ಕೈಯಿಂದ ನಿರ್ಮಿಸಿದ ಮನೆ ಎರಡು ಸೂಪರ್‌ಹೋಸ್ಟ್‌ಗಳ ಅರೆ ನಿವೃತ್ತಿಗೆ ಹೇಗೆ ಸಹಾಯ ಮಾಡಿತು
ಸೂಪರ್‌ಹೋಸ್ಟ್‌ಗಳಾದ ಮೇರಿ ಮತ್ತು ಬಸ್ಟರ್ ರೆನಾಲ್ಡ್ಸ್ ಅವರಿಗೆ ಆತಿಥ್ಯ ಮತ್ತು ಮನೆ ನಿರ್ಮಾಣವು 40 ವರ್ಷಗಳಿಂದ ಅವರ ಜೀವನದ ಒಂದು ಭಾಗವಾಗಿದೆ. "ಇದು ಒಂದು ಜೀವನ ವಿಧಾನವಾಗಿದೆ," ಎಂದು ಬಸ್ಟರ್ ಹೇಳುತ್ತಾರೆ. ಅವರು ಮತ್ತು ಅವರ ಪತ್ನಿ ಮೇರಿ 1980 ರಿಂದ ತಮ್ಮ ಮನೆಯನ್ನು ತಾವೇ ಕೈಯಾರೆ ನಿರ್ಮಿಸುತ್ತಿದ್ದಾರೆ ಮತ್ತು ಅದನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. "ಈ ಎಲ್ಲಾ ಹೊಸ ಜನರು ಬರುತ್ತಿರುವುದರಿಂದ, ನೀವು ಮತ್ತೆ ನಿಮ್ಮ ಮನೆಯನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ ಪಡೆಯುತ್ತೀರಿ. ನಡೆದಿರುವುದರ ಬಗ್ಗೆ ನಮಗೆ ನಿಜವಾಗಿಯೂ ಹೆಮ್ಮೆಯಿದೆ." ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಬಸ್‌ನಲ್ಲಿ 30 ನಿಮಿಷ ಪ್ರಯಾಣಿಸಿ ತಲುಪಬಹುದಾದ ಹಾಗೂ ಹಿಂದೆ ಪಕ್ಷಿಧಾಮವಾಗಿದ್ದ ಸ್ಥಳದಲ್ಲಿ ಈ ಪ್ರಾಪರ್ಟಿ ಇದೆ. ಅದರಲ್ಲಿ ಒಂದು ಪ್ರಧಾನ ಮನೆ ಮತ್ತು ಮೂರು ಗೆಸ್ಟ್ ರೂಮ್‌ಗಳು ಹಾಗೂ ಎರಡು ಗೆಸ್ಟ್ ಕಾಟೇಜ್‌ಗಳಿವೆ. ಮತ್ತು ದಂಪತಿ ಕೊನೆಗೂ ಅದನ್ನು"ಕಳೆದ ರಾತ್ರಿ" ಪೂರ್ಣಗೊಳಿಸಿದರು!. ಮೇರಿ ನಗುತ್ತಾ, "ನಾನು ಅಕ್ಷರಶಃ ಹೊಸ ಬಾತ್‌ರೂಮ್‌ಗೆ ಟೈಲ್ಸ್ ಅಳವಡಿಸುವುದನ್ನು ಈಗಷ್ಟೇ ಮುಗಿಸಿದ್ದೇನೆ," ಎಂದು ಹೇಳಿದರು.
