ಸ್ವಚ್ಛಗೊಳಿಸುವಿಕೆಯ ಶುಲ್ಕಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳು
ಶುಚಿಗೊಳಿಸುವಿಕೆಯ ಶುಲ್ಕವನ್ನು ಸೇರಿಸಬೇಕೆ ಎಂದು ನಿರ್ಧರಿಸುವುದು ನಿಮ್ಮ ಬೆಲೆ ತಂತ್ರದ ಪ್ರಮುಖ ಭಾಗವಾಗಿದೆ. ಶುಚಿಗೊಳಿಸುವಿಕೆಯ ವೆಚ್ಚಗಳನ್ನು ಮರುಪಡೆಯಲು ಇದು ಸಹಾಯಕವಾದ ಮಾರ್ಗವಾಗಿದೆ ಎಂದು ಕೆಲವು ಹೋಸ್ಟ್‌ಗಳು ಕಂಡುಕೊಂಡಿದ್ದಾರೆ. ಆದರೆ ಶುಲ್ಕ ತುಂಬಾ ಹೆಚ್ಚ್ಚಾಗಿದ್ದರೆ, ಅದು ನಿಮ್ಮ ಮನೆಯನ್ನು ಬುಕ್ ಮಾಡುವುದರಿಂದ ಗೆಸ್ಟ್‌ಗಳನ್ನು ನಿರುತ್ಸಾಹಗೊಳಿಸಬಹುದು ಮತ್ತು ನಿಮ್ಮ ಗಳಿಕೆಯನ್ನು ಕಡಿಮೆ ಮಾಡಬಹುದು.
ಶುಚಿಗೊಳಿಸುವಿಕೆ ವೆಚ್ಚಗಳು ಮತ್ತು ಬುಕ್ಕಿಂಗ್ ಸಾಮರ್ಥ್ಯದ ಬಗ್ಗೆ ನೀವು ಯೋಚಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
ಗೆಸ್ಟ್‌ಗಳನ್ನು ಆಕರ್ಷಿಸುವತ್ತ ಗಮನಹರಿಸಿ
ಎಲ್ಲಕ್ಕಿಂತ ಹೆಚ್ಚಾಗಿ ಸ್ವಚ್ಛವಾದ ಸ್ಥಳ ಮತ್ತು ನ್ಯಾಯಯುತ ಬೆಲೆಗೆ ಅವರು ಮಹತ್ವ ನೀಡುತ್ತಾರೆ ಎಂದು ಗೆಸ್ಟ್‌ಗಳು ನಮಗೆ ಹೇಳುತ್ತಾರೆ. ಗೆಸ್ಟ್‌ಗಳು 5 ಸ್ಟಾರ್‌ಗಳಿಗಿಂತ ಕಡಿಮೆ ನೀಡಲು ಅತ್ಯಂತ ಸಾಮಾನ್ಯ ಕಾರಣವೆಂದರೆ ಸ್ವಚ್ಛತೆಯ ಕೊರತೆ. ನಿಮ್ಮ ಲಿಸ್ಟಿಂಗ್ ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಹೊಂದಿದ್ದರೆ, ಗೆಸ್ಟ್‌ಗಳು ಅದನ್ನು ಹೆಚ್ಚಿನ ಗುಣಮಟ್ಟದ ಸ್ವಚ್ಛತಾ ಮಾನದಂಡಕ್ಕೆ ಹೋಲಿಸುತ್ತಾರೆ ಮತ್ತು ಅವರು ತಮ್ಮ ವಾಸ್ತವ್ಯವನ್ನು ವಿಮರ್ಶಿಸುವಾಗ ಅದು ಹೆಚ್ಚಿನ ಪರಿಶೀಲನೆಗೆ ಕಾರಣವಾಗಬಹುದು ಎಂದು ನಮ್ಮ ಸಂಶೋಧನೆಯು ತೋರಿಸುತ್ತದೆ.
