Airbnb ಯಲ್ಲಿ ವ್ಯವಹಾರವನ್ನು ಪ್ರಾರಂಭಿಸುವುದು ಹೇಗೆ
ವಿಶೇಷ ಆಕರ್ಷಣೆಗಳು
ನೀವು ಎಷ್ಟು ಗಳಿಸಬಹುದು ಎಂದು ಅಂದಾಜು ಮಾಡಿ
ನಿಮ್ಮ ವ್ಯವಹಾರವನ್ನು ಹೇಗೆ ನಡೆಸುವುದು ಎಂದು ತಿಳಿಯಿರಿ
Airbnb ಯಲ್ಲಿ ಯಶಸ್ವಿ ಹೋಸ್ಟ್ ಆಗಲು ನೀವು ವ್ಯಾಪಾರ ನಡೆಸುವ ಅನುಭವವನ್ನು ಹೊಂದಿರಬೇಕಾಗಿಲ್ಲ. ಓಹಾಯೋದ ಕೊಲಂಬಸ್‍ನಲ್ಲಿರುವ ಸೂಪರ್‌ಹೋಸ್ಟ್‌ಗಳಾದ ಬ್ರೈಯನ್ ಮತ್ತು ಕ್ಯಾಥರೀನ್ ಅವರಿಂದ ತಿಳಿದುಕೊಳ್ಳಿ-ತಮ್ಮ ಬಳಿಯಿದ್ದ ಒಂದು ಹೆಚ್ಚುವರಿ ಮಲಗುವ ಕೋಣೆಯ ಲಿಸ್ಟಿಂಗ್ ಮಾಡುವ ಮೂಲಕ Airbnb ಯಲ್ಲಿ ಪ್ರಾರಂಭಿಸುವ ಮೊದಲು ಅವರಿಗೆ ಯಾವುದೇ ಸಣ್ಣ ವ್ಯವಹಾರ ಅಥವಾ ಆತಿಥ್ಯದ ಅನುಭವವಿರಲಿಲ್ಲ.
"ಎಂಟು ವರ್ಷಗಳ ನಂತರ, ನಾವು ನಾಲ್ಕು ವಿಭಿನ್ನ ಪಾಪರ್ಟಿಗಳನ್ನು ಹೋಸ್ಟ್ ಮಾಡುತ್ತಿದ್ದೇವೆ ಮತ್ತು ಬೆಡ್-ಅಂಡ್-ಬ್ರೇಕ್ ಫಾಸ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಬ್ರಿಯಾನ್ ಹೇಳುತ್ತಾರೆ.
ನೀವು ಗೆಸ್ಟ್‌ಗಳಿಗೆ ನಿಮ್ಮ ಮನೆ ಅಥವಾ ಬೇರೆ ಯಾವುದಾದರೂ ಸ್ಥಳವನ್ನು ವ್ಯಾಪಾರಕ್ಕೆ ತೆರೆಯುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು Airbnb ಯಲ್ಲಿ ಹೋಸ್ಟಿಂಗ್ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು ಎಂದು ಯೋಚಿಸುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ. ನೀವು ಎಷ್ಟು ಹಣ ಗಳಿಸಬಹುದು ಎಂಬುದನ್ನು ಕಂಡುಕೊಳ್ಳುವುದರಿಂದ ಹಿಡಿದು ಯಾವ ದಿನನಿತ್ಯದ ಸಾಮಗ್ರಿಗಳು ಬೇಕಾಗಬಹುದೆಂದು ತಿಳಿದುಕೊಳ್ಳುವವರೆಗೆ ನಿಮಗೆ ಸಹಾಯ ಮಾಡುವ ಕೆಲವು ಸರಳ ಹಂತಗಳು ಇಲ್ಲಿವೆ.
ನಿಮ್ಮ ಮಾರುಕಟ್ಟೆಯ ಮೌಲ್ಯಮಾಪನ ಮಾಡಿ
ಮೊದಲು, ನಿಮ್ಮ ಪ್ರದೇಶದಲ್ಲಿ ನಿಮ್ಮ ಸ್ಥಳವನ್ನು ಹೋಲುವ Airbnb ಯ ಇತರ ಸ್ಥಳಗಳು ಮತ್ತು ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್‌ಗಳನ್ನು ಪರಿಶೀಲಿಸಿ. ಅವುಗಳು ಏನನ್ನು ನೀಡುತ್ತಿವೆ ಮತ್ತು ನೀವು ಏನನ್ನು ನೀಡಬಹುದು ಎನ್ನುವ ಬಗ್ಗೆ ಯೋಚಿಸಿ.
