ಪ್ರಕೃತಿ, ಸಮುದಾಯ ಮತ್ತು ದಯೆಯ ಶಕ್ತಿಗಳು

ಮಾರಿಯಾ ಚಂಡಮಾರುತದ ನಂತರ ಸ್ಪೂರ್ತಿದಾಯಕ ಗೆಸ್ಟ್‌ ತನ್ನ ಸಹಿಷ್ಣುತೆಯ ಕಥೆಯನ್ನು ಹಂಚಿಕೊಳ್ಳುತ್ತಾರೆ.
Airbnb ಅವರಿಂದ ಆಗ 24, 2023ರಂದು
3 ನಿಮಿಷ ಓದಲು
ಆಗ 24, 2023 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಮಾರಿಯಾ ಚಂಡಮಾರುತವು ಪೋರ್ಟೊ ರಿಕೊಗೆ ಅಪ್ಪಳಿಸಿದಾಗ, ಚಂಡಮಾರುತವು ಒಂದು ವಾರದ ನಂತರ ಕಡಿಮೆಯಾಯಿತು ಆದರೆ ಪರಿಣಾಮವು ವರ್ಷಗಳವರೆಗೆ ಮುಂದುವರೆಯಿತು

  • ಮಾರಿಯಾ ತನ್ನ ಮನೆಗೆ ಹಾನಿ ಮಾಡಿದಾಗ, ಸಮುದಾಯ ಸಂಘಟಕಿ ಮತ್ತು ಆರೈಕೆದಾರೆ ಕಾರ್ಮೆನ್, ನಿರಾಶ್ರಿತರಾಗಬೇಕಾಯಿತು

  • Airbnb.org ಮತ್ತು SBP ನಡುವಿನ ಪಾಲುದಾರಿಕೆಯ ಮೂಲಕ, ಕಾರ್ಮೆನ್‌ರ ಮನೆಯನ್ನು ಪುನರ್ನಿರ್ಮಿಸುವಾಗ ಆಕೆ ಹತ್ತಿರದ Airbnb ಯಲ್ಲಿ ಉಳಿದುಕೊಂಡರು

ಬಿಕ್ಕಟ್ಟಿನ ಸಮಯದಲ್ಲಿ ಸಂಪರ್ಕ, ಪುನಶ್ಚೇತನ ಮತ್ತು ಸಮುದಾಯದ ಅರ್ಥಪೂರ್ಣ ಕಥೆಗಳನ್ನು ಹಂಚಿಕೊಳ್ಳುವ ನಮ್ಮ ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಈ ತಿಂಗಳು, 2017 ರಲ್ಲಿ ಮರಿಯಾ ಚಂಡಮಾಡುತದಿಂದ ಬಾಧಿತರಾದ ಪೋರ್ಟೊ ರಿಕೊದ ನಿವಾಸಿ ಕಾರ್ಮೆನ್ ಸುರಿಯೆಲ್ ಅವರನ್ನು ನಾವು ಗೌರವಿಸುತ್ತಿದ್ದೇವೆ. Airbnb.orgSBP ಜೊತೆಗಿನ ಪಾಲುದಾರಿಕೆಯು ಕಾರ್ಮೆನ್‌ರಂತಹ ಗೆಸ್ಟ್‌ಗಳ ಮನೆಗಳು ರಿಪೇರಿಯಾಗುತ್ತಿರುವಾಗ ಅವರಿಗೆ ತಾತ್ಕಾಲಿಕ ನೆಲೆಯನ್ನು ಒದಗಿಸಲು ನೆರವಾಗುತ್ತದೆ.

