Airbnb ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಮತ್ತು 24/7 ಗ್ರಾಹಕರ ಬೆಂಬಲದಂತಹ ಸೇವೆಗಳ ವೆಚ್ಚವನ್ನು ಭರಿಸಲು, ಬುಕಿಂಗ್ ದೃಢಪಟ್ಟಾಗ ನಾವು ಸೇವಾ ಶುಲ್ಕವನ್ನು ವಿಧಿಸುತ್ತೇವೆ.
ವಾಸ್ತವ್ಯಕ್ಕಾಗಿ 2 ವಿಭಿನ್ನ ಶುಲ್ಕ ವ್ಯವಸ್ಥೆಗಳಿವೆ: ವಿಭಜಿತ ಶುಲ್ಕ ಮತ್ತು ಹೋಸ್ಟ್-ಮಾತ್ರ ಶುಲ್ಕ.
ಈ ಶುಲ್ಕದ ವ್ಯವಸ್ಥೆಯು ಅತ್ಯಂತ ಸಾಮಾನ್ಯವಾಗಿದೆ ಮತ್ತು ಹೋಸ್ಟ್ ಮತ್ತು ಗೆಸ್ಟ್ ನಡುವೆ ವಿಭಜನೆಯಾಗುತ್ತದೆ.
ಹೆಚ್ಚಿನ ಹೋಸ್ಟ್‌ಗಳು 3% ಶುಲ್ಕವನ್ನು ಪಾವತಿಸುತ್ತಾರೆ, ಆದರೆ ಕೆಲವರು ಹೆಚ್ಚು ಪಾವತಿಸುತ್ತಾರೆ, ಇದರಲ್ಲಿ ಇಟಲಿಯಲ್ಲಿ ಲಿಸ್ಟಿಂಗ್‌ಗಳನ್ನು ಹೊಂದಿರುವ ಕೆಲವು ಹೋಸ್ಟ್‌ಗಳು ಸೇರಿದ್ದಾರೆ. ಈ ಶುಲ್ಕವನ್ನು ಬುಕಿಂಗ್ ಉಪಮೊತ್ತದಿಂದ ಲೆಕ್ಕಹಾಕಲಾಗುತ್ತದೆ (ಬುಕಿಂಗ್ ಉಪಮೊತ್ತವು ರಾತ್ರಿಯ ಬೆಲೆ ಮತ್ತು ಹೋಸ್ಟ್ ವಿಧಿಸುವ ಯಾವುದೇ ಹೆಚ್ಚುವರಿ ಶುಲ್ಕಗಳನ್ನುಒಳಗೊಂಡಿರುತ್ತದೆ, ಆದರೆ ಗೆಸ್ಟ್ ಸೇವಾ ಶುಲ್ಕ ಮತ್ತು ತೆರಿಗೆಗಳನ್ನು ಹೊರತುಪಡಿಸಿ) ಮತ್ತು ಹೋಸ್ಟ್ ಹೊರಪಾವತಿಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ನಿಮ್ಮ ರಿಸರ್ವೇಶನ್ ಅನ್ನು ಬುಕ್ಮಾಡುವ ಮೊದಲು ಗೆಸ್ಟ್ ಸೇವಾ ಶುಲ್ಕವನ್ನು ಬೆಲೆ ವಿಭಜನೆಯಲ್ಲಿ ಕಾಣಬಹುದು.
ಗಮನಿಸಿ: ಏಪ್ರಿಲ್ 1, 2024 ರ ಹೊತ್ತಿಗೆ, ನಾವು ಕೆಳಗೆ ವಿವರಿಸಿದಂತೆ ಕ್ರಾಸ್-ಕರೆನ್ಸಿ ಬುಕಿಂಗ್‌ಗಾಗಿ ನಮ್ಮ ಗೆಸ್ಟ್ ಸೇವಾ ಶುಲ್ಕದಲ್ಲಿ ಹೆಚ್ಚುವರಿ ಮೊತ್ತವನ್ನು ಸೇರಿಸುತ್ತೇವೆ.
ಹೆಚ್ಚಿನ ಗೆಸ್ಟ್ ಸೇವಾ ಶುಲ್ಕಗಳು ಬುಕಿಂಗ್ ಉಪಮೊತ್ತದ 14.2% ಕ್ಕಿಂತ ಕಡಿಮೆ ಇವೆ (ಬುಕಿಂಗ್ ಉಪಮೊತ್ತವು ರಾತ್ರಿಯ ಬೆಲೆ ಮತ್ತು ಹೋಸ್ಟ್ ವಿಧಿಸುವ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿರುತ್ತದೆ, ಆದರೆ ಗೆಸ್ಟ್ ಸೇವಾ ಶುಲ್ಕ ಮತ್ತು ತೆರಿಗೆಗಳನ್ನು ಹೊರತುಪಡಿಸಿ). ಗೆಸ್ಟ್ ಸೇವಾ ಶುಲ್ಕವು ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ ಮತ್ತು ಬುಕಿಂಗ್ ಅನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಆಗಿರಬಹುದು. 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚು ಕಾಲದ ಕೆಲವು ವಾಸ್ತವ್ಯಗಳಿಗೆ ಗೆಸ್ಟ್ ಸೇವಾ ಶುಲ್ಕವನ್ನು ಕಡಿಮೆ ಮಾಡಲಾಗಿದೆ.
