ಹೋಸ್ಟ್‌ಗಳಿಗೆ Airbnb ಎಷ್ಟು ಶುಲ್ಕ ವಿಧಿಸುತ್ತದೆ?
ಅನೇಕ ಜನರಿಗೆ, ಪ್ರಪಂಚದಾದ್ಯಂತದ ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸುವಾಗ ಹಣವನ್ನು ಗಳಿಸಲು ಹೋಸ್ಟಿಂಗ್ ಒಂದು ಮಾರ್ಗವಾಗಿದೆ. ಆದರೆ Airbnb ಎಷ್ಟು ಶುಲ್ಕ ವಿಧಿಸುತ್ತದೆ ಮತ್ತು ಇದು ಹೋಸ್ಟ್‌ಗಳು ಮತ್ತು ಗೆಸ್ಟ್ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
Airbnb ಸೇವಾ ಶುಲ್ಕಗಳು ಯಾವುವು ಮತ್ತು ಅವುಗಳನ್ನು ನಾವು ಏಕೆ ಹೊಂದಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯೊಂದಿಗೆ, ನಿಮಗೆ ಮತ್ತು ನಿಮ್ಮ ಸ್ಥಳಕ್ಕೆ ಅರ್ಥವಾಗುವಂತಹ ಬೆಲೆ ನಿಗದಿ ಕಾರ್ಯತಂತ್ರವನ್ನು ನೀವು ಹೊಂದಿಸಬಹುದು.
Airbnb ಎಷ್ಟು ಶುಲ್ಕ ವಿಧಿಸುತ್ತದೆ?
ಹೆಚ್ಚಿನ ಹೋಸ್ಟ್‌ಗಳು ಬುಕಿಂಗ್ ಉಪಮೊತ್ತದ 3% ರಷ್ಟು ಫ್ಲಾಟ್ ಸೇವಾ ಶುಲ್ಕವನ್ನು ಪಾವತಿಸುತ್ತಾರೆ. ಉಪಮೊತ್ತವು ನಿಮ್ಮ ರಾತ್ರಿಯ ಬೆಲೆ ಮತ್ತು ಶುಚಿಗೊಳಿಸುವ ಶುಲ್ಕದಂತಹ ಗೆಸ್ಟ್ಗಳಿಗೆ ನೀವು ವಿಧಿಸುವ ಯಾವುದೇ ಐಚ್ಛಿಕ ಶುಲ್ಕಗಳು ಮತ್ತು Airbnb ಶುಲ್ಕಗಳು ಮತ್ತು ತೆರಿಗೆಗಳನ್ನು ಒಳಗೊಂಡಿರುವುದಿಲ್ಲ. ಗೆಸ್ಟ್‌ಗಳು ಸಾಮಾನ್ಯವಾಗಿ ಬುಕಿಂಗ್ ಉಪಮೊತ್ತದ ಸುಮಾರು 14% ರಷ್ಟು ಸೇವಾ ಶುಲ್ಕವನ್ನು ಪಾವತಿಸುತ್ತಾರೆ.
ಆದ್ದರಿಂದ, ನೀವು 3-ರಾತ್ರಿ ವಾಸ್ತವ್ಯಕ್ಕಾಗಿ ರಾತ್ರಿಗೆ $100 USD ಶುಲ್ಕ ವಿಧಿಸುತ್ತಿದ್ದರೆ, ಜೊತೆಗೆ ಸ್ವಚ್ಛಗೊಳಿಸುವ ಶುಲ್ಕಕ್ಕಾಗಿ $60 USD ಅನ್ನು ವಿಧಿಸುತ್ತಿದ್ದರೆ, ನಿಮ್ಮ ಬುಕಿಂಗ್ ಉಪಮೊತ್ತ $360 USD ಆಗಿರುತ್ತದೆ. ಸಾಮಾನ್ಯವಾಗಿ ನಿಮ್ಮ ಬುಕಿಂಗ್ ಉಪಮೊತ್ತದ ($10.80 USD) 3% ರಷ್ಟು ಹೋಸ್ಟ್ ಸೇವಾ ಶುಲ್ಕವನ್ನು ನಿಮ್ಮ ಗಳಿಕೆಗಳಿಂದ ಕಡಿತಗೊಳಿಸಲಾಗುತ್ತದೆ ಮತ್ತು ಗೆಸ್ಟ್ಗಳಿಗೆ 14% ($50.40 USD) ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಮತ್ತು ಅವರು ಪಾವತಿಸುವ ಒಟ್ಟು ದರದಲ್ಲಿ ಸೇರಿಸಲಾಗುತ್ತದೆ. ಈ ಉದಾಹರಣೆಯಲ್ಲಿ:
- ನೀವು $349.20 USD ಗಳಿಸುತ್ತೀರಿ
- ನಿಮ್ಮ ಗೆಸ್ಟ್ $410.40 USD ಪಾವತಿಸುತ್ತಾರೆ
Airbnb ಯ ಸೇವಾ ಶುಲ್ಕಗಳು ಸ್ಪರ್ಧಾತ್ಮಕವಾಗಿವೆ. ಪಾವತಿ ಪ್ರಕ್ರಿಯೆಗಾಗಿ ನಾವು ಶುಲ್ಕ ವಿಧಿಸುವುದಿಲ್ಲ. ಇದು ಹೋಸ್ಟ್‌ಗಳು ತಮ್ಮ ಗಳಿಕೆಯ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಹೋಸ್ಟ್-ಮಾತ್ರ ಸೇವಾ ಶುಲ್ಕ
ಈ ಸಂರಚನೆಯು ಕಡಿಮೆ ಸಾಮಾನ್ಯವಾಗಿದೆ. ಹೋಸ್ಟ್‌ಗಳು ಸಂಪೂರ್ಣ ಸೇವಾ ಶುಲ್ಕವನ್ನು ಪಾವತಿಸುತ್ತಾರೆ, ಸಾಮಾನ್ಯವಾಗಿ ಬುಕಿಂಗ್ ಉಪಮೊತ್ತದ 14% ನಿಂದ 16%.**
ಹೋಸ್ಟ್-ಮಾತ್ರದ ಸೇವಾಶುಲ್ಕವು like ಹೋಟೆಲ್‌ಗಳು ಮತ್ತು ಸರ್ವೀಸ್ ಅಪಾರ್ಟ್‌ಮೆಂಟ್‌ಗಳಂತಹ ಸಾಂಪ್ರದಾಯಿಕ ಆತಿಥ್ಯದ ಲಿಸ್ಟಿಂಗ್‌ಗಳಿಗೆ ಅಗತ್ಯವಿದೆ. ನಿಮ್ಮ ಬಹುತೇಕ ಲಿಸ್ಟಿಂಗ್‌ಗಳು US, ಕೆನಡಾ, ಮೆಕ್ಸಿಕೊ, ಬಹಾಮಾಸ್, ಅರ್ಜೆಂಟಿನಾ, ಉರುಗ್ವೆ ಅಥವಾ ತೈವಾನ್‌ನಲ್ಲಿ ಇಲ್ಲದ ಹೊರತು—Airbnb ಗೆ ಸಂಪರ್ಕಗೊಳ್ಳಲು ನೀವು ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಅನ್ನು ಬಳಸಿದರೆ ಕೂಡ ನೀವು ಹೋಸ್ಟ್-ಮಾತ್ರದ ಸೇವಾ ಶುಲ್ಕವನ್ನು ಪಾವತಿಸುತ್ತೀರಿ.
ನೀವು ಗೆಸ್ಟ್‌ಗಳು ನೋಡುವ ದರದ ವಿವರವನ್ನು ಸರಳಗೊಳಿಸಲು ಬಯಸಿದರೆ, ದರನಿಗದಿಯ ಕಾರ್ಯತಂತ್ರವಾಗಿಯೂ ಹೋಸ್ಟ್-ಮಾತ್ರದ ಸೇವಾಶುಲ್ಕವನ್ನು ಪಾವತಿಸಲು ನೀವು ಆಯ್ಕೆ ಮಾಡಬಹುದು.
ಈ ಸೇವಾ ಶುಲ್ಕ ಬಗ್ಗೆ ಗೆಸ್ಟ್ಗಳಿಗೆ ತಿಳಿದಿದೆಯೇ?
*ಇಟಲಿಯಲ್ಲಿನ ಲಿಸ್ಟಿಂಗ್ಗಳೊಂದಿಗೆ, ಹೋಸ್ಟ್‌ಗಳು ಸೇರಿದಂತೆ, ಕೆಲವರು ಹೆಚ್ಚು ಪಾವತಿಸುತ್ತಾರೆ.
**ಅತ್ಯಂತ ಕಟ್ಟುನಿಟ್ಟಿನ ರದ್ದತಿ ನೀತಿಗಳನ್ನು ಹೊಂದಿರುವ ಹೋಸ್ಟ್‌ಗಳು ಅಧಿಕ ಸೇವಾ ಶುಲ್ಕಗಳನ್ನು ಪಾವತಿಸಬಹುದು ಮತ್ತು 28 ರಾತ್ರಿಗಳು ಅಥವಾ ಹೆಚ್ಚಿನ ಅವಧಿಯ ವಾಸ್ಯವ್ಯಗಳಿಗಾಗಿ ಸೇವಾ ಶುಲ್ಕಗಳು ಕಡಿಮೆಯಿರಬಹುದು.
ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.