COVID-19 ಸಾಂಕ್ರಾಮಿಕದ ಸಮಯದಲ್ಲಿ, ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ. ನಾವು ವಿಶ್ವ ಆರೋಗ್ಯ ಸಂಸ್ಥೆ ಮತ್ತು US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್‌ನ ಮಾರ್ಗದರ್ಶನವನ್ನು ಆಧರಿಸಿ Airbnb ಲಿಸ್ಟಿಂಗ್‌ಗಳ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳಿಬ್ಬರಿಗೂ ಕಡ್ಡಾಯವಾಗಿ COVID-19 ಸುರಕ್ಷತಾ ಅಭ್ಯಾಸಗಳನ್ನು ರಚಿಸಿದ್ದೇವೆ. ಹೆಚ್ಚುವರಿಯಾಗಿ, ನೀವು ಕೋವಿಡ್-19 ಸುರಕ್ಷತೆಗಾಗಿ ಸಾಮಾನ್ಯ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿದಿರಬೇಕು, ಅನ್ವಯವಾಗುವ ಸರ್ಕಾರಿ ಪ್ರಯಾಣ ನಿರ್ಬಂಧಗಳು ಮತ್ತು ಸಲಹೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಬೇಕು ಮತ್ತು ಎಲ್ಲ ರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಆರೋಗ್ಯ ಮತ್ತು ಸುರಕ್ಷತೆ ಸಂಬಂಧಿಸಿದ ಚೆಂತೆಗಳನ್ನು ಪರಿಹರಿಸಲು Airbnb ಮಾರ್ಗಸೂಚಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಚಯಿಸಿದೆ, ಆದರೆ ಈ ಕ್ರಮಗಳು ಎಲ್ಲಾ ಅಪಾಯಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ. ವಿಶೇಷವಾಗಿ ನೀವು ಹೆಚ್ಚಿನ ಅಪಾಯದ ವರ್ಗದವರಾಗಿದ್ದರೆ (ಉದಾ: 65 ಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ ಅಥವಾ ಮಧುಮೇಹ ಅಥವಾ ಹೃದ್ರೋಗದಂತಹ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವವರಾಗಿದ್ದರೆ), ನೀವು Airbnb ಯಲ್ಲಿ ವಾಸ್ತವ್ಯ ಅಥವಾ ಅನುಭವವನ್ನು ಬುಕ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವಾಗ ವೃತ್ತಿಪರ ಮಾರ್ಗದರ್ಶನ ಪಡೆಯಲು ಮತ್ತು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ವಹಿಸಲು ನಾವು ಶಿಫಾರಸು ಮಾಡುತ್ತೇವೆ. Airbnb ಅನುಭವಗಳ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳಿಗೆ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಸ್ಥಳೀಯ ಕಾನೂನುಗಳು ಅಥವಾ ಮಾರ್ಗಸೂಚಿಗಳ ಪ್ರಕಾರ ಅಗತ್ಯವಿರುವಾಗ, ಎಲ್ಲಾ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಇವುಗಳನ್ನು ಮಾಡಬೇಕು:
ಗೆಸ್ಟ್ ವಾಸ್ತವ್ಯಗಳ ನಡುವೆ Airbnb ಯ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆಯನ್ನು ಒಳಗೊಂಡಂತೆ ಎಲ್ಲಾ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಅನ್ವಯವಾಗುವಂತೆ ಮೇಲೆ ವಿವರಿಸಿದ COVID-19 ಸುರಕ್ಷತಾ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಈ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುವ ಯಾವುದೇ ಹೋಸ್ಟ್ ಅಥವಾ ಗೆಸ್ಟ್ ಖಾತೆ ಅಮಾನತು ಅಥವಾ ಸಮುದಾಯದಿಂದ ತೆಗೆದುಹಾಕುವುದು ಸೇರಿದಂತೆ ಇತರ ಪರಿಣಾಮಗಳನ್ನು ಎದುರಿಸಬಹುದು.
