ತಕ್ಷಣದ ಬೆಂಬಲದೊಂದಿಗೆ ಉಕ್ರೇನ್ ಬಿಕ್ಕಟ್ಟನ್ನು ಎದುರಿಸುವುದು

ಲಕ್ಷಾಂತರ ಜನರು ಯುದ್ಧದಿಂದ ಪಲಾಯನ ಮಾಡಿದರು. ಸಾವಿರಾರು Airbnb.org ಹೋಸ್ಟ್‌ಗಳು ಅವರನ್ನು ಒಳಗೆ ಸ್ವಾಗತಿಸಿದರು.
Airbnb ಅವರಿಂದ ಆಗ 19, 2022ರಂದು
3 ನಿಮಿಷದ ವೀಡಿಯೊ
ಆಗ 25, 2023 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • 2022ರ ಆಕ್ರಮಣದ ನಂತರದ ತಿಂಗಳುಗಳಲ್ಲಿ, 6 ದಶಲಕ್ಷ ಜನರು ಸುರಕ್ಷತೆಗಾಗಿ ಉಕ್ರೇನ್‍‍ನಿಂದ ಪಲಾಯನ ಮಾಡಿದ್ದಾರೆ

  • Airbnb.org ತಾತ್ಕಾಲಿಕವಾಗಿ 100,000 ಜನರಿಗೆ ವಸತಿ ಕಲ್ಪಿಸುವ ಬದ್ಧತೆಯನ್ನು ಪೂರೈಸಲು ಸಹಾಯ ಮಾಡಲು ಹೋಸ್ಟ್‌ಗಳು ತಮ್ಮ ಮನೆಯ ಬಾಗಿಲುಗಳನ್ನು ತೆರೆದರು

ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಒಂದು ವಾರದ ನಂತರ, ಪ್ರದರ್ಶಕರು ಮತ್ತು ಹೋಸ್ಟ್ ಆದ ರಫಾಲ್ ಅವರಿಗೆ ನೈಋತ್ಯ ಪೋಲೆಂಡ್‍‍ನಲ್ಲಿರುವ ತನ್ನ ತವರೂರಾದ ವ್ರೊಕ್ಲಾವ್ ‌ಮೇಲೆ ಅದರ ಪ್ರಭಾವವನ್ನು ಗ್ರಹಿಸಲು ಸಾಧ್ಯವಾಯಿತು. ಅವನ ನೆರೆಹೊರೆಯಲ್ಲಿರುವ ಉಕ್ರೇನಿಯನ್ ಸಾಂಸ್ಕೃತಿಕ ಕೇಂದ್ರದ ಹೊರಗೆ ದಾನವಾಗಿ ನೀಡಿದ ಸಾಮಗ್ರಿಗಳ ಪೆಟ್ಟಿಗೆಗಳು ರಾಶಿಯಾದವು. ಅವರು ಬೀದಿಗಳಲ್ಲಿ ಮತ್ತು ಅಂಗಡಿಗಳಲ್ಲಿ ಉಕ್ರೇನಿಯನ್ ಭಾಷೆಯನ್ನು ಕೇಳಿದರು.

ಶೀಘ್ರದಲ್ಲೇ ಉಕ್ರೇನ್‍‍ನ ಮೂರು ಕುಟುಂಬಗಳು ಅವರು Airbnb ‌ ಯಲ್ಲಿ ಲಿಸ್ಟ್ ಮಾಡುವ ಮನೆಯಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯವನ್ನು ಬುಕ್ ಮಾಡಿದ್ದವು. ಯುದ್ಧದಿಂದ ಪಲಾಯನ ಮಾಡುವ ಜನರಿಗೆ ಶುಲ್ಕ ವಿಧಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ರಫಾಲ್, Airbnb ಗ್ರಾಹಕ ಸೇವೆಯನ್ನು ಸಂಪರ್ಕಿಸಿದರು, Airbnb.org ತನ್ನ ಪ್ರಯತ್ನಗಳಿಗೆ ಅನುದಾನ ನೀಡಬಹುದೆಂದು ತಿಳಿದುಕೊಂಡರು ಮತ್ತು ಸೈನ್‌ಅಪ್ ಮಾಡಿದರು.

