ಇಬ್ಬರು ಸೂಪರ್ ‌ ಹೋಸ್ಟ್‌ಗಳು ತಮ್ಮ Airstream ಗಳನ್ನು ಹಂಚಿಕೊಳ್ಳಲು ಯಶಸ್ವಿಯಾಗಿದ್ದಾರೆ

ಕೊಲೊರಾಡೋ ಮತ್ತು ಬ್ರಿಟಿಷ್ ಕೊಲಂಬಿಯಾದಲ್ಲಿನ ಹೋಸ್ಟ್‌ಗಳು ದೊಡ್ಡ ಆಲೋಚನೆಗಳನ್ನು ಸಣ್ಣ ಸ್ಥಳಗಳಿಗೆ ಹೊಂದಿಸುತ್ತಾರೆ.
Airbnb ಅವರಿಂದ ಫೆಬ್ರ 25, 2021ರಂದು
3 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಇಬ್ಬರು ಮಹಿಳೆಯರು, ಎರಡು ದೇಶಗಳಲ್ಲಿ, ತಮ್ಮ ಬೆಳೆಯುತ್ತಿರುವ ಕುಟುಂಬಗಳನ್ನು ಬೆಂಬಲಿಸಲು ವಿಂಟೇಜ್ ಟ್ರೇಲರ್‌ಗಳನ್ನು ಹೋಸ್ಟ್ ಮಾಡುತ್ತಾರೆ

  • ಅನನ್ಯ ಸ್ಥಳಗಳ ಮೇಲಿನ ಅವರಿಬ್ಬರಿಗೂ ಇದ್ದ ಪ್ರೀತಿ ಅವರನ್ನು ಟ್ರೇಲರ್‌ಗಳನ್ನು ಹೋಸ್ಟ್ ಮಾಡಲು ಪ್ರೇರೇಪಿಸಿತು

  • ಅವರ ಟ್ರೇಲರ್‌ಗಳು ವಿಭಿನ್ನ ವ್ಯಕ್ತಿತ್ವಗಳನ್ನು ಪ್ರತಿಬಿಂಬಿಸುತ್ತವೆ, ಆದರೆ Airbnb ಯಲ್ಲಿ ಹೋಸ್ಟ್ ಮಾಡುವ ಮೂಲಕ ಅವರು ಒಂದೇ ರೀತಿಯ ಯಶಸ್ಸನ್ನು ಗಳಿಸಿದ್ದಾರೆ

ಕಳೆದ ವರ್ಷಗಳಲ್ಲಿ, ಪ್ರಪಂಚದಾದ್ಯಂತ Airbnb ಯಲ್ಲಿರುವ ಹೋಸ್ಟ್‌ಗಳು ತಮ್ಮ ಕ್ಯಾಂಪರ್‌ಗಳು ಮತ್ತು RV ಗಳನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳಲು ಸೃಜನಾತ್ಮಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಮತ್ತು ಹೋಸ್ಟಿಂಗ್ ಮೂಲಕ ಪಡೆಯಲು ಸಾಧ್ಯವಾದ ಅನೇಕ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ.

ಕೇಟಿ ಮತ್ತು ಝೋ ಅವರನ್ನು ಭೇಟಿ ಮಾಡಿ. ಈ ಇಬ್ಬರು ಸೂಪರ್‌ಹೋಸ್ಟ್‌ಗಳು ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದಾರೆ, ಎಂದಿಗೂ ಭೇಟಿಯಾಗಿಲ್ಲ ಮತ್ತು ಅವರ ಟ್ರೇಲರ್‌ಗಳು ಹೆಚ್ಚು ಭಿನ್ನವಾಗಿರಲು ಸಾಧ್ಯವಿರಲಿಲ್ಲ. ಹಾಗಿದ್ದರೂ, ಅವರ ಹೋಸ್ಟಿಂಗ್ ಪಯಣಗಳು ಅನಿರೀಕ್ಷಿತವಾಗಿ ಒಂದೇ ರೀತಿ ಆಗಿವೆ.

