2024 ಚಳಿಗಾಲದ ಬಿಡುಗಡೆ

2024 ಚಳಿಗಾಲದ ಬಿಡುಗಡೆ

ಸಹ‑ಹೋಸ್ಟ್ ನೆಟ್‌ವರ್ಕ್‌ ಅನ್ನು ಪರಿಚಯಿಸಲಾಗುತ್ತಿದೆ

ಈಗ ನೀವು ಸಹಾಯಕ್ಕಾಗಿ ಸಹ-ಹೋಸ್ಟ್ ಅನ್ನು ನೇಮಿಸಿಕೊಳ್ಳಬಹುದು. ಜೊತೆಗೆ, ಹೋಸ್ಟ್‌ ಮಾಡುವುದು ಮತ್ತು ಟ್ರಿಪ್‌ಗಳ ಯೋಜಿಸುವಿಕೆಯನ್ನು ಮತ್ತಷ್ಟು ಸುಲಭಗೊಳಿಸಿಕೊಳ್ಳಲು ಇನ್ನಷ್ಟು ಮಾರ್ಗಗಳನ್ನು ಕಂಡುಕೊಳ್ಳಿ.
ಪ್ರತಿ ಹೋಸ್ಟ್‌ನ ಫೋಟೋ, ಹೆಸರು, ಸ್ಥಳ, ಗೆಸ್ಟ್ ರೇಟಿಂಗ್ ಮತ್ತು ವರ್ಷಗಳ ಅನುಭವವನ್ನು ಒಳಗೊಂಡಿರುವ ಸಹ‑ಹೋಸ್ಟ್ ಪ್ರೊಫೈಲ್ ಕಾರ್ಡ್‌ಗಳ ಸರಣಿ.

Airbnb ಯಲ್ಲಿನ ಅತ್ಯುತ್ತಮ ಸಹ‑ಹೋಸ್ಟ್‌ಗಳು ಈಗ ನಿಮಗಾಗಿ ಹೋಸ್ಟ್ ಮಾಡಬಹುದು

ಸಹ‑ಹೋಸ್ಟ್‌ಗಳ ಕುರಿತು ಕಿರು ವಿವರಣೆ, ಅವರ ಲಿಸ್ಟಿಂಗ್‌ಗಳ ಸಂಖ್ಯೆ, ಗೆಸ್ಟ್ ರೇಟಿಂಗ್ ಮತ್ತು ಹೋಸ್ಟ್‌ ಮಾಡಿದ ವರ್ಷಗಳ ಸಂಖ್ಯೆಯನ್ನು ಒಳಗೊಂಡಿರುವ ವಿಭಿನ್ನ ಸಹ‑ಹೋಸ್ಟ್ ಪ್ರೊಫೈಲ್‌ಗಳನ್ನು ತೋರಿಸುತ್ತಿರುವ Airbnb ಸ್ಕ್ರೀನ್‌ಗಳು.
ನಿಮ್ಮ ಮನೆ ಮತ್ತು ಗೆಸ್ಟ್‌ಗಳನ್ನು ನೋಡಿಕೊಳ್ಳಲು ಉತ್ತಮ ಗುಣಮಟ್ಟದ, ಸ್ಥಳೀಯ ಪಾರ್ಟ್‌ನರ್ ಅನ್ನು ನೇಮಿಸಿಕೊಳ್ಳಿ. ಸಹ‑ಹೋಸ್ಟ್‌ಗಳು, Airbnb ಯಲ್ಲಿ ಅಸಾಧಾರಣ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಅನುಭವಿ ಹೋಸ್ಟ್‌ಗಳಾಗಿದ್ದಾರೆ.

