ನಿಮ್ಮ ಸ್ಥಳವು ಸ್ವಚ್ಛವಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು

ನಿಮ್ಮ ಸ್ಥಳವು ಸ್ವಚ್ಛವಾಗಿಲ್ಲದಿದ್ದರೆ, ಗೆಸ್ಟ್‌ಗಳು ನಕಾರಾತ್ಮಕ ವಿಮರ್ಶೆಯನ್ನು ನೀಡಬಹುದು.
Airbnb ಅವರಿಂದ ಫೆಬ್ರ 17, 2023ರಂದು
2 ನಿಮಿಷ ಓದಲು
ಫೆಬ್ರ 17, 2023 ನವೀಕರಿಸಲಾಗಿದೆ

ಐದು-ಸ್ಟಾರ್ ವಿಮರ್ಶೆಯ ಆತಿಥ್ಯದಲ್ಲಿ, ಸ್ವಚ್ಛವಾದ ಸ್ಥಳಗಳನ್ನು ಒದಗಿಸುವುದು ಪ್ರಮುಖ ಭಾಗವಾಗಿದೆ. ಹೋಸ್ಟ್‌ಗಳು ಪಾಲಿಸಬೇಕಾದ ನಿಯಮಗಳೆಂದರೆ, Airbnb ನಲ್ಲಿ ಲಿಸ್ಟ್ ಮಾಡಲಾದ ಎಲ್ಲಾ ಸ್ಥಳಗಳು ಗೆಸ್ಟ್‌ಗಳು ಚೆಕ್-ಇನ್ ಮಾಡುವ ಸಮಯದಲ್ಲಿ ಸ್ವಚ್ಛವಾಗಿರಬೇಕು ಮತ್ತು ಸೋಂಕು-ಮುಕ್ತವಾಗಿರಬೇಕು. ಅದ್ಭುತ ಶುಚಿತ್ವವನ್ನು ಕಾಪಾಡಿಕೊಳ್ಳುವ ತಂತ್ರವನ್ನು ಹೊಂದಿರುವ ಹೋಸ್ಟ್‌ಗಳು ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಸ್ವಚ್ಛಗೊಳಿಸುವ ಯೋಜನೆಯನ್ನು ರಚಿಸಿ

ನೀವೇ ಕೆಲಸವನ್ನು ಮಾಡುತ್ತಿರಲಿ ಅಥವಾ ಕ್ಲೀನರ್ ಅನ್ನು ನೇಮಿಸಿಕೊಂಡಿರಲಿ, ಪ್ರತಿ ಬಾರಿ ಗೆಸ್ಟ್ ಬಂದು ಹೋದ ನಂತರ ನಿಮ್ಮ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.

ಸ್ನಾನಗೃಹದಲ್ಲಿ ಕೂದಲು ಅಥವಾ ಸಿಂಕ್‌ನಲ್ಲಿ ತೊಳೆಯದ ಕೊಳಕು ಪಾತ್ರೆಗಳಿರುವುದನ್ನು ಗೆಸ್ಟ್‌ಗಳು ನೋಡಿದರೆ, ಅವರ ವಾಸ್ತವ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಇದರಿಂದ ಗೆಸ್ಟ್‌ಗಳು ನಕಾರಾತ್ಮಕ ವಿಮರ್ಶೆಯನ್ನು ಬರೆಯಲು ಕಾರಣವಾಗಬಹುದು ಅಥವಾ ಅವರ ವಾಸ್ತವ್ಯವನ್ನು ಕಡಿತಗೊಳಿಸಬಹುದು. 

