ನಿಮ್ಮ ಸ್ಥಳವನ್ನು ಸುಧಾರಿಸಲು 10 ಮಾರ್ಗಗಳು

ನಿಮ್ಮಂತಹ ಹೋಸ್ಟ್‌ಗಳ ಈ ಸಲಹೆಗಳು ಮತ್ತು ಚಿಂತನೆಗಳೊಂದಿಗೆ ನಿಮ್ಮ ಸ್ಥಳವನ್ನು ನವೀಕರಿಸಲು ಸ್ಫೂರ್ತಿ ಪಡೆಯಿರಿ.
Airbnb ಅವರಿಂದ ಏಪ್ರಿ 13, 2021ರಂದು
3 ನಿಮಿಷ ಓದಲು
ಏಪ್ರಿ 18, 2022 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಹೊಸದಾಗಿ ಪೇಂಟ್‌ ಮಾಡುವುದರಿಂದ ಹಿಡಿದು ಹೊಸ ಹೊದಿಕೆಗಳನ್ನು ಇರಿಸುವಂತಹ ಕೆಲ ಸಣ್ಣ ಬದಲಾವಣೆಗಳು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತವೆ

  • ಶುಚಿಗೊಳಿಸುವಿಕೆ ಸಮಯವನ್ನು ಕಡಿಮೆ ಮಾಡಲು, ಮುಂಜಾಗರೂಕತಾ ನಿರ್ವಹಣೆಯೊಂದಿಗೆ ಮುಂದುವರಿಯಲು ಮತ್ತು ಸುರಕ್ಷತೆಯತ್ತ ಗಮನಹರಿಸಲು ಸಹಾಯ ಮಾಡಬಹುದಾದ ಬದಲಾವಣೆಗಳನ್ನು ಮಾಡಿ

  • ಸುಧಾರಣೆ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ನಿಮ್ಮ ಸ್ಥಳದಲ್ಲಿ ವಾಸಿಸಿ ಮತ್ತು ನೀವು ಈ ಕೆಲಸ ಮಾಡಿದ ನಂತರ ನಿಮ್ಮ ಲಿಸ್ಟಿಂಗ್ ಅನ್ನು ಅಪ್‌ಡೇಟ್‌ ಮಾಡಿ

ಸುಲಭ, ಕೈಗೆಟುಕುವ ನವೀಕರಣಗಳಿಂದ ಹಿಡಿದು ದೊಡ್ಡ ನವೀಕರಣಗಳವರೆಗೆ, ನಿಮ್ಮ ಸ್ಥಳವನ್ನು ಕಂಗೊಳಿಸುವಂತೆ ಮಾಡಲು ಹಲವು ಮಾರ್ಗಗಳಿವೆ. ಇಲ್ಲಿ, ನಿಮ್ಮಂತಹ ಹೋಸ್ಟ್‌ಗಳಿಂದ ಬಂದಿರುವ ಕೆಲವು ಮನೆ ಸುಂದರೀಕರಣ ಪರಿಕಲ್ಪನೆಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಮಾಡಬೇಕಾದವುಗಳ ಪಟ್ಟಿಯನ್ನು ಈಗಲೇ ನಿಭಾಯಿಸಲು ನೀವು ಸಿದ್ಧರಿರಲಿ ಅಥವಾ ಇನ್ನೇನಾದರೂ ಯೋಜಿಸುತ್ತಿರಲಿ, ಸ್ಫೂರ್ತಿ ಪಡೆಯಲು ಸಿದ್ಧರಾಗಿ!

1. ಸಣ್ಣ ನವೀಕರಣಗಳು ದೊಡ್ಡ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಡಿ

ಕೆಲವೊಮ್ಮೆ, ರೂಮ್‌ಗೆ ಹೊಸ ಸ್ಪರ್ಶವನ್ನು ನೀಡಲು ಹೊಸದಾಗಿ ಪೇಂಟ್‌ ಮಾಡುವುದು ಅಥವಾ ದೈನಂದಿನ ಶುಚಿಗೊಳಿಸುವ ಉತ್ಪನ್ನಗಳು ಸಾಕಾಗುತ್ತವೆ. ಕೆನಡಾದ ಮಾಂಟ್ರಿಯಲ್‌ನ ಸೂಪರ್‌ಹೋಸ್ಟ್ ಹೆರಾಲ್ಡ್ ಅವರು ಕೆಲವು "ಲಘು ನವೀಕರಣಗಳನ್ನು" ಯೋಜಿಸುತ್ತಿದ್ದಾರೆ. "ಗೆಸ್ಟ್‌ಗಳು ಹೆಚ್ಚು ಸುತ್ತಾಡುವ ಸ್ಥಳಗಳ ಗೋಡೆಗಳನ್ನು ತೊಳೆಯುವೆ ಮತ್ತು ಗೆಸ್ಟ್‌ ರೂಮ್‌ ಮತ್ತು ಬಾತ್‌ರೂಮ್‌ ಅನ್ನು ಪೇಂಟ್‌ ಮಾಡುವೆ," ಎಂದು ಅವರು ಹೇಳುತ್ತಾರೆ. "ಸ್ಥಳವನ್ನು ಆಕರ್ಷಕಗೊಳಿಸುವ ಉತ್ತಮ ವಿಧಾನವೆಂದರೆ ಪೇಂಟ್‌ ಮಾಡುವುದಾಗಿದೆ!" ಇನ್ನೂ ಸರಳವಾಗಿ ತಾಜಾ ಅನುಭವವನ್ನು ಸೇರಿಸಲು, ಬೆಡ್‌ ಲಿನನ್‌ಗಳನ್ನು ಬದಲಾಯಿಸಿ, ಹೊಸ ಥ್ರೋ ದಿಂಬುಗಳನ್ನು ಸೇರಿಸಿ ಅಥವಾ ಶವರ್ ಪರದೆಯನ್ನು ಬದಲಿಸಲು ಪ್ರಯತ್ನಿಸಿ

.

2. ನಿಮ್ಮ ನಿಧಾನಗತಿಯ ಋತುವನ್ನು ಸಂಪೂರ್ಣ ಬಳಸಿಕೊಳ್ಳಿ

ದೊಡ್ಡ ಅಪ್‌ಗ್ರೇಡ್‌ಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಾ? ನಿಮ್ಮ ಕಡಿಮೆ ಬೇಡಿಕೆಯ ಋತುವನ್ನು ನೀವು ಗುರುತಿಸಿದ ನಂತರ, ಅದರ ಲಾಭವನ್ನು ಪಡೆದುಕೊಳ್ಳಿ, ವಿಶೇಷವಾಗಿ ಕೆಲವು ದಿನಗಳು ಅಥವಾ ವಾರಗಳವರೆಗೆ ನಿಮ್ಮ ಸ್ಥಳ ಖಾಲಿಯಾಗಬೇಕಾದರೆ ನವೀಕರಣಗಳನ್ನು ಮಾಡಿ. "ಇಲ್ಲಿ ಚಳಿಗಾಲವು ನಿಧಾನವಾಗಿರುತ್ತದೆ, ಆದ್ದರಿಂದ ದೊಡ್ಡ ಯೋಜನೆಗಳಿಗೆ ಇದು ಸೂಕ್ತವಾಗಿದೆ" ಎಂದು ಸ್ಪೈನ್‌ನ ಪ್ರೊಯೆಂಡೋಸ್‌ನ ಹೋಸ್ಟ್ ಮಾರ್ಟಿನ್ ಹೇಳುತ್ತಾರೆ. ಪೋರ್ಚುಗಲ್‌ನ ವಿಲಾ ನೋವಾ ಡಿ ಗೈಯಾದಿಂದ ಬಂದ ಸೂಪರ್‌ಹೋಸ್ಟ್‌ಗಳಾದ ಡೆಲ್ಫಿನಾ ಮತ್ತು ಜಾರ್ಜ್, ನವೆಂಬರ್, ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಕಡಿಮೆ ಗೆಸ್ಟ್‌ಗಳು ಚೆಕ್ ಇನ್ ಮಾಡಿರುವುದನ್ನು ಗಮನಿಸಿ, ಅವರು "ಅಡುಗೆಮನೆಯಲ್ಲಿನ ಎಲ್ಲಾ ಗೃಹೋಪಯೋಗಿ ಸಾಮಾನುಗಳಿಗೆ ಬಣ್ಣ ಹಚ್ಚಿದರು, ಹಳೆಯ ವ್ಯಾಕ್ಯೂಮ್ ಕ್ಲೀನರ್ ಅನ್ನು ವೈರ್‌ಲೆಸ್ ಮೂಲಕ ಬದಲಿಸಿದರು ಮತ್ತು ಹೊಸ ಡ್ಯೂವೆಟ್ ಖರೀದಿಸಿದರು."