ಯುವ ತಾಯಂದಿರಾಗಿರುವ ಇಬ್ಬರೂ ತಮ್ಮ ಕುಟುಂಬಗಳು ಬೆಳೆದ ನಂತರ ದೊಡ್ಡ ಮನೆಗಳಿಗೆ ತೆರಳುವ ಮೊದಲು 32-ಅಡಿ ವಿಂಟೇಜ್ Airstream ಗಳಲ್ಲಿ ವಾಸಿಸುತ್ತಿದ್ದರು. ಮತ್ತು ಇಬ್ಬರೂ ತಮ್ಮ ಟ್ರೇಲರ್‌ಗಳಿಗೆ ಮತ್ತು ತಮ್ಮ ವೃತ್ತಿಜೀವನಕ್ಕೆ ಒಂದು ಹೊಸ ಉದ್ದೇಶವನ್ನು ಒದಗಿಸುವುದಕ್ಕಾಗಿ ಹೋಸ್ಟಿಂಗ್‌ ಆಯ್ದುಕೊಂಡರು.

ಕೇಟಿಯನ್ನು ಭೇಟಿ ಮಾಡಿ

ಕೆಲವು ರೀತಿಯಲ್ಲಿ, Airstream ಅನ್ನು ಹೊಂದಿರುವುದು ಸೂಪರ್‌ಹೋಸ್ಟ್ ಕೇಟಿ ಮತ್ತು ಅವರ ಪತಿ ರಯಾನ್‌ಗೆ ವಿಧಿಲಿಖಿತ ಎಂದೆನಿಸಿದೆ.

ವೃತ್ತಿಪರ ನಾವಿಕ ಕೇಟಿ, ಮತ್ತು ಪ್ರಕೃತಿಯನ್ನು ಮಾನಸಿಕ-ಆರೋಗ್ಯ ಸಾಧನವಾಗಿ ಬಳಸುವ ಅರಣ್ಯ ಚಿಕಿತ್ಸಕ ರಯಾನ್, ಇವರಿಬ್ಬರೂ ಪ್ರಪಂಚವನ್ನು ಒಟ್ಟಿಗೆ ಪ್ರಯಾಣಿಸಿದ್ದರು. ಅದಾದ ಎರಡು ವರ್ಷಗಳ ನಂತರ, 1987 Airstream ಅನ್ನು ಖರೀದಿಸಿದರು. ಅವರು ಅದನ್ನು ಹಿಂದಿನ ಮಾಲೀಕರ ಹೆಸರಾದ ಆಲಿಸ್ ಎಂದು ಕರೆದರು. ಅವರು ಅದನ್ನು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಓಡಿಸಿದರು ಮತ್ತು ಟ್ರೇಲರ್‌ನಲ್ಲಿ ವಾಸಿಸುತ್ತಿದ್ದಾಗಲೇ ಅವರು ಮೊದಲ ಮಗುವನ್ನು ಹೊಂದಿದ್ದರು. ನಂತರ ಕೊಲೊರಾಡೋದ ಡುರಾಂಗೊ ಬಳಿ ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದ 35 ಎಕರೆ ಪ್ರಾಪರ್ಟಿಯಲ್ಲಿ ಕ್ಯಾಬಿನ್ ಅನ್ನು ಖರೀದಿಸಿದರು.