ಗೆಸ್ಟ್‌ಗಳು ತಮ್ಮ ಲಿಸ್ಟಿಂಗ್‌ಗಾಗಿ ಹೋಸ್ಟ್ ನಿಗದಿಪಡಿಸಿದ ಕರೆನ್ಸಿಗಿಂತ ವಿಭಿನ್ನ ಕರೆನ್ಸಿಯನ್ನು ಬಳಸಿಕೊಂಡು ಪಾವತಿಸುವ ಬುಕಿಂಗ್‌ಗಾಗಿ, ನಾವು ನಮ್ಮ ಗೆಸ್ಟ್‌ಗಳಿಗೆ ಒದಗಿಸುವ ಮೌಲ್ಯಕ್ಕೆ ಸರಿಹೊಂದಿಸಲು ನಮ್ಮ ಶುಲ್ಕಗಳನ್ನು ಸರಿಹೊಂದಿಸುತ್ತೇವೆ. ಈ ಕ್ರಾಸ್-ಕರೆನ್ಸಿ ಬುಕಿಂಗ್‌ಗಳಿಗೆ, ಗೆಸ್ಟ್ ಸೇವಾ ಶುಲ್ಕವು ಹೆಚ್ಚುವರಿ ಮೊತ್ತವನ್ನು ಒಳಗೊಂಡಿರುತ್ತದೆ, ಇದರ ಪರಿಣಾಮವಾಗಿ ಗೆಸ್ಟ್ ಸೇವಾ ಶುಲ್ಕವು ಬುಕಿಂಗ್ ಉಪಮೊತ್ತದ 16.5% ವರೆಗೆ ಇರುತ್ತದೆ.
ಈ ವ್ಯವಸ್ಥೆಯೊಂದಿಗೆ, ಸಂಪೂರ್ಣ ಶುಲ್ಕವನ್ನು ಹೋಸ್ಟ್ ಪಾವತಿಯಿಂದ ಕಡಿತಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಇದು 14-16% ಆಗಿದೆ, ಆದರೂ ತುಂಬಾ ಕಟ್ಟುನಿಟ್ಟಾದ ರದ್ದತಿ ನೀತಿಗಳನ್ನು ಹೊಂದಿರುವ ಹೋಸ್ಟ್‌ಗಳು ಹೆಚ್ಚು ಪಾವತಿಸಬಹುದು ಮತ್ತು 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ವಾಸ್ತವ್ಯಗಳಿಗೆ ಶುಲ್ಕಗಳು ಕಡಿಮೆ ಇರಬಹುದು.
ಹೋಟೆಲ್‌ಗಳು, ಸರ್ವಿಸ್ಡ್ ಅಪಾರ್ಟ್‌ಮೆಂಟ್‌ಗಳು ಇತ್ಯಾದಿ ಜೊತೆಗೆ ಸಾಂಪ್ರದಾಯಿಕ ಆತಿಥ್ಯ ಲಿಸ್ಟಿಂಗ್‌ಗಳಿಗೆ ಮತ್ತು ಸಾಫ್ಟ್‌ವೇರ್-ಸಂಪರ್ಕಿತ ಹೋಸ್ಟ್‌ಗಳಿಗೆ ಈ ಶುಲ್ಕವು ಕಡ್ಡಾಯವಾಗಿದೆ (ಅವರ ಹೆಚ್ಚಿನ ಲಿಸ್ಟಿಂಗ್‌ಗಳು USA, ಕೆನಡಾ, ಬಹಾಮಾಸ್, ಮೆಕ್ಸಿಕೊ, ಅರ್ಜೆಂಟೀನಾ, ತೈವಾನ್ ಅಥವಾ ಉರುಗ್ವೆಯಲ್ಲಿಲ್ಲದಿದ್ದರೆ).
ಸಂಬಂಧಿತ ನ್ಯಾಯವ್ಯಾಪ್ತಿಯ ಕಾನೂನುಗಳನ್ನು ಅವಲಂಬಿಸಿ, ಮೇಲಿನ ಶುಲ್ಕಗಳಿಗೆ ವ್ಯಾಟ್ ಅನ್ವಯವಾಗಬಹುದು. ಸೇವಾ ಶುಲ್ಕವು ಅನ್ವಯಿಸುವಲ್ಲಿ ವ್ಯಾಟ್ ಅನ್ನು ಒಳಗೊಂಡಿರುತ್ತದೆ.
ನಮ್ಮ ಸೇವಾ ಶುಲ್ಕಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ ಮತ್ತು ಯಾವುದೇ ಬದಲಾವಣೆಗಳನ್ನು ನಮ್ಮ ಸೇವಾ ಷರತ್ತುಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ.