ನಿಮ್ಮ ಯುಟಿಲಿಟಿ ಬಿಲ್‌ಗಳನ್ನು ಕಡಿಮೆ ಮಾಡುವ ವಿದ್ಯುತ್-ಉಳಿತಾಯ ಸಲಹೆಗಳು

ಸಣ್ಣ ಬದಲಾವಣೆಗಳು ದೊಡ್ಡ ಉಳಿತಾಯಕ್ಕೆ ಕೊಡುಗೆ ನೀಡಬಹುದು ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಬಹುದು.
Airbnb ಅವರಿಂದ ಡಿಸೆಂ 14, 2022ರಂದು
3 ನಿಮಿಷ ಓದಲು
ಡಿಸೆಂ 14, 2022 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಡ್ರಾಫ್ಟ್‌ಗಳನ್ನು ನಿಲ್ಲಿಸಿ ಮತ್ತು ಕಡಿಮೆ ಹರಿವಿನ ಫಿಕ್ಸ್ಚರ್‌ಗಳನ್ನು ಸ್ಥಾಪಿಸಿ

  • ದೊಡ್ಡ ಉಪಕರಣಗಳನ್ನು ಅಪ್‌ಡೇಟ್ ‌ ಮಾಡಿ ಮತ್ತು ಸಣ್ಣ ಉಪಕರಣಗಳನ್ನು ಅನ್‌ಪ್ಲಗ್ ‌ ಮಾಡಿ

  • ನಿಮ್ಮ ಸುಸ್ಥಿರತೆಯ ಪ್ರಯತ್ನಗಳನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳಿ

ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದರಿಂದ, ಗೆಸ್ಟ್‌ಗಳಿಗೆ ನಿಮ್ಮ ಸ್ಥಳವನ್ನು ಆರಾಮದಾಯಕವಾಗಿಟ್ಟುಕೊಳ್ಳುವುದು ದುಬಾರಿಯಾಗಿದೆ. ಹೋಸ್ಟ್ ಆಗಿ, ನೀವು ಗೆಸ್ಟ್‌ಗಳಿಗೆ ಹೀಟಿಂಗ್, ಕೂಲಿಂಗ್ ಮತ್ತು ನೀರನ್ನು ಗಮನದಲ್ಲಿರಿಸಿಕೊಂಡು ಬಳಕೆ ಮಾಡುವಂತೆ ಹೇಳದಬಹುದು, ಆದರೆ ನಿಮ್ಮ ಯುಟಿಲಿಟಿ ಬಿಲ್‌ಗಳ ಮೊತ್ತವನನ್ನು ಕಡಿಮೆ ಮಾಡುವುದಕ್ಕಾಗಿ ನೀವು ಅವರನ್ನು ಅವಲಂಬಿಸಬಾರದು. ನಿಮ್ಮ ಸ್ಥಳದ ವಿದ್ಯುತ್ ಬಳಕೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಪರಿಹಾರವಾಗಿದೆ. ಇದು ಬಹಳಷ್ಟು ಹಣವನ್ನು ಉಳಿಸುತ್ತದೆ ಮತ್ತು ಗ್ರಹವನ್ನು ಇಂಧನ ಕೊರತೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಹೋಸ್ಟ್‌ಗಳಿಗೆ ತಮ್ಮ ಪ್ರಾಪರ್ಟಿಗಳನ್ನು ಅಪ್‌ಡೇಟ್ ಮಾಡುವ ಸಲಹೆ ಮತ್ತು ಸಂಪನ್ಮೂಲಗಳನ್ನು ಒದಗಿಸಲು Airbnb ಸಮರ್ಥನೀಯ ತಜ್ಞರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಾರಂಭಿಸಲು, ಜನರು ತಮ್ಮ ಇಂಧನ ಬಳಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವಲ್ಲಿ ಪರಿಣತಿ ಹೊಂದಿರುವ ಯುಕೆ ಸಂಸ್ಥೆಯಾದ ಎನರ್ಜಿ ಸೇವಿಂಗ್ ಟ್ರಸ್ಟ್‌ ಒದಗಿಸುವ ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ.

