ಪೀಕ್ ಸೀಸನ್ ಅನ್ನು ಪರಿಪೂರ್ಣಗೊಳಿಸುವುದು
ಪ್ರಮುಖ ಪ್ರವಾಸಿ ಋತು ಬರುತ್ತಿದೆ. ಗೆಸ್ಟ್ ಬೇಡಿಕೆ ಅತ್ಯಧಿಕವಾಗಿರುವ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ಪಡೆಯಲು Airbnb ಹೋಸ್ಟಿಂಗ್ ಟೂಲ್‌ಗಳನ್ನು ನೀವು ಬಳಸಬಹುದಾದ ಕೆಲವು ವಿಧಾನಗಳು ಇಲ್ಲಿವೆ.
ನಿಮ್ಮ ಕ್ಯಾಲೆಂಡರ್ ಅನ್ನು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ
ನಿಮ್ಮ ಕ್ಯಾಲೆಂಡರ್‌ನಲ್ಲಿ ಹೆಚ್ಚುವರಿ ರಾತ್ರಿಗಳನ್ನು ತೆರೆಯುವ ಮೂಲಕ ನಿಮ್ಮ ಪ್ರದೇಶದ ಕಾರ್ಯನಿರತ ಋತುವಿಗೆ ಸಿದ್ಧರಾಗಿ. ಹೆಚ್ಚಿನ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ನಿಮ್ಮ ಗಳಿಕೆಯನ್ನು ಹೆಚ್ಚಿಸುತ್ತದೆ.
ನಿಮ್ಮ ಕ್ಯಾಲೆಂಡರ್‌ನಲ್ಲಿ ರಾತ್ರಿಗಳನ್ನು ತೆರೆಯುವಾಗ ನಿಮ್ಮ ಕನಿಷ್ಠ ಟ್ರಿಪ್ ಅವಧಿಯನ್ನು ಪರಿಗಣಿಸಿ. ನೀವು ನಿಮ್ಮ ಪ್ರಮಾಣಿತ ಟ್ರಿಪ್ ಅವಧಿಯ ಕನಿಷ್ಠ ಮಿತಿಯಲ್ಲಿರಬೇಕು ಅಥವಾ ಅದನ್ನು ಕಡಿಮೆ ಮಾಡಬೇಕು. ನೀವು ತೆರೆಯುವ ನಿರ್ದಿಷ್ಟ ರಾತ್ರಿಗಳಿಗೆ ಕಸ್ಟಮ್ ಟ್ರಿಪ್ ಅವಧಿಯನ್ನು ಸಹ ನೀವು ರಚಿಸಬಹುದು.
"ಬ್ಯುಸಿ ಸೀಸನ್‌ನಲ್ಲಿ ಕ್ಯಾಲೆಂಡರ್ ತೆರೆದಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ" ಎಂದು ಅರ್ಕಾನ್ಸಾಸ್‌ನ ಲಿಟಲ್ ರಾಕ್‌ನಲ್ಲಿರುವ ಸೂಪರ್‌ಹೋಸ್ಟ್ ಮೈರಾಂಡಾ ಹೇಳುತ್ತಾರೆ. "ಒಂದು ಗೆಸ್ಟ್ ಇಂದ ಇನ್ನೊಂದು ಗೆಸ್ಟ್ ಮಧ್ಯೆ ಒಂದೆರಡು ದಿನಗಳ ರಜೆ ತೆಗೆದುಕೊಳ್ಳುವ ಬದಲು, ಆ ಸೀಸನ್‌ನಲ್ಲಿ ನಾನು ಇನ್ನಷ್ಟು ಹೊಂದಿಕೊಳ್ಳುವವನಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಇದರಿಂದ, ನಾನು ಇನ್ನಷ್ಟು ಗೆಸ್ಟ್‌ಗಳನ್ನು ಹೋಸ್ಟ್ ಮಾಡಬಹುದು."
ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು ಬೂದು ಬಣ್ಣದಲ್ಲಿ ಗೋಚರಿಸುವ ನಿರ್ಬಂಧಿತ ರಾತ್ರಿಗಳಿಗಾಗಿ ಹುಡುಕಿ. ನೀವು ಹೋಸ್ಟ್ ಮಾಡಲು ಸಾಧ್ಯವಾಗುವ ಯಾವುದೇ ನಿರ್ಬಂಧಿತ ರಾತ್ರಿಗಳನ್ನು ತೆರೆಯಿರಿ.
