ಬಜೆಟ್‍ನಲ್ಲಿ ವಿನ್ಯಾಸಗೊಳಿಸಿ : ಸೂಪರ್‌ಹೋಸ್ಟ್ ಹುಮಾ ಅವರ ಸಲಹೆಗಳು
ದಕ್ಷಿಣ ಲಂಡನ್ ಜಿಲ್ಲೆ ಸ್ಟಾಕ್‌ವೆಲ್‌ನಲ್ಲಿ ರಾಸ್ಪ್‌ಬೆರಿ ಗುಲಾಬಿ ಬಣ್ಣದ ಬಾಗಿಲಿನ ತಿಳಿ ಹಸಿರು ವಿಕ್ಟೋರಿಯನ್ ಮನೆಯಿದೆ. ಮಧ್ಯದಲ್ಲಿರುವ ಹಿತ್ತಾಳೆಯ ಬಾಗಿಲ ಹಿಡಿಕೆಯನ್ನು ಒತ್ತಿ, ಕೋಣೆಯೊಳಗಿನ ಮೆಟ್ಟಿಲುಗಳನ್ನು ಏರಿ ಮತ್ತು ವೈಭವದ ಗೋಡೆಗಳ ಎದುರು ವಿಶಾಲ ಪ್ಲ್ಯಾಂಕ್ ವುಡ್ ನೆಲಹಾಸಿನ ಮೇಲೆ ಇರಿಸಲಾಗಿರುವ ವಿಂಟೇಜ್ ಬೆಡ್‌ನ ಮೇಲೆ ಸೂರ್ಯ ರಶ್ಮಿ ಬೀಳುತ್ತಿರುವುದನ್ನು ನೀವು ಕಾಣಬಹುದು. ಸೂಪರ್‌ಹೋಸ್ಟ್ ಹುಮಾ ಅವರ ಮನೆಗೆಸ್ವಾಗತ, ಇದು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಐತಿಹಾಸಿಕ ನಾಲ್ಕು ಬೆಡ್‌ರೂಂ ಮನೆಯಾಗಿದೆ.
"ಇದು ಅದ್ಭುತ ಸೌಂದರ್ಯದ ಸಿಂಫನಿ" ಎಂದು ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಮಿಮಿ ಹೇಳಿದ್ದಾರೆ, ಹುಮಾ ಅವರ ಶೈಲಿ ಮತ್ತು ಅಲಂಕಾರದ ಬಗ್ಗೆ ಕಾಮೆಂಟ್ ಮಾಡಿದ ಅನೇಕ ಗೆಸ್ಟ್‌ಗಳಲ್ಲಿ ಅವರೂ ಒಬ್ಬರು. “ಪ್ರತಿಯೊಂದು ಸಣ್ಣ ವಿವರವನ್ನು ತುಂಬಾ ಸದಭಿರುಚಿಯಿಂದ ಯೋಚಿಸಲಾಗಿದೆ ಮತ್ತು ಪೀಠೋಪಕರಣಗಳ ಪ್ರತಿಯೊಂದು ತುಣುಕು ಕೂಡ ಹೇಳಲು ತನ್ನದೇ ಆದ ಸಣ್ಣ ಕಥೆಯನ್ನು ಹೊಂದಿದೆ.”
ಹುಮಾ ಅವರು ಅಲಂಕಾರಕ್ಕೆ ನೀಡಿದ ಕಾಳಜಿಯನ್ನುನೋಡಿದರೆ, ಆಕೆಗೆ ಮನೆಯ ವಿನ್ಯಾಸದ ಬಗೆಗಿನ ಉತ್ಸಾಹ ಮತ್ತು ಹೋಸ್ಟಿಂಗ್ ಮೂಲಕ ಅದನ್ನು ಬೆಳೆಸುವ ಬಯಕೆ ಇದೆಯೇ ಹೊರತು ಯಾವುದೇ ಔಪಚಾರಿಕ ಒಳಾಂಗಣ ವಿನ್ಯಾಸ ತರಬೇತಿಯಿಲ್ಲ, ಎಂದು ಹೇಳಲು ನಿಮಗೆ ಸಾಧ್ಯವಾಗದಿರಬಹುದು.
