ನೀವು ಮುಂದುವರಿದಂತೆಲ್ಲ ನಿಮ್ಮ ಲಿಸ್ಟಿಂಗ್ ಅನ್ನು ಸುಧಾರಿಸುವುದು ಹೇಗೆ

ಹೆಚ್ಚು ಗೆಸ್ಟ್‌ಗಳನ್ನು ಆಕರ್ಷಿಸಲು ನಿಮ್ಮ ಫೋಟೋಗಳನ್ನು ಅಪ್‍ಡೇಟ್ ಮಾಡಿ, ವಿವರಗಳನ್ನು ಸೇರಿಸಿ ಮತ್ತು ಮೌಲ್ಯವನ್ನು ನೀಡಿ.
Airbnb ಅವರಿಂದ ಡಿಸೆಂ 9, 2019ರಂದು
2 ನಿಮಿಷ ಓದಲು
ಫೆಬ್ರ 4, 2025 ನವೀಕರಿಸಲಾಗಿದೆ

ನಿಮ್ಮ ಮನೆಯಂತೆಯೇ, ನಿಮ್ಮ ಲಿಸ್ಟಿಂಗ್ ಸರಿಯಾದ ಸಮಯದ ಸುಧಾರಣೆಗಳಿಂದ ಪ್ರಯೋಜನ ಪಡೆಯಬಹುದು. ನಿಮ್ಮ ಫೋಟೋಗಳು, ಸೌಲಭ್ಯಗಳು ಮತ್ತು ದರವನ್ನು ಸರಿಹೊಂದಿಸುವುದು ಹೆಚ್ಚಿನ ಗೆಸ್ಟ್‌ಗಳಿಗೆ ಆಕರ್ಷಣೀಯವಾಗಿರಲು ಮತ್ತು ನಿಮ್ಮ ಗಳಿಕೆಯ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಫೋಟೋಗಳನ್ನು ನವೀಕರಿಸಿ

ಕೆಲವು ಗೆಸ್ಟ್‌ಗಳು ಲಿಸ್ಟಿಂಗ್ ವಿವರಣೆಗಳನ್ನು ಓದುವುದಕ್ಕಿಂತ ಫೋಟೋಗಳನ್ನು ನೋಡುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನಿಮ್ಮ ಸ್ಥಳವು Airbnbಯಲ್ಲಿ ಚಿತ್ರಿಸಿದಂತೆಯೇ ಇರುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ.

ನಿಮ್ಮ ಜಾಗದಲ್ಲಿ ನೀವು ಇತ್ತೀಚೆಗೆ ಏನನ್ನಾದರೂ ಬದಲಾಯಿಸಿದ್ದರೆ, ನಿಮ್ಮ ಫೋಟೋಗಳನ್ನು ಅಪ್‌ಡೇಟ್‌ ಮಾಡುವುದನ್ನು ಪರಿಗಣಿಸಿ. ನೀವು ತೆಗೆದುಕೊಳ್ಳಬಹುದಾದ ಇತರ ಹೆಜ್ಜೆಗಳು ಇವುಗಳನ್ನು ಒಳಗೊಂಡಿರುತ್ತವೆ:

  • AI- ಚಾಲಿತ ಫೋಟೋ ಟೂರ್ ರಚಿಸಿ. ಫೋಟೋ ಟೂರ್‌ನೊಂದಿಗೆ ನಿಮ್ಮ ಮನೆಯ ಲೇಔಟ್ ಅನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಿ. Airbnbನ ಕಸ್ಟಮ್ AI ಎಂಜಿನ್ ನಿಮ್ಮ ಲಿಸ್ಟಿಂಗ್ ಫೋಟೋಗಳನ್ನು 19 ವಿಧದ ರೂಮ್‌ಗಳು ಮತ್ತು ಸ್ಥಳಗಳಾಗಿ ತಕ್ಷಣವೇ ವಿಂಗಡಿಸುತ್ತದೆ. ನಿಮ್ಮ ಟೂರ್ ಅನ್ನು ನೀವು ಪರಿಶೀಲಿಸಬಹುದು ಮತ್ತು ಪ್ರತಿ ರೂಮ್‌ಗೂ ವಿವರಗಳನ್ನು ಸೇರಿಸಬಹುದು.

  • ಫೋಟೋ ವಿವರಣೆಗಳನ್ನು ಸೇರಿಸಿ. ಅಡುಗೆಮನೆಯಲ್ಲಿನ ಎಸ್ಪ್ರೆಸೊ ಯಂತ್ರ ಅಥವಾ ಬಾತ್‌ರೂಮ್‌ನಲ್ಲಿ ಹೆಚ್ಚುವರಿ-ಫ್ಲಫಿ ಟವೆಲ್‌ಗಳಂತಹ ಪ್ರತಿ ರೂಮ್ ಅಥವಾ ಸ್ಥಳವು ಏನು ನೀಡುತ್ತದೆ ಎಂಬುದನ್ನು ಹೈಲೈಟ್ ಮಾಡುವ ಶೀರ್ಷಿಕೆಗಳನ್ನು ಬರೆಯಿರಿ.