ನಿಮ್ಮ ಸ್ಥಳವನ್ನು ಬುಕ್ ಮಾಡಬಹುದಾದ ಸಂದರ್ಶಕರನ್ನು ಪರಿಗಣಿಸಿ. ರಜೆಯಲ್ಲಿ ನಿಮ್ಮ ಪ್ರದೇಶದಲ್ಲಿ ತುಂಬಾ ವ್ಯವಹಾರ ಸಂಬಂಧಿತ ಪ್ರಯಾಣಿಕರು ಅಥವಾ ಕುಟುಂಬಗಳು ಬರುತ್ತಾರೆಯೇ? ನ್ಯಾಷನಲ್ ಪಾರ್ಕ್‌ಗಳು ಅಥವಾ ಐತಿಹಾಸಿಕ ತಾಣಗಳಂತಹ ಸ್ಥಳೀಯ ಆಕರ್ಷಣೆಗಳಿವೆಯೇ? ಈ ಮಾಹಿತಿಯು ವಿನ್ಯಾಸ, ಸೌಲಭ್ಯಗಳು ಮತ್ತು ನೀವು ನೀಡಲು ಬಯಸುವ ವಾಸ್ತವ್ಯದ ಅವಧಿಯ ಬಗ್ಗೆ ನಿಮ್ಮ ನಿರ್ಧಾರಗಳಿಗೆ ಸಹಾಯ ಮಾಡಬಹುದು.
ನೀವು ಹೋಸ್ಟಿಂಗ್ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಪ್ರದೇಶದಲ್ಲಿ ಅಲ್ಪಾವಧಿಯ ಬಾಡಿಗೆಗಳಿಗೆ ಯಾವ ಕಾನೂನುಗಳು ಮತ್ತು ತೆರಿಗೆಗಳು ಅನ್ವಯವಾಗುತ್ತವೆ ಎಂಬುದನ್ನು ಕಂಡುಹಿಡಿಯುವುದು ಮುಖ್ಯವಾಗಿರುತ್ತದೆ. Airbnb ಗೆ ನಿಮಗೆ ಕಾನೂನು ಮಾರ್ಗದರ್ಶನ ಅಥವಾ ತೆರಿಗೆ ಸಲಹೆಯನ್ನು ನೀಡಲು ಸಾಧ್ಯವಿಲ್ಲವಾದರೂ ಹೋಸ್ಟಿಂಗ್ ನಿಯಮಗಳ ಬಗ್ಗೆ ಮಾಹಿತಿಯನ್ನು ಹುಡುಕಲು ನಾವು ನಿಮಗೆ ಸಹಾಯ ಮಾಡಬಹುದು.ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಅಂದಾಜು ಮಾಡಿ
ನೀವು ಕೆಲವು ಮಾರುಕಟ್ಟೆಯ ಸಂಶೋಧನೆಗಳನ್ನು ಮಾಡಿದ ನಂತರ, ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಅಂದಾಜು ಮಾಡಲು ನಾವು ನಿಮಗೆ ಸಹಾಯ ಮಾಡಬಹುದು. ನ ಆದಾಯದ ಗುರಿಗಳನ್ನು ಅಳವಡಿಸಿಕೊಳ್ಳುವಾಗ, ನಿಮ್ಮ ವೆಚ್ಚಗಳು ಮತ್ತು ನಿಮ್ಮ ಬೆಲೆಯ ತಂತ್ರದ ಬಗ್ಗೆಯೂ ನೀವು ಯೋಚಿಸಬಯಸಬಹುದು:
ನಿಮ್ಮ ವೆಚ್ಚಗಳನ್ನು ಪಟ್ಟಿ ಮಾಡಿ
ಸಂಭಾವ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳಲು, ನಿಮ್ಮ ಸ್ಥಳವನ್ನು ಬುಕಿಂಗ್‍ಗೆ ಸಿದ್ಧಗೊಳಿಸಲು ಅಲಂಕಾರ, ವೈಫೈ ಮತ್ತು ಇತರ ಮೂಲಭೂತ ಖರ್ಚುಗಳಂತಹ ನಿಮ್ಮ ಮುಂಗಡ ವೆಚ್ಚಗಳನ್ನು ಅಂದಾಜು ಮಾಡಲು - ಹಾಗೆಯೇ ಬಟ್ಟೆಗಳು, ಶೌಚಾಲಯದ ವಸ್ತುಗಳು, ಶುಚಿಗೊಳಿಸುವ ಸೇವೆಗಳು ಅಥವಾ ಭೋಗ್ಯದ ಪಾವತಿಗಳಂತಹ ನಡೆಯುತ್ತಿರುವ ಅಥವಾ ಮರುಕಳಿಸುವ ವೆಚ್ಚಗಳನ್ನು ಅಂದಾಜು ಮಾಡಲು. ಅಗತ್ಯವಿರುವ ರಿಪೇರಿ ಅಥವಾ ವಾರ್ಷಿಕ ಚಿಮಣಿ ತಪಾಸಣೆಗಳಂತಹ ನಿರ್ವಹಣಾ ವೆಚ್ಚಗಳನ್ನು ಸಹ ಬರೆದಿಡಲು ಮರೆಯದಿರಿ.