3. ನಿಮ್ಮ ಗೆಸ್ಟ್‌ಗಳ ಮೇಲಾಗುವ ಮೊದಲ ಪ್ರಭಾವದ ಕುರಿತು ಮತ್ತೊಮ್ಮೆ ಪರಿಶೀಲಿಸಿ

ಗೆಸ್ಟ್‌ಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ, ಅವರು ಗಮನಿಸುವ ಮೊದಲ ಸಂಗತಿ ಯಾವುದು? ಅದು ಬಣ್ಣ ಕಿತ್ತುಬರುತ್ತಿರುವ ಗೋಡೆಯಾಗಿರಬಹುದು ಅಥವಾ ಮಂದ ಬೆಳಕಿರುವ ಕಾಲುಹಾದಿಯಾಗಿರಬಹುದು, ಆರಂಭದಿಂದಲೇ ಅವರಿಗೆ ಮಹದಾನಂದ ನೀಡುವ ಅವಕಾಶಗಳನ್ನು ನೀವು ತಪ್ಪಿಸಿಕೊಳ್ಳುತ್ತಿರಬಹುದು. “ಹವಾಮಾನವು ಉತ್ತಮವಾದಂರೆ, ನಮ್ಮ ಮುಂಬಾಗಿಲನ್ನು ಪೇಂಟ್ ಮಾಡುವುದರಿಂದ ನಾವು ಆರಂಭಿಸುತ್ತೇವೆ” ಎಂದು ಗ್ರೀಸ್‌ನ ಅಥೆನ್ಸ್‌ನ ಹೋಸ್ಟ್ ಮರಿಯಾ ಹೇಳುತ್ತಾರೆ. ಮತ್ತು ಆಸ್ಟ್ರಿಯಾದ ಡಾರ್ನ್‌ಬಿರ್ನ್‌ನ ಸೂಪರ್‌ಹೋಸ್ಟ್ ಮಾರ್ಕಸ್ ಅವರು “ನಮ್ಮ ಅಪಾರ್ಟ್‌ಮಂಟ್‌ಗಳ ಪ್ರವೇಶದ್ವಾರದಲ್ಲಿ ಮೋಷನ್ ಡಿಟೆಕ್ಟರ್ ಇರುವ ಹೊಸ LED ಹೊರಾಂಗಣ ಲೈಟ್‌ಗಳನ್ನು" ಅಳವಡಿಸುತ್ತಿದ್ದಾರೆ.

