ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳನ್ನು ಹೋಲಿಸುವುದು ಹೇಗೆ

ನಿಮ್ಮಂತಹ ಸ್ಥಳಗಳ ಸರಾಸರಿ ಬೆಲೆಗಳನ್ನು ತೋರಿಸುವ ನಕ್ಷೆಯನ್ನು ತ್ವರಿತವಾಗಿ ಪ್ರವೇಶಿಸಿ.
Airbnb ಅವರಿಂದ ಆಗ 7, 2024ರಂದು
1 ನಿಮಿಷ ಓದಲು
ನವೆಂ 11, 2024 ನವೀಕರಿಸಲಾಗಿದೆ

ಎಷ್ಟು ಶುಲ್ಕವನ್ನು ವಿಧಿಸಬೇಕು ಎನ್ನುವುದನ್ನು ತಿಳಿಯಲು ಕಷ್ಟವಾಗಬಹುದು ಎಂದು ಹೋಸ್ಟ್‌ಗಳು ತಿಳಿಸಿದ್ದಾರೆ. ಸಮೀಪದಲ್ಲಿನ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳಿಗೆ ನಿಮ್ಮ ಬೆಲೆಯನ್ನು ಹೋಲಿಸಲು 'ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಿ' ಟೂಲ್ ನಿಮಗೆ ಅನುವು ಮಾಡುತ್ತದೆ.

"ನನ್ನ ದರವು ಸ್ಪರ್ಧಾತ್ಮಕವಾಗಿದೆಯೇ ಎಂದು ನಾನು ಯಾವಾಗಲೂ ಪರಿಶೀಲಿಸುತ್ತಿರುತ್ತೇನೆ. ಆದ್ದರಿಂದ, ನನ್ನ ಪ್ರದೇಶದಲ್ಲಿ ಇತರ ಹೋಸ್ಟ್‌ಗಳು ಪ್ರತಿ ರಾತ್ರಿಗೆ ಎಷ್ಟು ಪಡೆಯುತ್ತಿದ್ದಾರೆ ಎಂಬುದನ್ನು ನಾನು ನೋಡಲು ಬಯಸುತ್ತೇನೆ" ಎಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರು ಮತ್ತು ಸೂಪರ್‌ಹೋಸ್ಟ್ ಆಗಿರುವ ಫೆಲಿಸಿಟಿ ಹೇಳುತ್ತಾರೆ. "ಈ ವೈಶಿಷ್ಟ್ಯವು ಗೇಮ್ ಚೇಂಜರ್ ಆಗಿದೆ."

ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಲು:

  1. ನಿಮ್ಮ ಲಿಸ್ಟಿಂಗ್‌‌ನಲ್ಲಿನ ಕ್ಯಾಲೆಂಡರ್‌ನಲ್ಲಿನ ಬೆಲೆ ಟ್ಯಾಬ್‌ಗೆ ಹೋಗಿ.
  2. 31 ದಿನಗಳವರೆಗೆ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.
  3. ಇದೇ ರೀತಿಯ ಲಿಸ್ಟಿಂಗ್‌ಗಳನ್ನು ನೋಡಿ ಅನ್ನು ಒತ್ತಿ.

ನಿಮ್ಮ ಪ್ರದೇಶದ ನಕ್ಷೆಯಲ್ಲಿ ಹತ್ತಿರದ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳು ನಿಮಗೆ ಕಾಣಿಸುತ್ತದೆ. ಬುಕ್ ಮಾಡಿದ ಅಥವಾ ಬುಕ್ ಮಾಡದ ಲಿಸ್ಟಿಂಗ್‌ಗಳನ್ನು ನೋಡಲು ನಕ್ಷೆಯಲ್ಲಿನ ಬಟನ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

ನಕ್ಷೆಯಲ್ಲಿನ ದರಗಳು ಆಯ್ದ ದಿನಾಂಕಗಳಿಗೆ ಪ್ರತಿ ಲಿಸ್ಟಿಂಗ್‌ನ ಸರಾಸರಿ ಬುಕ್ ಮಾಡಿದ ಅಥವಾ ಬುಕ್ ಮಾಡದ ದರವನ್ನು ಪ್ರತಿಬಿಂಬಿಸುತ್ತವೆ. ಯಾವ ಲಿಸ್ಟಿಂಗ್‌ಗಳು ಹೋಲುತ್ತವೆ ಎಂಬುದನ್ನು ನಿರ್ಧರಿಸುವುದರಲ್ಲಿ ಸೇರಿರುವ ಅಂಶಗಳೆಂದರೆ, ಸ್ಥಳ, ಗಾತ್ರ, ವೈಶಿಷ್ಟ್ಯಗಳು, ಸೌಲಭ್ಯಗಳು, ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ನಿಮ್ಮದನ್ನು ಪರಿಗಣಿಸುವಾಗ ಗೆಸ್ಟ್‌ಗಳು ಬ್ರೌಸ್ ಮಾಡುವ ಇತರೆ ಲಿಸ್ಟಿಂಗ್‌ಗಳು.

ಈ ಮಾಹಿತಿಯು ಸ್ಥಳೀಯ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ದರವನ್ನು ನೀವು ಸೆಟ್ ಮಾಡುವಾಗ ಅಥವಾ ನವೀಕರಿಸುವಾಗ ನೀವು ಇದನ್ನು ಯಾವುದೇ ಸಮಯದಲ್ಲಿ ಬಳಸಬಹುದು.

ಹುಡುಕಾಟ ಫಲಿತಾಂಶಗಳ ಮೇಲೆ ಬೆಲೆಗಳು ದೊಡ್ಡ ಪರಿಣಾಮ ಬೀರಬಹುದು. ಇದೇ ರೀತಿಯ ಸೌಲಭ್ಯಗಳು ಮತ್ತು ಗೆಸ್ಟ್ ಸಾಮರ್ಥ್ಯವನ್ನು ಹೊಂದಿರುವ ಸಮೀಪದಲ್ಲಿನ ಇತರೆಗಿಂತ ಕಡಿಮೆ ಬೆಲೆಗಳನ್ನು ಹೊಂದಿರುವ ಲಿಸ್ಟಿಂಗ್‌ಗಳು ಹೆಚ್ಚಿನ ರ್‍ಯಾಂಕ್ ಹೊಂದಿರುತ್ತವೆ. ನಿಮ್ಮ ದರವನ್ನು ಹೊಂದಿಸಿದರೆ ನಿಮಗೆ ಗೆಸ್ಟ್‌ಗಳನ್ನು ತಲುಪಲು ಮತ್ತು ಹೆಚ್ಚು ಗಳಿಸಲು ಸಹಾಯ ಮಾಡುತ್ತದೆ.

ಪ್ರಕಟಣೆಯ ನಂತರ ಈ ಲೇಖನದಲ್ಲಿ ಇರುವ ಮಾಹಿತಿಯು ಬದಲಾಗಿರಬಹುದು.

Airbnb
ಆಗ 7, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