ಆ್ಯಪ್‌ನಲ್ಲಿಯೇ ಸೂಕ್ತ ಸಹ‑ಹೋಸ್ಟ್ ಅನ್ನು ಕಂಡುಕೊಳ್ಳಿ

ಸಹ‑ಹೋಸ್ಟ್‌ಗಳ ಕುರಿತು ಕಿರು ವಿವರಣೆ, ಅವರ ಲಿಸ್ಟಿಂಗ್‌ಗಳ ಸಂಖ್ಯೆ, ಗೆಸ್ಟ್ ರೇಟಿಂಗ್ ಮತ್ತು ಹೋಸ್ಟ್‌ ಮಾಡಿದ ವರ್ಷಗಳ ಸಂಖ್ಯೆಯನ್ನು ಒಳಗೊಂಡಿರುವ ವಿಭಿನ್ನ ಸಹ‑ಹೋಸ್ಟ್ ಪ್ರೊಫೈಲ್‌ಗಳನ್ನು ತೋರಿಸುತ್ತಿರುವ Airbnb ಸ್ಕ್ರೀನ್‌ಗಳು.
ಸಹ-ಹೋಸ್ಟ್ ಅನ್ನು ಆರಿಸಿ, ಅವರ ಅನುಭವವನ್ನು ನೋಡಿ, ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿ ಮತ್ತು ಹೊರ ಪಾವತಿಗಳನ್ನು ನಿರ್ವಹಿಸಿ—ಎಲ್ಲವೂ ಒಂದೇ ಸ್ಥಳದಿಂದ.

ಸಹ‑ಹೋಸ್ಟ್‌ಗಳು ಒಂದು ಅಥವಾ ಎಲ್ಲ ಕೆಲಸಗಳನ್ನೂ ಮಾಡಬಹುದು

ನಿಮ್ಮ ಲಿಸ್ಟಿಂಗ್ ರಚಿಸಿ
ಲಿಸ್ಟಿಂಗ್‌ನ ಫೋಟೋಗಳನ್ನು ತೆಗೆದುಕೊಳ್ಳಿ
ಬೆಲೆಗಳು ಮತ್ತು ಲಭ್ಯತೆಯನ್ನು ನಿಗದಿಪಡಿಸಿ
ಗೆಸ್ಟ್‌ಗಳ ಜೊತೆ ಸಂದೇಶ
ನಿಮ್ಮ ರಿಸರ್ವೇಶನ್‌ಗಳನ್ನು ನಿರ್ವಹಿಸಿ
ಗೆಸ್ಟ್‌ಗಳಿಗೆ ವಾಸ್ತವ್ಯದಲ್ಲಿ ಬೆಂಬಲ ಒದಗಿಸುವುದು
ನಿಮ್ಮ ಸ್ಥಳವನ್ನು ಸ್ವಚ್ಛಗೊಳಿಸಿ ಮತ್ತು ನಿರ್ವಹಿಸಿ
ಒಳಾಂಗಣ ವಿನ್ಯಾಸ ಮತ್ತು ಸ್ಟೈಲಿಂಗ್
ಹೋಸ್ಟ್ ‌ ಮಾಡಲು ಪರವಾನಗಿಗಳನ್ನು ಪಡೆಯಿರಿ
ವಿಶೇಷ ಕೊಡುಗೆಗಳು
 

ಹೋಸ್ಟ್ ಮಾಡಲು ನಿಮಗೆ ಸಹಾಯ ಮಾಡುವ ಹೆಚ್ಚಿನ ನವೀಕರಣಗಳು

ನಿಮ್ಮ ಗಳಿಕೆಗಳು, ಈಗ ಹೆಚ್ಚು ಮೌಲ್ಯಯುತ ಒಳನೋಟಗಳೊಂದಿಗೆ

Airbnb ಸ್ಕ್ರೀನ್‌ಗಳು, ಗಳಿಕೆಯ ಡ್ಯಾಶ್‌‌ಬೋರ್ಡ್ ಅನ್ನು ತೋರಿಸುತ್ತಿವೆ ಮತ್ತು ಕಸ್ಟಮ್ ವರದಿ ರಚಿಸುವ ಹಂತಗಳನ್ನು ನಿಮಗೆ ವಿವರಿಸುತ್ತಿವೆ.
ನಿಮ್ಮ ಗಳಿಕೆ ವರದಿಗಳನ್ನು ಕಸ್ಟಮೈಸ್ ಮಾಡಿ, ಆದಾಯದ ಹರಿವಿಗೆ ಅನುಗುಣವಾಗಿ ಫಿಲ್ಟರ್ ಮಾಡಿ, ಮತ್ತು ಹಣಪಾವತಿಗಳು ಯಾವಾಗ ಬರುವುದೆಂದು ಸುಲಭವಾಗಿ ವೀಕ್ಷಿಸಿ.