ಮೇರಿ ಮತ್ತು ಬಸ್ಟರ್ ತಮ್ಮ ಟೈಲ್ಸ್ ಅಳವಡಿಸುವ ಕೆಲಸವನ್ನು ಸ್ವಲ್ಪ ಸಮಯ ನಿಲ್ಲಿಸಿ ತಾವು ಹೇಗೆ ಹೋಸ್ಟ್ ಮಾಡುವುದನ್ನು ಪ್ರಾರಂಭಿಸಿದೆವು, ಅದು ತಮ್ಮನ್ನು ನಿವೃತ್ತಿ ಜೀವನದಲ್ಲಿ ಹೇಗೆ ಬೆಂಬಲಿಸಿತು ಮತ್ತು ತಮ್ಮಂತಹುದೇ ಇನ್ನೊಂದು ಮನೆಯು 3,000 ಮೈಲಿಗಳಷ್ಟು ದೂರದ ನೈಜೀರಿಯಾದಲ್ಲಿ ಏಕೆ ಇರಬಹುದು ಎಂಬುದನ್ನು ನಮಗೆ ವಿವರಿಸಿದರು.
ಸ್ವಂತವಾಗಿ ಮನೆ ನಿರ್ಮಿಸುವುದು ಒಂದು ದೊಡ್ಡ ಜವಾಬ್ದಾರಿಯಂತೆ ಕಾಣುತ್ತದೆ. ನೀವಿಬ್ಬರೂ ಮೊದಲು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಾ?
ಮೇರಿ: “ವಾಸ್ತವದಲ್ಲಿ, ಇಲ್ಲ. ಬಸ್ಟರ್ ನಿವೃತ್ತ ಛಾಯಾಗ್ರಾಹಕರಾಗಿದ್ದಾರೆ ಮತ್ತು ನಾನು ನನ್ನ ಜೀವನದ ಬಹುಸಮಯ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದೇನೆ. ನಾವು ಕಾಟೇಜ್‌ಗಳನ್ನು ನಿರ್ಮಿಸಿದ ಭೂಮಾಲೀಕರನ್ನು ಗಮನಿಸಿದ್ದೆವು ಮತ್ತು ಅವು ಎಷ್ಟು ಕಳಪೆಯಾಗಿ ನಿರ್ಮಾಣಗೊಂಡಿದ್ದವು ಎಂದರೆ, ಆತ ಅದನ್ನು ನಿರ್ಮಿಸಬಹುದು ಎಂದಾದರೆ... ನಾವು ಇನ್ನಷ್ಟು ಚೆನ್ನಾಗಿ ನಿರ್ಮಿಸಬಹುದು ಎಂದು ಯೋಚಿಸಿದೆವು. ಆದ್ದರಿಂದ ಬಸ್ಟರ್ ಇಟ್ಟಿಗೆಯಿಂದ ನಿರ್ಮಿಸುವ ಕುರಿತ ಕೋರ್ಸ್ ಮಾಡಿದರು ಮತ್ತು ನಾನು ಪ್ಲಂಬಿಂಗ್ ಪುಸ್ತಕವನ್ನು ಖರೀದಿಸಿದೆ."
ಅದು ನಿಮ್ಮ ತರಬೇತಿಯೇ?
ಬಸ್ಟರ್: (ನಗುತ್ತಾರೆ) “ಆಗ ಮನೆ ಖರೀದಿಸಲು ನಮ್ಮ ಬಳಿ ಹಣವಿರಲಿಲ್ಲ. ನಾವು ಬಯಸಿದ ಜಮೀನಿನಲ್ಲಿ ನಾವು ಬಯಸಿದ ಮನೆಯನ್ನು ಪಡೆಯುಲು ಅದೊಂದೇ ಮಾರ್ಗವಾಗಿತ್ತು. ಹಾಗಾಗಿ ನಾವು 3,000 ರ‍್ಯಾಂಡ್‌ನೊಂದಿಗೆ ($218 USD) ಆರಂಭಿಸಿದೆವು ಮತ್ತು ಅಲ್ಲಿಂದ ಮುಂದುವರಿಸಿದೆವು. ಪ್ರತಿ ವಾರಾಂತ್ಯ, ಕೆಲಸವಿಲ್ಲದ ಪ್ರತಿ ನಿಮಿಷ, ಉಳಿಸಿದ ಪ್ರತಿ ಪೈಸೆಯನ್ನು ಅದಕ್ಕಾಗಿ ವ್ಯಯಿಸಿದೆವು.”
