ಸೂಪರ್‌ಹೋಸ್ಟ್ ಆಗುವುದು ಹೇಗೆ
Airbnb ಯ ಸೂಪರ್‌ಹೋಸ್ಟ್ ಪ್ರೋಗ್ರಾಂ ನಮ್ಮ ಅಗ್ರ-ರೇಟಿಂಗ್ ಹೊಂದಿದ, ಅತ್ಯಂತ ಅನುಭವಿ ಹೋಸ್ಟ್‌ಗಳನ್ನು ಗುರುತಿಸುತ್ತದೆ.
ಅಸಾಧಾರಣ ಆತಿಥ್ಯವನ್ನು ಒದಗಿಸುವ ಹೋಸ್ಟ್‌ಗಳನ್ನು ನಾವು ಶ್ಲಾಘಿಸುತ್ತೇವೆ ಮತ್ತು ಅವರ ಲಿಸ್ಟಿಂಗ್‌ಗೆ ಬ್ಯಾಡ್ಜ್ ನೀಡುವ ಮೂಲಕ ಅವರನ್ನು ಪುರಸ್ಕರಿಸುತ್ತೇವೆ. ಇದು ಅವರಿಗೆ ಹೆಚ್ಚು ಬುಕಿಂಗ್‌ಗಳನ್ನು ಪಡೆಯಲು ಸಹಾಯ ಮಾಡಬಹುದು. ಸೂಪರ್‌ಹೋಸ್ಟ್ ಸ್ಟೇಟಸ್ ಹೊಂದಿರುವ ಹೋಸ್ಟ್‌ಗಳೊಂದಿಗೆ ಬುಕ್ ಮಾಡಿದಾಗ ವಸತಿ ಸೌಕರ್ಯಗಳ ಗುಣಮಟ್ಟದ ಕುರಿತಂತೆ ತಮಗೆ ಹೆಚ್ಚು ವಿಶ್ವಾಸ ಮೂಡುತ್ತದೆ ಎಂದು ಸುಮಾರು 59% ಗೆಸ್ಟ್‌ಗಳು ಹೇಳುತ್ತಾರೆ ಮತ್ತು ಸೂಪರ್‌ಹೋಸ್ಟ್‌ಗಳಲ್ಲದ ಹೋಸ್ಟ್‌ಗಳಿಗಿಂತ ಸೂಪರ್‌ಹೋಸ್ಟ್‌ಗಳು 60% ಹೆಚ್ಚು ಗಳಿಸುತ್ತಾರೆ.* ಸೂಪರ್‌ಹೋಸ್ಟ್‌ಗಳು ಮೀಸಲಾದ ಸಮುದಾಯ ಬೆಂಬಲಕ್ಕೆ ಪ್ರವೇಶ, ವಿಶೇಷ ಈವೆಂಟ್‌ಗಳಿಗೆ ಆಹ್ವಾನಗಳು, ಪ್ರಯಾಣ ಕೂಪನ್‌ಗಳು ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ವರ್ಧನೆಯನ್ನೂ ಸಹ ಪಡೆಯುತ್ತಾರೆ.
1.3 ದಶಲಕ್ಷಕ್ಕೂ ಹೆಚ್ಚು ಹೋಸ್ಟ್‌ಗಳು ಸೂಪರ್‌ಹೋಸ್ಟ್‌ಗಳಾಗಿದ್ದಾರೆ ಮತ್ತು ನಿಮ್ಮ ಬುಕಿಂಗ್‌ಗಳನ್ನು ಹೆಚ್ಚಿಸುವ ಮೂಲಕ ಮತ್ತು ಅತ್ಯುತ್ತಮ ಆತಿಥ್ಯವನ್ನು ಒದಗಿಸುವ ಮೂಲಕ ನೀವೂ ಸಹ ಸೂಪರ್‌ಹೋಸ್ಟ್ ಆಗಬಹುದು.** ನಿಮ್ಮ ಕ್ಯಾಲೆಂಡರ್‌ಗೆ ಕೆಲವು ಬದಲಾವಣೆಗಳನ್ನು ಮಾಡುವುದು, ನಿಮ್ಮ ಲಿಸ್ಟಿಂಗ್ ಅನ್ನು ರಿಫ್ರೆಶ್ ಮಾಡುವುದು ಮತ್ತು ಸಂವಹನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ವ್ಯತ್ಯಾಸವನ್ನುಂಟು ಮಾಡಬಹುದು.