ನೀವು ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಸೇರಿಸಲು ಆಯ್ಕೆ ಮಾಡಿದರೆ, ಇದು ವಾಸ್ತವ್ಯದ ಒಟ್ಟು ಬೆಲೆಯನ್ನು ಹೆಚ್ಚಿಸುತ್ತದೆ ಮತ್ತು ಚೆಕ್‌ಔಟ್‌ನಲ್ಲಿ ಪ್ರತ್ಯೇಕ ಶುಲ್ಕವಾಗಿ ಗೆಸ್ಟ್‌ಗಳಿಗೆ ಗೋಚರಿಸುತ್ತದೆ. ಹೆಚ್ಚಿನ ಸ್ವಚ್ಛಗೊಳಿಸುವಿಕೆಯ ಶುಲ್ಕವು ನಿಮ್ಮೊಂದಿಗೆ ಬುಕಿಂಗ್ ಅನ್ನು ಮರುಪರಿಶೀಲಿಸುವಂತೆ ಮಾಡುತ್ತದೆ. ಗೆಸ್ಟ್‌ಗಳು ಒಟ್ಟು ಬೆಲೆ ಪ್ರದರ್ಶನ ವೈಶಿಷ್ಟ್ಯವನ್ನು ಆನ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ, ಇದು ಹುಡುಕಾಟ ಫಲಿತಾಂಶಗಳಲ್ಲಿ ಎಲ್ಲಾ ಶುಲ್ಕಗಳನ್ನು ಒಳಗೊಂಡಂತೆ ಲಿಸ್ಟಿಂಗ್‌ಗಳ ಒಟ್ಟು ವೆಚ್ಚವನ್ನು ವೀಕ್ಷಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.
ನಿಮ್ಮ ಬೆಲೆಯನ್ನು ಸ್ಪರ್ಧಾತ್ಮಕವಾಗಿರಿಸುವುದರಿಂದ ನಿಮ್ಮ ಲಿಸ್ಟಿಂಗ್ ಎದ್ದು ಕಾಣುವಂತೆ ಮಾಡಲು ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ. Airbnb ಯ ಅಲ್ಗಾರಿದಮ್ ಹತ್ತಿರದ ಒಂದೇ ರೀತಿಯ ಲಿಸ್ಟಿಂಗ್‌ಗಳಿಗೆ ಹೋಲಿಸಿದರೆ ಲಿಸ್ಟಿಂಗ್‌ನ ಒಟ್ಟು ಬೆಲೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ.
ವಿವಿಧ ದಿನಾಂಕಗಳು ಮತ್ತು ಟ್ರಿಪ್‌ಗಳ ಪ್ರಕಾರಗಳಿಗೆ ಒಟ್ಟು ಬೆಲೆಯನ್ನು ನೋಡಲು ಮತ್ತು ಹತ್ತಿರದ ಅದೇ ರೀತಿಯ ಲಿಸ್ಟಿಂಗ್‌ಗಳಿಗೆ ಹೋಲಿಸಲು ನಿಮ್ಮ ಕ್ಯಾಲೆಂಡರ್‌ನಲ್ಲಿರುವ ಬೆಲೆ ನಿಗದಿ ಟೂಲ್‌ಗಳನ್ನುನೀವು ಬಳಸಬಹುದು.