ನಿಮ್ಮ ಬೆಲೆಯ ತಂತ್ರವನ್ನು ಹೊಂದಿಸಿ
ನಿಮ್ಮ ಬೆಲೆಯ ತಂತ್ರವನ್ನು ಹೊಂದಿಸುವಾಗ,ವರ್ಷದುದ್ದಕ್ಕೂ ಇತರ ಬಾಡಿಗೆಗಳು ಯಾವ ರೀತಿಯ ಶುಲ್ಕ ವಿಧಿಸುತ್ತಿವೆ ಮತ್ತು ನಿಮ್ಮ ಆರಂಭಿಕ ಬೆಲೆಯನ್ನು ಅವುಗಳಿಗೆ ಹೇಗೆ ಹೊಂದಿಸಬಹುದೆಂದು ತಿಳಿಯಿರಿ. ನಿಮ್ಮ ಬೆಲೆಯನ್ನು ಕಾಲೋಚಿತವಾಗಿ, ಅಂದರೆ ವಾರಾಂತ್ಯಗಳಲ್ಲಿ ಮತ್ತು ದೊಡ್ಡ ಈವೆಂಟ್‍ಗಳ ಸಮಯದಲ್ಲಿ ನವೀಕರಿಸುವ ಮೂಲಕ ನೀವು ಬೇಡಿಕೆಗೆ ಅನುಗುಣವಾಗಿ ಅದನ್ನು ಸರಿಹೊಂದಿಸಬಹುದು.
ನಿಮ್ಮ ರಾತ್ರಿಯ ಬೆಲೆಯ ಜೊತೆಗೆ, ಗೆಸ್ಟ್‌ಗಳು ಸೇವಾ ಶುಲ್ಕವನ್ನು ಮತ್ತು ನೀವು ಸೇರಿಸುವ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ನೀವು ಫೈವ್ ಸ್ಟಾರ್ ವಿಮರ್ಶೆಗಳನ್ನು ಪಡೆಯುತ್ತಿದ್ದಂತೆ ನಿಮ್ಮ ಬೆಲೆಯನ್ನು ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ, ಆದ್ದರಿಂದ ಕೆಳಗಿನಿಂದ ಪ್ರಾರಂಭಿಸಲು ಹಿಂಜರಿಯಬೇಡಿ.
ಸ್ಮಾರ್ಟ್ ದರವನ್ನು ಪರಿಗಣಿಸಿ
ನಿಮ್ಮ ದರವನ್ನು ಸ್ವಯಂಚಾಲಿತಗೊಳಿಸಲು, ನೀವು ಸ್ಮಾರ್ಟ್ ದರವನ್ನುಆನ್ ಮಾಡಬಹುದು. ಸ್ಮಾರ್ಟ್ ದರದ ಟೂಲ್ ಋತುಗಳು ಮತ್ತು ಬೇಡಿಕೆಯೂ ಸೇರಿದಂತೆ 70ಕ್ಕೂ ಹೆಚ್ಚು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ-ಮತ್ತು ನೀವು ಕನಿಷ್ಠ ಪ್ರತೀ ರಾತ್ರಿಯ ದರವನ್ನು ಹೊಂದಿಸಬಹುದು, ಇದರಿಂದ ನಿಮ್ಮ ಬೆಲೆ ಎಂದಿಗೂ ಆ ಮೊತ್ತಕ್ಕಿಂತ ಕಡಿಮೆಯಾಗುವುದಿಲ್ಲ.
