ನಿಮ್ಮ ಸ್ಥಳದ ಬಗ್ಗೆ ಸುರಕ್ಷತಾ ಮಾಹಿತಿಯನ್ನು ಹಂಚಿಕೊಳ್ಳಿ
ನಿಮ್ಮ ಲಿಸ್ಟಿಂಗ್ಅನ್ನು ಪ್ರಕಟಿಸಲು ನೀವು ಬಹುತೇಕ ಸಿದ್ಧರಾಗಿದ್ದೀರಿ. ಮೊದಲು ಮಾಡಬೇಕಾದ ಎರಡು ವಿಷಯಗಳಿವೆ.
ಪ್ರಮುಖ ಸುರಕ್ಷತಾ ಮಾಹಿತಿಯನ್ನು ಬಹಿರಂಗಪಡಿಸಿ. ವಾಸ್ತವ್ಯ ಹೂಡಬಹುದಾದ ಸ್ಥಳವನ್ನು ಹುಡುಕುತ್ತಿರುವಾಗ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಗೆಸ್ಟ್‌ಗಳಿಗೆ ಸಹಾಯ ಮಾಡುತ್ತದೆ.
- ನಿಮ್ಮ ಲಿಸ್ಟಿಂಗ್‌ಗೆ ನೀವು ಹೊಂದಿರುವ ಯಾವುದೇ ಅನುಮೋದಿತ ಸುರಕ್ಷತಾ ಸಾಧನಗಳನ್ನು ಸೇರಿಸಿ.
- ಬಾಹ್ಯ ಸುರಕ್ಷಾ ಕ್ಯಾಮರಾಗಳು ಮತ್ತು ಶಬ್ದ ಡೆಸಿಬಲ್ ಮಾನಿಟರ್‌ಗಳನ್ನು ಸರಿಯಾಗಿ ಬಹಿರಂಗಪಡಿಸುವವರೆಗೆ ಮತ್ತು ನಮ್ಮ ನೀತಿಯನ್ನುಅನುಸರಿಸುವವರೆಗೆ ಅವುಗಳನ್ನು ಅನುಮತಿಸಲಾಗುತ್ತದೆ. ಒಳಾಂಗಣ ಸ್ಥಳಗಳ ಮೇಲೆ ನಿಗಾ ಇರಿಸುವ ಸುರಕ್ಷಾ ಕ್ಯಾಮರಾಗಳನ್ನು ಆಫ್ ಮಾಡಿದ್ದರೂ ಸಹ ಅನುಮತಿಸಲಾಗುವುದಿಲ್ಲ ಮತ್ತು ಎಲ್ಲಾ ಗುಪ್ತ ಸುರಕ್ಷಾ ಕ್ಯಾಮರಾಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪ್ರಮುಖ ಕಾನೂನುಗಳು ಮತ್ತು ನೀತಿಗಳನ್ನು ಪರಿಶೀಲಿಸಿ. ನಂತರ ಅಚ್ಚರಿಗಳನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
- ಹೋಸ್ಟಿಂಗ್ಗಾಗಿ ನಿಮ್ಮ ಸ್ಥಳೀಯ ಕಾನೂನುಗಳನ್ನು ಅನುಸರಿಸಿ. ಪ್ರಾದೇಶಿಕ ಸಂಪನ್ಮೂಲಗಳಿಗಾಗಿ ನೀವು ನಮ್ಮ ಜವಾಬ್ದಾರಿಯುತ ಹೋಸ್ಟಿಂಗ್ ಪುಟವನ್ನು ಸಂಪರ್ಕಿಸಬಹುದು.
- ತಾರತಮ್ಯರಹಿತ ಮತ್ತುಗೆಸ್ಟ್ ಮತ್ತು ಹೋಸ್ಟ್ ಶುಲ್ಕಗಳ ಬಗ್ಗೆ Airbnbನ ನೀತಿಗಳನ್ನು ಪರಿಶೀಲಿಸಿ.
ನೀವು ಸಿದ್ಧರಾದಾಗ, ನಿಮ್ಮ ಲಿಸ್ಟಿಂಗ್ ಅನ್ನು ಪರಿಶೀಲಿಸಲು ಮತ್ತು ಪ್ರಕಟಿಸಲು Airbnb ಸೆಟಪ್‌ನಲ್ಲಿ ಮುಂದೆ ಟ್ಯಾಪ್ ಮಾಡಿ.
ನೀವು ಪ್ರಕಟಿಸಿದ ನಂತರ, ಗೆಸ್ಟ್‌ಗಳು ನಿಮ್ಮ ಲಿಸ್ಟಿಂಗ್ ಅನ್ನು 24 ಗಂಟೆಗಳ ಒಳಗೆ ಹುಡುಕಾಟ ಫಲಿತಾಂಶಗಳಲ್ಲಿ ಕಾಣಬಹುದು. ನಿಮ್ಮ ಕ್ಯಾಲೆಂಡರ್ ಸಂಪೂರ್ಣವಾಗಿ ತೆರೆದಿರುತ್ತದೆ, ಆದ್ದರಿಂದ ನಿಮ್ಮ ಲಭ್ಯತೆಯನ್ನು ತಕ್ಷಣವೇ ಅಪ್‌ಡೇಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಸೌಲಭ್ಯಗಳನ್ನು ಸೇರಿಸುವುದು ಮತ್ತು ನಿಮ್ಮ ರದ್ದತಿ ನೀತಿಯನ್ನು ಪರಿಶೀಲಿಸುವುದು ಸಹ ಮುಖ್ಯವಾಗಿದೆ.