ಚಂಡಮಾರುತದಿಂದ ಸ್ಥಳಾಂತರಗೊಂಡವರನ್ನು ಸ್ವಾಗತಿಸಿದ ಫ್ಲೋರಿಡಾ ಹೋಸ್ಟ್‌ಗಳನ್ನು ಭೇಟಿ ಮಾಡಿ
ವಿಶೇಷ ಆಕರ್ಷಣೆಗಳು
ಓಪನ್ ಹೋಮ್ಸ್ ಪ್ರೋಗ್ರಾಂ ಮೂಲಕ, ಹೋಸ್ಟ್‌ಗಳಾದ ಬಾಬ್ ಮತ್ತು ಜುವಾನ್ ಸ್ಥಳಾಂತರಗೊಳ್ಳುವವರಿಗೆ ಇರ್ಮಾ ಮತ್ತು ಮೈಕೆಲ್ ಚಂಡಮಾರುತಗಳ ಸಮಯದಲ್ಲಿ ವಾಸ್ತವ್ಯಕ್ಕೆ ಉಚಿತ ಸ್ಥಳವನ್ನು ನೀಡಿದರು
ಮೈಕೆಲ್ ಚಂಡಮಾರುತದ ಸಮಯದಲ್ಲಿ ಬೇರ್ಪಟ್ಟ ನಂತರ ಬಾಬ್ ಮತ್ತು ಜುವಾನ್ ಅವರ ಮನೆಯಲ್ಲಿ ಒಂದು ಕುಟುಂಬ ಮತ್ತೆ ಸೇರಿಕೊಂಡಿತು
ಕುಟುಂಬವು ಮುಂದಿನ ಹಂತಗಳನ್ನು ಕಂಡುಕೊಳ್ಳುವವರಿಗೆ ವಿರಾಮದಾಯಕ ಆಶ್ರಯವನ್ನು Airbnb ಹೋಸ್ಟ್‌ಗಳು ನೀಡಿದ್ದಾರೆ
ಉಚಿತ ಮನೆಗಳು ಈಗ Airbnb.org ಆಗಿದೆ
Airbnb ಯ ಉಚಿತ ಮನೆಗಳು ಪ್ರೋಗ್ರಾಂ ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ Airbnb.orgಆಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.
ಮೈಕೆಲ್ ಚಂಡಮಾರುತದ ಸಮಯದಲ್ಲಿ ಜೇಸನ್ ಮತ್ತು ಕ್ಯಾರನ್ ಬೇರ್ಪಟ್ಟಾಗ, ಉಚಿತ ಮನೆಗಳು ಹೋಸ್ಟ್‌ಗಳಾದ ಬಾಬ್ ಮತ್ತು ಜುವಾನ್ ಅವರ ಕುಟುಂಬವನ್ನು ಮತ್ತೆ ಒಟ್ಟಿಗೆ ತರಲು ಸಹಾಯ ಮಾಡಿದರು.
ಅಕ್ಟೋಬರ್ 2018 ರಲ್ಲಿ, ಉಷ್ಣವಲಯದ ಚಂಡಮಾರುತವು ಫ್ಲೋರಿಡಾ ಪ್ಯಾನ್‌ಹ್ಯಾಂಡಲ್‌ನ ಮೇಲೆ ವರ್ಗ -5 ಚಂಡಮಾರುತಕ್ಕೆ ಏರಿದ ನಂತರ, ಜೇಸನ್ ಮತ್ತು ಕ್ಯಾರನ್ ತಮ್ಮ ಮಕ್ಕಳನ್ನು ಒರ್ಲ್ಯಾಂಡೊಗೆ ಪಲಾಯನ ಮಾಡಲು ಒಟ್ಟುಗೂಡಿಸಿದರು.