ನೀವು ಹೇಗೆ ಹೋಸ್ಟ್ ಮಾಡುತ್ತೀರಿ ಎಂಬುದನ್ನು ನಿರ್ಧರಿಸಿ
Airbnbಯಲ್ಲಿ ಹೋಸ್ಟ್ ಮಾಡಲು ಹಲವಾರು ವಿಭಿನ್ನ ಮಾರ್ಗಗಳಿವೆ ಮತ್ತು ಕೆಲವು ಹೋಸ್ಟ್‌ಗಳು ಇತರರಿಗಿಂತ ಹೋಸ್ಟಿಂಗ್‌ಗೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ನಿಮ್ಮ ಲಭ್ಯತೆ ಎಷ್ಟಿರಬಹುದೆಂದು ಅಂದಾಜಿಸಿ, ಮತ್ತು ನಿಮಗೆ ಯಾವ ಪರಿಕರಗಳು ಮತ್ತು ಸೇವೆಗಳು ಸಹಾಯಕವಾಗಬಹುದು ಎಂಬುದನ್ನು ಅನ್ವೇಷಿಸಿ
.ಬ್ರೈಯನ್ ಮತ್ತು ಕ್ಯಾಥರೀನ್ ಹೋಸ್ಟಿಂಗ್ ಮಾಡಲು ಪ್ರಾರಂಭಿಸಿದ ಮೊದಲಿನಲ್ಲಿ, ಅವರು ಲಾಂಡ್ರಿಯಿಂದ ಮೆಂಟೇನನ್ಸ್ ಕೆಲಸದವರೆಗೆ ಎಲ್ಲವನ್ನೂ ಮಾಡಿದರು ಎಂದು ಬ್ರಿಯಾನ್ ಹೇಳುತ್ತಾರೆ. ಅಂತಿಮವಾಗಿ, ಅವರು ಅವುಗಳಲ್ಲಿ ಕೆಲವು ಸೇವೆಗಳಿಗೆ ಪಾವತಿಸಲು ನಿರ್ಧರಿಸಿದರು.
ಈ ಕೆಳಗಿನಂಥ ಉಪಕರಣಗಳ ಸಹಾಯದಿಂದ ನಿಮ್ಮ ವ್ಯವಹಾರದ ಕೆಲವು ಅಂಶಗಳನ್ನು ನೀವು ಸ್ವಯಂಚಾಲಿತಗೊಳಿಸಬಹುದುಶೆಡ್ಯೂಲ್ ಮಾಡಿರುವ ಮೆಸೇಜ್‍ಗಳು ,ತ್ವರಿತ ಪ್ರತಿಕ್ರಿಯೆಗಳು ಮತ್ತು ತ್ವರಿತ ಬುಕಿಂಗ್ನೀವು ಯಾವಾಗ ಮತ್ತು ಎಷ್ಟು ಬಾರಿ Airbnb ನಲ್ಲಿ ಹೋಸ್ಟ್ ಮಾಡುತ್ತೀರಿ ಎಂಬುದನ್ನು ನೀವು ನಿರ್ಧರಿಸುತ್ತೀರಿ. ಕ್ಯಾಲೆಂಡರ್ ಮತ್ತು ಬುಕಿಂಗ್ ಸೆಟ್ಟಿಂಗ್‍ಗಳನ್ನು ಬಳಸಿಕೊಂಡು ನೀವು ನಿಮ್ಮ ಲಭ್ಯತೆಯನ್ನು ಹೊಂದಿಸಬಹುದು, ಕನಿಷ್ಠ ಮತ್ತು ಗರಿಷ್ಠ ವಾಸ್ತವ್ಯದ ಅವಧಿಯನ್ನು ಹೊಂದಿಸಬಹುದು ಮತ್ತು ಇನ್ನೂ ಹೆಚ್ಚಿನದನ್ನು ಮಾಡಬಹುದು.