ಅವಶ್ಯಕತೆಗಳನ್ನು ಪೂರೈಸಿ
ಸೂಪರ್‌ಹೋಸ್ಟ್ ಖಾತೆಯನ್ನು ಉತ್ತಮ ಸ್ಥಿತಿಯಲ್ಲಿ ಹೊಂದಿರುವ ಲಿಸ್ಟಿಂಗ್ ಮಾಲೀಕರಾಗಿರಬೇಕು ಮತ್ತು ಕಳೆದ 365 ದಿನಗಳಲ್ಲಿ ಈ ನಾಲ್ಕು ಮಾನದಂಡಗಳನ್ನು ಪೂರೈಸಿರಬೇಕು:
- ಸಾಕಷ್ಟು ಬುಕಿಂಗ್‌ಗಳನ್ನು ಪಡೆಯುವುದು. ಕನಿಷ್ಠ 10 ರಿಸರ್ವೇಶನ್‌ಗಳು ಅಥವಾ ಮೂರು ವಾಸ್ತವ್ಯಗಳಲ್ಲಿ ಕನಿಷ್ಠ 100 ರಾತ್ರಿಗಳನ್ನೊಳಗೊಂಡ ಒಟ್ಟು ಮೂರು ರಿಸರ್ವೇಶನ್‌ಗಳನ್ನು ಹೋಸ್ಟ್ ಮಾಡಿರಬೇಕು.
- ರದ್ದತಿಗಳನ್ನು ತಪ್ಪಿಸುವುದು. ಪ್ರಮುಖ ಸಮಸ್ಯಾತ್ಮಕ ಘಟನೆಗಳು ಅಥವಾ ಇತರ ಮಾನ್ಯ ಕಾರಣಗಳಿಂದಾಗಿ ಉಂಟಾದ ರದ್ದತಿಗಳಿಗೆ ವಿನಾಯಿತಿಗಳೊಂದಿಗೆ 1% ಕ್ಕಿಂತ ಕಡಿಮೆ ರದ್ದತಿ ಪ್ರಮಾಣವನ್ನು ಕಾಪಾಡಿಕೊಳ್ಳಬೇಕು.
- ಗೆಸ್ಟ್‌ಗಳಿಗೆ ಪ್ರತಿಕ್ರಿಯಿಸುವುದು. 90% ಅಥವಾ ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ದರವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಪ್ರತಿಕ್ರಿಯೆ ದರವು ನೀವು 24 ಗಂಟೆಗಳ ಒಳಗೆ ಉತ್ತರಿಸಿದ ಹೊಸ ಗೆಸ್ಟ್ ವಿಚಾರಣೆಗಳ ಶೇಕಡಾವಾರು ಪ್ರಮಾಣವಾಗಿದೆ.
- ಆತಿಥ್ಯಕ್ಕೆ ಆದ್ಯತೆ ನೀಡುವುದು. 4.8 ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟಾರೆ ರೇಟಿಂಗ್ ಅನ್ನು ಕಾಪಾಡಿಕೊಳ್ಳಬೇಕು.
ಸ್ಪಷ್ಟವಾಗಿ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವುದು, ರದ್ದತಿಗಳನ್ನು ತಪ್ಪಿಸುವುದು ಮತ್ತು ಆತಿಥ್ಯಕ್ಕೆ ಆದ್ಯತೆ ನೀಡುವುದು ಹುಡುಕಾಟದಲ್ಲಿ ನಿಮ್ಮ ಮನೆ ಎದ್ದು ಕಾಣಲು ಮತ್ತು ನಿಮ್ಮ ಗಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಈ ಮಾನದಂಡಗಳನ್ನು ಪೂರೈಸಲು ಮತ್ತು ಸೂಪರ್‌ಹೋಸ್ಟ್ ಸ್ಟೇಟಸ್‌ನಿಂದ ಪ್ರಯೋಜನ ಪಡೆಯಲು ಪ್ರಾರಂಭಿಸಲು ನಿಮಗೆ ಸಹಾಯ ಮಾಡುವ ಸಲಹೆಗಳು ಇಲ್ಲಿವೆ.
ನಿಮ್ಮ ಕ್ಯಾಲೆಂಡರ್ ಅನ್ನು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ
ನಿಮ್ಮ ಕ್ಯಾಲೆಂಡರ್‌ನಲ್ಲಿ ಹೆಚ್ಚು ರಾತ್ರಿಗಳನ್ನು ತೆರೆಯುವುದು ನಿಮ್ಮ ಲಿಸ್ಟಿಂಗ್ ಹೆಚ್ಚು ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸೂಪರ್‌ಹೋಸ್ಟ್ ಮಾನದಂಡಗಳನ್ನು ಪೂರೈಸಲು ಸಾಕಷ್ಟು ವಾಸ್ತವ್ಯಗಳನ್ನು ಹೋಸ್ಟ್ ಮಾಡಲು ನಿಮ್ಮ ಅವಕಾಶಗಳನ್ನು ಹೆಚ್ಚಿಸುತ್ತದೆ.
ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು ಬೂದು ಬಣ್ಣದಲ್ಲಿ ಗೋಚರಿಸುವ ಬ್ಲಾಕ್ ಮಾಡಿದ ರಾತ್ರಿಗಳನ್ನು ನೋಡಿ. ನೀವು ಹೋಸ್ಟ್ ಮಾಡಲು ಸಾಧ್ಯವಾಗುವ ಯಾವುದೇ ಬ್ಲಾಕ್ ಮಾಡಿದ ರಾತ್ರಿಗಳನ್ನು ತೆರೆಯಿರಿ.
ಅಲ್ಪಾವಧಿಯ ವಾಸ್ತವ್ಯಗಳನ್ನು ಅನುಮತಿಸುವುದು ಹೆಚ್ಚು ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್ ಕಾಣಿಸಿಕೊಳ್ಳುವಂತೆ ಮಾಡುವ ಮತ್ತೊಂದು ಮಾರ್ಗವಾಗಿದೆ. ವಾರದ ದಿನದ ಪ್ರಕಾರ ನಿಮ್ಮ ಕನಿಷ್ಠ ಟ್ರಿಪ್ ಅವಧಿಯನ್ನು ನೀವು ಕಸ್ಟಮೈಸ್ ಮಾಡಬಹುದು. ಉದಾಹರಣೆಗೆ, ವಾರಾಂತ್ಯಗಳಲ್ಲಿ ಗೆಸ್ಟ್ ಬೇಡಿಕೆ ಹೆಚ್ಚಿದ್ದರೆ, ನೀವು ವಾರದ ಮಧ್ಯದಲ್ಲಿ ಒಂದು-ರಾತ್ರಿಯ ವಾಸ್ತವ್ಯಗಳಿಗೆ ಅನುಮತಿಸಲು ಆಯ್ಕೆ ಮಾಡಬಹುದು, ಆದರೆ ಗೆಸ್ಟ್‌ಗಳು ಶುಕ್ರವಾರ ಅಥವಾ ಶನಿವಾರ ರಾತ್ರಿಯನ್ನು ಬುಕ್ ಮಾಡಿದಾಗ ಈ ಆಯ್ಕೆ ಇರುವುದಿಲ್ಲ.
ಹೆಚ್ಚು ಫ್ಲೆಕ್ಸಿಬಿಲಿಟಿ ಒದಗಿಸುವುದು ಮತ್ತು ಗೆಸ್ಟ್‌ಗಳಿಗೆ ಚೆಕ್-ಇನ್‌ಗೆ ಹತ್ತಿರದ ಸಮಯದಲ್ಲಿ ಬುಕ್ ಮಾಡಲು ಅವಕಾಶ ನೀಡುವುದು ಹೆಚ್ಚು ಬುಕಿಂಗ್‌ಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಗೆಸ್ಟ್‌ನ ಬುಕಿಂಗ್ ಮತ್ತು ಅವರ ಆಗಮನದ ನಡುವೆ ನಿಮಗೆ ಎಷ್ಟು ಸಮಯ ಬೇಕು ಎಂಬುದರ ಆಧಾರದ ಮೇಲೆ ನೀವು ಅದೇ ದಿನದಂತಹ ಕನಿಷ್ಠ ಲೀಡ್ ಸಮಯವನ್ನು ಆಯ್ಕೆ ಮಾಡಬಹುದು.
ನಿಮ್ಮ ಕನಿಷ್ಠ ಲೀಡ್ ಸಮಯಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮಾಡಿದ ವಿನಂತಿಗಳನ್ನು ಸಹ ನೀವು ಅನುಮತಿಸಬಹುದು. ಈ ವಿನಂತಿಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು ನಿಮ್ಮನ್ನು ಕೇಳಲಾಗುತ್ತದೆ.
ಸ್ಪರ್ಧಾತ್ಮಕ ದರ ನಿಗದಿಪಡಿಸಿ
ಸಮೀಪದ ಇತರ ಇದೇ ರೀತಿಯ ಲಿಸ್ಟಿಂಗ್‌ಗಳಿಗಿಂತ ಕಡಿಮೆ ಬೆಲೆಗಳನ್ನು ಹೊಂದಿರುವ ಲಿಸ್ಟಿಂಗ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತವೆ. ಕನಿಷ್ಠ 10 ವಾಸ್ತವ್ಯಗಳನ್ನು ಹೋಸ್ಟ್ ಮಾಡಲು ನಿಮಗೆ ಸಹಾಯ ಮಾಡಲು ನಿಮ್ಮ ಪ್ರತಿಸ್ಪರ್ಧಿಗೆ ಹೋಲಿಸಿದರೆ ನಿಮ್ಮ ಪ್ರತಿ ರಾತ್ರಿ ದರವನ್ನು ಸರಿಹೊಂದಿಸುವುದನ್ನು ಪರಿಗಣಿಸಿ.