ಮೇರಿ: “ಬಸ್ಟರ್ ಬಾಹ್ಯ ನಿರ್ಮಾಣವನ್ನು ಮಾಡಿದರೆ ನಾನು ಆಂತರಿಕ ಕೆಲಸಗಳನ್ನು ನಿರ್ವಹಿಸಿದೆ. ಬೀಮ್‌ಗಳನ್ನು ಸ್ಥಳೀಯ ಗಮ್‌ಟ್ರೀಗಳಿಂದ ತಯಾರಿಸಲಾಗಿದೆ ಮತ್ತು ಇತರ ಬಹಳಷ್ಟು ಮರಗಳು ಜೋಹಾನ್ಸ್‌ಬರ್ಗ್‌ನ ಮೊದಲ ಚಿನ್ನದ ಗಣಿಗಳಲ್ಲಿ ಒಂದಾದ ಕ್ರೌನ್ ಮೈನ್ಸ್ ಸ್ಕ್ರ್ಯಾಪ್‌ಯಾರ್ಡ್‌ನಿಂದ ಬಂದವು. ನಾವು ಹೊರಗಿನವರಿಗೆ ಗುತ್ತಿಗೆ ನೀಡಿದ ಒಂದೇ ಕೆಲಸವೆಂದರೆ ವಿದ್ಯುತ್‌ಗೆ ಮತ್ತು ವಿಶೇಷವಾಗಿ ತಯಾರಿಸಬೇಕಿದ್ದ ಹುಲ್ಲಿನ ಛಾವಣಿಗೆ ಸಂಬಂಧಿಸಿದ್ದಾಗಿದೆ. ಹುಲ್ಲು ಛಾವಣಿ ತಯಾರಿಯು ಒಂದು ಸಾಂಪ್ರದಾಯಿಕ ಕರಕುಶಲ ಕಲೆಯಾಗಿದೆ, ಆದ್ದರಿಂದ ಛಾವಣಿಗೆ ಹುಲ್ಲು ಹಾಸಲು ನಾವು ಸ್ಥಳೀಯ ಪರಿಣತರನ್ನು ಗೊತ್ತುಪಡಿಸಿದೆವು, ಅವರ ಪತ್ನಿಯಂದಿರು ಅದಕ್ಕಾಗಿ ಹುಲ್ಲನ್ನು ತಮ್ಮ ಕೈಗಳಿಂದಲೇ ಕತ್ತರಿಸಿದ್ದರು. ಇದು ಮೈಕೆಲ್ಯಾಂಜೆಲೊ ಮತ್ತು ಸಿಸ್ಟೀನ್ ಚಾಪೆಲ್ ತಮ್ಮ ಬಹುತೇಕ ಜೀವಿತಾವಧಿಯನ್ನು ಏಣಿ ಹತ್ತಲು ಮತ್ತು ಕೆಳಗಿಳಿಯಲು ಕಳೆದಂತಾಗಿದೆ. ಇದು ಕಲಾಕೃತಿಯಲ್ಲಿ ವಾಸಿಸುವಂತಿದೆ."
ಮನೆಯ ಕುರಿತು ಚಾಟ್ ಮಾಡುವುದು ಗೆಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಮಾರ್ಗವೇ?