4. ಸ್ವಚ್ಛಗೊಳಿಸುವಿಕೆಯಲ್ಲಿ ನಿಮಗೆ ಸಮಯ ಉಳಿಸಲು ಸಹಾಯ ಮಾಡಬಹುದಾದ ಬದಲಾವಣೆಗಳನ್ನು ಮಾಡಿ

ಪೀಠೋಪಕರಣಗಳಿಂದ ಹಿಡಿದು ಫಿಕ್ಸ್‌ಚ‌ರ್‌ಗಳವರೆಗೆ, ಕೆಲವು ಬದಲಾವಣೆಗಳು ನಿಮ್ಮ ಸ್ಥಳವನ್ನು ತ್ವರಿತವಾಗಿ ಸ್ವಚ್ಛಗೊಳಿಸಲು ಸಹಕಾರಿಯಾಗಬಹುದು (ಮತ್ತು ವೆಚ್ಚವೂ ಕಡಿಮೆಯಾಗುತ್ತದೆ!). ಅರಿಜೋನಾದ ಫ್ಲಾಗ್‌ಸ್ಟಾಫ್‌ನ ಸೂಪರ್‌ಹೋಸ್ಟ್ ಬೆತ್, ತಮ್ಮ ಸ್ಥಳದಲ್ಲಿದ್ದ ಹೆಚ್ಚಿನ ನಿರ್ವಹಣೆಯ ಅಗತ್ಯವಿರವ ಬೆಡ್‌ ಫ್ರೇಮ್‌ ಅನ್ನು ಬದಲಾಯಿಸಿ ಸುಧಾರಿತ ಹಾಗೂ "ಪಾಲಿಶಿಂಗ್ ಅಗತ್ಯವಿಲ್ಲದ ಪ್ಲಾಟ್‌ಫಾರ್ಮ್ ಬೆಡ್‌ನೊಂದಿಗೆ" ಬದಲಾಯಿಸಿದರು. ಮತ್ತು ಬ್ರೆಜಿಲ್‌ನ ಸಾವೊ ಪಾಲೊದ ಸೂಪರ್‌ಹೋಸ್ಟ್ ಬೀಟ್ರಿಜ್, ತಲುಪಲು ಕಷ್ಟಕರವಾದ ಮೂಲೆಗಳನ್ನು ಸುಲಭವಾಗಿ ಶುಚಿಗೊಳಿಸಲು ಉತ್ತಮ ಟ್ರಿಕ್ ಹೊಂದಿದ್ದಾರೆ: "ಶುಚಿಗೊಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ನಾನು ಕೆಲವು ಪೀಠೋಪಕರಣಗಳ ಅಡಿಯಲ್ಲಿ ಸಣ್ಣ ಚಕ್ರಗಳನ್ನು ಅಳವಡಿಸುತ್ತೇನೆ."

5. ಇಂಧನ-ಸಮರ್ಥ ವಸ್ತುಗಳಿಗೆ ಅಪ್‌ಗ್ರೇಡ್ ಮಾಡಿ

ನಿಮ್ಮ ಸ್ಥಳದಲ್ಲಿ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು ಕೇವಲ ಭೂಮಿಗೆ ಉತ್ತಮವಲ್ಲದೆ-ಇದು ನಿಮ್ಮ ಬಿಲ್‌ಗಳಲ್ಲಿ ಉಳಿತಾಯ ಮಾಡಲು ಸಹ ನಿಮಗೆ ಸಹಾಯ ಮಾಡಬಹುದು. ಆಸ್ಟ್ರಿಯಾದ ಡಾರ್ನ್‌ಬಿರ್ನ್‌ನ ಹೋಸ್ಟ್ ಮಾರ್ಕಸ್ ಸ್ಮಾರ್ಟ್ ಥರ್ಮೋಸ್ಟಾಟ್ ಅನ್ನು ಪ್ರಯತ್ನಿಸಲು ಯೋಜಿಸಿದ್ದಾರೆ: "ಇದು ನನ್ನ ತಾಪನ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಇದರಿಂದ [ಸ್ಥಳವು ಖಾಲಿಯಾಗಿರುವಾಗ] ತಾಪನ ಉತ್ಪಾದನೆಯನ್ನು ಕಡಿಮೆ ಮಾಡ ಮಾಡಬಹುದಾಗಿದೆ." ಮತ್ತು ಲಾಸ್ ಏಂಜಲೀಸ್‌ನ ಸೂಪರ್‌ಹೋಸ್ಟ್ ಪೀಟ್ ತನ್ನ ಗೆಸ್ಟ್‌ಗಳು ಹೆಚ್ಚು ಶಕ್ತಿ-ಸಂವೇದನಾಶೀಲರಾಗಿರಲು ಸಹಾಯ ಮಾಡಲು "ಬಾತ್ರೂಮ್ ಸೀಲಿಂಗ್ ಹೀಟರ್ ಮತ್ತು ಫ್ಯಾನ್‌ಗಾಗಿ ಕೌಂಟ್‌ಡೌನ್ ಟೈಮರ್‌ಗಳನ್ನು ಸೇರಿಸಿದ್ದಾರೆ".