ರಯಾನ್ ಅವರನ್ನು ಭೇಟಿಯಾಗುವ ಮೊದಲೇ ಕೇಟಿ Airbnbಯಲ್ಲಿ ಯಶಸ್ವಿಯಾಗಿ ಹೋಸ್ಟ್ ಮಾಡಿದ್ದರು. ಟ್ರೇಲರ್ ಅನ್ನು ಹೋಸ್ಟ್ ಮಾಡುವುದು ತಾರ್ಕಿಕವಾಗಿ ಮುಂದಿನ ಹಂತದಂತೆ ತೋರಿತು. ಕೇಟಿಗೆ ಮನೆಯಿಂದ ಕೆಲಸ ಮಾಡಬಹುದಾಗಿತ್ತು ಮತ್ತು ಅವರ ಶ್ರೀಮಂತ ಭೂಭಾಗವನ್ನು ಹಂಚಿಕೊಂಡು ವಾಸಿಸಲು ಸಾಧ್ಯವಾಯಿತು. ಈ ನಡುವೆ ಅವರ ಭವಿಷ್ಯದ ಕನಸಿನ ಜೀವನಶೈಲಿಯಾದ ಟಿಪಿ ಟೆಂಟ್‌ಗಾಗಿ ರಯಾನ್ ಕೆಲಸ ಮಾಡಿದರು. ಹೋಸ್ಟ್ ಮಾಡಿದಾಗ ಇವೆಲ್ಲ ಸಾಧ್ಯವಾಯಿತು.

ಝೋ ಅವರನ್ನು ಭೇಟಿ ಮಾಡಿ

ಏತನ್ಮಧ್ಯೆ, ಫ್ಯಾಷನ್‌ ಡಿಸೈನರ್ ಮತ್ತು ಸೂಪರ್‌ಹೋಸ್ಟ್ ಆಗಿರುವ ಜೋ ಅವರು ಸುಸ್ಥಿರ ಉತ್ಪನ್ನಗಳನ್ನು ಮಾರಾಟ ಮಾಡುವ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವಾಗ ತಾನು ನಿಭಾಯಿಸಬಹುದಾದ ಮನೆಯನ್ನು ಹುಡುಕುತ್ತಿದ್ದರು. ಕನಿಷ್ಠ ವಿನ್ಯಾಸವನ್ನು ಪ್ರೀತಿಸುವ ಅವರು ತಾವು ವಾಸಿಸುವ ಬ್ರಿಟಿಷ್ ಕೊಲಂಬಿಯಾದಲ್ಲಿನ ಸಾಲ್ಟ್ ಸ್ಪ್ರಿಂಗ್ ದ್ವೀಪದಲ್ಲಿ 1985ರ Airstream ಮಾರಾಟಕ್ಕಿರುವುದನ್ನು ಕಂಡು ರೋಮಾಂಚನಗೊಂಡರು.

ತನ್ನ ಈಗಿನ ಸಂಗಾತಿಯಾದ, ಮೂವರು ಮಕ್ಕಳನ್ನು ಹೊಂದಿರುವ ಡಾನ್ ಎಂಬ ಬಡಗಿಯ ಜೊತೆ ಮನೆಯಲ್ಲಿ ವಾಸ್ತವ್ಯ ಹೂಡುವ ಮುನ್ನ, ಜೋ ಮತ್ತು ಅವರ ಇಬ್ಬರು ಮಕ್ಕಳು ಟ್ರೇಲರ್‌ನಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸಂತೋಷದಿಂದ ವಾಸಿಸುತ್ತಿದ್ದರು. ತನ್ನ Airstream ಅನ್ನು ಬಿಟ್ಟುಕೊಡಲು ಬಯಸದೆ, ಅವರು ಅದನ್ನು ನವೀಕರಿಸಿ ಅದನ್ನು Airbnb ಯಲ್ಲಿ ಲಿಸ್ಟ್‌ ಮಾಡಿದರು. ಅಲ್ಲಿ ಹಲವಾರು ಸ್ನೇಹಿತರು ಸಹ ಹೋಸ್ಟಿಂಗ್ ಅನ್ನು ಆನಂದಿಸಿದರು.

