ಒಂದು ಪರಿಣಾಮಕಾರಿ ಲಿಸ್ಟಿಂಗ್ ವಿವರಣೆಯನ್ನು ಬರೆಯುವುದು
ನಿಮ್ಮ ಸ್ಥಳದ ಬಗ್ಗೆ ಸಂಪೂರ್ಣ ವಿವರಣೆಯನ್ನು ಬರೆಯುವುದು ನಿರೀಕ್ಷೆಗಳನ್ನು ಹೊಂದಿಸಲು ಮತ್ತು ಬುಕಿಂಗ್‌ಗಳನ್ನು ಆಕರ್ಷಿಸಲು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಗೆಸ್ಟ್‌ಗಳು ಆಗಮಿಸಿದಾಗ ಅವರು ಏನನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ನಿಖರವಾಗಿ ತಿಳಿಸಿ.
ನಿಮ್ಮ ಲಿಸ್ಟಿಂಗ್ ವಿವರಣೆಯನ್ನು ಬರೆಯಿರಿ
Airbnbಯಲ್ಲಿ 7 ದಶಲಕ್ಷಕ್ಕೂ ಹೆಚ್ಚು ಮನೆಗಳಿವೆ. ನಿಮ್ಮದರ ವಿಶಿಷ್ಟತೆಯನ್ನು ವಿವರಿಸಲು ಲಿಸ್ಟಿಂಗ್ ವಿವರಣೆ ವಿಭಾಗವನ್ನು ಬಳಸಿ.
- ಅದನ್ನು ಸಂಕ್ಷಿಪ್ತವಾಗಿ ಇರಿಸಿ. ಪ್ರಮುಖ ವೈಶಿಷ್ಟ್ಯಗಳಿಗಾಗಿ ಗೆಸ್ಟ್‌ಗಳು ಆಗಾಗ್ಗೆ ಲಿಸ್ಟಿಂಗ್ ವಿವರಣೆಗಳನ್ನು ಸ್ಕ್ಯಾನ್ ಮಾಡುತ್ತಾರೆ. ಅತ್ಯಂತ ಮುಖ್ಯವಾದವುಗಳೊಂದಿಗೆ ಲೀಡ್ ಮಾಡಿ ಮತ್ತು ನಿಮ್ಮ ಸಂಪೂರ್ಣ ಸೌಲಭ್ಯಗಳ ಲಿಸ್ಟ್‌ನಂತಹ ನಿಮ್ಮ ಲಿಸ್ಟಿಂಗ್‌ನ ಇತರ ಭಾಗಗಳಲ್ಲಿ ಕಂಡುಬರುವ ನಕಲು ಮಾಹಿತಿಯನ್ನು ತಪ್ಪಿಸಿ.
ನಿಮ್ಮ ಸ್ಥಳದ ಕಥೆಯನ್ನುಹೇಳಿ. ನೀವು ಗೆಸ್ಟ್‌ಗಳಿಗೆ ಒದಗಿಸುತ್ತಿರುವ ಅನುಭವದ ಬಗ್ಗೆ ನಿರ್ದಿಷ್ಟವಾಗಿರಿ. ಡೌನ್‌ಟೌನ್‌ನ ಒಂದು ಸಾಧಾರಣ ರೂಮ್ "ನಗರವನ್ನು ಅನ್ವೇಷಿಸಲು ಪರಿಪೂರ್ಣ ನೆಲೆ"ಯಾಗಬಹುದು. ಮರಗಳಿಂದ ಸುತ್ತುವರಿದ ಮೇಲಿನ ಮಹಡಿಯ ಅಪಾರ್ಟ್‌ಮೆಂಟ್ "ನೀವು ಟ್ರೀಹೌಸ್‌ನಲ್ಲಿದ್ದಂತೆ ಭಾಸವಾಗುವಂತೆ" ಇರಬಹುದು.
ವಿಶೇಷ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸಿ. ನಿಮ್ಮ ಸ್ಥಳವನ್ನು ಯಾವುದು ಪ್ರತ್ಯೇಕಿಸುತ್ತದೆ ಎಂಬುದನ್ನು ವಿವರಿಸಿ, ಗೆಸ್ಟ್‌ಗಳು ಬಯಸುವ ಉನ್ನತ ಸೌಲಭ್ಯಗಳನ್ನುಹೈಲೈಟ್ ಮಾಡಿ. ಸ್ಫೂರ್ತಿಗಾಗಿ ಇತರ ಲಿಸ್ಟಿಂಗ್ ವಿವರಣೆಗಳು ಮತ್ತು ವಿಮರ್ಶೆಗಳನ್ನು ಓದಿ ಮತ್ತು ಯಾವ ರೀತಿಯ ಮಾಹಿತಿಯನ್ನು ಗೆಸ್ಟ್‌ಗಳು ಮೆಚ್ಚಿಕೊಳ್ಳುತ್ತಾರೆ ಎಂಬುದನ್ನು ತಿಳಿಯಿರಿ.
