Airbnb ಗೆ ನನ್ನ ಸ್ಥಳ ಸೂಕ್ತವಾಗಿದೆಯೇ?
ವಿಶೇಷ ಆಕರ್ಷಣೆಗಳು
ನೀವು ಖಾಸಗಿ ಅಥವಾ ಕೂಡಿ ವಾಸಿಸುವ ರೂಮ್, ಸಂಪೂರ್ಣ ಮನೆ ಅಥವಾ ಒಂದು ಅನನ್ಯ ಜಾಗವನ್ನು ಒದಗಿಸಬಹುದು
ಕನಿಷ್ಠ ಅಗತ್ಯ: ಒಂದು ಆರಾಮದಾಯಕ ಮಲಗುವ ಪ್ರದೇಶ ಮತ್ತು ಸ್ನಾನಗೃಹ ಪ್ರವೇಶ
ನಿಮ್ಮ ಸ್ಥಳದ ಸಾಧಕ-ಬಾಧಕಗಳ ಬಗ್ಗೆ ಪ್ರಾಮಾಣಿಕವಾಗಿರುವ ಮೂಲಕ ನಿರೀಕ್ಷೆಗಳನ್ನು ನಿಗದಿಪಡಿಸಿ
ಒಂದು ಹೆಚ್ಚುವರಿ ಬೆಡ್‌ರೂಮ್ ಅಥವಾ ಒಂದು ಸ್ನೇಹಶೀಲ ಹಾಯಿದೋಣಿ Airbnbಯಲ್ಲಿ ಜನಪ್ರಿಯವಿರಬಹುದೆಂದು ನೀವು ಭಾವಿಸದೇ ಇರಬಹುದು, ಆದರೆ ಎಲ್ಲ ವೈವಿದ್ಯಮಯ ಸ್ಥಳಗಳು—ಸಣ್ಣದರಿಂದ ಅತ್ಯಂತ ವಿಶಿಷ್ಟವಾದವುಗಳ ತನಕ—ಎಲ್ಲವೂ ಗೆಸ್ಟ್‌ಗಳಿಗೆ ಇಷ್ಟವಾಗಬಹುದು.
ನಿಮ್ಮ ಸ್ಥಳ ಯಾವುದೇ ರೀತಿಯದಾಗಿರಬಹುದು, ಸ್ವತಃ ನಿಮಗೇ ಮಲಗಲು ಇಷ್ಟ ಆಗಬಲ್ಲಂತಹ ಸ್ನೇಹಶೀಲ ಜಾಗವೊಂದನ್ನು ಸಿದ್ಧಪಡಿಸುವುದು ಮುಖ್ಯ—ಜೊತೆಗೆ ನಿಮ್ಮ ಸ್ಥಳ ಯಾಕೆ ಆಕರ್ಷಕ ಎಂಬುದನ್ನು ವರ್ಣಿಸುವ ಲಿಸ್ಟಿಂಗ್ ವಿವರಣೆ ಕೂಡ ಅಗತ್ಯ.
ಮೂಲಭೂತ ವಿಷಯಗಳೊಂದಿಗೆ ಪ್ರಾರಂಭಿಸಿ
ಗೆಸ್ಟ್‌ಗಳು ಕನಿಷ್ಠ ಪಕ್ಷ ಸ್ವಚ್ಛ, ಆರಾಮದಾಯಕ ಮಲಗುವ ಪ್ರದೇಶ ಮತ್ತು ರೆಸ್ಟ್‌ರೂಮ್‌ಗೆ ಪ್ರವೇಶವನ್ನು ನಿರೀಕ್ಷಿಸುತ್ತಾರೆ. Airbnb ನಲ್ಲಿ ಪಟ್ಟಿ ಮಾಡಲಾದ ಎಲ್ಲ ಸ್ಥಳಗಳು ಅಡುಗೆ ಮನೆೆಗೆ ಪ್ರವೇಶವನ್ನು ನೀಡುವುದಿಲ್ಲ, ಆದರೆ ನಿಮ್ಮ ಗೆಸ್ಟ್‌ಗಳಿಗೆ ನೀವು ಪ್ರವೇಶ ನೀಡುವುದಾದಲ್ಲಿ, ಅದು ಪೂರ್ಣ ಪ್ರಮಾಣದ ಅಡುಗೆಮನೆಯೇ ಅಥವಾ ಪುಟ್ಟ ಅಡುಗೆ ಜಾಗವೇ ಎಂದು ಸೂಚಿಸಿ.