ನಿಮ್ಮ ಪ್ರದೇಶದಲ್ಲಿ ಇದೇ ರೀತಿಯ ಲಿಸ್ಟಿಂಗ್‌ಗಳ ಬೆಲೆಗಳನ್ನು ಪರಿಶೀಲಿಸಲು, ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು 31 ದಿನಗಳವರೆಗಿನ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.
ನಿಮ್ಮ ಪ್ರದೇಶದ ನಕ್ಷೆಯಲ್ಲಿ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ಬೆಲೆಗಳು ನಿಮಗೆ ಕಾಣಿಸುತ್ತವೆ. ಯಾವ ಲಿಸ್ಟಿಂಗ್‌ಗಳು ಒಂದೇ ರೀತಿ ಇವೆ ಎಂಬುದನ್ನು ನಿರ್ಧರಿಸುವುದರಲ್ಲಿ ಒಳಗೊಂಡಿರುವ ಅಂಶಗಳು ಇಂತಿವೆ: ಸ್ಥಳ, ಗಾತ್ರ, ವೈಶಿಷ್ಟ್ಯಗಳು, ಸೌಲಭ್ಯಗಳು, ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ಪರಿಗಣಿಸುವಾಗ ಗೆಸ್ಟ್‌ಗಳು ಬ್ರೌಸ್ ಮಾಡುವ ಇತರ ಲಿಸ್ಟಿಂಗ್‌ಗಳು.
ನಿಮ್ಮ ಪ್ರತಿ ರಾತ್ರಿ ದರ ಒಂದೇ ಆಗಿದ್ದಲ್ಲಿ, ಹೆಚ್ಚು ಗೆಸ್ಟ್‌ಗಳನ್ನು ಆಕರ್ಷಿಸಲು ನಿಮ್ಮ ವಾರದ ದಿನದ ಮತ್ತು ವಾರಾಂತ್ಯದ ದರಗಳನ್ನು ಸರಿಹೊಂದಿಸುವುದನ್ನು ಪರಿಗಣಿಸಿ. ರಾತ್ರಿಯ ಆಧಾರದ ಮೇಲೆ ನಿಮ್ಮ ದರವನ್ನು ಬದಲಾಯಿಸುವುದರಿಂದ ನಿಮ್ಮ ಬುಕಿಂಗ್‌ಗಳು ಮತ್ತು ಗಳಿಕೆಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ರಿಯಾಯಿತಿ ಸೇರಿಸಿ
ಗೆಸ್ಟ್‌ಗಳಿಗೆ ಎದ್ದು ಕಾಣುವಂತೆ ಮಾಡಲು ರಿಯಾಯಿತಿಗಳನ್ನು ಸೇರಿಸುವುದು ಮತ್ತೊಂದು ಮಾರ್ಗವಾಗಿದೆ. ಇವುಗಳನ್ನು ನೀಡುವ ಮೂಲಕ ನೀವು ವಿವಿಧ ರೀತಿಯ ಪ್ರಯಾಣಿಕರಿಗೆ ಸೇವೆ ಒದಗಿಸಬಹುದು:
- ಸಾಪ್ತಾಹಿಕ ಮತ್ತು ಮಾಸಿಕ ರಿಯಾಯಿತಿಗಳು. ಏಳು ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಸಾಪ್ತಾಹಿಕ ರಿಯಾಯಿತಿಗಳನ್ನು ಅಥವಾ 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಮಾಸಿಕ ರಿಯಾಯಿತಿಗಳನ್ನು ನೀಡಿ. ಇದು ನಿಮ್ಮ ಲಿಸ್ಟಿಂಗ್‌ಗಳಾದ್ಯಂತ ವಾಸ್ತವ್ಯದ ಸರಾಸರಿ ಅವಧಿಯನ್ನು ವಿಸ್ತರಿಸಬಹುದು ಮತ್ತು ಟರ್ನ್‌ಓವರ್‌ಗಳನ್ನು ಕಡಿಮೆ ಮಾಡಬಹುದು.
- ಅರ್ಲಿ ಬರ್ಡ್ ರಿಯಾಯಿತಿ. ಚೆಕ್-ಇನ್‌ಗೆ 1 ರಿಂದ 24 ತಿಂಗಳ ಮೊದಲು ಮಾಡಿದ ಬುಕಿಂಗ್‌ಗಳಿಗೆ ರಿಯಾಯಿತಿಯನ್ನು ಸೇರಿಸಿ ಮತ್ತು ಬಿಡುವಿಲ್ಲದ ಸೀಸನ್‌ಗೆ ಮುಂಚಿತವಾಗಿ ಬುಕಿಂಗ್‌ಗಳ ಬಲವಾದ ಮೂಲವನ್ನು ನಿರ್ಮಿಸಿ.
