Airbnb ಯಲ್ಲಿ ಪ್ರಾರಂಭಿಸಿ

ಲಿಸ್ಟಿಂಗ್ ರಚಿಸುವುದರಿಂದ ಹಿಡಿದು ನಿಮ್ಮ ಸ್ಥಳವನ್ನು ಸಿದ್ಧಪಡಿಸುವವರೆಗೆ, ಹೋಸ್ಟ್ ‌ ಮಾಡುವುದನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಿರಿ.
Airbnb ಅವರಿಂದ ಡಿಸೆಂ 18, 2019ರಂದು
2 ನಿಮಿಷ ಓದಲು
ಸೆಪ್ಟೆಂ 2, 2021 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಮನೆ ಹಂಚಿಕೊಳ್ಳುವಿಕೆಯ ಬಗ್ಗೆ ಸ್ಥಳೀಯ ನಿಯಮಗಳನ್ನು ಪರಿಶೀಲಿಸಿ

  • ನಿಮ್ಮ ಪ್ರತಿ ರಾತ್ರಿಯ ಬೆಲೆಯನ್ನು ನಿಗದಿಪಡಿಸಿ ಮತ್ತು ನಿಮ್ಮ ಕ್ಯಾಲೆಂಡರ್ ಅನ್ನು ಹೊಂದಿಸಿ

  • ನಿಮ್ಮ ಲಿಸ್ಟಿಂಗ್ ಬಗ್ಗೆ ವಿಶಿಷ್ಟ ಅಥವಾ ಅತಿವಿಶೇಷ ಯಾವುದು ಎಂಬುದನ್ನು ಹೈಲೈಟ್ ಮಾಡಿ

  • ಅಚ್ಚುಕಟ್ಟಾಗಿ ಇರಿಸಿ, ಮೂಲಭೂತ ಸಾಮಗ್ರಿಗಳನ್ನು ಸಂಗ್ರಹಿಸಿ ಮತ್ತು ಸ್ಪಷ್ಟವಾದ ಮನೆ ನಿಯಮಗಳನ್ನು ಒದಗಿಸಿ

ನಿಮ್ಮ ಲಿಸ್ಟಿಂಗ್ ರಚಿಸಿ

ನಿಮ್ಮ ಲಿಸ್ಟಿಂಗ್ ನಿಮ್ಮ ಸ್ಥಳಕ್ಕಾಗಿ ಒಂದು ಜಾಹೀರಾತಿನಂತೆ ಪರಿಗಣಿಸಿ. ನಿಮ್ಮ ಜಾಗದ ವಿಶೇಷತೆಗಳನ್ನು ಹೈಲೈಟ್ ಮಾಡುತ್ತಾ, ಆಕರ್ಷಕವಾಗಿ ಕಾಣುವಂತೆ ತೋರಿಸುತ್ತಾ, ಅದರ ಯಾವುದೇ ನ್ಯೂನತೆಗಳ ಬಗ್ಗೆಯೂ ಸ್ಪಷ್ಟವಾಗಿರಲು ಪ್ರಯತ್ನಿಸಬೇಕು.

