ಕೊನೆಯ-ಕ್ಷಣದ ಬುಕಿಂಗ್‌ಗಳನ್ನು ಪಡೆಯಲು ಆರು ಮಾರ್ಗಗಳು
ಅತ್ಯಂತ ಜನಪ್ರಿಯ ಲಿಸ್ಟಿಂಗ್‌ಗಳು ಸಹ ಕೆಲವೊಮ್ಮೆ ಅನಿರೀಕ್ಷಿತ ಓಪನಿಂಗ್‌ಗಳನ್ನು ಹೊಂದಿರುತ್ತವೆ. ಕೊನೆಯ-ಕ್ಷಣದ ಬುಕಿಂಗ್‌ಗಳನ್ನು ಆಕರ್ಷಿಸಲು ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಈ ಆರು ಸಲಹೆಗಳನ್ನು ಪರಿಗಣಿಸಿ.
1. ಕೊನೆಯ-ಕ್ಷಣದ ರಿಯಾಯಿತಿಯನ್ನು ಸೇರಿಸಿ
ಕೊನೆಯ-ಕ್ಷಣದ ರಿಯಾಯಿತಿಗಳು ಗೆಸ್ಟ್‌ಗಳಿಗೆ ಬುಕ್ ಮಾಡಲು ಪ್ರೋತ್ಸಾಹಿಸಲು ಸಹಾಯ ಮಾಡುತ್ತವೆ. ಚೆಕ್-ಇನ್‌ಗೆ 1 ರಿಂದ 28 ದಿನಗಳ ಮೊದಲು ಬುಕ್ ಮಾಡಿದ ರಿಸರ್ವೇಶನ್‌ಗಳಿಗೆ ಅವು ಅನ್ವಯಿಸುತ್ತವೆ.
ನಿಮ್ಮ 60 ದಿನಗಳ ಸರಾಸರಿ ಬೆಲೆಯಲ್ಲಿ 10% ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಗಳಿಗಾಗಿ, ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ಗೆಸ್ಟ್‌ಗಳು ವಿಶೇಷ ಕಾಲ್‌ಔಟ್ ಅನ್ನು ನೋಡುತ್ತಾರೆ. ನಿಮ್ಮ ರಿಯಾಯಿತಿ ದರವು ಹೊಡೆದು ಹಾಕಲಾಗಿರುವ ನಿಮ್ಮ ಮೂಲ ದರದ ಜೊತೆಗೆ ಕಾಣಿಸುತ್ತದೆ.
ಕೊನೆಯ-ಕ್ಷಣದ ರಿಯಾಯಿತಿಯನ್ನು ಸೇರಿಸಲು:
- ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ನಲ್ಲಿರುವ ಬೆಲೆ ನಿಗದಿ ಟ್ಯಾಬ್‌ಗೆ ಹೋಗಿ.
- ಇನ್ನಷ್ಟು ರಿಯಾಯಿತಿಗಳು ಎಂಬುದರ ಅಡಿಯಲ್ಲಿ, ಕೊನೆಯ-ಕ್ಷಣದ ರಿಯಾಯಿತಿಗಳು ಎಂಬುದನ್ನು ತೆರೆಯಿರಿ.
- 1 ಮತ್ತು 28 ರ ನಡುವೆ ಇರುವ ಆಗಮನಕ್ಕಿಂತ ಮುಂಚಿನ ದಿನಗಳ ಸಂಖ್ಯೆಯನ್ನು ನಮೂದಿಸಿ.
- ನೀವು ನೀಡಲು ಬಯಸುವ ಶೇಕಡಾವಾರು ರಿಯಾಯಿತಿಯನ್ನು ನಮೂದಿಸಿ.
ರಿಸರ್ವೇಶನ್‌ಗಳನ್ನು ಯಾವಾಗ ಬುಕ್ ಮಾಡಲಾಗಿದೆ ಎಂಬುದನ್ನು ಆಧರಿಸಿ, ನೀವು ರಿಯಾಯಿತಿಯನ್ನು ಸರಿಹೊಂದಿಸಬಹುದು, ಉದಾಹರಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅದನ್ನು ಹೆಚ್ಚಿಸಬಹುದು.
ಸ್ಮಾರ್ಟ್ ದರವನ್ನು ಆನ್ ಮಾಡಿದಾಗ ಈ ರಿಯಾಯಿತಿ ಲಭ್ಯವಿಲ್ಲ ಎಂಬುದನ್ನು ಗಮನಿಸಿ.