ಕಾರ್ಮೆನ್ ಸುರಿಯೆಲ್ ಅವರ ವೈಯಕ್ತಿಕ ಅಭಯಾರಣ್ಯದಲ್ಲಿ ಅವರ ಮನೆ. ಅಲ್ಲಿ ಪ್ಯಾಶನ್‌ಫ್ರೂಟ್‌ ಇರುವ ಹಚ್ಚ ಹಸಿರು ಮರಗಳು, ಆಕಾಶ ತಲುಪಲು ಯತ್ನಿಸುತ್ತಿರುವ ಬಾಳೆ ಗಿಡಗಳು, ಮುಂಬಾಗಿಲಿನಲ್ಲಿ ಹೂವುಗಳಿಂದ ಕಂಗೊಳಿಸುತ್ತಿರುವ ಹೂಗಿಡಗಳು, ಕಾರ್ಮೆನ್ ಅವರ ಉದ್ಯಾನವನ್ನು ನಿಶ್ಶಬ್ಧವಾಗಿ ಕಾವಲು ಕಾಯುತ್ತಿರುವ ಮೊಲ, ಕೋನಿ ಇವೆ. 

“ಅವನು ಮಾಡೆಲ್‌ನಂತೆ” ಎಂದು ತಮ್ಮ ಗಂಭೀರ ಆದರೆ ಮುದ್ದಾಗಿರುವ ಮೊಲದ ಕುರಿತು ಕಾರ್ಮೆನ್ ತಮಾಷೆ ಮಾಡುತ್ತಾರೆ. ಆದರೆ ಕಾರ್ಮೆನ್ ಕೂಡ ಮಾಡೆಲ್ ಆಗಿದ್ದಾರೆ—ಒಬ್ಬ ರೋಲ್ ಮಾಡೆಲ್. 

ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಜನಿಸಿದ ಕಾರ್ಮೆನ್ ಅವರು 17 ವರ್ಷದವಾಗಿದ್ದಾಗಿನಿಂದ ಪೋರ್ಟೊ ರಿಕೊದಲ್ಲಿ ವಾಸಿಸುತ್ತಿದ್ದಾರೆ. ಅವರು ಇತ್ತೀಚೆಗೆ ಡೊಮಿನಿಕನ್ ರಿಪಬ್ಲಿಕ್‌ಗೆ ತೆರಳಿ ತನ್ನ ಕುಟುಂಬವನ್ನು ಆರಂಭಿಸಿರುವ ತಮ್ಮ ವಯಸ್ಕ ಮಗ ಇಮ್ಯಾನ್ಯುಯಲ್‌ಗೆ ಸಿಂಗಲ್ ಮದರ್ ಆಗಿದ್ದಾರೆ. 

ಕಾರ್ಮೆನ್ ಅವರು ವೃದ್ಧರನ್ನು ಕಾಳಜಿ ಮಾಡುತ್ತಲೂ ಇದ್ದಾರೆ, ಇದು ನಿಸ್ವಾರ್ಥ ಮತ್ತು ರಕ್ಷಣಾತ್ಮಕವಾಗಿರುವಂತೆ ಅವರಿಗೆ ಕರೆ ನೀಡುವ ಪಾತ್ರವಾಗಿದೆ. ಮತ್ತು 2017 ರಲ್ಲಿ ಚಂಡಮಾರುತ ಮರಿಯಾದಿಂದ ಪೋರ್ಟೊ ರಿಕೊ ಸಂಕಷ್ಟಕ್ಕೀಡಾದಾಗ, ಮರುನಿರ್ಮಿಸಲು ಮತ್ತು ಸಾಂತ್ವನ ನೀಡಲು ಕಾರ್ಮೆನ್ ಮತ್ತು ಅವರ ಸಮುದಾಯ ಜೊತೆಗೂಡಿದರು.

