ನಿರಾಶ್ರಿತ ಕುಟುಂಬಕ್ಕೆ ಟೆಕ್ಸಾಸ್‌ನಲ್ಲಿರುವ ಹೋಸ್ಟ್ ತನ್ನ ಮನೆಯನ್ನು ಏಕೆ ತೆರೆದರು
ವಿಶೇಷ ಆಕರ್ಷಣೆಗಳು
ಹೊಸ ಸಮುದಾಯಗಳಲ್ಲಿ ಜನರು ತಮ್ಮ ಜೀವನವನ್ನು ಮರುಪ್ರಾರಂಭಿಸಲು ಸಹಾಯ ಮಾಡಲು Airbnb ನ ಉಚಿತ ಮನೆಗಳು ಕಾರ್ಯಕ್ರಮ ನಿರಾಶ್ರಿತರ ಸಹಾಯ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಹೊಂದಿದೆ
ಡಲ್ಲಾಸ್‌ನಲ್ಲಿ ಹೋಸ್ಟ್ ಲಿಂಡಾ ತಮ್ಮ ಮನೆಯನ್ನು ಮೊಹಮ್ಮದ್ ಮತ್ತು ಅವನ ಕುಟುಂಬಕ್ಕೆ ತೆರೆದರು—ಮತ್ತು ಶಾಶ್ವತವಾದ ಸ್ನೇಹವನ್ನು ಬೆಳೆಸಿದರು
ಉಚಿತ ಮನೆಗಳು ಈಗ Airbnb.org ಆಗಿದೆ
Airbnb ಯ ಉಚಿತ ಮನೆಗಳ ಪ್ರೋಗ್ರಾಂAirbnb.org ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು. ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.
Airbnb ಹೋಸ್ಟ್‌ಗಳು ತಮ್ಮ ಮನೆಗಳನ್ನು ತೆರೆಯುತ್ತಾರೆ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗಳೊಂದಿಗೆ ತಮ್ಮ ಜೀವನವನ್ನು ಹಂಚಿಕೊಳ್ಳುತ್ತಾರೆ, ಮತ್ತು ಅನೇಕರು ಹೋಸ್ಟ್ ಕರ್ತವ್ಯದಾಚೆಗೆ ಗೆಸ್ಟ್‌ಗಳಿಗೆ ನೆರವಾಗಿದ್ದಾರೆ. ನಮ್ಮ ಸಮುದಾಯದ ಪ್ರೀತಿ ಮತ್ತು ಔದಾರ್ಯದಿಂದ ಪ್ರೇರಿತರಾಗಿ, ಸ್ಥಳಾಂತರಗೊಂಡ ನಿರಾಶ್ರಿತರಿಗೆ ಮನೆಗಳನ್ನು ಹುಡುಕಲು ಸಹಾಯ ಮಾಡಲು Airbnb ಹಲವಾರು ನಿರಾಶ್ರಿತರ ನೆರವು ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಸೇರಬಹುದಾದ ಜಗತ್ತನ್ನು ರಚಿಸಲು ನಮ್ಮ ಹೋಸ್ಟ್‌ಗಳು ಸಹಾಯ ಮಾಡುತ್ತಾರೆ. ಡಲ್ಲಾಸ್‌ನ ಸೂಪರ್‌ಹೋಸ್ಟ್ ಲಿಂಡಾ ಇದನ್ನು ನಿಜವಾಗಿಯೂ ಸಾಕಾರಗೊಳಿಸಿದ್ದಾರೆ. ನಿರಾಶ್ರಿತರ ಕುಟುಂಬವನ್ನು ಎರಡು ವಾರಗಳ ಕಾಲ ಹೋಸ್ಟ್ ಮಾಡುವ ಬಗ್ಗೆ ಅವರ ಕುಟುಂಬಕ್ಕೆ ಕರೆ ಬಂದಾಗ, ಅವರು ಹಿಂಜರಿಕೆಯಿಲ್ಲದೆ ಸರಿ ಎಂದು ಹೇಳಿದರು. "ಸಕಾರಾತ್ಮಕ ರೀತಿಯಲ್ಲಿ ಎದ್ದು ನಿಲ್ಲಲು ಇದು ನನ್ನ ಮಾರ್ಗ ಎಂದು ನಾನು ಭಾವಿಸಿದೆ" ಎಂದು ಅವರು ಹೇಳುತ್ತಾರೆ.
