ನಿಮ್ಮ ವ್ಯವಹಾರವನ್ನು ನಿರ್ವಹಿಸಲು ಮತ್ತು ಬೆಳೆಸಲು ನಿಮಗೆ ಸಹಾಯ ಮಾಡುವ ಅಪ್‌ಗ್ರೇಡ್‌ಗಳು
ಸ್ಪರ್ಧಾತ್ಮಕವಾಗಿರಲು, ಬೆಲೆಯನ್ನು ಚತುರವಾಗಿ ನಿಗದಿಪಡಿಸಲು ಮತ್ತು ಹೋಸ್ಟಿಂಗ್ ಟೂಲ್‌ಗಳಿಗೆ Airbnb ಯ ಇತ್ತೀಚಿನ ಅಪ್‌ಗ್ರೇಡ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಹಿಂದೆಂದಿಗಿಂತಲೂ ಸುಲಭವಾಗಿದೆ. ಗೆಸ್ಟ್‌ಗಳು ಮೊದಲು ಗಮನಿಸದಿರುವ ಲಿಸ್ಟಿಂಗ್‌ಗಳನ್ನು ಹುಡುಕಿಕೊಳ್ಳಲು ಮತ್ತು ಬುಕಿಂಗ್ ಮಾಡುವ ಸಮಯದಲ್ಲಿ $0 ನೊಂದಿಗೆ ರಿಸರ್ವ್ ಮಾಡಲು ಸಹಾಯ ಮಾಡುವ ಹೊಸ ವೈಶಿಷ್ಟ್ಯಗಳನ್ನು ನಾವು ಪರಿಚಯಿಸುತ್ತಿದ್ದೇವೆ—ಇದರಿಂದ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಾಗುವುದಿಲ್ಲ.* ಈ ಅಪ್‌ಗ್ರೇಡ್‌ಗಳಲ್ಲಿನ ಕೆಲವು ಈಗಲೇ ನಿಮ್ಮ ಆ್ಯಪ್‌ನಲ್ಲಿ ಕಾಣಿಸುತ್ತವೆ, ಉಳಿದವು ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗುತ್ತವೆ.
ಚತುರವಾಗಿ ಬೆಲೆ ನಿಗದಿಪಡಿಸಿ ಮತ್ತು ಮುಂಚಿತವಾಗಿ ಯೋಜಿಸಿ
ಈ ಟೂಲ್‌ಗಳು ಗಳಿಕೆಗಳನ್ನು ಹೆಚ್ಚಿಸಲು ಮತ್ತು ಕೊನೆಯ ಕ್ಷಣದ ರದ್ದತಿಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತವೆ.
ಡೈನಾಮಿಕ್ ರದ್ದತಿ ನೀತಿಗಳು: ರಜಾದಿನಗಳು ಅಥವಾ ಪೀಕ್ ಅಲ್ಲದ ಸೀಸನ್‌ಗಳಂತಹ ನಿರ್ದಿಷ್ಟ ದಿನಾಂಕಗಳಿಗೆ ವಿಭಿನ್ನ ರದ್ದತಿ ನೀತಿಗಳನ್ನು ಹೊಂದಿಸಿ. ಗೆಸ್ಟ್‌ಗಳನ್ನು ಆಕರ್ಷಿಸಲು ನಿಮ್ಮ ನಿಧಾನಗತಿಯ ತಿಂಗಳುಗಳಲ್ಲಿ ಹೆಚ್ಚು ಹೊಂದಿಕೊಳ್ಳುವ ರದ್ದತಿ ನೀತಿಯನ್ನು ನೀಡುವುದನ್ನು ನೀವು ಪರಿಗಣಿಸಬಹುದು, ಆದರೆ ಪೀಕ್ ಸೀಸನ್‌ನಲ್ಲಿ ನಿಮ್ಮ ಸಾಮಾನ್ಯ ನೀತಿಯನ್ನು ಇಟ್ಟುಕೊಳ್ಳಬಹುದು.**