ನಿಮ್ಮ ಲಭ್ಯತೆಯ ವಿಂಡೋವನ್ನು ಕನಿಷ್ಠ ಅವಧಿಯಾದ ಮೂರು ತಿಂಗಳಿಗೂ ಹೆಚ್ಚಿಗೆ ವಿಸ್ತರಿಸುವುದರಿಂದ ಗೆಸ್ಟ್‌ಗಳು ಇನ್ನೂ ಮುಂದಕ್ಕೆ ಬುಕ್ ಮಾಡಲು ಅನುವು ಮಾಡಿಕೊಡುತ್ತದೆ. ನಿಮ್ಮ ಕ್ಯಾಲೆಂಡರ್ ಅನ್ನು ನೀವು ಎರಡು ವರ್ಷಗಳವರೆಗೆ ಮುಂಚಿತವಾಗಿ ತೆರೆಯಬಹುದು. ನಿಮ್ಮ ಲಿಸ್ಟಿಂಗ್ ಹೆಚ್ಚಿನ ಹುಡುಕಾಟ ಫಲಿತಾಂಶಗಳಲ್ಲಿ ಗೋಚರಿಸುತ್ತದೆ ಮತ್ತು ಆ ಸಮಯದಲ್ಲಿ ಕಡಿಮೆ ಸ್ಥಳಗಳು ಲಭ್ಯವಿದ್ದರೆ ಫಲಿತಾಂಶಗಳ ಚಿಕ್ಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
ನಿಮ್ಮ ಲಭ್ಯತೆಯ ವಿಂಡೋವನ್ನು ಲೆಕ್ಕಿಸದೆ ನಿಮ್ಮ ಕ್ಯಾಲೆಂಡರ್ ಒಂದು ಬಾರಿ ಒಂದು ದಿನವನ್ನು ತೆರೆಯುತ್ತದೆ. ಉದಾಹರಣೆಗೆ, ನಿಮ್ಮ ವಿಂಡೋ 12 ತಿಂಗಳುಗಳದ್ದಾಗಿದ್ದರೆ, ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಇಂದಿಗಿಂತ ಒಂದು ವರ್ಷ ನಂತರದ ದಿನಕ್ಕೆ ಬುಕ್ ಮಾಡಬಹುದು.
"ಬೇಡಿಕೆ ಹೆಚ್ಚಿರುವಾಗ ಲಾಭ ಪಡೆಯಿರಿ," ಎಂದು ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್‌ನಲ್ಲಿನ ಸೂಪರ್‌ಹೋಸ್ಟ್ ಜಿಮ್ಮಿ ಹೇಳುತ್ತಾರೆ. "ಬಹುಶಃ ಇತರ ಹೋಸ್ಟ್‌ಗಳು ಸಿದ್ಧವಾಗಿಲ್ಲ ಮತ್ತು ಅವರ ಕ್ಯಾಲೆಂಡರ್‌ಗಳು ತೆರೆದಿಲ್ಲ. ಹೀಗಾಗಿ ಸಕ್ರಿಯವಾಗಿರುವ ಮೂಲಕ, ನೀವು ಆ ಹೆಚ್ಚಿನ ಬೇಡಿಕೆಯ ಅವಧಿಗಳನ್ನು ಬಳಸಿಕೊಳ್ಳಬಹುದು."
ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಿ
ಪೀಕ್ ಸೀಸನ್‌ನಲ್ಲಿ ಸ್ಪರ್ಧಾತ್ಮಕವಾಗಿರಲು, ನಿಮ್ಮ ಪ್ರದೇಶದಲ್ಲಿನ ಇದೇ ರೀತಿಯ ಲಿಸ್ಟಿಂಗ್‌ಗಳ ಬೆಲೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಪ್ರತಿ ರಾತ್ರಿಯ ದರವನ್ನು ಸರಿಹೊಂದಿಸುವುದನ್ನು ಪರಿಗಣಿಸಿ. ನೀವು ಪ್ರತಿ ರಾತ್ರಿ ಒಂದೇ ಬೆಲೆಯನ್ನು ನಿಗದಿಸುತ್ತಿದ್ದಲ್ಲಿ, ಬೇಡಿಕೆಯಲ್ಲಿನ ಬದಲಾವಣೆಗೆ ಹೊಂದಿಕೆಯಾಗುವಂತೆ ವಾರದ ದಿನಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ನಿಮ್ಮ ದರ ಬದಲಾಯಿಸುವುದನ್ನು ಪರಿಗಣಿಸಿ. ಬದಲಾಗುವ ದರ ನಿಗದಿಪಡಿಸುವಿಕೆಯು ನಿಮ್ಮ ಬುಕಿಂಗ್‌ಗಳು ಮತ್ತು ಗಳಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡಬಲ್ಲದು.
ಇದೇ ರೀತಿಯ ಲಿಸ್ಟಿಂಗ್‌ಗಳನ್ನು ಹೋಲಿಸಲು, ನಿಮ್ಮ ಲಿಸ್ಟಿಂಗ್‌ನ ಕ್ಯಾಲೆಂಡರ್‌ಗೆ ಹೋಗಿ ಮತ್ತು 31 ದಿನಗಳವರೆಗಿನ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.
ನಿಮ್ಮ ಪ್ರದೇಶದ ನಕ್ಷೆಯಲ್ಲಿ ಹತ್ತಿರದ ಇದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ದರಗಳು ನಿಮಗೆ ಕಾಣಿಸುತ್ತವೆ. ಬುಕ್ ಮಾಡಿದ ಅಥವಾ ಬುಕ್ ಆಗದ ಲಿಸ್ಟಿಂಗ್‌ಗಳನ್ನು ನೋಡಲು ನಕ್ಷೆಯಲ್ಲಿನ ಬಟನ್‌ಗಳು ನಿಮಗೆ ಅನುವು ಮಾಡಿಕೊಡುತ್ತವೆ. ಯಾವ ಲಿಸ್ಟಿಂಗ್‌ಗಳು ಒಂದೇ ರೀತಿ ಇವೆ ಎಂಬುದನ್ನು ನಿರ್ಧರಿಸುವುದರಲ್ಲಿ ಒಳಗೊಂಡಿರುವ ಅಂಶಗಳು ಇಂತಿವೆ: ಸ್ಥಳ, ಗಾತ್ರ, ವೈಶಿಷ್ಟ್ಯಗಳು, ಸೌಲಭ್ಯಗಳು, ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ಪರಿಗಣಿಸುವಾಗ ಗೆಸ್ಟ್‌ಗಳು ಬ್ರೌಸ್ ಮಾಡುವ ಇತರ ಲಿಸ್ಟಿಂಗ್‌ಗಳು.
ಸಮೀಪದ ಇದೇ ರೀತಿಯ ಲಿಸ್ಟಿಂಗ್‌ಗಳಿಗಿಂತ ಕಡಿಮೆ ಬೆಲೆಗಳನ್ನು ಹೊಂದಿರುವ ಲಿಸ್ಟಿಂಗ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತವೆ.
"ಇದು ಕಾರ್ಯನಿರತ ಸಮಯವಾಗಿದ್ದರೆ ಮತ್ತು ನಾವು ಇನ್ನೂ ಬುಕ್ ಆಗಿಲ್ಲದಿದ್ದರೆ, ನಾನು ನನ್ನ ಪ್ರದೇಶದಲ್ಲಿನ ಪ್ರಾಪರ್ಟಿಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ," ಎಂದು ಆಸ್ಟ್ರೇಲಿಯಾದ ಸಿಡ್ನಿಯ ಸೂಪರ್‌ಹೋಸ್ಟ್ ಫೆಲಿಸಿಟಿ ಹೇಳುತ್ತಾರೆ. "ನಾನು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರಬೇಕು."