  • ಉತ್ತಮವಾಗಿ ರಚಿಸಲಾದ ಫೋಟೋಗಳನ್ನು ತೆಗೆದುಕೊಳ್ಳಿ. ಗ್ರಿಡ್ ಲೈನ್‌ಗಳನ್ನು ಆನ್ ಮಾಡಲು ನಿಮ್ಮ ಫೋನ್ ಅಥವಾ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ ಮತ್ತು ಇಮೇಜ್ ರೆಸಲ್ಯೂಶನ್ ಅನ್ನು ಪರಿಶೀಲಿಸಿ. ಫ್ಲ್ಯಾಶ್ ಅನ್ನು ಆಫ್ ಮಾಡುವುದನ್ನು ಮತ್ತು ನೈಸರ್ಗಿಕ ಬೆಳಕನ್ನು ಬಳಸುವುದನ್ನು ಪರಿಗಣಿಸಿ. ವೈಡ್-ಅಂಗಲ್, ಮಿಡ್-ರೇಂಜ್ ಮತ್ತು ಕ್ಲೋಸ್-ಅಪ್ ಫೋಟೋಗಳ ಮಿಶ್ರಣಕ್ಕಾಗಿ ಗುರಿಯಿಡಿ. ಇನ್ನಷ್ಟು DIY ಫೋಟೋ ಸಲಹೆಗಳನ್ನು ಪಡೆಯಿರಿ 

  • ಪರಿಣಿತರನ್ನು ನೇಮಿಸಿಕೊಳ್ಳಿ. ನಿಮ್ಮ ಛಾಯಾಗ್ರಹಣ ಕೌಶಲ್ಯಗಳು ನಿಮ್ಮನ್ನು ತಡೆಯುತ್ತಿದ್ದರೆ, ವೃತ್ತಿಪರರೊಂದಿಗೆ ಕೆಲಸ ಮಾಡುವುದನ್ನು ಪರಿಗಣಿಸಿ. Airbnb ನಿಮ್ಮ ಪ್ರದೇಶದಲ್ಲಿ ಪ್ರೊ ಫೋಟೋಗ್ರಫಿಯನ್ನು ನೀಡಬಹುದು.

ವಿವರಗಳನ್ನು ಸೇರಿಸಿ

ನಿಮ್ಮ ಮನೆಯ ಬಗ್ಗೆ ಗೆಸ್ಟ್‌ಗಳು ತಿಳಿದುಕೊಳ್ಳುವುದು ನಿಮ್ಮ ಲಿಸ್ಟಿಂಗ್ ಮೂಲಕ. ಹೆಚ್ಚಿನ ಮಾಹಿತಿಯನ್ನು ಒದಗಿಸುವುದು ಬುಕಿಂಗ್‌ಗಳನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ.

  • ಉನ್ನತ ಸೌಲಭ್ಯಗಳನ್ನು ವಿಶೇಷ ಆಕರ್ಷಣೆ ಮಾಡಿ. ಗೆಸ್ಟ್‌‌ಗಳು ಸಾಮಾನ್ಯವಾಗಿ ಅಡುಗೆಮನೆ, ವೈಫೈ ಮತ್ತು ಉಚಿತ ಪಾರ್ಕಿಂಗ್ ಹೊಂದಿರುವ ಸ್ಥಳಗಳನ್ನು ಹುಡುಕುತ್ತಾರೆ. ಸಾಕುಪ್ರಾಣಿ-ಸ್ನೇಹಿ ಲಿಸ್ಟಿಂಗ್‌ಗಳು ಮತ್ತು ಕಿಂಗ್-ಗಾತ್ರದ ಹಾಸಿಗೆಯಂತಹ ಮಲಗುವ ವ್ಯವಸ್ಥೆಗಾಗಿ ಅವರು ಫಿಲ್ಟರ್ ಮಾಡಬಹುದು.
  • ನವೀಕರಿಸಿ. ನಿಮ್ಮ ಲಿಸ್ಟಿಂಗ್‌ನಲ್ಲಿನ ಎಲ್ಲಾ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಬಳಸಲು ಗೆಸ್ಟ್‌ಗಳು ನಿರೀಕ್ಷಿಸುತ್ತಾರೆ. ಉದಾಹರಣೆಗೆ, ಈಜುಕೊಳವು ವರ್ಷಪೂರ್ತಿ ಗೆಸ್ಟ್‌ಗಳಿಗೆ ಲಭ್ಯವಿಲ್ಲದಿದ್ದರೆ, ಅದು ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ವಿಷಯಗಳನ್ನು ಸರಳವಾಗಿ ಇರಿಸಿ. ನಿರೀಕ್ಷೆಗಳನ್ನು ಹೊಂದಿಸುವುದು ಮತ್ತು ಮೂಲ ಪ್ರಶ್ನೆಗಳಿಗೆ ಉತ್ತರಿಸುವುದರ ಮೇಲೆ ಕೇಂದ್ರೀಕರಿಸಿ. ನಿಮ್ಮ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಅವರು ಏನು ತಿಳಿದುಕೊಳ್ಳಬೇಕು ಎಂದು ಗೆಸ್ಟ್‌ಗಳಿಗೆ ತಿಳಿಸಿ.
  • ಗೆಸ್ಟ್ ಫೀಡ್‍ಬ್ಯಾಕ್ ಬಳಸಿ. ‌ವಿಮರ್ಶೆಯಲ್ಲಿ ನಿಮ್ಮ ತೆರೆದ ಒಳಾಂಗಣದ ಬಗ್ಗೆ ಗೆಸ್ಟ್ ‌ ಪ್ರಶಂಸೆ‌ ಮಾಡಿದ್ದಾರೆಯೇ? ಅದನ್ನು ನಿಮ್ಮ ಫೋಟೋಗಳಲ್ಲಿ ತೋರಿಸಲು ಪ್ರಯತ್ನಿಸಿ. ನಿಮ್ಮ ಸ್ಥಳವು ವಿಮಾನ ನಿಲ್ದಾಣದಿಂದ ತುಂಬಾ ದೂರದಲ್ಲಿದೆ ಎಂದು ಅಚ್ಚರಿಯಾಗಿದೆ ಎಂದು ಗೆಸ್ಟ್ ನಿಮಗೆ ಹೇಳಿದ್ದಾರೆಯೇ? ನಿಮ್ಮ ಸ್ಥಳವನ್ನು ಸ್ಪಷ್ಟಪಡಿಸಿ.