ಮೊಹಮ್ಮದ್ ತಮ್ಮ ಹೆಂಡತಿ ಮತ್ತು ಮಗುವಿನೊಂದಿಗೆ ಬಂದಾಗ, ಎರಡು ಕುಟುಂಬಗಳು ತಕ್ಷಣವೇ ಬಂಧವನ್ನು ರಚಿಸಿದವು. ಮೊಹಮ್ಮದ್ ಇರಾಕ್ ಯುದ್ಧದ ಸಮಯದಲ್ಲಿ U.S. ಸೇನಾ ನೆಲೆಯಲ್ಲಿ ನೆಟ್‌ವರ್ಕ್ ನಿರ್ವಾಹಕರಾಗಿ ಮತ್ತು ಭಾಷಾಂತರಕಾರರಾಗಿ ಸೇವೆ ಸಲ್ಲಿಸಿದರು—ಮತ್ತು ಅವರ ಕೆಲಸವು US ಅನ್ನು ಬೆಂಬಲಿಸಿದ ಕಾರಣ, ಅವರ ಜೀವನವು ಅಪಾಯದಲ್ಲಿದೆ.
ಹೋಸ್ಟ್ ಮತ್ತು ಗೆಸ್ಟ್ ಸಂಬಂಧವಾಗಿ ಪ್ರಾರಂಭವಾದದ್ದು ಜೀವಮಾನದ ಸ್ನೇಹವಾಗಿ ಅರಳಿತು, ಎರಡೂ ಕುಟುಂಬಗಳ ವಿಶ್ವ ದೃಷ್ಟಿಕೋನಗಳ ಮೇಲೆ ಶಾಶ್ವತವಾದ ಪ್ರಭಾವ ಬೀರಿತು.
ಎರಡು ವಾರಗಳ ವಾಸ್ತವ್ಯವು ಮುಗಿದ ನಂತರ, ಲಿಂಡಾ ಮತ್ತು ಅವರ ಕುಟುಂಬವು ಅಪಾರ್ಟ್‌ಮೆಂಟ್ ಅನ್ನು ಹುಡುಕಲು ಮತ್ತು ಸಜ್ಜುಗೊಳಿಸಲು ಅವರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದರು. ಅವರು ಸೂಕ್ತವಾದ ಸ್ಥಳವನ್ನು ಹುಡುಕುತ್ತಿರುವಾಗ ಹೆಚ್ಚುವರಿ ತಿಂಗಳು ಕುಟುಂಬವನ್ನು ಉಚಿತವಾಗಿ ಹೋಸ್ಟ್ ಮಾಡಲು ನಿರ್ಧರಿಸಿದರು. ಆ ತಿಂಗಳಲ್ಲಿ, ಲಿಂಡಾ ಅವರ ಪತಿ ಕಡಿಮೆ ಲೀಸ್ ಬೆಲೆಯ ಕುರಿತು ಮಾತುಕತೆಗೆ ಸಹಾಯ ಮಾಡಿದರು ಮತ್ತು ಅವರ ದೇವಾಲಯದಲ್ಲಿ ಯಹೂದಿ ಸಮುದಾಯದ ದೇಣಿಗೆಗಳ ಸಹಾಯದಿಂದ ಅವರು ತಮ್ಮ ಹೊಸ ಅಪಾರ್ಟ್‌ಮೆಂಟ್ ಅನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಸಾಧ್ಯವಾಯಿತು.
ಕುಟುಂಬವು ಅವರ ಹೊಸ ಮನೆಯಲ್ಲಿ ನೆಲೆಸಿದ ನಂತರವೂ, ಉದಾರತೆ ಮುಂದುವರೆಯಿತು. ಅವರ ಅನೇಕ ಸ್ನೇಹಿತರ ಸಹಾಯದಿಂದ, ಅವರು ಕುಟುಂಬಕ್ಕೆ ಕಾರು ಖರೀದಿಸಲು ಸಾಕಷ್ಟು ಹಣವನ್ನು ಸಂಗ್ರಹಿಸಿದರು. ಮತ್ತು ದೇವಾಲಯದ ಉದಾರತೆಯ ಮೂಲಕ, ಮೊಹಮ್ಮದ್ ಅವರ ಮಗನನ್ನು ಪ್ರಿಸ್ಕೂಲ್‌ಗೆ ಹಾಜರಾಗಲು ಆಹ್ವಾನಿಸಲಾಯಿತು. ಮೊಹಮ್ಮದ್ ಮತ್ತು ಅವರ ಕುಟುಂಬ ಮತ್ತು ಅವರಿಗೆ ನೆಲೆಗೊಳ್ಳಲು ಸಹಾಯ ಮಾಡಿದವರು ಪರಸ್ಪರ ಭೇಟಿಯಾಗುವಂತಾಗಲು ಅವರು ಬ್ರಂಚ್ ಅನ್ನು ಹೋಸ್ಟ್ ಮಾಡಿದರು.