U.N. ಮಾನವ ಹಕ್ಕುಗಳ ಮಂಡಳಿಯ ಪ್ರಕಾರ, ಫೆಬ್ರವರಿ 2022ರ ಆಕ್ರಮಣದ ನಂತರ ಆರು ತಿಂಗಳಲ್ಲಿ ಹೆಚ್ಚೂ ಕಡಿಮೆ 7 ದಶಲಕ್ಷ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಕೆಲವೇ ಸೂಟ್‌ಕೇಸ್‌ಗಳೊಂದಿಗೆ ಯುರೋಪಿನಾದ್ಯಂತ ಲಕ್ಷಾಂತರ ಕುಟುಂಬಗಳು ನಗರಗಳಿಗೆ ಆಗಮಿಸಿದವು ಮತ್ತು ಅವರು ಯಾವಾಗ ಮನೆಗೆ ಮರಳುತ್ತಾರೆಂದು ತಿಳಿದಿಲ್ಲ.

ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, Airbnb.org ತನ್ನ ಲಾಭೋದ್ದೇಶವಿಲ್ಲದ ಪಾಲುದಾರರು ಮತ್ತು ಹೋಸ್ಟ್‌ಗಳ ಜಾಗತಿಕ ಸಮುದಾಯದ ಕರೆ ನೀಡಿತು: ಉಕ್ರೇನ್‍‍ನಿಂದ ಪಲಾಯನ ಮಾಡುತ್ತಿರುವ 1,00,000 ಜನರಿಗೆ ತಾತ್ಕಾಲಿಕ ವಸತಿ ಒದಗಿಸಲು ನೀವು ನಮಗೆ ಸಹಾಯ ಮಾಡಬಹುದೇ?

ಅಂದಿನಿಂದ, ಹೋಸ್ಟ್‌ಗಳು, ದಾನಿಗಳು ಮತ್ತು Airbnb.org ಮತ್ತು ಜನರಿಗೆ ಸಹಾಯ ಮಾಡುವ ಮಾನವೀಯ ಸಂಸ್ಥೆಗಳ ಜಾಗತಿಕ ಬೆಂಬಲಗಳ ಸಹಾಯದಿಂದ Airbnb.org ಆ ಗುರಿಯನ್ನು ಪೂರೈಸಿದೆ.

ಆ ಕರೆಗೆ ಪ್ರತಿಕ್ರಿಯಿಸಿದ ರಫಾಲ್‍‍ರಂತಹ ಕೆಲವರು ದೀರ್ಘಾವಧಿಯ Airbnb ಹೋಸ್ಟ್‌ಗಳಾಗಿದ್ದು, ಅವರು ಈ ಬಿಕ್ಕಟ್ಟಿನ ಸಮಯದಲ್ಲಿ Airbnb.org ಮೂಲಕ ರಿಯಾಯಿತಿಯಲ್ಲಿ ವಾಸ್ತವ್ಯವನ್ನು ಒದಗಿಸುತ್ತಾರೆ. ಬರ್ಲಿನ್‍‍ನಲ್ಲಿ ವಾಸಿಸುತ್ತಿರುವ ಅಮೇರಿಕನ್ ಡೇಟಾ ವಿಜ್ಞಾನಿಯಾದ ಮೇರಿಯಂತಹ ಇತರರು, ನಿರಾಶ್ರಿತ ಗೆಸ್ಟ್‌ಗಳಿಗೆ Airbnb.org ಮೂಲಕ ಉಚಿತ ಅಥವಾ ರಿಯಾಯಿತಿಯ ತಂಗುವಿಕೆಗಳನ್ನು ನೀಡಲು ಆಯ್ಕೆ ಮಾಡಿದ 40,000 ಹೊಸ ಹೋಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ.

