Airbnb ಯಲ್ಲಿ ಹಣ ಗಳಿಸುವುದು ಹೇಗೆ

Airbnb ಯಲ್ಲಿ ನಿಮ್ಮ ಸ್ಥಳವನ್ನು ಲಿಸ್ಟ್ ಮಾಡಲು ಮತ್ತು ಹಣ ಸಂಪಾದಿಸಲು ಹೋಸ್ಟ್‌ಗಳಿಂದ ಸಲಹೆಗಳನ್ನು ಪಡೆಯಿರಿ.
Airbnb ಅವರಿಂದ ಅಕ್ಟೋ 23, 2020ರಂದು
4 ನಿಮಿಷ ಓದಲು
ಅಕ್ಟೋ 23, 2020 ನವೀಕರಿಸಲಾಗಿದೆ

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ - ಖಾಲಿ ರೂಮ್, ಎರಡನೇ ಮನೆ ಅಥವಾ ನಗರದಿಂದ ಹೊರಗಿರುವಾಗ ಬಾಡಿಗೆಗೆ ನೀಡಲು ಅಪಾರ್ಟ್ಮೆಂಟ್ ಹೊಂದಿದ್ದರೆ, Airbnb ನಿಮ್ಮ ಜಾಗವನ್ನು ಲಿಸ್ಟ್ ಮಾಡಿ ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕ ಸಾಧಿಸುವ ಕಾರ್ಯವನ್ನು ಸುಲಭಗೊಳಿಸಿ ನಿಮಗೆ ಸಹಾಯಮಾಡುತ್ತದೆ. ಆದರೆ Airbnb ಯಲ್ಲಿ ನೀವು ಹಣವನ್ನು ಹೇಗೆ ಗಳಿಸುತ್ತೀರಿ?

  1. ನಿಮ್ಮ ಜಾಗವನ್ನು ಲಿಸ್ಟ್ ಮಾಡುವ ಮೂಲಕ ಪ್ರಾರಂಭಿಸಿ-ಇದು ಉಚಿತ, ಮತ್ತು Airbnb ನಿಮ್ಮ ರಾತ್ರಿಯ ದರದಲ್ಲಿ ಒಂದು ಸಣ್ಣ ಶೇಕಡಾವನ್ನು ಮಾತ್ರ ಸಂಗ್ರಹಿಸುತ್ತದೆ
  2. ನೀವು ಯಾವ ರೀತಿಯ ಹೋಸ್ಟ್ ಆಗಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ (ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ)
  3. ನೀವು ಎಷ್ಟು ಶುಲ್ಕ ವಿಧಿಸಲು ಬಯಸುತ್ತೀರಿ ಎಂದು ನಿರ್ಧರಿಸಿ

ಹೋಸ್ಟಿಂಗ್ ನಿಮಗೆ ಸೂಕ್ತವಾಗಿದೆಯೇ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲವೇ? ಈ 5 ಹೋಸ್ಟ್‌ಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಹೋಸ್ಟಿಂಗ್ ಅವರಿಗಾಗಿ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ ಮತ್ತು ಕೆಲವು ಹೋಸ್ಟಿಂಗ್ ಸಲಹೆಗಳನ್ನು ನೀಡಿದ್ದಾರೆ.