ಸುಧಾರಿತ ಬೆಲೆ ಸಲಹೆಗಳು: ಒಂದು ವರ್ಷದ ತನಕ ದಿನಾಂಕಗಳಿಗೆ ಬೆಲೆ ಸಲಹೆಗಳನ್ನು ಮುಂಚಿತವಾಗಿ ಪಡೆಯಿರಿ ಮತ್ತು ಕೇವಲ ಒಂದು ಟ್ಯಾಪ್‌ನೊಂದಿಗೆ ಎಲ್ಲ ಸಲಹೆಗಳನ್ನು ಅಳವಡಿಸಿಕೊಳ್ಳಿ. ಬೆಲೆ ಸಲಹೆಗಳು ಸ್ಥಳ, ಸೌಲಭ್ಯಗಳು ಮತ್ತು ಹಿಂದಿನ ಬುಕಿಂಗ್‌ಗಳು, ಜೊತೆಗೆ ನಿಮ್ಮ ಪ್ರದೇಶದಲ್ಲಿನ ಇತರ ಮನೆಗಳಿಗೆ ಇತ್ತೀಚಿನ ಬೆಲೆಗಳು ಸೇರಿದಂತೆ ನಿಮ್ಮ ಮನೆಯ ಗುಣಲಕ್ಷಣಗಳನ್ನು ಬಳಸುತ್ತವೆ.**
ಟ್ರಿಪ್ ಬೆಲೆ ಪೂರ್ವವೀಕ್ಷಣೆಗಳು: ನೀವು ಒಂದು ಅಥವಾ ಬಹು ರಾತ್ರಿಗಳಿಗೆ ನಿಮ್ಮ ಪ್ರತಿ ರಾತ್ರಿಯ ಬೆಲೆಯನ್ನು ಎಡಿಟ್ ಮಾಡಿದಾಗ ಗೆಸ್ಟ್‌ಗಳು ಏನು ಪಾವತಿಸುತ್ತಾರೆ ಮತ್ತು ನಿಮ್ಮ ಅಂದಾಜು ಮಾಡಲಾದ ಗಳಿಕೆಗಳು ಎಷ್ಟೆಂದು ನೋಡಿ.
ವೀಡಿಯೊಗಳು ಮತ್ತು ಸ್ಥಳೀಕ ಸಲಹೆಗಳನ್ನು ಹಂಚಿಕೊಳ್ಳಿ
ಹೊಸ ವೀಡಿಯೊ ಸಂದೇಶಗಳು ಮತ್ತು ಹೋಸ್ಟ್ ಶಿಫಾರಸುಗಳನ್ನು ಕಳುಹಿಸುವ ಮೂಲಕ ಗೆಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸಿ.
ವೀಡಿಯೊ ಸಂದೇಶಗಳು: ಸಂದೇಶಗಳಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಿ. ಚೆಕ್-ಇನ್‌ಗೆ ಮುಂಚಿತವಾಗಿ ನೀವು ಗೆಸ್ಟ್‌ಗಳಿಗೆ ಪ್ರಾಪರ್ಟಿ ಟೂರ್ ಅನ್ನು ಕಳುಹಿಸಬಹುದು ಅಥವಾ ನಿಮ್ಮ ಸ್ವಾಗತ ಸಂದೇಶಕ್ಕೆ BBQ ಗ್ರಿಲ್ ಟ್ಯುಟೋರಿಯಲ್ ಅನ್ನು ಸೇರಿಸಬಹುದು.
ಹೋಸ್ಟ್ ಶಿಫಾರಸುಗಳು: ಕೆಲವೇ ಟ್ಯಾಪ್‌ಗಳಲ್ಲಿ, ನಿಮ್ಮ ಸಂದೇಶಗಳಲ್ಲಿ, ನಿಮ್ಮ ಮಾರ್ಗದರ್ಶಿ ಪುಸ್ತಕ ಅಥವಾ Airbnb ಅನುಭವ ಅಥವಾ ಸೇವೆಯನ್ನು ವಿಶೇಷ ಆಕರ್ಷಣೆಯಾಗಿ ಬಿಂಬಿಸುವ ಡಿಜಿಟಲ್ ಕಾರ್ಡ್ ಅನ್ನು ಸುಲಭವಾಗಿ ಕಳುಹಿಸಿ. ನೀವು ಅನುಭವ ಅಥವಾ ಸೇವೆಗೆ ಲಿಂಕ್ ಅನ್ನು ಸಹ ಸೇರಿಸಬಹುದು ಮತ್ತು ನಿಮ್ಮ ಗೆಸ್ಟ್‌ಗಳು ಶಿಫಾರಸಿನೊಂದಿಗೆ ಕಾರ್ಡ್ ಅನ್ನು ನೋಡುತ್ತಾರೆ.
ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಿ
ಮುಂದಿನ ವರ್ಷದಿಂದ, ಲಿಸ್ಟಿಂಗ್ ಕಾರ್ಯಕ್ಷಮತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಗಳಿಕೆಯ ಡ್ಯಾಶ್‌ಬೋರ್ಡ್‌ನಲ್ಲಿ ಸುಲಭವಾಗಿ ಓದಬಹುದಾದ ಗ್ರಾಫ್‌ಗಳನ್ನು ಪಡೆಯಿರಿ.
ನವೀಕೃತ ಗಳಿಕೆಯ ಡ್ಯಾಶ್‌ಬೋರ್ಡ್: ಹೊಚ್ಚ ಹೊಸ ಟ್ಯಾಬ್‌ನಲ್ಲಿ ಪ್ರತಿ ವರ್ಷದ ಗಳಿಕೆಯ ಟ್ರೆಂಡ್‌ಗಳನ್ನು ವೀಕ್ಷಿಸಿ ಮತ್ತು ಋತುಮಾನದ ಕಾರ್ಯಕ್ಷಮತೆಯ ಹೋಲಿಕೆ ಮಾಡಿ. ಉದಾಹರಣೆಗೆ, ಕಳೆದ ನವೆಂಬರ್‌ನಲ್ಲಿ ನಿಮ್ಮ ಗಳಿಕೆಗಳು ಈ ನವೆಂಬರ್‌ನಲ್ಲಿ ನಿರೀಕ್ಷಿತ ಗಳಿಕೆಗಳಿಗೆ ಹೇಗೆ ಹೋಲಿಕೆಯಾಗುತ್ತವೆ ಎಂಬುದನ್ನು ನೋಡಿ.***
ಸಂಘಟಿತರಾಗಿರಿ
ಎರಡು ಕ್ಯಾಲೆಂಡರ್ ಅಪ್‌ಗ್ರೇಡ್‌ಗಳು ನಿಮ್ಮ ವೇಳಾಪಟ್ಟಿಯನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.
ನಿರ್ಬಂಧಿಸಿದ ರಾತ್ರಿ ಟಿಪ್ಪಣಿಗಳು: ಈಗ ನೀವು ನಿರ್ಬಂಧಿಸಿದ ರಾತ್ರಿಗಳಿಗೆ ಜ್ಞಾಪನೆಗಳನ್ನು ಸೇರಿಸಬಹುದು ಮತ್ತು ಭವಿಷ್ಯದಲ್ಲಿ ನೀವು ಆ ಸಮಯವನ್ನು ಏಕೆ ನಿರ್ಬಂಧಿಸಿದ್ದೀರಿ ಎಂಬುದನ್ನು ಒಂದೇ ನೋಟದಲ್ಲಿ ತಿಳಿದುಕೊಳ್ಳಬಹುದು.
ಸಂಕ್ಷಿಪ್ತ ಕರೆನ್ಸಿ ಪ್ರದರ್ಶನ: ಉದ್ದವಾದ ರಾತ್ರಿ ಬೆಲೆಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಸಂಕ್ಷಿಪ್ತ ರೂಪದಲ್ಲಿ ತೋರಿಸಲಾಗುತ್ತದೆ. ಉದಾಹರಣೆಗೆ, $35,103.42 ಕೊಲಂಬಿಯದ ಪೆಸೊಗಳು $35.1K ಎಂದು ಕಾಣಿಸುತ್ತದೆ.
ಗೆಸ್ಟ್‌ಗಳಿಗೆ ಬುಕ್ ಮಾಡಲು ಸಹಾಯ ಮಾಡಲು ಅಪ್‌ಗ್ರೇಡ್‌ಗಳನ್ನು ಅನ್ವೇಷಿಸಿ
ಗೆಸ್ಟ್‌ಗಳು ಈಗ ಪಾವತಿಸಲು ಹೆಚ್ಚಿನ ಮಾರ್ಗಗಳನ್ನು ಮತ್ತು ಚತುರ ಹುಡುಕಾಟಗಳನ್ನು ಪ್ರವೇಶಿಸಬಹುದು.