ಕಾರ್ಮೆನ್ ತನ್ನ ಸಮುದಾಯದಲ್ಲಿ ಒಗ್ಗೂಡಿಸುವವರು ಎಂದು ಗುರುತಿಸಿಕೊಂಡಿದ್ದಾರೆ. ಒಬ್ಬರು ವೃದ್ಧರು ಅನಾರೋಗ್ಯಕ್ಕೆ ಒಳಗಾದಾಗ, ಆಕೆ ತನ್ನ ನೆರೆಹೊರೆಯವರು ಮತ್ತು ಸ್ವತಃ ತಾನು ಅವರಿಗೆ —ಬೆಡ್‌ಶೀಟ್‌ಗಳು, ಟವೆಲ್‌ಗಳು ಮತ್ತು ಅಂತಹ ಇತರ ಸರಬರಾಜುಗಳನ್ನು ಒದಗಿಸಲು ವ್ಯವಸ್ಥೆ ಮಾಡಿದರು. ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಆಕೆ ಅವರ ಆರೈಕೆಯಲ್ಲೂ ಸಹಾಯ ಮಾಡಿದರು. 

ತನ್ನ ಸಮುದಾಯವು ಹೆಚ್ಚಾಗಿ ಈ ರೀತಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತದೆ ಎಂದು ಆಕೆ ಹೇಳುತ್ತಾರೆ: ವೈದ್ಯರ ಭೇಟಿ ನಿಗದಿಗೆ ನೆರೆಹೊರೆಯವರು ಕರೆದೊಯ್ಯುತ್ತಾರೆ, ಮನೆಯ ರಿಪೇರಿಗಳಿಗೆ ಸಹಾಯ ಮಾಡುತ್ತಾರೆ, ಮತ್ತು ಪರಸ್ಪರರ ಕಾರುಗಳ ರಿಪೇರಿ ಮಾಡಿಕೊಳ್ಳುತ್ತೇವೆ. "ಇಲ್ಲಿ ಸಾಕಷ್ಟು ಸಂವೇದನಾಶೀಲತೆ ಇದೆ," ಕಾರ್ಮೆನ್ ಮುಗುಳುನಗುತ್ತಾರೆ. “ಜನರು ನಿಜವಾಗಿಯೂ ಸಹಾಯ ಮಾಡಲು ಇಷ್ಟಪಡುತ್ತಾರೆ.”

ಮಾರಿಯಾ ಚಂಡಮಾರುತದ ಸಮಯದಲ್ಲಿ, ಕಾರ್ಮೆನ್ ತಾನು ಆರೈಕೆ ಮಾಡುತ್ತಿದ್ದ ವಯಸ್ಸಾದ ಮಹಿಳೆಯೊಂದಿಗೆ ತಂಗಿದ್ದರು, ಆ ಮಹಿಳೆ ಸಾಂತೂರ್ಸೆಯ ಮಿರಾಮಾರ್‌ನಲ್ಲಿರುವ ಅಪಾರ್ಟ್‌ಮೆಂಟ್ ‌ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರು. "ರಸ್ತೆಗಳಿಗೆ ಉರುಳಿದ ಮರಗಳಿಂದ ಅಡ್ಡಿಯಾಗಿದ್ದುದರಿಂದ ಆಕೆಯನ್ನು ನೋಡಿಕೊಳ್ಳುವ ಮತ್ತೊಬ್ಬರು ವ್ಯಕ್ತಿಯು ತನ್ನ ಕೆಲಸಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ, ಹಾಗಾಗಿ ನಾನು ಆಕೆಯೊಂದಿಗೆ ಸತತ ಏಳು ದಿನಗಳವರೆಗೆ ಇರಬೇಕಾಯಿತು" ಎಂದು ಕಾರ್ಮೆನ್ ವಿವರಿಸಿದರು.

