ಎಲಿವೇಟರ್ ಸುರಕ್ಷತಾ ಸಲಹೆಯ ಬಗ್ಗೆ ಮಾಹಿತಿ ಮತ್ತು ಸುರಕ್ಷತೆಯ ಬಗ್ಗೆ ಇನ್ನಷ್ಟು

ಸುರಕ್ಷಿತವಾಗಿ ಹೋಸ್ಟ್ ಮಾಡಲು ಸಹಾಯ ಮಾಡಲು ಜವಾಬ್ದಾರಿಯುತ ಹೋಸ್ಟಿಂಗ್ ಕುರಿತು ಮಾರ್ಗಸೂಚಿಗಳನ್ನು ಅನುಸರಿಸಿ.
Airbnb ಅವರಿಂದ ಜುಲೈ 23, 2024ರಂದು
3 ನಿಮಿಷ ಓದಲು
ಜುಲೈ 23, 2024 ನವೀಕರಿಸಲಾಗಿದೆ

ಸುರಕ್ಷತಾ ಸಮಸ್ಯೆಗಳ ಬಗ್ಗೆ ತಿಳಿದಿರುವುದು, ನಿಮಗೆ ಮುಂಚಿತವಾಗಿ ಯೋಜಿಸಲು ಮತ್ತು ಸಾಧ್ಯವಾದಷ್ಟು ಆರಾಮವಾಗಿ ಗೆಸ್ಟ್‌ಗಳನ್ನು ಸ್ವಾಗತಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವುದಕ್ಕೆ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ಸಂಗ್ರಹಿಸಿದ್ದೇವೆ. ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟವಾದ ಯಾವುದೇ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಮನನ ಮಾಡಿಕೊಳ್ಳಲು ಮತ್ತು ಅನುಸರಿಸಲು ಮರೆಯದಿರಿ.

ಈಜು ಮುನ್ನೆಚ್ಚರಿಕೆಗಳು

ಪೂಲ್‌ಗಳು ಗೆಸ್ಟ್‌ಗಳಿಗೆ ಉತ್ತಮ ಆಕರ್ಷಣೆಯಾಗಿವೆ, ಆದರೆ ಸುರಕ್ಷತಾ ಅಪಾಯವನ್ನೂ ಸಹ ಉಂಟುಮಾಡಬಹುದು. ಪೂಲ್‌ಅನ್ನು ಒಳಗೊಂಡಿರುವ ಪ್ರಾಪರ್ಟಿಯನ್ನು ನೀಡುವ ನಿಖರವಾದ ಅವಶ್ಯಕತೆಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆ, ಆದರೆ ನಿಮ್ಮನ್ನು ಮತ್ತು ನಿಮ್ಮ ಗೆಸ್ಟ್‌ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ಈ ಕೆಳಗಿನವುಗಳನ್ನು ಮಾಡಲು ಸೇಫ್ ಕಿಡ್ಸ್ ವರ್ಲ್ಡ್‌ವೈಡ್ ನಿಮಗೆ ಸೂಚಿಸುತ್ತದೆ.

ಸುರಕ್ಷತಾ ಉಪಕರಣಗಳನ್ನು ಒದಗಿಸಿ:

  • ಪೂಲ್ ಕಡಿವಾಣವನ್ನು ಸ್ಥಾಪಿಸಿ. ಇದು ಕನಿಷ್ಠ 4 ಅಡಿ ಎತ್ತರವಾಗಿದ್ದು, ಸ್ವಯಂಚಾಲಿತವಾಗಿ ಮುಚ್ಚುವ ಮತ್ತು ಸ್ವಯಂಚಾಲಿತವಾಗಿ ಲಾಕ್ ಆಗುವಂತ ಗೇಟ್ ಆಗಿರಬೇಕು. ಕಡಿವಾಣವು ಪೂಲ್‌ನ ಎಲ್ಲಾ ಭಾಗಗಳನ್ನು ಸುತ್ತುವರೆದಿರಬೇಕು, ಆದರೆ ಮನೆ ಅಥವಾ ಇತರ ಯಾವುದೇ ವಸ್ತು ಕಡಿವಾಣದ ಭಾಗವಾಗಿರಬಾರದು.
  • ಪೂಲ್ ಪ್ರದೇಶಕ್ಕೆ ಹೋಗುವ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳಲ್ಲಿ ಅಲಾರ್ಮ್‌ಗಳನ್ನು ಸ್ಥಾಪಿಸಿ.
  • ಆ್ಯಂಟಿ-ಎಂಟ್ರಾಪ್‌ಮೆಂಟ್ ಡ್ರೈನ್ ಕವರ್‌ಗಳು ಮತ್ತು ಸುರಕ್ಷತಾ ಬಿಡುಗಡೆ ವ್ಯವಸ್ಥೆಗಳನ್ನು ಸ್ಥಾಪಿಸಿ. ಸಿಲುಕಿಕೊಳ್ಳುವ ಸಂಭವನೀಯ ಅಪಾಯದಿಂದ ರಕ್ಷಿಸಲು ಇವು ಸಹಾಯ ಮಾಡಬಹುದು.
  • ರಕ್ಷಣೆ ಉಪಕರಣಗಳನ್ನು ಒದಗಿಸಿ. ಇವುಗಳಲ್ಲಿ ಶೆಫರ್ಡ್ಸ್ ಕ್ರೂಕ್ಸ್, ತಲುಪುವ ಕೋಲುಗಳು, ರಿಂಗ್ ಬಾಯ್‌ಗಳು ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳು ಸೇರಿವೆ. ಪೂಲ್ ಪ್ರದೇಶದಲ್ಲಿ ಲ್ಯಾಂಡ್‌ಲೈನ್ ಫೋನ್ ಅನ್ನು ಸೇರಿಸುವುದನ್ನು ಪರಿಗಣಿಸಿ.

ನಿಮ್ಮದೇ ಆದ ದಿನನಿತ್ಯದ ತಪಾಸಣೆಗಳನ್ನು ಮಾಡಿ:

  • ನೀರಿನ ಸ್ಪಷ್ಟತೆ ಮತ್ತು ರಾಸಾಯನಿಕ ಸಮತೋಲನವನ್ನು ಅಳೆಯಿರಿ. ಇದನ್ನು ನಿಗದಿತ ವೇಳಾಪಟ್ಟಿಯಲ್ಲಿ ಮಾಡಬೇಕು ಮತ್ತು ಗೆಸ್ಟ್‌ಗಳು ಚೆಕ್-ಇನ್ ಮಾಡುವ ಮೊದಲು ಪೂರ್ಣಗೊಳಿಸಬೇಕು.
  • ಸುರಕ್ಷತಾ ಉಪಕರಣಗಳು ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಚೆಕ್-ಇನ್‌ಗೆ ಮೊದಲು ಇದನ್ನು ಮಾಡಬೇಕು.
  • ಪೂಲ್ ಪ್ರದೇಶಕ್ಕೆ ಪ್ರವೇಶವನ್ನು ಸುರಕ್ಷಿತ ಮಾಡಿ. ಇದರಲ್ಲಿ ಡಾಗ್ಗಿ ಬಾಗಿಲುಗಳು ಮತ್ತು ಸಣ್ಣ ಮಗು ಜಾರಿಬೀಳಬಹುದಾದ ಅಥವಾ ಹತ್ತಬಹುದಾದ ಇತರ ಪ್ರವೇಶ ಬಿಂದುಗಳು ಸೇರಿವೆ.

ಗೆಸ್ಟ್‌ಗಳಿಗೆ ಶಿಕ್ಷಣ ನೀಡಲು ಸಹಾಯ ಮಾಡಿ:

  • ನಿಮ್ಮ ಲಿಸ್ಟಿಂಗ್‌ಅನ್ನು ನವೀಕರಿಸಿ. ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿ ಯಾವ ಪೂಲ್ ಸುರಕ್ಷತಾ ಉಪಕರಣಗಳು ಮತ್ತು ವೈಶಿಷ್ಟ್ಯಗಳನ್ನು ನೀವು ಒದಗಿಸುತ್ತೀರಿ ಮತ್ತು ಯಾವುವನ್ನು ಒದಗಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿ. ಉದಾಹರಣೆಗೆ, “ನಾವು ಮಕ್ಕಳ ಮತ್ತು ವಯಸ್ಕರಿಗೆ ಜೀವೋಪಾಯ ಸಾಧನಗಳನ್ನು ಒದಗಿಸುತ್ತೇವೆ. ಪೂಲ್ ನಾಲ್ಕು-ಬದಿಯ ಪ್ರತ್ಯೇಕ ಕಡಿವಾಣವನ್ನು ಒಳಗೊಂಡಿಲ್ಲ, ಆದ್ದರಿಂದ ಹೆಚ್ಚುವರಿ ಗಮನ ಅಗತ್ಯವಿದೆ."
  • ಗೆಸ್ಟ್‌ಗಳನ್ನು ನಿಮ್ಮ ಮನೆಯ ಕೈಪಿಡಿಯನ್ನು ಪರಿಶೀಲಿಸಲು ಕೇಳಿ. ಇದರಲ್ಲಿ ನೀವು ಒದಗಿಸುವ ಸುರಕ್ಷತಾ ವೈಶಿಷ್ಟ್ಯಗಳಾದ ಒಳಚರಂಡಿ ಮುಚ್ಚಳ, ಅಲಾರ್ಮ್‌ಗಳು ಮತ್ತು ಪೂಲ್ ಕಡಿವಾಣ ಅಥವಾ ಗೇಟ್‌ಗಳ ಬಗ್ಗೆ ಮಾಹಿತಿ ಇರಬೇಕು. ಈಜು ಮತ್ತು ನೀರಿನ ಸಹಾಯಕ ಸಾಧನಗಳು ಮತ್ತು ಪೂಲ್ ನಲ್ಲಿ ತೇಲಲು ಬಳಸುವ ನೀರಿನ ಆಟಿಕೆಗಳು ಮುಳುಗುವುದನ್ನು ತಡೆಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.
  • ಸುರಕ್ಷತಾ ಮಾಹಿತಿಯನ್ನು ಪ್ರದರ್ಶಿಸಿ. ಪೂಲ್ ಅನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸುರಕ್ಷತಾ ಶಿಫಾರಸುಗಳು, ಎಚ್ಚರಿಕೆಗಳು ಮತ್ತು ತುರ್ತು ಸಂಪರ್ಕಗಳನ್ನು ಒಳಗೊಂಡಂತೆ ಕರಪತ್ರ ಅಥವಾ ಸೂಚನಾ ಫಲಕವನ್ನು ಇರಿಸಿ. ಮಗು ಕಾಣೆಯಾಗಿದ್ದರೆ ಮೊದಲು ಪೂಲ್‌ನಲ್ಲಿ ಹುಡುಕುವಂತೆ ಗೆಸ್ಟ್‌ಗಳಿಗೆ ನೆನಪಿಸಿ. CPR ಸೂಚನೆಗಳು, ಸುರಕ್ಷಿತ ಮಕ್ಕಳ ಪೂಲ್ ಸುರಕ್ಷತಾ ಪರಿಶೀಲನಾಪಟ್ಟಿಮತ್ತು ಲಿಸ್ಟಿಂಗ್ ವಿಳಾಸವನ್ನು ಸೇರಿಸಿ.
  • ಈಜಲು ತಿಳಿಯದವರು ಅಥವಾ ದುರ್ಬಲ ಈಜುಗಾರರನ್ನು ಯಾವಾಗಲೂ ತಮ್ಮಕೈಗೆ ಎಟುಕುವಷ್ಟು ದೂರದಲ್ಲಿ ಇಟ್ಟುಕೊಳ್ಳಲು ಗೆಸ್ಟ್‌ಗಳಿಗೆ ನೆನಪಿಸಿ . ಇದನ್ನು ನಿಮ್ಮ ಮನೆ ಕೈಪಿಡಿಯಲ್ಲಿ ಸೇರಿಸಿ ಮತ್ತು ಪೂಲ್ ಅನ್ನು ಗಮನದಲ್ಲಿಟ್ಟುಕೊಂಡು ಅದನ್ನು ಪ್ರದರ್ಶಿಸಿ.
  • ಬಳಕೆಯಲ್ಲಿರುವ ಸೂಚನೆಗಳೊಂದಿಗೆವಾಟರ್ ವಾಚರ್ ಕಾರ್ಡ್ ಅನ್ನು ಒದಗಿಸಿ . ವಾಟರ್ ವಾಚರ್ ಜವಾಬ್ದಾರಿಯುತ ವಯಸ್ಕರಾಗಿದ್ದು, ಅವರು ಯಾವುದೇ ಗೊಂದಲವಿಲ್ಲದೆ ನೀರಿನಲ್ಲಿ ಮಕ್ಕಳನ್ನು ಗಮನಿಸುವುದಕ್ಕಾಗಿ ಒಪ್ಪುತ್ತಾರೆ.