ಚಾಟ್‌ಗೆ ಸಂದೇಶ ಅಪ್‌ಗ್ರೇಡ್‌ಗಳು ಲಭ್ಯವಿವೆ

Airbnb ಸ್ಕ್ರೀನ್‌ಗಳು ಹೋಸ್ಟ್ ಮತ್ತು ಗೆಸ್ಟ್ ನಡುವಿನ, ಹೊಸ ತ್ವರಿತ ಪ್ರತ್ಯುತ್ತರ ಟೆಂಪ್ಲೇಟ್ ಆಯ್ಕೆಗಳನ್ನು ಹೊಂದಿರುವ ಪಠ್ಯ ಸಂಭಾಷಣೆಯನ್ನು ತೋರಿಸುತ್ತಿವೆ.
ಹೊಸ ತ್ವರಿತ ಪ್ರತ್ಯುತ್ತರಗಳು, ಥ್ರೆಡೆಡ್ ಪ್ರತ್ಯುತ್ತರಗಳು, ಎಡಿಟ್ ‌ಮಾಡುವಿಕೆ ಮತ್ತು ಕಳುಹಿಸುವುದನ್ನು ರದ್ದುಗೊಳಿಸುವಂತಹ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ನಡೆಸಿ.
 

ಟ್ರಿಪ್ ಅನ್ನು ಈಗ ವೈಯಕ್ತಿಕ ಆವಶ್ಯಕತೆಗಳಿಗೆ ತಕ್ಕಂತೆ ಯೋಜಿಸಬಹುದು

ನೀವು ಎಲ್ಲಿಗೆ ಹೋಗಬಯಸುವಿರಿ ಎಂಬುದರೊಂದಿಗೆ ಪ್ರಾರಂಭವಾಗುವ ಹುಡುಕಾಟ

Airbnb ಸ್ಕ್ರೀನ್‌ಗಳು ಮರುವಿನ್ಯಾಸಗೊಳಿಸಲಾದ ಹುಡುಕಾಟ ಅನುಭವ ಮತ್ತು ಹೊಸದಾಗಿ ಸೂಚಿಸಿದ ಗಮ್ಯಸ್ಥಾನಗಳನ್ನು ತೋರಿಸುತ್ತಿವೆ. ಜೊತೆಗೆ ಸಮಯೋಚಿತ ಶೋಧ ಸಲಹೆ ಮತ್ತು ಹತ್ತಿರದ ಆಸಕ್ತಿಯ ಸ್ಥಳಗಳನ್ನು ಒಳಗೊಂಡಿರುವ ನಕ್ಷೆ ಕೂಡ ಇದೆ.
ಸೂಚಿಸಲಾದ ಗಮ್ಯಸ್ಥಾನಗಳು, ಇತ್ತೀಚೆಗೆ ವೀಕ್ಷಿಸಿದ ಲಿಸ್ಟಿಂಗ್‌ಗಳು ಮತ್ತು ಆಸಕ್ತಿಯ ಸ್ಥಳಗಳೊಂದಿಗೆ ನಕ್ಷೆಗಳಲ್ಲಿ ನಿಮ್ಮ ಹುಡುಕಾಟವನ್ನು ಸೀಮಿತಗೊಳಿಸಿಕೊಳ್ಳಿ.

ನಿಮಗೆ ಸೂಕ್ತವಾದ ಹೊಚ್ಚ-ಹೊಸ ಫಿಲ್ಟರ್‌ಗಳು

Airbnb ‌ಸ್ಕ್ರೀನ್‌ಗಳು ಮರುರೂಪಿಸಿರುವ ಫಿಲ್ಟರ್ ಅನುಭವ ಮತ್ತು ಹೊಸ ಶಿಫಾರಸು ಮಾಡಲಾದ ಫಿಲ್ಟರ್‌ಗಳನ್ನು ತೋರಿಸುತ್ತಿವೆ.
ನೀವು ಹೇಗೆ ಪ್ರಯಾಣಿಸುತ್ತೀರಿ ಎಂಬುದರ ಆಧಾರದ ಮೇಲೆ ಶಿಫಾರಸು ಮಾಡಿದ ಫಿಲ್ಟರ್‌ಗಳು ಈಗ ಲಭ್ಯ. ಮತ್ತು ಮರುವಿನ್ಯಾಸಗೊಳಿಸಿದ ಫಿಲ್ಟರ್‌ಗಳನ್ನು ತ್ವರಿತವಾಗಿ ಸೇರಿಸಬಹುದು ಮತ್ತು ತೆಗೆದುಹಾಕಬಹುದು.