ಯಾವುದೇ ಸ್ಥಳವನ್ನು ಶೇರ್ ಮಾಡಿ
ಹೆಚ್ಚುವರಿ ಸ್ಥಳಾವಕಾಶವನ್ನು ಹೊಂದಿರುವ ಯಾರೂ ಕೂಡ Airbnb ಹೋಸ್ಟ್ ಆಗಿ ಅಭಿವೃದ್ಧಿ ಹೊಂದಬಹುದು. “ಐಡಿಯಲ್” ಎನ್ನಿಸುವಂತಹ ಸ್ಥಳವೊಂದು ಇರುವುದಿಲ್ಲ—ಗೆಸ್ಟ್‌ಗಳು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗಬಲ್ಲಂತಹ ಪ್ರಾಮಾಣಿಕವಾದ ಮತ್ತು ವಿವರವಾದ ಲಿಸ್ಟಿಂಗ್ ವಿವರಣೆ ಮತ್ತು ಫೋಟೋಗಳನ್ನು ನೀವು ನೀಡಬೇಕು. ಖಾಲಿ ಇರುವ ಹೆಚ್ಚುವರಿ ಕೋಣೆಗಳಿಂದ ಐಷಾರಾಮಿ ಎಸ್ಟೇಟ್‌ಗಳ ತನಕ, ಪ್ರತಿಯೊಬ್ಬರಿಗೂ ಸೂಕ್ತವೆನ್ನಿಸುವ ಸ್ಥಳಗಳು Airbnb ಯಲ್ಲಿವೆ.
ನಿಮ್ಮ ಪ್ರಾಪರ್ಟಿಯ ಪ್ರಕಾರವನ್ನು ವ್ಯಾಖ್ಯಾನಿಸಿ
Airbnb ಯಲ್ಲಿ ಬಹುತೇಕ ಯಾವುದೇ ರೀತಿಯ ಪ್ರಾಪರ್ಟಿಯು ಗೆಸ್ಟ್‌ಗಳಿಗೆ ಇಷ್ಟವಾಗಬಹುದು. ಅದು ಮನೆಯೇ? ಅಪಾರ್ಟ್‌ಮೆಂಟ್? ನಿಮ್ಮ ಕಾಂಡೋದಲ್ಲೊಂದು ರೂಮ್? ಟ್ರೀಹೌಸ್‌ಗಳು, ಟೆಂಟ್‌ಗಳು, ಪುಟ್ಟ ಮನೆಗಳು, ಫಾರ್ಮ್‌ಗಳು, ಮತ್ತು ಕ್ಯಾಂಪರ್‌ಗಳು ಹಾಗೂ RVಗಳಂತಹ ಕೆಲವು ಸ್ಥಳಗಳನ್ನು ಅನನ್ಯವೆಂದು ಕೂಡ ಗುರುತಿಸಲಾಗಿದೆ.
ಗೆಸ್ಟ್‌ಗಳು ಎಲ್ಲಿಗೆ ಹೋಗಬಹುದು ಎಂಬುದನ್ನು ಆರಿಸಿ
ನಿಮ್ಮ ಸಂಪೂರ್ಣ ಪ್ರಾಪರ್ಟಿ ಅಥವಾ ಪ್ರೈವೇಟ್ ಸೂಟ್‌ಗೆ ಅವರು ವಿಶೇಷ ಪ್ರವೇಶವನ್ನು ಹೊಂದಿರಬಹುದು, ಅಥವಾ ನಿಮ್ಮ ಕುಟುಂಬ, ರೂಮ್‌ಮೇಟ್‌ಗಳು, ಅಥವಾ ಸಹಗೆಸ್ಟ್‌ಗಳಂತಹ ಇತರರ ಜೊತೆ ಮಲಗುವ ಜಾಗ, ಅಡುಗೆ ಕೋಣೆ, ಅಥವಾ ರೆಸ್ಟ್‌ರೂಮ್‌ಗಳನ್ನು ಕೂಡಿ ವಾಸಿಸುವ ಸ್ಥಳವಾಗಿ ಬಳಸಬೇಕೆಂಬುದನ್ನು ಗೆಸ್ಟ್‌ಗಳಿಗೆ ನೀವು ತಿಳಿಸಬಹುದು. ನಿಮ್ಮ ಸ್ಥಳವನ್ನು ನೀವು ಗೆಸ್ಟ್‌ಗಳಿಗೆ ಬಿಟ್ಟುಕೊಡುತ್ತೀರಾ ಅಥವಾ ನಿಮ್ಮ ವಸ್ತುಗಳನ್ನು ಅಲ್ಲಿ ಇಟ್ಟಿರುತ್ತೀರಾ ಎಂಬುದು ನಿಮಗೆ ಬಿಟ್ಟದ್ದು. ನಿಮ್ಮ ಸ್ಥಳವನ್ನು ಶುಚಿಯಾಗಿರಿಸಿಕೊಳ್ಳುವುದು ಮತ್ತು ಏನು ನಿರೀಕ್ಷೆಗಳಿರಬೇಕೆಂದು ಗೆಸ್ಟ್‌ಗಳಿಗೆ ಸ್ಪಷ್ಟವಾಗಿ ಸಂವಹಿಸುವುದು ಮುಖ್ಯವಾದ ಸಂಗತಿಗಳಾಗಿವೆ.