ನಿಮ್ಮ ಬೆಲೆಯನ್ನು ಸ್ಪರ್ಧಾತ್ಮಕವಾಗಿರಿಸಿಕೊಳ್ಳಿ
ನಿಮಗೆ ಸೂಕ್ತವಾದ ಸ್ವಚ್ಛಗೊಳಿಸುವ ವ್ಯವಸ್ಥೆಯನ್ನು ನೀವು ಕಂಡುಕೊಂಡ ನಂತರ, ನಿಮ್ಮ ವೆಚ್ಚಗಳನ್ನು ಸೇರಿಸಿ ಮತ್ತು ನಿಖರವಾದ ಶುಚಿಗೊಳಿಸುವಿಕೆ ಬಜೆಟ್ ಅನ್ನು ಹೊಂದಿಸಿ. ವೆಚ್ಚಗಳನ್ನು ಮೌಲ್ಯಮಾಪನ ಮಾಡುವಾಗ ಪರಿಗಣಿಸಲು ಕೆಲವು ಸಲಹೆಗಳು ಇಲ್ಲಿವೆ:
- ದರಗಳನ್ನು ಹೋಲಿಸಿ. ನೀವು ವೃತ್ತಿಪರ ಗೃಹ ಸಹಾಯಕರನ್ನು ನೇಮಿಸಿಕೊಳ್ಳುತ್ತಿದ್ದರೆ, ಅವರ ಶುಲ್ಕವನ್ನು ಇತರ ಕಂಪನಿಗಳೊಂದಿಗೆ ಪರಿಶೀಲಿಸಿ, ಅತ್ಯುತ್ತಮ ದರವನ್ನು ಕಂಡುಕೊಳ್ಳಿ ಮತ್ತು ಇನ್ನೂ ನ್ಯಾಯಯುತ ವೇತನವನ್ನು ಪಾವತಿಸಿ.
- ನಿಮ್ಮ ಸ್ವಚ್ಛಗೊಳಿಸುವವರೊಂದಿಗೆ ಮಾತುಕತೆ ನಡೆಸಿ. ಹೆಚ್ಚು ಸ್ಥಿರತೆಗಾಗಿ ಅವರು ಕಡಿಮೆ ಹಣವನ್ನು ಸ್ವೀಕರಿಸಲು ಒಪ್ಪುತ್ತಾರೆಯೇ ಎಂದು ನಿಮ್ಮ ಗೃಹ ಸಹಾಯಕರನ್ನು ಕೇಳುವುದನ್ನು ಪರಿಗಣಿಸಿ. "ನಾವು ಕೇವಲ ಒಂದು ಅಥವಾ ಎರಡು ಬುಕಿಂಗ್‌ಗಳನ್ನು ಹೊಂದಿದ್ದರೂ ಸಹ, ಕಡಿಮೆ ಬೇಡಿಕೆಯ ಋತುವಿನಲ್ಲಿ ನಾವು ಮಾಸಿಕ ಖಾತರಿಪಡಿಸಿದ ಆದಾಯವನ್ನು ನೀಡಿದ್ದೇವೆ" ಎಂದು ಹೋಸ್ಟ್ ಲೋರ್ನಾ ಹೇಳುತ್ತಾರೆ. "ಇದನ್ನು ಸರಿಹೊಂದಿಸಲು, ಹೆಚ್ಚು ಬೇಡಿಕೆಯ ಋತುವಿನಲ್ಲಿ ನಾವು ಸ್ವಲ್ಪ ಕಡಿಮೆ ಪಾವತಿಸಿದ್ದೇವೆ."
- ಸಂಗ್ರಹಿಸಿ. ನೀವು ಹೆಚ್ಚಾಗಿ ಬಳಸುವ ಸ್ವಚ್ಛತಾ ಸರಬರಾಜುಗಳ ಬಗ್ಗೆ ಯೋಚಿಸಿ. ಈ ಸರಬರಾಜುಗಳನ್ನು ದೊಡ್ಡ ಪ್ರಮಾಣದಲ್ಲಿ ಆರ್ಡರ್ ಮಾಡುವುದು ಕಾಲಾನಂತರದಲ್ಲಿ ಕಡಿಮೆ ವೆಚ್ಚವಾಗಿ ಉಳಿತಾಯಕ್ಕೆ ಕಾರಣವಾಗುತ್ತದೆ.
