ಅಧಿಕ ಬೇಡಿಕೆಯನ್ನು ಅಧಿಕ ಗಳಿಕೆಯನ್ನಾಗಿ ಪರಿವರ್ತಿಸುವುದು

ಕಾರ್ಯನಿರತ ಋತುಗಳ ಹೆಚ್ಚಿನ ಪ್ರಯೋಜನ ಪಡೆಯಲು ನಿಮಗೆ ಸಹಾಯ ಮಾಡಲು Airbnb ಹೋಸ್ಟಿಂಗ್ ಟೂಲ್‌ಗಳನ್ನು ಬಳಸಿ.
Airbnb ಅವರಿಂದ ಜನ 6, 2025ರಂದು
4 ನಿಮಿಷದ ವೀಡಿಯೊ
ಮಾರ್ಚ್ 19, 2025 ನವೀಕರಿಸಲಾಗಿದೆ

ರಜಾದಿನಗಳು, ದೊಡ್ಡ ಕಾರ್ಯಕ್ರಮಗಳು ಮತ್ತು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ನಿಮ್ಮ ಲಿಸ್ಟಿಂಗ್‌ನಲ್ಲಿನ ಆಸಕ್ತಿಯನ್ನು ಹೆಚ್ಚಿಸಬಹುದು. Airbnb ಹೋಸ್ಟಿಂಗ್ ಪರಿಕರಗಳು ಈ ಹೆಚ್ಚಿನ ಬೇಡಿಕೆಯ ಅವಧಿಗಳಲ್ಲಿ ಹೆಚ್ಚು ಗಳಿಸಲು ನಿಮಗೆ ಸಹಾಯ ಮಾಡುತ್ತವೆ. ನಿಮ್ಮ ಗಳಿಕೆಗಳನ್ನು ಗರಿಷ್ಠಗೊಳಿಸಲು ಈ ಕ್ರಮಗಳನ್ನು ಪರಿಗಣಿಸಿ.

ನಿಮ್ಮ ಕ್ಯಾಲೆಂಡರ್ ಅನ್ನು ಅಪ್‌ ಟು ಡೇಟ್‌ ಆಗಿ ಇರಿಸಿಕೊಳ್ಳಿ

ಹೆಚ್ಚಿನ ಬೇಡಿಕೆಯ ಋತುವಿಗೆ ಸಿದ್ಧವಾಗಲು ಒಂದು ಮಾರ್ಗವೆಂದರೆ ನಿಮ್ಮ ಕ್ಯಾಲೆಂಡರ್‌ನಲ್ಲಿ ಹೆಚ್ಚುವರಿ ರಾತ್ರಿಗಳನ್ನು ತೆರೆಯುವುದಾಗಿದೆ. ಹೆಚ್ಚಿನ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ನಿಮ್ಮ ಗಳಿಕೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಲಿಸ್ಟಿಂಗ್‌‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು ಬೂದು ಬಣ್ಣದಲ್ಲಿ ಗೋಚರಿಸುವ ಬ್ಲಾಕ್ ಮಾಡಿದ ರಾತ್ರಿಗಳನ್ನು ನೋಡಿ. ನೀವು ಹೋಸ್ಟ್ ಮಾಡಲು ಸಾಧ್ಯವಾಗುವ ಯಾವುದೇ ನಿರ್ಬಂಧಿತ ರಾತ್ರಿಗಳನ್ನು ತೆರೆಯಿರಿ.

ನಿಮ್ಮ ಲಭ್ಯತೆಯ ವಿಂಡೋವನ್ನು ವಿಸ್ತರಿಸುವುದು, ಗೆಸ್ಟ್‌ಗಳು ಇನ್ನೂ ಮುಂದಕ್ಕೆ ಬುಕ್ ಮಾಡಲು ಅನುವು ಮಾಡಿಕೊಡುತ್ತದೆ. ವಾರ್ಷಿಕ ದೊಡ್ಡ ಘಟನೆಗಳು ಮತ್ತು ಹಿಮ ಮತ್ತು ಬೀಚ್ ಸೀಸನ್‌ಗಳಂತಹ ಹೆಚ್ಚಿನ ಬೇಡಿಕೆಯ ಊಹಿಸಬಹುದಾದ ಅವಧಿಗಳಿರುವ ಪ್ರದೇಶಗಳಿಗೆ ಈ ತಂತ್ರವು ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ನಿಮ್ಮ ಲಭ್ಯತೆಯ ವಿಂಡೋವನ್ನು ಲೆಕ್ಕಿಸದೆ ನಿಮ್ಮ ಕ್ಯಾಲೆಂಡರ್ ಒಮ್ಮೆಗೆ ಒಂದು ದಿನಕ್ಕೆ ತೆರೆಯುತ್ತದೆ. ಉದಾಹರಣೆಗೆ, ನಿಮ್ಮ ವಿಂಡೋ 12 ತಿಂಗಳುಗಳದ್ದಾಗಿದ್ದರೆ, ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಇಂದಿನ ದಿನಾಂಕಕ್ಕಿಂತ ಒಂದು ವರ್ಷ ನಂತರದವರೆಗೆ ಬುಕ್ ಮಾಡಬಹುದು ಮತ್ತು ನಿಮ್ಮ ಲಭ್ಯತೆಯು ಪ್ರತಿದಿನ ಅಪ್‌ಡೇಟ್ ಆಗುತ್ತದೆ.