ಗ್ಯಾಲನ್‌ಗಳಷ್ಟು ನೀರು ಮತ್ತು ಮರಗಳ ಭಾಗಗಳು ಅವರ ರೋಗಿಯ ಬಾಲ್ಕನಿಗೆ ಬಿದ್ದಿದ್ದರಿಂದ, ಅವರ ಗಮನಕ್ಕೆ ಬಾರದಂತೆ ಎಲ್ಲಾ ಅವಶೇಷಗಳನ್ನು ಸಂಗ್ರಹಿಸಲು ಕಾರ್ಮೆನ್ ತನ್ನ ಕೈಲಾದಷ್ಟು ಪ್ರಯತ್ನಿಸಿದರು. ಹೊರಗೆ ಎದ್ದಿರುವ ಚಂಡಮಾರುತದ ಬಗ್ಗೆ ಅವರಿಗೆ ತಿಳಿಯದಿರುವಂತೆ ನೋಡಿಕೊಳ್ಳಲು ಕಾರ್ಮೆನ್ ನಿರ್ಧರಿಸಿದ್ದರು. ಅಷ್ಟಾದರೂ ಮನೆಯೊಳಗೆ ನುಗ್ಗಿ ಬರುತ್ತಿರುವ ಭಯಂಕರ ಗಾಳಿಯ ಸದ್ದು ಅವರಿಗೆ ಆಗಲೂ ಕೇಳುತ್ತಿತ್ತು.

"ಅಂತಹ ಬಲವಾದ ಚಂಡಮಾರುತವನ್ನು ನಾನು ಎಂದಿಗೂ ನೋಡಿಲ್ಲ" ಎಂದು ಕಾರ್ಮೆನ್ ಹೇಳುತ್ತಾರೆ. "ಅವರು ನಿಮಗೆ ಚಂಡಮಾರುತಗಳ ಬಗ್ಗೆ ಹೇಳುತ್ತಾರೆ, ಆದರೆ ಅದನ್ನು ಅನುಭವಿಸುವುದು ಬೇರೆಯದೇ ಕಥೆಯಾಗಿದೆ. ಅದರ ಬಗ್ಗೆ ಕೇಳುವುದೇ ಬೇರೆ, ನೋಡುವುದೇ ಬೇರೆ."

ಕಾರ್ಮೆನ್ ತನ್ನ ಮನೆಗೆ ಮರಳಿದಾಗ ಮನೆಯು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಕಂಡರು.

ಅವರ ಛಾವಣಿಯು ಬಿದ್ದು, ನೆಲಕ್ಕೆ ಹಾಕಿದ್ದ ಹಲಗೆಗಳು ಪ್ರವಾಹಕ್ಕೆ ಸಿಲುಕಿದ್ದವು, ಮತ್ತು ಅವರು ತಿಂಗಳುಗಳ ಕಾಲ ವಿದ್ಯುತ್ ಇಲ್ಲದೆ ಇದ್ದರು.

ಮಾರಿಯಾ ಚಂಡಮಾರುತವು ಒಂದು ವಾರದೊಳಗೆ ಕಡಿಮೆಯಾಯಿತು, ಆದರೆ ಅಡ್ಡಪರಿಣಾಮಗಳು ತಿಂಗಳುಗಳವರೆಗೂ ಇದ್ದವು ಮತ್ತು ವರ್ಷಾನುಗಟ್ಟಲೆ ಅದರ ಪ್ರಭಾವವಿತ್ತು. ನೆರೆಹೊರೆಯವರು ವಿದ್ಯುತ್ ಕಡಿತವನ್ನು ಅನುಭವಿಸಿದರು, ಮನೆಗಳು ನಾಶವಾದವು ಮತ್ತು 3,000 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡರು. ವಿಪತ್ತಿಗೆ ಪ್ರತಿಕ್ರಿಯೆಯಾಗಿ ಮಾಡುವ ಪ್ರಯತ್ನಗಳನ್ನು ಬೆಂಬಲಿಸುವುದರಲ್ಲಿ ಮತ್ತು ದ್ವೀಪವನ್ನು ಪುನರ್ನಿರ್ಮಾಣ ಮಾಡುವುದನ್ನು ಮುಂದುವರಿಸುವುದರಲ್ಲಿ ಮೂಲ ಸಂಸ್ಥೆಗಳು ಮುಂಚೂಣಿಯಲ್ಲಿದ್ದವು.