ಡ್ರಾಫ್ಟ್‌ಗಳನ್ನು ನಿಲ್ಲಿಸಿ ಮತ್ತು ಕಡಿಮೆ ಹರಿವಿನ ಫಿಕ್ಸ್ಚರ್‌ಗಳನ್ನು ಸ್ಥಾಪಿಸಿ

ಗೆಸ್ಟ್‌ಗಳು ಸಾಮಾನ್ಯವಾಗಿ ಬಳಕೆಗೆ ಬಿಸಿನೀರು ಸಿದ್ಧವಿರುವ ಬೆಚ್ಚಗಿನ ಅಥವಾ ತಂಪಾಗಿರಬಹುದಾದ ಜಾಗವನ್ನು ನಿರೀಕ್ಷಿಸುತ್ತಾರೆ. ನಿಮ್ಮ ಮನೆಯ ಇನ್ಸುಲೇಶನ್ ಮತ್ತು ನೀರಿನ ದಕ್ಷತೆಯನ್ನು ಸುಧಾರಿಸುವ ಮೂಲಕ ನೀವು ಅವರ ಅಗತ್ಯಗಳನ್ನು ಪೂರೈಸಬಹುದು ಮತ್ತು ವೆಚ್ಚಗಳನ್ನು ಕಡಿಮೆ ಮಾಡಬಹುದು.

