ಹೋಸ್ಟಿಂಗ್ ಸವಾಲುಗಳನ್ನು ತಡೆಯಲು ಸಹಾಯ ಮಾಡುವುದು ಹೇಗೆ

ಸವಾಲಿನ ಕ್ಷಣಗಳನ್ನು ಹೋಸ್ಟ್ ಆಗಿ ಪರಿಹರಿಸಲು ಸೂಪರ್‌ಹೋಸ್ಟ್ ಡಯಾನಾ ತಮ್ಮ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.
Airbnb ಅವರಿಂದ ಡಿಸೆಂ 11, 2019ರಂದು
3 ನಿಮಿಷದ ವೀಡಿಯೊ
ಆಗ 25, 2022 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಸಮಸ್ಯೆ ಪರಿಹಾರವನ್ನು ಸುಲಭಗೊಳಿಸಲು ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಸಹ-ಹೋಸ್ಟ್‌ನ ಸಂಪರ್ಕ ಮಾಹಿತಿ ಸುಲಭವಾಗಿ ಲಭ್ಯವಿರಲಿ

  • ದೈನಂದಿನ ನಿರ್ವಹಣೆ ನಿಮ್ಮ ಸ್ಥಳವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ

  • ಸವಾಲುಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಮುಕ್ತ ಸಂವಹನ ಮತ್ತು ಪರಾನುಭೂತಿ ನಿಮಗೆ ಸಹಾಯ ಮಾಡುತ್ತದೆ

ನಿಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಕೆಲವೊಮ್ಮೆ ಸಮಸ್ಯೆಗಳು ಸಂಭವಿಸುತ್ತವೆ. ಕೆಲವೊಮ್ಮೆ ನೀವು ಅವರಿಗೆಂದು ಬಿಟ್ಟುಹೋಗಿರುವ ಬೀಗವನ್ನು ಗೆಸ್ಟ್‌ಗೆ ಹುಡುಕಿಕೊಳ್ಳಲಾಗದೇ ಇರಬಹುದು, ಅಥವಾ ಪ್ಲಂಬಿಂಗ್ ಕೈಕೊಟ್ಟಿರಬಹುದು. ದೊಡ್ಡ ಸಮಸ್ಯೆಗಳು ಎದುರಾಗುವುದು ಬಹಳ ಅಪರೂಪವಾದರೂ, ಯಶಸ್ವೀ ಹೋಸ್ಟ್‌ಗಳು ಅನಿರೀಕ್ಷಿತ ಘಟನೆಗಳನ್ನು ಎದುರಿಸುವುದಕ್ಕೂ ಯೋಜನೆ ಹೊಂದಿರುತ್ತಾರೆ.

ಸವಾಲಿನ ಹೋಸ್ಟಿಂಗ್ ಕ್ಷಣಗಳನ್ನು ನಿಭಾಯಿಸಲು ಏನು ಮಾಡಬಹುದೆಂದು ಇಲ್ಲಿ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡಿನ ಸೂಪರ್‌ಹೋಸ್ಟ್ ಆಗಿರುವ ಡಯಾನಾ ಶಿಫಾರಸು ಮಾಡಿದ್ದಾರೆ.

1. ಬೆಂಬಲ ತಂಡವನ್ನು ಒಟ್ಟುಗೂಡಿಸಿ

ಹೋಸ್ಟಿಂಗ್ ಎಂಬುದು ಸಮುದಾಯದ ಕುರಿತಾಗಿದ್ದು, ಆ ಸಮುದಾಯದಲ್ಲಿ ನಿಮ್ಮ ಹೋಸ್ಟಿಂಗ್ ವ್ಯವಹಾರ ಸುಗಮವಾಗಿ ಸಾಗಲು ಸಹಾಯಕ್ಕೆ ಬರುವ ವ್ಯಕ್ತಿಗಳೂ ಸೇರಿದ್ದಾರೆ.

“ಆರಂಭದಲ್ಲೇ ನಮ್ಮಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಮನೆ ಕ್ಲೀನರ್ ಹೆಸರುಗಳು ಮತ್ತು ಸಂಖ್ಯೆಗಳು ಇವೆ,” ಎಂದು ಡಯಾನಾ ಹೇಳುತ್ತಾರೆ. ಮತ್ತು ಡಯಾನಾ ಅವರು ಪಟ್ಟಣದಿಂದ ಹೊರ ಹೋಗಿರುವಾಗ, ಬ್ಯಾಕಪ್ ಹೋಸ್ಟ್ ಆಗಿ ಅವರ ಸಹೋದರಿ ಕರೆ ಸ್ವೀಕರಿಸುತ್ತಾರೆ. "ಏನಾದರೂ ಸಮಸ್ಯೆ ಉದ್ಭವಿಸಿದರೆ ನಾವು ಎಂದಿಗೂ ಅಸಹಾಯಕರಾಗುವುದಿಲ್ಲ."