  • ಮೂಲಗಳೊಂದಿಗೆ ಪ್ರಾರಂಭಿಸಿ. ನಿಮ್ಮ ಸ್ಥಳದ ಲೊಕೇಶನ್, ನೀವು ನೀಡುತ್ತಿರುವ ಪ್ರಾಪರ್ಟಿಯ ವಿಧ, ಮತ್ತು ಗೆಸ್ಟ್‌‌ಗಳಿಗೆ ಲಭ್ಯವಿರುವ ಹಾಸಿಗೆಗಳು ಮತ್ತು ಸ್ನಾನದ ಕೋಣೆಗಳ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ.
  • ಸ್ಥಳದ ಫೋಟೋಗಳನ್ನು ತೆಗೆದುಕೊಳ್ಳಿ. ಗೆಸ್ಟ್‌ಗಳು ಎಲ್ಲಿ ವಾಸ್ತವ್ಯ ಹೂಡಬೇಕೆಂದು ನಿರ್ಧರಿಸುವಾಗ ಫೋಟೋಗಳನ್ನು ಬ್ರೌಸ್ ಮಾಡಲು ಇಷ್ಟಪಡುತ್ತಾರೆ. ಅತ್ಯುತ್ತಮ ಫೋಟೋಗಳನ್ನು ಸ್ನ್ಯಾಪ್ ಮಾಡಲು, ನಿಮ್ಮ ಸ್ಥಳವನ್ನು ಮೊದಲೇ ಅಚ್ಚುಕಟ್ಟಾಗಿ ಇರಿಸಿ. ಸಾಧ್ಯವಾದಷ್ಟು ನೈಸರ್ಗಿಕ ಬೆಳಕು ಮತ್ತು ಲ್ಯಾಂಡ್‌ಸ್ಕೇಪ್ ದೃಷ್ಟಿಕೋನವನ್ನು ಬಳಸಿಕೊಂಡು ಪ್ರತಿ ಪ್ರದೇಶದ ಶಾಟ್‌ಗಳನ್ನು ತೆಗೆದುಕೊಳ್ಳಿ.
  • ವಿಶಿಷ್ಟ ವಿವರಗಳನ್ನು ಹೈಲೈಟ್ ಮಾಡಿ. ನಿಮ್ಮ ಪಟ್ಟಿಯ ಶೀರ್ಷಿಕೆ ಮತ್ತು ವಿವರಣೆಯನ್ನು ಬರೆಯುವಾಗ, ನಿಮ್ಮ ವಸತಿಯನ್ನು ವಿಶೇಷವಾಗಿಸುವುದನ್ನು ಪರಿಗಣಿಸಿ, ಉದಾಹರಣೆಗೆ ಸುಂದರ ರಮಣೀಯ ಸ್ಥಳದ ದೃಶ್ಯ ಅಥವಾ ಈಜುಕೊಳ. ಅಲ್ಲದೆ, ಗೆಸ್ಟ್‌ಗಳು ಬುಕ್ಕಿಂಗ್ ಮಾಡುವ ಮುಂಚೆ ತಿಳಿದುಕೊಳ್ಳಬೇಕಾದ ಯಾವುದೇ ವಿಷಯಗಳನ್ನು ನಿಮ್ಮ ವಿವರಣೆಯಲ್ಲಿ ಉಲ್ಲೇಖಿಸಿ, ಉದಾಹರಣೆಗೆ ಮೆಟ್ಟಿಲುಗಳು ಅಥವಾ ಪಾರ್ಕಿಂಗ್ ವ್ಯವಸ್ಥೆಗಳು.

ಲಾಜಿಸ್ಟಿಕ್ಸ್ ಅನ್ನು ವ್ಯವಸ್ಥಿತಗೊಳಿಸಿ

ಮುಂದಿನ ಹಂತ, ಸುಗಮ ಹೋಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಲು ನಿಮ್ಮ ಲಿಸ್ಟಿಂಗ್ ನ ಎಲ್ಲಾ ಲಾಜಿಸ್ಟಿಕ್ಸ್‌ಗಳನ್ನು ಸಿದ್ಧಪಡಿಸುವುದು.

ನಿಮ್ಮ ಸ್ಥಳವನ್ನು ಸಿದ್ಧಪಡಿಸಿ

ನೀವು ನಿಮ್ಮ ಮೊದಲನೇ ಗೆಸ್ಟ್‌ ಅನ್ನು ನಿರೀಕ್ಷಿಸುತ್ತಿರಲೀ ಅಥವಾ ೧೦೦ ನೇ ಗೆಸ್ಟ್‌ ಅನ್ನು, ಯಾವ ಸಮಯದಲ್ಲಾದರೂ ಸರಿ ನಿಮ್ಮ ಜಾಗವನ್ನು ಸಿದ್ಧಪಡಿಸಲು ನೀವು ತೆಗೆದುಕೊಳ್ಳಬೇಕಾದ ಹಂತಗಳು ಇಲ್ಲಿವೆ.

