ಬಿಕ್ಕಟ್ಟಿನಿಂದ ಪಲಾಯನ ಮಾಡಿದ ಜನರನ್ನು ಹೋಸ್ಟ್ ಮಾಡಲು 7 ಸಲಹೆಗಳು

ಆಘಾತವನ್ನು ಅನುಭವಿಸಿದ ಜನರನ್ನು ಸ್ವಾಗತಿಸಲು Airbnb.org ಪ್ರಾಯೋಗಿಕ ಸಲಹೆಯನ್ನು ಹಂಚಿಕೊಳ್ಳುತ್ತದೆ
Airbnb ಅವರಿಂದ ಆಗ 25, 2023ರಂದು
2 ನಿಮಿಷ ಓದಲು
ಆಗ 25, 2023 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಆಘಾತವನ್ನು ಅನುಭವಿಸುತ್ತಿರುವ ಗೆಸ್ಟ್‌ಗಳಿಗೆ ನಿಮ್ಮ ಸ್ಥಳವನ್ನು ಹೆಚ್ಚು ಸ್ವಾಗತಪೂರ್ಣವಾಗಿ ಮಾಡಲು ಸರಳ ಬದಲಾವಣೆಗಳು

  • ಗೆಸ್ಟ್‌ಗಳೊಂದಿಗೆ ಸಂವಹನ ನಡೆಸುವಾಗ, ಅವರಿಂದ ಬರುವ ಸೂಚನೆಗಳನ್ನು ಅರ್ಥಮಾಡಿಕೊಳ್ಳಿ

ನೀವು ಮೊದಲು Airbnb ಮೂಲಕ ಹೋಸ್ಟ್ ಮಾಡಿದ್ದರೆ, ನಿಮ್ಮ ಸ್ಥಳದಲ್ಲಿ ನಿಮ್ಮ ಗೆಸ್ಟ್‌ಗಳಿಗೆ ಸ್ವಾಗತವಿದೆಯೆಂದು ಅನಿಸುವ ಹಾಗೆ ಹೇಗೆ ಮಾಡಬೇಕು ಎಂದು ನೀವು ಸಾಕಷ್ಟು ಯೋಚಿಸಿರಬಹುದು.

ನೀವು Airbnb.org ಮೂಲಕ ತುರ್ತು ವಾಸ್ತವ್ಯಗಳನ್ನು ಆಯೋಜಿಸಿದಾಗ, ಆಘಾತವನ್ನು ಅನುಭವಿಸುತ್ತಿರಬಹುದಾದ ಗೆಸ್ಟ್‌ಗಳನ್ನು ಹೇಗೆ ಸ್ವಾಗತಿಸಬೇಕೆಂದೂ ನೀವು ಯೋಚಿಸುತ್ತಿರಬಹುದು.

ಕೆಲವೊಮ್ಮೆ ಚಿಕ್ಕ ಸೂಚನೆಯನ್ನೂ ಕೊಡದೇ ಸುರಕ್ಷತೆಯ ಹುಡುಕಾಟದಲ್ಲಿ ತಮ್ಮ ಮನೆಗಳನ್ನು ಬಿಟ್ಟ ಜನರು, ವಿರಾಮಕ್ಕಾಗಿ ಬರುವ ಪ್ರಯಾಣಿಕರಿಗಿಂತ ವಿಭಿನ್ನವಾದ ಚಿಂತೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿರಬಹುದು. ಅದಕ್ಕಾಗಿಯೇ ಸಂಘರ್ಷ ಮತ್ತು ನೈಸರ್ಗಿಕ ವಿಪತ್ತುಗಳಿಂದ ಪಲಾಯನ ಮಾಡುತ್ತಿರುವ ಜನರಿಗೆ ಸಹಾಯವಾಗಲು ಪರಿಣತಿ ಹೊಂದಿರುವ ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ Airbnb.org ಪಾಲುದಾರರಾಗಿದೆ. ಈ ಸಂಸ್ಥೆಗಳು ಕೆಲವೊಮ್ಮೆ ನಿಮ್ಮ ಗೆಸ್ಟ್‌ಗಳ ವಾಸ್ತವ್ಯದ ಸಮಯದಲ್ಲಿ ಸರ್ವಾಂಗೀಣ ಸೇವೆಗಳನ್ನು ಒದಗಿಸುತ್ತವೆ.

ಸಂಕೀರ್ಣ ಸಮಸ್ಯೆಗಳು ಎದುರಾದರೆ ನಿಮಗೆ ಮತ್ತು ನಿಮ್ಮ ಗೆಸ್ಟ್‌ಗಳಿಗೆ ವಿಶೇಷವಾಗಿ ತರಬೇತಿ ಪಡೆದ ಗ್ರಾಹಕ ಬೆಂಬಲವನ್ನು Airbnb.org ನೀಡುತ್ತದೆ. ರಾಷ್ಟ್ರೀಯತೆ, ಜನಾಂಗ, ಜನಾಂಗೀಯತೆ ಅಥವಾ ಅವರು ಹೇಗೆ ಗುರುತಿಸಿಕೊಳ್ಳುತ್ತಾರೆ ಎಂಬುದನ್ನು ಲೆಕ್ಕಿಸದೆ ಇದು ಗೆಸ್ಟ್‌ಗಳಿಗೆ ಬೆಂಬಲವನ್ನು ಕೂಡ ಒದಗಿಸುತ್ತದೆ.

ನಿಮ್ಮ ಸ್ಥಳವನ್ನು ವ್ಯವಸ್ಥೆಗೊಳಿಸಲು ಸಲಹೆಗಳು

ಆಘಾತಕಾರಿ ಅನುಭವಗಳನ್ನು ಎದುರಿಸಿದ ಕುಟುಂಬಕ್ಕೆ ಆರಾಮದಾಯಕವಾದ, ಸುರಕ್ಷಿತವಾದ ಮತ್ತು ಖಾಸಗಿ ಸ್ಥಳದ ಮೌಲ್ಯವನ್ನು ನಾವೂ ಊಹಿಸುವುದೂ ಕಷ್ಟವಾಗಿರುತ್ತದೆ. ಅನೇಕರಿಗೆ ತಮ್ಮ ಮನೆಗಳನ್ನು ತೊರೆದಾಗಿನಿಂದ ಅಡುಗೆ ಮಾಡಲು ಅಡುಗೆಮನೆ ಅಥವಾ ಎಲ್ಲರೂ ಸೇರಿ ಕುಳಿತುಕೊಳ್ಳಬಹುದಾದ ಲಿವಿಂಗ್ ರೂಮ್‌ಗಳೇ ಇರುವುದಿಲ್ಲ.

ನಿಮ್ಮ ಸ್ಥಳವನ್ನು ಹೆಚ್ಚು ಸ್ವಾಗತಪೂರ್ಣವಾಗಿ ಮಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವು ಹೆಜ್ಜೆಗಳು

ಇಲ್ಲಿವೆ:

  • ಜನರು ವಿಶ್ರಾಂತಿ ಪಡೆಯಲು ನಿಮ್ಮ ಸ್ಥಳದಲ್ಲಿ ಆತ್ಮೀಯತೆಯ ವಾತಾವರಣವನ್ನು ನಿರ್ಮಿಸಿ ಮತ್ತು ಅಲ್ಲಿ ಆರಾಮವೆನಿಸುವ ಭಾವನೆ ಬರುವಂತೆ ಮಾಡಿ. ಸ್ವಚ್ಛವಾದ ಹಾಸಿಗೆ ಮತ್ತು ಟವೆಲ್‍‍ಗಳು, ಶೌಚಾಲಯದಲ್ಲಿನ ಅಗತ್ಯ ವಸ್ತುಗಳು ಮತ್ತು ಅಡುಗೆಮನೆಯ ಅಗತ್ಯ ವಸ್ತುಗಳು ಜನರು ಕೆಲವು ದಿನಗಳವರೆಗೆ ಮಾತ್ರವೇ ಉಳಿಯುತ್ತಿದ್ದರೂ ಸಹ, ಅವರಿಗೆ ಅಲ್ಲಿ ನೆಲೆಸಬಹುದು ಎನ್ನುವ ಭಾವನೆ ನೀಡುತ್ತದೆ.
  • ಕೆಲವು ಗೆಸ್ಟ್‌ಗಳು ತಮ್ಮ ವೈಯಕ್ತಿಕ ಸುರಕ್ಷತೆಯ ಬಗ್ಗೆ ಆತಂಕ ಹೊಂದಿರಬಹುದು. ಡ್ರೈವ್‍‍ವೇಗಳು ಮತ್ತು ಪ್ರವೇಶದ್ವಾರಗಳಲ್ಲಿ ಒಳ್ಳೆಯ ಬೆಳಕಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ. ಎಲ್ಲಾ ಲಾಕ್‍‍ಗಳು, ಬ್ಲೈಂಡ್‍‍ಗಳು ಮತ್ತು ಕರ್ಟನ್‌ಗಳು ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ನೇರವಾಗಿ ತಲೆಯ ಮೇಲಿಂದ ಹಾರಿ ಹೋಗುವ ವಿಮಾನಗಳು ಅಥವಾ ಮುಂಜಾನೆ ಮನೆಯ ಹತ್ತಿರ ಕಸ ಎತ್ತಲು ಶಬ್ದ ಮಾಡುತ್ತ ಬರುವವರು ಮಾಡುವಂಥ ದೊಡ್ಡ ಶಬ್ದಗಳನ್ನು ಅವರು ನಿರೀಕ್ಷಿಸಬೇಕೇ ಎಂದು ಅವರಿಗೆ ಮೊದಲೇ ತಿಳಿಸಿ.
  • ಆಘಾತ ಮತ್ತು ಬದಲಾವಣೆಯನ್ನು ಅನುಭವಿಸುತ್ತಿರುವರಿಗೆ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗಬಹುದು. "ನೀವು ನೇರವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ; ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಬೆಂಕಿಯ ಅಪಘಾತದ ಸಮಯದಲ್ಲಿ ಸ್ಥಳಾಂತರಿಸಲ್ಪಟ್ಟ ಒಬ್ಬ ಗೆಸ್ಟ್ ಹೇಳಿದರು. "ಇದು ಎಷ್ಟು ಪ್ರಭಾವ ಬೀರುತ್ತದೆಂದರೆ ಕೆಲಸಗಳನ್ನು ಹೇಗೆ ಮಾಡಬೇಕೆಂದೂ ಸಹ ನಿಮಗೆ ತಿಳಿಯುವುದಿಲ್ಲ ಮತ್ತು ಅದು ನಿಮ್ಮನ್ನು ಹೆಚ್ಚೂ ಕಡಿಮೆ ನಿಶ್ಚಲರನ್ನಾಗಿ ಮಾಡುತ್ತದೆ." ದೃಶ್ಯೀಯ ಸಾಧನಗಳು ನಿಮ್ಮ ಗೆಸ್ಟ್‌ಗಳಿಗೆ ಸಹಾಯ ಮಾಡಬಹುದು. ನಿಮ್ಮ ಲಿಸ್ಟಿಂಗ್‍‍ನ ವಿಳಾಸ ಮತ್ತು ನಿಮ್ಮ ಗೆಸ್ಟ್‌ಗಳು ಅಗತ್ಯವಿದ್ದಾಗಲೆಲ್ಲಾ ಸಂಪರ್ಕಿಸಬಹುದಾದ ನೆರೆಹೊರೆಯ ನಕ್ಷೆಯ ಪ್ರಿಂಟ್ ‌ ಔಟ್ ಅನ್ನು ನೀವು ನೀಡಬಹುದು.
  • ನೀವು ಮತ್ತು ನಿಮ್ಮ ಗೆಸ್ಟ್‌ಗಳ ಭಾಷೆ ಒಂದೇ ಆಗಿರದಿದ್ದಲ್ಲಿ, ಗೆಸ್ಟ್‌ಗೆ ತಿಳಿದಿರುವ ಭಾಷೆಗೆ ಅನುವಾದಿಸಲಾದ ಸಂಪನ್ಮೂಲಗಳನ್ನು ಒದಗಿಸಬಹುದಾದ ಸ್ಥಳೀಯ ಸಮಾಜ ಸೇವಾ ಸಂಸ್ಥೆಗಳು ಅಥವಾ ವ್ಯವಹಾರಗಳನ್ನು ಹುಡುಕಿ. Airbnb.org ನ ಲಾಭೋದ್ದೇಶವಿಲ್ಲದ ಪಾಲುದಾರರಲ್ಲಿ ಒಬ್ಬ ಕೇಸ್‍‍ವರ್ಕರ್ ನಿಮ್ಮ ಗೆಸ್ಟ್‌ಗಳಿಗೆ ಸಹಾಯ ಮಾಡುತ್ತಿದ್ದಲ್ಲಿ, ಅವರೂ ಕೂಡ ಸಹಾಯ ಮಾಡಬಹುದು.