ಎಲೈಸ್: ಸಾಂದರ್ಭಿಕ ಹೋಸ್ಟ್

ಅಟ್ಲಾಂಟಾದಲ್ಲಿ ಯಶಸ್ವಿ ಛಾಯಾಗ್ರಾಹಕ ಮತ್ತು ಸಣ್ಣ ವ್ಯಾಪಾರ ಮಾಲೀಕರಾಗಿ, ಸೂಪರ್‌ಹೋಸ್ಟ್ ಎಲೀಸ್ ಹೊಸ ಸೃಜನಾತ್ಮಕ ಪ್ರಯತ್ನವನ್ನು ಹುಡುಕುತ್ತಿದ್ದರು. ಸಾಂದರ್ಭಿಕವಾಗಿ ಅವಳ ಸಣ್ಣ ಮನೆಯನ್ನು ಹೋಸ್ಟ್ ಮಾಡುವುದರಿಂದ ಆಕೆಯ ಆಕಾಂಕ್ಷೆಯನ್ನು ತೃಪ್ತಿಪಡಿಸುವ ಮಾರ್ಗವಾಗಿ ಮಾರ್ಪಟ್ಟಿದ್ದು, ಅದನ್ನು ಹಂತಹಂತವಾಗಿ ಪಾವತಿಸಲು ಸಹಾಯ ಮಾಡಿತು;

ಎಲೀಸ್ ಮತ್ತು ಅವಳ ಪತಿ ಕಾಡಿನಲ್ಲಿ ತಮ್ಮ ಪುಟ್ಟ ಮನೆಯಲ್ಲಿ ಸಮಯವನ್ನು ಆನಂದಿಸದಿದ್ದಾಗ, ಅವರು ಆ ಆರಾಮದಾಯಕ ಸ್ಥಳದಲ್ಲಿ ಗೆಸ್ಟ್‌ಗಳನ್ನು ಹೋಸ್ಟ್ ಮಾಡುತ್ತಾರೆ. ಸಣ್ಣ ಮನೆ ಈಗ ದಂಪತಿಗೆ ಹಣ ಗಳಿಸಲು ಮತ್ತೊಂದು ಮಾರ್ಗವಾಗಿದೆ, ಅದನ್ನು ಅವರು ತಮ್ಮ ಪ್ರಯಾಣ ಮತ್ತು ಎರಡನೇ ಸಣ್ಣ ಮನೆಗೆ ಹೂಡಿಕೆ ಮಾಡುತ್ತಿದ್ದಾರೆ.

ಹೋಸ್ಟ್‌ ಮಾಡುವುದರ ಬಗ್ಗೆ ಎಲಿಸ್ ಅವರ ಸಲಹೆಗಳು:

  • ಹೀಗೆ ಮಾಡಿ-ನೀವು ಎಂದಿಗೂ 100% ಸಿದ್ಧರಾಗಿರುವುದಿಲ್ಲ, ಆದರೆ ನಿಮ್ಮ ಇಷ್ಟವಾಗುವ ಸ್ಥಳವನ್ನು ಉಚಿತವಾಗಿ ಲಿಸ್ಟ್ ಮಾಡಬಹುದು
  • ಸ್ನೇಹಿತರು ಮತ್ತು ಕುಟುಂಬದವರ ಬಳಿ ತಮ್ಮ ಕೌಶಲಗಳನ್ನು ಹಂಚಿಕೊಳ್ಳಲು ಕೇಳುವ ಮೂಲಕ, ಅಂದರೆ ಸೋರುವ ನಲ್ಲಿಯನ್ನು ಸರಿಪಡಿಸಲು ಅಥವಾ ಅಲಂಕಾರಕ್ಕೆ ಸಹಾಯ ಮಾಡುವಂತೆ ಕೇಳುವ ಮೂಲಕ
  • ವೆಚ್ಚವನ್ನು ಕಡಿತಗೊಳಿಸಿ
  • ನಿಮ್ಮ ಸ್ಥಳದ ಬಳಿ ನೀವು ವಾಸಿಸದಿದ್ದರೆ, ಚೆಕ್-ಇನ್‌ ಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವಂತಹ ಯಾರನ್ನಾದರೂ ಹುಡುಕಿ