ಆರಂಭದಲ್ಲೇ ನಮ್ಮಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಮನೆ ಕ್ಲೀನರ್ ಹೆಸರುಗಳು ಮತ್ತು ಸಂಖ್ಯೆಗಳು ಇವೆ.
Diana,
ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಾ

2. ದೈನಂದಿನ ನಿರ್ವಹಣೆ ನಡೆಸಿ

ಸೋರುತ್ತಿರುವ ಪೈಪ್ ಅಥವಾ ಹಾಳಾದ ಹೀಟರ್ ಅನ್ನು ತ್ವರಿತವಾಗಿ ರಿಪೇರಿ ಮಾಡಲು ಸನ್ನದ್ಧರಾಗಿರುವುದಕ್ಕಿಂತ ಉತ್ತಮವಾದದ್ದು ಯಾವುದು? ಸಮಸ್ಯೆ ಸಂಭವಿಸದಂತೆ ತಡೆಗಟ್ಟುವುದು ಆದ್ಯತೆ.

"ನಾನು ನಿರ್ವಹಣೆ ಪರಿಶೀಲನಾ ಪಟ್ಟಿಯನ್ನು ಹೊಂದಿದ್ದು, ಅದನ್ನು ಪ್ರತಿ ವರ್ಷ ಪರಿಶೀಲಿಸುತ್ತೇನೆ," ಎಂದು ಡಯಾನಾ ಹೇಳುತ್ತಾರೆ. "ಈ ಕೆಲವು ಕೆಲಸಗಳನ್ನು ನಾನೇ ಮಾಡುತ್ತೇನೆ, ಇತರ ಕೆಲಸಗಳಿಗಾಗಿ ನಾನು ವೃತ್ತಿಪರರನ್ನು ನೇಮಿಸಿಕೊಳ್ಳುತ್ತೇನೆ. ಪ್ರತಿಯೊಂದು ಸ್ಥಳವೂ ವಿಭಿನ್ನ, ಆದರೆ ನಿಮ್ಮ ಸ್ಥಳವನ್ನು ಗೆಸ್ಟ್‌ಗಳಿಗಾಗಿ ಉತ್ತಮ ಸ್ಥಿತಿಯಲ್ಲಿಡಲು ಏನು ಮಾಡಬಹುದೆಂದು ಖಚಿತವಾಗಿ ಗುರುತಿಸುವುದು ಮುಖ್ಯ.”

ಡಯಾನಾ ಅವರ ವಾರ್ಷಿಕ ನಿರ್ವಹಣೆ ಪರಿಶೀಲನಾ ಪಟ್ಟಿ ಇವುಗಳನ್ನು ಒಳಗೊಂಡಿದೆ:

  • ಎಲೆಗಳು ಮತ್ತು ಇತರ ಕಸಗಳನ್ನು ಚರಂಡಿಗಳಿಂದ ತೆರವುಗೊಳಿಸುವುದು
  • ಹೀಟಿಂಗ್, ವಾತಾಯನ ಮತ್ತು ಹವಾನಿಯಂತ್ರಣ ಘಟಕಗಳೆಲ್ಲ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು
  • ತಲುಪಲು ಕಷ್ಟವಾಗುವಂತಹ ಸ್ಕೈಲೈಟ್‌ಗಳನ್ನು ಶುಚಿಗೊಳಿಸಿ, ಸ್ಥಳದಲ್ಲಿ ಸಾಕಷ್ಟು ಬೆಳಕಿರುವಂತೆ ಮಾಡುವುದು

3. ಸಂವಹನವನ್ನು ಆದ್ಯತೆಯನ್ನಾಗಿಸಿ

ಗೆಸ್ಟ್‌ಗಳ ಜೊತೆ ಪರಿಣಾಮಕಾರಿ ಸಂವಹನ ಎಂದರೆ ಪ್ರಾಮಾಣಿಕವಾಗಿ ಮತ್ತು ವಾಸ್ತವಿಕ ನೆಲೆಯಲ್ಲಿ ವ್ಯವಹರಿಸುವುದು.

