Airbnb ಹೋಸ್ಟ್ ಬ್ರೆಂಡಾ ನಿವೃತ್ತಿ ಆದಾಯವನ್ನು ಹೇಗೆ ಗಳಿಸುತ್ತಾರೆ

ಹೋಸ್ಟಿಂಗ್ ಒಬ್ಬ ನಿವೃತ್ತರಿಗೆ ತಮ್ಮ ಕುಟುಂಬದ ಮನೆಯನ್ನು ಉಳಿಸಿಕೊಳ್ಳಲು ಮತ್ತು ತಮ್ಮನ್ನು ತಾವು ಬೆಂಬಲಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
Airbnb ಅವರಿಂದ ನವೆಂ 1, 2018ರಂದು
3 ನಿಮಿಷ ಓದಲು
ಜನ 7, 2022 ನವೀಕರಿಸಲಾಗಿದೆ

Airbnb ನ ಹೋಸ್ಟ್ ಬ್ರೆಂಡಾ ಅವರು ನ್ಯೂ ಓರ್ಲೀ‌ನ್ಸ್‌ನ ಜೆಂಟಿಲ್ಲಿ ನೆರೆಹೊರೆಯಲ್ಲಿರುವ ತನ್ನ ಎರಡನೇ ಮನೆಗೆ ಗೆಸ್ಟ್‌ಗಳನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ನ್ಯೂ ನ್ಯೂ ಓರ್ಲೀ‌ನ್ಸ್‌ನಲ್ಲಿ ಹುಟ್ಟಿ ಬೆಳೆದ ಬ್ರೆಂಡಾ ಅವರು ತಮ್ಮ ಮನೆ ಹಾಗೂ ನಗರವನ್ನು ಪ್ರಪಂಚದಾದ್ಯಂತದಿಂದ ಬರುವ ಪ್ರವಾಸಿಗಳಿಗೆ ಪರಿಚಯಿಸಲು ಹೆಮ್ಮೆಪಡುತ್ತಾರೆ. "ನನ್ನ ಜೀವನದ ಎಲ್ಲಾ 66 ವರ್ಷಗಳ ಕಾಲ ನಾನು ಇಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು 32 ವರ್ಷಗಳಿಂದ ಈ ಆಸ್ತಿಯನ್ನು ಹೊಂದಿದ್ದೇನೆ" ಎಂದು ಅವರು ಹೇಳುತ್ತಾರೆ. “ನಾನು ನ್ಯೂ ಓರ್ಲೀ‌ನ್ಸ್‌ನ ಸಾರ್ವಜನಿಕ ಶಾಲೆಯಲ್ಲಿ ಓದಿದ್ದೇನೆ ಮತ್ತು ನನ್ನ ನಗರವನ್ನು ಜನರಿಗೆ ತೋರಿಸಲು ನಾನು ಇಷ್ಟಪಡುತ್ತೇನೆ.” ಬ್ರೆಂಡಾ ಅವರು ತಮ್ಮ ಎರಡನೇ ಪತಿಯೊಂದಿಗೆ ವಾಸಿಸಲು ಪ್ರಾರಂಭಿಸಿದಾಗ, ತಮ್ಮ ಕುಟುಂಬದ ಜೊತೆ ಮಕ್ಕಳನ್ನು ಬೆಳೆಸಿದ ಮನೆಯನ್ನು ಮಾರಾಟ ಮಾಡಲು ಬಯಸಲಿಲ್ಲ. ಹೋಸ್ಟಿಂಗ್ ಮೂಲಕ, ಅವರಿಗೆ ತಮ್ಮ ಮನೆಯನ್ನು ಉಳಿಸಿಕೊಳ್ಳಲು ಮತ್ತು ನಿವೃತ್ತಿಯ ಸಮಯದಲ್ಲಿ ತಮ್ಮನ್ನು ತಾವು ಬೆಂಬಲಿಕೊಳ್ಳಲು ಸಾಧ್ಯವಾಯಿತು.