ಶಿನ್ಯಾ: ಅರೆಕಾಲಿಕ ಹೋಸ್ಟ್

ಶಿನ್ಯಾ ಅವರು ಜಪಾನ್‌ನ ಒಸಾಕಾದಲ್ಲಿನ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರು ಮತ್ತು ಅರೆಕಾಲಿಕ ಸೂಪರ್‌ಹೋಸ್ಟ್ ಆಗಿದ್ದಾರೆ. ಅವರು ಕುಟುಂಬದ ನೈಸರ್ಗಿಕ ನೂಲುಗಳ ವ್ಯವಹಾರದ ನಿರ್ದೇಶಕರಾಗಿದ್ದು, ಹೋಸ್ಟಿಂಗ್ ಎಂಬುದು ಅವರ ಪೂರ್ಣ ಸಮಯದ ಕೆಲಸದಿಂದ ಸಿಗುತ್ತಿರುವ ವಿರಾಮವಾಗಿದೆ. ಶಿನ್ಯಾ ಅವರು ಇದನ್ನು ಮೆಚ್ಚಿಕೊಂಡಿದ್ದಾರೆ.

"ಹೋಸ್ಟಿಂಗ್ ತುಂಬಾ ಆನಂದದಾಯಕವಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ" ಎಂದು ಶಿನ್ಯಾ ಅವರು ಹೇಳುತ್ತಾರೆ. "ಇದು ನನಗೆ ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ—ನಾನು ಮಾಡುವ ಕೆಲಸದಲ್ಲಿ ಈ ರೀತಿ ಇರುವುದಿಲ್ಲ."

ಕುಟುಂಬದ ಎರಡನೇ ಮನೆಯನ್ನು ನವೀಕರಿಸಿದ ನಂತರ

ಶಿನ್ಯಾ 2016 ರಲ್ಲಿ ಹೋಸ್ಟ್ ಮಾಡಲು ಪ್ರಾರಂಭಿಸಿದರು. ಕಚೇರಿ ಮತ್ತು ಮನೆ ಎರಡೂ ಅವರ ಪ್ರಾಪರ್ಟಿಯಲ್ಲಿಯೇ ಇದೆ. ಇದರಿಂದಾಗಿ ಕಚೇರಿಯಲ್ಲಿನ ಜವಾಬ್ದಾರಿಗಳನ್ನು ಸರಿದೂಗಿಸುತ್ತಲೇ ಗೆಸ್ಟ್‌ಗಳ ಸ್ಥಳವನ್ನು ಸಿದ್ಧಪಡಿಸಲು ಸುಲಭವಾಗುತ್ತಿದೆ.

"ಕೆಲಸದ ನಂತರ ನನ್ನ ಬಿಡುವಿನ ಸಮಯದಲ್ಲಿ ನಾನು ಗೆಸ್ಟ್‌ಗಳಿಗೆ ಪ್ರತಿಕ್ರಿಯಿಸುತ್ತಿರುತ್ತೇನೆ ಮತ್ತು ಅವರು ಅಗತ್ಯವಿರುವ ಎಲ್ಲವನ್ನೂ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತ ಆ ಸಮಯವನ್ನು ಕಳೆಯುತ್ತೇನೆ" ಎಂದು ಶಿನ್ಯಾ ಹೇಳುತ್ತಾರೆ. "ತಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಗೆಸ್ಟ್‌ಗಳು ಭಾವಿಸುವುದು ಮುಖ್ಯವಾಗಿದೆ ಮತ್ತು ಇದು ನನಗೆ ತುಂಬಾ ಸಂತೋಷವನ್ನು ತರುತ್ತದೆ."

ಶಿನ್ಯಾ ಅವರ ಹೋಸ್ಟಿಂಗ್ ಸಲಹೆಗಳು:

  • ಹೆಚ್ಚು ಗೆಸ್ಟ್‌ಗಳನ್ನು ಆಕರ್ಷಿಸಲುಮತ್ತು ಬುಕಿಂಗ್‌ಗಳನ್ನು ಹೆಚ್ಚಿಸಲು ನಿಮ್ಮ ಆರಂಭಿಕ ಗಳಿಕೆಗಳನ್ನು ನಿಮ್ಮ ಸ್ಥಳದಲ್ಲಿ ಹೂಡಿಕೆ ಮಾಡಿ
  • ನಿಮಗೆ ಶುಚಿಗೊಳಿಸಲು ಸಾಧ್ಯವಾಗದ ವಾರಗಳಲ್ಲಿ ಗೆಸ್ಟ್‌ಗಳಲ್ಲಿ ಯಾರನ್ನಾದರೂ ಆ ಕೆಲಸಕ್ಕಾಗಿ ನೇಮಿಸಿಕೊಳ್ಳಿ
  • ಗೆಸ್ಟ್‌ಗಳ ಮೆಸೇಜ್‌ಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಲು Airbnb ಆ್ಯಪ್ ಬಳಸಿ