ಬಸ್ಟರ್: “ಹೌದು, ಖಂಡಿತಕ್ಕೂ. ಮನೆ ತೆರೆದ-ಪ್ಲಾನ್‌ನದಾಗಿದೆ, ಅದು 1980ರಲ್ಲಿ ನಿಘಂಟಿನಲ್ಲಿಯೂ ಇರಲಿಲ್ಲ. ಈಗ ಸಮಯವು ಅಂತಿಮವಾಗಿ ನಾವಿರುವಲ್ಲಿಗೆ ತಲುಪಿದೆ! ಗೆಸ್ಟ್‌ಗಳು ಅಡುಗೆಮನೆ ಬಾಗಿಲಿನ ಮೂಲಕ ಒಳಗೆ ಬರುತ್ತಾರೆ ಮತ್ತು ನಾವು ಅವರಿಗೆ [ಮನೆ ಮತ್ತು] ಬೆಳಗ್ಗಿನ ಉಪಾಹಾರಕ್ಕೆ ಒದಗಿಸುವ ಸಂಗತಿಗಳು ತಕ್ಷಣವೇ ಕಣ್ಣಿಗೆ ಬೀಳುತ್ತವೆ: ಮನೆಯಲ್ಲಿ ಬೆಳೆದ ಮತ್ತು ಮನೆಯಲ್ಲಿಯೇ ತಯಾರಿಸಿದ ಜಾಮ್‌ಗಳು, ಉಪ್ಪಿನಕಾಯಿ ಮತ್ತು ಚಟ್ನಿ ಜೊತೆಗೆ ಮನೆಯಲ್ಲಿಯೇ ಬೇಯಿಸಿದ ಗ್ರಾನೋಲಾ ಮತ್ತು ಮಫಿನ್‌ಗಳು. ವೈವಿಧ್ಯಮಯ ಬ್ರೆಡ್‌ಗಳು, ಸಾಕಷ್ಟು ಕಾಫಿ ಮತ್ತು ರೂಯಿಬೋಸ್ ಚಹಾ ಯಾವಾಗಲೂ ಲಭ್ಯವಿದ್ದು, ಇವೆಲ್ಲ ದಕ್ಷಿಣ ಆಫ್ರಿಕಾದ ವೈಶಿಷ್ಟ್ಯವಾಗಿವೆ. ನಾವು ಬೆಳಗ್ಗಿನ ಉಪಾಹಾರದ ಟೇಬಲ್‌ನಲ್ಲಿ ಕನಿಷ್ಠ ಒಂದು ಗಂಟೆ ಮಾತನಾಡುತ್ತಾ ಕಳೆಯುತ್ತೇವೆ."
ಮೇರಿ: “5-ಸ್ಟಾರ್ ಹೋಟೆಲ್ ನಿರೀಕ್ಷಿಸುತ್ತಿದ್ದ ನೈಜೀರಿಯಾದ ಒಂದು ಗುಂಪು ನಮ್ಮಲ್ಲಿಗೆ ಬಂದಿದ್ದರು. ಅವರು ಆಗಮಿಸಿದಾಗ ಅವರ ಮುಖ ಸಪ್ಪೆಯಾಯಿತು, ಆದರೆ ಅವರು ಅನುಭವದಲ್ಲಿ ತಲ್ಲೀನರಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅವರು ಹೊರಡುವ ವೇಳೆಗೆ, ಒಬ್ಬರು ನಮ್ಮ ಮನೆಯ ಯೋಜನೆಗಳ ಪ್ರತಿಯನ್ನು ಕೇಳಿದರು. ಏಕೆಂದರೆ ಅವರು ನಮ್ಮಂತೆಯೇ ಮನೆ ನಿರ್ಮಿಸಲು ಬಯಸಿದ್ದರು. ಆದ್ದರಿಂದ ನೈಜೀರಿಯಾದಲ್ಲಿ ಎಲ್ಲೋ ನಮ್ಮ ಮನೆಯ ತದ್ರೂಪು ಇರಬಹುದು."
ಅದು ಅತ್ಯುನ್ನತ ಗೌರವದಂತೆ ಕಾಣಿಸುತ್ತದೆ! ನೀವು ಹೋಸ್ಟ್ ಮಾಡುವುದನ್ನು ಹೇಗೆ ಪ್ರಾರಂಭಿಸಿದಿರಿ?