ನಿಮ್ಮ ಶುಚಿಗೊಳಿಸುವಿಕೆ ವೆಚ್ಚಗಳನ್ನು ನೀವು ಹೇಗೆ ಭರಿಸುತ್ತೀರಿ ಎಂಬುದನ್ನು ನಿರ್ಧರಿಸಿ ಮತ್ತು ನಿಮ್ಮ ಮನೆಯ ಬೆಲೆಯನ್ನು ಸ್ಪರ್ಧಾತ್ಮಕವಾಗಿರಿಸಿಕೊಳ್ಳಿ. ಪರಿಗಣಿಸಿ:
- ಸಂಭಾವ್ಯ ತೆರಿಗೆ ಕಡಿತಗಳನ್ನು ಅನ್ವೇಷಿಸುವುದು. ನಿಮ್ಮ ಆದಾಯ ತೆರಿಗೆಗಳನ್ನು ನೀವು ಸಲ್ಲಿಸುವಾಗ ಶುಚಿಗೊಳಿಸುವಿಕೆ ವೆಚ್ಚಗಳು ಸೇರಿದಂತೆ ಕೆಲವು ಹೋಸ್ಟಿಂಗ್ ವೆಚ್ಚಗಳನ್ನು ನೀವು ಕಡಿತ ಮಾಡಬಹುದು. ತೆರಿಗೆ ವೃತ್ತಿಪರರು ಹೆಚ್ಚಿನ ವಿವರಗಳನ್ನು ಅಥವಾ ಸಹಾಯವನ್ನು ಒದಗಿಸಬಹುದು.
- ನಿಮ್ಮ ರಾತ್ರಿಯ ಬೆಲೆಯಲ್ಲಿ ವೆಚ್ಚಗಳನ್ನು ಸೇರಿಸುವುದು. ನಿಮ್ಮ ಇತರ ನಿರ್ವಹಣಾ ವೆಚ್ಚಗಳೊಂದಿಗೆ ಶುಚಿಗೊಳಿಸುವಿಕೆ ಸರಬರಾಜು, ಲಾಂಡ್ರಿ ಸೇವೆಗಳು ಮತ್ತು ಗೃಹ ಸಹಾಯಕರಿಗೆ ನೀವು ಎಷ್ಟು ಪಾವತಿಸುತ್ತೀರಿ ಎಂಬುದನ್ನು ಲೆಕ್ಕಹಾಕಿ. ನಿಮ್ಮ ರಾತ್ರಿಯ ಬೆಲೆಯನ್ನು ನಿಗದಿಪಡಿಸಲು ಸಹಾಯ ಮಾಡಲು ಇದು ಸ್ಪಷ್ಟ ಚಿತ್ರಣವನ್ನು ನಿಮಗೆ ನೀಡುತ್ತದೆ.
- ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಸೇರಿಸುವುದು. ಇದನ್ನು ಹೆಚ್ಚುವರಿ ಹಣ ಗಳಿಸಲು ಅಲ್ಲ, ಸ್ವಚ್ಛಗೊಳಿಸುವ ಸರಬರಾಜುಗಳು ಅಥವಾ ವೃತ್ತಿಪರ ಗೃಹ ಸಹಾಯಕ ಸೇವೆಗೆ
ಸಮಂಜಸವಾದ ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ನಿಗದಿಪಡಿಸಿ
ನೀವು ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಸೇರಿಸಲು ನಿರ್ಧರಿಸಿದರೆ, ನಿಮಗೆ ಕೆಲವು ಆಯ್ಕೆಗಳಿವೆ:
- ಸಾಮಾನ್ಯ ಶುಲ್ಕವನ್ನು ಹೊಂದಿಸಿ. ಎಲ್ಲಾ ಗೆಸ್ಟ್‌ಗಳಿಗೆ ಅವರ ವಾಸ್ತವ್ಯದ ಅವಧಿಯನ್ನು ಪರಿಗಣಿಸದೆ ಸಮಾನ ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಸೇರಿಸಿ. ದೀರ್ಘಾವಧಿಯ ವಾಸ್ತವ್ಯಗಳನ್ನು ಒದಗಿಸುವ ಹೋಸ್ಟ್‌ಗಳಿಗೆ ಇದು ಒಳ್ಳೆಯ ಕಾರ್ಯತಂತ್ರವಾಗಿರಬಹುದು.
