ನಾವು ಹೋಸ್ಟ್‌ಗಳಿಗೆ ಟೇಬಲ್‌ನಲ್ಲಿ ಆಸನವನ್ನು ಹೇಗೆ ನೀಡುತ್ತಿದ್ದೇವೆ
Airbnb ಸಾರ್ವಜನಿಕ ಕಂಪನಿಯಾಗಲು ಸಿದ್ಧವಾಗುತ್ತಿದ್ದಂತೆ, ನಾವು ಹೋಸ್ಟ್‌ಗಳೊಂದಿಗಿನ ನಮ್ಮ ಪಾಲುದಾರಿಕೆಗೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಪ್ರಪಂಚದಾದ್ಯಂತದ ಹೋಸ್ಟ್ ನಾಯಕರೊಂದಿಗೆ ಕೆಲಸ ಮಾಡಿದ ನಂತರ, ಹೋಸ್ಟ್‌ಗಳಿಗೆ ಟೇಬಲ್‌ನಲ್ಲಿ ಆಸನವನ್ನು ನೀಡಲು ಮತ್ತು ನಮ್ಮ ಕಂಪನಿಯ ಯಶಸ್ಸಿನಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲು ನಾವು ಔಪಚಾರಿಕ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ.
ಇದು ಎರಡು ಸಮಾನ ಪ್ರಮುಖ ಭಾಗಗಳಿಂದ ಕೂಡಿದೆ:- Airbnb ಹೋಸ್ಟ್ ಸಲಹಾ ಮಂಡಳಿ: Airbnb ಯಲ್ಲಿ ಹೋಸ್ಟ್ ಸಮುದಾಯದ ಅಭಿಪ್ರಾಯವನ್ನು ಪ್ರತಿನಿಧಿಸಲು ಮತ್ತು ಹೋಸ್ಟ್‌ಗಳ ಆಲೋಚನೆಗಳನ್ನು ಕೇಳಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು Airbnb ಎಕ್ಸೆಕ್ಯೂಟಿವ್‌ಗಳನ್ನು ನಿಯಮಿತವಾಗಿ ಭೇಟಿಯಾಗುವ ಹೋಸ್ಟ್‌ಗಳ ವೈವಿಧ್ಯಮಯ ಗುಂಪು
- Airbnb ಹೋಸ್ಟ್ ಎಂಡೋಮೆಂಟ್: ಈಗ ಮತ್ತು ಭವಿಷ್ಯದಲ್ಲಿ ನಮ್ಮ ಹೋಸ್ಟ್ ಸಮುದಾಯಕ್ಕೆ ಬೆಂಬಲವನ್ನು ಒದಗಿಸಲು ಉದ್ದೇಶಿಸಿರುವ ನಿಧಿ, ಆರಂಭದಲ್ಲಿ Airbnb ಸ್ಟಾಕ್‌ನ 9.2 ಮಿಲಿಯನ್ ಷೇರುಗಳೊಂದಿಗೆ ಹಣವನ್ನು ಒದಗಿಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ನಿಮಗೆ ಟೇಬಲ್‌ನಲ್ಲಿ ಆಸನವನ್ನು
ನೀಡುವುದು ಎಂದರೆ ಹೋಸ್ಟ್ ಸಮುದಾಯವನ್ನು ಬೆಂಬಲಿಸುವ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ಹೂಡಿಕೆ ಮಾಡುವುದು ಮತ್ತು ನಾವು ಕಂಪನಿಯಾಗಿ ನಮ್ಮ ಮುಂದಿನ ಹೆಜ್ಜೆಯನ್ನು ಇಡುವಾಗ ನಿಮ್ಮ ಅಭಿಪ್ರಾಯವನ್ನು ಕೇಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದು.
ನೀವು ಪ್ರಶ್ನೆಗಳನ್ನು ಹೊಂದಿದ್ದೀರಿ ಎಂದುನಮಗೆ ತಿಳಿದಿದೆ, ಆದ್ದರಿಂದ ಕೆಲವು ಉತ್ತರಗಳು ಇಲ್ಲಿವೆ.
ಹೋಸ್ಟ್ ಸಲಹಾ ಮಂಡಳಿಯ ಪಾತ್ರವೇನು? ಅವರು ಏನು ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ?