10% ಅಥವಾ ಅದಕ್ಕಿಂತ ಹೆಚ್ಚಿನ ಸಾಪ್ತಾಹಿಕ ಅಥವಾ ಮಾಸಿಕ ರಿಯಾಯಿತಿಗಳು ಮತ್ತು 3% ಅಥವಾ ಅದಕ್ಕಿಂತ ಹೆಚ್ಚಿನ ಅರ್ಲಿ ಬರ್ಡ್ ರಿಯಾಯಿತಿಗಳ ವಿಶೇಷ ಕಾಲ್‌ಔಟ್ ಅನ್ನು ಗೆಸ್ಟ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ನಿಮ್ಮ ಲಿಸ್ಟಿಂಗ್ ಪುಟದಲ್ಲಿ ನೋಡುತ್ತಾರೆ. ನಿಮ್ಮ ರಿಯಾಯಿತಿ ದರವು ನಿಮ್ಮ ಕ್ರಾಸ್ ಔಟ್ ಮಾಡಲಾಗಿರುವ ಮೂಲ ದರದ ಪಕ್ಕದಲ್ಲಿ ಗೋಚರಿಸುತ್ತದೆ.
ಸ್ಮಾರ್ಟ್ ದರವನ್ನು ಆನ್ ಮಾಡಿದಾಗ ಅರ್ಲಿ ಬರ್ಡ್ ರಿಯಾಯಿತಿ ಲಭ್ಯವಿರುವುದಿಲ್ಲ ಮತ್ತು ವಾಸ್ತವ್ಯದ ಅವಧಿಗಳ ಆಧಾರಿತ ರಿಯಾಯಿತಿಗಳು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.
ಪಂಚತಾರಾ ಆತಿಥ್ಯಕ್ಕೆ ಒತ್ತು ನೀಡಿ
ಗೆಸ್ಟ್‌ಗಳು ವೇಗದ, ಸ್ಪಷ್ಟವಾದ ಸಂವಹನವನ್ನು ಇಷ್ಟಪಡುತ್ತಾರೆ ಮತ್ತು ಸೂಪರ್‌ಹೋಸ್ಟ್ ಮಾನದಂಡಗಳಿಗೆ ಹೋಸ್ಟ್‌ಗಳು ಕನಿಷ್ಠ 90% ಪ್ರತಿಕ್ರಿಯೆ ದರವನ್ನು ಹೊಂದಿರುವುದು ಅಗತ್ಯವಾಗಿದೆ. ತ್ವರಿತ ಪ್ರತ್ಯುತ್ತರಗಳನ್ನು ಹೊಂದಿಸುವುದು ಗೆಸ್ಟ್‌ಗಳಿಗೆ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ನಿಮಗೆ ಸಹಾಯ ಮಾಡುತ್ತದೆ.
ತ್ವರಿತ ಪ್ರತ್ಯುತ್ತರಗಳು ಹೋಸ್ಟ್‌ಗಳನ್ನು ಆಗಾಗ ಕೇಳಲಾಗುವ ನಿರ್ದಿಷ್ಟ ವಿಷಯಗಳ ಬಗ್ಗೆ ತಿಳಿಸುವ ಕಿರು ಸಂದೇಶ ಟೆಂಪ್ಲೇಟ್‌ಗಳಾಗಿವೆ. ಗೆಸ್ಟ್‌ನೊಂದಿಗೆ ಚಾಟ್ ಮಾಡುವಾಗ ಕಳುಹಿಸಲು ನೀವು ಅವುಗಳನ್ನು ಮುಂಚಿತವಾಗಿ ಬರೆಯಬಹುದು ಅಥವಾ ಎಡಿಟ್ ಮಾಡಬಹುದು.
ಫೈವ್-ಸ್ಟಾರ್ ವಿಮರ್ಶೆಗಳ ಗುರಿಯನ್ನು ಹೊಂದುವುದೆಂದರೆ ಗೆಸ್ಟ್‌ಗಳ ಅಗತ್ಯಗಳನ್ನು ನಿರೀಕ್ಷಿಸುವುದು ಮತ್ತು ಸಾಧ್ಯವಾದಾಗಲೆಲ್ಲಾ ಅವುಗಳನ್ನು ಪೂರೈಸಲು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು ಎಂದರ್ಥ.