ಮೇರಿ: “AFS-American Field Service ಎಂಬ ಅಂತರರಾಷ್ಟ್ರೀಯ ವಿನಿಮಯ ಕಾರ್ಯಕ್ರಮ ಮೂಲಕ. 1984ರಲ್ಲಿ, ನಾವು ಅಮೆರಿಕಕ್ಕೆ ಅದ್ಭುತವಾದ ಟ್ರಿಪ್ ಕೈಗೊಂಡಿದ್ದೆವು, ಮತ್ತು ನಾವು ಹಿಂದಿರುಗಿದ ನಂತರ, AFS ಹೋಸ್ಟ್ ಕುಟುಂಬಗಳನ್ನು ಹುಡುಕುತ್ತಿತ್ತು. ಅಂದಿನಿಂದ, ನಾವು ಪ್ರತೀವರ್ಷ ತಲಾ ಒಂದರಂತೆ, ಪ್ರಪಂಚದಾದ್ಯಂತದ ಏಳು ಮಂದಿ ವಿದ್ಯಾರ್ಥಿಗಳನ್ನು ಹೋಸ್ಟ್ ಮಾಡಿದ್ದೇವೆ. ಹೋಸ್ಟಿಂಗ್ ನಮಗೆ ಒಂದು ಜೀವನ ವಿಧಾನವಾಯಿತು. ನಾವು ಮೂಲತಃ ನಮ್ಮ ಹೆತ್ತವರಿಗೆಂದು ಮತ್ತು ನಂತರ ಬಾಡಿಗೆಗೆಂದು ಎರಡು ಕಾಟೇಜ್‌ಗಳನ್ನು ಸೇರಿಸಿದೆವು. 2017ರಲ್ಲಿ, ನಮ್ಮ ಮಗಳು ಕೇಟಿ, Airbnb ಗೆ ಸೇರುವಂತೆ ನಮ್ಮನ್ನು ಪ್ರೋತ್ಸಾಹಿಸಿದರು ಮತ್ತು ನಾವು ಬಹುತೇಕ ತಕ್ಷಣವೇ ಬುಕಿಂಗ್ ಪಡೆಯಲಾರಂಭಿಸಿದೆವು."
ಹೋಸ್ಟಿಂಗ್‌ನಲ್ಲಿ ನೀವು ಹೆಚ್ಚಾಗಿ ಏನನ್ನು ಆನಂದಿಸುತ್ತೀರಿ?
ಮೇರಿ: "ಅದು ಜನರು. ಇಲ್ಲಿ ಜನರ ಬರುವಿಕೆ, ವಿಭಿನ್ನ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜನರು ದಕ್ಷಿಣ ಆಫ್ರಿಕಾಕ್ಕೆ ಏಕೆ ಬರುತ್ತಾರೆ ಎಂಬ ಕುರಿತು ತಿಳಿದುಕೊಳ್ಳುವುದನ್ನು ನಾವು ಯಾವಾಗಲೂ ಆನಂದಿಸುತ್ತೇವೆ. ನಮ್ಮಲ್ಲಿಗೆ ಷಿಕಾಗೋದ ಆಫ್ರಿಕನ್ ಅಮೆರಿಕನ್ನರ ಅದ್ಭುತ ಗುಂಪೊಂದು ಬಂದಿತ್ತು, ಅವರು ತಮ್ಮ ಬೇರುಗಳನ್ನು ಕಂಡುಹಿಡಿಯಬಯಸಿದ್ದರು. ಅವರು ಅಧಿಕೃತ ಆಫ್ರಿಕನ್ ಅನುಭವಗಳನ್ನು ಆನಂದಿಸಬಹುದೆಂದು ನಾವು ಭಾವಿಸಿದ್ದ ಸ್ಥಳಗಳಿಗೆ ನಾವು ಅವರನ್ನು ನಿರ್ದೇಶಿಸಿದ್ದೇದೆವು. ಮತ್ತು ಅವರು ಸಂಪೂರ್ಣವಾಗಿ ಬೌಲ್ಡ್ ಆಗಿದ್ದರು ಹಾಗೂ ಇಲ್ಲಿನ ಸಂಸ್ಕೃತಿಯೊಂದಿಗೆ ಅಸ್ಮಿತೆಯ ಭಾವನೆಯನ್ನು ಪಡೆದುಕೊಂಡರು."