ಗಾಳಿಯ ಸೋರಿಕೆಯನ್ನು ತಡೆಗಟ್ಟಲು ಕಿಟಕಿಗಳು, ಬಾಗಿಲುಗಳು, ಚಿಮಣಿಗಳು, ಪೈಪ್‌ಗಳ ಸುತ್ತಲಿನ ಅಂತರಗಳು ಮತ್ತು ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳನ್ನು
  • ಡ್ರಾಫ್ಟ್ ಪ್ರೂಫಿಂಗ್ ಮಾಡುವುದು ಯಾವುದೇ ರೀತಿಯ ಮನೆಯಲ್ಲಿ ಶಕ್ತಿಯನ್ನು ಉಳಿಸಲು ಅಗ್ಗದ, ಪರಿಣಾಮಕಾರಿ ಮಾರ್ಗವಾಗಿದೆ. ಫಿಲ್ಮ್, ಕೋಲ್ಕ್, ಫೋಮ್ ಗ್ಯಾಸ್ಕೆಟ್‌ಗಳು, ರೋಲರ್ ಶೇಡ್‌ಗಳು ಮತ್ತು ಹೆವಿ ಕರ್ಟನ್‌ಗಳು ಅಥವಾ ಕರ್ಟನ್ ಲೈನರ್‌ಗಳನ್ನು ಇನ್ಸುಲೇಟ್ ಮಾಡುವುದು ಸೋರಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
  • ಶಾಖವನ್ನು ಹಾಗೆಯೇ ಉಳಿಸಿಕೊಳ್ಳಲುಹಳೆಯ ವಾಟರ್ ಹೀಟರ್‌ಗಳನ್ನು ಇನ್ಸುಲೇಟ್ ಮಾಡುವುದು ಮತ್ತು ಸ್ಥಳದಲ್ಲಿ ಯಾರೂ ಇಲ್ಲದಿದ್ದಾಗ ನೀರು ಬಿಸಿ ಮಾಡುವುದನ್ನು ತಡೆಯಲು ಟೈಮರ್‌ಗಳನ್ನು ಸೆಟ್ ಮಾಡುವುದರಿಂದ ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ.
  • ಕಡಿಮೆ ಹರಿವಿನ ಟಾಯ್ಲೆಟ್ ಕವಾಟಗಳು, ನಲ್ಲಿಗಳು ಮತ್ತು ಶವರ್‌ಹೆಡ್‌ಗಳೊಂದಿಗೆ
  • ಸ್ಟ್ಯಾಂಡರ್ಡ್ ಪ್ಲಂಬಿಂಗ್ ಫಿಕ್ಚರ್‌ಗಳನ್ನು ಬದಲಾಯಿಸುವುದು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಾಳಿ ತುಂಬಿದ ಶವರ್‌ಹೆಡ್‌ಗಳು ಹೆಚ್ಚಿನ ಒತ್ತಡವನ್ನು ನಿರ್ವಹಿಸಲು ನೀರಿನಲ್ಲಿ ಗಾಳಿಯನ್ನು ಬೆರೆಸುತ್ತವೆ ಮತ್ತು ಪ್ರತಿ ಶವರ್‌ಗೆ 4.25 ಗ್ಯಾಲನ್‌ (16 ಲೀಟರ್) ವರೆಗೆ ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ, ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ನಿಯಮಿತವಾಗಿ ನೀರು ಸೋರಿಕೆಯಾಗುತ್ತಿದೆಯಾ ಎಂದು ಪರಿಶೀಲಿಸಿ ಹಾಗೂ ಸರಿಪಡಿಸಿ.
  • ಡಿಶ್‌ವಾಷರ್ ಮತ್ತು ವಾಷರ್/ಡ್ರೈಯರ್‌ನಲ್ಲಿಪೂರ್ಣ ಪ್ರಮಾಣದ ಲೋಡ್‌ಗಳನ್ನು ತೊಳೆಯುವ ಮೂಲಕ ಮತ್ತು ನಿಮ್ಮ ಯಂತ್ರವನ್ನು ಕಡಿಮೆ ತಾಪಮಾನ ಅಥವಾ "ಇಕೋ" ಮೋಡ್‌ಗೆ ಸೆಟ್ ಮಾಡುವ ಮೂಲಕ ನೀವು ನೀರು ಮತ್ತು ವಿದ್ಯುತ್ ಎರಡನ್ನೂ ಉಳಿಸಬಹುದು. ಮುಂದಿನ ಗೆಸ್ಟ್‌ಗಾಗಿ ನಿಮ್ಮ ಸ್ಥಳವನ್ನು ಸಿದ್ಧಪಡಿಸುವಾಗ, ಸಾಧ್ಯವಾದರೆ ಪಾತ್ರೆಗಳನ್ನು ತೊಳೆದು ಜೋಡಿಸಿ ಹಾಗೂ ಬಟ್ಟೆಗಳನ್ನು ಗಾಳಿಯಲ್ಲಿ ಒಣಗಲು ಹಾಕಿ.

ವೇಲ್ಸ್‌ನ ನ್ಯೂಗೇಲ್‌ನಲ್ಲಿರುವ ಸೂಪರ್‌ಹೋಸ್ಟ್ ಮತ್ತು ಹೋಸ್ಟ್ ಸಲಹಾ ಮಂಡಳಿಯ ಸದಸ್ಯರಾದ ಅನ್ನಾ, ಗೆಸ್ಟ್‌ಗಳಿಗೆ ತನ್ನ ಕಾಟೇಜ್‌ಗಳಲ್ಲಿ ಆರಾಮದಾಯಕ ವಾತಾವರಣವನ್ನು ಸೃಷ್ಟಿಸುವುದಕ್ಕೆ ಸಹಾಯ ಮಾಡಲು ಇನ್ಸುಲೇಟಿಂಗ್ ಅಲಂಕಾರವನ್ನು ಬಳಸುತ್ತಾರೆ. "ನಾವು ಹಳೆಯ ಫ್ಲ್ಯಾಗ್‌ಸ್ಟೋನ್ ಮಹಡಿಗಳಿಗೆ ರಗ್ಗುಗಳನ್ನು ಸೇರಿಸಿದ್ದೇವೆ ಮತ್ತು ಡ್ರಾಫ್ಟ್‌ಗಳನ್ನು ನಿರ್ಬಂಧಿಸುವ ಸುಂದರವಾದ ದಪ್ಪ ಪರದೆಗಳನ್ನು ಸೇರಿಸಿದ್ದೇವೆ" ಎಂದು ಮಂಡಳಿಯ ಸುಸ್ಥಿರತೆ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ನಾ ಹೇಳುತ್ತಾರೆ. “ಇವೆರಡೂ ನಮ್ಮ ಕೋಣೆಗಳಿಗೆ ವೈಶಿಷ್ಟ್ಯಗಳನ್ನು ಸೇರಿಸುತ್ತವೆ ಮತ್ತು ವಿದ್ಯುತ್ ಉಳಿಸಲು ನಮಗೆ ಸಹಾಯ ಮಾಡುತ್ತವೆ.