ಅನನ್ಯ ಗೆಸ್ಟ್ ಅನುಭವವನ್ನು ರಚಿಸಿ
ಒಬ್ಬ ಹೋಸ್ಟ್ ಆಗಿ ನಿಮ್ಮ ಯಶಸ್ಸು ನಿಮ್ಮ ಗೆಸ್ಟ್‌ಗಳಿಗೆ ಸ್ಮರಣೀಯ ಅನುಭವವನ್ನು ಸೃಷ್ಟಿಸುವ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ನಿಮ್ಮ ಸ್ಥಳಕ್ಕೆ ನೀವು ಎಂಥಹ ಗೆಸ್ಟ್‌ಗಳನ್ನು ಆಕರ್ಷಿಸಲು ಬಯಸುತ್ತೀರಿ ಎನ್ನುವುದನ್ನು ನಿರ್ಧರಿಸಿ - ಉದಾಹರಣೆಗೆ ಸಾಕುಪ್ರಾಣಿಗಳನ್ನು ಹೊಂದಿರುವವರು ಜೋಡಿಗಳು,ಕುಟುಂಬಗಳು, ಅಥವಾ ಮನೆಯಿಂದ ಕೆಲಸ ಮಾಡುವವರು- ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಸೌಕರ್ಯಗಳನ್ನು ಒದಗಿಸಿ. ನಿಮ್ಮ ಲಿಸ್ಟಿಂಗ್ ಎದ್ದು ಕಾಣುವಂತೆ ಮಾಡುವ ಮತ್ತು ನಿಮ್ಮ ಗೆಸ್ಟ್‌ಗಳಿಗೆ ಅವರು ವಿಶೇಷವೆಂದು ಅನಿಸುವಂತೆ ಮಾಡುವವಿವರಗಳನ್ನು ಪರಿಗಣಿಸಿ ಉದಾಹರಣೆಗೆ ಚೆನ್ನಾಗಿ ಯೋಚಿಸಿ ಬರೆದ ಒಂದು ಸ್ವಾಗತ ಪತ್ರ ಅಥವಾ ಸ್ಥಳೀಯ ನೆನಪಿನ ಕಾಣಿಕೆಗಳು.
"ನಮ್ಮ ಮನೆಗಳ ಹೊರಭಾಗದ ಮೇಲೆ ಚಿತ್ರಗಳನ್ನು ಬಿಡಿಸಲು ನಾವು ಸ್ಥಳೀಯ ಕಲಾವಿದರೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಅವುಗಳನ್ನು ನಮ್ಮ ಅತಿಥಿಗಳು ಬಳಸಬಹುದಾದ ಅಥವಾ ಮನೆಗೆ ಕಳುಹಿಸಬಹುದಾದ ಸಣ್ಣ ಪೋಸ್ಟ್ ಕಾರ್ಡ್‌ಗಳಾಗಿ ಪರಿವರ್ತಿಸಿದ್ದೇವೆ" ಎಂದು ಕ್ಯಾಥರೀನ್ ಹೇಳುತ್ತಾರೆ.
ನಿಮ್ಮ ಸ್ಥಳವನ್ನು ಪ್ರಚಾರ ಮಾಡಿ
ನಿಮ್ಮ ಸ್ಥಳವನ್ನು ಲಿಸ್ಟ್ ಮಾಡುವುದು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ರಿಸರ್ವೇಶನ್ ದೃಡಪಟ್ಟಾಗ ಮಾತ್ರವೇ ನೀವು ಸೇವಾ ಶುಲ್ಕವನ್ನು ಪಾವತಿಸುತ್ತೀರಿ. ನಾವು ಈ ಪ್ರಕ್ರಿಯೆಯನ್ನು ಸರಳ ಮತ್ತು ನೇರವಾಗಿಸುವ ಗುರಿ ಹೊಂದಿದ್ದೇವೆ: ಈ ಸರಳ ಹಂತಗಳನ್ನು ಅನುಸರಿಸಿ.
