ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಸಮುದಾಯ ನೀತಿ

ಹೋಸ್ಟ್‌ಗಳಿಂದ ಮತ್ತು ಅವರ ವಾಸ್ತವ್ಯಗಳಿಂದ ಏನನ್ನು ನಿರೀಕ್ಷಿಸಲಾಗುತ್ತದೆ

ಪ್ರತಿಯೊಬ್ಬ ಹೋಸ್ಟ್‌ ಈ ಮೂಲಭೂತ ಮಾನದಂಡಗಳನ್ನು ಪೂರೈಸಬೇಕು, ಇದರಿಂದ ಅವರ ಗೆಸ್ಟ್‌ಗಳು ಆರಾಮದಾಯಕ ಮತ್ತು ವಿಶ್ವಾಸಾರ್ಹ ಅನುಭವವನ್ನು ಪಡೆಯುತ್ತಾರೆ.

  • ವಿಶ್ವಾಸಾರ್ಹ ಸಂವಹನ: ಗೆಸ್ಟ್‌ಗಳು ಅಥವಾ Airbnb ನಿಂದ ಬರುವ ಪ್ರಶ್ನೆಗಳಿಗೆ ಹೋಸ್ಟ್‌ಗಳು ಸಮಂಜಸವಾದ ಸಮಯದೊಳಗೆ ಪ್ರತಿಕ್ರಿಯಿಸಬೇಕು ಮತ್ತು ಉತ್ತರಿಸಲು ಸಿದ್ಧರಾಗಿರಬೇಕು ಹಾಗೆಯೇ ಸಮಸ್ಯೆಗಳನ್ನು ಪರಿಹರಿಸಲು Airbnb ನಿಂದ ಅಗತ್ಯವಿರುವ ಹಂತಗಳನ್ನು ಅನುಸರಿಸಬೇಕು. ..
  • ನಿಖರವಾದ ಲಿಸ್ಟಿಂಗ್‌ಗಳು: ಹೋಸ್ಟ್ ‌ನ ಆಸ್ತಿ, ಸ್ಥಳ, ಲಿಸ್ಟಿಂಗ್ ಪ್ರಕಾರ, ಗೌಪ್ಯತೆ ಮಟ್ಟಗಳು ಮತ್ತು ಸೌಕರ್ಯಗಳು ಬುಕಿಂಗ್ ಸಮಯದಲ್ಲಿ ಲಿಸ್ಟಿಂಗ್ ವಿವರಣೆಯಲ್ಲಿ ಬರೆದಿರುವುದನ್ನು ನಿಖರವಾಗಿ ಪ್ರತಿಬಿಂಬಿಸಬೇಕು. ಗೆಸ್ಟ್‌ಗಳು ಒಪ್ಪಿಗೆ ನೀಡಿದ ನಂತರವೇ ಸ್ವೀಕರಿಸಿದ ಬುಕಿಂಗ್‌ಗೆ ಹೋಸ್ಟ್‌ಗಳು ವಿವರಗಳನ್ನು ತಿದ್ದುಪಡಿ ಮಾಡಬಹುದು.
  • ಸುರಕ್ಷಿತ ವಾಸ್ತವ್ಯಗಳು: ಹೋಸ್ಟ್‌ಗಳು ಸುರಕ್ಷಿತ ಲಿಸ್ಟಿಂಗ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಪ್ರವೇಶದ ಎಲ್ಲಾ ಮುಖ್ಯ ಪಾಯಿಂಟ್‌ ಗಳಿಗೆ ಕೀಲಿಗಳು ಅಥವಾ ಪ್ರವೇಶ ಕೋಡ್‌ ಗಳನ್ನು ಒದಗಿಸಬೇಕು.
  • ವಿಶ್ವಾಸಾರ್ಹ ಚೆಕ್-ಇನ್‌ ಗಳು: ಚೆಕ್-ಇನ್ ‌ನಲ್ಲಿ ತಮ್ಮ ವಾಸ್ತವ್ಯವನ್ನು ಪ್ರವೇಶಿಸಲು ಹೋಸ್ಟ್‌ಗಳು ಗೆಸ್ಟ್‌ಗಳಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು (ಉದಾ. ಸರಿಯಾದ ಪ್ರವೇಶ ಕೋಡ್‌ಗಳು, ಸ್ಪಷ್ಟ ನಿರ್ದೇಶನಗಳು). ಚೆಕ್-ಇನ್ ಸಮಯದಲ್ಲಿ ಗೆಸ್ಟ್‌ಗಳನ್ನು ಭೇಟಿಯಾಗಲು ಯೋಜಿಸುವ ಹೋಸ್ಟ್‌ಗಳು ಒಪ್ಪಿಗೆಯಾದ ಸಮಯದಲ್ಲಿ ಹಾಜರಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಲಾಕ್ ‌ ಬಾಕ್ಸ್‌ಗಳು ಅಥವಾ ಪ್ರವೇಶ ಕೋಡ್‌ಗಳ ಬಳಕೆಯು ಸುರಕ್ಷಿತವಾಗಿರಬೇಕು (ಉದಾ. ರಿಸರ್ವೇಶನ್‌ಗಳ ನಡುವಿನಲ್ಲಿ ಕೋಡ್‌ಗಳನ್ನು ಬದಲಾಯಿಸಿ).