ನಿಮ್ಮ ಗೆಸ್ಟ್‌ಗಳೊಂದಿಗೆ ಮಾತನಾಡಲು ಸಲಹೆಗಳು

ಅನೇಕ ಹೋಸ್ಟ್‌ಗಳಿಗೆ, ಗೆಸ್ಟ್‌ಗಳೊಂದಿಗೆ ವೈಯಕ್ತಿಕ ಸಂಪರ್ಕಗಳನ್ನು ಸಾಧಿಸುವುದು ಹೋಸ್ಟಿಂಗ್‌ನ ದೊಡ್ಡ ಪುರಸ್ಕಾರಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಆಘಾತವನ್ನು ಅನುಭವಿಸಿದ ಗೆಸ್ಟ್‌ಗಳೊಂದಿಗೆ ನೀವು ಸಂವಹನ ನಡೆಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

  • ಪಾರದರ್ಶಕತೆ ಮತ್ತು ಸ್ಥಿರತೆ ಬಹಳ ಮುಖ್ಯವಾಗಿವೆ. ಮನೆಯಲ್ಲಿ ಅಥವಾ ಅದರ ಸಮೀಪದಲ್ಲಿ ಯಾರಾದರೂ ನಿರ್ವಹಣೆ ಮಾಡಲು ಬಂದಲ್ಲಿ ಗೆಸ್ಟ್‌ಗಳಿಗೆ ಮೊದಲೇ ತಿಳಿಸಿ ಮತ್ತು ನೀವು ಅಲ್ಲಿಗೆ ಭೇಟಿ ನೀಡಬೇಕಾದಲ್ಲಿ ಅವರಿಗೆ ಮುಂಚಿತವಾಗಿ ತಿಳಿಸಿ.
  • ನಿಮ್ಮ ಗೆಸ್ಟ್‌ಗಳೊಂದಿಗೆ ನೀವು ಮಾತಾಡುವಾಗ, ಅವರು ಇತ್ತೀಚಿಗೆ ಅನುಭವಿಸಿದ ಬಿಕ್ಕಟ್ಟಿನ ಬದಲು ಅವರ ವಾಸ್ತವ್ಯದ ಬಗೆಗಿನ ಪ್ರಶ್ನೆಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ. ಉಕ್ರೇನ್‍‍ನಿಂದ ತಪ್ಪಿಸಿಕೊಂಡ ಹಲವಾರು ಜನರನ್ನು ಹೋಸ್ಟ್ ಮಾಡಿದ ಮೇರಿ ಹೇಳುತ್ತಾರೆ, "ನಾನು 'ನೀವು ಎಲ್ಲಿಂದ ಬರುತ್ತಿದ್ದೀರಿ?‘ ಮತ್ತು ‘ನಿಮ್ಮ ಪ್ರಯಾಣವು ಹೇಗಿತ್ತು?’ ಎಂಬಂತಹ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದೆ. ತಮ್ಮ ಅನುಭವದ ಬಗ್ಗೆ ಹೆಚ್ಚು ಮಾತನಾಡಲು ಬಯಸಿದರೆ ನಿಮ್ಮ ಗೆಸ್ಟ್‌ಗಳು ಆದರ ಬಗ್ಗೆ ನಿಮಗೆ ತಿಳಿಸುತ್ತಾರೆ ಎಂದು ಅವರು ಹೇಳಿದರು. ಅವರ ಗೌಪ್ಯತೆಯನ್ನು ಗೌರವಿಸುವ ಮೂಲಕ, ನಿವು ಅವರಿಗೆ ಚೇತರಿಸಿಕೊಳ್ಳಲು ಮತ್ತು ಮರುಚೈತನ್ಯ ಪಡೆಯಲು ಅವಕಾಶ ನೀಡುತ್ತಿದ್ದೀರಿ.
  • ನಿಮ್ಮ ಗೆಸ್ಟ್‌ಗಳು ನಿಮ್ಮೊಂದಿಗೆ ಹೇಗೆ ತೊಡಗಿಸಿಕೊಳ್ಳಲು ಬಯಸುತ್ತಾರೆ ಎಂಬುದರ ಕುರಿತು ಸೂಚನೆಗಳನ್ನು ಅರ್ಥ ಮಾಡಿಕೊಳ್ಳಿ. ಕೆಲವರು ತಮ್ಮ ಕುಟುಂಬಗಳಿಗೆ ಹತ್ತಿರದಲ್ಲಿರಲು ಬಯಸಬಹುದು. ಇತರರು ಸಮುದಾಯದಲ್ಲಿ ಸಂಪರ್ಕಗಳನ್ನು ನಿರ್ಮಿಸಲು ಅವರಿಗೆ ಸಹಾಯ ಮಾಡುವಂತೆ ನಿಮ್ಮನ್ನು ಕೇಳಬಹುದು.