ಸ್ಪರ್ಧಾತ್ಮಕವಾಗಿ ದರ ನಿಗದಿಪಡಿಸಿ

ಹೆಚ್ಚಿನ ಬೇಡಿಕೆಯ ಸೀಸನ್‌ಗಳಲ್ಲಿ ಸ್ಪರ್ಧಾತ್ಮಕವಾಗಿರಲು ನಿಮ್ಮ ಪ್ರದೇಶದಲ್ಲಿನ ಇದೇ ರೀತಿಯ ಲಿಸ್ಟಿಂಗ್‌ಗಳ ಬೆಲೆಗಳನ್ನು ಪರಿಶೀಲಿಸಿ. ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಲು, ನಿಮ್ಮ ಲಿಸ್ಟಿಂಗ್‌‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು 31 ದಿನಗಳವರೆಗಿನ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.

ನಿಮ್ಮ ಪ್ರದೇಶದ ನಕ್ಷೆಯಲ್ಲಿ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳು ನಿಮಗೆ ಕಾಣಿಸುತ್ತವೆ. ಯಾವ ಪ್ರಾಪರ್ಟಿಗಳು ಹೋಲುತ್ತವೆ ಎಂಬುದನ್ನು ನಿರ್ಧರಿಸುವುದರಲ್ಲಿ ಸೇರಿರುವ ಅಂಶಗಳೆಂದರೆ ಸ್ಥಳ, ಗಾತ್ರ, ವೈಶಿಷ್ಟ್ಯಗಳು, ಸೌಲಭ್ಯಗಳು, ರೇಟಿಂಗ್‌ಗಳು, ವಿಮರ್ಶೆಗಳು, ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ಪರಿಗಣಿಸುವಾಗ ಗೆಸ್ಟ್‌ಗಳು ಬ್ರೌಸ್ ಮಾಡುವ ಇತರ ಲಿಸ್ಟಿಂಗ್‌‌‌ಗಳು.

ಸಮೀಪದ ಇದೇ ರೀತಿಯ ಲಿಸ್ಟಿಂಗ್‌ಗಳಿಗಿಂತ ಕಡಿಮೆ ಬೆಲೆಗಳನ್ನು ಹೊಂದಿರುವ ಲಿಸ್ಟಿಂಗ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತವೆ.

ನೀವು ಪ್ರತಿ ರಾತ್ರಿ ಒಂದೇ ಬೆಲೆಯನ್ನು ನಿಗದಿ ಪಡಿಸುತ್ತಿದ್ದಲ್ಲಿ, ಬೇಡಿಕೆಯಲ್ಲಿನ ಬದಲಾವಣೆಯನ್ನು ಹೊಂದಿಸಲು ವಾರದ ದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ನಿಮ್ಮ ದರ ಬದಲಾಯಿಸುವುದನ್ನು ಪರಿಗಣಿಸಿ. ಬದಲಾಗುವ ದರ ನಿಗದಿಪಡಿಸುವಿಕೆಯು ನಿಮ್ಮ ಬುಕಿಂಗ್‌ಗಳನ್ನು ಹೆಚ್ಚಿಸಲು ಸಹಾಯ ಮಾಡಬಲ್ಲದು.