  • ಸ್ವಚ್ಛವಾದ ವಾಸ್ತವ್ಯಗಳು: ಹೋಸ್ಟ್‌ಗಳ ಪ್ರಾಪರ್ಟಿಯು, ತಿಳಿದಿರುವ ಆರೋಗ್ಯದ ಅಪಾಯಗಳಿಂದ ಮುಕ್ತವಾಗಿರಬೇಕು (ಉದಾ. ಶಿಲೀಂಧ್ರ, ಕೀಟಗಳು, ಕ್ರಿಮಿನಾಶಕಗಳು), ಉನ್ನತ ಗುಣಮಟ್ಟದ ಸ್ವಚ್ಛತೆಯನ್ನು ಪೂರೈಸಬೇಕು ಮತ್ತು ವಾಸ್ತವ್ಯಗಳ ನಡುವೆ ಸ್ವಚ್ಛಗೊಳಿಸಬೇಕು.
  • ಸುರಕ್ಷಿತ ವಾಸ್ತವ್ಯಗಳು: ಸುರಕ್ಷತಾ ಅಪಾಯಗಳಿಂದ ಮುಕ್ತವಾದ ಲಿಸ್ಟಿಂಗ್ ಅನ್ನು ನಿರ್ವಹಿಸುವ ಜವಾಬ್ದಾರಿ ಹೋಸ್ಟ್‌ಗಳ ಮೇಲಿದೆ (ಉದಾ. ನಿರ್ಬಂಧಿತ ಅಗ್ನಿ ನಿರ್ಗಮನಗಳು, ವಿದ್ಯುತ್ ಆಘಾತದ ಅಪಾಯಗಳು, ಇಲಿ ವಿಷ). ಲಿಸ್ಟಿಂಗ್‌ ಗೆ ಸಂಬಂಧಿಸಿದ ಅಪಾಯಗಳು (ಉದಾಹರಣೆಗೆ., ಎತ್ತರದ ಸ್ಥಳಗಳು, ನೀರಿನ ಶ್ರೇಣಿಗಳು) ಲಿಸ್ಟಿಂಗ್ ವಿವರಣೆಯಲ್ಲಿ ಬಹಿರಂಗಪಡಿಸಬೇಕು. ಹೆಚ್ಚುವರಿಯಾಗಿ, ಹೋಸ್ಟ್‌ಗಳು ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು (ಉದಾ., ಲಿಸ್ಟಿಂಗ್ ಅನ್ವಯವಾಗುವ ಫೈರ್ ಕೋಡ್ ಅವಶ್ಯಕತೆಗಳನ್ನು ಪೂರೈಸಬೇಕು). ಲಿಸ್ಟಿಂಗ್‌ಗಳಲ್ಲಿನ ಸುರಕ್ಷತಾ ಮಾಹಿತಿಯ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಅಧಿಕೃತತೆ: Airbnb ಎಲ್ಲಾ ಹೋಸ್ಟ್‌ ಗಳು ಹೋಸ್ಟ್ ಮಾಡಲು ಅಧಿಕಾರ ಹೊಂದಿರಬೇಕು ಮತ್ತು ಎಲ್ಲಾ ಅನ್ವಯಿಸುವ ಕಾನೂನುಗಳನ್ನು ಪಾಲಿಸಬೇಕು ಎಂದು ಒತ್ತಾಯಿಸುತ್ತದೆ. ಥರ್ಡ್-ಪಾರ್ಟಿ ಬಳಸಿಕೊಂಡು ಹೋಟೆಲ್ ಅಥವಾ ಥರ್ಡ್-ಪಾರ್ಟಿ ವಸತಿಯನ್ನು ಬುಕ್ ಮಾಡಿ ಮತ್ತು ಅದನ್ನು Airbnb ನಲ್ಲಿ ಲಿಸ್ಟ್ ಮಾಡುವುದು ಅನುಮತಿಸಲ್ಪಡುವುದಿಲ್ಲ. Airbnb ಯಲ್ಲಿ ಈ ರೀತಿಯ ವಸತಿ ಪ್ರಕಾರಗಳನ್ನು ಲಿಸ್ಟ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಪರಿಗಣಿಸುವಾಗ ಹೋಸ್ಟ್‌ಗಳು ಟೈಮ್‌ಶೇರ್‌ಗಳು ಅಥವಾ ಅಂತಹುದೇ ವಸತಿ ವಿಧಗಳಿಗೆ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು.
  • ಪ್ರಾಣಿಗಳ ಕಲ್ಯಾಣ: ನಮ್ಮ ಸಮುದಾಯದಲ್ಲಿ ಪ್ರಾಣಿಗಳನ್ನು ಶೋಷಿಸುವ ವಾಸ್ತವ್ಯಗಳು ಅಥವಾ ಅನುಭವಗಳಿಗೆ ಸ್ಥಾನವಿಲ್ಲ (ಉದಾ. ರಸ್ತೆಬದಿಯ ಮೃಗಾಲಯಗಳು, ಟ್ರೋಫಿ ಬೇಟೆಯ ಅನುಭವಗಳು). ಹೋಸ್ಟ್‌ ಗಳು ಪ್ರಾಣಿಗಳ ಕಲ್ಯಾಣಕ್ಕಾಗಿ Airbnb ಯ ಮಾರ್ಗಸೂಚಿಗಳನ್ನುಪೂರೈಸಬೇಕು. ಹೋಸ್ಟ್‌ಗಳು ಪಾಲಿಸಬೇಕಾದ ನಿಯಮಗಳಬಗ್ಗೆ ಇನ್ನಷ್ಟು ತಿಳಿಯಿರಿ.