“ಯಾವಾಗಲೂ ಅತಿಯಾಗಿ ಭರವಸೆ ನೀಡುವುದರ ಬದಲು ಅತಿಯಾಗಿ ಸಂವಹನ ನಡೆಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ,” ಎಂದು ಡಯಾನಾ ಹೇಳುತ್ತಾರೆ. “ನನಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ ಆಗದಿದ್ದರೂ, ನಾನು ಏನು ಪ್ರಯತ್ನ ನಡೆಸುತ್ತಿದ್ದೇನೆಂಬುದನ್ನು ಗೆಸ್ಟ್‌ ಗೆ ತಿಳಿಸುತ್ತೇನೆ.”

ಗೆಸ್ಟ್ ಆಗಮನದ ಹೊತ್ತಿನಲ್ಲೇ ಪೈಪೊಂದು ಒಡೆದಾಗ, ಡಯಾನಾ ತಕ್ಷಣ ಫೋನ್ ಮಾಡಿದರು.

"ನಾನು ಗೆಸ್ಟ್‌ಗೆ ಕರೆ ಮಾಡಿ, ನಾವು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಎಂದು ಅವರಿಗೆ ತಿಳಿಸಿದೆ ಮತ್ತು ಅವರ ಚೆಕ್-ಇನ್ ಸಮಯವನ್ನು ಸ್ವಲ್ಪ ಮುಂದೂಡುವುದು ಸಾಧ್ಯವೇ ಎಂದು ಕೇಳಿದೆ," ಎಂದು ಡಯಾನಾ ಹೇಳುತ್ತಾರೆ. “ನಾನು ಅವರಿಗೆ ವಿಳಂಬಿತ ಚೆಕ್‌ಔಟ್ ಅನ್ನು ಒದಗಿಸಿದೆ, ಅದನ್ನು ಅವರು ಇಷ್ಟಪಟ್ಟರು ಮತ್ತು ಒಂದು ಬಾಟಲ್ ವೈನ್ ಮತ್ತು ಧನ್ಯವಾದ ಪತ್ರವನ್ನು ಬಿಟ್ಟುಹೋದರು. ಹೆಚ್ಚಿನ ಗೆಸ್ಟ್‌ಗಳಿಗೆ, ಮುಕ್ತ ಸಂವಹನ ಮತ್ತು ಮೆಚ್ಚುಗೆಯ ಸಣ್ಣ ದ್ಯೋತಕಗಳು - ಅದು ವೈನ್ ಇರಬಹುದು ಅಥವಾ ಸ್ಥಳೀಯ ಕಾಫಿ ಶಾಪ್‌ಗೆ ಗಿಫ್ಟ್ ಕಾರ್ಡ್ ಇರಬಹುದು - ಬಹಳ ಪರಿಣಾಮಕಾರಿ."

ಯಾವಾಗಲೂ ಅತಿಯಾಗಿ ಭರವಸೆ ನೀಡುವುದರ ಬದಲು ಅತಿಯಾಗಿ ಸಂವಹನ ನಡೆಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ.
Diana,
ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಾ

4. ಆಲಿಸಿ ಮತ್ತು ಪರಾನುಭೂತಿ ತೋರಿಸಿ

"ನಮ್ಮ ಮನೆಯ ಬಾಗಿಲುಗಳು ಸ್ವಲ್ಪ ವಿಶಿಷ್ಟ ತಂತ್ರದವಾಗಿದ್ದು, ನಾನು ನಮ್ಮ ಮನೆಯ ಕೈಪಿಡಿ ಮತ್ತು ಚೆಕ್-ಇನ್ ಸೂಚನೆಗಳಲ್ಲಿ ಅದರ ಬಗ್ಗೆ ವಿವರಗಳನ್ನು ಸೇರಿಸಿದ್ದರೂ ಕೂಡ, ಗೆಸ್ಟ್‌ಗಳು ಹೆಚ್ಚಾಗಿ ಅದನ್ನು ತೆರೆಯುವುದು ಹೇಗೆ ಎಂದು ತಿಳಿದಿರುವುದಿಲ್ಲ," ಎಂದು ಡಯಾನಾ ಹೇಳುತ್ತಾರೆ. "ಇದು ಸಂಭವಿಸಿದಾಗ, ನಾನು ಯಾವಾಗಲೂ ಅವರ ಹತಾಶೆಗಳನ್ನು ಆಲಿಸುತ್ತೇನೆ ಮತ್ತು ಫೋನ್ ಮೂಲಕ ಅಥವಾ ಹಾಜರಿದ್ದು, ಅದನ್ನು ಹೇಗೆ ಮಾಡಬೇಕೆಂದು ಹೇಳಿ, ಅದು ಸಾಧ್ಯ ಆಗುವ ತನಕ ತಾಳ್ಮೆಯಿಂದ ವಿವರಿಸುತ್ತೇನೆ.”