ಸಾಧಕ-ಬಾಧಕಗಳ ಬಗ್ಗೆ ಪ್ರಾಮಾಣಿಕವಾಗಿರಿ
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಹೋಸ್ಟ್ ಆಗಿರುವ ಡೇನಿಯಲ್ ಅವರು, ತಾನು ತನ್ನ ಸ್ಥಳದ ಬಗ್ಗೆ ಯಾವಾಗಲೂ ಪಾರದರ್ಶಕವಾಗಿರುವೆ ಎಂದು ಹೇಳುತ್ತಾರೆ. "ನಿಮ್ಮ ಗೆಸ್ಟ್‌ಗಳಿಗೆ ನೀವು ಏನು ದೊರಕಲಿದೆ ಎಂದು ಹೇಳುತ್ತೀರೋ ಮತ್ತು ಅವರು ನಿಮ್ಮ ಲಿಸ್ಟಿಂಗ್‌ಗೆ ಬಂದಾಗ ಅವರು ಏನು ಪಡೆಯುತ್ತಾರೋ ಅವುಗಳಲ್ಲಿ ವ್ಯತ್ಯಾಸ ಆಗಬಾರದು" ಎಂದು ಅವರು ಹೇಳುತ್ತಾರೆ. “ನಿಮ್ಮ ಲಿಸ್ಟಿಂಗ್ ಬಗ್ಗೆ ಅತಿಯಾಗಿ ವಿವರಿಸುವ ಬದಲು ಗೆಸ್ಟ್‌ಗಳು ಬಂದಿಳಿದಾಗ ಸ್ಥಳವು ಅವರ ನಿರೀಕ್ಷೆಗಿಂತ ಚೆನ್ನಾಗಿದೆ ಅನ್ನಿಸುವುದು ಒಳ್ಳೆಯದು, ಇದಕ್ಕೆ ತದ್ವಿರುದ್ಧ ಆಗಬಾರದು."
ತೋರಿಸುವ ಮೂಲಕ ಹೇಳಿ
ಕೂಡಿ ವಾಸಿಸುವ ಸ್ಥಳದಲ್ಲಿ ಗೆಸ್ಟ್‌ಗಳಿಗೆ ಸಾಕುಪ್ರಾಣಿಗಳ ಜೊತೆ ಮುಖಾಮುಖಿ ಆಗುವುದಿದ್ದರೆ, ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿ ಈ ಬಗ್ಗೆ ಹೇಳಿರುವುದು ಒಳ್ಳೆಯ ಆರಂಭವೆನ್ನಿಸುತ್ತದೆ. ನಿಮ್ಮ ನಯವಾದ ರೋಮಗಳ ನಾಯಿ ಅಥವಾ ಚೆಂದದ ಬೆಕ್ಕಿನ ಫೋಟೊಗಳನ್ನು Airbnb ಗೆ ಅಪ್‌ಲೋಡ್ ಮಾಡಿ, ಅವರಿಗೆ ಈ ಪ್ರಾಣಿಗಳು ಕಾಣಸಿಗಲಿವೆ ಎಂಬುದನ್ನು ಗೆಸ್ಟ್‌ಗಳಿಗೆ ತಿಳಿಸುವ ಚಿತ್ರ ಶೀರ್ಷಿಕೆ ನೀಡಿರುವುದು ಬಹಳ ಮುಖ್ಯ.