ನಮ್ಮ ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸಲು, ಈ ಕೆಳಗಿನವುಗಳಲ್ಲಿ ಯಾವುದಾದರೂ ನಿಜವಾಗಿದ್ದರೆ ಹೋಸ್ಟ್‌ಗಳು (ಮತ್ತು ವಾಸ್ತವ್ಯದ ಮೊದಲು ಅಥವಾ ವ್ಯಸ್ತವ್ಯದ ಸಮಯದಲ್ಲಿ ಲಿಸ್ಟಿಂಗ್‌ನಲ್ಲಿ ಹಾಜರಿರಬಹುದಾದ ಎಲ್ಲರೂ) ತಮ್ಮ ಲಿಸ್ಟಿಂಗ್‌ಗೆ (ಗಳಿಗೆ) ಹೋಗಬಾರದು ಅಥವಾ ತಮ್ಮ ಗೆಸ್ಟ್‌ಗಳೊಂದಿಗೆ ಸಂವಹನ ನಡೆಸಬಾರದು ಮತ್ತು ಗೆಸ್ಟ್‌ಗಳು ಲಿಸ್ಟಿಂಗ್‌ಗೆ ಚೆಕ್ ಇನ್ ಮಾಡಬಾರದು:
COVID-19 ಸಾಂಕ್ರಾಮಿಕ ಸಮಯದಲ್ಲಿ ಜವಾಬ್ದಾರಿಯುತವಾಗಿ ಹೇಗೆ ಪ್ರಯಾಣಿಸಬೇಕು ಎಂಬುದರ ಕುರಿತು ಹೆಚ್ಚಿನ ವಿವರಗಳಿಗಾಗಿ, ಕ್ವಾರಂಟೈನ್ ಮತ್ತು ಪ್ರತ್ಯೇಕ ವಾಸ್ತವ್ಯಗಳ ಕುರಿತು ನಮ್ಮ ಲೇಖನವನ್ನು ಪರಿಶೀಲಿಸಿ.
ವಿಶೇಷವಾಗಿ ನಿಮ್ಮ ರಿಸರ್ವೇಶನ್‌ನ ಹೊರಗಿನ ಜನರೊಂದಿಗೆ ನೀವು ಸಂಪರ್ಕದಲ್ಲಿದ್ದರೆ ಮತ್ತು ಹಂಚಿಕೊಂಡ ಸ್ಥಳದಲ್ಲಿ ಅಥವಾ ಸಾಮಾನ್ಯ ಪ್ರದೇಶದಲ್ಲಿ ಮೇಲ್ಮೈಗಳು ಮತ್ತು ಪಾತ್ರೆಗಳನ್ನು ಸ್ಪರ್ಶಿಸುತ್ತಿದ್ದರೆ, ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದನ್ನು ಮರೆಯದಿರಿ.
ನೀವು ಸಾಮಾನ್ಯ ಪ್ರದೇಶದಲ್ಲಿದ್ದಾಗ ಅಥವಾ ಹಂಚಿಕೊಂಡ ಸ್ಥಳದಲ್ಲಿದ್ದಾಗ (ಹೋಸ್ಟ್ ಅಥವಾ ಗೆಸ್ಟ್ ಆಗಿ), ಮಾಸ್ಕ್ ಧರಿಸಲು ಮತ್ತು ನಿಮ್ಮ ರಿಸರ್ವೇಶನ್‌ನ ಭಾಗವಲ್ಲದವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಮ್ಮ ಸ್ಥಳೀಯ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ. ಸಾಧ್ಯವಾದಾಗಲೆಲ್ಲಾ ಸಂಪರ್ಕವಿಲ್ಲದೆ ಚೆಕ್-ಇನ್ ನೀಡುವುದನ್ನು ಹೋಸ್ಟ್‌ಗಳು ಪರಿಗಣಿಸಬೇಕು.
ನೆನಪಿಡಿ, ಪ್ರೈವೇಟ್ ರೂಮ್ ಅಥವಾ ಹಂಚಿಕೊಂಡ ಸ್ಥಳದಲ್ಲಿ ಉಳಿಯಲು ನಿಮಗೆ ಅನಾನುಕೂಲವೆನಿಸಿದರೆ ಸಂಪೂರ್ಣ ಸ್ಥಳವನ್ನು ಬುಕ್ ಮಾಡುವುದನ್ನು ಪರಿಗಣಿಸಿ. ಪ್ರೈವೇಟ್ ರೂಮ್ ಅಥವಾ ಹಂಚಿಕೊಂಡ ಸ್ಥಳವನ್ನು ಹೋಸ್ಟ್ ಮಾಡಲು ನಿಮಗೆ ಅನಾನುಕೂಲವಾಗಿದ್ದರೆ, ನಿಮ್ಮ ಸಂಪೂರ್ಣ ಸ್ಥಳವನ್ನು ನೀವು ಲಿಸ್ಟ್ ಮಾಡಬಹುದು ಅಥವಾ ಅದು ಸಾಧ್ಯವಾಗದಿದ್ದರೆ ನಿಮ್ಮ ಹೋಸ್ಟಿಂಗ್ ಅನ್ನು ತಡೆಹಿಡಿಯಬಹುದು.
