2022ರಲ್ಲಿ Airbnb.orgನ ಪ್ರಭಾವ
ವಿಶೇಷ ಆಕರ್ಷಣೆಗಳು
ಬಿಕ್ಕಟ್ಟಿನ ಸಂದರ್ಭದಲ್ಲಿ ಎಂದಿಗಿಂತಲೂ ಹೆಚ್ಚು ಜನರು ಉಚಿತ ತಾತ್ಕಾಲಿಕ ವಸತಿಗಳನ್ನು ಪಡೆದಿದ್ದಾರೆ
ನೆರವು ನೀಡುವ ಪ್ರಯತ್ನಗಳು ಉಕ್ರೇನ್ ಮತ್ತು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸುತ್ತವೆ, ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿನ ಕುಟುಂಬಗಳನ್ನು ಬೆಂಬಲಿಸುತ್ತದೆ
ಹೋಸ್ಟ್‌ಗಳು ಮತ್ತು ದಾನಿಗಳ ಔದಾರ್ಯದಿಂದ ಈ ಕಾರ್ಯ ಸಾಧ್ಯವಾಗಿದೆ
Airbnb.orgಗೆ 2022 ದಾಖಲೆಯ ವರ್ಷವಾಗಿತ್ತು. ವಿಶ್ವಾದ್ಯಂತ ಹೊಸ್ಟ್‌ಗಳು ಮತ್ತು ಮಾನವೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆಯು 140,000 ಕ್ಕೂ ಹೆಚ್ಚು ಜನರನ್ನು ಉಚಿತ ತಾತ್ಕಾಲಿಕ ವಾಸ್ತವ್ಯಗಳೊಂದಿಗೆ ಸಂಪರ್ಕಿಸಿದೆ. ಇದು ಹಿಂದಿನ ಒಂಬತ್ತು ವರ್ಷಗಳ ಸಂಯೋಜನೆಗಿಂತ ಹೆಚ್ಚಾಗಿದೆ.
ಹೋಸ್ಟ್‌ಗಳು ಮತ್ತು ದಾನಿಗಳ ಔದಾರ್ಯವು ಬೆಂಬಲಕ್ಕೆ ಸಹಾಯ ಮಾಡಿತು:
- ರಷ್ಯಾ ಆಕ್ರಮಣದ ನಂತರ ಉಕ್ರೇನ್‌ನಿಂದ ಪಲಾಯನ ಮಾಡಿದ ನಿರಾಶ್ರಿತರು
- ಉತ್ತರ ಅಮರಿಕಕ್ಕೆ ಆಗಮಿಸಿದ ಅಫ್ಘಾನಿಸ್ತಾನದ ನಿರಾಶ್ರಿತರು
- ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯಿಂದ ಲ್ಯಾಟಿನ್ ಅಮೆರಿಕದಾದ್ಯಂತ ಸ್ಥಳಾಂತರಗೊಂಡ ಕುಟುಂಬಗಳು
- ಇಯಾನ್ ಮತ್ತು ಫಿಯೋನಾ ಚಂಡಮಾರುತಗಳಿಂದ ಬಾಧಿತವಾದ U. S.ನಲ್ಲಿನ ಸಮುದಾಯಗಳು
Airbnb.org ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, Airbnbಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸ್ಫೂರ್ತಿ 2012ರಲ್ಲಿ ಪ್ರಾರಂಭವಾಯಿತು, ಸ್ಯಾಂಡಿ ಚಂಡಮಾರುತದಿಂದ ಪ್ರಭಾವಿತರಾದ ಜನರಿಗೆ ಹೋಸ್ಟ್ ತನ್ನ ಮನೆಯನ್ನು ತೆರೆದಾಗ. ಕಳೆದ ದಶಕದಲ್ಲಿ, COVID-19 ಹರಡುವಿಕೆಯ ವಿರುದ್ಧ ಹೋರಾಡುವ ಸ್ಥಳಾಂತರಗೊಂಡವರು, ಪರಿಹಾರ ಕಾರ್ಯಕರ್ತರು, ನಿರಾಶ್ರಿತರು, ಆಶ್ರಯ ಪಡೆಯುವವರು ಮತ್ತು ಮುಂಚೂಣಿ ಕಾರ್ಮಿಕರಿಗೆ ವಾಸ್ತವ್ಯವನ್ನು ಒದಗಿಸಲು ಸಹಾಯ ಮಾಡಲು ಅದರ ಕೆಲಸವು ವಿಕಸನಗೊಂಡಿದೆ.