ದೊಡ್ಡ ಉಪಕರಣಗಳನ್ನು ಅಪ್‌ಡೇಟ್ ‌ ಮಾಡಿ ಮತ್ತು ಸಣ್ಣ ಉಪಕರಣಗಳನ್ನು ಅನ್‌ಪ್ಲಗ್ ‌ಮಾಡಿ

ಅನೇಕ ಅತಿಥಿಗಳು ಉತ್ತಮವಾದ ಅಡುಗೆಮನೆ ಮತ್ತು ವಿಶ್ವಾಸಾರ್ಹ ವೈಫೈನಂತಹ ಸೌಕರ್ಯಗಳನ್ನು ಬಯಸುತ್ತಾರೆ. ನಿಮ್ಮ ಆತಿಥ್ಯಕ್ಕೆ ಧಕ್ಕೆಯಾಗದಂತೆ ನಿಮ್ಮ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು.

ಪ್ರಕಾಶಮಾನ ಮತ್ತು ಹ್ಯಾಲೊಜೆನ್‌ನಿಂದ LED ಬಲ್ಬ್‌ಗಳಿಗೆ
  • ಲೈಟ್ ಬಲ್ಬ್‌ಗಳನ್ನು ಬದಲಾಯಿಸುವುದು ಪ್ರತಿ ವರ್ಷ ಪ್ರತಿ ಬಲ್ಬ್‌ಗೆ $4 ರಿಂದ $16 USD ವರೆಗೆ ಉಳಿಸಬಹುದು.
  • ತುಲನಾತ್ಮಕವಾಗಿ ಕಡಿಮೆ-ವೆಚ್ಚದ ಮತ್ತು ಅಳವಡಿಸಲು ಸುಲಭವಾದಲೈಟ್ ಸೆನ್ಸರ್‌ಗಳು ಮತ್ತು ಕಂಟ್ರೋಲ್‌ಗಳನ್ನು ಸೇರಿಸುವುದರಿಂದ, ಅಜಾಗರೂಕತೆಯಿಂದ ಲೈಟ್‌ಗಳು ವ್ಯರ್ಥವಾಗಿ ಉರಿಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಗೆಸ್ಟ್‌ಗಳು ಇರುವ ಅಥವಾ ಇಲ್ಲದಿರುವ ಸಮಯವನ್ನು ಮೋಷನ್ ಸೆನ್ಸರ್‌ಗಳು ಪತ್ತೆಹಚ್ಚಿದಾಗ ಸ್ವಯಂಚಾಲಿತವಾಗಿ ಲೈಟ್‌ಗಳನ್ನು ಆನ್ ಮತ್ತು ಆಫ್ ಮಾಡುವ ಮೂಲಕ ವಿದ್ಯುತ್ ಉಳಿಸಬಹುದು.
  • ಅವಧಿ ಮುಗಿದುಹೋದ
  • ದೊಡ್ಡ ಉಪಕರಣಗಳನ್ನು ಇಂಧನ-ದಕ್ಷತೆ ಹೊಂದಿರುವ ಸಾಧನಗಳೊಂದಿಗೆ ಬದಲಾಯಿಸುವ ಮೂಲಕ ವಿದ್ಯುತ್ ಉಳಿಸಿ. ಹೆಚ್ಚಿನ-ರೇಟಿಂಗ್‌ ಹೊಂದಿರುವ ರೆಫ್ರಿಜರೇಟರ್ ಅನ್ನು ಆಯ್ಕೆ ಮಾಡುವುದರಿಂದ ಉತ್ಪನ್ನದ ಜೀವಿತಾವಧಿಯಲ್ಲಿ ನಿಮ್ಮ ವಿದ್ಯುತ್ ಬಿಲ್‌ಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
  • ಫೋನ್ ಚಾರ್ಜರ್‌ಗಳನ್ನು ಒಳಗೊಂಡಂತೆ, ಬಳಕೆಯಲ್ಲಿಲ್ಲದಿದ್ದಾಗ