ರಿಯಾಯಿತಿ ಸೇರಿಸಿ

ಗೆಸ್ಟ್‌ಗಳಿಗೆ ಎದ್ದು ಕಾಣುವಂತೆ ಮಾಡಲು ರಿಯಾಯಿತಿಗಳನ್ನು ಸೇರಿಸುವುದು ಮತ್ತೊಂದು ಮಾರ್ಗವಾಗಿದೆ. ಇದನ್ನು ನೀಡುವ ಮೂಲಕ ನೀವು ವಿವಿಧ ರೀತಿಯ ಪ್ರಯಾಣಿಕರಿಗೆ ಸೇವೆ ಒದಗಿಸಬಹುದು:

  • ಸಾಪ್ತಾಹಿಕ ಮತ್ತು ಮಾಸಿಕ ರಿಯಾಯಿತಿಗಳು. ಏಳು ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಸಾಪ್ತಾಹಿಕ ರಿಯಾಯಿತಿಗಳನ್ನು ಮತ್ತು 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಮಾಸಿಕ ರಿಯಾಯಿತಿಗಳನ್ನು ನೀಡಿ. ಇದು ನಿಮ್ಮ ಲಿಸ್ಟಿಂಗ್‌ಗಳಲ್ಲಿ ವಾಸ್ತವ್ಯದ ಸರಾಸರಿ ಅವಧಿಯನ್ನು ವಿಸ್ತರಿಸಬಹುದು ಮತ್ತು ಟರ್ನ್‌ಓವರ್‌ಗಳನ್ನು ಕಡಿಮೆ ಮಾಡಬಹುದು.
  • ಅರ್ಲೀ ಬರ್ಡ್ ರಿಯಾಯಿತಿ. ಚೆಕ್‌ಇನ್‌ಗೆ 1 ರಿಂದ 24 ತಿಂಗಳ ಮೊದಲು ಮಾಡಿದ ಬುಕಿಂಗ್‌ಗಳಿಗೆ ರಿಯಾಯಿತಿಯನ್ನು ಸೇರಿಸಿ ಮತ್ತು ಕಾರ್ಯನಿರತ ಋತುಗಳಿಗೆ ಮುಂಚಿತವಾಗಿ ಬುಕಿಂಗ್‌ಗಳ ಬಲವಾದ ಮೂಲವನ್ನು ನಿರ್ಮಿಸಿ.
  • ಕೊನೆಯ ನಿಮಿಷದ ರಿಯಾಯಿತಿ. ಚೆಕ್-ಇನ್ ದಿನಾಂಕ ಹತ್ತಿರವಾಗುತ್ತಿದ್ದಂತೆ ನಿಮ್ಮ ಪ್ರತಿ ರಾತ್ರಿಯ ಬೆಲೆಯನ್ನು ಕಡಿಮೆ ಮಾಡುವುದು, ತುರ್ತು ಪ್ರಯಾಣಿಕರನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಚೆಕ್-ಇನ್‌ಗೆ 1 ರಿಂದ 28 ದಿನಗಳ ಮೊದಲು ಮಾಡಿದ ಬುಕಿಂಗ್‌ಗಳಿಗೆ ರಿಯಾಯಿತಿಗಳನ್ನು ನೀಡುವುದು ನಿಮ್ಮ ಕ್ಯಾಲೆಂಡರ್ ತುಂಬಲು ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಗೆಸ್ಟ್‌ಗಳಿಗೆ ಸಾಪ್ತಾಹಿಕ, ಮಾಸಿಕ ಮತ್ತು ಕೊನೆಯ ನಿಮಿಷದ 10% ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಗಳು ಮತ್ತು 3% ಅಥವಾ ಅದಕ್ಕಿಂತ ಹೆಚ್ಚಿನ ಅರ್ಲಿ ಬರ್ಡ್ ರಿಯಾಯಿತಿಗಳ ವಿಶೇಷ ಕಾಲ್‌ಔಟ್ ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಕಾಣಿಸುತ್ತದೆ. ನಿಮ್ಮ ರಿಯಾಯಿತಿ ದರವು ನಿಮ್ಮ ಕ್ರಾಸ್ ಔಟ್ ಮಾಡಲಾಗಿರುವ ಮೂಲ ದರದ ಪಕ್ಕದಲ್ಲಿ ಗೋಚರಿಸುತ್ತದೆ.

ಸ್ಮಾರ್ಟ್ ದರವನ್ನು ಆನ್ ಮಾಡಿದಾಗ ಅರ್ಲಿ ಬರ್ಡ್ ರಿಯಾಯಿತಿ ಲಭ್ಯವಿರುವುದಿಲ್ಲ ಮತ್ತು ವಾಸ್ತವ್ಯದ ರಿಯಾಯಿತಿಗಳ ಅವಧಿಗಳು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.