2. ಅಲ್ಪಾವಧಿಯ ವಾಸ್ತವ್ಯಗಳನ್ನು ಅನುಮತಿಸಿ
ಪೂರ್ವಸಿದ್ಧತೆಯಿಲ್ಲದೆ ವಿಹಾರ ಸ್ಥಳಗಳನ್ನು ಹುಡುಕುವ ಗೆಸ್ಟ್‌ಗಳಿಗೆ ಪ್ರಯಾಣಿಸಲು ಕೇವಲ ಒಂದು ಅಥವಾ ಎರಡು ದಿನಗಳಿರಬಹುದು. ನಿಮ್ಮ ಕನಿಷ್ಠ ಟ್ರಿಪ್ ಅವಧಿಯನ್ನು ಕಡಿಮೆ ಮಾಡುವುದರಿಂದ ಅವರಿಗೆ ಅಲ್ಪಾವಧಿಯ ವಾಸ್ತವ್ಯಗಳನ್ನು ಬುಕ್ ಮಾಡುವ ಆಯ್ಕೆಯನ್ನು ನೀಡುತ್ತದೆ ಮತ್ತು ಇದು ಕೊನೆಯ-ಕ್ಷಣದ ಪ್ರಯಾಣಿಕರನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಟ್ರಿಪ್‌ನ ಕನಿಷ್ಠ ಅವಧಿಯನ್ನು ಕಡಿಮೆ ಮಾಡಲು:
- ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ನಲ್ಲಿರುವ ಲಭ್ಯತೆ ಟ್ಯಾಬ್‌ಗೆ ಹೋಗಿ.
- ಟ್ರಿಪ್ ಅವಧಿ ಅಡಿಯಲ್ಲಿಕನಿಷ್ಠ ರಾತ್ರಿಗಳು ಎಂಬುದನ್ನು ಒತ್ತಿ.
- ನಿಮಗೆ ಸೂಕ್ತವಾದ ರಾತ್ರಿಗಳ ಸಂಖ್ಯೆಗೆ ಕನಿಷ್ಠ ಟ್ರಿಪ್ ಅವಧಿಯನ್ನು ಎಡಿಟ್ ಮಾಡಿ.
3. ನಿಮ್ಮ ಪ್ರದೇಶದಲ್ಲಿನ ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಿ
Airbnb ಯ ಒಂದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಿ ಟೂಲ್ ಬುಕಿಂಗ್ ಇಲ್ಲದ ರಾತ್ರಿಗಳಿಗೆ ಸ್ಪರ್ಧಾತ್ಮಕ ದರವನ್ನು ಹೊಂದಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ದಿನಾಂಕಗಳಿಗಾಗಿ ನಿಮ್ಮ ಪ್ರದೇಶದಲ್ಲಿನ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ರಾತ್ರಿ ದರವನ್ನು ಸರಿಹೊಂದಿಸುವುದನ್ನು ಪರಿಗಣಿಸಿ.
ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಲು:
- ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ನಲ್ಲಿರುವ ಬೆಲೆ ನಿಗದಿ ಟ್ಯಾಬ್‌ಗೆ ಹೋಗಿ.
- 31 ದಿನಗಳವರೆಗಿನ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.
- ಇದೇ ರೀತಿಯ ಲಿಸ್ಟಿಂಗ್‌ಗಳನ್ನು ನೋಡಿ ಎಂಬುದನ್ನು ಒತ್ತಿ.
ಸ್ಥಳ, ಗಾತ್ರ ಮತ್ತು ಸೌಲಭ್ಯಗಳಂತಹ ಅಂಶಗಳ ಆಧಾರದ ಮೇಲೆ ನಿಮ್ಮ ಪ್ರದೇಶದ ನಕ್ಷೆಯು ಹತ್ತಿರದ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳನ್ನು ತೋರಿಸುತ್ತದೆ. ಬುಕ್ ಮಾಡಿದ ಅಥವಾ ಬುಕ್ ಮಾಡದ ಲಿಸ್ಟಿಂಗ್‌ಗಳನ್ನು ತೋರಿಸಲು ನಕ್ಷೆಯಲ್ಲಿನ ಬಟನ್‌ಗಳನ್ನು ಬಳಸಿ.
"ನನ್ನ ದರವು ಸ್ಪರ್ಧಾತ್ಮಕವಾಗಿದೆಯೇ ಎಂದು ನಾನು ಯಾವಾಗಲೂ ಪರಿಶೀಲಿಸುತ್ತಿರುತ್ತೇನೆ. ಈ ಮೂಲಕ ನನ್ನ ಪ್ರದೇಶದಲ್ಲಿರುವ ಇತರ ಹೋಸ್ಟ್‌ಗಳು ಪ್ರತಿ ರಾತ್ರಿಗೆ ಎಷ್ಟು ಪಡೆಯುತ್ತಿದ್ದಾರೆ ಎಂಬುದನ್ನು ನಾನು ನೋಡಲು ಬಯಸುತ್ತೇನೆ" ಎಂದು ಹೋಸ್ಟ್ ಸಲಹಾ ಮಂಡಳಿಯ ಸದಸ್ಯರು ಮತ್ತು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಸೂಪರ್‌ಹೋಸ್ಟ್ ಆಗಿರುವ ಫೆಲಿಸಿಟಿ ಹೇಳುತ್ತಾರೆ.