ಲಿಫ್ಟ್ ಸುರಕ್ಷತೆ

ಎಲಿವೇಟರ್‌ಗಳು ನಿಮ್ಮ ಲಿಸ್ಟಿಂಗ್‌ನಲ್ಲಿ ಅನುಕೂಲತೆಯನ್ನು ಸೇರಿಸಬಹುದು ಮತ್ತು ಪ್ರವೇಶಾವಕಾಶವನ್ನು ಹೆಚ್ಚಿಸಬಹುದು, ಆದರೆ ಅವು ಸುರಕ್ಷತಾ ಅಪಾಯವನ್ನು ಕೂಡ ಒಡ್ಡಬಹುದು. ಎಲಿವೇಟರ್ ಸುರಕ್ಷತೆಯ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ.

US ನ ಗ್ರಾಹಕರ ಉತ್ಪನ್ನ ಸುರಕ್ಷತಾ ಆಯೋಗವು ಗ್ರಾಹಕರಿಗೆ ಹೀಗೆ ಮಾಡಲು ಒತ್ತಾಯಿಸುತ್ತದೆ:

  • ಬಾಗಿಲುಗಳ ನಡುವಿನ ಅಂತರವು 4 ಇಂಚುಗಳಿಗಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಎಲಿವೇಟರ್‌ ಸುರಕ್ಷತೆ ಕುರಿತು ನಿಮಗೆ ಕಳವಳವಿದ್ದರೆ ಅಥವಾ ಖಾತ್ರಿ ಇಲ್ಲದಿದ್ದರೆ, ಬಳಸಲಾಗದ ಸ್ಥಿತಿಯಲ್ಲಿ ಎಲಿವೇಟರ್ ಅನ್ನು ಲಾಕ್ ಮಾಡಿ ಅಥವಾ ಎಲಿವೇಟರ್‌ಗೆ ಎಲ್ಲ ಆ್ಯಕ್ಸೆಸ್ ಬಾಗಿಲುಗಳನ್ನು ಲಾಕ್ ಮಾಡಿ. ಎಲಿವೇಟರ್ ಇನ್‌ಸ್ಟಾಲರ್‌ಗಳು ಎಲಿವೇಟರ್ ಪ್ರವೇಶಹಾದಿಯಲ್ಲಿ ಎಂದಿಗೂ 4 ಇಂಚುಗಳಿಗಿಂತ ಹೆಚ್ಚು ಆಳವಾದ ಅಂತರವಿರಲು ಅವಕಾಶ ನೀಡಬಾರದು.
  • ತಮ್ಮ ಮನೆಯ ಎಲಿವೇಟರ್ ಅನ್ನು ಪರೀಕ್ಷಿಸಲು ಅರ್ಹ ಎಲಿವೇಟರ್ ತಪಾಸಕರ ನೆರವನ್ನು ಪಡೆಯಬೇಕು. ಅವರು ಯಾವುದೇ ಅಪಾಯಕಾರಿ ಅಂತರಗಳು ಮತ್ತು ಇತರ ಸಂಭಾವ್ಯ ಸುರಕ್ಷತಾ ಅಪಾಯಗಳಿಗಾಗಿ ಪರಿಶೀಲಿಸಬೇಕು ಮತ್ತು ಇತ್ತೀಚಿನ ASME A17.1, ಎಲಿವೇಟರ್‌ಗಳು ಮತ್ತು ಎಸ್ಕಲೇಟರ್‌ಗಳಿಗಾಗಿನ ಸುರಕ್ಷತಾ ಕೋಡ್ ಅನ್ನು ತಪಾಸಣೆ ಮಾಡಬೇಕು.
  • ಸುರಕ್ಷತಾ ಸಾಧನಗಳನ್ನು ಪಡೆದುಕೊಳ್ಳಿ. ಬಾಹ್ಯ ಬಾಗಿಲಿನ ಹಿಂಬದಿಯಲ್ಲಿ ಸುರಕ್ಷತಾ ಗಾರ್ಡ್‌ಗಳನ್ನು ಇರಿಸುವ ಮೂಲಕ ಅಥವಾ ಅಂತರದಲ್ಲಿ ಮಗು ಪತ್ತೆಯಾದಾಗ ಎಲಿವೇಟರ್ ಅನ್ನು ನಿಷ್ಕ್ರಿಯಗೊಳಿಸುವ ಎಲೆಕ್ಟ್ರಾನಿಕ್ ಮಾನಿಟರಿಂಗ್ ಸಾಧನವನ್ನು ಅಳವಡಿಸುವ ಮೂಲಕ ಅಂತರಗಳನ್ನು ಸುರಕ್ಷಿತವಾಗಿಸಬಹುದು. ಈ ಅಪಾಯವನ್ನು ಪರಿಹರಿಸಲು ಸುರಕ್ಷತಾ ಸಾಧನಗಳನ್ನು ಪಡೆದುಕೊಳ್ಳಲು ನಿಮ್ಮ ಎಲಿವೇಟರ್ ತಯಾರಕರು ಅಥವಾ ಎಲಿವೇಟರ್ ಅಳವಡಿಸುವವರನ್ನು ಸಂಪರ್ಕಿಸಿ.

