Airbnb ತನ್ನ ಹೋಸ್ಟ್‌ಗಳನ್ನು ಹೇಗೆ ರಕ್ಷಿಸುತ್ತದೆ
ನೀವು ಹೋಸ್ಟ್ ಮಾಡುವಾಗ ನಿಮ್ಮನ್ನು ಬೆಂಬಲಿಸಲು ನಾವು ಇಲ್ಲಿದ್ದೇವೆ. ಸಂವಹನ, ಬುಕಿಂಗ್ ಮತ್ತು ಹಣಪಾವತಿಗಾಗಿ ನೀವು Airbnb ಅನ್ನು ಬಳಸುವವರೆಗೆ, ನಮ್ಮ ನೀತಿಗಳು ಮತ್ತು ಸೇವೆಗಳ ಅಡಿಯಲ್ಲಿ ನೀವು ಸುರಕ್ಷಿತವಾಗಿರುತ್ತೀರಿ.
ಹೋಸ್ಟ್‌ಗಳಿಗಾಗಿ AirCover
ಹೋಸ್ಟ್‌ಗಳಿಗಾಗಿ AirCover ಎಂಬುದು Airbnb ಯಲ್ಲಿ ಪ್ರತಿ ಹೋಸ್ಟ್‌ಗೆ ಸಂಪೂರ್ಣ ಸಂರಕ್ಷಣೆಯಾಗಿದೆ. ಇದು ಹೋಸ್ಟ್ ಹೊಣೆಗಾರಿಕೆ ವಿಮೆಯಲ್ಲಿ $1 ದಶಲಕ್ಷ USD ಅನ್ನು ಒಳಗೊಂಡಿದೆ. ಇದು ಹೋಸ್ಟ್ ಹಾನಿ ರಕ್ಷಣೆಯಲ್ಲಿ $3 ದಶಲಕ್ಷ USD ಅನ್ನು ಸಹ ಒಳಗೊಂಡಿದೆ. ಇದು ನಿಮ್ಮ ಸಂಗ್ರಹಿಸಿದ ಕಲೆ, ಬೆಲೆಬಾಳುವ ವಸ್ತುಗಳು ಅಥವಾ ಪ್ರಾಪರ್ಟಿಯಲ್ಲಿ ನೀವು ಪಾರ್ಕ್ ಮಾಡಿದ ಕಾರುಗಳು, ದೋಣಿಗಳು, ಇತರ ಮೋಟಾರು ವಾಹನಗಳು ಮತ್ತು ವಾಟರ್‌ಕ್ರಾಫ್ಟ್‌ಗಳು ಮತ್ತು ಇನ್ನಷ್ಟಕ್ಕೆ ಕವರೇಜ್ ಒದಗಿಸುತ್ತದೆ.
ಗೆಸ್ಟ್ ಗುರುತು ಪರಿಶೀಲನೆಯೊಂದಿಗೆ ಬುಕಿಂಗ್ ಮಾಡುವ ಗೆಸ್ಟ್‌ಗಳು ಯಾರು ಎಂದು ಖಚಿತಪಡಿಸಿಕೊಳ್ಳಲು ಹೋಸ್ಟ್‌ಗಳಿಗಾಗಿ AirCover ಪೂರ್ವ-ಟ್ರಿಪ್ ಸುರಕ್ಷತೆಗಳನ್ನು ಒದಗಿಸುತ್ತದೆ. ಕಾನೂನು ಅನುಮತಿಸಿದರೆ ನಾವು ಗೆಸ್ಟ್‌ಗಳನ್ನು ಬುಕಿಂಗ್ ಮಾಡುವಾಗ ಅವರ ಹಿನ್ನೆಲೆ ಪರಿಶೀಲನೆಗಳನ್ನು ನಡೆಸುತ್ತೇವೆ ಮತ್ತು ಬುಕಿಂಗ್ ಮಾಡುತ್ತಿರುವ ಗೆಸ್ಟ್‌ಗಳು ಯಾವುದಾದರೂ ವಾಚ್‌ಲಿಸ್ಟ್‌ಗಳು ಅಥವಾ ನಿರ್ಬಂಧಗಳ ಲಿಸ್ಟ್‌ಗಳಲ್ಲಿ ಇದ್ದಾರೆಯೇ ಎಂದು ಪರಿಶೀಲಿಸುತ್ತೇವೆ. ನಾವು ಹೊಂದಿರುವ ವಿಶೇಷ ರಿಸರ್ವೇಶನ್ ಸ್ಕ್ರೀನಿಂಗ್ ತಂತ್ರಜ್ಞಾನವು ತೊಂದರೆ ಉಂಟುಮಾಡುವ ಪಾರ್ಟಿಗಳು ಮತ್ತು ಪ್ರಾಪರ್ತಿ ಹಾನಿಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Airbnb ಬೆಂಬಲ
Airbnb ನಿಮ್ಮನ್ನು ದಿನದ 24 ಗಂಟೆಗಳ ಕಾಲ, ವಾರದ ಏಳು ದಿನಗಳು, 46 ಭಾಷೆಗಳಲ್ಲಿ ಬೆಂಬಲಿಸಲು ಸಿದ್ಧವಿದೆ.