"ಫ್ಲೋರಿಡಿಯನ್ನರಾಗಿರುವುದರಿಂದ, ಚಂಡಮಾರುತಗಳ ವಿಷಯದಲ್ಲಿ ನಾವು ಒಂದು ರೀತಿಯ ಮೊಂಡುತನದವರಾಗಿದ್ದೇವೆ" ಎಂದು ಕರಾವಳಿಯಿಂದ ಮೂರು ಮೈಲಿ ದೂರದಲ್ಲಿರುವ ಫೋರ್ಟ್ ವಾಲ್ಟನ್ ಬೀಚ್‌ನಲ್ಲಿ ವಾಸಿಸುವ ಕುಟುಂಬದ ಜೇಸನ್ ಹೇಳುತ್ತಾರೆ. "ಅವುಗಳು ಬಲವಾದ ವರ್ಗ 3 ಅಥವಾ ವರ್ಗ 4 ಆಗಿಲ್ಲದ ಹೊರತು ನಾವು ನಿಜವಾಗಿಯೂ ಅವುಗಳತ್ತ ದೃಷ್ಟಿ ಹಾಯಿಸುವುದಿಲ್ಲ. ಆದರೆ ಇದು ಕ್ಯಾಟಗರಿ-5 ಅನ್ನು ತಲುಪಿದಾಗ, ಅದು ಸುಲಭದ ನಿರ್ಧಾರವಾಗಿತ್ತು. ನಾವು ಹೊರಬರಲು ನಿರ್ಧರಿಸಿದೆವು."
ನೀವು ಸ್ಥಳಾಂತರಿಸಬೇಕಾಗಿದೆ ಎಂಬುದನ್ನು ಅರಿತುಕೊಳ್ಳುವುದು
"ಅವರು ಶಾಲೆಗಳನ್ನು ಎರಡು ದಿನಗಳವರೆಗೆ ಮುಚ್ಚಿದರು. ಇದು ಅಸಹಜವಾಗಿದೆ" ಎಂದು ಸ್ಥಳೀಯ ಪ್ರೌಢಶಾಲೆಯಲ್ಲಿ ರಂಗಭೂಮಿ ಕಲಿಸುವ ಕ್ಯಾರನ್ ಹೇಳುತ್ತಾರೆ. "ಆಗ ಅದೊಂದು ಗಂಭೀರ ವಿಷಯ ಎಂದು ನಮಗೆ ತಿಳಿಯಿತು. ಮತ್ತು ನಿಜವಾಗಿಯೂ ಏನಾದರೂ ದುರಂತ ಸಂಭವಿಸಿದಲ್ಲಿ, ನಾವು ಒಟ್ಟಿಗೆ ಇರಲು ಬಯಸಿದ್ದೆವು."
ಮೈಕೆಲ್ ಚಂಡಮಾರುತವು ಮಧ್ಯ ಫ್ಲೋರಿಡಾದಲ್ಲಿ ಪ್ರತಿ ಗಂಟೆಗೆ 150 ಮೈಲು ತೀವ್ರದ ಗಾಳಿಯೊಂದಿಗೆ ಅಪ್ಪಳಿಸಿತು. ಮೇಲ್ಛಾವಣಿಗಳನ್ನು ಬುಡಮೇಲು ಮಾಡಿತು, ಸಮುದ್ರದ ನೀರು ಹೆದ್ದಾರಿಗಳ ಮೇಲೆ ಹರಿದವು, ವಿದ್ಯುತ್ ತಂತಿಗಳು ಬಿದ್ದವು ಮತ್ತು ಇಡೀ ನೆರೆಹೊರೆಗೆ ಅಪಾಯ ಉಂಟಾಯಿತು. ಆ ಸಮಯದಲ್ಲಿ, ಜೇಸನ್ ವ್ಯವಹಾರದ ಟ್ರಿಪ್ ಉದ್ದೇಶಕ್ಕೆ 10 ಗಂಟೆಗಳಷ್ಟು ದೂರದಲ್ಲಿ ಸಿಲುಕಿಕೊಂಡಿದ್ದರು ಮತ್ತು ಕ್ಯಾರನ್ ತಮ್ಮ ಇಬ್ಬರು ಗಂಡುಮಕ್ಕಳೊಂದಿಗೆ ಮನೆಯಲ್ಲಿದ್ದರು. ಹತ್ತಿರದ ಆಶ್ರಯತಾಣಗಳು ಭರ್ತಿಯಾಗಿವೆ ಮತ್ತು ಹೋಟೆಲ್‌ಗಳು ತುಂಬಾ ದುಬಾರಿಯಾಗಿವೆ ಎಂದು ಕುಟುಂಬಕ್ಕೆ ತಿಳಿದುಬಂತು.