- ನಿಮ್ಮ ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಬದಲಾಯಿಸುತ್ತಿರಿ. ಕೇವಲ ಒಂದು ಅಥವಾ ಎರಡು ರಾತ್ರಿಗಳ ಅಲ್ಪಾವಧಿಯ ವಾಸ್ತವ್ಯವನ್ನು ಬುಕ್ ಮಾಡುವ ಗೆಸ್ಟ್‌ಗಳನ್ನು ಆಕರ್ಷಿಸಲು ಕಡಿಮೆ ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಹೊಂದಿಸಿ. ಎಲ್ಲಾ ಇತರ ವಾಸ್ತವ್ಯಗಳಿಗೆ ನಿಮ್ಮ ಸಾಮಾನ್ಯ ಸ್ವಚ್ಛತಾ ಶುಲ್ಕವನ್ನು ನೀವು ಉಳಿಸಿಕೊಳ್ಳಬಹುದು.
ನೀವು ಹೋಸ್ಟಿಂಗ್‌ಗೆ ಹೊಸಬರಾಗಿದ್ದರೆ, ಬುಕಿಂಗ್‌ಗಳನ್ನು ಪ್ರೋತ್ಸಾಹಿಸಲು ನೀವು ಕೆಲವು ಉತ್ತಮ ವಿಮರ್ಶೆಗಳು ಬಂದ ನಂತರವೇ ಶುಚಿಗೊಳಿಸುವ ಶುಲ್ಕ ಸೇರಿಸುವುದನ್ನು ಪರಿಗಣಿಸಿ.
ನೀವು ಗೆಸ್ಟ್‌ಗಳನ್ನು ಹೋಸ್ಟ್ ಮಾಡಿದ ನಂತರ ನಿಮ್ಮ ಹೌಸ್‌ಕೀಪಿಂಗ್‌ನ ಕೆಲಸಕ್ಕೆ ಸಾಮಾನ್ಯವಾಗಿ ನಿಮ್ಮ ಶುಚಿಗೊಳಿಸುವಿಕೆಯ ಶುಲ್ಕ ಪಾವತಿಸುತ್ತದೆ. ಅನಿರೀಕ್ಷಿತ ಶುಚಿಗೊಳಿಸುವಿಕೆಯ ವೆಚ್ಚಗಳಿಗಾಗಿ, ಉದಾಹರಣೆಗೆ, ಗೆಸ್ಟ್‌ಗಳಿಂದ ಉಂಟಾಗಿರುವ ಕಲೆಗಳು ಅಥವಾ ಹೊಗೆಯ ವಾಸನೆಯನ್ನು ತೆಗೆದುಹಾಕಲು, ನೀವು ಹೋಸ್ಟ್‌ಗಳಿಗಾಗಿ AirCover ನ ಭಾಗವಾದ ಹೋಸ್ಟ್ ಹಾನಿ ರಕ್ಷಣೆಯಡಿಯಲ್ಲಿ $3 ದಶಲಕ್ಷ USD ವರೆಗೆ ಹಣ ಮರುಪಾವತಿಗೆ ಅರ್ಹರಾಗಬಹುದು.
ಹೋಸ್ಟ್‌ಗಳಿಗಾಗಿ AirCover ನ ಹೋಸ್ಟ್ ಹಾನಿ ರಕ್ಷಣೆ, ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆಗಳು ಜಪಾನ್‌ನಲ್ಲಿ ಮನೆಗಳು ಅಥವಾ ಅನುಭವಗಳನ್ನು ಒದಗಿಸುವ ಹೋಸ್ಟ್‌ಗಳನ್ನು ಅಥವಾ Airbnb Travel LLC ಮೂಲಕ ವಾಸ್ತವ್ಯಗಳನ್ನು ಒದಗಿಸುವ ಹೋಸ್ಟ್‌ಗಳನ್ನು ಒಳಗೊಂಡಿಲ್ಲ. ಜಪಾನ್‌ನಲ್ಲಿ ಜಪಾನ್ ಹೋಸ್ಟ್ ವಿಮೆ ಮತ್ತು ಜಪಾನ್ ಅನುಭವ ರಕ್ಷಣೆ ವಿಮೆ ಅನ್ವಯವಾಗುತ್ತವೆ. ಎಲ್ಲಾ ಕವರೇಜ್ ಮಿತಿಗಳನ್ನು USD ಯಲ್ಲಿ ತೋರಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ.
ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆಯನ್ನು ಥರ್ಡ್-ಪಾರ್ಟಿ ವಿಮಾದಾರರು ಒದಗಿಸುತ್ತಾರೆ.
ನೀವು UK ಯಲ್ಲಿ ಮನೆಗಳು, ಅನುಭವಗಳು ಅಥವಾ ಸೇವೆಗಳನ್ನು ಹೋಸ್ಟ್ ಮಾಡುತ್ತಿದ್ದರೆ, ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆ ಪಾಲಿಸಿಗಳು Zurich Insurance Company Ltd. ಮೂಲಕ ಅಂಡರ್‌ರೈಟ್ ಮಾಡಲ್ಪಡುತ್ತವೆ ಮತ್ತು Financial Conduct Authority ಇಂದ ಅಧಿಕೃತ ಮತ್ತು ನಿಯಂತ್ರಿಸಲ್ಪಡುವ Aon UK Limited ನ ನಿಯೋಜಿತ ಪ್ರತಿನಿಧಿಯಾದ Airbnb UK Services Limited ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ UK ಯ ಹೋಸ್ಟ್‌ಗಳಿಗೆ ವ್ಯವಸ್ಥೆ ಮಾಡಲ್ಪಡುತ್ತವೆ ಮತ್ತು ತೀರ್ಮಾನಿಲ್ಪಡುತ್ತವೆ. AON ನ FCA ನೋಂದಣಿ ಸಂಖ್ಯೆ 310451 ಆಗಿದೆ. ನೀವು Financial Services Register ಗೆ ಭೇಟಿ ನೀಡುವ ಮೂಲಕ ಅಥವಾ FCA ಅನ್ನು 0 800 111 6768 ಸಂಖ್ಯೆಯಲ್ಲಿ ಸಂಪರ್ಕಿಸುವ ಮೂಲಕ ಇದನ್ನು ಪರಿಶೀಲಿಸಬಹುದು. ಹೋಸ್ಟ್‌ಗಳಿಗಾಗಿ Aircover ಒಳಗಿನ ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವಗಳ ಮತ್ತು ಸೇವೆಗಳ ಹೊಣೆಗಾರಿಕೆ ನೀತಿಗಳನ್ನು Financial Conduct Authority ನಿಯಂತ್ರಿಸುತ್ತದೆ, ಉಳಿದ ಉತ್ಪನ್ನಗಳು ಮತ್ತು ಸೇವೆಗಳು Airbnb UK Services Limited, FPAFF405LC ವ್ಯವಸ್ಥೆ ಮಾಡಿದ ನಿಯಂತ್ರಿತ ಉತ್ಪನ್ನಗಳಾಗಿರುವುದಿಲ್ಲ. ವಿವರಗಳು ಮತ್ತು ಹೊರಗಿಡುವಿಕೆಗಳನ್ನು ನೋಡಿ.