ನೀವು ಕ್ಲೀನರ್ ಅನ್ನು ನೇಮಿಸಿಕೊಂಡಿದ್ದರೆ, ಸ್ವಚ್ಚಗೊಳಿಸುವ ಪ್ರಕ್ರಿಯೆಯನ್ನು ಒಂದು ಬಾರಿ ನೀವೇ ಮಾಡಿ, ಇದರಿಂದ ನಿಮಗೆ ನಿಖರವಾಗಿ ಏನು ಮಾಡಬೇಕೆಂಬುದು ತಿಳಿಯುತ್ತದೆ.  ಸಂಪೂರ್ಣ ಕೆಲಸವನ್ನು ಮಾಡಲು ಬುಕಿಂಗ್‌ಗಳ ನಡುವೆ ಸಾಕಷ್ಟು ಸಮಯವನ್ನು ನೀವು ನಿಗದಿಪಡಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕ್ಲೀನರ್‌ಗೆ ಒಂದೇ ದಿನದಲ್ಲಿ ಎಲ್ಲವನ್ನು ಸ್ವಚ್ಚಗೊಳಿಸಲು ಸಾಧ್ಯವಾಗದಿದ್ದರೆ ಮತ್ತೊಬ್ಬ ಕ್ಲೀನರ್ ಅಥವಾ ಇತರ ಬ್ಯಾಕಪ್ ಪ್ಲಾನ್ ಹುಡುಕಿ. 

ನಿಮ್ಮ ಪ್ಲಾನ್ ಅನ್ನು ಒಟ್ಟುಗೂಡಿಸುವಾಗ, ಇತರ ಹೋಸ್ಟ್‌ಗಳಿಂದ ಈ ಸಲಹೆಗಳನ್ನು ಪ್ರಯತ್ನಿಸಿ:

  • ಮೊದಲು ಹಾಸಿಗೆಗಳನ್ನು ತೆಗೆದುಹಾಕಿ ಮತ್ತು ಲಾಂಡ್ರಿ ಕೆಲಸವನ್ನು ಪ್ರಾರಂಭಿಸಿ. ಇದರಿಂದ ಅಗತ್ಯವಿರುವ ಹಲವಾರು ಲಾಂಡ್ರಿ ಲೋಡ್‌ಗಳನ್ನು ಮಾಡಲು ನಿಮಗೆ ಸಾಕಷ್ಟು ಸಮಯವಿರುತ್ತದೆ.
  • ಎಲ್ಲಾ ಮೇಲ್ಮೈಗಳನ್ನು ಸ್ವಚ್ಛಗೊಳಿಸಿ, ಹೆಚ್ಚು ಬಾರಿ ಸ್ಪರ್ಶಿಸಿರುವ ರಿಮೋಟ್‌ಗಳು ಮತ್ತು ಡೋರ್‌ನಾಬ್‌ಗಳಂತಹ ವಸ್ತುಗಳ ಮೇಲ್ಮೈಗಳನ್ನು ಸ್ವಚ್ಚಗೊಳಿಸಲು ವಿಶೇಷ ಗಮನ ಕೊಡಿ. 
  • ಹಾಸಿಗೆಗಳನ್ನು ಸಿದ್ದಗೊಳಿಸಿ, ಟವೆಲ್‌ಗಳನ್ನು ಬದಲಿಸಿ, ಅಲಂಕಾರಿಕ ಕಂಬಳಿಗಳು ಮತ್ತು ದಿಂಬುಗಳನ್ನು ಮರುಜೋಡಿಸಿ, ಹಾಗೂ ಅಗತ್ಯವಿರುವ ಯಾವುದೇ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಲಿಂಟ್ ರೋಲರ್ ಅನ್ನು ಬಳಸಿ
  • ಹವಾಮಾನವು ಅನುಮತಿಸಿದರೆ, ಸ್ವಚ್ಚಗೊಳಿಸುವಾಗ ತಾಜಾ ಗಾಳಿಗಾಗಿಕಿಟಕಿಗಳನ್ನು ತೆರೆಯಿರಿ.
  • ಯಾವುದೇ ಧೂಳು ಅಥವಾ ಕಸಕಡ್ಡಿಗಳನ್ನು ಸಂಗ್ರಹಿಸಲುಕೊನೆಯಲ್ಲಿ ಮಹಡಿಗಳನ್ನು ಗುಡಿಸಿ ಮತ್ತು ಒರೆಸಿಕೊಳ್ಳಿ .

