Airbnb ಯ ಪ್ರಕಟಣೆಯ ಬಗ್ಗೆ ಹೋಸ್ಟ್‌ಗಳು ಏನು ತಿಳಿದುಕೊಳ್ಳಬೇಕು
ವಿಶೇಷ ಆಕರ್ಷಣೆಗಳು
ನಾವು ಪ್ರವಾಸದಲ್ಲಿ ದೊಡ್ಡ ಬದಲಾವಣೆಗಳ ಅಂಚಿನಲ್ಲಿದ್ದೇವೆ ಎಂದು ನಾವು ನಂಬಿದ್ದೇವೆ ಮತ್ತು ಅದಕ್ಕೆ ತಯಾರಾಗಲು ನಾವು ನಿಮಗೆ ಸಹಾಯ ಮಾಡಬಯಸುತ್ತೇವೆ
ನಮ್ಮ ಆ್ಯಪ್, ವೆಬ್‌ಸೈಟ್, ನೀತಿಗಳು ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಸಮಗ್ರ ಅಪ್‌ಗ್ರೇಡನ್ನು ಪ್ರಕಟಿಸಿದ್ದೇವೆ
ಸುಧಾರಿತ ಸಮುದಾಯ ಬೆಂಬಲ, ಸುಧಾರಿತ ಸಂದೇಶ ಸಾಧನಗಳು ಮತ್ತು ಸ್ವಯಂಚಾಲಿತ ಗೆಸ್ಟ್ ಆಗಮನ ಮಾರ್ಗದರ್ಶಿಗಳು ಈ ಬದಲಾವಣೆಗಳಲ್ಲಿ ಸೇರಿವೆ
ಪ್ರಪಂಚದಾದ್ಯಂತ ಅನೇಕ ಸ್ಥಳಗಳು ಮತ್ತೆ ತೆರೆದುಕೊಳ್ಳಲು ಪ್ರಾರಂಭಿಸಿರುವುದರಿಂದ, ನಾವು ಪ್ರವಾಸಗಳಲ್ಲಿ ಈ ಶತಮಾನದ ಅತಿದೊಡ್ಡ ಮರುಕಳಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ನೀವು ಸನ್ನದ್ಧಗೊಳ್ಳುವುದಕ್ಕಾಗಿ, Airbnb CEO ಬ್ರಯಾನ್ ಚೆಸ್ಕಿ ಅವರು ಪ್ರವಾಸಗಳ ಭವಿಷ್ಯವನ್ನು ರೂಪಿಸಬಲ್ಲ ಟ್ರೆಂಡ್‌ಗಳ ಕುರಿತು ಹೊಸ ವರದಿ ಒಂದನ್ನು ಅನಾವರಣಗೊಳಿಸಿದ್ದಾರೆ.
ಜಗತ್ತಿನಾದ್ಯಂತ ಹೋಸ್ಟ್‌ಗಳಿಗೆ ಈ ಅನನ್ಯ ಅವಕಾಶದ ಲಾಭವನ್ನು ಪಡೆಯಲು ಸಹಾಯ ಆಗುವಂತೆ ಅವರು Airbnb ಯ 100 ಕ್ಕೂ ಹೆಚ್ಚು ಹೊಸ ಪರಿಕರಗಳು, ವೈಶಿಷ್ಟ್ಯಗಳು ಮತ್ತು ಅಪ್‌ಗ್ರೇಡ್‌ಗಳನ್ನು ತೆರೆದಿರಿಸಿದ್ದಾರೆ. ಹೆಚ್ಚಿನ ವಿವರಗಳ ಸಹಿತ ಬ್ರಿಯಾನ್ ಅವರ ಪ್ರಕಟಣೆಗಾಗಿ ಮೇಲಿನ ವೀಡಿಯೊವನ್ನು ಪರಿಶೀಲಿಸಿ.