ಮೊಹಮ್ಮದ್ ಅವರು ಲಿಂಡಾರನ್ನು ತಾಯಿ ಸಮಾನ ಎಂದು ವಿವರಿಸುತ್ತಾರೆ ಮತ್ತು ಅವರು ತಮ್ಮ ಸ್ವಂತ ಅಪಾರ್ಟ್‌ಮೆಂಟ್‌ಗೆ ಹೋದಾಗಿನಿಂದ, ಅವರು ನಿಯಮಿತವಾಗಿ ಲಿಂಡಾ ಮತ್ತು ಅವರ ಕುಟುಂಬವನ್ನು ನೋಡುತ್ತಾರೆ ಎಂದು ಹೇಳುತ್ತಾರೆ. ಅವರ ಸಂಬಂಧ ಅಪರಿಚಿತರಿಂದ ಕುಟುಂಬ ಸದಸ್ಯರಾಗುವಷ್ಟರ ಮಟ್ಟಿಗೆ ಬೆಳೆದಿದೆ.
ಹೊಸ ಜೀವನವನ್ನು ಪ್ರಾರಂಭಿಸುವುದು ಸವಾಲುಭರಿತವಾಗಿದೆ. ಈ ಸಣ್ಣ ಸಮುದಾಯದಿಂದ ಸ್ವಾಗತಿಸಲಾಗುವುದು ಮತ್ತು ವಿಭಿನ್ನ ಹಿನ್ನೆಲೆಯ ಜನರು ಗೌರವಿಸುತ್ತಾರೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಮೊಹಮ್ಮದ್ ಹೇಳುತ್ತಾರೆ. Airbnb ಮೂಲಕ ಲಿಂಡಾ ಮತ್ತು ಅವರ ಕುಟುಂಬವನ್ನು ಭೇಟಿಯಾಗುವುದು ನಿಜವಾಗಿಯೂ ಅವರು ತಮಗೆ ಸೇರಿದವರೆಂಬ ಭಾವನೆ ಮೂಡವಂತೆ ಮಾಡಿದೆ.
ಅಗತ್ಯವಿರುವ ಸಮಯದಲ್ಲಿ ಹಂಚಿಕೊಳ್ಳುವ ಶಕ್ತಿಯನ್ನು ಅನ್‌ಲಾಕ್ ಮಾಡುವ ಬೆಳೆಯುತ್ತಿರುವ ಸಮುದಾಯಕ್ಕೆ ಸೇರಿಕೊಳ್ಳಿ.
ಈ ಲೇಖನದಲ್ಲಿ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
ಹೊಸ ಸಮುದಾಯಗಳಲ್ಲಿ ಜನರು ತಮ್ಮ ಜೀವನವನ್ನು ಮರುಪ್ರಾರಂಭಿಸಲು ಸಹಾಯ ಮಾಡಲು Airbnb ನ ಉಚಿತ ಮನೆಗಳು ಕಾರ್ಯಕ್ರಮ ನಿರಾಶ್ರಿತರ ಸಹಾಯ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಹೊಂದಿದೆ
ಡಲ್ಲಾಸ್‌ನಲ್ಲಿ ಹೋಸ್ಟ್ ಲಿಂಡಾ ತಮ್ಮ ಮನೆಯನ್ನು ಮೊಹಮ್ಮದ್ ಮತ್ತು ಅವನ ಕುಟುಂಬಕ್ಕೆ ತೆರೆದರು—ಮತ್ತು ಶಾಶ್ವತವಾದ ಸ್ನೇಹವನ್ನು ಬೆಳೆಸಿದರು