ಉತ್ತಮ ಮೌಲ್ಯವನ್ನು ಒದಗಿಸಿ

ನಿಮ್ಮ ಗೆಸ್ಟ್‌ ಗಳು ಏನು ಪಾವತಿಸುತ್ತಾರೆ ಎಂಬುದನ್ನುಅರ್ಥಮಾಡಿಕೊಳ್ಳುವುದು ನಿಮಗೆ ಉತ್ತಮ ಮೌಲ್ಯವನ್ನು ನೀಡಲು ಸಹಾಯ ಮಾಡುತ್ತದೆ. ಅವರ ಒಟ್ಟು ಬೆಲೆಯು ನಿಮ್ಮ ರಾತ್ರಿಯ ಬೆಲೆ, ನೀವು ಹೊಂದಿಸಿದ ಯಾವುದೇ ಹೆಚ್ಚುವರಿ ಶುಲ್ಕಗಳು (ಶುಚಿಗೊಳಿಸುವಿಕೆ, ಹೆಚ್ಚುವರಿ ಗೆಸ್ಟ್‌ಗಳು ಅಥವಾ ಸಾಕುಪ್ರಾಣಿಗಳಿಗೆ), Airbnb ಸೇವಾ ಶುಲ್ಕಗಳು ಮತ್ತು ತೆರಿಗೆಗಳನ್ನು ಒಳಗೊಂಡಿರುತ್ತದೆ.

ಸ್ಪರ್ಧಾತ್ಮಕ ಬೆಲೆ ನಿಮ್ಮ ಲಿಸ್ಟಿಂಗ್ ಎದ್ದು ಕಾಣುವಂತೆ ಆಗಲು ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಹತ್ತಿರದ ಇದೇ ರೀತಿಯ ಲಿಸ್ಟಿಂಗ್‌ಗಳಿಗೆ ಹೋಲಿಸಿದರೆ ಅಲ್ಗಾರಿದಮ್ ಒಟ್ಟು ಬೆಲೆ ಮತ್ತು ಲಿಸ್ಟಿಂಗ್‌ನ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ.

ನಿಮ್ಮ ಬೆಲೆಯಲ್ಲಿ ನೀವು ಸೇರಿಸುವಕೆಲವು ವೆಚ್ಚಗಳು ಗೆಸ್ಟ್‌ಗಳಿಗೆ ಸ್ಪಷ್ಟವಾಗಿಲ್ಲದಿರಬಹುದು. ಐಷಾರಾಮಿ ಸ್ನಾನದ ಉತ್ಪನ್ನಗಳು ಅಥವಾ ಸ್ಟ್ರೀಮಿಂಗ್ ಸೇವೆಗಳಂತಹ ಹೆಚ್ಚುವರಿಗಳನ್ನು ನೀವು ನೀಡುತ್ತೀರಾ? ನಿಮ್ಮ ಬೆಲೆಯಲ್ಲಿ ಮೌಲ್ಯವನ್ನು ಕಂಡುಹಿಡಿಯಲು ಗೆಸ್ಟ್‌ಗಳಿಗೆ ಸಹಾಯ ಮಾಡಲು ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿ ಅದನ್ನು ಸ್ಪಷ್ಟಪಡಿಸಿ.

ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಡಿಸೆಂ 9, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