ನಿಮ್ಮ ಬೆಂಬಲವು ವ್ಯತ್ಯಾಸವನ್ನುಂಟು ಮಾಡುತ್ತದೆ

ನಿಮ್ಮ ಸ್ಥಳ, ನಿಮ್ಮ ಸಮಯ ಮತ್ತು ನಿಮ್ಮ ಸಹಕಾರವನ್ನು ನೀಡಲು ನೀವು ಸಿದ್ಧರಿರುವುದಕ್ಕಾಗಿ ಧನ್ಯವಾದಗಳು. ತುರ್ತುಸ್ಥಿತಿಯ ವಾಸ್ತವ್ಯಗಳಿಗೆ ಹೇಗೆ ಸಿದ್ಧರಾಗಬೇಕೆನ್ನುವ ಬಗ್ಗೆ ನೀವು ಹೆಚ್ಚಿನ ಮಾಹಿತಿ ಬಯಸಿದಲ್ಲಿ, ಸಂಪನ್ಮೂಲ ಕೇಂದ್ರದ Airbnb.org ನ ಹೋಸ್ಟಿಂಗ್ ಗೈಡ್‍‍ನಲ್ಲಿ ‌ ಲೇಖನಗಳು ಮತ್ತು ವೀಡಿಯೊಗಳನ್ನು ಕಾಣಬಹುದು.

ವಿಶೇಷ ಆಕರ್ಷಣೆಗಳು

  • ಆಘಾತವನ್ನು ಅನುಭವಿಸುತ್ತಿರುವ ಗೆಸ್ಟ್‌ಗಳಿಗೆ ನಿಮ್ಮ ಸ್ಥಳವನ್ನು ಹೆಚ್ಚು ಸ್ವಾಗತಪೂರ್ಣವಾಗಿ ಮಾಡಲು ಸರಳ ಬದಲಾವಣೆಗಳು

  • ಗೆಸ್ಟ್‌ಗಳೊಂದಿಗೆ ಸಂವಹನ ನಡೆಸುವಾಗ, ಅವರಿಂದ ಬರುವ ಸೂಚನೆಗಳನ್ನು ಅರ್ಥಮಾಡಿಕೊಳ್ಳಿ

Airbnb
ಆಗ 25, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