ವೈಯಕ್ತೀಕರಿಸಿದ ವಿಶೇಷ ಆಕರ್ಷಣೆಗಳು ನಿಮಗೆ ವಿವರಗಳನ್ನು ಒದಗಿಸುತ್ತವೆ

Airbnb ಸ್ಕ್ರೀನ್‌ಗಳು ಲಿಸ್ಟಿಂಗ್ ಪುಟವನ್ನು ತೋರಿಸುತ್ತಿವೆ ಮತ್ತು ನಂತರ ಕೆಳಬದಿಗೆ ಸ್ಕ್ರಾಲ್ ಮಾಡಿದರೆ ಹೊಸ ವೈಯಕ್ತೀಕರಿಸಿದ ವಿಶೇಷ ಆಕರ್ಷಣೆಗಳನ್ನು ತೋರಿಸುತ್ತಿವೆ.
ಪ್ರಸ್ತುತವೆನ್ನಿಸುವ ಸೌಲಭ್ಯಗಳು ಮತ್ತು ಹತ್ತಿರದ ತಾಣಗಳಂತಹ ನಿಮಗೆ ಹೆಚ್ಚು ಮುಖ್ಯವಾದ ಹೊಸ ವಿಶೇಷ ಆಕರ್ಷಣೆಗಳಿದ್ದಾಗ ಮನೆಗಳನ್ನು ಹೋಲಿಸಿ ನೋಡುವುದು ಸುಲಭ.

ಮತ್ತು ಅದು ನಮ್ಮ ಚಳಿಗಾಲದ ರಿಲೀಸ್ ಆಗಿದೆ

ಸ್ಥಳವನ್ನು ಆಧರಿಸಿ ಬಳಕೆದಾರರ ಅನುಭವವು ಬದಲಾಗಬಹುದು.
ಸಹ‑ಹೋಸ್ಟ್ ನೆಟ್‌ವರ್ಕ್‌ನಲ್ಲಿರುವ ಹೋಸ್ಟ್‌ಗಳು ಸಾಮಾನ್ಯವಾಗಿ ಉನ್ನತ ರೇಟಿಂಗ್‌ಗಳು, ಕಡಿಮೆ ರದ್ದತಿ ದರಗಳು ಮತ್ತು ಉತ್ತಮ Airbnb ಹೋಸ್ಟಿಂಗ್ ಅನುಭವವನ್ನು ಹೊಂದಿರುತ್ತಾರೆ. ರೇಟಿಂಗ್‌ಗಳು ಅವರು ಹೋಸ್ಟ್ ಮಾಡುವ ಅಥವಾ ಸಹ‑ಹೋಸ್ಟ್ ಮಾಡುವ ಲಿಸ್ಟಿಂಗ್‌ಗಳ ಕುರಿತು ಗೆಸ್ಟ್‌ ವಿಮರ್ಶೆಗಳನ್ನು ಆಧರಿಸಿರುತ್ತವೆ ಮತ್ತು ಅವು ಸಹ‑ಹೋಸ್ಟ್‌ನ ಅನನ್ಯ ಸೇವೆಗಳನ್ನು ಪ್ರತಿನಿಧಿಸದಿರಬಹುದು.
ಸಹ‑ಹೋಸ್ಟ್ ನೆಟ್‌ವರ್ಕ್‌ ಅನ್ನು Airbnb Global Services Limited, Airbnb Living LLC ಮತ್ತು Airbnb Plataforma Digital Ltda ನಡೆಸುತ್ತಿವೆ. ಆಯ್ದ ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ. ಇನ್ನಷ್ಟು ತಿಳಿಯಿರಿ.