ಬ್ರೆಂಡಾ ಅವರು ತಮ್ಮ ಮಗಳನ್ನು ಸ್ಪೇನ್‌ಗೆ ಸ್ಥಳಾಂತರಿಸಲು ಸಹಾಯ ಮಾಡುವಾಗ Airbnb ಅನ್ನು ಕಂಡುಕೊಂಡರು. "ನಾವು ಈ ಮಹಿಳೆಯ ಮನೆಯಲ್ಲಿ ಉಳಿದುಕೊಂಡಿದ್ದೆವು, ಹಾಗೂ ಅವರು ನಮಗೆ ತುಂಬಾ ಚೆನ್ನಾಗಿ ಉಪಚಾರ ಮಾಡಿದರು. ನನ್ನ ಮಗಳ ನಿವಾಸಕ್ಕೆ ಸ್ಥಳಾಂತರಿಸಲು ಅವರು ಸಹಾಯ ಮಾಡಿದರು. ಇದು ಅತ್ಯಂತ ಅದ್ಭುತವಾದ ಅನುಭವವಾಗಿತ್ತು, ಆಗ 'ನಾನು ಬೇರೆಯವರಿಗೂ ಇದೇ ರೀತಿ ಉಪಚಾರ ಮಾಡಬಹುದಲ್ವೇ' ಎಂದು ನಾನು ಯೋಚಿಸಿದೆ.” ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಗೆಸ್ಟ್‌ಗಳು ಭೇಟಿ ನೀಡಲು ಬಂದಾಗ, ಅವರಿಗೆ ತಿಂಡಿಗಳು ಮತ್ತು ಶಿಫಾರಸುಗಳಿಂದ ತುಂಬಿದ ವೆಲ್‌ಕಮ್ ಪ್ಯಾಕೇಜ್ ಅನ್ನು ಬ್ರೆಂಡಾ ಅವರು ನೀಡುತ್ತಾರೆ. ಎಲ್ಲಿಗೆ ಹೋಗಬೇಕು ಮತ್ತು ಇಡೀ ನಗರವನ್ನು ಹೇಗೆ ನೋಡಿ ಆನಂದಿಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಖಚಿತಪಡಿಸುತ್ತಾರೆ. "ನಾನು ಅವರಿಗೆ ನನ್ನ ಚಿಕ್ಕ 'ಮಿಸ್ ಬ್ರೆಂಡಾ' ಭಾಷಣವನ್ನು ನೀಡುತ್ತೇನೆ." ನನ್ನ ಗೆಸ್ಟ್‌ಗಳಲ್ಲಿ ಒಬ್ಬರು ಇದು ಅವರ ನೆಚ್ಚಿನ ಚಿಕ್ಕಮ್ಮನ ಮನೆಯಲ್ಲಿ ಇದ್ದಂತೆ ಭಾಸವಾಗುತ್ತಿದೆ ಎಂದು ಹೇಳಿದರು.”

ಬ್ರೆಂಡಾ ಅವರು ತಮ್ಮ ಗೆಸ್ಟ್‌ಗಳ ಜೊತೆಗೆ ಸ್ಥಳೀಯ ಆಕರ್ಷಣೀಯ ತಾಣಗಳ ಬಗ್ಗೆ ಇರುವ ಜ್ಞಾನವನ್ನು ಹಂಚಿಕೊಳ್ಳುವುದನ್ನು ಆನಂದಿಸುತ್ತಾರೆ ಮತ್ತು ನ್ಯೂ ಓರ್ಲೀ‌ನ್ಸ್‌ನ ಭಾಗವಾಗಿರದ ಹೊರಗಿನ ವಿಶಿಷ್ಟ ಸ್ಥಳಗಳಿಗೆ ಅವರನ್ನು ಕರೆದೊಯ್ಯುತ್ತಾರೆ. "ಖಾಸಗಿ ವಿಮಾನಗಳು ಬರುವ ಲೇಕ್‌ಫ್ರಂಟ್ ವಿಮಾನ ನಿಲ್ದಾಣಕ್ಕೆ ಜನರು ಹೋಗಬೇಕೆಂದು ನಾನು ಯಾವಾಗಲೂ ಶಿಫಾರಸು ಮಾಡುತ್ತೇವೆ. ಅಲ್ಲಿ ಮೆಸ್ಸಿನಾಸ್ ಎಂಬ ಮೋಹಕವಾದ ಪುಟ್ಟ ರೆಸ್ಟಾರೆಂಟ್ ಇದೆ - ಅವರು ವಿಶ್ವದ ಅತ್ಯುತ್ತಮ ಪ್ಯಾನ್‌ಕೇಕ್‌ಗಳನ್ನು ತಯಾರಿಸುತ್ತಾರೆ. ನೀವು ಎರಡನ್ನು ಆರ್ಡರ್ ಮಾಡಿದರೆ ಅದು ತುಂಬಾ ಹೆಚ್ಚು, ಏಕೆಂದರೆ ಅವು ಪ್ಲೇಟ್‌ನಷ್ಟು ದೊಡ್ಡದಾಗಿರುತ್ತವೆ,” ಬ್ರೆಂಡಾ ನಗುತ್ತಾ ಹೇಳುತ್ತಾರೆ. "ನಂತರ ನಾನು ಸಾಸ್ಸಾಫ್ರಾಸ್ ಅನ್ನು ಶಿಫಾರಸು ಮಾಡುತ್ತೇನೆ, ಅಲ್ಲಿ ನೀವು ನ್ಯೂ ಓರ್ಲಿಯನ್ಸ್‌ನ ಅತ್ಯಂತ ಅಧಿಕೃತ ರೆಸಿಪಿಯಾಗಿರುವ ಗುಂಬೋವನ್ನು ತಿನ್ನಬಹುದು. ಅವರು ಪ್ರತಿದಿನ ತಾಜಾ ಅಧಿಕೃತ ಗುಂಬೋವನ್ನು ತಯಾರಿಸುತ್ತಾರೆ."