ಈ ಎಲ್ಲ ಬದಲಾವಣೆಗಳಾದ್ಯಂತ ಸಾತತ್ಯವಿರುವ ಥೀಮ್‌ನ ಕಾರಣದಿಂದಾಗಿ ವಿಷಯಗಳು ಸುಲಭಗೊಳ್ಳುತ್ತಿವೆ:
- ಸ್ಫೂರ್ತಿಗೊಳ್ಳುವುದು, ಸಮರ್ಪಕವಾದ ಲಿಸ್ಟಿಂಗ್ ಕಂಡುಕೊಳ್ಳುವುದು, ಮತ್ತು ಹೊಂದಿಕೊಳ್ಳಬಲ್ಲ ಗಮ್ಯಸ್ಥಾನಗಳು ಮತ್ತು ಹೊಂದಿಕೊಳ್ಳುವ ದಿನಾಂಕ ಗಳಂತಹ ಹೊಸ ವೈಶಿಷ್ಟ್ಯಗಳೊಂದಿಗೆ ತ್ವರಿತವಾಗಿ ಬುಕ್ ಮಾಡುವುದು ಗೆಸ್ಟ್‌ಗಳಿಗೆ ಸುಲಭ
- ಸುಧಾರಿತ ಬೆಂಬಲ ಮತ್ತು ಉಪಯುಕ್ತ ಸಂಪನ್ಮೂಲಗಳಮೂಲಕ ಕೆಲವೇ ಸರಳ ಹೆಜ್ಜೆಗಳಲ್ಲಿ ಪ್ರಾರಂಭಿಸುವುದು ಹೊಸ ಹೋಸ್ಟ್‌ಗಳಿಗೆ ಸುಲಭ
- ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಹೋಸ್ಟಿಂಗ್ ಹಿಂದೆಂಗಿಂತಲೂ ಕಠಿಣವಾಗಿದ್ದ ಒಂದು ವರ್ಷದ ನಂತರ, ಈಗ ಹೋಸ್ಟ್‌ಗಳು ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದು, ಪ್ರತಿ ಗೆಸ್ಟ್ ಅನ್ನು ಸಂತೋಷಪಡಿಸುವುದು ಮತ್ತು Airbnb ಯಲ್ಲಿ ಅಭಿವೃದ್ಧಿ ಹೊಂದುವುದು ಸುಲಭವಾಗಿದೆ
ಕೆಲವು ಪ್ರಮುಖ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು
ಪ್ರವಾಸದಲ್ಲಿ ಹೆಚ್ಚಿರುವ ಬೇಡಿಕೆಗೆ ಅನೇಕ ಹೋಸ್ಟ್‌ಗಳು ಸಿದ್ಧರಾಗುತ್ತಿರುವಾಗ, ನಮ್ಮ ಪರಿಕರಗಳು ಮತ್ತು ವೈಶಿಷ್ಟ್ಯಗಳು ಹೆಚ್ಚು ಶಕ್ತಿಯುತ, ಹೆಚ್ಚು ನಂಬಿಗಸ್ಥಿಕೆಯ ಮತ್ತು ಬಳಸಲು ಸುಲಭವಾಗುವಂತೆ ಇರಬೇಕೆಂದು ನಾವು ಬಯಸಿದ್ದೇವೆ. ನಾವು ಮಾಡಿರುವ ಕೆಲವು ರೋಮಾಂಚಕಾರಿ ಸುಧಾರಣೆಗಳು ಇಲ್ಲಿವೆ:
ಹೆಚ್ಚು ನಂಬಿಗಸ್ಥಿಕೆಯ ಮತ್ತು ಸಾತತ್ಯದ ಆ್ಯಪ್ ಮತ್ತು ವೆಬ್‌ಸೈಟ್
ನಿಮಗೆ ಬೇಕಾದುದನ್ನು ಹುಡುಕಿಕೊಳ್ಳುವುದು ಸುಲಭ ಆಗುವುದಕ್ಕಾಗಿ ನಾವು Airbnb ಆ್ಯಪ್ ಮತ್ತು ವೆಬ್‌ಸೈಟ್‌ನ ಮುಖ್ಯ ನ್ಯಾವಿಗೇಷನ್ ಬಟನ್‌ಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದೇವೆ. ಈ ವಿಷಯದ ಕುರಿತು ಹೋಸ್ಟ್‌ಗಳಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದ ಬಳಿಕ, ನಾವು ನಮ್ಮ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಬಳಕೆದಾರರ ಅನುಭವಗಳು ಒಂದೇ ರೀತಿ ಇರುವಂತೆ ಏರ್ಪಡಿಸಿದ್ದೇವೆ, ಇದರಿಂದಾಗಿ ನೀವು ಯಾವ ಸಾಧನವನ್ನು ಬಳಸುತ್ತಿದ್ದರೂ ಕೂಡ, ಅದೇ ಬಟನ್‌ಗಳು ಮತ್ತು ಟ್ಯಾಬ್‌ಗಳನ್ನು ನೋಡುತ್ತೀರಿ.