ಫೋಟೊ ಟೂರ್ ಅನ್ನು ಸೆಟಪ್ ಮಾಡಿ

ಉತ್ತಮ ಫೋಟೋಗಳು ಗಮನವನ್ನು ಸೆಳೆಯುತ್ತವೆ, ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಮನೆಯನ್ನು ಬುಕ್ ಮಾಡಲು ಗೆಸ್ಟ್‌ಗಳಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತವೆ. ನೀವು ಹೆಚ್ಚಿನ ಬೇಡಿಕೆಯ ಋತುಗಳಿಗೆ ತಯಾರಿ ಮಾಡುವಾಗ ನಿಮ್ಮ ಲಿಸ್ಟಿಂಗ್‌ನ ಫೋಟೋಗಳನ್ನು ನವೀಕರಿಸುವುದನ್ನು ಪರಿಗಣಿಸಿ.

  • ನಿಮ್ಮ ಚಿತ್ರಗಳನ್ನು ಯೋಜಿಸಿ. ನಿಮ್ಮ ಮನೆಯ ವಿಶಿಷ್ಟ ವಿವರಗಳು, ಜನಪ್ರಿಯ ಸೌಲಭ್ಯಗಳು ಮತ್ತು ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ಪ್ರದರ್ಶಿಸುವ ಚಿತ್ರಗಳನ್ನು ಪಡೆಯುವತ್ತ ಗಮನಹರಿಸಿ. ಗೆಸ್ಟ್‌ಗಳು ಬಳಸಬಹುದಾದ ಪ್ರತಿ ಕೊಠಡಿ ಮತ್ತು ಪ್ರದೇಶವನ್ನು ವಿವಿಧ ದೃಷ್ಟಿಕೋನಗಳಿಂದ ಸೆರೆಹಿಡಿಯಿರಿ.
  • ಅಡ್ಡಲಾಗಿರುವ, ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರಗಳನ್ನು ಅಪ್‌ಲೋಡ್ ಮಾಡಿ. ಫೋಟೋಗಳು ಕನಿಷ್ಠ 800 ಪಿಕ್ಸೆಲ್‌ಗಳಿಂದ 1,200 ಪಿಕ್ಸೆಲ್‌ಗಳನ್ನು ಹೊಂದಿರಬೇಕು. ಸುಮಾರು 10 ಮೆಗಾಬೈಟ್‌ಗಳವರೆಗಿನ ದೊಡ್ಡ ಫೈಲ್ ಗಾತ್ರಗಳಿದ್ದರೆ ಉತ್ತಮ.
  • ಗೋ ಪ್ರೊ.ಸಹಾಯ ಮಾಡಲು ವೃತ್ತಿಪರ ಛಾಯಾಗ್ರಾಹಕರನ್ನು ನೇಮಿಸಿಕೊಳ್ಳುವುದನ್ನು ಪರಿಗಣಿಸಿ. Airbnb ವಿಶ್ವಾದ್ಯಂತ ಆಯ್ದ ನಗರಗಳಲ್ಲಿ ನಿಮ್ಮನ್ನು ಪ್ರವೀಣರೊಂದಿಗೆ ಸಂಪರ್ಕಿಸಬಹುದು.
  • ಫೋಟೋ ಟೂರ್ ರಚಿಸಿ. ನಿಮ್ಮ ಮನೆಯ ಲೇಔಟ್ ಅನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಲು Airbnb ಯ ಸಾಧನವು ನಿಮ್ಮ ಅಪ್‌ಲೋಡ್ ಮಾಡಿದ ಚಿತ್ರಗಳನ್ನು ರೂಮ್‌ಗಳ ಪ್ರಕಾರ ಸ್ವಯಂಚಾಲಿತವಾಗಿ ವಿಂಗಡಿಸುತ್ತದೆ. ನೀವು ಫೋಟೋಗಳನ್ನು ಸರಿಸಬಹುದು, ತೆಗೆದುಹಾಕಬಹುದು ಮತ್ತು ಸೇರಿಸಬಹುದು, ಪ್ರತಿ ರೂಮ್‌ಗೆ ವಿವರಗಳನ್ನು ಸೇರಿಸಬಹುದು ಮತ್ತು ಪ್ರತಿ ಫೋಟೋಗೆ ಶೀರ್ಷಿಕೆಗಳನ್ನು ಬರೆಯಬಹುದು.