ಫೆಬ್ರವರಿ 2022ರಲ್ಲಿ ರಷ್ಯಾ ಆಕ್ರಮಣ ಮಾಡಿದ ನಂತರ, ಸುರಕ್ಷತೆಯ ಹುಡುಕಾಟದಲ್ಲಿ 6 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ನಿಂದ ಹೊರಟುಹೋದರು. ಇದು ಎರಡನೇ ಮಹಾಯುದ್ಧದ ನಂತರ ಯುರೋಪಿನಾದ್ಯಂತ ನಿರಾಶ್ರಿತರ ಅತಿ ದೊಡ್ಡ ಸ್ಥಳಾಂತರವಾಗಿತ್ತು.
Airbnb.org ಅವರಲ್ಲಿ 100,000 ಜನರಿಗೆ ತಾತ್ಕಾಲಿಕ ವಸತಿ ಹುಡುಕಲು ಬದ್ಧತೆ ಮಾಡಿತು. 95 ದೇಶಗಳ ಜನರು ದೇಣಿಗೆ ನೀಡಿದರು, ಮತ್ತು ಹತ್ತಾರು ಹೋಸ್ಟ್‌ಗಳು ಉಚಿತ ಅಥವಾ ರಿಯಾಯಿತಿಯ ವಸತಿ ಒದಗಿಸಲು ಸೈನ್‌ಅಪ್ ಮಾಡಿದರು. ಬೆಂಬಲದ ಹೊರಹರಿವು Airbnb.org ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ ಇರುವ ಸಂಸ್ಥೆಗಳೊಂದಿಗೆ ಸೇರಲು ನಿರಾಶ್ರಿತರನ್ನು ತಂಗಲು ಸ್ಥಳಗಳೊಂದಿಗೆ ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿತು.
ಐತಿಹಾಸಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇವೆ ಸಲ್ಲಿಸುವುದು
ಐತಿಹಾಸಿಕವಾಗಿ ಅಂಚಿನಲ್ಲಿರುವ ಜನಸಂಖ್ಯೆಯ ಮೇಲೆ ಬಿಕ್ಕಟ್ಟುಗಳು ಅಸಮಾನವಾಗಿ ಪರಿಣಾಮ ಬೀರುತ್ತವೆ. 2022 ರಲ್ಲಿ, Airbnb.org ಈ ಸಮುದಾಯಗಳಿಗೆ ಸೇವೆ ಸಲ್ಲಿಸಲು ಶ್ರಮಿಸುತ್ತಿದೆ.&nsbp;
ಉದಾಹರಣೆಗೆ, Black Women for Black Lives ಮತ್ತು Global Empowerment Mission ಉಕ್ರೇನ್‌ನಲ್ಲಿ ಓದುತ್ತಿರುವ ಆಫ್ರಿಕನ್ ವಿದ್ಯಾರ್ಥಿಗಳನ್ನು ಬೆಂಬಲಿಸಲು Airbnb.org ಜೊತೆಗೆ ಸೇರಿ ಕಲಸ ಮಾಡುತ್ತಿದೆ. ಕೆಲವು ಸರ್ಕಾರಿ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿಗಳನ್ನು ನಿರಾಶ್ರಿತರು ಎಂದು ಪರಿಗಣಿಸಲಿಲ್ಲ, ಮತ್ತು ಉಕ್ರೇನ್‌ನಿಂದ ಹೊರಹೋಗಲು ಮತ್ತು ಇತರ ದೇಶಗಳಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುವಾಗ ಅನೇಕ ವಿದ್ಯಾರ್ಥಿಗಳಿಗೆ ವರ್ಣಭೇದ ನೀತಿಯ ಸಮಸ್ಯೆ ಎದುರಾಗಿತ್ತು.