ಹೋಸ್ಟ್‌ಗಳು ಪ್ರೈವೇಟ್ ರೂಮ್‌ಗಳು, ಹಂಚಿಕೊಂಡ ಸ್ಥಳಗಳು ಮತ್ತು ಲಿಸ್ಟಿಂಗ್‌ನಲ್ಲಿ ಒಟ್ಟುಗೂಡಲು ಅನುಮತಿಸಲಾದ ಒಟ್ಟು ಜನರ ಸಂಖ್ಯೆಯ ಬಗ್ಗೆ ಸ್ಥಳೀಯ ಮಾರ್ಗಸೂಚಿಗಳನ್ನು ಸಹ ಅನುಸರಿಸಬೇಕು.
ಸೂಚನೆ: Airbnb ಲಿಸ್ಟಿಂಗ್‌ಗಳಲ್ಲಿನ ಎಲ್ಲಾ ಪಾರ್ಟಿಗಳು ಮತ್ತು ಈವೆಂಟ್‌ಗಳ ಮೇಲೆ Airbnb ನಿಷೇಧವನ್ನು ಪಾಲಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಪಾರ್ಟಿ ಮತ್ತು ಈವೆಂಟ್‌ಗಳ ನೀತಿಯನ್ನು ಓದಿ.
ಪ್ರೈವೇಟ್ ರೂಮ್ ಅಥವಾ ಹಂಚಿಕೊಂಡ ಸ್ಥಳವಿರುವ ಲಿಸ್ಟಿಂಗ್‌ಗಳ ಹೋಸ್ಟ್‌ಗಳು ಕೆಳಗಿನವುಗಳನ್ನೂ ಮಾಡಬೇಕು:
ಕೆಲವು ಸರ್ಕಾರಗಳು ಖಾಸಗಿ ಅಥವಾ ಹಂಚಿಕೊಂಡ ರೂಮ್‌ಗಳನ್ನು ಹೋಸ್ಟ್ ಮಾಡಲು ನಿರ್ಬಂಧಗಳನ್ನು ವಿಧಿಸಬಹುದು ಅಥವಾ ಆ ಸ್ಥಳಗಳ ಮೇಲೆ ಹೆಚ್ಚುವರಿ ಕಟ್ಟುಪಾಡುಗಳು ಅಥವಾ ಅವಶ್ಯಕತೆಗಳನ್ನು ವಿಧಿಸಬಹುದು. ದಯವಿಟ್ಟು ಸರ್ಕಾರ ಮತ್ತು/ಅಥವಾ ನಿಮ್ಮ ಸ್ಥಳೀಯ ನ್ಯಾಯವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಗಳಿಂದ ಯಾವುದೇ ಹೆಚ್ಚುವರಿ ಸುರಕ್ಷತೆ ಮತ್ತು ಶುಚಿಗೊಳಿಸುವ ಮಾರ್ಗದರ್ಶನವನ್ನು ಪರಿಶೀಲಿಸುವುದು ಮತ್ತು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.
ನಿಮಗೆ ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಬಂದಿದ್ದರೆ ಅಥವಾ ಯಾವುದೇ ಕೋವಿಡ್-19 ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರೆ, ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ ಮತ್ತು ಸಂಬಂಧಿತ ಸ್ಥಳೀಯ ಪ್ರಾಧಿಕಾರಗಳ ಜೊತೆಗೆ ಪ್ರಭಾವಿತರಾಗಿರಬಹುದಾದ ಅಥವಾ ಸಂಭಾವ್ಯವಾಗಿ ನಿಮಗೆ ಒಡ್ಡಿಕೊಂಡಿರಬಹುದಾದ ಯಾರಿಗಾದರೂ ತಿಳಿಸುವುದನ್ನು ಪರಿಗಣಿಸಿ.