- ಫೋನ್ ಮತ್ತು ಆನ್‌ಲೈನ್ ಬೆಂಬಲ: ತುರ್ತು ಸಮಸ್ಯೆಗಳಿಗೆ, ನಮಗೆ ಕರೆ ಮಾಡಿ. ನಿಮ್ಮ ಕ್ಯಾಲೆಂಡರ್ ಅನ್ನು ನವೀಕರಿಸುವ ಅಥವಾ ನಿಮ್ಮ ಬೆಲೆಯನ್ನು ಸರಿಹೊಂದಿಸುವ ಮುಂತಾದ ತುರ್ತು ಅಲ್ಲದ ಸಮಸ್ಯೆಗಳಿಗೆ, ನಮಗೆ ಸಂದೇಶವನ್ನು ಕಳುಹಿಸಿ.
- ಮೀಸಲಾದ ಸೂಪರ್‌ಹೋಸ್ಟ್ ಬೆಂಬಲ: ಸೂಪರ್ ಹೋಸ್ಟ್‌ಗಳು Airbnb ಅನ್ನು ಸಂಪರ್ಕಿಸಿದಾಗಲೆಲ್ಲಾ ಪರಿಣಿತ Airbnb ಬೆಂಬಲ ಸಿಬ್ಬಂದಿಯೊಂದಿಗೆ ಅವರು ಸ್ವಯಂಚಾಲಿತವಾಗಿ ಸಂಪರ್ಕ ಸಾಧಿಸುತ್ತಾರೆ.
- 24-ಗಂಟೆಗಳ ಸುರಕ್ಷತಾ ಸಹಾಯವಾಣಿ: ನೀವು ಅಸುರಕ್ಷಿತ ಎಂದು ಭಾವಿಸಿದರೆ, ನಮ್ಮ ಅಪ್ಲಿಕೇಶನ್ ಹಗಲು ಅಥವಾ ರಾತ್ರಿ ವಿಶೇಷವಾಗಿ ತರಬೇತಿ ಪಡೆದ ಸುರಕ್ಷತಾ ಏಜೆಂಟ್‌ಗಳನ್ನು ಒನ್-ಟ್ಯಾಪ್‌ನಲ್ಲಿ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
ಗೆಸ್ಟ್‌ಗಳು ಪಾಲಿಸಬೇಕಾದ ನಿಯಮಗಳು
Airbnbಗೆ ಎಲ್ಲಾ ಗೆಸ್ಟ್‌ಗಳು ಗೆಸ್ಟ್‌ಗಳು ಪಾಲಿಸಬೇಕಾದ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ. ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಗೌರವಿಸಬೇಕು, ನಿಮ್ಮ ಮನೆಯ ನಿಯಮಗಳನ್ನು ಪಾಲಿಸಬೇಕು, ಸಮಸ್ಯೆಗಳು ಉದ್ಭವಿಸಿದಲ್ಲಿ ತಕ್ಷಣ ತಿಳಿಸಬೇಕು ಮತ್ತು ಮನೆಯನ್ನು ತೀರ ಕೊಳಕಾದ ಸ್ಥಿತಿಯಲ್ಲಿ ಬಿಟ್ಟುಹೋಗಬಾರದು. ಬುಕ್ ಮಾಡುವ ಪ್ರತಿ ಗೆಸ್ಟ್ ರಿಸರ್ವೇಶನ್ ಮಾಡುವ ಮೊದಲು ಈ ಮೂಲ ನಿಯಮಗಳನ್ನು ಪಾಲಿಸಲು ಒಪ್ಪಿಕೊಳ್ಳುತ್ತಾರೆ.