ಪರಸ್ಪರ ನೆರವು—ಸಂಪನ್ಮೂಲಗಳು, ಹಣ ಮತ್ತು ಸಮಯವನ್ನು ಹಂಚಿಕೊಳ್ಳುವ ಮೂಲಕ ಜನರು ಪರಸ್ಪರ ಬೆಂಬಲಿಸುವ ಸಮುದಾಯ ನೇತೃತ್ವದ ವ್ಯವಸ್ಥೆಯು ಪೋರ್ಟೊ ರಿಕೊದ ಚೇತರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ವಿಪತ್ತಿನ ಸ್ಥಿತಿಯನ್ನು ಮೀರಿ ಚೇತರಿಕೆಯ ಮೇಲೆ ಕೇಂದ್ರೀಕರಿಸಿದ ಸಾಮಾಜದ ಪ್ರಭಾವೀ ಸಂಸ್ಥೆಯಾದ Airbnb.org ಪಾಲುದಾರರಾದ SBPಯಂತಹ ಲಾಭರಹಿತ ಸಂಸ್ಥೆಗಳಲ್ಲಿ ಇದು ಇಂದಿಗೂ ಕಂಡುಬರುತ್ತದೆ.

SBP ಎಂಬುದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಪ್ರಮುಖ ವಿಪತ್ತುಗಳ ನಂತರ ಮನೆಗಳನ್ನು ಪುನರ್ನಿರ್ಮಿಸುತ್ತದೆ. ಚಂಡಮಾರುತದ ನಂತರ ಕಾರ್ಯಾಚರಣೆ ತಂಡಗಳನ್ನು ಕಳುಹಿಸಲಾಗಿತ್ತು, ಆದರೆ ಅಧಿಕೃತ ಪೋರ್ಟೊ ರಿಕೊ ಅಧ್ಯಾಯವು ಜುಲೈ 2018ರಲ್ಲಿ ಪ್ರಾರಂಭವಾಯಿತು. ಮನೆಗಳ ರಿಪೇರಿ ನಡೆಯುತ್ತಿರುವಾಗ ಜನರಿಗೆ ಉಳಿಯಲು ಸ್ಥಳವಿದೆ ಎಂದು ಖಚಿತಪಡಿಸಿಕೊಳ್ಳಲು SBP ಮತ್ತು Airbnb.org ಪಾಲುದಾರರಾಗಿ ಜೊತೆಯಾಗಿದ್ದಾರೆ.

"ನಾವು ಚಂಡಮಾರುತದ ಅಪಾಯವಿರುವ ವಲಯದಲ್ಲಿದ್ದೇವೆ, ಆದ್ದರಿಂದ ನಾವು ಈ ಹಿಂದೆ ಬಿರುಗಾಳಿಗಳು ಮತ್ತು ಚಂಡಮಾರುತಗಳನ್ನು ಎದುರಿಸಿದ್ದೇವೆ. ಆದರೆ ಮಾರಿಯಾ ಉಂಟುಮಾಡಿದಷ್ಟು ಅಪಾಯ ಎದುರಿಸಿಲ್ಲ," ಎಂದು SBP ಪೋರ್ಟೊ ರಿಕೊ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಮೆನ್ ಸಮುದಾಯದ ಸದಸ್ಯ ಎಡ್ಗಾರ್ಡೊ ಮಾಲ್ಡೊನಾಡೊ ಹೇಳುತ್ತಾರೆ.

ಕಾರ್ಮೆನ್‌ ಅವರ ನೆರೆಹೊರೆಯು ಪೋರ್ಟೊ ರಿಕೊದಲ್ಲಿ SBP ಸಹಾಯ ಮಾಡಿದ ಮೊದಲ ಸಮುದಾಯವಾಗಿದೆ ಮತ್ತು ಕಾರ್ಮೆನ್‌ ಅವರ ಮನೆ 2019 ರಲ್ಲಿ ಎಡ್ಗಾರ್ಡೊ ಅವರ ಮೊದಲ ನಿಯೋಜನೆಯಾಗಿತ್ತು ಎಡ್ಗಾರ್ಡೊ ಮತ್ತು SBP ಗುತ್ತಿಗೆದಾರರು ಕೆಲಸ ಮಾಡಲು ಪ್ರಾರಂಭಿಸುವವರೆಗೂ ಕಾರ್ಮೆನ್ ಅವರ ಮನೆಯಲ್ಲಿ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಮರವು ಕೊಳೆಯುತ್ತಿತ್ತು ಮತ್ತು ವಿದ್ಯುತ್ ವೈರಿಂಗ್ ಮತ್ತು ಛಾವಣಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡರು.

