವಲ್ಪ ಸಮಯದ ನಂತರ, ಅವರು ಇನೆಸ್ಸಾರ Airbnb ಯಿಂದ ಹತ್ತಿರದ ದೀರ್ಘಾವಧಿಯ ವಸತಿಗೃಹಕ್ಕೆ ಸ್ಥಳಾಂತರಗೊಂಡರು.
ತೊಡಗಿಸಿಕೊಳ್ಳಿ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುತ್ತಿರುವ ಜಾಗತಿಕ ಸಮುದಾಯಕ್ಕೆ ಸೇರಿಕೊಳ್ಳಿ.
ಇನ್ನಷ್ಟು ತಿಳಿಯಿರಿಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ
ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.