4. ನಿಮ್ಮ ಪ್ರತಿ ರಾತ್ರಿಯ ಬೆಲೆಯನ್ನು ಸರಿಹೊಂದಿಸಿ
ಬುಕಿಂಗ್ ಇಲ್ಲದ ರಾತ್ರಿಗಳಿಗೆ ನಿಮ್ಮ ಬೆಲೆಯನ್ನು ತಾತ್ಕಾಲಿಕವಾಗಿ ಇಳಿಸುವುದರಿಂದ ನಿಮ್ಮ ಮನೆಯನ್ನು ಬುಕ್ ಮಾಡಲು ಗೆಸ್ಟ್‌ಗಳನ್ನು ಪ್ರೋತ್ಸಾಹಿಸಬಹುದು. ಸಮೀಪದ ಇತರ ಇದೇ ರೀತಿಯ ಲಿಸ್ಟಿಂಗ್‌ಗಳಿಗಿಂತ ಕಡಿಮೆ ಬೆಲೆಗಳನ್ನು ಹೊಂದಿರುವ ಲಿಸ್ಟಿಂಗ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತವೆ. ಹೆಚ್ಚು ಗೆಸ್ಟ್‌ಗಳನ್ನು ಸ್ವಾಗತಿಸಲು ಮತ್ತು ನಿಮ್ಮ ಗಳಿಕೆಗಳ ಗುರಿಗಳನ್ನು ತಲುಪಲು ನೀವು ಯಾವಾಗಲೂ ನಿಮ್ಮ ದರವನ್ನು ಮತ್ತೆ ಸರಿಹೊಂದಿಸಬಹುದು.
5. ಮುಂಗಡ ಸೂಚನೆ ಅವಧಿಯನ್ನು ಕಡಿಮೆಗೊಳಿಸಿ
ಆಫ್ ಸೀಸನ್ ವೇಳೆ ನಿಮ್ಮ ಕ್ಯಾಲೆಂಡರ್ ತುಂಬಿಸಲು ನಿಮಗೆ ಸಹಾಯ ಮಾಡಲು ಗೆಸ್ಟ್‌ಗಳಿಗೆ ಚೆಕ್-ಇನ್‌ಗೆ ಹತ್ತಿರದ ದಿನಗಳಲ್ಲಿ ಬುಕ್ ಮಾಡಲು ಅವಕಾಶ ನೀಡುವುದನ್ನು ಪರಿಗಣಿಸಿ . ಗೆಸ್ಟ್‌ನ ಬುಕಿಂಗ್ ಮತ್ತು ಅವರ ಆಗಮನದ ನಡುವೆ ನಿಮಗೆ ಎಷ್ಟು ಸಮಯ ಬೇಕು ಎಂಬುದರ ಆಧಾರದ ಮೇಲೆ ನೀವು ಅದೇ ದಿನದಂತಹ ಕಡಿಮೆ ಲೀಡ್ ಸಮಯವನ್ನು ಆಯ್ಕೆ ಮಾಡಬಹುದು.
"ಪ್ರಯಾಣದ ಸಂದರ್ಭ ಕೊನೆಯ ಕ್ಷಣದಲ್ಲಿ ವಸತಿಗಳ ಅಗತ್ಯವಿರುವಾಗ ಎದುರಾಗುವ ಸಮಸ್ಯೆಗಳನ್ನು ನಾನು ಮನಗಂಡಿದ್ದೇನೆ, ಆದ್ದರಿಂದ ಒಬ್ಬ ವ್ಯಕ್ತಿಯು ಯಾವಾಗ ಬುಕಿಂಗ್ ವಿನಂತಿಯನ್ನು ಕಳುಹಿಸಬಹುದು ಎಂಬುದರ ಕುರಿತು ನಾನು ಯಾವುದೇ ಮಿತಿಗಳನ್ನು ಹೇರಲು ಬಯಸುವುದಿಲ್ಲ" ಎಂದು ಅರ್ಕಾನ್ಸಾಸ್‌ನ ಲಿಟ್ಲ್ ರಾಕ್‌ನಲ್ಲಿ ಸೂಪರ್‌ಹೋಸ್ಟ್ ಆಗಿರುವ ಮೈರಾಂಡಾ ಹೇಳುತ್ತಾರೆ. "ಮರುದಿನಕ್ಕೆ ಯಾರೂ ಕೂಡ ಬುಕ್ ಮಾಡಿರದೇ ಇದ್ದರೂ, ಸ್ಥಳವು ಸ್ವಚ್ಛವಾಗಿದೆ ಮತ್ತು ವಾಸ್ತವ್ಯಕ್ಕೆ ಸಿದ್ಧವಾಗಿದೆ ಎಂದು ನಾನು ಖಚಿತಪಡಿಸುತ್ತೇನೆ."