ಈ ಕ್ಲೀನಿಂಗ್ ಚೆಕ್‌ಲಿಸ್ಟ್ ಅನ್ನು ಅನುಸರಿಸಿ

  • ಎಲ್ಲಾ ಮೇಲ್ಮೈಗಳು ಧೂಳು-ಮುಕ್ತವಾಗಿವೆ ಹಾಗೂ ಸ್ವಚ್ಚಗೊಳಿಸಲಾಗಿವೆ.
  • ಎಲ್ಲಾ ಮಹಡಿಗಳು ವ್ಯಾಕ್ಯೂಮ್ ಮಾಡಲಾಗಿವೆ ಅಥವಾ ಗುಡಿಸಿ ಒರೆಸಸಲಾಗಿವೆ.
  • ಎಲ್ಲಾ ಪ್ರದೇಶಗಳು ತಿಗಣೆಗಳು, ಕೀಟಗಳು, ಜೇಡರಬಲೆಗಳು, ಅಚ್ಚು ಮತ್ತು ಕಲೆಗಳಿಂದ ಮುಕ್ತವಾಗಿರಬೇಕು.
  • ಎಲ್ಲಾ ಬಟ್ಟೆಗಳು ಮತ್ತು ಟವೆಲ್‌ಗಳು ಸ್ವಚ್ಛವಾಗಿರಬೇಕು, ತಾಜಾವಾಗಿರಬೇಕು ಮತ್ತು ಕಲೆ-ರಹಿತವಾಗಿರಬೇಕು.
  • ಎಲ್ಲಾ ಹಾಸಿಗೆಗಳನ್ನು ಮರು-ಸಿದ್ದಗೊಳಿಸಿರಬೇಕು, ಮೃದುಗೊಳಿಸಿರಬೇಕು ಹಾಗೂ ಲಿಂಟ್ ರೋಲ್ ಮಾಡಿರಬೇಕು.
  • ಎಲ್ಲಾ ಶೌಚಾಲಯಗಳು, ಸಿಂಕ್‌ಗಳು, ಶವರ್‌ಗಳು ಮತ್ತು ಟಬ್‌ಗಳನ್ನು ಸ್ವಚ್ಛಗೊಳಿಸಿರಬೇಕು ಮತ್ತು ಸೋಂಕು-ರಹಿತಗೊಳಿಸಿರಬೇಕು.
  • ಎಲ್ಲಾ ಶಾಂಪೂ, ಬಾಡಿ ವಾಶ್, ಕೈತೊಳೆಯುವ ಸೋಪ್ ಅಥವಾ ಪಾತ್ರೆ ತೊಳೆಯುವ ಸೋಪ್ ಅನ್ನು ಪುನಃ ತುಂಬಿಸಿಡಬೇಕು.
  • ಎಲ್ಲಾ ವೈಯಕ್ತಿಕ ವಸ್ತುಗಳನ್ನು ಕಣ್ಣಿಗೆ ಕಾಣದಂತೆ ಸುರಕ್ಷಿತ ಸ್ಥಳದಲ್ಲಿಡಬೇಕು.
  • ಎಲ್ಲಾ ಭಕ್ಷ್ಯಗಳು, ಅಡುಗೆ ಮಾಡಿದ ಪಾತ್ರೆಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿರಬೇಕು ಹಾಗೂ ಅವುಗಳನ್ನು ದೂರದಲ್ಲಿ ಇರಿಸಬೇಕು.
  • ಫ್ರಿಡ್ಜ್, ಸ್ಟೌವ್ ಮತ್ತು ಓವನ್ ಸೇರಿದಂತೆ ಎಲ್ಲಾ ಅಡಿಗೆ ಉಪಕರಣಗಳನ್ನು ಸ್ವಚ್ಚಗೊಳಿಸಿರಬೇಕು ಹಾಗೂ ಬಳಕೆಗೆ ಸಿದ್ಧಗೊಳಿಸಿರಬೇಕು. ಫ್ರಿಡ್ಜ್‌ನಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ಉಳಿಸಿರಬಾರದು.
  • ಎಲ್ಲಾ ಕಸವನ್ನು ಹೊರಹಾಕಿರಬೇಕು.
  • ಸ್ಥಳವು ತಾಜಾವಾಗಿರಬೇಕು ಮತ್ತು ಸ್ವಚ್ಛವಾದ ಸುವಾಸನೆ ಬರುತ್ತಿರಬೇಕು. 
Airbnb
ಫೆಬ್ರ 17, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