6. ಮುಂಜಾಗರೂಕತಾ ನಿರ್ವಹಣೆಯೊಂದಿಗೆ ಮುಂದುವರಿಯಿರಿ

HVAC ಫಿಲ್ಟರ್‌ಗಳನ್ನು ಬದಲಿಸುವುದು, ಬಲ್ಬ್‌ಗಳನ್ನು ಬದಲಿಸುವುದು ಅಥವಾ ಮಾಡೆಮ್‌ಗಳು ಮತ್ತು ರೂಟರ್‌ಗಳನ್ನು ಧೂಳು ತೆಗೆದು ಮರುಹೊಂದಿಸುವುದು ಸೇರಿದಂತೆ ನಿಮ್ಮ ಸ್ಥಳದಲ್ಲಿ ಎಲ್ಲವನ್ನೂ ಸುಗಮವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಿಸಲು ನೀವು ನಿರ್ದಿಷ್ಟ ವೇಳಾಪಟ್ಟಿಯಲ್ಲಿ ಮಾಡಬಹುದಾದ ಕೆಲವು ಕಾರ್ಯಗಳಿವೆ. ನೀವು ವಾಸಿಸುವ ಸ್ಥಳದ ಹವಾಮಾನವನ್ನು ಅವಲಂಬಿಸಿ,ನಿಮ್ಮ ಕೆಲಸಗಳ ಲಿಸ್ಟ್‌ಗೆ ಹೆಚ್ಚುವರಿ ಕಾರ್ಯಗಳನ್ನು ಸೇರಿಸಬಹುದು. "ನಾನು ಟಾಯ್ಲೆಟ್ ಫ್ಲಾಪರ್ ಸರಪಳಿಯನ್ನು ನೈಲಾನ್ ಕಾರ್ಡ್ ತುಂಡಿನೊಂದಿಗೆ ಬದಲಾಯಿಸಿದೆ ಮತ್ತು ನಾನು ನಿಯಮಿತವಾಗಿ ಹಿಂಜ್‌ಗಳಿಗೆ ಎಣ್ಣೆ ಹಚ್ಚುತ್ತೇನೆ" ಎಂದು ಮೆಕ್ಸಿಕೋದ ಸಯುಲಿಟಾದಿಂದ ಬಂದ ಸೂಪರ್‌ಹೋಸ್ಟ್ ಸಾರಾ ಹೇಳುತ್ತಾರೆ, ಅಲ್ಲಿ ಆರ್ದ್ರತೆ ಮತ್ತು ಗಾಳಿಯಲ್ಲಿನ ಉಪ್ಪು ಲೋಹದ ಫಿಕ್ಚರ್‌ಗಳನ್ನು ಕೊರೆದು ಹಾಕಬಹುದು.

7. ನಿಮ್ಮ ಸ್ಥಳದ ಸುರಕ್ಷತಾ ಸಿದ್ಧತೆಯನ್ನು ಎರಡು ಬಾರಿ ಪರಿಶೀಲಿಸಿ

ಸುರಕ್ಷತೆಗಾಗಿ ನಿಮ್ಮ ಸ್ಥಳವನ್ನು ನವೀಕರಿಸುವುದು ಯಾವಾಗಲೂ ಅರ್ಥಪೂರ್ಣ ಹೂಡಿಕೆಯಾಗಿದೆ. "ಹೊಗೆ ಅಲಾರ್ಮ್‌ಗಳು, ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್‌ಗಳು ಮತ್ತು ಅಪಘಾತ ಅಥವಾ ಯಾವುದೇ ಘಟನೆಯ ಗೆಸ್ಟ್‌ಗಳು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸುವ ಚಿಹ್ನೆಗಳು ಗಅನುಸರಿಸಬೇಕಾದ ಸೂಚನಾ ಫಲಕಗಳು," ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ ಎಂದು ಸ್ಪೇನ್‌ನ ಲಾಸ್ ಪಾಲ್ಮಾಸ್ ಡಿ ಗ್ರಾನ್ ಕೆನರಿಯಾದ ಸೂಪರ್‌ಹೋಸ್ಟ್ ಬ್ರಿಯಾನ್ ಹೇಳುತ್ತಾರೆ. ಮನಃಶಾಂತಿಗಾಗಿ, ನಿಮ್ಮ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ಪ್ರಥಮ ಚಿಕಿತ್ಸಾ ಕಿಟ್‌ ಇರಿಸಿ. ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟವಾದ ಯಾವುದೇ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು.