  • ಅಚ್ಚುಕಟ್ಟಾಗಿಸಿ. ಗೆಸ್ಟ್‌ಗಳು ಪ್ರವೇಶಿಸಬಹುದಾದ ಪ್ರತಿ ರೂಮ್ ಅನ್ನು, ವಿಶೇಷವಾಗಿ ಬೆಡ್‌ರೂಮ್‌ಗಳು, ಸ್ನಾನಗೃಹಗಳು ಮತ್ತು ಅಡುಗೆಮನೆಯನ್ನು ಸ್ವಚ್ಛಗೊಳಿಸಿ. ಮೇಲ್ಮೈಗಳ ಮೇಲೆ ಮತ್ತು ನೆಲದ ಮೇಲೆ ಕೂದಲು, ಧೂಳು ಅಥವಾ ಬೂಷ್ಟು ಇಲ್ಲವೇ ಎಂದು ಪರಿಶೀಲಿಸಿ, ಹಾಸಿಗೆ(ಗಳಿಗೆ) ಹೊಸ ಬಳಕೆಯ ಲಿನನ್‌ಗಳನ್ನು ಹಾಕಿ ಸಿದ್ಧಪಡಿಸಿ.
  • ನಿಮ್ಮ ಮೌಲ್ಯಯುತ ವಸ್ತುಗಳನ್ನು ಸ್ಟೋರ್ ಮಾಡಿ. ನಿಮ್ಮಲ್ಲಿ ಆಭರಣಗಳು, ಪಾಸ್‌ಪೋರ್ಟ್‌ಗಳು ಅಥವಾ ಇತರ ಮೌಲ್ಯಯುತ ವಸ್ತುಗಳು ಇದ್ದಲ್ಲಿ, ಅವುಗಳನ್ನು ಲಾಕ್ ಮಾಡಿದ ರೂಮ್, ಅಲಮಾರು, ಸುರಕ್ಷಿತ ಅಥವಾ ಸ್ಟೋರೇಜ್ ಸೌಲಭ್ಯದಲ್ಲಿ ಇರಿಸುವುದನ್ನು ಪರಿಗಣಿಸಿ. ಅಥವಾ ನೀವು ಅವುಗಳನ್ನು ಕುಟುಂಬ ಅಥವಾ ಸ್ನೇಹಿತರ ಬಳಿ ಇಡಬಹುದು.
  • ಅಗತ್ಯ ವಸ್ತುಗಳನ್ನು ಸಂಗ್ರಹಿಸಿ. ಗೆಸ್ಟ್‌ಗಳು ಮನೆಯಲ್ಲಿರುವಂತೆ ಭಾವಿಸಲು ಸೋಪ್, ಶಾಂಪೂ, ಟಾಯ್ಲೆಟ್ ಪೇಪರ್, ಹಾಸಿಗೆ ಲಿನನ್‌ಗಳು ಮತ್ತು ಟವೆಲ್‌ಗಳಂತಹ ಸೌಕರ್ಯಗಳನ್ನು ಒದಗಿಸುವುದನ್ನು ಪರಿಗಣಿಸಿ. ಅಗತ್ಯ ಬಿದ್ದರೆ ಬಳಸಲು ಕೆಲವು ಹೆಚ್ಚಿನ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.
  • ಚೆಕ್-ಇನ್ ವಿವರಗಳನ್ನು ಒದಗಿಸಿ. ಗೆಸ್ಟ್‌ಗಳನ್ನು ಚೆಕ್-ಇನ್ ಮತ್ತು ಚೆಕ್- ಔಟ್ ಮಾಡಲು ಸಿದ್ಧರಾಗಿರಿ, ಅಥವಾ ಸಹಾಯ ಮಾಡಲು ಸ್ನೇಹಿತರು ಅಥವಾ ಕುಟುಂಬದವರನ್ನು ಸೇರಿಸಿಕೊಳ್ಳಿ. ಯಾರೂ ಇಲ್ಲದಿದ್ದರೆ, ನೀವು ಯಾವಾಗಲೂ ಲಾಕ್‌ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಲಾಕ್ ಅನ್ನು ಬಳಸಬಹುದು ಮತ್ತು ಗೆಸ್ಟ್‌ಗಳಿಗೆ Airbnb ಅಪ್ಲಿಕೇಶನ್‌ನಲ್ಲಿ ಚೆಕ್-ಇನ್ ಸೂಚನೆಗಳನ್ನು ಒದಗಿಸಬಹುದು.
  • ಆತಿಥ್ಯ ಮುಗಿಯುವ ಸಮಯದಲ್ಲಿ,ಗೆಸ್ಟ್‌ಗಳಿಗೆಆಹ್ಲಾದವನ್ನುಂಟುಮಾಡುವಂತಹ ಕೆಲವು ವಿಶೇಷ ವಿವರಗಳನ್ನು ಸೇರಿಸಿ . ಸೂಚನೆಗಳು ಮತ್ತು ಸಲಹೆಗಳಿರುವ ಮನೆ ಕೈಪಿಡಿ& nbsp; ಓರಿಯಂಟ್ ಗೆಸ್ಟ್‌‌ಗಳಿಗೆ ಸಹಾಯವಾಗಬಹುದು. ಒಂದು ಬಾಟಲ್ ವೈನ್ ಅಥವಾ ಸಣ್ಣ ಉಡುಗೊರೆಯೂ ಗೆಸ್ಟ್‌ಗಳಿಗೆ ಹೆಚ್ಚು ಸ್ವಾಗತ ಅನುಭವ ನೀಡಬಹುದು, ಆದರೆ ಅದು ಖಂಡಿತವಾಗಿಯೂ ಅಗತ್ಯವಿಲ್ಲ.