ತಾನು ಹೋಸ್ಟಿಂಗ್ ಅನ್ನು ಹೇಗೆ ಆರಂಭಿಸಿದೆ ಎಂಬುದನ್ನು, ಹಳೆಯ ಮನೆಯನ್ನು ಬಜೆಟ್‌ನಲ್ಲಿ ನವೀಕರಿಸಲು ಸಲಹೆಗಳನ್ನು ಮತ್ತು ಮ್ಯಾಗಜಿನ್ ಎಡಿಟರ್ ಆಗಿ ಪೂರ್ಣಾವಧಿ ಉದ್ಯೋಗದೊಂದಿಗೆ ಹೋಸ್ಟಿಂಗ್ ಅನ್ನು ಹೇಗೆ ಸಮತೋಲನ ಮಾಡುತ್ತಾರೆ ಎಂಬುದನ್ನು ಹಂಚಿಕೊಳ್ಳಲು ಸೂಪರ್‌ಹೋಸ್ಟ್ ಅವರು ಬುಕ್‌ಕೇಸ್ ಪೇಂಟಿಂಗ್ ಮಾಡುವುದರಿಂದ ಒಂದಿಷ್ಟು ಬಿಡುವು ಮಾಡಿಕೊಂಡರು.
ನಿಮ್ಮ ಮನೆಯಲ್ಲಿರುವ ಎಲ್ಲವೂ ತುಂಬಾ ಆಕರ್ಷಕವಾಗಿವೆ ಮತ್ತು ಚೆನ್ನಾಗಿ ಜೋಡಿಸಲಾಗಿದೆ. ನಿಮ್ಮ ಮ್ಯಾಗಜೀನ್ ಅನುಭವದಿಂದ ಇದನ್ನು ರೂಪಿಸಿದಿರಾ?
"ನಾನು ಸ್ವತಂತ್ರ ಫ್ಯಾಷನ್ ಮ್ಯಾಗಜೀನ್‌ಗೆ ಫೀಚರ್ಸ್ ಎಡಿಟರ್ ಆಗಿ ಕೆಲಸ ಮಾಡುತ್ತೇನೆ. ಆದರೆ ನಾನು ಮ್ಯಾಗಜೀನ್‌ಗೆ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, ತುಂಬಾ ಸಮಯದಿಂದ ಇಂಟೀರಿಯರ್‌ಗಳಲ್ಲಿ ಆಸಕ್ತಿ ಹೊಂದಿದ್ದೆ. ನಾನು ನನ್ನ ಮೊದಲ ಮನೆಯನ್ನು ಹೊಂದುವ ಮೊದಲು ನನ್ನ ಮೊದಲ ಮನೆಗೆ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ-ಕಟ್ಲರಿಯಂತಹ ಯಾದೃಚ್ಛಿಕ ವಸ್ತುಗಳನ್ನು ನಾನು ಇಷ್ಟಪಡುತ್ತೇನೆ-ಮತ್ತು ನಾನು ಇಂಟೀರಿಯರ್ ಮ್ಯಾಗಜೀನ್‌ಗಳನ್ನೆಲ್ಲಾ ಓದುತ್ತಿದ್ದೆ. ಇದೆಲ್ಲವೂ ನನ್ನ ಮೊದಲ ಮನೆಯನ್ನು ಅಲಂಕರಿಸುವುದು ಹೇಗೆ ಎಂಬ ಅನ್ವೇಷಣೆಗಾಗಿ ಆಗಿದ್ದವು."
ತದನಂತರ ನೀವು ಇದನ್ನು Airbnb ಯಲ್ಲಿ ಹೋಸ್ಟ್ ಮಾಡುವುದೆಂದು ನಿರ್ಧರಿಸಿದ್ದೀರಾ?