ಮತ್ತೊಬ್ಬ ಪಾಲುದಾರರಾದ, Organization for Refuge, Asylum, and Migration (ORAM), ತಾರತಮ್ಯದ ಸಮಸ್ಯೆ ಎದುರಿಸುತ್ತಿರುವ ಉಕ್ರೇನಿಯನ್ LGBTQ+ ನಿರಾಶ್ರಿತರ ಮೇಲೆ ಕೇಂದ್ರೀಕರಿಸಿದೆ. ಬರ್ಲಿನ್‌ನಲ್ಲಿ, ಕೀವ್‌ನ ಸಲಿಂಗಕಾಮಿ ವ್ಯಕ್ತಿಯಾದ ಡಿಮಾ ಅವರನ್ನು ಬರ್ಲಿನ್‌ನಲ್ಲಿ ವಾಸಿಸಿ, Airbnb.org ನಲ್ಲಿ ತನ್ನ ಅಪಾರ್ಟ್‌ಮೆಂಟ್ ಅನ್ನು ಲಿಸ್ಟ್ ಮಾಡಿದ್ದ ಅಮೆರಿಕನ್ ಮೇರಿಯೊಂದಿಗೆ ಸಂಪರ್ಕಿಸಲು ORAM ಸಹಾಯ ಮಾಡಿತು. ಜರ್ಮನಿಗೆ ಆಗಮಿಸಿದ ನಂತರ ಡಿಮಾ ಅವರಿಗೆ ಮೇರಿ ಅವರು ಸುರಕ್ಷಿತ ಸ್ಥಳವನ್ನು ಒದಗಿಸಿದರು (ಮೇಲಿನ ವೀಡಿಯೊದಲ್ಲಿ ವಿವರಿಸಿದಂತೆ).
ನವೀನ ಬೆಂಬಲವನ್ನು ಒದಗಿಸುವುದು
ಇತರ ಅನೇಕ ಮಾನವೀಯ ಸಂಸ್ಥೆಗಳು Airbnb.org ಮೂಲಕ ವಾಸ್ತವ್ಯ ಹೂಡುವ ಸೌಕರ್ಯವನ್ನು ಒದಗಿಸುತ್ತವೆ, ಅವುಗಳೆಂದರೆ:
ಹಿಂಸಾಚಾರದಿಂದಾಗಿ ಕೊಲಂಬಿಯಾದಿಂದ ಪಲಾಯನ ಮಾಡಿದ ಡೇನಿಯೆಲ್ಲಾ ಮತ್ತು ಅವರ ಕುಟುಂಬದಂತಹ ಜನರಿಗೆ ಈಕ್ವೆಡಾರ್‌ನಲ್ಲಿರುವ- HIAS ಬೆಂಬಲವನ್ನು ಒದಗಿಸಿದೆ. ಅನೇಕ ನಿರಾಶ್ರಿತರು ನೆಲೆಸಿರುವ ಕ್ವಿಟೊ ನೆರೆಹೊರೆಯಲ್ಲಿ ವಾಸಿಸುವ ಮೆರಿಯಂತಹ ಹೋಸ್ಟ್‌ಗಳೊಂದಿಗೆ HIAS ಅವರನ್ನು ಸಂಪರ್ಕಿಸುತ್ತದೆ. HIAS ಆಘಾತವನ್ನು ಅನುಭವಿಸಿದ ಜನರನ್ನು ಹೇಗೆ ಹೋಸ್ಟ್ ಮಾಡುವುದು ಎಂಬುದರ ಕುರಿತು ತರಬೇತಿಯನ್ನು ನೀಡುತ್ತದೆ, ಜೊತೆಗೆ ಅವರ ವಾಸ್ತವ್ಯದ ಸಮಯದಲ್ಲಿ ಬೆಂಬಲವನ್ನು ನೀಡುತ್ತದೆ.