- ವೈಯಕ್ತಿಕ ಸ್ಪರ್ಶಗಳನ್ನು ಸೇರಿಸಿ. ನಿಮ್ಮ ನೆಚ್ಚಿನ ಸ್ಥಳೀಯ ಕಾಫಿಯನ್ನು ಅಥವಾ ಕೈಬರಹದ ಸ್ವಾಗತ ಟಿಪ್ಪಣಿಯನ್ನು ನೀಡುವಂತಹ ಸಣ್ಣ ನಡೆಗಳು, ಗೆಸ್ಟ್‌ಗಳಿಗೆ ವಿಶೇಷ ಅನುಭವವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
- ಗೆಸ್ಟ್‌ಗಳಿಗೆ ಮನೆಯಂತಹ ಭಾವನೆ ಮೂಡಿಸಲು ಸಹಾಯ ಮಾಡಿ.. ನಿಮ್ಮ ಸ್ಥಳ ಮತ್ತು ನೀವು ನೀಡುವ ಎಲ್ಲವನ್ನೂ ಅವರ ದೃಷ್ಟಿಕೋನದಿಂದ ಬಿಂಬಿಸಲು ಪ್ರಯತ್ನಿಸಿ. ಮುಂಚಿತ ಚೆಕ್-ಇನ್‌ಗೆ ಅವಕಾಶ ನೀಡುವುದು ಮತ್ತು ಟವೆಲ್‌ಗಳನ್ನು ನೀಟಾಗಿ ಮಡಚಿ ಇರಿಸುವುದು ಮುಂತಾದ ವಿಷಯಗಳು ಉತ್ತಮ ಒಟ್ಟಾರೆ ರೇಟಿಂಗ್ ಮತ್ತು ಅದ್ಭುತ ರೇಟಿಂಗ್ ನಡುವಿನ ಪ್ರಮುಖ ಅಂಶವಾಗಿರಬಹುದು.
- ಸಂಪರ್ಕದಲ್ಲಿರಿ. ನಿಮ್ಮನ್ನು ಅಥವಾ ನಿಮ್ಮ ಸಹ-ಹೋಸ್ಟ್ ಅವರನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದು ಎಂದು ಗೆಸ್ಟ್‌ಗಳಿಗೆ ತಿಳಿಸಿ. ಗೆಸ್ಟ್‌ಗಳು ಸಂದೇಶಗಳನ್ನು ಕಳುಹಿಸಿದಾಗ ನಿಮ್ಮನ್ನು ಎಚ್ಚರಿಸಲು ನಿಮ್ಮ ಅಧಿಸೂಚನೆಗಳನ್ನು ಹೊಂದಿಸಿ.
ನಿಮ್ಮ ಲಿಸ್ಟಿಂಗ್‌ನ ಆಕರ್ಷಣೀಯತೆಯ ಮೇಲೆ ಗಮನ ಕೇಂದ್ರೀಕರಿಸಿ
ನಿಮ್ಮ ಲಿಸ್ಟಿಂಗ್ ಪುಟವನ್ನು ನಿಯಮಿತವಾಗಿ ರಿಫ್ರೆಶ್ ಮಾಡುವುದು ನಿಮ್ಮ ಸ್ಥಳಕ್ಕೆ ಸೂಕ್ತವಾದ ಗೆಸ್ಟ್‌ಗಳನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ.
ಉತ್ತಮ ಫೋಟೋಗಳು ಗಮನವನ್ನು ಸೆಳೆಯುತ್ತವೆ, ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಮನೆಯನ್ನು ಬುಕ್ ಮಾಡಲು ಗೆಸ್ಟ್‌ಗಳಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತವೆ. ನಿಮಗೆ ಸೂಪರ್‌ಹೋಸ್ಟ್ ಸ್ಟೇಟಸ್ ಅನ್ನು ತಲುಪಲು ಸಹಾಯ ಮಾಡಲು ನಿಮ್ಮ ಲಿಸ್ಟಿಂಗ್‌ನ ಫೋಟೋಗಳನ್ನು ನವೀಕರಿಸುವುದನ್ನು ಪರಿಗಣಿಸಿ.
- ನಿಮ್ಮ ಚಿತ್ರಗಳನ್ನು ಯೋಜಿಸಿ. ನಿಮ್ಮ ಮನೆಯ ವಿಶಿಷ್ಟ ವಿವರಗಳು, ಜನಪ್ರಿಯ ಸೌಲಭ್ಯಗಳು ಮತ್ತು ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ಪ್ರದರ್ಶಿಸುವ ಚಿತ್ರಗಳನ್ನು ಪಡೆಯುವತ್ತ ಗಮನಹರಿಸಿ. ಗೆಸ್ಟ್‌ಗಳು ಬಳಸಬಹುದಾದ ಪ್ರತಿ ರೂಮ್ ಮತ್ತು ಪ್ರದೇಶವನ್ನು ವಿವಿಧ ದೃಷ್ಟಿಕೋನಗಳಿಂದ ಸೆರೆಹಿಡಿಯಿರಿ.