ರಿಯಾಯಿತಿ ಸೇರಿಸಿ
ನಿಮ್ಮ ಬಿಡುವಿಲ್ಲದ ಸೀಸನ್‌ನಲ್ಲಿ ಗೆಸ್ಟ್‌ಗಳಿಗೆ ಎದ್ದು ಕಾಣುವಂತೆ ಮಾಡಲು ರಿಯಾಯಿತಿಗಳನ್ನು ಸೇರಿಸುವುದು ಮತ್ತೊಂದು ಮಾರ್ಗವಾಗಿದೆ. ಇವುಗಳನ್ನು ನೀಡುವ ಮೂಲಕ ನೀವು ವಿವಿಧ ರೀತಿಯ ಪ್ರಯಾಣಿಕರಿಗೆ ಸೇವೆ ಒದಗಿಸಬಹುದು:
- ಸಾಪ್ತಾಹಿಕ ಮತ್ತು ಮಾಸಿಕ ರಿಯಾಯಿತಿಗಳು. ಏಳು ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಸಾಪ್ತಾಹಿಕ ರಿಯಾಯಿತಿಗಳನ್ನು ಮತ್ತು 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸ್ತವ್ಯಗಳಿಗೆ ಮಾಸಿಕ ರಿಯಾಯಿತಿಗಳನ್ನು ನೀಡುವುದನ್ನು ಪರಿಗಣಿಸಿ. ಇದು ನಿಮ್ಮ ಹುಡುಕಾಟ ಶ್ರೇಯಾಂಕವನ್ನು ಸುಧಾರಿಸಲು, ನಿಮ್ಮ ಕ್ಯಾಲೆಂಡರ್‌ನಲ್ಲಿರುವ ಅಂತರಗಳನ್ನು ತುಂಬಲು ಮತ್ತು ಟರ್ನ್‌ಓವರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಅರ್ಲಿ ಬರ್ಡ್ ರಿಯಾಯಿತಿ. ಚೆಕ್-ಇನ್‌ಗೆ 1 ರಿಂದ 24 ತಿಂಗಳ ಮೊದಲು ಮಾಡಿದ ಬುಕಿಂಗ್‌ಗಳಿಗೆ ಅರ್ಲಿ ಬರ್ಡ್ ರಿಯಾಯಿತಿಯನ್ನು ಸೇರಿಸುವುದು ಮುಂಚಿತವಾಗಿ ಯೋಜಿಸುವ ಗೆಸ್ಟ್‌ಗಳನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡಬಹುದು.
10% ಅಥವಾ ಅದಕ್ಕಿಂತ ಹೆಚ್ಚಿನ ಸಾಪ್ತಾಹಿಕ ಅಥವಾ ಮಾಸಿಕ ರಿಯಾಯಿತಿಗಳು ಮತ್ತು 3% ಅಥವಾ ಅದಕ್ಕಿಂತ ಹೆಚ್ಚಿನ ಅರ್ಲಿ ಬರ್ಡ್ ರಿಯಾಯಿತಿಗಳ ವಿಶೇಷ ಕಾಲ್‌ಔಟ್ ಅನ್ನು ಗೆಸ್ಟ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ನಿಮ್ಮ ಲಿಸ್ಟಿಂಗ್ ಪುಟದಲ್ಲಿ ನೋಡುತ್ತಾರೆ. ನಿಮ್ಮ ರಿಯಾಯಿತಿ ಬೆಲೆಯು ನಿಮ್ಮ ಕ್ರಾಸ್ ಔಟ್ ಮಾಡಲಾಗಿರುವ ಮೂಲ ಬೆಲೆಯ ಪಕ್ಕದಲ್ಲಿ ಗೋಚರಿಸುತ್ತದೆ.
ಸ್ಮಾರ್ಟ್ ದರ ನಿಗದಿಯನ್ನು ಆನ್ ಮಾಡಿದಾಗ ಅರ್ಲಿ ಬರ್ಡ್ ರಿಯಾಯಿತಿ ಲಭ್ಯವಿರುವುದಿಲ್ಲ ಮತ್ತು ವಾಸ್ತವ್ಯದ ಅವಧಿ ಆಧಾರಿತ ರಿಯಾಯಿತಿಗಳು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಇರಬೇಕು ಎಂಬುದನ್ನು ಗಮನಿಸಿ.