ಚೆಕ್-ಇನ್ ಮತ್ತು ಚೆಕ್‍ಔಟ್ ಅನ್ನು ಸುಲಭಗೊಳಿಸಿ

ನಿಮ್ಮ ಲಿಸ್ಟಿಂಗ್ ಅನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತೊಂದು ವಿಧಾನವೆಂದರೆ ಚೆಕ್-ಇನ್ ಮತ್ತು ಚೆಕ್‌ಔಟ್ ಅನ್ನು ಸರಳಗೊಳಿಸುವುದು.

  • ಸ್ವಯಂ ಚೆಕ್-ಇನ್ ಸೇರಿಸಿ. ಸ್ಮಾರ್ಟ್ ಲಾಕ್, ಕೀಪ್ಯಾಡ್ ಅಥವಾ ಲಾಕ್‌ಬಾಕ್ಸ್‌ ಅನ್ನು ಸ್ಥಾಪಿಸುವುದರಿಂದ ಗೆಸ್ಟ್‌ಗಳು ಕೋಡ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಬಳಸಿ ಪ್ರವೇಶದ್ವಾರವನ್ನು ಅನ್‌ಲಾಕ್ ಮಾಡಲು ಅನುವಾಗುತ್ತದೆ. ಅನೇಕ ಗೆಸ್ಟ್‌ಗಳು ಸ್ವಯಂ ಚೆಕ್-ಇನ್‌ನ ಅನುಕೂಲತೆ ಮತ್ತು ನಮ್ಯತೆಗೆ ಆದ್ಯತೆ ನೀಡುತ್ತಾರೆ ಮತ್ತು ಇದು ನಿಮ್ಮ ಸಮಯವನ್ನು ಉಳಿಸಬಹುದು. ನೀವು ಯಾವುದೇ ವಿಧಾನವನ್ನು ಆಯ್ಕೆಮಾಡಿದರೂ, ಪ್ರತಿ ಬುಕಿಂಗ್‌ ಮಾಡಿದ ಗೆಸ್ಟ್‌ಗೆ ವಿಶಿಷ್ಟ ಪ್ರವೇಶ ಕೋಡ್ ನೀಡುವುದು ಮುಖ್ಯವಾಗಿದೆ.
  • ಚೆಕ್‌ಔಟ್ ಸೂಚನೆಗಳನ್ನು ಒದಗಿಸಿ. ಕೀಗಳನ್ನು ಎಲ್ಲಿ ಬಿಡಬೇಕು ಮತ್ತು ಯಾವುದನ್ನು ಸ್ಥಗಿತಗೊಳಿಸಬೇಕು ಎಂಬಂತಹ ಸ್ಪಷ್ಟ ಮತ್ತು ಸರಳ ಹಂತಗಳನ್ನು ಸೇರಿಸಿ.

"ಆ ಕಾರ್ಯಗಳು ಗೆಸ್ಟ್‌ಗಳನ್ನು ಓವರ್‌ಲೋಡ್ ಮಾಡದಿರುವುದು ಮುಖ್ಯ. ಏಕೆಂದರೆ, ಚೆಕ್‌ಔಟ್ ಮಾಡುವ ಮೊದಲು ದೊಡ್ಡ ಪಟ್ಟಿಯ ಬಗ್ಗೆ ನೆನೆಸಿಕೊಳ್ಳುವುದೆಂದರೆ ಹಿಂಸೆಯ ವಿಷಯ" ಎಂದು ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್‌ನ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರು ಮತ್ತು ಸೂಪರ್‌ಹೋಸ್ಟ್ ಆದ ಕೇಟಿ ಹೇಳುತ್ತಾರೆ. "ನೀವು ದೀರ್ಘ ಚೆಕ್‌ಔಟ್ ಪಟ್ಟಿಯನ್ನು ಹೊಂದಿಲ್ಲದ ಕಾರಣ ಐದು ಸ್ಟಾರ್ ವಿಮರ್ಶೆಯನ್ನು ಗಳಿಸಬಹುದು."