ಏನನ್ನು ಬದಲಾಯಿಸಲಾಗಿದೆ ಎಂಬುದನ್ನು ಕಂಡುಕೊಳ್ಳಿ
ದಿ ಟುಡೇ ಟ್ಯಾಬ್: ನಿಮ್ಮ ಹೊಸ ಹೋಸ್ಟಿಂಗ್ ಮುಖಪುಟ
ಈ ಅಪ್‌ಡೇಟ್‌ನ ಭಾಗವಾಗಿ, ನಾವು ಹೋಸ್ಟ್‌ಗಳಿಗೆ ಹೊಚ್ಚಹೊಸ ಹೋಮ್‌ಬೇಸ್ ಅನ್ನು ಸೇರಿಸಿದ್ದೇವೆ ಅದನ್ನು ಟುಡೇ ಟ್ಯಾಬ್ ಎಂದು ಕರೆದಿದ್ದೇವೆ. ದಿ ಟುಡೇ ಟ್ಯಾಬ್ ಅತ್ಯಂತ ಪ್ರಮುಖ ಕಾರ್ಯಗಳು, ಎಚ್ಚರಿಕೆಗಳು ಮತ್ತು ನವೀಕರಣಗಳನ್ನೆಲ್ಲ ಒಂದೇ ಸ್ಥಳದಲ್ಲಿ ಒದಗಿಸುತ್ತದೆ, ಆ ಮೂಲಕ ಹೋಸ್ಟ್ ಆಗಿ ನಿಮ್ಮ ದೈನಂದಿನ ಕಾರ್ಯಗಳನ್ನು ಒಂದೇ ಸ್ಕ್ರೀನ್‌ನಲ್ಲಿ ನಿರ್ವಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ತಮಗೆ ಬೇಕಾದುದನ್ನು ಕಂಡುಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ, ಎಂದು ಈ ಹಿಂದೆ ಹೋಸ್ಟ್‌ಗಳು ನಮಗೆ ತಿಳಿಸಿದ್ದಿದೆ. ದಿ ಟುಡೇ ಟ್ಯಾಬ್‌ನಲ್ಲಿ, ಇರುವುದು ಒಂದೇ ಸ್ಕ್ರೀನ್ —ಅದು ಯಾವುದೇ ಸಾಧನದಲ್ಲಿ ಲಭ್ಯ—ಅಲ್ಲಿ ನೀವು ತ್ವರಿತವಾಗಿ ಮತ್ತು ಸುಲಭವಾಗಿ ಪರಿಶೀಲಿಸಿಕೊಂಡು, ನಿಮ್ಮ ರಿಸರ್ವೇಶನ್‌ಗಳು, ವಿನಂತಿಗಳು, ವಿಚಾರಣೆಗಳು, ಸುದ್ದಿಗಳು, ಮತ್ತು ಎಚ್ಚರಿಕೆಗಳ ಮೇಲೆ ಹಿಡಿತ ಸಾಧಿಸಬಹುದು.
ನಿಮ್ಮ ಹೊಸ ಹೋಮ್ ಬೇಸ್ ಬಗ್ಗೆ ತಿಳಿಯಿರಿ
ಸುಧಾರಿತ, ವೇಗದ ಇನ್‌ಬಾಕ್ಸ್
ಪ್ರತಿಯೊಂದು 5-ಸ್ಟಾರ್ ವಾಸ್ತವ್ಯ ಆರಂಭಗೊಳ್ಳುವುದು ಗೆಸ್ಟ್‌ಗಳ ಜೊತೆ ಅದ್ಭುತ ಸಂವಹನದ ಮೂಲಕ ಎಂಬುದನ್ನು ಪ್ರತಿಯೊಬ್ಬ ಒಳ್ಳೆಯ ಹೋಸ್ಟ್ ಅರಿತಿರುತ್ತಾರೆ. ನಿಮ್ಮ ಇನ್‌ಬಾಕ್ಸ್ ನಿಮ್ಮ ಹೋಸ್ಟಿಂಗ್ ಟೂಲ್‌ಬಾಕ್ಸ್‌ನ ನಿರ್ಣಾಯಕ ಭಾಗವಾಗಿದೆ, ಮತ್ತು ಅದನ್ನು ಸುಧಾರಿಸಲು ನಾವು ಕೆಲವು ಪ್ರಮುಖ ಅಪ್‌ಡೇಟ್‌ಗಳನ್ನು ಪರಿಚಯಿಸಿದ್ದೇವೆ.