ನಮ್ಮ ಸಮುದಾಯದ ಔದಾರ್ಯದ ಮೂಲಕ, ಅದೇ ನೆರೆಹೊರೆಯಲ್ಲಿ ಆರಾಮದಾಯಕ ಸ್ಥಳ ಒದಗಿಸಿದ ಏಂಜೆಲ್ ಎಂಬ ಹೆಸರಿನ ಹೋಸ್ಟ್‌ನೊಂದಿಗೆ ಕಾರ್ಮೆನ್ ಮತ್ತು ಆಕೆಯ ನಾಯಿ ಉಳಿದುಕೊಳ್ಳಲು ಸಾಧ್ಯವಾಯಿತು.

"ಕಾರ್ಮೆನ್‌ಗೆ ಅವರ (ವಾಸ್ತವ್ಯ) ಅದೇ ಸಮುದಾಯದಲ್ಲಿದೆ ಎಂದು ತಿಳಿದು ತುಂಬಾ ಸಂತೋಷವಾಯಿತು ಎಂದು ನಾನು ಭಾವಿಸುತ್ತೇನೆ," ಎಂದು ಎಡ್ಗಾರ್ಡೊ ಹೇಳುತ್ತಾರೆ. ಸ್ಥಳ ಹತ್ತಿರದಲ್ಲೇ ಇದ್ದುದರಿಂದ ಕಾರ್ಮೆನ್ ತಮ್ಮ ನಾಯಿಗೆ ಆಹಾರ ಒದಗಿಸಲು ಪ್ರತಿದಿನ ಅದನ್ನು ಮನೆಗೆ ಕರೆತರಲು ಅವಕಾಶ ಮಾಡಿಕೊಟ್ಟಿತು ಮತ್ತು ಪುನರ್ನಿರ್ಮಾಣದ ಕೊನೆಯ ಹಂತದಲ್ಲಿ, ಸ್ವಯಂಸೇವಕರು ಮತ್ತು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಕಾರ್ಮೆನ್ ತಮ್ಮ ಮನೆಗೆ ಬಣ್ಣ ಬಳಿಯಲು ಸಹಾಯ ಮಾಡಿದರು.

"ನನ್ನ ಮನೆ ನಿರ್ಜನ ಕಟ್ಟಡದಂತಿತ್ತು," ಎಂದು ಕಾರ್ಮೆನ್ ಹೇಳುತ್ತಾರೆ. "ಈಗ ಮನೆ ಚೆನ್ನಾಗಿ ಕಾಣುತ್ತದೆ ಮತ್ತು ಸುರಕ್ಷಿತವಾಗಿದೆ. ನನ್ನ ನೆರೆಹೊರೆಯವರು ಸಹ ಸ್ವಲ್ಪ ಸಹಾಯವನ್ನು (ಇತರ ಸಂಸ್ಥೆಗಳಿಂದ) ಪಡೆದಿದ್ದಾರೆ. ಆಶೀರ್ವಾದವು ಸಮುದಾಯದಾದ್ಯಂತ ಹರಡಿದೆ ಎಂದು ನಾನು ಭಾವಿಸುತ್ತೇನೆ."