"ಸರಿ, ನಾನು ಆರಂಭದಲ್ಲಿ ಸೇರಿಕೊಂಡಾಗ ಅದು 2012 ನೇ ಇಸವಿ, ಒಲಿಂಪಿಕ್ಸ್ ನಡೆಯುತ್ತಿತ್ತು ಮತ್ತು ನಾನು ಎಷ್ಟು ಹಣ ಗಳಿಸಬಹುದು ಎಂದು ಎಲ್ಲರೂ ಹೇಳುತ್ತಿದ್ದರು. ಸಂಪತ್ತನ್ನು ಗಳಿಸುವುದು ನನ್ನ ಯೋಜನೆಯಾಗಿರಲಿಲ್ಲ. ಅಗತ್ಯವನ್ನು ಪೂರೈಸುವುದಷ್ಟೇ ನನ್ನ ಉದ್ದೇಶವಾಗಿತ್ತು. ನಾನು ಬಾಡಿಗೆದಾರರ ನಡುವೆ ಇದ್ದೆ ಮತ್ತು ಆ ಸಮಯದಲ್ಲಿ ನನ್ನ ಅಪಾರ್ಟ್‌ಮೆಂಟ್ ಅನ್ನು ಮಾರಾಟ ಮಾಡುತ್ತಿದ್ದೆ. ನಾನು ನನ್ನ ಸ್ವಂತ ಮನೆಯಲ್ಲಿ ಹೋಸ್ಟ್ ಮಾಡಲು ಪ್ರಾರಂಭಿಸಿದಾಗ 2016 ರವರೆಗೆ ಅದು ಇರಲಿಲ್ಲ. ಅದಕ್ಕೂ ಮೊದಲು, ನಾನು ಹೌಸ್‌ಮೇಟ್‌ಗಳನ್ನು ಹೊಂದಿದ್ದೆ ಮತ್ತು ಒಂದು ರೂಮ್‌ನಲ್ಲಿ Airbnb ಗೆ ಪ್ರಯತ್ನಿಸಲು ನಾನು ನಿರ್ಧರಿಸಿದೆ. ಇದು ತಾತ್ಕಾಲಿಕ ಎಂದು ನಾನು ಭಾವಿಸಿದ್ದೆ, ಆದರೆ ಒಂದೊಂದಾಗಿ ನಾನು ರೂಮ್‌ಗಳನ್ನು ತುಂಬಲು ಪ್ರಾರಂಭಿಸಿದೆ. ಕಳೆದ ಬೇಸಿಗೆಯಲ್ಲಿ ನನ್ನ ಕೊನೆಯ ಹೌಸ್‌ಮೇಟ್ ಹೊರಟುಹೋದಾಗಿನಿಂದ, ಎಲ್ಲಾ ಮೂರು ರೂಮ್‌ಗಳು Airbnb ನಲ್ಲಿವೆ. ಯೋಜಿತ ಕೆಲಸ ಇದಾಗಿರಲಿಲ್ಲ. ಇದು ಸ್ವಾಭಾವಿಕವಾಗಿ ವಿಕಸನಗೊಂಡಿತು ಮತ್ತು ಒಂದು ರೀತಿಯಲ್ಲಿ
ಸ್ವಾಧೀನಪಡಿಸಿಕೊಂಡಿತು ಅಂತಲೇ ಹೇಳಬಹುದು."
ನಿಮ್ಮ ಮನೆ ನವೀಕರಿಸುವ ಕುರಿತು ನಮಗೆ ತಿಳಿಸಿ. ಇದಕ್ಕೆ ಸಾಕಷ್ಟು ಕೆಲಸ ಮಾಡಲಾಗಿದೆ ಎಂಬಂತೆ ಕಾಣುತ್ತಿದೆ.