- ಅಡ್ಡಲಾಗಿರುವ, ಹೈ-ರೆಸಲ್ಯೂಶನ್ ಚಿತ್ರಗಳನ್ನು ಅಪ್‌ಲೋಡ್ ಮಾಡಿ. ಫೋಟೋಗಳು ಕನಿಷ್ಠ 800 x 1,200 ಪಿಕ್ಸೆಲ್‌ಗಳನ್ನು ಹೊಂದಿರಬೇಕು. ಸುಮಾರು 10 ಮೆಗಾಬೈಟ್‌ಗಳವರೆಗಿನ ದೊಡ್ಡ ಫೈಲ್ ಗಾತ್ರಗಳಿದ್ದರೆ ಉತ್ತಮ.
- ವೃತ್ತಿಪರತೆ ಇರಲಿ.ಸಹಾಯ ಮಾಡಲು ವೃತ್ತಿಪರ ಛಾಯಾಗ್ರಾಹಕರನ್ನು ನೇಮಿಸಿಕೊಳ್ಳುವುದನ್ನು ಪರಿಗಣಿಸಿ. Airbnb ವಿಶ್ವಾದ್ಯಂತದ ಆಯ್ದ ನಗರಗಳಲ್ಲಿ ನಿಮ್ಮನ್ನು ವೃತ್ತಿಪರರೊಂದಿಗೆ ಕನೆಕ್ಟ್ ಮಾಡಬಹುದು.
- ಫೋಟೋ ಟೂರ್ ರಚಿಸಿ. ನಿಮ್ಮ ಮನೆಯ ಲೇಔಟ್ ಅನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಲು Airbnb ಯ ಟೂಲ್ ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ರೂಮ್‌ಗಳ ಪ್ರಕಾರ ಸ್ವಯಂಚಾಲಿತವಾಗಿ ವಿಂಗಡಿಸುತ್ತದೆ. ನೀವು ಫೋಟೋಗಳನ್ನು ಸರಿಸಬಹುದು, ತೆಗೆದುಹಾಕಬಹುದು ಮತ್ತು ಸೇರಿಸಬಹುದು, ಪ್ರತಿ ರೂಮ್‌ಗೆ ವಿವರಗಳನ್ನು ಸೇರಿಸಬಹುದು ಮತ್ತು ಪ್ರತಿ ಫೋಟೋಗೆ ಶೀರ್ಷಿಕೆಗಳನ್ನು ಬರೆಯಬಹುದು.
ನಿಮ್ಮ ಲಿಸ್ಟಿಂಗ್‌ನಲ್ಲಿರುವ ವಿವರಗಳು ಅದು ಹೇಗೆ ಕಾಣುತ್ತದೆ ಎಂಬುದರಷ್ಟೇ ಮುಖ್ಯವಾಗಿವೆ. ನಿಮ್ಮ ಶೀರ್ಷಿಕೆ, ವಿವರಣೆ ಮತ್ತು ಸೌಲಭ್ಯಗಳು ಗೆಸ್ಟ್‌ಗಳನ್ನು ಆಕರ್ಷಿಸಲು ಮತ್ತು ಅವರ ವಾಸ್ತವ್ಯಕ್ಕಾಗಿ ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.
- ಕಿರು, ವಿವರಣಾತ್ಮಕ ಲಿಸ್ಟಿಂಗ್ ಶೀರ್ಷಿಕೆಯನ್ನು ಸೇರಿಸಿ. ನಿಮ್ಮ ಶೀರ್ಷಿಕೆಯು ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಅನನ್ಯ, ನಿಖರವಾದ ದೃಷ್ಟಿಕೋನವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, "ಉಫಿಝಿ ಬಳಿಯ ಪ್ರಶಾಂತ ಸ್ಟುಡಿಯೋ" ಎಂಬ ಶೀರ್ಷಿಕೆಯು ಇಟಲಿಯ ಫ್ಲಾರೆನ್ಸ್‌ನ ಕೇಂದ್ರ ಪ್ರದೇಶದಲ್ಲಿ, ಪ್ರಶಾಂತ ಸ್ಥಳದಲ್ಲಿರುವ ಅಪಾರ್ಟ್‌ಮೆಂಟ್ ಇದಾಗಿದೆ ಎಂಬುದನ್ನು ಕೆಲವು ಪದಗಳಲ್ಲಿ ತಿಳಿಸುತ್ತದೆ.