Airbnb.org ಕ್ರಮ ಕೈಗೊಳ್ಳಲು ನನಗೆ ಸ್ಪಷ್ಟವಾದ ಮಾರ್ಗದರ್ಶನ ನೀಡಿತು.
Host Mary of Berlin

ಸಹಾಯ ಮಾಡಲು ತಕ್ಷಣದ ಮಾರ್ಗವನ್ನು ಕಂಡುಹಿಡಿಯುವುದು

ಪ್ರದರ್ಶಕರು ಮತ್ತು Airbnb ಹೋಸ್ಟ್ ಆಗಿರುವ ರಫಾಲ್ ಅವರು ಯುದ್ಧ ಪ್ರಾರಂಭವಾದ ಕೂಡಲೇ Airbnb.org ಗೆ ಸೈನ್ ಅಪ್ ಮಾಡಿದ್ದಾರೆ.

ಉಕ್ರೇನ್‌ನ ಆಕ್ರಮಣವು ಪೋಲೆಂಡ್‌ನಲ್ಲಿ ತನಗೆ ತಿಳಿದಿರುವ ಪ್ರತಿಯೊಬ್ಬರನ್ನು ಆಘಾತಕ್ಕೆ ಒಳಪಡಿಸಿತು ಎಂದು ರಫಾಲ್ ಹೇಳುತ್ತಾರೆ, ಆದರೂ ಯುದ್ಧದಿಂದ ಪಲಾಯನ ಮಾಡುವ ಜನರ ಒಳಹರಿವಿಗೆ ಅವರ ಸ್ನೇಹಿತರು ಮತ್ತು ನೆರೆಹೊರೆಯವರು ಎಷ್ಟು ಬೇಗನೆ ಪ್ರತಿಕ್ರಿಯಿಸಿದರು ಎಂದು ಅವರು ಆಶ್ಚರ್ಯಚಕಿತರಾದರು. ಜನರು ವ್ರೊಕ್ಲಾವ್ ರೈಲು ನಿಲ್ದಾಣದಲ್ಲಿ ಆಹಾರವನ್ನು ದಾನ ಮಾಡಿದರು ಮತ್ತು ಉಕ್ರೇನ್ ಗಡಿಗೆ ತಲುಪಿಸಲು ಸರಬರಾಜುಗಳನ್ನು ಸಂಗ್ರಹಿಸಿದರು

.

ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸಂಗೀತದ ಪ್ರಯೋಜನವನ್ನು ಆಯೋಜಿಸಲು ಪ್ರಾರಂಭಿಸಿದರು, ಆದರೆ ಸಹಾಯ ಮಾಡಲು ಹೆಚ್ಚು ತಕ್ಷಣದ ಮಾರ್ಗವನ್ನು ಕಂಡುಕೊಳ್ಳಲು ಅವರು ಬಯಸಿದ್ದರು. "ವಾಸ್ತವ್ಯ ಹೂಡಲು ಸ್ಥಳ, ಮಲಗಲು ಸ್ಥಳ, ಹಿಂತಿರುಗಲು ಸ್ಥಳವಿಲ್ಲದಿರುವುದು ಕೆಟ್ಟ ವಿಷಯಗಳಲ್ಲಿ ಒಂದಾಗಿದೆ," ಎಂದು ಅವರು ಹೇಳುತ್ತಾರೆ.


ಬಿಕ್ಕಟ್ಟಿನಿಂದ ಸ್ಥಳಾಂತರಗೊಂಡ ಗೆಸ್ಟ್‌ಗಳನ್ನು ಸ್ವಾಗತಿಸಲು ರಫಾಲ್ ಅವರು ತಮ್ಮ ಮನೆಯನ್ನು Airbnb.org ಮೂಲಕ ಲಿಸ್ಟ್ ಮಾಡುವುದನ್ನು ಮುಂದುವರೆಸಿದ್ದಾರೆ. ಅವರು Airbnb.org ವೆಬಿನಾರ್‌ಗಳನ್ನು ‌ ಪೋಲಿಷ್‌ಗೆ ಭಾಷಾಂತರಿಸಲು ಕೂಡ ಸಹಾಯ ಮಾಡಿದ್ದಾರೆ.