ಸಾವಿರ ಪದಗಳಿಗಿಂತ ಒಂದು ಚಿತ್ರ ಪರಿಣಾಮಕಾರಿ, ಏಕೆಂದರೆ ಕೆಲವು ಗೆಸ್ಟ್‌ಗಳು ಎಲ್ಲವನ್ನೂ ವಿವರವಾಗಿ ಓದದೆ ರಿಸರ್ವೇಷನ್ ಮಾಡಿರಬಹುದು. ನಿಮ್ಮ ಸ್ಥಳವು ಯಾವುದೇ ಅನನ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೆ, ಬುಕಿಂಗ್ ಪ್ರಕ್ರಿಯೆಯ ವೇಳೆಯಲ್ಲಿ ಗೆಸ್ಟ್‌ಗಳು ನಿಮ್ಮ ಲಿಸ್ಟಿಂಗ್ ಅನ್ನು ಸಂಪೂರ್ಣವಾಗಿ ಓದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.
ನಿಮ್ಮ ಸ್ಥಳದ ಬೆಲೆಯನ್ನು ವಾಸ್ತವಿಕವಾಗಿ ನಿಗದಿಪಡಿಸಿ
ಅಂದರೆ ನಿಮ್ಮ ಸ್ಥಳವು ಅರಮನೆಯಲ್ಲ—ತೊಂದರೆ ಇಲ್ಲ ಬಿಡಿ! ಹೆಚ್ಚಿನ ಗೆಸ್ಟ್‌ಗಳು ಸಾಮಾನ್ಯ ವಸತಿಯನ್ನೂ ಅದು ಮೌಲ್ಯಯುತವೆನ್ನಿಸಿದರೆ ಮೆಚ್ಚುತ್ತಾರೆ. ನೀವು ಪ್ರಾರಂಭದ ಹಂತದಲ್ಲಿ, ನಿಮ್ಮ ಅಂತಿಮ ಗುರಿಗಿಂತ ಸ್ವಲ್ಪ ಕಡಿಮೆ ಇರುವ ಪರಿಚಯಾತ್ಮಕ ಬೆಲೆಯನ್ನು ಪರಿಗಣಿಸಬಹುದು. ಅದು ನಿಮಗೆ ಅತಿಥಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಮತ್ತು ಒಮ್ಮೆ ನೀವು ಕೆಲವು ಉತ್ತಮ ವಿಮರ್ಶೆಗಳನ್ನು ಪಡೆದ ನಂತರ, ನಿಮ್ಮ ಬೆಲೆಯನ್ನು ನಿಮ್ಮ ಗುರಿಗಳನ್ನು ಪ್ರತಿಬಿಂಬಿಸುವಂತೆ ಮರು-ಮೌಲ್ಯಮಾಪನ ಮಾಡಿ ಹೆಚ್ಚಿಸಿಕೊಳ್ಳಬಹುದು.
ಯಶಸ್ವಿ ಲಿಸ್ಟಿಂಗ್ ಸೆಟಪ್ ಮಾಡಲು ನಮ್ಮ ಮಾರ್ಗದರ್ಶಿಯಲ್ಲಿ ಇನ್ನಷ್ಟನ್ನು ಅನ್ವೇಷಿಸಿ
ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
ನೀವು ಖಾಸಗಿ ಅಥವಾ ಕೂಡಿ ವಾಸಿಸುವ ರೂಮ್, ಸಂಪೂರ್ಣ ಮನೆ ಅಥವಾ ಒಂದು ಅನನ್ಯ ಜಾಗವನ್ನು ಒದಗಿಸಬಹುದು
ಕನಿಷ್ಠ ಅಗತ್ಯ: ಒಂದು ಆರಾಮದಾಯಕ ಮಲಗುವ ಪ್ರದೇಶ ಮತ್ತು ಸ್ನಾನಗೃಹ ಪ್ರವೇಶ
ನಿಮ್ಮ ಸ್ಥಳದ ಸಾಧಕ-ಬಾಧಕಗಳ ಬಗ್ಗೆ ಪ್ರಾಮಾಣಿಕವಾಗಿರುವ ಮೂಲಕ ನಿರೀಕ್ಷೆಗಳನ್ನು ನಿಗದಿಪಡಿಸಿ