ಸ್ಟಾರ್: ಪೂರ್ಣಕಾಲಿಕ ಹೋಸ್ಟ್

ಹಣಕಾಸು ಮತ್ತು ರಿಯಲ್ ಎಸ್ಟೇಟ್‌ ಕ್ಷೇತ್ರದ ಬಿಡುವಿರದ ವೃತ್ತಿಜೀವನ ಮತ್ತು ಮಕ್ಕಳ ಆರೈಕೆಯಲ್ಲಿ ಸಮತೋಲನ ಕಾಪಾಡಲು ಶ್ರಮಿಸುತ್ತಾ ದಣಿದು ಉತ್ತರ ಕ್ಯಾರೊಲಿನಾದ ಚಾರ್ಲೆಟ್‌ನ ಸೂಪರ್‌ಹೋಸ್ಟ್‌ ಆಗಿರುವ ಸ್ಟಾರ್‌ ಬದಲಾವಣೆಗಾಗಿ ಎದುರು ನೋಡುತ್ತಿದ್ದರು. ಸ್ಥಳೀಯ ವಿಶ್ರಾಂತಿ ತಾಣಗಳಲ್ಲಿ ಆರಾಮದಾಯಕ ವಾರಾಂತ್ಯಗಳನ್ನು ಸತತವಾಗಿ ಅರಸಿದ ನಂತರ ಸ್ಟಾರ್‌ ಮತ್ತು ಆಕೆಯ ಪತಿ ಬ್ರಿಯಾನ್, "ನಾವು ಈ ರೀತಿಯ ಸ್ಥಳವನ್ನು ಸೃಷ್ಟಿಸಲು ಸಾಧ್ಯವೇ ?" ಎಂದು ಸ್ವತಃ ತಮ್ಮನ್ನೇ ಕೇಳಿಕೊಂಡರು.

ಮನೆ ನವೀಕರಣಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖರೀದಿ-ಮಾರಾಟ ಕ್ರಿಯೆಯಲ್ಲಿ ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿ ಗಳಿಸಿದ ಅನುಭವವನ್ನು ಸದುಪಯೋಗಪಡಿಸಿಕೊಂಡು ದಂಪತಿ ಒಮ್ಮೆ ಪ್ರಯತ್ನಿಸಿ ನೋಡಲು ತಮ್ಮ ಪ್ರಾಪರ್ಟಿಗಳಲ್ಲಿ ಒಂದನ್ನು Airbnb ಯಲ್ಲಿ ಲಿಸ್ಟ್‌ ಮಾಡಿದರು. ಇಂದು, ಅವರು ತಮ್ಮ ಬೆಳೆಯುತ್ತಿರುವ ಬುಟೀಕ್ ಹೋಟೆಲ್ ಮತ್ತು ವಿಶ್ರಾಂತಿ ತಾಣ, ಓಲ್ಡ್ ಹೈಗ್ಲರ್ ಇನ್ನ್‌ನ ಭಾಗವಾಗಿ, ಚಾರ್ಲೆಟ್ ಪ್ರದೇಶದಲ್ಲಿ 5 ಮನೆಗಳನ್ನು ಲಿಸ್ಟ್ ಮಾಡಿದ್ದಾರೆ.