ಸುರಕ್ಷಿತ ಸ್ಥಳವನ್ನು ನೀಡುವುದು

2022ರಲ್ಲಿ ಎರಡು ತಿಂಗಳ ಅವಧಿಯಲ್ಲಿ, ಮೇರಿ ಉಕ್ರೇನ್‍‍ನಿಂದ ಪಲಾಯನ ಮಾಡಿದ ನಾಲ್ಕು ಜನರನ್ನು ಹೋಸ್ಟ್ ಮಾಡಿದ್ದಾರೆ.

ಬರ್ಲಿನ್‍‍‌ನಲ್ಲಿ, ವ್ರೊಕ್ಲಾವ್‍‍ನಿಂದ ವಾಯುವ್ಯಕ್ಕೆ ಸುಮಾರು 215 ಮೈಲುಗಳ (350 ಕಿಲೋಮೀಟರ್) ದೂರದಲ್ಲಿ, ಮೇರಿ ಉಕ್ರೇನ್ ಆಕ್ರಮಣದ ಕುರಿತಾದ ಸುದ್ದಿಯನ್ನು ಅನುಸರಿಸಿದರು. ಅವರು ಆನ್‍‍ಲೈನ್‍‍ನಲ್ಲಿ Airbnb.org ನ ಕರೆಯನ್ನು ನೋಡಿದಾಗ, ಅವರು ತಮ್ಮ ಅಪಾರ್ಟ್‌ಮೆಂಟ್ ಅನ್ನು ಉಚಿತವಾಗಿ ಲಿಸ್ಟ್ ‌ ಮಾಡಿದರು.

Airbnb.org ನ ಪಾಲುದಾರರಲ್ಲಿ ಒಬ್ಬರಾದ ಆರ್ಗನೈಜೇಷನ್ ಫಾರ್ ರೆಫ್ಯೂಜ್, ಆಸಿಲಮ್ ಎಂಡ್ ಮೈಗ್ರೇಷನ್ (ORAM) ನ ಸದಸ್ಯ ಸಿಬ್ಬಂದಿಯೊಬ್ಬರು ಅವರನ್ನು ಸಂಪರ್ಕಿಸಿದರು. ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿದಂತೆ, ಉಕ್ರೇನ್ ಮತ್ತು ಕೆಲವು ಸುತ್ತಮುತ್ತಲಿನ ದೇಶಗಳಲ್ಲಿ LGBTQ+ ವಿರೋಧಿ ಭಾವನೆಯು ಈ ಸಂಘರ್ಷದ ಸಮಯದಲ್ಲಿ ಸ್ಥಳಾಂತರಗೊಂಡ LGBTQ+ ಜನರ ದೌರ್ಬಲ್ಯವನ್ನು ಹೆಚ್ಚಿಸಿದೆ. ORAM ಪ್ರತಿನಿಧಿಯು ಇಬ್ಬರು ತೃತೀಯ ಲಿಂಗಿಗಳು ಅವರ ಸ್ಥಳದಲ್ಲಿ ಉಳಿಯಬಹುದೇ ಎಂದು ಮೇರಿಯನ್ನು ಕೇಳಿದರು.

ಮೇರಿ ಸಂತೋಷದಿಂದ LGBTQ+ ಗೆಸ್ಟ್‌ಗಳನ್ನು ಹೋಸ್ಟ್ ಮಾಡಿದರು. "ನನ್ನ ಅಪಾರ್ಟ್‌ಮೆಂಟ್ ಅವರಿಗೆ ವಿಶೇಷವಾಗಿ ಸುರಕ್ಷಿತವಾದ ಸ್ಥಳವಾಗಿತ್ತೆಂದು ನನಗೆ ತಿಳಿದಿತ್ತು" ಎಂದು ಅವರು ಹೇಳುತ್ತಾರೆ.

ಸಂಪರ್ಕವನ್ನು ಬೆಳೆಸುವುದು

ಮೇರಿಯ ಮೊದಲ ಗೆಸ್ಟ್‌ಗಳು ಹೊರಟುಹೋದ ಕೂಡಲೇ, ದಿಮಾ ಎರಡು ವಾರಗಳ ಕಾಲ ವಾಸ್ತವ್ಯ ಹೂಡಲು ಬಂದರು. ತನ್ನ 20ರ ಹರೆಯದಲ್ಲಿದ್ದ ಸಲಿಂಗಿಯಾದ ದಿಮಾ, ರಷ್ಯನ್ನರು ನಗರದ ಮೇಲೆ ಬಾಂಬ್ ದಾಳಿ ನಡೆಸಲು ಪ್ರಾರಂಭಿಸಿದಾಗ ಕ್ಯೀವ್‌ನಲ್ಲಿ ವಾಸಿಸುತ್ತಿದ್ದರು. ಸೇಫ್‍‍ಬೋ ಎಂಬ ಒಂದು ತಳಮಟ್ಟದ ಸಂಸ್ಥೆಯು ಡಿಮಾ ಮತ್ತು ಅವರ ಬೆಕ್ಕು ಪೀಚ್ ಪೋಲೆಂಡ್ ಮೂಲಕ ಬರ್ಲಿನ್‍‍ಗೆ ಪ್ರಯಾಣಿಸಲು ಸಹಾಯ ಮಾಡಿತು. ಅಲ್ಲಿ, ORAM ಅವರಿಗೆ ವಸತಿಯನ್ನು ಹುಡುಕಲು ಮತ್ತು ಸಾಮಾಜಿಕ ಸೇವೆಗಳಿಗೆ ನೋಂದಾಯಿಸಲು ಸಹಾಯ ಮಾಡಿತು.

ಅಡೆತಡೆಗಳಿಂದ ತುಂಬಿದ ಒಂದು ಟ್ರಿಪ್‍‍ನ ನಂತರ, ಮೇರಿಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದು ದಿಮಾಗೆ ನೆಮ್ಮದಿ ತಂದಿತು. "ನಾನು ಆ ಮೊದಲ ಕೆಲವು ದಿನಗಳಲ್ಲಿ ತುಂಬಾ ಭಾವನಾತ್ಮಕವಾಗಿದ್ದೆ," ಎಂದು ಅವರು ಹೇಳುತ್ತಾರೆ. “ನನಗೆ ಯಾವ ಭಾಗವು ಹೆಚ್ಚು ಮುಖ್ಯವಾಗುತ್ತೆಂದು ಕೂಡ ನನಗೆ ತಿಳಿದಿರಲಿಲ್ಲ: ಸುರಕ್ಷಿತ ಸ್ಥಳದಲ್ಲಿರುವುದೋ ಅಥವಾ ನಾನು ಪಡೆಯುತ್ತಿರುವ ಬೆಂಬಲದ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದೋ.”

ದಿಮಾ ಅವರು ತಂಗಿದ್ದ ಮೊದಲ ವಾರ ಮೇರಿ ಊರಿನಲ್ಲಿ ಇರಲಿಲ್ಲ. ಅವರು ಬರ್ಲಿನ್‍‍ಗೆ ಹಿಂದಿರುಗಿದಾಗ, ಇಬ್ಬರಿಗೂ ಒಳ್ಳೆಯ ಸ್ನೇಹ ಬೆಳೆಯಿತು. ಅವರು ತಮ್ಮ ಕಿಚನ್ ಟೇಬಲ್‍‍ನಲ್ಲಿ ಅನೇಕ ಗಂಟೆಗಳ ಕಾಲ ಕಳೆದು, ಊಟ ಹಂಚಿಕೊಳ್ಳುತ್ತಿದ್ದರು ಮತ್ತು ಬಿಯರ್ ‌ಕುಡಿಯುತ್ತಿದ್ದರು. ಅವರು ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಹೋದ ಮೇಲೂ ಅವರು ಸಂಪರ್ಕದಲ್ಲಿದ್ದರು.

"ಇಲ್ಲಿ ಆರಂಭಿಸಿದ್ದು ನನಗೆ ಬೃಹತ್ ಉತ್ತೇಜನವಾಗಿತ್ತು" ಎಂದು ದಿಮಾ ಹೇಳುತ್ತಾರೆ.