ಕಾರ್ಮೆನ್ ತಮ್ಮ ವಾಸ್ತವ್ಯವನ್ನು ಪ್ರೀತಿ ಮತ್ತು ಸಂತೋಷದಿಂದ ನೆನಪಿಸಿಕೊಳ್ಳುತ್ತಾರೆ. ಇತರರ ಆರೈಕೆ ಮಾಡಿ ಅನುಭವ ಹೊಂದಿರುವ ಆರೈಕೆದಾರರಾಗಿ, ಇದು ಪಾತ್ರಗಳನ್ನು ಅದಲುಬದಲುಗೊಳಿಸುವ ಕ್ಷಣವಾಗಿದೆ. ಮನೆಯಿಂದ ಹೆಚ್ಚು ದೂರವಿರದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಆಕೆಗೆ ಇಷ್ಟವಾಗಿತ್ತು. "ಓಹ್, ಮತ್ತು ಹವಾನಿಯಂತ್ರಣ ಕೂಡ ಖುಷಿ ನೀಡಿತು," ಎಂದು ಹೇಳಿ ಕಾರ್ಮೆನ್ ನಗುತ್ತಾರೆ.

ಕಾರ್ಮೆನ್ ತಮ್ಮ ವ್ಯಕ್ತಿತ್ವ , ಸಮುದಾಯ ಮತ್ತು ಮನೆಯ ಸಾಮರ್ಥ್ಯಗಳ ಬಗ್ಗೆ ಯೋಚಿಸುತ್ತಿರುವಂತೆಯೇ ತಮ್ಮನ್ನು ತಾವೇ ಮರಳಿ ಪ್ರಕೃತಿಯೆಡೆಗೆ ಸೆಳೆದುಕೊಂಡರು. "ನಾನು ಕಠಿಣ ಹೋರಾಟಗಳು ಮತ್ತು ತೊಂದರೆಗಳನ್ನು ಎದುರಿಸಿದ್ದೇನೆ. ಆದರೆ ಏನೇ ಇದ್ದರೂ, ನಾನು ವೃಶ್ಚಿಕ ರಾಶಿಯವಳು," ಎಂದು ಅವರು ಹೇಳುತ್ತಾರೆ. "ರಾಶಿಚಕ್ರದಲ್ಲಿ ಹಾರುವ ಹಕ್ಕಿ, ತೆವಳುವ ಸರ್ಪ ಮತ್ತು ಚೇಳು, ಇವು ಮೂರನ್ನೂ ಹೊಂದಿರುವವರು ನಾವು ಮಾತ್ರ. ಭೂಗತವಾಗಿಯೂ ಸಹ ನಾವು ಬದುಕುಳಿಯುತ್ತೇವೆ."

ವಿಶೇಷ ಆಕರ್ಷಣೆಗಳು

  • ಮಾರಿಯಾ ಚಂಡಮಾರುತವು ಪೋರ್ಟೊ ರಿಕೊಗೆ ಅಪ್ಪಳಿಸಿದಾಗ, ಚಂಡಮಾರುತವು ಒಂದು ವಾರದ ನಂತರ ಕಡಿಮೆಯಾಯಿತು ಆದರೆ ಪರಿಣಾಮವು ವರ್ಷಗಳವರೆಗೆ ಮುಂದುವರೆಯಿತು

  • ಮಾರಿಯಾ ತನ್ನ ಮನೆಗೆ ಹಾನಿ ಮಾಡಿದಾಗ, ಸಮುದಾಯ ಸಂಘಟಕಿ ಮತ್ತು ಆರೈಕೆದಾರೆ ಕಾರ್ಮೆನ್, ನಿರಾಶ್ರಿತರಾಗಬೇಕಾಯಿತು

  • Airbnb.org ಮತ್ತು SBP ನಡುವಿನ ಪಾಲುದಾರಿಕೆಯ ಮೂಲಕ, ಕಾರ್ಮೆನ್‌ರ ಮನೆಯನ್ನು ಪುನರ್ನಿರ್ಮಿಸುವಾಗ ಆಕೆ ಹತ್ತಿರದ Airbnb ಯಲ್ಲಿ ಉಳಿದುಕೊಂಡರು

Airbnb
ಆಗ 24, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