ಸ್ಟಾರ್ ‌ಅವರಿಗೆ ಕೊನೆಗೂ ಹೋಸ್ಟಿಂಗ್ ವ್ಯವಹಾರಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಲು ಹಣಕಾಸು ಕ್ಷೇತ್ರದಲ್ಲಿನ ತಮ್ಮ ಉದ್ಯೋಗವನ್ನು ತೊರೆಯುವುದು ಸಾಧ್ಯವಾಯಿತು. "ಕುಟುಂಬಗಳಿಗೆ ಪರಸ್ಪರ ಇನ್ನಷ್ಟು ಹತ್ತಿರವಾಗಲು ಸಹಾಯವಾಗುವಂತಹ ಸ್ಥಳವನ್ನು ಒದಗಿಸುತ್ತಿದ್ದೇನೆ ಎಂದು ತಿಳಿದು ನನಗೆ ಖುಷಿಯಾಗುತ್ತದೆ," ಎಂದು ಸ್ಟಾರ್ ತಮ್ಮ ಬೆಳೆಯುತ್ತಿರುವ ವ್ಯವಹಾರದ ಬಗ್ಗೆ ಹೇಳುತ್ತಾರೆ.

ಸ್ಟಾರ್ ಅವರ ಹೋಸ್ಟಿಂಗ್ ಸಲಹೆಗಳು:

  • ನೀವು ವಿಧಿಸುವ ಶುಲ್ಕವು ನಿಮಗೆ ಬಿಟ್ಟದ್ದಾಗಿರುವುದರಿಂದ, ಶುಲ್ಕವನ್ನು ಕಡಿಮೆಯಿಂದ ಪ್ರಾರಂಭಿಸಿ ಮತ್ತು ಕೆಲವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದ ನಂತರ ಹೆಚ್ಚಿಸಿ
  • ನಿಮ್ಮ ಪ್ರದೇಶದಲ್ಲಿಇತರ ಹೋಸ್ಟ್‌ಗಳು ಏನು ಶುಲ್ಕ ವಿಧಿಸುತ್ತಾರೆ ಎಂಬುದನ್ನು ಸಂಶೋಧಿಸಿ
  • ಗೆಸ್ಟ್‌ಗಳು ತೆರಳಿದ ಬಳಿಕ ಮತ್ತೆ ಗೆಸ್ಟ್‌ಗಳು ಬರುವ ನಡುವಿನ ಅವಧಿಯಲ್ಲಿ ನಿಮ್ಮ ಸ್ಥಳವನ್ನು ಸಿದ್ಧಪಡಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನುಲೆಕ್ಕ ಹಾಕಿ ಮತ್ತು ಅದಕ್ಕೆ ಅನುಗುಣವಾಗಿ ಶುಲ್ಕವನ್ನು ಸೇರಿಸಿ

ಪಾರ್ಥ್: ಸಹ-ಹೋಸ್ಟ್

"ನಾನು ಯಾವಾಗಲೂ ಪ್ರಯಾಣಿಕರನ್ನು ಹೋಸ್ಟ್ ಮಾಡಲು ಮತ್ತು ಅವರಿಗೆ ನಗರವನ್ನು ತೋರಿಸಲು ಬಯಸುತ್ತಿದ್ದೆ. ‘ಹೀಗಾಗಿ Airbnb ಯನ್ನು ಏಕೆ ಪ್ರಯತ್ನಿಸಬಾರದು?’ ಎಂದು ಆಲೋಚಿಸಿದೆ" ಎಂದು ಲಿಥುವೇನಿಯಾದ ಕೌನಾಸ್‌ನ ಹೋಸ್ಟ್ ಪಾರ್ಥ್ ಹೇಳುತ್ತಾರೆ. "ನನ್ನ ಅಪಾರ್ಟ್‌ಮೆಂಟ್ ಉತ್ತಮ ಸ್ಥಳದಲ್ಲಿದೆ ಮತ್ತು ನಾನು ಗೆಸ್ಟ್ ರೂಮ್ ಅನ್ನು ಹೊಂದಿದ್ದೇನೆ."