"ನಾನು ವರ್ಷಕ್ಕೆ ನನ್ನ ಕ್ಯಾಲೆಂಡರ್ ಅನ್ನು ಹೊಂದಿಸುವಾಗ ಅರ್ಲಿ ಬರ್ಡ್ ರಿಯಾಯಿತಿಯನ್ನು ಬಳಸುತ್ತೇನೆ," ಎಂದು ಸ್ಪೇನ್ ದೇಶದ ತಾರಗೋನಾದ ಸೂಪರ್‌ಹೋಸ್ಟ್ ಆ್ಯನ್ ಹೇಳುತ್ತಾರೆ. "ಇದು ನನ್ನ ಕ್ಯಾಲೆಂಡರ್ ಅನ್ನು ತ್ವರಿತವಾಗಿ ಭರ್ತಿ ಮಾಡುತ್ತದೆ ಮತ್ತು ರಿಯಾಯಿತಿ ಪಡೆಯುವ ಜನರು ಸಾಮಾನ್ಯವಾಗಿ ರದ್ದುಗೊಳಿಸುವುದಿಲ್ಲ."
ಚೆಕ್-ಇನ್ ಮತ್ತು ಚೆಕ್ಔಟ್ ಅನ್ನು ಸುಲಭಗೊಳಿಸಿ
ನಿಮ್ಮ ಗೆಸ್ಟ್‌ಗಳ ಆಗಮನ ಮತ್ತು ನಿರ್ಗಮನವನ್ನು ಸರಳಗೊಳಿಸುವ ಮಾರ್ಗಗಳಿಗಾಗಿ ಹುಡುಕಿ. ನಿಮ್ಮ ಸ್ಥಳವನ್ನು ಹೇಗೆ ಹುಡುಕುವುದು ಮತ್ತು ಅವರು ಬಂದಾಗ ಮುಂಭಾಗದ ಬಾಗಿಲನ್ನು ಹೇಗೆ ಅನ್‌ಲಾಕ್ ಮಾಡುವುದು ಎಂದು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಲು ಚೆಕ್-ಇನ್ ನಿರ್ದೇಶನಗಳನ್ನು ಸೇರಿಸಿ.
- ಪ್ರಮುಖ ವಿವರಗಳನ್ನು ಸೇರಿಸಿ. ನಿಮ್ಮ ಆಗಮನ ಮಾರ್ಗದರ್ಶಿಯಲ್ಲಿ ನಿಮ್ಮ ಚೆಕ್-ಇನ್ ವಿಧಾನ, ಸಮಯ ಮತ್ತು ನಿರ್ದೇಶನಗಳನ್ನು ನೀವು ಹೊಂದಿಸಬಹುದು. ಸ್ಮಾರ್ಟ್ ಲಾಕ್, ಕೀಪ್ಯಾಡ್ ಅಥವಾ ಲಾಕ್‌ಬಾಕ್ಸ್ ಜೊತೆಗೆ ಸ್ವಯಂ ಚೆಕ್-ಇನ್ ಒದಗಿಸುವುದು ಗೆಸ್ಟ್‌ಗಳು ತಡರಾತ್ರಿಯಲ್ಲಿ ಬಂದರೂ ಸಹ ಕೋಡ್ ಬಳಸಿ ಪ್ರವೇಶದ್ವಾರವನ್ನು ಅನ್‌ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ.
- ಪ್ರವೇಶಿಸುವುದು ಹೇಗೆ ಎಂದು ತೋರಿಸಿ. ಗೆಸ್ಟ್‌ಗಳಿಗೆ ಪ್ರಕ್ರಿಯೆಯನ್ನು ಕಲ್ಪಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಫೋಟೋಗಳು ಅಥವಾ ವೀಡಿಯೊವನ್ನು ಸೇರಿಸಿ. ನಿಮ್ಮ ಸೂಚನೆಗಳು ಸ್ಪಷ್ಟವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಪರೀಕ್ಷಿಸುವಂತೆ ಸ್ನೇಹಿತರಿಗೆ ಸೂಚಿಸಿ.