ಸಲಹಾ ಮಂಡಳಿಯು Airbnb ನಾಯಕತ್ವದಲ್ಲಿ Airbnb ಹೋಸ್ಟ್‌ಗಳ ಧ್ವನಿಯಾಗುತ್ತದೆ. ಸಲಹಾ ಮಂಡಳಿಯ ಸದಸ್ಯರು ಮಾಸಿಕವಾಗಿ Airbnb ನಾಯಕತ್ವವನ್ನು ಭೇಟಿಯಾಗುತ್ತಾರೆ ಮತ್ತು ನಮ್ಮ ಪ್ರಗತಿಯ ಬಗ್ಗೆ ಸಮುದಾಯದೊಂದಿಗೆ ನಿಯಮಿತವಾಗಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹೋಸ್ಟ್ ಸಮುದಾಯದಿಂದ ಸಂಗ್ರಹಿಸಲಾದ ಪ್ರಸ್ತಾವನೆಗಳನ್ನು ಪ್ರಸ್ತುತಪಡಿಸುವ ಅಧಿಕಾರಿಗಳಿರುವ ಅಧಿಕೃತ ಸಲಹಾ ಮಂಡಳಿ ವೇದಿಕೆಯನ್ನು
ವಿತರಣೆಗೆ ನಿಧಿ ಲಭ್ಯವಿರುವಾಗ Airbnb ಹೋಸ್ಟ್ ಎಂಡೋಮೆಂಟ್‌ನಲ್ಲಿ ಹೇಗೆ ಹೂಡಿಕೆ ಮಾಡಲು ನಾವು ಆಯ್ಕೆ ಮಾಡುತ್ತೇವೆ ಎಂಬುದನ್ನು ತಿಳಿಸುವುದು ಅವರ ಪಾತ್ರದ ಒಂದು ಪ್ರಮುಖ ಭಾಗವಾಗಿದೆ. ಇದು ನೀತಿ ಬದಲಾವಣೆಗಳು, ಅನುದಾನ ಕಾರ್ಯಕ್ರಮಗಳು ಮತ್ತು ಹೊಸ ಉತ್ಪನ್ನ ಪರಿಕಲ್ಪನೆಗಳನ್ನು ಒಳಗೊಂಡಿರಬಹುದು. ಅದಕ್ಕೂ ಮೊದಲು, ಸಲಹಾ ಮಂಡಳಿಯು Airbnb ಯ ಮಾರ್ಗಸೂಚಿ ಮತ್ತು ದೀರ್ಘಾವಧಿಯ ಯೋಜನೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಹೋಸ್ಟ್ ಸಲಹಾ ಮಂಡಳಿಯಲ್ಲಿ ಯಾರಿರುತ್ತಾರೆ ಮತ್ತು ಅವರನ್ನು ಹೇಗೆ ಆಯ್ಕೆ ಮಾಡಲಾಯಿತು?
2021 ವರ್ಷಕ್ಕೆ ಸಲಹಾ ಮಂಡಳಿಯು ನಮ್ಮ ಹೋಸ್ಟ್ ಲೀಡರ್ಸ್ ಪ್ರೋಗ್ರಾಂನ 10 ರಿಂದ 15 ಸದಸ್ಯರನ್ನು ಒಳಗೊಂಡಿರುತ್ತದೆ, ನಮ್ಮ ಸಮುದಾಯ ಕೇಂದ್ರದಲ್ಲಿ ಸಕ್ರಿಯವಾಗಿರುವ ಹೋಸ್ಟ್‌ಗಳೂ ಇವರಲ್ಲಿ ಸೇರಿದ್ದಾರೆ. ಪ್ರದೇಶ, ಜನಾಂಗ, ಲಿಂಗ, ಸಾಮಾಜಿಕ ಆರ್ಥಿಕ ಹಿನ್ನೆಲೆ ಮತ್ತು ಹೋಸ್ಟ್ ಪ್ರಕಾರವನ್ನು ಒಳಗೊಂಡಂತೆ ವೈವಿಧ್ಯಮಯ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಕಾಳಜಿಯನ್ನು ವಹಿಸಲಾಗಿದೆ.
ಅವರ ಆರಂಭಿಕ ಅವಧಿ ಒಂದು ವರ್ಷದವರೆಗೆ ಇರುತ್ತದೆ ಮತ್ತು ಭವಿಷ್ಯದ ಸಲಹಾ ಮಂಡಳಿಯ ಸದಸ್ಯರಿಗೆ ಮಾನದಂಡಗಳು ಮತ್ತು ಆಯ್ಕೆ ಪ್ರಕ್ರಿಯೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ. ವರ್ಷಾಂತ್ಯದ ವೇಳೆಗೆ ಅವರ ಪರಿಚಯವನ್ನು ನೀವು ನಿರೀಕ್ಷಿಸಬಹುದು.