  • ಸಣ್ಣ ಸಾಧನಗಳನ್ನು ಅನ್‌ಪ್ಲಗ್ ಮಾಡುವುದು, ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಡ್ರೈನ್‌ಗಳನ್ನು ತಪ್ಪಿಸಬಹುದು. ನಿಮ್ಮ ಸ್ಥಳದಲ್ಲಿ ಯಾರೂ ಇಲ್ಲದಿದ್ದಾಗ ರಿಮೋಟ್ ಆಗಿ ಆಫ್ ಮಾಡಲು ಅವುಗಳನ್ನು ಪವರ್ ಸ್ಟ್ರಿಪ್ ಅಥವಾ ಸ್ಮಾರ್ಟ್ ಸ್ವಿಚ್‌ಗೆ ಕನೆಕ್ಟ್ ಮಾಡುವುದು ಮತ್ತೊಂದು ಆಯ್ಕೆಯಾಗಿದೆ. ನಿರಂತರವಾಗಿ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವ ವಿವಿಧ ಸಾಧನಗಳನ್ನು ತೆಗೆದುಹಾಕುವುದರಿಂದ ನಿಮ್ಮ ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಸುಮಾರು 5% ರಷ್ಟು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.
"ಸ್ವಚ್ಛಗೊಳಿಸುವಿಕೆ ಮತ್ತು ತೊಳೆಯುವಲ್ಲಿ ಬಹಳಷ್ಟು ಇದೆ" ಎಂದು ಅನ್ನಾ ಹೇಳುತ್ತಾರೆ. "ಇಂಧನ ದಕ್ಷತೆಯ ದೃಷ್ಟಿಯಿಂದ ನನಗೆ ಉತ್ತಮವಾದ ವಾಷರ್ ಮತ್ತು ಡ್ರೈಯರ್ ಅನ್ನು ಬಳಸುವುದು ನಿಜವಾಗಿಯೂ ಮುಖ್ಯವಾಗಿದೆ."

ನಿಮ್ಮ ಕಥೆಯನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳಿ

ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿ ನೀವು ಹಂಚಿಕೊಳ್ಳುವ ಕಥೆಯು ನಿಮ್ಮ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ನಿಮ್ಮ ಗೆಸ್ಟ್‌ಗಳ ಅನುಭವವನ್ನು ರೂಪಿಸಲು ಸಹಾಯ ಮಾಡುತ್ತದೆ.

“ನಮ್ಮ ಲಿಸ್ಟಿಂಗ್‌ನಲ್ಲಿ ನಮ್ಮ 'ಪರಿಸರ ನೈತಿಕತೆ'ಯನ್ನು ಸ್ಪಷ್ಟಪಡಿಸುವುದು ನಮಗೆ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅನ್ನಾ ಹೇಳುತ್ತಾರೆ. “ನೀವು ಸುಸ್ಥಿರತೆ ಹೇಗೆ ಗೌರವಿಸುತ್ತೀರಿ ಮತ್ತು ಅದರ ಬಗ್ಗೆ ಮಾಡುವ ಕೆಲಸಗಳನ್ನು ನೀವು ವಿವರಿಸಬಹುದು, ಮತ್ತು ನಂತರ ನೀವು ಮಾಡುವಂತೆಯೇ ಪರಿಸರದ ಬಗ್ಗೆ ಕಾಳಜಿ ವಹಿಸುವ ಗೆಸ್ಟ್‌ಗಳೊಂದಿಗೆ ನಿಮನ್ನು ಹೊಂದಿಸಲಾಗುತ್ತದೆ.”