ನಿಮ್ಮ ಸ್ಥಳದ ಬಗ್ಗೆ ನಿಮ್ಮ ಗೆಸ್ಟ್‌ಗಳ ಅಂತಿಮ ಅನಿಸಿಕೆಯೇ ಚೆಕ್‌ಔಟ್ ಎಂದು ಭಾವಿಸಿ. ಈ ಪ್ರಕ್ರಿಯೆಯನ್ನು ಸುಗಮಗೊಳಿಸುವುದರಿಂದ ನಿಮ್ಮೊಂದಿಗಿನ ಅವರ ವಾಸ್ತವ್ಯವು ಉತ್ತಮವಾಗಿತ್ತು ಎಂಬುದನ್ನು ಅವರಿಗೆ ನೆನಪಿಸುತ್ತದೆ.
- ಸ್ಪಷ್ಟ ಚೆಕ್‌ಔಟ್ ಸೂಚನೆಗಳನ್ನು ಒದಗಿಸಿ. ನಿಮ್ಮ ಆಗಮನ ಮಾರ್ಗದರ್ಶಿಯಲ್ಲಿ ಕಾರ್ಯಗಳ ಪಟ್ಟಿಯಿಂದ ಆಯ್ಕೆ ಮಾಡಿ. ಗೆಸ್ಟ್‌ಗಳು ಹೊರಡುವ ಮೊದಲು ಏನು ಮಾಡಬೇಕು ಎಂಬುದನ್ನು ವಿವರಿಸಿ, ಉದಾಹರಣೆಗೆ ವಸ್ತುಗಳನ್ನು ಆಫ್ ಮಾಡುವುದು ಮತ್ತು ಲಾಕ್ ಮಾಡುವುದು. ಬುಕ್ ಮಾಡುವ ಮೊದಲು ಯಾರು ಬೇಕಾದರೂ ಇವುಗಳನ್ನು ಓದಬಹುದು.
- ಸಾಧ್ಯವಾದಷ್ಟು ಸರಳಗೊಳಿಸಿ. ಗೆಸ್ಟ್‌ಗಳು ತಾವು ಬಳಸಿದ ಟವೆಲ್‌ಗಳನ್ನು ಒಟ್ಟಾಗಿ ಇರಿಸುವುದು ಮತ್ತು ಕಸವನ್ನು ಎಸೆಯುವುದು ಮುಂತಾದ ಕೆಲವು ಕಾರ್ಯಗಳನ್ನು ಮಾಡುವ ಅಗತ್ಯವಿದೆಯೇ ಎಂದು ಪರಿಗಣಿಸಿ.
"ಗೆಸ್ಟ್‌ಗಳು ನಿಮ್ಮ ಪ್ರಾಪರ್ಟಿಯಿಂದ ನಿರ್ಗಮಿಸಲು ತಯಾರಿ ನಡೆಸುತ್ತಿರುವುದರಿಂದ ಒಂದೆರಡು ಸರಳ ಸೂಚನೆಗಳನ್ನು ಅವರಿಗೆ ಒದಗಿಸುವುದು ಮುಖ್ಯವಾಗಿದೆ," ಎಂದು ಕೆನಡಾದ ನೆಲ್ಸನ್‌ನಲ್ಲಿರುವ ಸೂಪರ್‌ಹೋಸ್ಟ್ ಕಾರೆನ್ ಹೇಳುತ್ತಾರೆ. “ಇದು ಅನುಭವವನ್ನು ತುಂಬಾ ಸುಲಭಗೊಳಿಸುತ್ತದೆ.”
ನಿಮ್ಮ ಬೆಲೆ ನಿಗದಿ ಮತ್ತು ಇತರ ಸೆಟ್ಟಿಂಗ್‌ಗಳ ಮೇಲೆ ನೀವು ಯಾವಾಗಲೂ ನಿಯಂತ್ರಣ ಹೊಂದಿರುತ್ತೀರಿ. ನಿಮ್ಮ ಫಲಿತಾಂಶಗಳು ಭಿನ್ನವಾಗಿರಬಹುದು.
ಸಂದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೋಸ್ಟ್‌ಗಳಿಗೆ ಹಣ ಪಾವತಿಸಲಾಯಿತು.
ಹೋಸ್ಟಿಂಗ್ ಸಲಹೆಗಳು ಸ್ಥಳೀಯ ಕಾನೂನಿಗೆ ಒಳಪಟ್ಟಿರುತ್ತವೆ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.