ಗೆಸ್ಟ್ ಮೂಲಭೂತ ನಿಯಮಗಳನ್ನು ಅನುಸರಿಸದಿದ್ದರೆ, ನೀವು Airbnb ಬೆಂಬಲವನ್ನು ಸಂಪರ್ಕಿಸುವ ಮೂಲಕ ಅಥವಾ ವಿಮರ್ಶೆ ಮಾಡುವಾಗ ಸ್ವಚ್ಛತೆ ಅಥವಾ ಮನೆ ನಿಯಮಗಳಲ್ಲಿ ಗೆಸ್ಟ್‌ಗೆ ಕಡಿಮೆ ರೇಟಿಂಗ್ ನೀಡುವ ಮೂಲಕ ಅದನ್ನು ವರದಿ ಮಾಡಬಹುದು. ಪ್ರಮಾಣಿತ ಮನೆ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವ ಗೆಸ್ಟ್‌ಗಳನ್ನು ಸಸ್ಪೆಂಡ್ ಮಾಡಬಹುದು ಅಥವಾ ಸಮಸ್ಯೆ ಮುಂದುವರಿದಲ್ಲಿ Airbnb ಯಿಂದ ತೆಗೆದುಹಾಕಬಹುದು.
ಮನೆ ನಿಯಮಗಳನ್ನು ಪಾಲಿಸಬೇಕಾದ ನಿಯಮಗಳ ಅಡಿಯಲ್ಲಿ ಜಾರಿಗೊಳಿಸಬಹುದು ಮತ್ತು ನಿಮ್ಮ ಸ್ಥಳಕ್ಕೆ ನಿರ್ದಿಷ್ಟವಾಗಿ ಅನ್ವಯಿಸುವ ಗೆಸ್ಟ್‌ಗಳಿಂದ ನಿರೀಕ್ಷಿಸುವ ವಿಷಯಗಳನ್ನು ಹೊಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಪ್ರಮಾಣಿತ ಮನೆಯ ನಿಯಮಗಳ ಲಿಸ್ಟ್‌ನಿಂದ ನೀವು ಕೆಳಗೆ ತಿಳಿಸಿರುವ ವಿಷಯಗಳನ್ನು ಆಯ್ಕೆ ಮಾಡಬಹುದು:
- ಸಾಕುಪ್ರಾಣಿಗಳು
- ಕಾರ್ಯಕ್ರಮಗಳು
- ಧೂಮಪಾನ, ವೇಪಿಂಗ್ ಮತ್ತು ಇ-ಸಿಗರೇಟ್‌ಗಳು
- ಶಾಂತ ಸಮಯಗಳು
- ಚೆಕ್-ಇನ್ ಮತ್ತು ಚೆಕ್ಔಟ್ ಸಮಯಗಳು
- ಗೆಸ್ಟ್‌ಗಳ ಗರಿಷ್ಠ ಸಂಖ್ಯೆ
- ವಾಣಿಜ್ಯ ಛಾಯಾಗ್ರಹಣ ಮತ್ತು ಚಿತ್ರೀಕರಣ
ಪ್ರಮಾಣಿತ ಮನೆ ನಿಯಮಗಳಲ್ಲಿ ಒಳಗೊಂಡಿರದ ವಿಶೇಷ ಸೂಚನೆಗಳನ್ನು ನೀವು ಹೊಂದಿದ್ದರೆ, ಅವುಗಳನ್ನು ನೀವು ನಿಮ್ಮ ಲಿಸ್ಟಿಂಗ್ ಸೆಟ್ಟಿಂಗ್‌ಗಳಲ್ಲಿ ಹೆಚ್ಚುವರಿ ನಿಯಮಗಳ ಅಡಿಯಲ್ಲಿ ಬರೆಯಬಹುದು. ಉದಾಹರಣೆಗೆ, ಚೆಕ್‌ಔಟ್ ಮಾಡುವ ಮುಂಚೆ ಎಲ್ಲಾ ಕಿಟಕಿಗಳನ್ನು ಮುಚ್ಚಿ ಲಾಕ್ ಮಾಡಲು ನೀವು ಗೆಸ್ಟ್‌ಗಳಿಗೆ ಹೇಳಬಹುದು.