“ಈ ಮನೆ ಬಹಳ ನವೀಕರಣಗೊಂಡಿದೆ. ಇದಕ್ಕಾಗಿ ನಾನು ಎಷ್ಟು ಖರ್ಚು ಮಾಡಿದೆ ಎಂದು ನಾನು ತಿಳಿಸಲು ಬಯಸುವುದಿಲ್ಲ, ಆದರೆ ದುಬಾರಿ ವೆಚ್ಚ ಕಾರ್ಮಿಕರ ವೇತನವಾಗಿತ್ತು: ಅಂದರೆ ಬಿಲ್ಡರ್‌ಗಳು, ಪ್ಲಂಬರ್‌ಗಳು, ಪ್ಲಾಸ್ಟರರ್‌ಗಳು ಮತ್ತು ನಾನು ಸ್ವತಃ ಮಾಡಲಾಗದ ಕೆಲಸಗಳು. ಅಲಂಕಾರದ ವಿಷಯದಲ್ಲಿ, ಜನರು ಭಾವಿಸಬಹುದಾದ್ದಕ್ಕಿಂತ ಕಡಿಮೆ ಹಣವನ್ನು ನಾನು ಖರ್ಚು ಮಾಡಿದೆ. ನಾನು ಚೌಕಾಶಿ ಮಾಡುವ ಗೀಳು ಹೊಂದಿದ್ದೇನೆ. ನಾವು ಯಾವುದಕ್ಕೂ ಪೂರ್ಣ ರಿಟೇಲ್ ಬೆಲೆಯನ್ನು ಪಾವತಿಸುವುದಿಲ್ಲ. ನನ್ನ ಬಹಳಷ್ಟು ಪೀಠೋಪಕರಣಗಳು ಪುರಾತನವಾದವು ಮತ್ತು ಅವುಗಳನ್ನು ನಾನು eBay ನಲ್ಲಿ ಅಗ್ಗದ ದರದಲ್ಲಿ ಖರೀದಿಸುತ್ತೇನೆ. ಅವುಗಳಲ್ಲಿ ಕೆಲವು ಉಚಿತವಾಗಿವೆ ಏಕೆಂದರೆ ಅವು ನನ್ನ ಗಮನಕ್ಕೆ ಬಂದವು. ಉದಾಹರಣೆಗೆ ನಾನು ನನ್ನ ಸೋದರನ ಮನಗೆ ಭೇಟಿ ನೀಡಿದಾಗ, ಒಂದು ಕುರ್ಚಿಯನ್ನು ನೋಡಿದೆ ಮತ್ತು 'ಕಾರು ನಿಲ್ಲಿಸಿ!' ಎಂದು ಕೂಗಿದೆ ಅವರ ಕುರ್ಚಿಯ ಆಕಾರವು ನಿಜಕ್ಕೂ ಸುಂದರವಾಗಿತ್ತು ಮತ್ತು ಅದು ಕೀಟಗಳಿಂದ ಸೋಂಕಿತವಾಗಿರಲಿಲ್ಲ—ನೀವು ಯಾವಾಗಲೂ ಪರಿಶೀಲಿಸಬೇಕು!—ಹಾಗಾಗಿ ಅದನ್ನು ನಾನು ಪೇಂಟ್ ಮಾಡಬಹುದಾಗಿತ್ತು. ಆರಂಭಿಸಲು ಉತ್ತಮ ಸ್ಥಿತಿಯಲ್ಲಿ ಇರುವವರೆಗೆ ನಾನು ಒಂದು ಪೇಲವವಾಗಿ ಕಾಣುವ ಪೀಠೋಪಕರಣವನ್ನು ಆಕರ್ಷಕವಾಗಿ ಪರಿವರ್ತಿಸಬಲ್ಲೆ.”
ಸೀಮಿತ ಸಮಯ ಮತ್ತು ಬಜೆಟ್‌ನೊಂದಿಗೆ ತಮ್ಮ ಮನೆಯನ್ನು ಮರು ಅಲಂಕರಿಸಲು ಬಯಸುವ ಹೋಸ್ಟ್‌ಗಳಿಗೆ ಯಾವುದೇ ಸಲಹೆಗಳಿವೆಯೇ?