8. ಸ್ವಾಗತಾರ್ಹ ಹೊರಾಂಗಣ ಪ್ರದೇಶವನ್ನು ರಚಿಸಿ

ಗೆಸ್ಟ್‌ಗಳು ಸುಂದರ ಹಸಿರು ಜಾಗವನ್ನು ಇಷ್ಟಪಡುತ್ತಾರೆ ಮತ್ತು ಅದನ್ನು ರಚಿಸಲು ನಿಮಗೆ ವಿಶಾಲವಾದ ಹಿತ್ತಲಿನ ಅಗತ್ಯವಿಲ್ಲ. ಆಸ್ಟ್ರೇಲಿಯಾದ ಪಾರ್ಕ್‌ವಿಲ್ಲೆಯ ಸೂಪರ್‌ಹೋಸ್ಟ್ ಲಾರೆನ್ಸ್ ಅವರು ಉನ್ನತವಾಗಿ ಯೋಚಿಸುತ್ತಿದ್ದಾರೆ ಮತ್ತು "ಕುಂಡಗಳಲ್ಲಿ ಗಿಡಗಳನ್ನು ಹೊಂದಿರುವ ಉದ್ಯಾನವನವನ್ನು ರೂಫ್‌ ಡೆಕ್‌ನಲ್ಲಿ ನಿರ್ಮಿಸಲು ಯೋಜಿಸುತ್ತಿದ್ದಾರೆ. ನಾನು ಸ್ಥಳೀಯ ಕರಾವಳಿ ಸಸ್ಯಗಳನ್ನು ಬಳಸುತ್ತೇನೆ." ಮತ್ತು ಪನಾಮದ ಪನಾಮ ಸಿಟಿಯ ಸೂಪರ್‌ಹೋಸ್ಟ್ ಇರ್ವಿಂಗ್ ತಮ್ಮ ಗೆಸ್ಟ್‌ಗಳಿಗೆ ಹೊರಾಂಗಣದಲ್ಲಿ ಸ್ವಲ್ಪ ಸಮಯವನ್ನು ಆನಂದಿಸಲು ಪ್ರೇರೇಪಿಸುತ್ತಾರೆ. "ನಾನು ಬಾಲ್ಕನಿಯಲ್ಲಿ ಉದ್ಯಾನವನ್ನು ನಿರ್ಮಿಸಿ ಮತ್ತು ಸ್ಥಳಕ್ಕೆ ಸೂಕ್ತವಾದ ಪೀಠೋಪಕರಣಗಳನ್ನು ಇರಿಸುವ ಮೂಲಕ ಗೆಸ್ಟ್‌ಗಳಿಗೆ ಪ್ರಕೃತಿಯನ್ನು ಆನಂದಿಸುವ ಸ್ಥಳವನ್ನು ಸೃಷ್ಟಿಸಲು ಬಯಸುತ್ತೇನೆ."

9. ಗೆಸ್ಟ್‌ಗಳ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಸ್ಥಳದಲ್ಲಿ ವಾಸ್ತವ್ಯ ಮಾಡಿ

ಎಲ್ಲಿಂದ ಆರಂಭಿಸಬೇಕು ಎನ್ನುವ ಬಗ್ಗೆ ನಿಮಗೆ ಖಚಿತತೆ ಇಲ್ಲದಿದ್ದರೆ, ನಿಮ್ಮನ್ನು ಗೆಸ್ಟ್ ಸ್ಥಾನದಲ್ಲಿ ಕಲ್ಪಿಸಿಕೊಳ್ಳಿ. “ಹೊಸರೂಪ ನೀಡುವುದಕ್ಕೆ ಅಥವಾ ನವೀಕರಣ ಮಾಡುವುದಕ್ಕೆ ಮೊದಲು, ನಿಮ್ಮ ಬ್ಯಾಗ್ ತುಂಬಿಸಿಕೊಳ್ಳಿ ಮತ್ತು ಕೆಲವು ರಾತ್ರಿಗಳ ಕಾಲ ನಿಮ್ಮ ಸ್ಥಳದಲ್ಲಿ ವಾಸ್ತವ್ಯ ಮಾಡಿ” ಎಂದು ಒಹಿಯೊದ ಸೌಥ್ ಚಾರ್ಲ್ಸ್‌ಟನ್‌ನ ಸೂಪರ್‌ಹೋಸ್ಟ್ ಸಾರಾ ಹೇಳುತ್ತಾರೆ. “ನಂತರ ನಿಮಗೆ ಅಗತ್ಯವಿದ್ದ, ತಪ್ಪಿಸಿಕೊಂಡ ಅಥವಾ ನೀವು ಊಹಿಸಿದಂತೆ ಕಾರ್ಯನಿರ್ವಹಿಸದ ವಸ್ತುಗಳ ಪಟ್ಟಿಯನ್ನು ತಯಾರಿಸಿ.” ಪೂರ್ಣ ಅನುಭವವನ್ನು ಪಡೆದುಕೊಳ್ಳಲು ಗೆಸ್ಟ್ ಪ್ರವೇಶದ ಮೂಲಕ ಹೋಗುವುದನ್ನು ಖಚಿತಪಡಿಸಿಕೊಳ್ಳಿ.

10. ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ನವೀಕರಿಸಲು ಮರೆಯಬೇಡಿ!

ನಿಮ್ಮ ಸ್ಥಳಕ್ಕೆ ಮಾಡುವ ಪ್ರತಿ ಸುಧಾರಣೆಯು ನಿಮ್ಮ ಸ್ಥಳವನ್ನು ಇನ್ನಷ್ಟು ಆಕರ್ಷಕವಾಗಿಸುವ ಅವಕಾಶವಾಗಿದೆ, ಹಾಗಾಗಿ ನಿಮ್ಮ ವಿವರಣೆ, ಸೌಲಭ್ಯಗಳ ಪಟ್ಟಿ ಮತ್ತು ಫೋಟೋಗಳನ್ನು ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಸಾಧ್ಯವಿದ್ದರೆ, U.K. ಯ ವೋರ್ಸ್‌ಸ್ಟರ್‌ನ ಸೂಪರ್‌ಹೋಸ್ಟ್ ಜಾಕ್ವಿ ಮಾಡಿದಂತೆ ವೃತ್ತಿಪರ ಫೋಟೋಗ್ರಫಿ ಮಾಡಿಸುವುದನ್ನು ಪರಿಗಣಿಸಿ. “ಅದು ಉಪಯುಕ್ತವಾಗಿತ್ತು” ಎನ್ನುತ್ತಾರೆ ಆಕೆ. “ಬುಕಿಂಗ್‌ಗಳು ಹೆಚ್ಚಾದವು.”

ಈಗ ಮತ್ತು ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ನಿಮ್ಮ ಸ್ಥಳವನ್ನು ಸುಧಾರಿಸುವ ಎಲ್ಲ ವಿಧಾನಗಳ ಕುರಿತು ನೀವು ಆಲೋಚಿಸುವಂತೆ ಈ ವಿಚಾರಗಳು ಮಾಡುತ್ತವೆ ಎಂದು ನಾವು ಆಶಿಸುತ್ತೇವೆ. 

ವಿಶೇಷ ಆಕರ್ಷಣೆಗಳು

  • ಹೊಸದಾಗಿ ಪೇಂಟ್‌ ಮಾಡುವುದರಿಂದ ಹಿಡಿದು ಹೊಸ ಹೊದಿಕೆಗಳನ್ನು ಇರಿಸುವಂತಹ ಕೆಲ ಸಣ್ಣ ಬದಲಾವಣೆಗಳು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತವೆ

  • ಶುಚಿಗೊಳಿಸುವಿಕೆ ಸಮಯವನ್ನು ಕಡಿಮೆ ಮಾಡಲು, ಮುಂಜಾಗರೂಕತಾ ನಿರ್ವಹಣೆಯೊಂದಿಗೆ ಮುಂದುವರಿಯಲು ಮತ್ತು ಸುರಕ್ಷತೆಯತ್ತ ಗಮನಹರಿಸಲು ಸಹಾಯ ಮಾಡಬಹುದಾದ ಬದಲಾವಣೆಗಳನ್ನು ಮಾಡಿ

  • ಸುಧಾರಣೆ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ನಿಮ್ಮ ಸ್ಥಳದಲ್ಲಿ ವಾಸಿಸಿ ಮತ್ತು ನೀವು ಈ ಕೆಲಸ ಮಾಡಿದ ನಂತರ ನಿಮ್ಮ ಲಿಸ್ಟಿಂಗ್ ಅನ್ನು ಅಪ್‌ಡೇಟ್‌ ಮಾಡಿ

Airbnb
ಏಪ್ರಿ 13, 2021
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