ಕೇಟಿಯಂತೆ, ಜೋ ಅವರು ಸಹ ಹೋಸ್ಟಿಂಗ್ ಏನೆಲ್ಲವನ್ನು ಸಾಧ್ಯವಾಗಿಸಬಹುದು ಎಂಬುದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿದ್ದರು. ಟ್ರೇಲರ್ ಅನ್ನು ಇರಿಸಿಕೊಳ್ಳಲು, ಪ್ರಶಾಂತವಾದ ವಿರಾಮ ಸ್ಥಳದ ಒದಗಿಸುವಿಕೆಗೆ ತನ್ನ ವಿನ್ಯಾಸ ಕೌಶಲ್ಯಗಳನ್ನು ಬಳಸಲು ಮತ್ತು ಐದು ಮಕ್ಕಳನ್ನು ಬೆಳೆಸುವಾಗ ಮನೆಯಿಂದಲೇ ಕೆಲಸ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಇವೆಲ್ಲವೂ ತ ಆಕರ್ಷಕ ಪೆಸಿಫಿಕ್ ವಾಯುವ್ಯ ಭೂಭಾಗವನ್ನು ಹಂಚಿಕೊಳ್ಳುವಾಗಲೇ ಸಾಧ್ಯವಾಗಿದ್ದು.

ಸಣ್ಣ ಜೀವನದಿಂದ ಪೂರ್ಣ ಸಮಯದ ಹೋಸ್ಟಿಂಗ್‌ವರೆಗೆ

ಟ್ರೇಲರ್ ಅನ್ನು ನವೀಕರಿಸಲು ಝೋ ಮತ್ತು ಡಾನ್‌ಗೆ ಒಂದು ವರ್ಷ ಬೇಕಾಯಿತು, ಇದನ್ನು ಅವರು "ದ್ವೀಪಕ್ಕೆ ಭೇಟಿ ನೀಡಲು ಅತ್ಯಂತ ಅಪೇಕ್ಷಣೀಯ ತಿಂಗಳಾದ" ಆಗಸ್ಟ್ ತಿಂಗಳ ಮೇಲೆ ಅದರ ಹೆಸರಿಸಿಟ್ಟರು. ಅವರು ಪೂರ್ಣ ಗಾತ್ರದ ಅಡಿಗೆಮನೆ ಮತ್ತು ಸೋಫಾ ಅನ್ನು ಸಂಯೋಜಿಸಿದರು, ಪಕ್ಕದಲ್ಲಿ ಸ್ಪಾ ತರಹದ ಸ್ನಾನಗೃಹವನ್ನು ನಿರ್ಮಿಸಿದರು ಮತ್ತು ಗೌಪ್ಯತೆಗಾಗಿ ಬೇಲಿಯನ್ನು ನಿರ್ಮಿಸಿದರು.

ಕೊಲೊರಾಡೋದಲ್ಲಿರುವ ಕೇಟೀ ಮತ್ತು ರಯಾನ್‌ಗೆ ಈ ಪ್ರಕ್ರಿಯೆಯು ವೇಗವಾಗಿ ಮುಗಿಯಿತು. ಅವರು ಏರ್‌ಸ್ಟ್ರೀಮ್ ಆಲಿಸ್ ಅನ್ನು ತಮ್ಮ ಕ್ಯಾಬಿನ್‌ನಿಂದ 200 ನೂರು ಅಡಿ ದೂರದಲ್ಲಿ ನಿಲ್ಲಿಸಿದರು, ಗೌಪ್ಯತೆಗಾಗಿ ಬೇಲಿ ಮತ್ತು ಸಣ್ಣ ಡೆಕ್ ಅನ್ನು ನಿರ್ಮಿಸಿದರು ಮತ್ತು ಜುನಿಪರ್ ಮತ್ತು ಪಿನಿಯಾನ್ ಪೈನ್‌ಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳು ಕಾಣಿಸುವಂತೆ ಅಗ್ನಿ ಕುಂಡವನ್ನು ನಿರ್ಮಿಸಿದರು.