ನಿಮ್ಮ ಕನಿಷ್ಠ ಲೀಡ್ ಸಮಯವನ್ನು ಬದಲಾಯಿಸಲು:
- ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ನಲ್ಲಿ ಲಭ್ಯತೆ ಟ್ಯಾಬ್‌ಗೆ ಹೋಗಿ.
- ಮುಂಗಡ ಸೂಚನೆ ಎಂಬುದನ್ನು ತೆರೆಯಿರಿ.
- ನಿಮಗೆ ಸೂಕ್ತವಾದ ದಿನಗಳ ಸಂಖ್ಯೆಯನ್ನು ಆಯ್ಕೆ ಮಾಡಿ.
ನಿಮ್ಮ ಕನಿಷ್ಠ ಲೀಡ್ ಸಮಯಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮಾಡಿದ ವಿನಂತಿಗಳನ್ನು ಸಹ ನೀವು ಅನುಮತಿಸಬಹುದು. ಈ ವಿನಂತಿಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು ನಿಮ್ಮನ್ನು ಕೇಳಲಾಗುತ್ತದೆ.
6. ಸ್ನೇಹಿತರು ಮತ್ತು ಕುಟುಂಬವನ್ನು ಕೇಳಿ
ಸಾಮಾಜಿಕ ಮಾಧ್ಯಮ, ಇಮೇಲ್ ಅಥವಾ ಪಠ್ಯದ ಮೂಲಕ ನಿಮ್ಮ ವೈಯಕ್ತಿಕ ಸಂಪರ್ಕಗಳನ್ನು ಸಂಪರ್ಕಿಸಿ ಮತ್ತು ನಿಮ್ಮ ಮನೆ ಲಭ್ಯವಿದೆ ಎಂದು ಅವರಿಗೆ ತಿಳಿಸಿ. ನಿಮ್ಮ ನೆಟ್‌ವರ್ಕ್‌ನಲ್ಲಿರುವ ಯಾರಾದರೂ ತಕ್ಷಣ ಟ್ರಿಪ್ ಅನ್ನು ಬುಕ್ ಮಾಡಲು ಪ್ರೇರಿತರಾಗಬಹುದು.
ಇತರ ಯಾವುದೇ ವಾಸ್ತವ್ಯವನ್ನು ಹೋಸ್ಟ್ ಮಾಡಿದಂತೆ, ಪ್ರಮುಖವಾಗಿ ಕೊನೆಯ-ಕ್ಷಣದ ಬುಕಿಂಗ್‌ಗಳಿಗೆ ಸ್ಪಷ್ಟ ಸಂವಹನ ಮುಖ್ಯವಾಗಿದೆ. ಗೆಸ್ಟ್‌ಗಳು ಚೆಕ್-ಇನ್ ಮಾಡಲು 48 ಗಂಟೆಗಳಿಗಿಂತ ಕಡಿಮೆ ಅವಧಿಯಿರುವ ರಿಸರ್ವೇಶನ್ ಅನ್ನು ಬುಕ್ ಮಾಡಿದರೆ, ಅವರು ನಿಮ್ಮ ವಿಶಿಷ್ಟ ಚೆಕ್-ಇನ್ ಅವಧಿಯ ಹೊರಗಿನ ಚೆಕ್-ಇನ್ ಸಮಯವನ್ನು ಆಯ್ಕೆ ಮಾಡಬಹುದು. ನಿಮ್ಮ ಲಿಸ್ಟಿಂಗ್ ತ್ವರಿತ ಬುಕಿಂಗ್ ಹೊಂದಿದ್ದರೆ, ನೀವು ಬುಕಿಂಗ್ ವಿಚಾರಣೆಯನ್ನು ಸ್ವೀಕರಿಸುತ್ತೀರಿ. ಸ್ಪಷ್ಟವಾದ ಚೆಕ್-ಇನ್ ಸೂಚನೆಗಳೊಂದಿಗೆ ಸಿದ್ಧರಾಗಿರಿ ಮತ್ತು ವಾಸ್ತವ್ಯಗಳ ನಡುವೆ ನಿಮಗೆ ಹೆಚ್ಚಿನ ಸಮಯ ಬೇಕಾದಲ್ಲಿ ಅವರಿಗೆ ತಿಳಿಸಿ.
ಸಂದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೋಸ್ಟ್‌ಗಳಿಗೆ ಹಣ ನೀಡಲಾಯಿತು.
ಪ್ರಕಟಣೆಯ ನಂತರದ ಸಮಯದಲ್ಲಿ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.