"ಮೊದಲನೆಯದಾಗಿ, ರೂಮ್ ಅನ್ನು ಬದಲಾಯಿಸುವ ಅತ್ಯಂತ ಕಡಿಮೆ ವೆಚ್ಚದ ಮಾರ್ಗವೆಂದರೆ ಬಣ್ಣ ಹಾಕುವುದು. ವೆಚ್ಚದ ಹೋಲಿಕೆಯಲ್ಲಿ, ನೀವು ಬಣ್ಣದೊಂದಿಗೆ ಅದ್ಭುತವಾದ ಕೆಲಸ ಮಾಡಬಹುದು. ನನ್ನ ಅಭಿಪ್ರಾಯದಲ್ಲಿ, ಬಿಳಿ ಬಣ್ಣವು ಬದಲಿ ಮಾಡಲು ಉತ್ತಮ ಆಯ್ಕೆ ಅಲ್ಲ. ನೀವು ಲಾಫ್ಟ್-ಪ್ರಕಾರದ ಸ್ಥಳವನ್ನು ಹೊಂದಿಲ್ಲದಿದ್ದರೆ, ಅದು ಶೀತವಾಗಿದ್ದು, ಬಯಲು ಮತ್ತು ತ್ವರಿತವಾಗಿ ಬರಡಾಗಿ ಕಾಣುವಂತೆ ಮಾಡುತ್ತದೆ. ನಾನು ಹೆಚ್ಚು ಬಳಸುತ್ತಿರುವ ಬಣ್ಣವು ಬೂದು ಬಣ್ಣದ್ದಾಗಿದೆ. ನೀವು ಎಲ್ಲದಕ್ಕೂ ಹೊಂದಿಕೊಳ್ಳುವ ಆ ತಟಸ್ಥ ಹಿನ್ನೆಲೆಯನ್ನು ಪಡೆಯಬಹುದು, ಅದು ಬಿಳಿಗಿಂತ ಹೆಚ್ಚು ಅತ್ಯಾಧುನಿಕವಾಗಿದ್ದು ತ್ವರಿತವಾಗಿ ಕೊಳಕು ಕಾಣಲು ಪ್ರಾರಂಭಿಸುವುದಿಲ್ಲ. ಬಣ್ಣದ ಬಗ್ಗೆ ಹೆಚ್ಚು ಅನುಭವವಿಲ್ಲದವರಿಗೆ ಹಗುರವಾದ ಬೂದು ಬಣ್ಣವು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಹೆಚ್ಚಿನ ಬಣ್ಣಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ."
ಹೋಸ್ಟಿಂಗ್‌ನೊಂದಿಗೆ ನಿಮ್ಮ ಪೂರ್ಣಕಾಲಿಕ ಕೆಲಸವನ್ನು ನೀವು ಹೇಗೆ ಸಮತೋಲನಗೊಳಿಸುತ್ತೀರಿ?
"ನಾನು ಹೆಚ್ಚಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುತ್ತೇನೆ, ಇದರಿಂದಾಗಿ ನಿಜವಾಗಿಯೂ ಹೋಸ್ಟ್ ಮಾಡುವ ಫ್ಲೆಕ್ಸಿಬಿಲಿಟಿಯು ನನಗೆ ಸಿಗುತ್ತದೆ. ನಾನು ದಿನವಿಡೀ ಕಚೇರಿಗೆ ಹೋಗಬೇಕಾದರೆ, ನಾನು ಇದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನಾನು ಎರಡೂ ಸ್ಕ್ರೀನ್‌ಗಳನ್ನು ತೆರೆದಿರುತ್ತೇನೆ ಮತ್ತು ನನ್ನ Airbnb ಅಡ್ಮಿನ್ ಮತ್ತು ಪತ್ರವ್ಯವಹಾರ ಮತ್ತು ನನ್ನ ಮ್ಯಾಗಜೀನ್ ಕೆಲಸ ಎರಡನ್ನೂ ಮಾಡುತ್ತಿರುತ್ತೇನೆ. ನನಗೆ ಯಾವಾಗಲೂ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಆದರೆ ಬಹುತೇಕ ವೇಳೆ ನಾನು 30 ನಿಮಿಷಗಳೊಳಗೆ ಪ್ರತಿಕ್ರಿಯಿಸುತ್ತೇನೆ ಮತ್ತು ಗೆಸ್ಟ್‌ಗಳು ಸಾಮಾನ್ಯವಾಗಿ ತುಂಬಾ ಪ್ರಭಾವಿತರಾಗುತ್ತಾರೆ ಮತ್ತು ಅದನ್ನು ಪ್ರಶಂಸಿಸುತ್ತಾರೆ. ನಾನು ಕಂಪ್ಯೂಟರ್ ಸ್ಕ್ರೀನ್ ಅನ್ನು ನಿರಂತರವಾಗಿ ನೋಡುತ್ತಾ ಇರುವುದಿಲ್ಲ, Airbnb ಆ್ಯಪ್‌ನಿಂದ ನನಗೆ ನೋಟಿಫಿಕೇಶನ್ ಬರುತ್ತದೆ.
"ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯುವಾಗ, ನಾನು ನನ್ನ ದಿನದ ಉಳಿದ ಭಾಗವನ್ನು ಯೋಜಿಸಲು ಅವಶ್ಯಕವಾದ ತಾಜಾ ಮಾಹಿತಿಯನ್ನು ಪರಿಶೀಲಿಸಿಕೊಳ್ಳುತ್ತೇನೆ. ಆದರೆ ನನಗೆ ಅದನ್ನು ಸರಿಯಾಗಿ ನಿಭಾಯಿಸಬೇಕಾಗುತ್ತದೆ, ವ್ಯವಸ್ಥಿತವಾಗಿರಬೇಕು ಮತ್ತು ಮೊದಲಿಗೆ ನಾನು ಏನು ಸ್ವಚ್ಛಗೊಳಿಸಬೇಕು ಮತ್ತು ಸಿದ್ಧಪಡಿಸಬೇಕು ಎಂಬುದರ ಕುರಿತೂ ಯೋಚಿಸಬೇಕಾಗುತ್ತದೆ. ಬೆಡ್‌ರೂಮ್ ಯಾವಾಗಲೂ ಮೊದಲನೆಯದು. ಗೆಸ್ಟ್ ಆಗಮನಕ್ಕೆ ಮುನ್ನ ಬೆಡ್‌ರೂಮ್ ಸಂಪೂರ್ಣವಾಗಿ ಸಿದ್ಧವಾಗದಿರುವುದು ಯಾರಿಗೂ ಇಷ್ಟವಾಗುವುದಿಲ್ಲ. ನಂತರ ನಾನು ಬಾತ್‌ರೂಮ್‌ಗಳತ್ತ ಗಮನ ಹರಿಸುತ್ತೇನೆ."
ನೀವು ಏನನ್ನಾದರೂ ಸೇರಿಸಲು ಬಯಸುತ್ತೀರಾ?
“ಆರಂಭದಲ್ಲಿ, ಬುಕಿಂಗ್‌ಗಳಿಗೆ ಸಂಬಂಧಿಸಿ ಒಂದು ತಿಂಗಳು ಶಾಂತವಾಗಿದ್ದರೆ ನಾನು ಚಿಂತಿಸುತ್ತಿದ್ದೆ, ಆದರೆ ಅದರ ಬಗ್ಗೆ ಹೆಚ್ಚು ಆರಾಮದಿಂದ ಇರುವುದನ್ನು ಈಗ ಕಲಿತಿದ್ದೇನೆ. ನೀವು ಅತ್ಯುತ್ತಮವಾಗಿ ಮಾಡುತ್ತಿದ್ದರೆ, ಆಗ ನಿಜಕ್ಕೂ ಬುಕಿಂಗ್‌ಗಳು ಬರುತ್ತವೆ. ನಿಮ್ಮ ಉತ್ಪನ್ನದಲ್ಲಿ ಆತ್ಮವಿಶ್ವಾಸ ಮತ್ತು ನಂಬಿಕೆ ಇರಿಸಿಕೊಳ್ಳಿ. ಅಂದಹಾಗೆ, ಅಷ್ಟು ಶುಚಿಗೊಳಿಸುವಿಕೆ ಮತ್ತು ಲಾಂಡ್ರಿಯನ್ನು ನಿಮ್ಮ ಬದುಕಿನಲ್ಲಿ ನೀವು ಎಂದೂ ಮಾಡುವುದಿಲ್ಲ.”