ಅವರ ಟ್ರೇಲರ್‌ಗಳು ಸಿದ್ಧವಾದ ನಂತರ, ಯುವ ತಾಯಂದಿರಿಬ್ಬರಿಗೂ ಬುಕಿಂಗ್‌ಗಳ ಹೊಳೆ ಹರಿಯಿತು - ಹೆಚ್ಚಿನವರು ರೊಮ್ಯಾಂಟಿಕ್ ರಿಟ್ರೀಟ್ ಮತ್ತು ಅರಣ್ಯ ವಿಶ್ರಾಂತಿ ಸ್ಥಳಗಳನ್ನು ಹುಡುಕುವ ದಂಪತಿಗಳಾಗಿದ್ದರು.

ಕೊಲೊರಾಡೋದಲ್ಲಿ ಕೇಟೀ ಅವರ ಟ್ರೈಲರ್‌ನಲ್ಲಿ, ಗೆಸ್ಟ್‌ಗಳು ಎಲ್ಕ್, ನರಿಗಳು, ಕಪ್ಪು ಕರಡಿಗಳು ಮತ್ತು ಪರ್ವತ ಸಿಂಹಗಳು ಹುಲ್ಲುಗಾವಲಿನಲ್ಲಿ ಸಂಚರಿಸುವುದನ್ನು ಕಾಣಬಹುದು. ಅವರು ಕಿಂಗ್‌ ಬೆಡ್ ಮೇಲೆ ಕುಳಿತು ಮೇಲೆ ಕಾಣಿಸುತ್ತಿರುವ ನಕ್ಷತ್ರಮಯ ಆಕಾಶ, ಪ್ರಾರ್ಥನಾ ಧ್ವಜಗಳು, ಡ್ರೀಮ್‌ಕ್ಯಾಚರ್‌ಗಳನ್ನು ವೀಕ್ಷಿಸುತ್ತ ಸ್ಥಳೀಯ ಬ್ರೂವರಿಯಲ್ಲಿ ತಯಾರಿಸಿದ ಸೀಸನಲ್ ಬಿಯರ್‌ಗಳನ್ನು ಹೀರಬಹುದು.

"ಪ್ರಕೃತಿಗೆ ಮರಳಲು ಬಯಸುವ ಜನರಿಗೆ ಇದು ಅದ್ಭುತ ಸ್ಥಳವಾಗಿದೆ" ಎಂದು ಕೇಟಿ ಹೇಳುತ್ತಾರೆ, ಅವರು ತಮ್ಮ ಲಿಸ್ಟಿಂಗ್‌ನ ಶೀರ್ಷಿಕೆಯಲ್ಲಿ ಪರ್ವತದ ನೋಟಗಳನ್ನು ಉಲ್ಲೇಖಿಸಿದ್ದಾರೆ. "ನಾವು ಅದನ್ನು Airbnb ಯಲ್ಲಿ ಇರಿಸಿದೆವು ಮತ್ತು ಇದ್ದಕ್ಕಿದ್ದಂತೆ, ಅದು ಸೂಪರ್ ಜನಪ್ರಿಯವಾಯಿತು."

"ಪ್ರಕೃತಿಗೆ ಮರಳಲು ಬಯಸುವ ಜನರಿಗೆ ಇದು ಅದ್ಭುತ ಸ್ಥಳವಾಗಿದೆ."
Katie, Airbnb Superhost,
ಡುರಾಂಗೋ, ಕೊಲೊರಾಡೋ