ಈಗ ರಿಸರ್ವ್ ಮಾಡಿ, ನಂತರ ಪಾವತಿಸಿ: ಅರ್ಹ ವಾಸ್ತವ್ಯವನ್ನು ರಿಸರ್ವ್ ಮಾಡುವ ಮತ್ತು ಬುಕಿಂಗ್ ಸಮಯದಲ್ಲಿ $0 ಪಾವತಿಸುವ ಆಯ್ಕೆಯನ್ನು ಗೆಸ್ಟ್‌ಗಳು ಹೊಂದಿರುತ್ತಾರೆ. ಇದು ನಿಮ್ಮ ಹೊರಪಾವತಿ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗೆಸ್ಟ್‌ಗಳಿಗೆ ಹೆಚ್ಚು ಹೊಂದಿಕೊಳ್ಳುವ ಆಯ್ಕೆಗಳನ್ನು ನೀಡುವುದು ಹೋಸ್ಟ್‌ಗಳಿಗೆ ಹೆಚ್ಚಿನ ಬುಕಿಂಗ್‌ಗಳಿಗೆ ಕಾರಣವಾಗಬಹುದು. ಅರ್ಹ ಬುಕಿಂಗ್‌ಗಳಿಗಾಗಿ ಚೆಕ್‌ಔಟ್‌ನಲ್ಲಿ 60% ಕ್ಕಿಂತ ಹೆಚ್ಚು ಗೆಸ್ಟ್‌ಗಳು ಈ ಹಣಪಾವತಿ ಆಯ್ಕೆಯನ್ನು ಬಳಸಲು ಆಯ್ಕೆ ಮಾಡಿದ್ದಾರೆ.****
ಚತುರ ಹುಡುಕಾಟ: ವಾಸ್ತವ್ಯಕ್ಕಾಗಿ ಹುಡುಕುತ್ತಿರುವಾಗ, ಗೆಸ್ಟ್‌ಗಳು ತಮ್ಮ ಹುಡುಕಾಟ ಮಾನದಂಡಗಳಿಗಿಂತ ಸ್ವಲ್ಪವೇ ಭಿನ್ನವಿರುವ ಮನೆಗಳ ಹೆಚ್ಚಿನ ಆಯ್ಕೆಗಳನ್ನು ನೋಡುತ್ತಾರೆ. ಉದಾಹರಣೆಗೆ, ನಾವು ಹೋಲಿಕೆಯ ಬೆಲೆಯ ಮನೆಗಳು, ವಿಭಿನ್ನ ಸೌಲಭ್ಯಗಳಿರುವ ಮನೆಗಳು ಅಥವಾ ಹತ್ತಿರದ ನಗರಗಳಲ್ಲಿ ಕಡಿಮೆ ವೆಚ್ಚದ ವಾಸ್ತವ್ಯಗಳನ್ನು ತೋರಿಸುತ್ತೇವೆ, ಇದರಿಂದ ಗೆಸ್ಟ್‌ಗಳಿಗೆ, ಅವರಿಂದ ತಪ್ಪಿಹೋಗಬಹುದಾದ ಉತ್ತಮ ಆಯ್ಕೆಗಳನ್ನು ಹುಡುಕಿಕೊಳ್ಳಲು ಸಹಾಯವಾಗುತ್ತದೆ.