"ನಾನು ನನ್ನ ಹೋಟೆಲ್ ಆ್ಯಪ್‌ಗಳನ್ನು ಪರಿಶೀಲಿಸಿದೆ ಮತ್ತು ಅವು ವೇಗವಾಗಿ ಬುಕ್ ಆಗುತ್ತಿರುವುದು ಕಂಡುಬಂತು ಮತ್ತು ಬೆಲೆಗಳು ಕೈಗೆಟುಕುವಂತಿರಲಿಲ್ಲ. ಆದ್ದರಿಂದ, ನಾನು ನನ್ನ Airbnb ಆ್ಯಪ್ ತೆರೆದೆ" ಎಂದು ಜೇಸನ್ ಹೇಳಿದರು. "ಹೋಟೆಲ್‌ಗಳನ್ನು ಪರಿಶೀಲಿಸುವ ಮೊದಲು Airbnb ಅನ್ನು ಪರಿಶೀಲಿಸುವುದು ಖಂಡಿತವಾಗಿಯೂ ನಮ್ಮ ಸ್ಥಳಾಂತರಿಸುವ ಯೋಜನೆಯ ಭಾಗವಾಗಿದೆ. ಚಂಡಮಾರುತವು ಅಪ್ಪಳಿಸಿದಾಗ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ರಸ್ತೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ನಿಮಗೆ ಬೇಕಿಲ್ಲ. ನೀವು ಎಷ್ಟು ಹೆಚ್ಚು ಕಾಲ ಕಾಯುತ್ತೀರೋ, ಅಷ್ಟು ಹೆಚ್ಚು ಜನರು ಸ್ಥಳಾಂತರಗೊಳ್ಳಲು ನಿರ್ಧರಿಸುತ್ತಾರೆ."
ಅವರು ತಮ್ಮ ಫೋನ್‌ನಲ್ಲಿ Airbnb ಆ್ಯಪ್ ಅನ್ನು ತೆರೆದರು ಮತ್ತು ಅವರು ಅಥವಾ ಅವರ ಕುಟುಂಬವು ಚಂಡಮಾರುತದಿಂದ ಪ್ರಭಾವಿತರಾಗಿದ್ದಾರೆಯೇ ಎಂದು ಅಧಿಸೂಚನೆ ಕೇಳಿತು. ಆ ಸಮಯದಲ್ಲಿ ಅವರು ಉಚಿತ ಮನೆಗಳುಅನ್ನು ಕಂಡುಕೊಂಡರು. ಇದೊಂದು ವಿಪತ್ತುಗಳಿಂದ ಬಾಧಿತರಾದ ಜನರಿಗೆ ವಾಸ್ತವ್ಯ ಹೂಡಲು ಉಚಿತ ಸ್ಥಳಗಳನ್ನು ಸಂಪರ್ಕಿಸುವ ಕಾರ್ಯಕ್ರಮವಾಗಿದೆ. ಮೂರು ಬೆಡ್‌ರೂಮ್, ಮೂರು ಬಾತ್‌ರೂಮ್ ಅನ್ನು ಹೊಂದಿದ್ದ ಮನೆಯನ್ನು ಅವರು ಕಂಡುಕೊಂಡರು, ಕಾರಿನ ಮೂಲಕ ಆ ಸ್ಥಳಕ್ಕೆ ಪ್ರವೇಶಿಸಬಹುದಾಗಿತ್ತು ಮತ್ತು ಕುಟುಂಬವು ಮತ್ತೆ ಒಂದಾಗಲು ಅದ್ಯ್ ಪರಿಪೂರ್ಣ ಸ್ಥಳವಾಗಿತ್ತು.
