ಲಾಸ್ ಏಂಜಲೀಸ್ ಕಾಡ್ಗಿಚ್ಚು

ಕಾಡ್ಗಿಚ್ಚಿನ ನಂತರವೂ ಬೆನ್‌ ಕುಟುಂಬ ಒಟ್ಟಾಗಿ ನಿಂತಿದೆ

ಬೆನ್ ಕುಟುಂಬವು ಆಲ್ಟಾಡೆನಾ, ಕ್ಯಾಲಿಫೋರ್ನಿಯಾ ಸಮುದಾಯದ ಒಂದು ಭಾಗವಾಗಿದ್ದು, ಅವರು ಸಂಗೀತ ಕುಟುಂಬವೆಂದು ಪರಿಚಿತರಾಗಿದ್ದಾರೆ. ಲೌರಿ ಮತ್ತು ಆಸ್ಕರ್ ಅವರ ಏಳು ಮಕ್ಕಳು ಸ್ಥಳೀಯ ಶಾಲೆ, ಚರ್ಚ್ ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಬೆಳೆದರು ಮತ್ತು ಇಂದಿಗೂ ಒಟ್ಟಿಗೆ ಪ್ರದರ್ಶನ ನೀಡುತ್ತಿದ್ದಾರೆ.ಬೆನ್ ಕುಟುಂಬವು 1950 ರ ದಶಕದಿಂದ ಆಲ್ಟಾಡೆನಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಈ ಪ್ರದೇಶದಲ್ಲಿ ಮನೆಗಳನ್ನು ಖರೀದಿಸಿದ ಮೊದಲ ಕೃಷ್ಣವರ್ಣೀಯ ಕುಟುಂಬಗಳಲ್ಲಿ ಒಂದಾಗಿದೆ. ಮಕ್ಕಳು ತಮ್ಮ ಅಜ್ಜಿ, ಚಿಕ್ಕಮ್ಮ ಮತ್ತು ಚಿಕ್ಕಪ್ಪನವರ ಮನೆಯ ಹತ್ತಿರದಲ್ಲಿಯೇ ಬೆಳೆದರು. ಅವರು ತಮ್ಮ ಹಿತ್ತಲಿನಿಂದ ಹಣ್ಣುಗಳನ್ನು ಕಿತ್ತರು.

ಕೆಂಪು ಕೂದಲಿನ ತಾಯಿಯು ತನ್ನ ಮಗುವನ್ನು ಹುಲ್ಲುಗಾವಲಿನ ಅಂಗಳದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಸ್ಪಷ್ಟ ದಿನದಂದು ಹಿಡಿದುಕೊಂಡು ನಿಂತಿದ್ದಾರೆ.

"ಅಂತಹ ಸಮುದಾಯದಲ್ಲಿ ಹುಟ್ಟಿ ಬೆಳೆದದ್ದು ನಮ್ಮ ಅದೃಷ್ಟ, ನಮ್ಮ ಕುಟುಂಬದಂತೆಯೇ ಅಲ್ಲಿ ಮನೆಮಾಲೀಕತ್ವದ ಮೌಲ್ಯವನ್ನು ಕುಟುಂಬಗಳು ಅರಿತುಕೊಂಡವು ಮತ್ತು ತಲೆಮಾರುಗಳು ಅದರ ಭಾಗವಾಗಿದ್ದವು" ಎಂದು ಲೌರಿ ಮತ್ತು ಆಸ್ಕರ್ ಅವರ ಮಕ್ಕಳಲ್ಲಿ ಹಿರಿಯರಾದ ಲೊರೆನ್ ಬೆನ್ ಹೇಳಿದರು.

"ಮನೆಯನ್ನು ಕಳೆದುಕೊಳ್ಳುವುದು ಒಂದು ವಿಷಯ. ಪರಂಪರೆಯ ಒಂದು ಭಾಗವನ್ನೇ ಕಳೆದುಕೊಂಡ ಭಾವನೆ ಮತ್ತೊಂದು."