ನಿಮ್ಮ ಲಿಸ್ಟಿಂಗ್ ಮತ್ತು ಸ್ಥಳವನ್ನು ನೀವು ಹೊಂದಿಸಿದ ನಂತರ, ಗೆಸ್ಟ್‌ಗಳನ್ನು ಸ್ವಾಗತಿಸಲು ಮತ್ತು ಆದಾಯವನ್ನು ಗಳಿಸಲು ನೀವು ಸಿದ್ಧರಾಗಿರುತ್ತೀರಿ!

ವಿಶೇಷ ಆಕರ್ಷಣೆಗಳು

  • ಮನೆ ಹಂಚಿಕೊಳ್ಳುವಿಕೆಯ ಬಗ್ಗೆ ಸ್ಥಳೀಯ ನಿಯಮಗಳನ್ನು ಪರಿಶೀಲಿಸಿ

  • ನಿಮ್ಮ ಪ್ರತಿ ರಾತ್ರಿಯ ಬೆಲೆಯನ್ನು ನಿಗದಿಪಡಿಸಿ ಮತ್ತು ನಿಮ್ಮ ಕ್ಯಾಲೆಂಡರ್ ಅನ್ನು ಹೊಂದಿಸಿ

  • ನಿಮ್ಮ ಲಿಸ್ಟಿಂಗ್ ಬಗ್ಗೆ ವಿಶಿಷ್ಟ ಅಥವಾ ಅತಿವಿಶೇಷ ಯಾವುದು ಎಂಬುದನ್ನು ಹೈಲೈಟ್ ಮಾಡಿ

  • ಅಚ್ಚುಕಟ್ಟಾಗಿ ಇರಿಸಿ, ಮೂಲಭೂತ ಸಾಮಗ್ರಿಗಳನ್ನು ಸಂಗ್ರಹಿಸಿ ಮತ್ತು ಸ್ಪಷ್ಟವಾದ ಮನೆ ನಿಯಮಗಳನ್ನು ಒದಗಿಸಿ

Airbnb
ಡಿಸೆಂ 18, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