ಮುಕ್ತ-ಸಂವಹನವು ಗೆಸ್ಟ್‌ಗಳಿಗೆ ನಿಮ್ಮ ದಾರಿಯನ್ನು ಅನುಸರಿಸುವಂತೆ ಪ್ರೋತ್ಸಾಹಿಸುತ್ತದೆ. "ಖಂಡಿತವಾಗಿಯೂ, ಗೆಸ್ಟ್‌ಗಳು ಸುಂದರವಾದ, ಆರಾಮದಾಯಕವಾದ ವಾಸ್ತವ್ಯವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ" ಎಂದು ಅನ್ನಾ ಹೇಳುತ್ತಾರೆ. “ಆದಾಗ್ಯೂ, ಲಿಸ್ಟಿಂಗ್‌ನಲ್ಲಿ ನಾವು ಶಕ್ತಿಯನ್ನು ಹೇಗೆ ಉಳಿಸಬಹುದು ಎಂಬುದರ ಕುರಿತು ನಿರೀಕ್ಷೆಗಳನ್ನು ಹೊಂದಿಸುವುದರಿಂದ, ಅಸಡ್ಡೆ ಮನೋಭಾವದ ನಡವಳಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ, ಉದಾಹರಣೆಗೆ ಶಾಖವನ್ನು ಹೆಚ್ಚಿಸುವುದು ಮತ್ತು ನಂತರ ದಿನವಿಡೀ ಹೊರಗೆ ಹೋಗುವುದು.”

ಇವುಗಳು ನಿಮ್ಮ ಸ್ಥಳದ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವು ಸಣ್ಣ ಹಂತಗಳಾಗಿವೆ. ಸೌರ ಫಲಕಗಳನ್ನು ಸ್ಥಾಪಿಸುವುದು, ಕಿಟಕಿಗಳನ್ನು ಬದಲಾಯಿಸುವುದು ಮತ್ತು ನಿರೋಧನವನ್ನು ಸುಧಾರಿಸುವಂತಹ ದೊಡ್ಡ ಉಪಕ್ರಮಗಳು ನಿಮಗೆ ಇನ್ನೂ ಹೆಚ್ಚು ಸಂರಕ್ಷಿಸಲು ಸಹಾಯ ಮಾಡುತ್ತದೆ. ನೀವು ಮಾಡುವ ಬದಲಾವಣೆಗಳು ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು, ಮತ್ತು ಇತರ ಪ್ರೋತ್ಸಾಹಕಗಳಿಗೆ ಅರ್ಹತೆ ಪಡೆಯಬಹುದು.

ಸುಸ್ಥಿರ ಹೋಸ್ಟಿಂಗ್ ಕುರಿತು ಇನ್ನಷ್ಟು ತಿಳಿಯಿರಿ

ವಿಶೇಷ ಆಕರ್ಷಣೆಗಳು

  • ಡ್ರಾಫ್ಟ್‌ಗಳನ್ನು ನಿಲ್ಲಿಸಿ ಮತ್ತು ಕಡಿಮೆ ಹರಿವಿನ ಫಿಕ್ಸ್ಚರ್‌ಗಳನ್ನು ಸ್ಥಾಪಿಸಿ

  • ದೊಡ್ಡ ಉಪಕರಣಗಳನ್ನು ಅಪ್‌ಡೇಟ್ ‌ ಮಾಡಿ ಮತ್ತು ಸಣ್ಣ ಉಪಕರಣಗಳನ್ನು ಅನ್‌ಪ್ಲಗ್ ‌ ಮಾಡಿ

  • ನಿಮ್ಮ ಸುಸ್ಥಿರತೆಯ ಪ್ರಯತ್ನಗಳನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳಿ

Airbnb
ಡಿಸೆಂ 14, 2022
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