ಈಟನ್ ಬೆಂಕಿಯು ಅಲ್ಟಾಡೆನಾದಲ್ಲಿ ಹರಡಿದಾಗ, ಅದು ಲೊರೆನ್‌ಳ ಪೋಷಕರ ಮನೆ, ಅಜ್ಜಿಯ ಮನೆ ಮತ್ತು ಸಹೋದರನ ಮನೆಯನ್ನು ಭಸ್ಮ ಮಾಡಿತು. "ಮನೆಯನ್ನು ಕಳೆದುಕೊಳ್ಳುವುದು ಒಂದು ವಿಷಯ. ಪರಂಪರೆಯ ಒಂದು ಭಾಗವನ್ನೇ ಕಳೆದುಕೊಂಡ ಭಾವನೆ ಮತ್ತೊಂದು," ಎಂದು ಲೊರೆನ್ ಹೇಳುತ್ತಾರೆ.

ಮೋಡಗಳಿಲ್ಲದ ದಿನದಂದು ಟ್ಯಾನ್ ಕೋಟ್ ಮತ್ತು ಮುಖವಾಡ ಧರಿಸಿದ ಒಬ್ಬ ಮಹಿಳೆ, ಬೆಂಕಿಗೆ ಬಲಿಯಾದ ಮನೆಯ ಅವಶೇಷಗಳ ನಡುವೆ, ಪರ್ವತ ದೃಶ್ಯಗಳಿರುವ ಹಿನ್ನೆಲೆಯಲ್ಲಿ ನಿಂತಿರುವಳು.

ಬೆನ್ ಕುಟುಂಬ ಏಳು ಮಕ್ಕಳನ್ನು ಬೆಳೆಸಿದ ಮನೆ ಮತ್ತು ನೆರೆಹೊರೆಯಲ್ಲಿ ಹಲವಾರು ಇತರ ನಿವಾಸಗಳನ್ನು ಕಳೆದುಕೊಂಡಿದ್ದರು.

ಬೆನ್ ಕುಟುಂಬಸ್ಥರು ಸ್ಥಳಾಂತರಿಸಿದಾಗ, ಅವರು ಕೆಲವೇ ದಿನಗಳಲ್ಲಿ ಹಿಂತಿರುಗುತ್ತಾರೆ ಎಂದು ಭಾವಿಸಿದ್ದರು. ಆಸ್ಕರ್‌ಗೆ ಆಮ್ಲಜನಕ ನೀಡಲಾಗಿದ್ದ ಕಾರಣದಿಂದಾಗಿ ಅವರು ಹೊಗೆಯನ್ನು ತಪ್ಪಿಸಲು ಜಾಗರೂಕತೆ ವಹಿಸಿದ್ದರು. ಅವರು ಮನೆಗೆ ಹಿಂದಿರುಗುತ್ತಿಲ್ಲ ಎಂಬುದು ಶೀಘ್ರದಲ್ಲೇ ಸ್ಪಷ್ಟವಾಯಿತು ಮತ್ತು ಲೊರೆನ್ Airbnb.org ಮತ್ತು 211 LA ಮೂಲಕ ತುರ್ತು ವಸತಿಗಾಗಿ ಅರ್ಜಿ ಸಲ್ಲಿಸಿದರು. ಆಸ್ಕರ್ ಮತ್ತು ಲೌರಿ ಅವರ ಮೂವರು ಮೊಮ್ಮಕ್ಕಳು ಸೇರಿದಂತೆ ಬೆನ್‌ನ ಹನ್ನೊಂದು ಮಂದಿಯ ಕುಟುಂಬ Airbnb ಯಲ್ಲಿ ಒಂದು ತಿಂಗಳ ಕಾಲ ಉಚಿತವಾಗಿ ಉಳಿದುಕೊಂಡರು ಮತ್ತು ಮುಂದೇನು ಮಾಡಬೇಕೆಂಬುದನ್ನು ಯೋಚಿಸಿದರು.