ವಾಸ್ತವಿಕರಾಗಿರಿ. ಅತಿಯಾಗಿ ಮಾರಾಟ ಮಾಡುವುದು ಅಥವಾ ಉತ್ಪ್ರೇಕ್ಷೆ ಮಾಡುವುದು ನಿರಾಶೆ ಮತ್ತು ನಕಾರಾತ್ಮಕ ವಿಮರ್ಶೆಗಳಿಗೆ ಕಾರಣವಾಗಬಹುದು. ಸೀಮಿತ ಚಲನಶೀಲತೆ ಅಥವಾ ಮಕ್ಕಳು ಸೇರಿದಂತೆ ಕೆಲವು ಗೆಸ್ಟ್‌ಗಳಿಗೆ ಸವಾಲನ್ನು ಒಡ್ಡುವ ನಿಮ್ಮ ಪ್ರಾಪರ್ಟಿಯ ಅಂಶಗಳ ಬಗ್ಗೆ ಮುಕ್ತವಾಗಿರಿ.
ಎಲ್ಲಾ ಇತರ ವಿಭಾಗಗಳನ್ನು ಭರ್ತಿ ಮಾಡಿ
ನಿಮ್ಮ ಸ್ಥಳದಲ್ಲಿ ವಾಸ್ತವ್ಯ ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಲು ಉಳಿದ ವಿಭಾಗಗಳನ್ನು ಬಳಸಿ.
- ನಿಮ್ಮ ಪ್ರಾಪಟಿ. ನಿಮ್ಮ ರೂಮ್‌ಗಳು ಮತ್ತು ಸ್ಥಳಗಳ ಸಾಮಾನ್ಯ ವಿವರಣೆಯನ್ನು ಬರೆಯಿರಿ, ಗೆಸ್ಟ್‌ಗಳು ತಿಳಿದುಕೊಳ್ಳಲು ಬಯಸಬಹುದಾದ ಮೋಜಿನ ಆದರೆ ಪ್ರಾಯೋಗಿಕ ವಿವರಗಳಿಗೆ ಒತ್ತು ನೀಡಿ. ಉದಾಹರಣೆಗೆ, "ಹಿತ್ತಲಿನಲ್ಲಿ ಬೇಲಿ ಹಾಕಲಾಗಿದೆ, ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಓಡಲು ಸ್ಥಳಾವಕಾಶವಿದೆ."
- ಗೆಸ್ಟ್ ಪ್ರವೇಶ. ಗೆಸ್ಟ್‌ಗಳಿಗೆ ಅವರು ಬಳಸಬಹುದಾದ ಸ್ಥಳದ ಭಾಗಗಳನ್ನು ತಿಳಿಸಿ. ಉದಾಹರಣೆಗೆ, "ಗೆಸ್ಟ್‌ಗಳು ಮುಖ್ಯ ಮನೆಯೊಂದಿಗೆ ಹಂಚಿಕೊಂಡಿರುವ ಒಳಾಂಗಣವನ್ನು ಪ್ರವೇಶಿಸಬಹುದು."
- ಗೆಸ್ಟ್‌ಗಳ ಜೊತೆ ಸಂವಾದ. ನಿರೀಕ್ಷೆಗಳನ್ನು ಹೊಂದಿಸಲು ನಿಮ್ಮ ವೈಯಕ್ತಿಕ ಸಂವಾದದ ಆದ್ಯತೆಯನ್ನು ಆಯ್ಕೆಮಾಡಿ. ಗೆಸ್ಟ್‌ಗಳೊಂದಿಗೆ ಸಮಯ ಕಳೆಯುವುದರಿಂದ ಹಿಡಿದು ಆ್ಯಪ್ ಮೂಲಕ ಸಂವಹನ ಮಾಡುವವರೆಗೆ ಆಯ್ಕೆಗಳು ಇರುತ್ತವೆ.
- ಗಮನಿಸಬೇಕಾದ ಇತರ ವಿವರಗಳು. ಬೇರೆಡೆ ಲಿಸ್ಟ್ ಮಾಡದಿರುವಂತಹ, ಗೆಸ್ಟ್‌ಗಳು ತಿಳಿದುಕೊಳ್ಳಲು ನೀವು ಬಯಸುವ, ಬೇರೆ ಯಾವುದನ್ನಾದರೂ ಸೇರಿಸಿ. ಉದಾಹರಣೆಗೆ, "ಮನೆ ನಗರ ಕೇಂದ್ರದಿಂದ 10 ನಿಮಿಷಗಳ ನಡಿಗೆ."
ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.