ಬಸ್ಟರ್: "ನಮ್ಮ ಕಾಂಪೋಸ್ಟಿಂಗ್ ಸಿಸ್ಟಂನಿಂದ ತುಂಬಾ ಪ್ರಭಾವಿತರಾದ ಆರ್ಜೆಂಟೀನಾದ ಒಬ್ಬ ವ್ಯಕ್ತಿ ಹಿಂತಿರುಗಿ ಕಾಂಪೋಸ್ಟ್ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರು. ಅಂತಹ ಕಥೆಗಳು ನಮ್ಮನ್ನು ಮುಂದುವರಿಯಲು ಪ್ರೇರೇಪಿಸುತ್ತವೆ."
ಮೇರಿ: “ಜೊತೆಗೆ, ಬಸ್ಟರ್ ಆರಂಭಿಕ ನಿವೃತ್ತಿಯನ್ನು ತೆಗೆದುಕೊಳ್ಳಬೇಕಾಯಿತು ಮತ್ತು ನಾನು ಅರೆ ನಿವೃತ್ತಳಾಗಿರುವುದರಿಂದ, ಈ ಪೂರಕ ಆದಾಯವು ದೊಡ್ಡ ಬದಲಾವಣೆಯನ್ನು ತಂದಿದೆ. ನಮ್ಮ ಮನೆಯಲ್ಲಿ ವಾಸಿಸುವುದನ್ನು ಮುಂದುವರಿಸಲು ಇದು ನಮಗೆ ಅವಕಾಶ ಮಾಡಿಕೊಟ್ಟಿದೆ. ನಾವು ಇಬ್ಬರು ಮನೆಯ ಕೆಲಸಗಾರರು ಮತ್ತು ತೋಟಗಾರರನ್ನು ಸಹ ನೇಮಿಸಿಕೊಂಡಿದ್ದೇವೆ. ನಾವು Airbnb ಆದಾಯವನ್ನು ಹೊಂದಿಲ್ಲದಿದ್ದರೆ, ಅವರೂ ಕೂಡ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಉದ್ದೇಶ ಲಾಭ ಗಳಿಸುವುದು ಅಥವಾ ವಿಜೃಂಭಿಸುವುದು—ಖಂಡಿತವಾಗಿಯೂ ಅಲ್ಲ—ಆದರೆ ನಮ್ಮ ಮನೆಯನ್ನು ಉಳಿಸಿಕೊಳ್ಳುವುದು ಮತ್ತು ನೆಲ್ಲಿ, ಎಲಿಜಬೆತ್ ಮತ್ತು ಮಿಶೆಕ್ ಅವರನ್ನು ಉದ್ಯೋಗ ನೀಡುವುದಾಗಿದೆ."
ನೀವು ಹೋಸ್ಟ್‌ಗಳಿಗೆ ಯಾವುದೇ ಸಲಹೆಯನ್ನು ಹೊಂದಿದ್ದೀರಾ?
ಮೇರಿ: “ನೀವು ಮಾಡುತ್ತಿರುವುದನ್ನು ನೀವು ಆನಂದಿಸಬೇಕು–ಇಲ್ಲದಿದ್ದರೆ ಅದಕ್ಕೆ ಅರ್ಥವಿಲ್ಲ. ನಾವು ಅದನ್ನು ಆನಂದಿಸುತ್ತೇವೆ. ಮತ್ತು ಜನರು ಪ್ರಶಂಸಿಸಿದಾಗ, ನೀವು ಅದನ್ನು ಸರಿಯಾಗಿ ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿಯುತ್ತದೆ."
ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.