ಹಲವು ವರ್ಷಗಳಿಂದ ತನ್ನ ಗೆಸ್ಟ್‌ಗಳನ್ನು ಕೇಳುವ ಮೂಲಕ, ಡಯಾನಾ ಕೆಲವು ವಿಷಯಗಳನ್ನು ಕಲಿತಿದ್ದಾರೆ:

  • ಚೆಕ್-ಇನ್ ಸುಲಭವಾಗಲು ಕೀ ರಹಿತ ಪ್ರವೇಶ ಒದಗಿಸಿ
  • ಕತ್ತಲೆಯಲ್ಲಿ ಸುರಕ್ಷಿತವಾಗಿ ತಲುಪಲು ಗೆಸ್ಟ್‌ಗಳಿಗೆ ಸಹಾಯ ಆಗುವುದಕ್ಕೆ ಸಾಕಷ್ಟು ಹೊರಾಂಗಣ ಬೆಳಕನ್ನು ಒದಗಿಸಿ
  • ಪ್ರಯಾಣದ ಕುರಿತು ಮಾಹಿತಿಯನ್ನು ಮುಂಚಿತವಾಗಿ ಕೇಳಿ ಹಾಗೂ ಚೆಕ್-ಇನ್ ಮತ್ತು ಚೆಕ್‌ಔಟ್ ಸಮಯವನ್ನು ಪುನರುಚ್ಚರಿಸಿ
ಕೇಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಮಾನವೀಯವಾಗಿರುವುದು ಎಷ್ಟು ಮುಖ್ಯ ಎಂದು ನಾನು ಒತ್ತಿ ಹೇಳಬೇಕಾಗಿಲ್ಲ.
Diana,
ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಾ

5. ಸಾಮಾನ್ಯ ಸಮಸ್ಯೆಗಳನ್ನು ನಿರೀಕ್ಷಿಸಿ

ಅವಧಿಗೆ ಮುಂಚೆ ಗೆಸ್ಟ್‌ಗಳ ಆಗಮನ, ತಡವಾಗಿ ಚೆಕ್‌ಔಟ್‌ಗಳು ಮತ್ತು ಶುಚಿಗೊಳಿಸುವಿಕೆಯ ಸಮಸ್ಯೆಗಳೆಲ್ಲವೂ ಸವಾಲುಗಳನ್ನು ಒಡ್ಡಬಹುದು. ಸಂಭವನೀಯ ಸಮಸ್ಯೆಗಳನ್ನು ತಗ್ಗಿಸಲು ಕೆಲವು ಸಲಹೆಗಳು ಇಲ್ಲಿವೆ:

  • ಸ್ಪಷ್ಟವಾದ ಚೆಕ್-ಇನ್ ಮತ್ತು ಚೆಕ್‌ಔಟ್ ಸಮಯಗಳನ್ನು ಒದಗಿಸಿ ಮತ್ತು ಅದಕ್ಕೆ ಸಕಾರಣವನ್ನೂ ನೀಡಿ (“ಕೋಣೆಯನ್ನು ಸಜ್ಜುಗೊಳಿಸಲು ಕ್ಲೀನರ್‌ಗಳಿಗೆ ಸಮಯ ನೀಡುವುದಕ್ಕಾಗಿ ದಯವಿಟ್ಟು 3:00 p.m. ಕ್ಕಿಂತ ಮೊದಲು ಚೆಕ್-ಇನ್ ಮಾಡಬೇಡಿ”)
  • ಶುಚಿಗೊಳಿಸಲು ಹೆಚ್ಚು ಸಮಯ ನೀಡುವುದಕ್ಕಾಗಿ ನಿಮ್ಮ ರಿಸರ್ವೇಶನ್ ಆದ್ಯತೆಗಳನ್ನು ಸೆಟ್ ಮಾಡಿ 
  • ಅವರು ಬೇಗನೆ ಆಗಮಿಸುತ್ತಾರೆಂದು ನಿಮಗೆ ತಿಳಿದಿದ್ದರೆಗೆಸ್ಟ್‌ಗಳ ಲಗೇಜ್ ದಾಸ್ತಾನು ಮಾಡಿಡುವ ಕೊಡುಗೆ ನೀಡುವುದನ್ನು ಪರಿಗಣಿಸಿ
  • ನಿರೀಕ್ಷೆಗಳನ್ನು ಸೆಟ್‌ ಆಗಿರಿಸಲು ಸಹಾಯ ಮಾಡುವುದಕ್ಕಾಗಿ ನಿಮ್ಮ ಲಿಸ್ಟಿಂಗ್ ವಿವರಣೆ ಮತ್ತು ಚೆಕ್-ಇನ್ ಸೂಚನೆಗಳಲ್ಲಿಪ್ರಮುಖ ವಿವರಗಳನ್ನು ಸೇರಿಸಿ—ನಿಮ್ಮ ಸ್ಥಳಕ್ಕೆ ತಲುಪುವುದು ಹೇಗೆ, ನಿಮ್ಮ ಸ್ಥಳ ನೋಡಲು ಹೇಗೆ ಕಾಣಿಸುತ್ತದೆ, ಇತ್ಯಾದಿ
  • ವೈಫೈಗೆ ಪ್ರವೇಶ ಮತ್ತು ವಿಶಿಷ್ಟ ತಂತ್ರಗಳಿರುವ ಉಪಕರಣಗಳ ಬಳಕೆಯ ರೀತಿಯ ಕುರಿತು ವಿವರಗಳನ್ನು ಒಳಗೊಂಡಿರುವ ಒಂದುಮನೆ ಕೈಪಿಡಿ ಒದಗಿಸಿ