ವಿಮರ್ಶೆಗಳು ಮತ್ತು ಪ್ರೊಫೈಲ್‌ಗಳು
ಗೆಸ್ಟ್ ವಿಮರ್ಶೆಗಳು ಮತ್ತು ಪ್ರೊಫೈಲ್‌ಗಳು ಗೆಸ್ಟ್‌ಗಳು ವಾಸ್ತವ್ಯ ಹೂಡುವ ಮುಂಚೆ ಅವರ ಬಗ್ಗೆ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ. ರಿಸರ್ವೇಶನ್ ಬುಕ್ ಮಾಡುವ ಅಥವಾ ಟ್ರಿಪ್‌ಗೆ ಸೇರುವ ಗೆಸ್ಟ್‌ಗಳನ್ನು ತಮ್ಮ ಬಗ್ಗೆ ಫೋಟೋ ಮತ್ತು ವಿವರಗಳೊಂದಿಗೆ ಸಂಪೂರ್ಣ ಪ್ರೊಫೈಲ್ ರಚಿಸಲು ಉತ್ತೇಜಿಸಲಾಗುತ್ತದೆ.
ರಿಸರ್ವೇಶನ್ ಪೂರ್ಣಗೊಂಡ ನಂತರವೇ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಪರಸ್ಪರ ವಿಮರ್ಶೆ ನೀಡಸಾಧ್ಯವಿರುವುದರಿಂದ ಗೆಸ್ಟ್ ವಿಮರ್ಶೆಗಳು ನೈಜ ಅನುಭವಗಳನ್ನು ಆಧರಿಸಿವೆ ಎಂದು ನೀವು ನಂಬಬಹುದು. ಗೆಸ್ಟ್‌ಗಳು ವಾಸ್ತವ್ಯ ಹೂಡುವ ಮುಂಚೆ ಯಾವುದೇ ಸಮಯದಲ್ಲಿ ಅವರಿಗೆ ನೀವು ಪ್ರಶ್ನೆಗಳನ್ನು ಕೇಳಬಹುದು ಮತ್ತು ನಿರೀಕ್ಷೆಗಳನ್ನು ಹೊಂದಿಸಬಹುದು.
ನೀವು ತ್ವರಿತ ಬುಕಿಂಗ್ ಅನ್ನು ಬಳಸಿದರೆ, ಅಹಿತಕರ ಘಟನೆಗಳು ಅಥವಾ ಕಡಿಮೆ ರೇಟಿಂಗ್‌ಗಳಿಲ್ಲದೆ ಕನಿಷ್ಠ ಒಂದು ವಾಸ್ತವ್ಯವನ್ನು ಪೂರ್ಣಗೊಳಿಸಿದ ಗೆಸ್ಟ್‌ಗಳಿಗೆ ಮಾತ್ರ ಅದನ್ನು ನೀಡಲು ನೀವು ಆಯ್ಕೆ ಮಾಡಬಹುದು. ನೀವು ಹಸ್ತಚಾಲಿತ ಬುಕಿಂಗ್ ವಿನಂತಿಗಳನ್ನು ಆಯ್ಕೆ ಮಾಡಿದರೆ, ರಿಸರ್ವೇಶನ್ ಅನ್ನು ಸ್ವೀಕರಿಸುವ ಮುಂಚೆ ನೀವು ಗೆಸ್ಟ್‌ಗಳ ಪ್ರೊಫೈಲ್‌ಗಳು ಮತ್ತು ವಿಮರ್ಶೆಗಳನ್ನು ನೋಡುವ ಅವಕಾಶ ಹೊಂದಿರುತ್ತೀರಿ.