ಉಚಿತ ಮನೆಗಳ ಹೋಸ್ಟ್‌ಗಳ ಬಳಿ ಆಶ್ರಯ ಪಡೆಯುವುದು
ಜೇಸನ್ ಮತ್ತು ಕ್ಯಾರನ್ ಮಧ್ಯ ಫ್ಲೋರಿಡಾದ ತಮ್ಮ Airbnb ಯಲ್ಲಿ ಭೇಟಿಯಾದರು. ಇದು ನೇರವಾಗಿ ಒರ್ಲ್ಯಾಂಡೊದ ದಕ್ಷಿಣಕ್ಕೆ ಇದ್ದು, ವಿಶೇಷವಾಗಿ ಡಿಸ್ನಿ ವರ್ಲ್ಡ್‌ಗೆ ಸಮೀಪ ಇರುವುದರಿಂದ ಜನಪ್ರಿಯ ತಾಣವಾಗಿದೆ. ಮನೆಯು ಆಭರಣದ ಟೋನ್ ಹೊಂದಿರುವ ಪೀಠೋಪಕರಣಗಳು ಮತ್ತು ಹರ್ಷಚಿತ್ತದ ವರ್ಣಮಯ ಗೋಡೆಗಳನ್ನು ಹೊಂದಿರುವ ವಿಶ್ರಾಂತಿಯುತ, ಕಡಲತೀರದ ಸೌಂದರ್ಯವನ್ನು ಹೊಂದಿದೆ.
ಗಂಡ ಬಾಬ್ ಮತ್ತು ಜುವಾನ್ ಮೊದಲ ಬಾರಿಗೆ 2016 ರಲ್ಲಿ ಕಾರ್ಯಕ್ರಮದ ಮೂಲಕ ತಮ್ಮ ಮನೆಯನ್ನು ತೆರೆದರು ಮತ್ತು ಅಂದಿನಿಂದ ಇರ್ಮಾ ಮತ್ತು ಮೈಕೆಲ್ ಚಂಡಮಾರುತಗಳಿಂದ ಸಂತ್ರಸ್ತರಾದ ಹಲವಾರು ಕುಟುಂಬಗಳಿಗೆ ವಾಸ್ತವ್ಯ ಒದಗಿಸಿದ್ದಾರೆ. ದಂಪತಿಗಳು ಮದುವೆಯಾಗಿ ಏಳು ವರ್ಷಗಳಾಗಿವೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಒಟ್ಟಿಗೆ ಇದ್ದಾರೆ; ಬಾಬ್ ನಿವೃತ್ತರಾಗಿದ್ದಾರೆ ಮತ್ತು ಅವರ ಪ್ರಾಪರ್ಟಿಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಜುವಾನ್ ಇತ್ತೀಚೆಗೆ ಈಕ್ವೆಡಾರ್‌ಗೆ ಪ್ರಯಾಣಿಸಲು LGBT ಆಧರಿತ ಪ್ರಯಾಣ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ, ಅವರು 35 ಕ್ಕೂ ಹೆಚ್ಚು ದೇಶಗಳಿಂದ 2,000 ಕ್ಕೂ ಹೆಚ್ಚು ಜನರನ್ನು ಹೋಸ್ಟ್ ಮಾಡಿದ್ದಾರೆ.