ಸವಾಲುಗಳು ಎದುರಾಗುವ ಮೊದಲೇ ಅವುಗಳನ್ನು ನಿರೀಕ್ಷಿಸಿದ್ದರೆ, ಅದ್ಭುತ ಗೆಸ್ಟ್‌ಅನುಭವ ರೂಪಿಸುವತ್ತ ನೀವು ಒಂದು ಹೆಜ್ಜೆ ಸಮೀಪ ಇರುತ್ತೀರಿ.

ಮತ್ತು ನಿಮಗೆ ಇನ್ನೂ ಪ್ರಶ್ನೆಗಳಿದ್ದರೆ ಅಥವಾ ಸಮಸ್ಯೆಗಳು ಎದುರಾದರೆ, ನೀವು ನಮ್ಮನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.

ಡಯಾನಾ ಅವರು Airbnb ಉದ್ಯೋಗಿಯಲ್ಲ ಮತ್ತು Airbnb ನಿರ್ದೇಶನದಡಿಯಲ್ಲಿ ಕೆಲಸ ಮಾಡುತ್ತಿಲ್ಲ. ಹೋಸ್ಟ್ ಸೃಷ್ಟಿಕರ್ತೆ ಆಗಿ, ತನ್ನ ಆಲೋಚನೆಗಳನ್ನು ಲಿಖಿತವಾಗಿ ನೀಡಲು ಮತ್ತು ಈ ವೀಡಿಯೊವನ್ನು ರಚಿಸಲು Airbnb ಜೊತೆ ಅವರು ಪಾಲುಗೊಂಡಿದ್ದರು. ಅವರು ನೀಡಿರುವ ಯಾವುದೇ ಅಭಿಪ್ರಾಯಗಳು, ಉಪಾಖ್ಯಾನ ಮಾಹಿತಿ ಅಥವಾ ಪ್ರಶಂಸಾ ಹೇಳಿಕೆಗಳು ಸತ್ಯವಾದವು, ಅವರದೇ ಆದವು ಮತ್ತು ಅವು Airbnb ನ ಅಧಿಕೃತ ಹೇಳಿಕೆಗಳಲ್ಲ.

ವಿಶೇಷ ಆಕರ್ಷಣೆಗಳು

  • ಸಮಸ್ಯೆ ಪರಿಹಾರವನ್ನು ಸುಲಭಗೊಳಿಸಲು ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಸಹ-ಹೋಸ್ಟ್‌ನ ಸಂಪರ್ಕ ಮಾಹಿತಿ ಸುಲಭವಾಗಿ ಲಭ್ಯವಿರಲಿ

  • ದೈನಂದಿನ ನಿರ್ವಹಣೆ ನಿಮ್ಮ ಸ್ಥಳವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ

  • ಸವಾಲುಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಮುಕ್ತ ಸಂವಹನ ಮತ್ತು ಪರಾನುಭೂತಿ ನಿಮಗೆ ಸಹಾಯ ಮಾಡುತ್ತದೆ

Airbnb
ಡಿಸೆಂ 11, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