ಹೋಸ್ಟ್‌ಗಳು ಪಾಲಿಸಬೇಕಾದ ನಿಯಮಗಳಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು nbsp.

ನಿಮಗೆ ಸಹಾಯ ಮಾಡಲು ನಾವಿದ್ದೇವೆ

ನಮ್ಮ ನೀತಿಗಳಿಗೆ ವಿರುದ್ಧವಾದ ನಡವಳಿಕೆಯನ್ನು ನೀವು ವೀಕ್ಷಿಸಿದರೆ ಅಥವಾ ಅನುಭವಿಸಿದರೆ, ದಯವಿಟ್ಟು ನಮಗೆ ತಿಳಿಸಿ.

ಈ ಮಾರ್ಗಸೂಚಿಗಳು ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಒಳಗೊಂಡಿಲ್ಲವಾದರೂ, ಇವುಗಳನ್ನು Airbnb ಯ ಸಮುದಾಯ ನೀತಿಗಳ ಕುರಿತು ಸಾಮಾನ್ಯ ಮಾರ್ಗದರ್ಶನವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಈ ಲೇಖನವು ಸಹಾಯ ಮಾಡಿತೇ?

ಸಂಬಂಧಿತ ಲೇಖನಗಳು

ನಿಮ್ಮ ರಿಸರ್ವೇಶನ್‌ಗಳು, ಖಾತೆ ಮತ್ತು ಇನ್ನಷ್ಟರ ಬಗ್ಗೆ ಸಹಾಯ ಪಡೆಯಿರಿ.
ಲಾಗ್ ಇನ್ ಮಾಡಿ ಅಥವಾ ಸೈನ್ ಅಪ್ ಮಾಡಿ