"ನಾವು ಅಲ್ಲಿಗೆ ತಲುಪಿದಾಗ, ಮನೆಯಿಂದ ದೂರದಲ್ಲಿರುವ ಒಂದು ಮನೆಯಂತೆ ಭಾಸವಾಯಿತು" ಎಂದು ಕ್ಯಾರನ್ ಹೇಳುತ್ತಾರೆ. "ಖಂಡಿತವಾಗಿಯೂ, ನಾವು ನಮ್ಮ ಮನೆಯ ಬಗ್ಗೆ ತುಂಬಾ ಚಿಂತಿತರಾಗಿದ್ದೆವು, ಆದರೆ ಆ ಭಾರವು ನಮ್ಮ ಹೆಗಲಿನಿಂದ ಇಳಿದಿರುವುದು ಸಂತೋಷದ ಸಂಗತಿಯಾಗಿದೆ. ಈ ಕೊಳವು ಆಹ್ಲಾದಕರ ಆಶ್ಚರ್ಯಕರವಾಗಿತ್ತು."
ಮೂರು ರಾತ್ರಿಗಳವರೆಗೆ, ಕುಟುಂಬವು ವಿಶ್ರಾಂತಿ ಪಡೆಯಿತು, ಪುನಃ ಗುಂಪುಗೂಡಿತು ಮತ್ತು ಚಂಡಮಾರುತವು ತೀವ್ರಗೊಂಡಾಗ ಸುದ್ದಿಯನ್ನು ಮೇಲ್ವಿಚಾರಣೆ ಮಾಡಿತು. "ಒತ್ತಡದ ಪರಿಸ್ಥಿತಿಯಲ್ಲಿ, ನಾವು ಕಾಳಜಿ ವಹಿಸಲ್ಪಟ್ಟಿದ್ದೇವೆ" ಎಂದು ಜೇಸನ್ ಹೇಳುತ್ತಾರೆ. "ಆ್ಯಪ್ ಮೂಲಕ, ಎಲ್ಲ ಸಂಗತಿಗಳ ಕುರಿತು."
ಬಾಬ್ ಮತ್ತು ಜುವಾನ್ ಫೋರ್ಟ್ ಲಾಡರ್‌ಡೇಲ್‌ನಲ್ಲಿನ ತಮ್ಮ ಮನೆಯಲ್ಲಿದ್ದರೂ, ದೂರದಿಂದಲೇ ವ್ಯತ್ಯಾಸವನ್ನುಂಟುಮಾಡಲು ಸಾಧ್ಯವಾಯಿತು. ಜೇಸನ್ ಅವರೊಂದಿಗೆ ಜುವಾನ್ ನಿಕಟ ಸಂಪರ್ಕದಲ್ಲಿದ್ದರು ಮತ್ತು ಅವರ ಕುಟುಂಬವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಆಗಾಗ್ಗೆ ಪರಿಶೀಲಿಸುತ್ತಿದ್ದರು. “ನಿಮ್ಮ ಮನೆಯಲ್ಲಿ ಗೆಸ್ಟ್‌ಗಳನ್ನು ಇಟ್ಟುಕೊಳ್ಳುವುದಕ್ಕೆ ನಿಮ್ಮಲ್ಲಿ ಇನ್ನೂ ಜವಾಬ್ದಾರಿಯ ಒಂದು ಪ್ರಜ್ಞೆಯಿದೆ,” ಎಂದು ಬಾಬ್ ಹೇಳುತ್ತಾರೆ, “ಅವರು ಕೆಟ್ಟ ಪರಿಸ್ಥಿತಿಗಳಿಂದ ಧಾವಿಸಿ ಬಂದಿದ್ದರೂ ಸಹ, ಅವರಿಗೆ ಏನೂ ಆಗದಿರಲಿ ಎಂದು ನೀವು ಯೋಚಿಸುತ್ತೀರಿ”.