ಸಾಲ್ಟ್ ಸ್ಪ್ರಿಂಗ್ ದ್ವೀಪದಲ್ಲಿ, ಝೋ ಅವರ ಗೆಸ್ಟ್‌ಗಳು ಹಳೆಯ ಆರ್ಬಟಸ್‌ ಮರಗಳು, ಸ್ವಚ್ಛ ಒಳಾಂಗಣಗಳು ಮತ್ತು ಬೆಡ್ ಪಕ್ಕದ ಡ್ರಾಯರ್‌ನಲ್ಲಿ ಆರಾಮದಾಯಕ‌ ಸಾಕ್ಸ್‌ಗಳಂತಹ ವೈಯಕ್ತಿಕ ಸ್ಪರ್ಶಗಳಿಂದ ಆಕರ್ಷಿತರಾಗಿದ್ದಾರೆ. ಅವರು ಮುಂಜಾನೆಯ ಸಮಯವನ್ನು ಆರಾಮವಾಗಿ ಸ್ಥಳೀಯ ಕಾಫಿಯನ್ನು ಆಸ್ವಾದಿಸುತ್ತಾ, ಸುಂದರವಾದ ಕರಾವಳಿ ಹಾದಿಗಳಲ್ಲಿ ನಡೆಯುತ್ತಾ ಮತ್ತು ಮಂಜಿನ ವಾತಾವರಣದಲ್ಲಿ ಜಿಂಕೆಗಳು ಸದ್ದಿಲ್ಲದೆ ಅತ್ತಿತ್ತ ಸಾಗುತ್ತಿರುವ ದೃಶ್ಯಗಳನ್ನು ಸವಿಯುತ್ತಾ ಸಮಯ ಕಳೆಯಬಹುದು.

“ಜನರು ಇಲ್ಲಿ ವಾಸ್ತವ್ಯ ಹೂಡಿದಾಗ, ತಮ್ಮ ಸ್ಥಳವೂ ಇದೇ ರೀತಿ ಪ್ರಶಾಂತ ಮತ್ತು ಸ್ವಚ್ಛವಾಗಿದ್ದರೆ ಅದು ಮನಸ್ಸಿಗೆ ನಿಜವಾಗಿಯೂ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ಅರಿತುಕೊಳ್ಳುತ್ತಾರೆ,” ಎಂದು ತಮ್ಮ ಲಿಸ್ಟಿಂಗ್‌ ವಿವರಣೆಯಲ್ಲಿ “ಸರಳ/ಬೋಹೋ ಶೈಲಿ” ಅನ್ನು ಎತ್ತಿ ತೋರಿಸುವ ಝೋ ಹೇಳುತ್ತಾರೆ. "ಅದು ನೀಡಲು ತುಂಬ ಸುಂದರವಾದ ಉಡುಗೊರೆ ಎಂದು ನಾನು ಭಾವಿಸುತ್ತೇನೆ."

ಹೊಂದಾಣಿಕೆ ಮತ್ತು ಉದ್ದೇಶವನ್ನು ಕಂಡುಕೊಳ್ಳುವುದು

ಮೇ ಮತ್ತು ಅಕ್ಟೋಬರ್‌ನ ಬೆಚ್ಚಗಿನ ತಿಂಗಳುಗಳ ನಡುವೆ ಕೇಟಿ ಗೆಸ್ಟ್‌ಗಳನ್ನು ಹೋಸ್ಟ್‌ ಮಾಡುತ್ತಾರೆ ಮತ್ತು ಆ ಆರು ತಿಂಗಳುಗಳಲ್ಲಿ ತಾವು ಸರಿಸುಮಾರು $ 18,000 ಗಳಿಸುತ್ತಿರುವುದಾಗಿ ಅವರು ಹೇಳುತ್ತಾರೆ. ಈಗ ಅವಳಿ ಶಿಶುಗಳು ಮತ್ತು ಇನ್ನೊಂದು ಮಗುವನ್ನು ಹೊಂದಿರುವ ಕೇಟಿಗೆ ಈ ಆದಾಯ ಬಹುಮುಖ್ಯವಾಗಿದೆ.