Airbnb ಯಲ್ಲಿ ಸ್ಥಳವನ್ನು ಲಿಸ್ಟ್ ಮಾಡುವ ಮೂಲಕ, ನೀವು ಅನ್ವಯಿಸುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತೀರಿ ಎಂದು ಪ್ರಮಾಣ ಮಾಡುತ್ತೀರಿ.

ಸುರಕ್ಷತಾ ಸಾಧನಗಳು

ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್‌ಗಳನ್ನು ಸ್ಥಾಪಿಸುವಂತೆ, ಅವುಗಳನ್ನು ನಿಯಮಿತವಾಗಿ ಪರೀಕ್ಷಿಸುವಂತೆ ಮತ್ತು ಲಿಸ್ಟಿಂಗ್ ವಿವರಣೆಗಳು ಅಪ್ ಟು ಡೇಟ್ ಆಗಿವೆ ಎಂದು ಖಚಿತಪಡಿಸಿಕೊಳ್ಳುವಂತೆ ನಾವು ಎಲ್ಲ ಹೋಸ್ಟ್‌ಗಳನ್ನು ಬಲವಾಗಿ ಒತ್ತಾಯಿಸುತ್ತೇವೆ.

  • ಸ್ಥಳೀಯ ನಿಯಮಗಳನ್ನು ಪರಿಶೀಲಿಸಿ. ನಿಮ್ಮ ಲಿಸ್ಟಿಂಗ್‌ನಲ್ಲಿ ನೀವು ಒಂದಕ್ಕಿಂತ ಹೆಚ್ಚು ಕೆಲಸ ಮಾಡಬಲ್ಲ ಹೊಗೆ ಮತ್ತುಕಾರ್ಬನ್ ಮಾನಾಕ್ಸೈಡ್ ಅಲಾರ್ಮ್ ಅನ್ನು ಸ್ಥಾಪಿಸಬೇಕಾಗಬಹುದು. ಕೆಲವು ನಗರಗಳಿಗೆ ಪ್ರತಿ ರೂಮ್‌ನಲ್ಲೂ ಒಂದು ಇರುವುದು ಅಗತ್ಯ.
  • ಅಲಾರಂ ಅನ್ನು ವಿನಂತಿಸಿ. ಸಕ್ರಿಯ ಲಿಸ್ಟಿಂಗ್ ಹೊಂದಿರುವ ಅರ್ಹ ಹೋಸ್ಟ್‌ಗಳು ಸ್ವಯಂ-ಪೂರ್ಣವಾದ, ಬ್ಯಾಟರಿ-ಚಾಲಿತವಾದ ಸಂಯೋಜಿತ ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್ ಅನ್ನು ಯಾವುದೇ ವೆಚ್ಚವಿಲ್ಲದೆ ಪಡೆಯಬಹುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
  • ನಿಮ್ಮ ಲಿಸ್ಟಿಂಗ್ ಅನ್ನು ಅಪ್‌ಡೇಟ್ ಮಾಡಿ. ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್‌ಗಳನ್ನು ಹೊಂದಿರುವ ಸ್ಥಳಗಳನ್ನು ಮಾತ್ರ ಸೇರಿಸಿಕೊಂಡು, ಗೆಸ್ಟ್‌ಗಳು ತಮ್ಮ ಹುಡುಕಾಟಗಳನ್ನು ಫಿಲ್ಟರ್ ಮಾಡಬಹುದು. ನೀವು ಸ್ಥಾಪನೆ ಮಾಡಿರುವ ಅಲಾರ್ಮ್‌ಗಳ ವಿವರಗಳನ್ನು ಗೆಸ್ಟ್ ಸುರಕ್ಷೆ ಅಡಿಯಲ್ಲಿ, ಸುರಕ್ಷತಾ ಸಾಧನಗಳ ವಿಭಾಗದಲ್ಲಿ ಸೇರಿಸಿ.

ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.

Airbnb
ಜುಲೈ 23, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