ಚಂಡಮಾರುತದ ಋತುವಿಗೆ ತಯಾರಾಗುವುದು
ವಿಶಿಷ್ಟವಾಗಿ, ಜೇಸನ್ ಮತ್ತು ಕ್ಯಾರನ್ ಹಾಳಾಗದ ಆಹಾರವನ್ನು ಸಂಗ್ರಹಿಸುವ ಮೂಲಕ ಮತ್ತು ತಮ್ಮ ಬಾತ್‌ಟಬ್‌ನಲ್ಲಿ ಐಸ್ ಮತ್ತು ಹೆಚ್ಚುವರಿ ನೀರಿನ್ನು ತುಂಬಿಸುವ ಮೂಲಕ ಚಂಡಮಾರುತದ ಋತುವಿಗೆ ತಯಾರಾಗುತ್ತಾರೆ. "ಎಲ್ಲರೂ ಮಳಿಗೆಗಳಿಗೆ ಹೋಗುವ ದಿನದವರೆಗೆ ನೀವು ಕಾಯುತ್ತಿದ್ದರೆ, ಕಪಾಟುಗಳು ಖಾಲಿಯಾಗಿರುತ್ತವೆ" ಎಂದು ಕ್ಯಾರೆನ್ ಹೇಳುತ್ತಾರೆ. "ಪವರ್ ಹೋದರೆ, ನಾವು ನಮ್ಮ ಫೋನ್‌ಗಳಿಗೆ ಬ್ಯಾಟರಿಗಳು, ಫ್ಲ್ಯಾಶ್‌ಲೈಟ್‌ಗಳು ಮತ್ತು ಹ್ಯಾಂಡ್ ಕ್ರ್ಯಾಂಕ್ ಮಾಡಿದ ಬ್ಯಾಟರಿ ಚಾಲಿತ ಚಾರ್ಜರ್‌ಗಳನ್ನು ಇಟ್ಟುಕೊಂಡಿರುತ್ತೇವೆ."
ಜುವಾನ್ ಮತ್ತು ಬಾಬ್ ಅವರು ಜೇಸನ್ ಮತ್ತು ಕ್ಯಾರನ್ ಅವರ ಕುಟುಂಬವನ್ನು ಬೇರೆ ಯಾವುದೇ Airbnb ಗೆಸ್ಟ್‌ಗಾಗಿ ಮಾಡುವಂತೆಯೇ ಹೋಸ್ಟ್ ಮಾಡಲು ಸಿದ್ಧರಾದರು. "ನಾವು ಪ್ರಯಾಣಿಸುವಾಗ, ನಾವೆಲ್ಲರೂ ಮನೆಯ ಅನುಭವ ನೀಡಬಲ್ಲ ಸ್ಥಳವನ್ನು ಹುಡುಕಲು ಬಯಸುತ್ತೇವೆ" ಎಂದು ಜುವಾನ್ ಹೇಳುತ್ತಾರೆ, ಅವರು ಈ ಸನ್ನಿವೇಶವೇನೂ ಅದಕ್ಕೆ ಭಿನ್ನವಾಗಿರಲಿಲ್ಲ ಎನ್ನುವ ಅಂಶವನ್ನು ಅವರು ಎತ್ತಿ ತೋರಿಸುತ್ತಾರೆ. "ನೀವು ಸ್ವಾಗತಿಸಲ್ಪಡುವ ಸ್ಥಳವು ಸ್ವಚ್ಛವಾಗಿದ್ದರೆ ಅದು ಸುರಕ್ಷಿತವಾಗಿಯೂ ಇರುತ್ತದೆ."