ದೋಣಿ ಮೂಲಕ ಪ್ರವೇಶಿಸಬಹುದಾದ ಸಾಲ್ಟ್ ಸ್ಪ್ರಿಂಗ್ ದ್ವೀಪವು ಚಳಿಗಾಲದಲ್ಲಿ ತೇವ ಮತ್ತು ಮೋಡದ ವಾತಾವರಣ ಹೊಂದಿರಬಹುದು. ಹಾಗಿದ್ದರೂ, ತಮ್ಮ ಟ್ರೇಲರ್ ವರ್ಷಪೂರ್ತಿ ಬುಕ್‌ ಆಗಿದೆ ಮತ್ತು ವಾರ್ಷಿಕವಾಗಿ ಸರಿಸುಮಾರು $ 20,000 ಒದಗಿಸುತ್ತಿದೆ ಎಂದು ಝೋ ಹೇಳುತ್ತಾರೆ. "ನನ್ನ ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳುವುದು ಹೋಸ್ಟಿಂಗ್‌ನ ಅತ್ಯಂತ ಅದ್ಭುತ ಭಾಗವಾಗಿದೆ," ಎಂದು ಝೋ ಹೇಳುತ್ತಾರೆ. "ಸುಸ್ಥಿರ ಜೀವನವೊದಗಿಸುವ ಪುಟ್ಟ ಮನೆಯಲ್ಲಿ ಸರಳತೆಯೊಂದಿಗೆ ಜೀವಿಸುವುದನ್ನು ಅನುಭವಿಸುಲು ಜನರು ಈ ಸ್ಥಳಕ್ಕೆ ಬರುತ್ತಾರೆ."

"ನನ್ನ ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳುವುದು ಹೋಸ್ಟಿಂಗ್‌ನ ಅತ್ಯಂತ ಅದ್ಭುತ ಭಾಗ. ಸುಸ್ಥಿರ ಜೀವನಕ್ಕಾಗಿ, ಕಡಿಮೆ ಪರಿಕರಗಳೊಂದಿಗೆ ಜೀವಿಸಲು ಮತ್ತು ತಮ್ಮ ಜೀವನಶೈಲಿಯನ್ನು ಸರಳಗೊಳಿಸಿಕೊಳ್ಳುವ ಅನುಭವವನ್ನು ಪಡೆಯಲು ಜನರು ಬರುತ್ತಾರೆ."
Zoë, Airbnb Superhost,
ಸಾಲ್ಟ್ ಸ್ಪ್ರಿಂಗ್ ದ್ವೀಪ, ಬ್ರಿಟಿಷ್ ಕೊಲಂಬಿಯಾ

ಮತ್ತು ಅವರು ತಾನು ಬಯಸಿದ ಹಾಗೆ ಹೋಸ್ಟ್ ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ ದೂರದಿಂದಲೇ ಉರುವಲನ್ನು ಹೊಂದಿಸುವಂತಹ ಕೆಲಸಗಳಿಗೆ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ತನ್ನ ಗೆಸ್ಟ್‌ಗಳಿಗೆ ಅವರು ಸ್ಥಳವನ್ನು ನೀಡಬೇಕಾಗುತ್ತಿತ್ತು. "ಮಹತ್ತರವಾದ, ದೀರ್ಘ ಭೇಟಿಯಿಲ್ಲದಿದ್ದರೂ ಸಹ, ಯಾವಾಗಲೂ ಸಂಪರ್ಕವಿರುತ್ತದೆ" ಎಂದು ಅವರು ಹೇಳುತ್ತಾರೆ.

ಅದೇ ರೀತಿ ಕೇಟಿಗೆ, ಟ್ರೇಲರ್ ಕೇವಲ ಆದಾಯದ ಮೂಲವಲ್ಲ. ಅದನ್ನು ಇಟ್ಟುಕೊಳ್ಳುವುದರಿಂದ, ಅವರು ತಮ್ಮ ಕ್ಯಾಬಿನ್ ಅನ್ನು ಹೋಸ್ಟ್ ಮಾಡುವಾಗ ತಮ್ಮ ಕುಟುಂಬವನ್ನು ರೋಡ್‌ ಟ್ರಿಪ್‌ಗಳಿಗೆ ಕರೆದೊಯ್ಯಬಹುದು. ಅವರು ಯರ್ಟ್ ಅನ್ನು ಸಹ ನಿರ್ಮಿಸುತ್ತಿದ್ದಾರೆ, ಆದ್ದರಿಂದ ಅವರು ಮತ್ತೊಂದು ವಿಶಿಷ್ಟ ವಾಸ್ತವ್ಯವನ್ನು ಹೋಸ್ಟ್‌ ಮಾಡಬಹುದು.