ನಮ್ಮ ಹೋಸ್ಟ್ ರದ್ದತಿ ನೀತಿಯನ್ನು ನೀವು ಅನುಸರಿಸುವವರೆಗೂ ಪಾರ್ಟಿಗೆ ಕಾರಣವಾಗುತ್ತದೆ ಎಂದು ನೀವು ಸಮಂಜಸವಾಗಿ ನಂಬುವ ರಿಸರ್ವೇಶನ್ ಅನ್ನು ನೀವು ರದ್ದುಗೊಳಿಸಬಹುದು. ಟ್ರಿಪ್ ವಿನಂತಿ ನಿಮಗೆ ಅನಾನುಕೂಲಕರ ಅನ್ನಿಸಿದರೆ, ನೀವು ನಮ್ಮ ತಾರತಮ್ಯ ವಿರೋಧಿ ನೀತಿಯನ್ನು ಅನುಸರಿಸುವವರೆಗೆ ನೀವು ಅದನ್ನು ನಿರಾಕರಿಸಬಹುದು.
ಹೆಚ್ಚಿನ ಬೆಂಬಲ ಬೇಕೇ?
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
ಹೋಸ್ಟ್‌ಗಳಿಗಾಗಿ AirCover ಹೋಸ್ಟ್ ಹಾನಿ ರಕ್ಷಣೆ, ಹೋಸ್ಟ್ ಹೊಣೆಗಾರಿಕೆ ವಿಮೆ, ಮತ್ತು ಅನುಭವಗಳ ಹೊಣೆಗಾರಿಕೆ ವಿಮೆ ಇವು ಜಪಾನಿನಲ್ಲಿ ಅನುಭವಗಳನ್ನು ಒದಗಿಸುತ್ತಿರುವ ಹೋಸ್ಟ್‌ಗಳಿಗೆ ವಿಮಾ ರಕ್ಷಣೆ ನೀಡುವುದಿಲ್ಲ. ಇಲ್ಲಿ Japan Host Insurance ಮತ್ತು Japan Experience Protection Insurance ಅಥವಾ Airbnb Travel LLC ಮೂಲಕ ಅನುಭವ ಒದಗಿಸುವ ಹೋಸ್ಟ್‌ಗಳಿಗೆ ಅನ್ವಯವಾಗುತ್ತವೆ. ಮೇನ್‌ಲ್ಯಾಂಡ್ ಚೀನಾದಲ್ಲಿ ವಾಸ್ತವ್ಯಗಳನ್ನು ಒದಗಿಸುವ ಹೋಸ್ಟ್‌ಗಳಿಗೆ, ಚೀನಾ ಹೋಸ್ಟ್ ರಕ್ಷಣೆ ಯೋಜನೆ ಅನ್ವಯವಾಗುತ್ತದೆ. ಎಲ್ಲಾ ಕವರೇಜ್ ಮಿತಿಗಳನ್ನು USD ಯಲ್ಲಿ ತೋರಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ.
ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳ ಹೊಣೆಗಾರಿಕೆ ವಿಮೆಯು ಥರ್ಡ್-ಪಾರ್ಟಿ ವಿಮಾದಾರರ ಅಧೀನದಲ್ಲಿವೆ. ನೀವು UK ಯಲ್ಲಿ ಹೋಸ್ಟ್ ಮಾಡುತ್ತಿದ್ದರೆ, ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳ ಹೊಣೆಗಾರಿಕೆ ವಿಮೆ ಪಾಲಿಸಿಗಳನ್ನು Zurich Insurance Company Ltd. ನೀಡುತ್ತದೆ ಮತ್ತು ಇದನ್ನು Aon UK Limited ನ ನಿಯೋಜಿತ ಪ್ರತಿನಿಧಿಯಾದ Airbnb UK Services Limited ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ UK ಯ ಹೋಸ್ಟ್‌ಗಳಿಗೆ ಒದಗಿಸಲಾಗುತ್ತದೆ, ಇದು Financial Conduct Authority ಮೂಲಕ ಅಧಿಕಾರ ಪಡೆದಿದೆ ಮತ್ತು ನಿಯಂತ್ರಿಸಲ್ಪಡುತ್ತದೆ AON ನ FCA ನೋಂದಣಿ ಸಂಖ್ಯೆ 310451 ಆಗಿದೆ. ನೀವು Financial Services Register ಗೆ ಭೇಟಿ ನೀಡುವ ಮೂಲಕ ಅಥವಾ FCA ಅನ್ನು +44 0800-111-6768 ಇಲ್ಲಿ ಸಂಪರ್ಕಿಸುವ ಮೂಲಕ ಇದನ್ನು ಪರಿಶೀಲಿಸಬಹುದು. ಹೋಸ್ಟ್‌ಗಳಿಗಾಗಿ AirCover ನ ಅಡಿಯಲ್ಲಿ ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವಗಳ ಹೊಣೆಗಾರಿಕೆ ನೀತಿಗಳನ್ನು Financial Conduct Authority ನಿಯಂತ್ರಿಸುತ್ತದೆ. ಉಳಿದ ಉತ್ಪನ್ನಗಳು ಮತ್ತು ಸೇವೆಗಳು Airbnb UK Services Limited ಆಯೋಜಿಸಿದ ನಿಯಂತ್ರಿತ ಉತ್ಪನ್ನಗಳಾಗಿರುವುದಿಲ್ಲ. FPAFF405LC
ಹೋಸ್ಟ್ ಹಾನಿ ರಕ್ಷಣೆಯು ವಿಮೆಯಲ್ಲ ಮತ್ತು ಹೋಸ್ಟ್ ಹೊಣೆಗಾರಿಕೆ ವಿಮೆಗೆ ಸಂಬಂಧ ಹೊಂದಿಲ್ಲ. ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿ, ಗೆಸ್ಟ್ ಆ ಹಾನಿಗಳಿಗೆ ಪಾವತಿಸದಿದ್ದರೆ ನಿಮ್ಮ ಮನೆಗೆ ಮತ್ತು ವಸ್ತುಗಳಿಗೆ ಗೆಸ್ಟ್‌ಗಳಿಂದ ಉಂಟಾದ ಕೆಲವು ಹಾನಿಗಳಿಂದಾಗಿ ನಿಮಗಾದ ನಷ್ಟವನ್ನು ಭರಿಸಿಕೊಡಲಾಗುತ್ತದೆ. ವಾಷಿಂಗ್ಟನ್ ಸ್ಟೇಟ್‌ನಲ್ಲಿನ ಲಿಸ್ಟಿಂಗ್‌ಗಳಲ್ಲಿ, ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿನ Airbnb ಯ ಒಪ್ಪಂದದ ಬಾಧ್ಯತೆಗಳನ್ನು Airbnb ಖರೀದಿಸಿದ ವಿಮಾ ಪಾಲಿಸಿಯು ಒಳಗೊಂಡಿದೆ. ಹೋಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದ ಹೊರಗೆ ಇದ್ದರೆ, ಈ ಹೋಸ್ಟ್ ಹಾನಿ ಸಂರಕ್ಷಣಾ ನಿಯಮಗಳು ಅನ್ವಯವಾಗುತ್ತವೆ. ಹೋಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದೊಳಗೆ ಇದ್ದರೆ, ಹೋಸ್ಟ್ ಹಾನಿ ರಕ್ಷಣೆಯು ಆಸ್ಟ್ರೇಲಿಯನ್ ಬಳಕೆದಾರರಿಗಾಗಿ ಇರುವ ಹೋಸ್ಟ್ ಹಾನಿ ರಕ್ಷಣೆ ನಿಯಮಗಳಿಗೆ ಒಳಪಟ್ಟಿರುತ್ತದೆ.