ಕ್ಯಾಥರೀನ್ ಅವರ ಪ್ರಕಾರ, ಒಳ್ಳೆಯ ಫೋಟೋಗಳು ಮತ್ತು ಆಕರ್ಷಕ ಲಿಸ್ಟಿಂಗ್ ಶೀರ್ಷಿಕೆಗಳು Airbnb ಯಲ್ಲಿ ವಾಸ್ತವ್ಯವನ್ನು ಬ್ರೌಸ್ ಮಾಡುವಾಗ ಜನರು ಗಮನಿಸುವ ಮೊದಲ ಕೆಲವು ವಿಷಯಗಳಾಗಿವೆ. ಕೆಲವು ಹೋಸ್ಟ್‌ಗಳು ಸ್ಮಾರ್ಟ್‌ಫೋನ್ ಬಳಸಿ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ನೀವು ವೃತ್ತಿಪರರನ್ನು ನೇಮಿಸಿಕೊಳ್ಳುವುದನ್ನು ಸಹ ಪರಿಗಣಿಸಬಹುದು.ಯಾವುದೇ ಸ್ಥಳವಾದರೂ ಯಾರಿಗಾದರೂ ಪರಿಪೂರ್ಣವಾಗಿ ಹೊಂದಬಹುದು ಎನ್ನುವುದನ್ನು ನೆನಪಿನಲ್ಲಿಡಿ. ನಿಮ್ಮ ಲಿಸ್ಟಿಂಗ್ ವಿವರಗಳು ಮತ್ತು ಫೋಟೋಗಳು ನಿಖರವಾದ ನಿರೀಕ್ಷೆಗಳನ್ನು ಸೃಷ್ಟಿಸುವುದನ್ನು ಖಚಿತಪಡಿಸಿಕೊಳ್ಳಿ.
Airbnb ಯಿಂದ ಬೆಂಬಲ ಪಡೆಯಿರಿ
Airbnb ಪ್ರತಿ ಹೆಜ್ಜೆಯಲ್ಲೂ ಹೋಸ್ಟ್‌ಗಳಿಗೆ ಬೆಂಬಲ ನೀಡಲು ಶ್ರಮಿಸುವುದರಿಂದ ನೀವು ಆತ್ಮವಿಶ್ವಾಸದಿಂದ ಹೋಸ್ಟ್ ಮಾಡಬಹುದು.
- ಹೋಸ್ಟ್ಗಳಿಗಾಗಿ AirCover Airbnb ಯಲ್ಲಿ ಮಾತ್ರ ಸರ್ವಾಂಗೀಣ ರಕ್ಷಣೆಯನ್ನು ಒದಗಿಸುತ್ತದೆ, ಯಾವಾಗಲೂ ಸೇರಲ್ಪಟ್ಟಿರುತ್ತದೆ, ಯಾವಾಗಲೂ ಉಚಿತವಾಗಿರುತ್ತದೆ
- ಇತರ ಹೋಸ್ಟ್ಗಳೊಂದಿಗೆ ಸಂಪರ್ಕ ಸಾಧಿಸಲು, ಸಮುದಾಯ ಕೇಂದ್ರಕ್ಕೆ ಹೋಗಿ ಅಥವಾ ನಿಮ್ಮ ಸ್ಥಳೀಯ ಹೋಸ್ಟ್ ಕ್ಲಬ್ ಅನ್ನು ಸೇರಿಕೊಳ್ಳಿ.
- ನೀವು ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಪ್ರಾರಂಭಿಸಲು ಸಹಾಯ ಬೇಕಾದಲ್ಲಿ ನೀವು ಸೂಪರ್ಹೋಸ್ಟ್ ಅನ್ನು ಕೂಡ ಕೇಳಬಹುದು
- ಇನ್ನಷ್ಟು ಹೋಸ್ಟಿಂಗ್ ಸಲಹೆಗಳನ್ನು ಸಂಪನ್ಮೂಲ ಕೇಂದ್ರದಲ್ಲಿ ನೋಡಿ.
- ನಮ್ಮ ಬದ್ಧವಾದ ಗ್ರಾಹಕ ಬೆಂಬಲ ತಂಡವು 24/7 ಲಭ್ಯವಿರುತ್ತದೆ.
ವಿಶೇಷ ಆಕರ್ಷಣೆಗಳು
ನೀವು ಎಷ್ಟು ಗಳಿಸಬಹುದು ಎಂದು ಅಂದಾಜು ಮಾಡಿ
ನಿಮ್ಮ ವ್ಯವಹಾರವನ್ನು ಹೇಗೆ ನಡೆಸುವುದು ಎಂದು ತಿಳಿಯಿರಿ