ಬ್ರೆಂಡಾ ಅವರ Airbnb ಯಲ್ಲಿ ವಾಸ್ತವ್ಯದಿಂದ ಗೆಸ್ಟ್‌ಗಳು ಉಳಿಸಿದ ಹಣದಿಂದ ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸುವುದನ್ನು ನೋಡುತ್ತಾರೆ. “ನನ್ನ ಬಳಿ ಬಂದು ವಾಸ್ತವ್ಯ ಹೂಡುವ ಜನರು, ಮೂರು ದಿನಗಳವರೆಗೆ ಡೌನ್‌ಟೌನ್ ಹೋಟೆಲ್‌ನಲ್ಲಿ ಉಳಿಯಲು ಅವರ ಬಳಿ $600 ಇಲ್ಲದಿರಬಹುದು, ಆದರೆ ಅವರ ಬಳಿ ಇರುವ ಹಣವನ್ನೆಲ್ಲಾ ನ್ಯೂ ಓರ್ಲೀ‌ನ್ಸ್‌ನಲ್ಲಿ ಖರ್ಚು ಮಾಡುತ್ತಾರೆ. ಆದ್ದರಿಂದ, [ಗೆಸ್ಟ್‌ಗಳು] ತಮ್ಮ ಹಣವನ್ನು ಅಂಗಡಿಗಳಲ್ಲಿ ಖರ್ಚು ಮಾಡುತ್ತಿದ್ದಾರೆ, ಮತ್ತು ಅವರು ನಮ್ಮ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ.”

ಬ್ರೆಂಡಾಗೆ, ಹೋಸ್ಟಿಂಗ್ ತನ್ನ ಮನೆಯನ್ನು ಉಳಿಸಿಕೊಳ್ಳಲು ಮತ್ತು ಜೀವನ ನಿರ್ವಹಣೆಯ ಅಗತ್ಯಗಳನ್ನು ಪೂರೈಸಲು ಒಂದು ಮಾರ್ಗವಾಗಿದೆ. ಜೀವನವನ್ನೇ ಬದಲಿಸಿದ ಹಾನಿಯಿಂದಾಗಿ, ಬ್ರೆಂಡಾ ಅವರು ತಮ್ಮ ವೃತ್ತಿಜೀವನದಿಂದ ಬೇಗನೆ ನಿವೃತ್ತಿ ಹೊಂದಬೇಕಾಯಿತು. “ನನ್ನ ಕುತ್ತಿಗೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಹಾಗೂ ನನಗೆ ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿರಲಿಲ್ಲ.” ಕಟ್ರಿನಾ ಚಂಡಮಾರುತದ ನಂತರ, ಅವರ ವಿಮಾ ಕಂತುಗಳು ಮತ್ತು ಪ್ರಾಪರ್ಟಿ ತೆರಿಗೆಗಳು ಎರಡು ಪಟ್ಟು ಹೆಚ್ಚಾದವು. “ಅಧಿಕ ನೀರಿನ ಬಿಲ್‌ಗಳು, ವಿದ್ಯುತ್ ಬಿಲ್‌ಗಳು, ವಿಮೆ ಹಣಪಾವತಿಗಳು ಮತ್ತು ಪ್ರಾಪರ್ಟಿ ತೆರಿಗೆಗಳಿಂದಾಗಿ, ನಿಮ್ಮ ಬಳಿ ಉಳಿಯುವುದಾದರೂ ಏನು? ಕೊನೆಯದಾಗಿ ನಿಮ್ಮ ಬಳಿ ಉಳಿಯುವುದು ನಿಮ್ಮ ಕುಟುಂಬ ಹಾಗೂ ಸ್ನೇಹಿತರು ಅಷ್ಟೇ.”

ಈ ದೊಡ್ಡ ಮೊತ್ತದ ವೆಚ್ಚಗಳನ್ನು ಸರಿದೂಗಿಸಲು ಹೋಸ್ಟಿಂಗ್ ಗಮನಾರ್ಹ ಆದಾಯದ ಮೂಲವನ್ನು ಒದಗಿಸಿದೆ. “ಸಾಮಾಜಿಕ ಭದ್ರತೆಯ ಜೊತೆಗೆ, [ಹೋಸ್ಟಿಂಗ್] ನನ್ನ ಏಕೈಕ ಆದಾಯದ ಮೂಲವಾಗಿದೆ.” ನಗರವು ತನ್ನಿಂದ ಈ ಹಕ್ಕನ್ನು ಕಸಿದುಕೊಳ್ಳಲು ನಿರ್ಧರಿಸಬಹುದು ಎಂದು ಬ್ರೆಂಡಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವಸತಿ ಪ್ರದೇಶಗಳಲ್ಲಿನ ಎಲ್ಲಾ ಮನೆಗಳ ಅಲ್ಪಾವಧಿಯ ಬಾಡಿಗೆ ಪರವಾನಗಿಗಳನ್ನು ನಗರಸಭೆಯು ಶಾಶ್ವತವಾಗಿ ನಿಷೇಧಿಸಿದರೆ, “ಇದು ತುಂಬಾ ವಿಷಾದನೀಯ ಸಂಗತಿ, ಹಾಗೂ ನಾನು ನಷ್ಟದ ಕೂಪದಲ್ಲಿ ಮುಳುಗಿಹೋಗುತ್ತೇನೆ. ಇದಲ್ಲದೆ, ಅಲ್ಪಾವಧಿಯ ಬಾಡಿಗೆಗಳಿಂದ ಅದು ಪಡೆಯುವ ಆದಾಯದ ನಷ್ಟವನ್ನು ನಗರವು ಹೇಗೆ ಸರಿದೂಗಿಸುತ್ತದೆ ಎಂಬುದರ ಕುರಿತು ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ಇದು ನನ್ನ ಆದಾಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಇವುಗಳಿಂದಾಗಿ ಹತಾಶೆ ತುಂಬಾ ಹೆಚ್ಚಾಗಿದೆ.”

ಅಂತಿಮವಾಗಿ, ತಾತ್ಕಾಲಿಕ ಅಲ್ಪಾವಧಿಯ ಬಾಡಿಗೆ ಪರವಾನಗಿಗಳು ಅಥವಾ ಎರಡನೇ ಮನೆಗಳನ್ನು ಹೊಂದಿರುವ ತನ್ನಂತಹ ಜನರಿಗೆ ತಮ್ಮ ಸಂಪೂರ್ಣ ಮನೆಯ ಲಿಸ್ಟಿಂಗ್‌ಗಳನ್ನು ಹೋಸ್ಟ್ ಮಾಡುವುದನ್ನು ಮುಂದುವರಿಸಲು ನಗರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಬ್ರೆಂಡಾ ಅವರು ಆಶಿಸಿದ್ದಾರೆ. “ನನ್ನಂತೆಯೇ ಇಲ್ಲಿ ಶಾಶ್ವತವಾಗಿ ನೆಲೆಸಿರುವ ವೈಯಕ್ತಿಕ ಮನೆಮಾಲೀಕರು, ಜನರ ಪರವಾಗಿ ಅವರು ನಿರ್ಧರಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ.” ನ್ಯಾಯಯುತ ಮತ್ತು ಸಮಂಜಸವಾದ ಅಲ್ಪಾವಧಿಯ ಬಾಡಿಗೆ ನಿಯಮಗಳ ಅನುಸಾರವಾಗಿ, ಬ್ರೆಂಡಾ ಅವರು ತಮ್ಮ ಜೀವನವನ್ನು ಪೂರೈಸಲು ಅರ್ಥಪೂರ್ಣ ಆದಾಯ ಗಳಿಕೆಯನ್ನು ಮುಂದುವರಿಸಬಹುದು ಹಾಗೂ ಅವರ ಸುಂದರ ನಗರದ ಉತ್ತಮ ರಾಯಭಾರಿಯಾಗಿ ಮುಂದುವರಿಯಬಹುದು.

ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ನವೆಂ 1, 2018
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