- ಸಮುದಾಯ ಪ್ರಾಯೋಜಕತ್ವ ಕೇಂದ್ರ, ನಿರಾಶ್ರಿತರ ಸಮುದಾಯ ಪ್ರಾಯೋಜಕತ್ವವನ್ನು ವಿಸ್ತರಿಸಲು ಮಾತ್ರ ಮೀಸಲಾದ ಯುನೈಟೆಡ್ ಸ್ಟೇಟ್ಸ್‌ನ ಮೊಟ್ಟಮೊದಲ ಸಂಸ್ಥೆಯಾಗಿದೆ. ಅದರ "ಪ್ರಾಯೋಜಿತ ವಲಯಗಳು" ಕಾರ್ಯಕ್ರಮದ ಮೂಲಕ, ಇದು ಅಫ್ಘಾನಿಸ್ತಾನ ಮತ್ತು ಉಕ್ರೇನ್‌ನಿಂದ ಬಂದ ಹೊಸಬರನ್ನು ಸ್ವಾಗತಿಸಲು ವಿವಿಧ ನಗರಗಳಲ್ಲಿ ತನ್ನ ನೆರೆಹೊರೆಯವರೊಂದಿಗೆ ಕೆಲಸ ಮಾಡಿದೆ.
- Insight Ukraine, ಒಂದು LGBTQ+ ಮಾನವ ಹಕ್ಕುಗಳ ಸಂಸ್ಥೆಯಾಗಿದ್ದು, ಇದು ಸಾವಿರಾರು ಜನರು ಉಕ್ರೇನ್‌ನಿಂದ ಹೊರಹೋಗಲು ಸಹಾಯ ಮಾಡುತ್ತದೆ ಮತ್ತು ಪುನರ್ವಸತಿ ಸಮಯದಲ್ಲಿ ವಸತಿ, ಮಾನಸಿಕ ಆರೋಗ್ಯ ರಕ್ಷಣೆ ಮತ್ತು LGBTQ+-ಒಳಗೊಂಡಿರುವ ವೈದ್ಯರ ಸಹಾಯವನ್ನು ಪಡೆಯಿತು.
- Münchner Freiwillige, ಉಕ್ರೇನ್‌ನಿಂದ ಮ್ಯೂನಿಕ್‌ಗೆ ಆಗಮಿಸುವ ಜನರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ, ಹಾಗೂ ವಸತಿ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಪಡೆಯಲು ಅವರಿಗೆ ಅವಕಾಶ ಮಾಡಿಕೊಟ್ಟಿದೆ.
ಬಿಕ್ಕಟ್ಟಿನ ಸಮಯದಲ್ಲಿ ಈ ಜಾಗತಿಕ ಆಂದೋಲನಕ್ಕೆ ಸೇರ್ಪಡೆಗೊಂಡ ಹೋಸ್ಟ್‌ಗಳು, ಕೊಡುಗೆದಾರರು ಮತ್ತು ಪಾಲುದಾರರಿಗೆ ಧನ್ಯವಾದಗಳು.
ವಿಶೇಷ ಆಕರ್ಷಣೆಗಳು
ಬಿಕ್ಕಟ್ಟಿನ ಸಂದರ್ಭದಲ್ಲಿ ಎಂದಿಗಿಂತಲೂ ಹೆಚ್ಚು ಜನರು ಉಚಿತ ತಾತ್ಕಾಲಿಕ ವಸತಿಗಳನ್ನು ಪಡೆದಿದ್ದಾರೆ
ನೆರವು ನೀಡುವ ಪ್ರಯತ್ನಗಳು ಉಕ್ರೇನ್ ಮತ್ತು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸುತ್ತವೆ, ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿನ ಕುಟುಂಬಗಳನ್ನು ಬೆಂಬಲಿಸುತ್ತದೆ
ಹೋಸ್ಟ್‌ಗಳು ಮತ್ತು ದಾನಿಗಳ ಔದಾರ್ಯದಿಂದ ಈ ಕಾರ್ಯ ಸಾಧ್ಯವಾಗಿದೆ