- ಸ್ಪಷ್ಟ, ಪ್ರಾಮಾಣಿಕ ಲಿಸ್ಟಿಂಗ್ ವಿವರಣೆಗಳು ಅತ್ಯುತ್ತಮ ಫಲಿತಾಂಶ ನೀಡುತ್ತವೆ. ನಿಮ್ಮ ಸ್ಥಳದಲ್ಲಿ ಗೆಸ್ಟ್‌ಗಳು ಏನು ನೋಡಬಹುದು, ಕೇಳಬಹುದು ಮತ್ತು ಅನುಭವಿಸಬಹುದು ಎಂಬುದನ್ನು ವಿವರಿಸುವ ಸ್ಪಷ್ಟ ವಿವರಗಳನ್ನು ಸೇರಿಸಿ. ಉದಾಹರಣೆಗೆ, ಹಿತ್ತಲಿನಲ್ಲಿ ಬೇಲಿ ಹಾಕಲಾಗಿದೆ, ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಓಡಾಡಲು ಸಾಕಷ್ಟು ಸ್ಥಳಾವಕಾಶವಿದೆ ಎಂದು ನೀವು ಹೇಳಬಹುದು.
- ನೀವು ನೀಡುವ ಪ್ರತಿಯೊಂದು ಸೌಲಭ್ಯವನ್ನು ಸೇರಿಸಿ. ಕೀಲಿ ಬಾಕ್ಸ್ ಅನ್ನು ಸ್ಮಾರ್ಟ್ ಲಾಕ್‌ನೊಂದಿಗೆ ಬದಲಾಯಿಸುವುದು ಅಥವಾ ನಿಮ್ಮ ವೈಫೈ ಅನ್ನು ಅಪ್‌ಗ್ರೇಡ್ ಮಾಡುವುದು ಮುಂತಾದ ಯಾವ ಜನಪ್ರಿಯ ಸೌಲಭ್ಯಗಳನ್ನು ನೀವು ಸೇರಿಸಬಹುದು ಅಥವಾ ಸುಧಾರಿಸಬಹುದು ಎಂಬುದನ್ನು ಪರಿಗಣಿಸಿ. ಗೆಸ್ಟ್‌ಗಳು ಹುಡುಕುವ ಪ್ರಮುಖ ಸೌಕರ್ಯಗಳಲ್ಲಿ ಸ್ವತಃ ಚೆಕ್-ಇನ್, ವೈಫೈ, ವಾಷರ್, ಡ್ರೈಯರ್, ಟಿವಿ ಅಥವಾ ಕೇಬಲ್ ಮತ್ತು ಬಾರ್ಬೆಕ್ಯೂ ಪ್ರದೇಶ ಒಳಗೊಂಡಿವೆ.***
*ಅಕ್ಟೋಬರ್ 2023 ರಿಂದ ಅಕ್ಟೋಬರ್ 2024 ರವರೆಗೆ ಸೂಪರ್‌ಹೋಸ್ಟ್‌ಗಳು ಮತ್ತು ಸೂಪರ್‌ಹೋಸ್ಟ್‌ಗಳಲ್ಲದವರ ಸರಾಸರಿ ಗಳಿಕೆಗಳ ಆಧಾರದ ಮೇಲೆ.
**ಅಕ್ಟೋಬರ್ 7, 2024 ರ ಆಂತರಿಕ Airbnb ಡೇಟಾದ ಆಧಾರದ ಮೇಲೆ.
**ಜನವರಿ 1 ರಿಂದ ಜೂನ್ 30, 2024 ರವರೆಗೆ ವಿಶ್ವಾದ್ಯಂತ ಹೆಚ್ಚಾಗಿ ಹುಡುಕಲಾದ ಸೌಲಭ್ಯಗಳನ್ನು ಅಳೆಯುವ Airbnb ಆಂತರಿಕ ಡೇಟಾದ ಪ್ರಕಾರ.
ನಿಮ್ಮ ಬೆಲೆ ಮತ್ತು ಇತರ ಸೆಟ್ಟಿಂಗ್‌ಗಳು ಎಲ್ಲ ಸಮಯಗಳಲ್ಲೂ ನಿಮ್ಮ ನಿಯಂತ್ರಣದಲ್ಲಿರುತ್ತವೆ. ನಿಮ್ಮ ಫಲಿತಾಂಶಗಳು ಭಿನ್ನವಾಗಿರಬಹುದು.
ಸಂದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೋಸ್ಟ್‌ಗಳಿಗೆ ಹಣ ನೀಡಲಾಯಿತು.
ಹೋಸ್ಟಿಂಗ್ ಸಲಹೆಗಳು ಸ್ಥಳೀಯ ಕಾನೂನಿಗೆ ಒಳಪಟ್ಟಿರುತ್ತವೆ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.