ಪಾರ್ಥ್ ಈ ಅನುಭವವನ್ನು ತುಂಬಾ ಇಷ್ಟಪಟ್ಟರು. ಹಲವಾರು ಗುಣಲಕ್ಷಣಗಳಿಗೆ ಸಹ-ಹೋಸ್ಟ್ ಆಗುತ್ತೀರಾ ಎಂದು ಸ್ನೇಹಿತರೊಬ್ಬರು ಕೇಳಿದಾಗ, ಅವರು ಉತ್ಸಾಹದಿಂದ ಒಪ್ಪಿಕೊಂಡರು. "ನನ್ನ ಕೆಲಸದ ವೇಳಾಪಟ್ಟಿ ತುಂಬಾ ಅನುಕೂಲಕರವಾಗಿರುವುದರಿಂದ ನನ್ನ ಸಹ-ಹೋಸ್ಟಿಂಗ್ ಜವಾಬ್ದಾರಿಗಳನ್ನು ನಾನು ನೋಡಿಕೊಳ್ಳಬಹುದು. ಅಗತ್ಯಕ್ಕೆ ತಕ್ಕಂತೆ ಕ್ಲೀನರ್‌ಗಳನ್ನು ನಿರ್ವಹಿಸುವುದು, ಗೆಸ್ಟ್‌ಗಳೊಂದಿಗೆ ತೊಡಗಿಸಿಕೊಳ್ಳುವುದು ಹೀಗೆ" ಎಂದು ಅವರು ಹೇಳುತ್ತಾರೆ.

ಈಗ ಪಾರ್ಥ್ ತಮ್ಮ ಸಾಮರ್ಥ್ಯವನ್ನು ಸಹ-ಹೋಸ್ಟಿಂಗ್ ಮೇಲೆ ಕೇಂದ್ರೀಕರಿಸುತ್ತಿದ್ದಾರೆ—ಅವರು ಇನ್ನು ಮುಂದೆ ತಮ್ಮ ಸ್ಥಳವನ್ನು ಲಿಸ್ಟ್ ಮಾಡುವುದಿಲ್ಲ ಮತ್ತು ಅವಕಾಶಕ್ಕಾಗಿ ಕೃತಜ್ಞರಾಗಿದ್ದಾರೆ. "ನಾನು Airbnb ಮೂಲಕ ಅನೇಕ ವಿಶಿಷ್ಟ ವ್ಯಕ್ತಿಗಳನ್ನು ಭೇಟಿಯಾಗುತ್ತೇನೆ," ಎಂದು ಅವರು ಹೇಳುತ್ತಾರೆ. "ಹೋಸ್ಟಿಂಗ್ ಸಮುದಾಯದ ಭಾಗವಾಗಲು ನೀವು ನಿಮ್ಮ ಸ್ವಂತ ಸ್ಥಳವನ್ನು ಲಿಸ್ಟ್ ಮಾಡಬೇಕಾಗಿಲ್ಲ ಎಂದು ನಾನು ಯಾವಾಗಲೂ ಇತರರಿಗೆ ಹೇಳುತ್ತಿರುತ್ತೇನೆ."

ಪಾರ್ಥ್ ಅವರ ಹೋಸ್ಟಿಂಗ್ ಸಲಹೆಗಳು:

ಬರ್ಟ್: ಒಬ್ಬ ಅನುಭವೀ ಹೋಸ್ಟ್

Airbnb ಯಲ್ಲಿ ಹೋಸ್ಟ್ ಆಗಲು ನೀವು ಭೌತಿಕ ಸ್ಥಳವನ್ನು ಲಿಸ್ಟ್ ಮಾಡಬೇಕಾಗಿಲ್ಲ. ಪ್ರಪಂಚದಾದ್ಯಂತದ ಪ್ರತ್ಯೇಕ ವ್ಯಕ್ತಿಗಳು Airbnb ಸಮುದಾಯವನ್ನು ಅನುಭವಗಳ ಹೋಸ್ಟ್‌ಗಳಾಗಿ ಸೇರುತ್ತಿದ್ದಾರೆ. ಈ ಜನರು ಅತಿಥಿಗಳಿಗೆ ವಾಸ್ತವ್ಯ ಹೂಡಬಹುದಾದ ಸ್ಥಳವನ್ನು ಒದಗಿಸುವುದಿಲ್ಲ. ಅವರು ಪ್ರಯಾಣಿಕರಿಗೆ ವಿನೋದ, ತೊಡಗಿಸಿಕೊಳ್ಳುವ ಚಟುವಟಿಕೆಗಳನ್ನು ಸ್ಥಳೀಯ ಸಂಸ್ಕೃತಿಯಲ್ಲಿ ಮುಳುಗಿಸುವಂತೆ ಹೋಸ್ಟ್‌ ಮಾಡುತ್ತಾರೆ.

"ಗ್ರ್ಯಾಮಿ ವಿಜೇತರೊಂದಿಗೆ ಸಂಗೀತ ಮಾರ್ಗದರ್ಶನ ನನ್ನ ಅನುಭವವಾಗಿದೆ" ಎಂದು ಬರ್ಟ್ ಹೇಳುತ್ತಾರೆ. "ನಾನು ನನ್ನ ಮ್ಯೂಸಿಕ್ ಸ್ಟುಡಿಯೊದಲ್ಲಿ ಒಂದರ ಮೇಲೆ ಒಂದರಂತೆ ಸೆಷನ್‌ಗಳನ್ನು ಆಯೋಜಿಸುತ್ತೇನೆ, ಅಲ್ಲಿ ಜನರು ತಮ್ಮ ಸಂಗೀತ ರಚನೆ ಮತ್ತು ಎಂಜಿನಿಯರಿಂಗ್ ಕೌಶಲಗಳು, ರಾಪಿಂಗ್ ಶೈಲಿ, ಗಾಯಕ/ಗೀತರಚನಾಕಾರರ ಸಾಮರ್ಥ್ಯಗಳು, ಡಿಜೆಯ ವಿಶೇಷ ಶೈಲಿ ಮತ್ತು ಮುಂತಾದವುಗಳನ್ನು ಸುಧಾರಿಸಲು ನಾನು ಸಹಾಯ ಮಾಡುತ್ತೇನೆ."

ಬರ್ಟ್‌ಗೆ, ಅನುಭವದ ಹೋಸ್ಟ್ ಆಗಿರುವುದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಇತರರು ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯ ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ.

"Airbnb ಯಲ್ಲಿ ನಿಮ್ಮ ಕೆಲಸವನ್ನು ಮಾಡುವುದು ನಿಜವಾಗಿಯೂ ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುವಂತಿದೆ" ಎಂದು ಬರ್ಟ್ ಹೇಳುತ್ತಾರೆ. "ಆದರೆ ಸಾಮಾನ್ಯವಾಗಿ, ನೀವು ವ್ಯವಹಾರವನ್ನು ಪ್ರಾರಂಭಿಸಿದಾಗ, ನೀವು ವ್ಯವಹಾರ ಪರವಾನಗಿ ಅಥವಾ ಸಾಲವನ್ನು ಪಡೆಯಬೇಕು, ಸ್ವಲ್ಪ ಬಂಡವಾಳವನ್ನು ಹೊಂದಿರಬೇಕು ಮತ್ತು ಅದು ಬಹಳಷ್ಟು ಜನರಿಗೆ ಕಷ್ವವಾಗಬಹುದು. ಆದರೆ Airbnb ಯಲ್ಲಿ ನೀವು ಒಂದು ವಿಶಷ್ಟ ಆಲೋಚನೆ ಮತ್ತು $10 [USD] ಯೊಂದಿಗೆ ಫ್ರಾರಂಬಿಸಬಹುದು."

Airbnb ಯಲ್ಲಿ ಹೋಸ್ಟ್ ಆಗಿ ಹೇಗೆ ಹಣ ಗಳಿಸುವುದು ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Airbnb
ಅಕ್ಟೋ 23, 2020
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