ಸ್ಥಳೀಯ ಹೋಸ್ಟ್ ಕ್ಲ‌ಬ್‌ಗೆ ಸೇರಿಕೊಳ್ಳಿ

Airbnb ಹೋಸ್ಟ್‌ಗಳು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಪ್ರಪಂಚದಾದ್ಯಂತದ ನೂರಾರು ಹೋಸ್ಟ್ ಕ್ಲಬ್‌ಗಳು ಸಹಾಯ ಮಾಡುತ್ತವೆ. ಈ ಸ್ಥಳೀಯ ಕ್ಲಬ್‌ಗಳ ಸದಸ್ಯರು ಕ್ಲಬ್ ಸದಸ್ಯರಲ್ಲದ ಹೋಸ್ಟ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಗಳಿಸುವುದನ್ನು ನಾವು ನೋಡಿದ್ದೇವೆ,* ಮತ್ತು ಅವರು ಸೂಪರ್‌ಹೋಸ್ಟ್‌ಗಳಾಗುವ ಸಾಧ್ಯತೆ ಸುಮಾರು ಮೂರು ಪಟ್ಟು ಹೆಚ್ಚಾಗಿರುತ್ತದೆ.**

ಜನಪ್ರಿಯ ಕ್ಲಬ್ ಚಟುವಟಿಕೆಗಳಲ್ಲಿ ಇವು ಸೇರಿವೆ:

  • ಗಳಿಕೆಯನ್ನು ಹೆಚ್ಚಿಸುವ ಹೋಸ್ಟಿಂಗ್ ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುವುದು
  • ಅಲ್ಪಾವಧಿ ಬಾಡಿಗೆ ನಿಯಮಗಳನ್ನು ಚರ್ಚಿಸುವುದು
  • ವಿಶ್ವಾಸಾರ್ಹ ಸ್ಥಳೀಯ ಸೇವೆಗಳನ್ನು ಹಂಚಿಕೊಳ್ಳುವುದು (ಕ್ಲೀನರ್‌ಗಳು, ಪ್ಲಂಬರ್‌ಗಳು, ಇತ್ಯಾದಿ)
  • ವಿಶೇಷ ನೆಟ್‌ವರ್ಕಿಂಗ್ ಕಾರ್ಯಕ್ರಮಗಳಿಗೆ ಹಾಜರಾಗುವುದು

*ಆಂತರಿಕ Airbnb ಡೇಟಾದ ಪ್ರಕಾರ, Airbnb ಹೋಸ್ಟ್ ಕ್ಲಬ್ ಸದಸ್ಯರ ಸರಾಸರಿ ಗಳಿಕೆಗಳು ಮತ್ತು ಸರಾಸರಿ ರೇಟಿಂಗ್‌ಗಳನ್ನು ಸೆಪ್ಟೆಂಬರ್ 2022 ರಿಂದ ಸೆಪ್ಟೆಂಬರ್ 2023 ರವರೆಗಿನ ಸಂಪೂರ್ಣ ಜಾಗತಿಕ ಹೋಸ್ಟ್ ಸಂಖ್ಯೆಗೆ ಹೋಲಿಸಿದಾಗ. ಸ್ಥಳ, ಋತುಮಾನ ಮತ್ತು ಲಿಸ್ಟಿಂಗ್ ಪ್ರಕಾರವನ್ನು ಅವಲಂಬಿಸಿ ಗಳಿಕೆಯ ಡೇಟಾ ಬದಲಾಗುತ್ತದೆ.

**ಜುಲೈ 2023 ರಿಂದ ಜುಲೈ 2024 ರ ನಡುವೆ ಸೇರಿದ ಹೋಸ್ಟ್‌ಗಳಿಗೆ ಸೂಪರ್‌ಹೋಸ್ಟ್ ಸ್ಟೇಟಸ್ ಕುರಿತು Airbnb ಆಂತರಿಕ ಡೇಟಾದ ಪ್ರಕಾರ

ನಿಮ್ಮ ಬೆಲೆ ಮತ್ತು ಇತರ ಸೆಟ್ಟಿಂಗ್‌ಗಳು ಎಲ್ಲ ಸಮಯಗಳಲ್ಲೂ ನಿಮ್ಮ ನಿಯಂತ್ರಣದಲ್ಲಿರುತ್ತವೆ. ನಿಮ್ಮ ಫಲಿತಾಂಶಗಳು ಭಿನ್ನವಾಗಿರಬಹುದು.

ಸಂದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೋಸ್ಟ್‌ಗಳಿಗೆ ಹಣ ನೀಡಲಾಯಿತು.

ಹೋಸ್ಟಿಂಗ್ ಸಲಹೆಗಳು ಸ್ಥಳೀಯ ಕಾನೂನಿಗೆ ಒಳಪಟ್ಟಿರುತ್ತವೆ.

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಜನ 6, 2025
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