ನೀವು ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ (EEA) ಮನೆಗಳು, ಅನುಭವಗಳು ಅಥವಾ ಸೇವೆಗಳನ್ನು ಹೋಸ್ಟ್ ಮಾಡುತ್ತಿದ್ದರೆ, ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವ ಮತ್ತು ಸೇವೆಗಳ ಹೊಣೆಗಾರಿಕೆ ವಿಮಾ ಪಾಲಿಸಿಗಳನ್ನು ಸ್ಪೇನ್‌ನಲ್ಲಿರುವ Zurich Insurance Europe AG ಶಾಖೆಯು ಅಂಡರ್‌ರೈಟ್ ಮಾಡುತ್ತದೆ ಮತ್ತು EEA ಯಲ್ಲಿನ Airbnb Spain Insurance Agency S.L.U. (ASIASL) ಹೋಸ್ಟ್‌ಗಳ ಅನುಕೂಲಕ್ಕಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವ್ಯವಸ್ಥೆಗೊಳಿಸುತ್ತದೆ ಮತ್ತು ಮುಕ್ತಾಯಗೊಳಿಸುತ್ತದೆ. ಇದು ವಿಮಾ ಪಿಂಚಣಿ ಮತ್ತು ನಿಧಿಗಳ ಡೈರೆಕ್ಟರೇಟ್ ಜನರಲ್ (DGSFP) ನಿಂದ ಮೇಲ್ವಿಚಾರಣೆ ಮಾಡಲ್ಪಡುವ ಮತ್ತು DGSFP ಯ ವಿಮಾ ವಿತರಕರ ರಿಜಿಸ್ಟ್ರಿಯಲ್ಲಿ AJ0364 ಸಂಖ್ಯೆಯೊಂದಿಗೆ ಸ್ಪೇನ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಸ್ವತಂತ್ರ ವಿಮಾ ಏಜೆನ್ಸಿಯಾಗಿದೆ. ನೀವು DGSFP ವಿಮಾ ವಿತರಕರ ನೋಂದಣಿಗೆ ಭೇಟಿ ನೀಡುವ ಮೂಲಕ ಈ ನೋಂದಣಿಯನ್ನು ಪರಿಶೀಲಿಸಬಹುದು ಮತ್ತು ನೀವು ASIASL ನ ಸಂಪೂರ್ಣ ವಿವರಗಳನ್ನು ಇಲ್ಲಿ ಪ್ರವೇಶಿಸಬಹುದು.
ಹೋಸ್ಟ್ ಹಾನಿ ರಕ್ಷಣೆಯು ವಿಮೆಯಲ್ಲ ಮತ್ತು ಹೋಸ್ಟ್ ಹೊಣೆಗಾರಿಕೆ ವಿಮೆಗೆ ಸಂಬಂಧ ಹೊಂದಿಲ್ಲ. ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿ, ನಿಮ್ಮ ಮನೆ ಮತ್ತು ಸಾಮಾನುಗಳಿಗೆ ತಾವು ಉಂಟುಮಾಡಿದ ಕೆಲವು ಹಾನಿಗಳಿಗೆ ಗೆಸ್ಟ್‌ಗಳು ಪಾವತಿಸದಿದ್ದರೆ ನಿಮಗೆ ಪರಿಹಾರ ನೀಡಲಾಗುತ್ತದೆ. ವಾಷಿಂಗ್ಟನ್ ಸ್ಟೇಟ್‌ನಲ್ಲಿನ ಲಿಸ್ಟಿಂಗ್‌ಗಳಿಗೆ, ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿ Airbnb ಯ ಒಪ್ಪಂದದ ಬಾಧ್ಯತೆಗಳನ್ನು Airbnb ಖರೀದಿಸಿದ ವಿಮಾ ಪಾಲಿಸಿಯು ಒಳಗೊಂಡಿದೆ. ಹೋಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದ ಹೊರಗೆ ಇದ್ದರೆ, ಈ ಹೋಸ್ಟ್ ಹಾನಿ ರಕ್ಷಣೆ ನಿಯಮಗಳು ಅನ್ವಯವಾಗುತ್ತವೆ. ಹೊಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದೊಳಗೆ ಇದ್ದರೆ, ಹೋಸ್ಟ್ ಹಾನಿ ರಕ್ಷಣೆಯು ಆಸ್ಟ್ರೇಲಿಯನ್ ಬಳಕೆದಾರರಿಗಾಗಿ ಹೋಸ್ಟ್ ಹಾನಿ ರಕ್ಷಣೆಯ ನಿಯಮಗಳಿಗೆ ಒಳಪಟ್ಟಿರುತ್ತದೆ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