ಸುಧಾರಿತ ನಕ್ಷೆಗಳು: ನಕ್ಷೆಗಳು ಈಗ ಗೆಸ್ಟ್‌ಗಳಿಗೆ ಹತ್ತಿರದ ಹೆಗ್ಗುರುತುಗಳು, ಆಕರ್ಷಣೆಗಳು, ರೆಸ್ಟೋರೆಂಟ್‌ಗಳು ಮತ್ತು ಹೆಚ್ಚಿನದನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತವೆ. ಗೆಸ್ಟ್‌ಗಳು ಸಾರಾಂಶವನ್ನು ನೋಡಲು ಮತ್ತು ಅವರು ವೀಕ್ಷಿಸುತ್ತಿರುವ ಅಥವಾ ಈಗಾಗಲೇ ಬುಕ್ ಮಾಡಿದ ಮನೆಗೆ ಪ್ರಯಾಣದ ದೂರವನ್ನು ನೋಡಲು ಪ್ರಮುಖ ಹೆಗ್ಗುರುತುಗಳನ್ನು ಟ್ಯಾಪ್ ಮಾಡಬಹುದು. ಈ ವರ್ಷದ ನಂತರದ ಭಾಗದಲ್ಲಿ, ಗೆಸ್ಟ್‌ಗಳು ತಮ್ಮ ಆದ್ಯತೆಯ ಮೇರೆಗೆ ಸ್ಯಾಟಲೈಟ್, ರಸ್ತೆ ಮತ್ತು ಸಾರಿಗೆ ಸೇರಿದಂತೆ ವಿವಿಧ ನಕ್ಷೆ ವೀಕ್ಷಣೆಗಳ ನಡುವೆ ಟಾಗಲ್ ಮಾಡಬಹುದು.
*ಈಗ ರಿಸರ್ವ್ ಮಾಡಿ, ನಂತರ ಪಾವತಿಸಿ, US ನಲ್ಲಿನ ಗೆಸ್ಟ್‌ಗಳಿಗೆ ಲಭ್ಯವಿದೆ ಮತ್ತು ಇಂದಿನಿಂದ ಜಾಗತಿಕವಾಗಿ ಆಯ್ದ ಗೆಸ್ಟ್‌ಗಳಿಗೆ ಲಭ್ಯವಾಗುತ್ತದೆ, ಮುಂದಿನ ವರ್ಷದ ಆರಂಭದಲ್ಲಿ ವ್ಯಾಪಕ ಲಭ್ಯತೆಯನ್ನು ನಿರೀಕ್ಷಿಸಲಾಗಿದೆ. ಬ್ರೆಜಿಲ್‌ನ ರಿಯಲ್ (BRL), ಭಾರತೀಯ ರೂಪಾಯಿ (INR) ಅಥವಾ ಟರ್ಕಿಶ್ ಲಿರಾ (TRY) ನಲ್ಲಿ ಪಾವತಿಸಿದ ರಿಸರ್ವೇಶನ್‌ಗಳು ಅನರ್ಹವಾಗಿವೆ.
**ಡೈನಾಮಿಕ್ ರದ್ದತಿ ಮತ್ತು ಸುಧಾರಿತ ಬೆಲೆ ಸಲಹೆಗಳು ನವೆಂಬರ್‌ನಲ್ಲಿ ಸೀಮಿತ ಸಂಖ್ಯೆಯ ಹೋಸ್ಟ್‌ಗಳಿಗೆ ಲಭ್ಯವಾಗಲು ಪ್ರಾರಂಭವಾಗಲಿವೆ, 2026 ರ ಆರಂಭದಲ್ಲಿ ವ್ಯಾಪಕ ಲಭ್ಯತೆಯನ್ನು ನಿರೀಕ್ಷಿಸಲಾಗಿದೆ.
***ಹೊಸ ಕಾರ್ಯಕ್ಷಮತೆ ಟ್ಯಾಬ್ ಅನ್ನು 2026 ರ ಆರಂಭದಲ್ಲಿ ಹೋಸ್ಟ್‌ಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.
****ವರ್ಷದ ಮೊದಲಾರ್ಧದಲ್ಲಿ US ನಲ್ಲಿ 'ಈಗ ರಿಸರ್ವ್ ಮಾಡಿ, ನಂತರ ಪಾವತಿಸಿ'ಯ ಪರೀಕ್ಷೆಗಳಿಂದ ಏಪ್ರಿಲ್ ಮತ್ತು ಜೂನ್ 2025 ರ ನಡುವಿನ ಆಂತರಿಕ Airbnb ಡೇಟಾದ ಆಧಾರದ ಮೇಲೆ.
ಬೆಲೆಗಳನ್ನು USD ಯಲ್ಲಿ ತೋರಿಸಲಾಗಿದೆ. ಬಳಕೆದಾರರ ಅನುಭವವು ಸ್ಥಳವನ್ನು ಅವಲಂಬಿಸಿ ಬದಲಾಗಬಹುದು.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.