ಗುಲಾಬಿ ಬಣ್ಣದ ಕನ್ನಡಕ ಧರಿಸಿರುವ ಹುಡುಗಿ ನೀಲಿ ಆಕಾಶದ ಕೆಳಗೆ ಹುಲ್ಲುಗಾವಲಿನ ಅಂಗಳದಲ್ಲಿ ಕುರ್ಚಿಯ ಮೇಲೆ ಕುಳಿತು ನಗುತ್ತಿರುವಳು.

ಹಂಚಿಕೊಂಡು ವಾಸಿಸುವ ಸ್ಥಳವನ್ನು ಬಳಸುವ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಪರಸ್ಪರ ಬೆಂಬಲಿಸುವ ಬೆನ್ ಕುಟುಂಬಕ್ಕೆ ಒಟ್ಟಿಗೆ ಉಳಿಯುವುದು ಅತ್ಯಂತ ಮುಖ್ಯವಾಗಿತ್ತು. "ನಾವು ಇಲ್ಲಿಗೆ ಬಂದ ನಂತರ ಸಹಜ ಸ್ಥಿತಿಗೆ ಮರಳಿದ ಭಾವನೆ ಮೂಡಿತು" ಎಂದು ಲೌರಿ ಹೇಳಿದರು. ಒಂದು ದಿನ ಅವರು ಸ್ಫಗೆಟ್ಟಿ ತಯಾರಿಸಿದರು. ತಮ್ಮ ಮನೆಗಳನ್ನು ಕಳೆದುಕೊಂಡ ನಂತರ ಇದೇ ಮೊದಲ ಬಾರಿಗೆ ಅವರು ಮನೆಯಲ್ಲಿ ತಯಾರಿಸಿದ ಊಟ ಸವಿದರು. ಅದೇ ಮನೆಯಲ್ಲೇ ಚಿಕ್ಕ ಮೊಮ್ಮಗ ತನ್ನ ಮೊದಲ ಹೆಜ್ಜೆಗಳನ್ನಿಟ್ಟನು.

"ಎಲ್ಲವೂ ಮುಂಚಿನಂತೆಯೇ ಇರುವುದಿಲ್ಲ ಎಂದು ನಮಗೆ ತಿಳಿದಿದೆ, ಆದರೆ ಇಂತಹ ಸಮಯದಲ್ಲಿ ಸಮುದಾಯವು ನಮ್ಮ ಕೈ ಬಿಡುವುದಿಲ್ಲ ಎಂಬುದು ನಮ್ಮ ಭರವಸೆ."

ಮೂರು ಪುರುಷರು ಒಬ್ಬರಿಗೊಬ್ಬರು ಹತ್ತಿರ ಬಾಗಿ ನಿಂತು ನೇರವಾಗಿ ಮುಂದೆ ನೋಡುತ್ತಿದ್ದರೆ, ಅವರಲ್ಲಿ ಮಧ್ಯದವರು ಆಮ್ಲಜನಕದ ಮಾಸ್ಕ್ ಅನ್ನು ಧರಿಸಿದ್ದಾರೆ.

Airbnb.org ವಾಸ್ತವ್ಯದ ಸಮಯದಲ್ಲಿ, ಬೆನ್ ಕುಟುಂಬ ಮುಂದಿನ ವರ್ಷಕ್ಕೆ ದೀರ್ಘಾವಧಿಯ ವಸತಿಯನ್ನು ಕಂಡುಕೊಂಡರು. ಅಲ್ಟಾಡೆನಾಕ್ಕೆ ಹಿಂತಿರುಗಲು ಮತ್ತು ತಮ್ಮ ಮನೆಗಳನ್ನು ಮಾತ್ರವಲ್ಲ, ಅವರ ಈ ಹಿಂದಿನ ಜೀವನ ವಿಧಾನವನ್ನು ಪುನರ್ನಿರ್ಮಿಸಲು ಯೋಜಿಸಿದ್ದಾರೆ.

ತೊಡಗಿಸಿಕೊಳ್ಳಿ

ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುತ್ತಿರುವ ಜಾಗತಿಕ ಸಮುದಾಯಕ್ಕೆ ಸೇರಿಕೊಳ್ಳಿ.

ಇನ್ನಷ್ಟು ತಿಳಿಯಿರಿ

ಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ

ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.