ಬಿರುಗಾಳಿಯ ನಂತರ ಮನೆಗೆ ಮರಳುವುದು
ಆ ವಾರದ ನಂತರ ಜೇಸನ್ ಮತ್ತು ಕ್ಯಾರನ್ ತಮ್ಮ ಮನೆಗೆ ಹಿಂದಿರುಗಿದಾಗ, ಅವರಿಗೆ ಗಮನಾರ್ಹವಾದ ಹಾನಿ ಕಂಡುಬರಲಿಲ್ಲ. ಆದರೆ, ಅವರ ಸಮುದಾಯದ ಅನೇಕ ಜನರು ಅಷ್ಟು ಅದೃಷ್ಟಶಾಲಿಗಳಾಗಿರಲಿಲ್ಲ. "ಚೇತರಿಸಿಕೊಳ್ಳಲು ಮತ್ತು ಪುನರ್ನಿರ್ಮಾಣ ಮಾಡಲು ವರ್ಷಗಳು ಬೇಕಾಗುತ್ತವೆ" ಎಂದು ಜೇಸನ್ ಹೇಳಿದರು. "ಸುದ್ದಿ ಇನ್ನು ಮುಂದೆ ಅದನ್ನು ಒಳಗೊಂಡಿರುವುದಿಲ್ಲ, ಆದರೆ ಮನೆಗಳು ನೆಲಸಮವಾದ ಮತ್ತು ಪನಾಮ ನಗರದ ಟೆಂಟ್ ನಗರಗಳಲ್ಲಿ ವಾಸಿಸುತ್ತಿರುವ ಜನರು ಇನ್ನೂ ಇದ್ದಾರೆ." 1992 ರಿಂದ ಈ ಪ್ರದೇಶದ ಅತ್ಯಂತ ವಿನಾಶಕಾರಿ ಚಂಡಮಾರುತವಾದ ಮೈಕೆಲ್ ಚಂಡಮಾರುತದ ಸಮಯದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ.
"ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಯಾರಿಗಾದರೂ ಸಹಾಯ ಮಾಡುವಲ್ಲಿ ಒಂದು ರೀತಿಯ ತೃಪ್ತಿಯಿರುತ್ತದೆ" ಎಂದು ಜುವಾನ್ ಹೇಳಿದರು. "ಜೇಸನ್ ಒಂದೆರಡು ಬಾರಿ ಪಾವತಿಸಲು ಮುಂದಾದರು ಮತ್ತು ನಾವು ಅವರಿಗೆ ಅಗತ್ಯವಿಲ್ಲವೆಂದು ಹೇಳಿದೆವು. ನೀವು ಸ್ಥಳಾಂತರಗೊಂಡಿದ್ದೀರಿ ಎಂದು ನಮಗೆ ತಿಳಿದಿದೆ ಮತ್ತು ನಾವು ಸಹಾಯ ಮಾಡಲು ಸಂತೋಷಪಡುತ್ತೇವೆ."
"ನಾವು ಎಂದಾದರೂ ಅವರಂತೆಯೇ ಚಂಡಮಾರುತವನ್ನು ಎದುರಿಸಿದರೆ ಉಚಿತ ಮನೆಗಳಿಗೆ ಹೋಗಬಹುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು" ಎಂದು ಅವರು ಹೇಳುತ್ತಾರೆ.
ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
ಓಪನ್ ಹೋಮ್ಸ್ ಪ್ರೋಗ್ರಾಂ ಮೂಲಕ, ಹೋಸ್ಟ್‌ಗಳಾದ ಬಾಬ್ ಮತ್ತು ಜುವಾನ್ ಸ್ಥಳಾಂತರಗೊಳ್ಳುವವರಿಗೆ ಇರ್ಮಾ ಮತ್ತು ಮೈಕೆಲ್ ಚಂಡಮಾರುತಗಳ ಸಮಯದಲ್ಲಿ ವಾಸ್ತವ್ಯಕ್ಕೆ ಉಚಿತ ಸ್ಥಳವನ್ನು ನೀಡಿದರು
ಮೈಕೆಲ್ ಚಂಡಮಾರುತದ ಸಮಯದಲ್ಲಿ ಬೇರ್ಪಟ್ಟ ನಂತರ ಬಾಬ್ ಮತ್ತು ಜುವಾನ್ ಅವರ ಮನೆಯಲ್ಲಿ ಒಂದು ಕುಟುಂಬ ಮತ್ತೆ ಸೇರಿಕೊಂಡಿತು
ಕುಟುಂಬವು ಮುಂದಿನ ಹಂತಗಳನ್ನು ಕಂಡುಕೊಳ್ಳುವವರಿಗೆ ವಿರಾಮದಾಯಕ ಆಶ್ರಯವನ್ನು Airbnb ಹೋಸ್ಟ್‌ಗಳು ನೀಡಿದ್ದಾರೆ