ಬದಲಾವಣೆಯನ್ನು ತರುವುದು

ಹೋಸ್ಟಿಂಗ್ ಎಷ್ಟು ಸುಲಭವಾಯಿತು ಎನ್ನುವುದನ್ನು ಮೇರಿ ಹೇಳುತ್ತಲೇ ಇರುತ್ತಾರೆ. "ನಾನು ವಿಶೇಷವಾಗಿ ಗಮನಾರ್ಹವಾದದ್ದೇನನ್ನೂ ಮಾಡಲಿಲ್ಲ" ಎಂದು ಅವರು ಒತ್ತಿ ಹೇಳುತ್ತಾರೆ. "ನಾನು ಒಂದು ಚಾನ್ಸ್ ತೆಗೆದುಕೊಂಡೆ. ನಾನು ಬಹುಶಃ ಸ್ವಲ್ಪವೇ ಅನಾನುಕೂಲತೆಯಾಗಿರಬಹುದು."

ಅದನ್ನು ಅವರು ತನ್ನ ಗೆಸ್ಟ್‌ಗಳು ಹಂಚಿಕೊಂಡ ಕಥೆಗಳೊಂದಿಗೆ ಹೋಲಿಸುತ್ತಾರೆ: ""ನನ್ನ ಕುಟುಂಬದಿಂದ ಬೇರ್ಪಟ್ಟು, ನಾನು ಆಯ್ಕೆ ಮಾಡದ, ಸಂಪೂರ್ಣವಾಗಿ ವಿದೇಶಿ ಸ್ಥಳದಲ್ಲಿ [ವಿಷಯಗಳನ್ನು] ಎದುರಿಸಬೇಕಾದ ಬಗ್ಗೆ ನಾನು ಯೋಚಿಸುತ್ತೇನೆ. ಅದು ಗಮನಾರ್ಹವಾಗಿದೆ. ಅದು ಕಷ್ಟಕರವಾಗಿದೆ."

ಮೇರಿ ತಾನು ತನ್ನ ಗೆಸ್ಟ್‌ಗಳೊಂದಿಗೆ ಸ್ನೇಹ ಬೆಳೆಸುತ್ತೇನೆಂದು ನಿರೀಕ್ಷಿಸಿರಲಿಲ್ಲ, ಆದರೆ ಅಲ್ಲಿ ಬೆಳವಣಿಗೆ ಹೊಂದಿದ ಸಮುದಾಯ ಪ್ರಜ್ಞೆಯಿಂದ ಅವರಿಗೆ ಸಂತೋಷವಾಗಿದೆ.

"ಬಹಳಷ್ಟು ಬಾರಿ, ನಾವು ಕೆಲಸ ಮಾಡುವಲ್ಲಿ ಹಾಕುವ ಪ್ರಯತ್ನಗಳೊಂದಿಗೆ, ನಾವು ಬಯಸಿದ ಫಲಿತಾಂಶಗಳು ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ. "ಆದರೆ ಇದರಲ್ಲಿ, ನಾನು ಕನಿಷ್ಠ ಒಬ್ಬ ವ್ಯಕ್ತಿಯ ಜೀವನದಲ್ಲಾದರೂ ವ್ಯತ್ಯಾಸವನ್ನು ಉಂಟುಮಾಡಲು ಸಾಧ್ಯವಾಯಿತು."

ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

ವಿಶೇಷ ಆಕರ್ಷಣೆಗಳು

  • 2022ರ ಆಕ್ರಮಣದ ನಂತರದ ತಿಂಗಳುಗಳಲ್ಲಿ, 6 ದಶಲಕ್ಷ ಜನರು ಸುರಕ್ಷತೆಗಾಗಿ ಉಕ್ರೇನ್‍‍ನಿಂದ ಪಲಾಯನ ಮಾಡಿದ್ದಾರೆ

  • Airbnb.org ತಾತ್ಕಾಲಿಕವಾಗಿ 100,000 ಜನರಿಗೆ ವಸತಿ ಕಲ್ಪಿಸುವ ಬದ್ಧತೆಯನ್ನು ಪೂರೈಸಲು ಸಹಾಯ ಮಾಡಲು ಹೋಸ್ಟ್‌ಗಳು ತಮ್ಮ ಮನೆಯ ಬಾಗಿಲುಗಳನ್ನು ತೆರೆದರು

Airbnb
ಆಗ 19, 2022
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