ಹೊಸ ಇನ್‌ಬಾಕ್ಸ್ 10 ಪಟ್ಟಿನಷ್ಟು ಹೆಚ್ಚು ವೇಗವಾಗಿದೆ ಹಾಗೂ ಹುಡುಕಾಟ ಮತ್ತು ಫಿಲ್ಟರ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಹಾಗಾಗಿ, ನೀವು ಪ್ರಮುಖ ಸಂದೇಶಗಳನ್ನು ತ್ವರಿತವಾಗಿ ಹುಡುಕಿಕೊಳ್ಳಬಹುದು. ನಿಮ್ಮ ಹೋಸ್ಟಿಂಗ್ ದಿನಚರಿಯನ್ನು ಸರಳ ಮತ್ತು ಸ್ವಯಂಚಾಲಿತಗೊಳಿಸಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡಲು ನಾವು, ಶೆಡ್ಯೂಲ್ ಮಾಡಿರುವ ಮೆಸೇಜ್‍ಗಳು ಮತ್ತು ತ್ವರಿತ ಪ್ರತಿಕ್ರಿಯೆಗಳಂತಹ ಸಮಯ ಉಳಿತಾಯದ ಸಾಧನಗಳನ್ನು ಕೂಡ ಸೇರಿಸಿದ್ದೇವೆ.
ಹೊಸ, ಸ್ವಯಂಚಾಲಿತ ಗೆಸ್ಟ್ ಆಗಮನ ಮಾರ್ಗದರ್ಶಿಗಳು
ಚೆಕ್-ಇನ್ ಎಂಬುದು ಪ್ರತಿ ರಿಸರ್ವೇಷನ್‌ಗೆ ನಿರ್ಣಾಯಕ ಕ್ಷಣ ಆಗಬಹುದು. ಚೆಕ್-ಇನ್‌ಗಳನ್ನು ನಿರ್ವಹಿಸುವುದು ಜಂಜಾಟದ್ದು ಮತ್ತು ಸಮಯ ತಿನ್ನುವಂತಹದು ಎಂಬ ಪ್ರತಿಕ್ರಿಯೆಗಳನ್ನು ನಾವು ಹೋಸ್ಟ್‌ಗಳಿಂದ ಸ್ವೀಕರಿಸಿದ್ದೇವೆ.
ಈ ತಿಂಗಳಿನಲ್ಲಿ, ಪ್ರತಿ ರಿಸರ್ವೇಷನ್‌ಗೆ ಅತ್ಯಂತ ನಿರ್ಣಾಯಕವಾದ ಚೆಕ್-ಇನ್ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ನಿಮ್ಮ ಗೆಸ್ಟ್‌ಗಳ ಟ್ರಿಪ್‌ಗಳ ಟ್ಯಾಬ್‌ನ ಮೇಲುಭಾಗದಲ್ಲಿ ಚೆಕ್-ಇನ್‌ಗೆ 48 ಗಂಟೆಗಳ ಮುನ್ನ ಒದಗಿಸುವ ಹೊಸ ಸಾಧನವನ್ನು ನಾವು ಪ್ರಾರಂಭಿಸುತ್ತಿದ್ದೇವೆ.
ಹೊಸ ಆಗಮನ ಮಾರ್ಗದರ್ಶಿಯನ್ನು ಪರಿಶೀಲಿಸಿ ಮತ್ತು ನಿಮ್ಮದನ್ನು ಸಿದ್ಧಪಡಿಸಿಕೊಳ್ಳಿ
ಸುಧಾರಿತ ಸಮುದಾಯ ಬೆಂಬಲ ಸೇವೆಗಳು
ನಮ್ಮ ಸಮುದಾಯ ಬೆಂಬಲ ಸಾಧನಗಳು ಮತ್ತು Airbnb ಬೆಂಬಲ ರಾಯಭಾರಿಗಳು ಹೋಸ್ಟ್‌ಗಳ ಜೊತೆ ನಮ್ಮ ಸಂಬಂಧದ ಬೆನ್ನು ಮೂಳೆಗಳಾಗಿವೆ. ನಿಮ್ಮ ಪ್ರತಿಕ್ರಿಯೆಯ ಆಧಾರದ ಮೇಲೆ, ನಿಮಗೆ ಸುಧಾರಿತ ಸೇವೆಯನ್ನು ಸಲ್ಲಿಸಲು ನಾವು ಬೆಂಬಲ ಅನುಭವವನ್ನು ಸಮಗ್ರವಾಗಿ ಮರುಪರಿಶೀಲಿಸುತ್ತಿದ್ದೇವೆ.