"ನಮಗೆ ಅದರಿಂದ ಸಿಗುವ ಒಂದು ಮಹತ್ವದ ವಿಷಯವೆಂದರೆ, ನಾವು ವಾಸಿಸುವ ಪ್ರಪಂಚದ ಸುಂದರ ಭಾಗವನ್ನು ಅನುಭವಿಸಲು ಇತರರಿಗೆ ಅವಕಾಶ ನೀಡುವುದೇ ಆಗಿದೆ" ಎಂದು ಕೇಟಿ ಹೇಳುತ್ತಾರೆ. "ಬಂದ ಗೆಸ್ಟ್‌ಗಳನ್ನು ಹೋಸ್ಟ್‌ ಮಾಡುವುದು, ನಂತರ ಅವರಿಗೆ ಏನು ಬೇಕೋ ಅದನ್ನು ತಪ್ಪದೇ ನೀಡಿ ಅವರನ್ನು ಚೇತೋಹಾರಿಯಾಗಿಸುವುದು-ಇದು ನನಗೆ ಚೈತನ್ಯವನ್ನು ನೀಡುತ್ತದೆ."

ನಿಮ್ಮ ಸ್ವಂತ ಕ್ಯಾಂಪರ್ ಅಥವಾ RV ಅನ್ನು ಹೋಸ್ಟ್ ಮಾಡಲು ಆಸಕ್ತಿ ಇದೆಯೇ?

ವಿಶೇಷ ಆಕರ್ಷಣೆಗಳು

  • ಇಬ್ಬರು ಮಹಿಳೆಯರು, ಎರಡು ದೇಶಗಳಲ್ಲಿ, ತಮ್ಮ ಬೆಳೆಯುತ್ತಿರುವ ಕುಟುಂಬಗಳನ್ನು ಬೆಂಬಲಿಸಲು ವಿಂಟೇಜ್ ಟ್ರೇಲರ್‌ಗಳನ್ನು ಹೋಸ್ಟ್ ಮಾಡುತ್ತಾರೆ

  • ಅನನ್ಯ ಸ್ಥಳಗಳ ಮೇಲಿನ ಅವರಿಬ್ಬರಿಗೂ ಇದ್ದ ಪ್ರೀತಿ ಅವರನ್ನು ಟ್ರೇಲರ್‌ಗಳನ್ನು ಹೋಸ್ಟ್ ಮಾಡಲು ಪ್ರೇರೇಪಿಸಿತು

  • ಅವರ ಟ್ರೇಲರ್‌ಗಳು ವಿಭಿನ್ನ ವ್ಯಕ್ತಿತ್ವಗಳನ್ನು ಪ್ರತಿಬಿಂಬಿಸುತ್ತವೆ, ಆದರೆ Airbnb ಯಲ್ಲಿ ಹೋಸ್ಟ್ ಮಾಡುವ ಮೂಲಕ ಅವರು ಒಂದೇ ರೀತಿಯ ಯಶಸ್ಸನ್ನು ಗಳಿಸಿದ್ದಾರೆ

Airbnb
ಫೆಬ್ರ 25, 2021
ಇದು ಸಹಾಯಕವಾಗಿದೆಯೇ?

ನಿಮಗೆ ಇಷ್ಟವಾಗಬಹುದಾದ ಇತರ ವಿಷಯಗಳು

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