ಕಳೆದ ವರ್ಷದ ಈ ಸಮಯಕ್ಕೆ ಹೋಲಿಸಿದರೆ ಬೆಂಬಲ ರಾಯಭಾರಿಗಳ ಸಂಖ್ಯೆ ದ್ವಿಗುಣಗೊಂಡಿರುವುದು, ನಮ್ಮ ಸಹಾಯ ಕೇಂದ್ರ ಸಂವಹನಗಳಲ್ಲಿ ಪರಾನುಭೂತಿಗೆ ಆದ್ಯತೆ ನೀಡಿರುವುದು ಮತ್ತು ನಮ್ಮ ನೀತಿಗಳು ಹೆಚ್ಚು ಪಾರದರ್ಶಕ ಮತ್ತು ಸಾತತ್ಯ ಹೊಂದಿರುವುದು ಇದರಲ್ಲಿ ಸೇರಿವೆ. ನಾವು ಡೆಡಿಕೇಟೆಡ್ ಸೂಪರ್‌ಹೋಸ್ಟ್ ಬೆಂಬಲವನ್ನು ಒದಗಿಸಲು ಸಹ ಕೆಲಸ ಮಾಡುತ್ತಿದ್ದೇವೆ, ಇದು ಉತ್ತರ ಅಮೆರಿಕಾದಲ್ಲಿ ಸೆಪ್ಟೆಂಬರ್ 30, 2021 ರಿಂದ ಪ್ರಾರಂಭಗೊಳ್ಳಲಿದೆ ಮತ್ತು 2021ರ ಉದ್ದಕ್ಕೂ ಜಾಗತಿಕವಾಗಿ ಹೊರಹೊಮ್ಮಲಿದೆ.
ನಮ್ಮ ಮೇಲ್ದರ್ಜೆಗೆ ಏರಿಸಲಾದ ಸಮುದಾಯ ಬೆಂಬಲದ ಬಗ್ಗೆ ಇನ್ನಷ್ಟು ತಿಳಿಯಿರಿ
ನಾವು ಈ ತಿಂಗಳು ಅನಾವರಣಗೊಳಿಸಲಿರುವ 100 ಕ್ಕೂ ಹೆಚ್ಚು ಸುಧಾರಣೆಗಳಲ್ಲಿ ಇವು ಕೇವಲ ಒಂದು ಮುಷ್ಟಿಗಾತ್ರದ ಬದಲಾವಣೆಗಳು. ಅಪ್‌ಗ್ರೇಡ್‌ಗಳ ಪೂರ್ಣ ಲಿಸ್ಟ್ ಪರಿಶೀಲಿಸಿ, ಹೊಸ ಸಾಧನಗಳು ಮತ್ತು ವೈಶಿಷ್ಟ್ಯಗಳನ್ನು ಪ್ರಯತ್ನಿಸಿ ನೋಡಿ, ಮತ್ತು ನಾವು ಸುಧಾರಣೆಗಳನ್ನು ಹೇಗೆ ಮುಂದುವರಿಸಬಹುದೆಂಬ ಬಗ್ಗೆ ನಮಗೆ ಪ್ರತಿಕ್ರಿಯಿಸಿ ಎಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.ವಿಶೇಷ ಆಕರ್ಷಣೆಗಳು
ನಾವು ಪ್ರವಾಸದಲ್ಲಿ ದೊಡ್ಡ ಬದಲಾವಣೆಗಳ ಅಂಚಿನಲ್ಲಿದ್ದೇವೆ ಎಂದು ನಾವು ನಂಬಿದ್ದೇವೆ ಮತ್ತು ಅದಕ್ಕೆ ತಯಾರಾಗಲು ನಾವು ನಿಮಗೆ ಸಹಾಯ ಮಾಡಬಯಸುತ್ತೇವೆ
ನಮ್ಮ ಆ್ಯಪ್, ವೆಬ್‌ಸೈಟ್, ನೀತಿಗಳು ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಸಮಗ್ರ ಅಪ್‌ಗ್ರೇಡನ್ನು ಪ್ರಕಟಿಸಿದ್ದೇವೆ
ಸುಧಾರಿತ ಸಮುದಾಯ ಬೆಂಬಲ, ಸುಧಾರಿತ ಸಂದೇಶ ಸಾಧನಗಳು ಮತ್ತು ಸ್ವಯಂಚಾಲಿತ ಗೆಸ್ಟ್ ಆಗಮನ ಮಾರ್ಗದರ್ಶಿಗಳು ಈ ಬದಲಾವಣೆಗಳಲ್ಲಿ ಸೇರಿವೆ