Airbnb ನಾಯಕತ್ವಕ್ಕೆ ಹೋಸ್ಟ್ ಸಲಹಾ ಮಂಡಳಿಯು ನನ್ನನ್ನು ಹೇಗೆ ಪ್ರತಿನಿಧಿಸುತ್ತದೆ?
ಹೋಸ್ಟ್‌ಗಳು ಟೇಬಲ್‌ನಲ್ಲಿ ಆಸನವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದು ಸಲಹಾ ಮಂಡಳಿ ಯ ಪಾತ್ರವಾಗಿದೆ.
- ಅವರು Airbnb ಹೋಸ್ಟ್‌ಗಳು ಮತ್ತು Airbnb ನಾಯಕತ್ವದ ನಡುವಿನ ಔಪಚಾರಿಕ ಕೊಂಡಿಯಾಗಿರುತ್ತಾರೆ, ಪ್ರತಿ ವರ್ಷ ಹೋಸ್ಟ್‌ಗಳ ಆಲೋಚನೆಗಳನ್ನು ಪ್ರಸ್ತುತಪಡಿಸಲು Airbnb ಮತ್ತು ಅಧಿಕೃತ ಸಲಹಾ ಮಂಡಳಿ ವೇದಿಕೆಯೊಂದಿಗೆ ಮಾಸಿಕ ಸಭೆಗಳಲ್ಲಿ ಭಾಗವಹಿಸುತ್ತಾರೆ
- ಹೋಸ್ಟ್ ಸಮುದಾಯದೊಂದಿಗೆ ಅವರು ತಮ್ಮ ಸಭೆಗಳ ನಿರ್ಧಾರಗಳು ಮತ್ತು ನವೀಕರಣಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ
- ಉದ್ಘಾಟನಾ ಸಮೂಹಕ್ಕಾಗಿ, ಅವರು ಭವಿಷ್ಯದ ಸಲಹಾ ಮಂಡಳಿಯ ಸದಸ್ಯರಿಗೆ ಆಯ್ಕೆ ಪ್ರಕ್ರಿಯೆಯನ್ನು ಸಹ ನಿರ್ಧರಿಸುತ್ತಾರೆ ಮತ್ತು ಹೋಸ್ಟ್ ಸಮುದಾಯದಿಂದ ವಿಚಾರಗಳನ್ನು ಸಂಗ್ರಹಿಸಲು ಔಪಚಾರಿಕ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತಾರೆ
ನಾನು ಒಂದು ಕಲ್ಪನೆಯನ್ನು ಹೇಗೆ ಸಲ್ಲಿಸಬಹುದು? ಅದನ್ನು ನಿಜವಾಗಿ ಪರಿಗಣಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ಅಧಿಕೃತ ಸಲಹಾ ಮಂಡಳಿಯ ವೇದಿಕೆಗಳಲ್ಲಿ Airbnb ನಾಯಕರ ಮುಂದೆ ಪ್ರಸ್ತುತಪಡಿಸಲಾಗುವ ಕಲ್ಪನೆಗಳನ್ನು ಹೋಸ್ಟ್‌ಗಳು ಸಲ್ಲಿಸಲು ಔಪಚಾರಿಕ ಪ್ರಕ್ರಿಯೆಯನ್ನು ರೂಪಿಸಲು ನಾವು ಪ್ರಥಮ ಹೋಸ್ಟ್ ಸಲಹಾ ಮಂಡಳಿಯೊಂದಿಗೆ ಕೆಲಸ ಮಾಡುತ್ತೇವೆ. ನಾವು ಸಲಹಾ ಮಂಡಳಿ ಸದಸ್ಯರನ್ನು ಪರಿಚಯಿಸಿದಾಗ ಈ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಯೋಜಿಸಿದ್ದೇವೆ.
ದತ್ತಿ ಎಂದರೇನು?
ದತ್ತಿ ಎಂಬುದು ನಿಧಿಯನ್ನು ಇರಿಸಲು ಬಳಸಲಾಗುವ ಹಣಕಾಸು ಘಟಕವಾಗಿದೆ. ಈ ಪ್ರಕರಣದಲ್ಲಿ ಇದು ಸ್ಟಾಕ್ ಆಗಿದ್ದು, ಒಂದು ಸಂಸ್ಥೆಯು ನಿರ್ದಿಷ್ಟಪಡಿಸಿದ ನಿರ್ದಿಷ್ಟ ಕಾರಣಗಳು ಅಥವಾ ಕಾರ್ಯಕ್ರಮಗಳಿಗಾಗಿ ಉದ್ದೇಶಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ, ಅವು ಲಾಭೋದ್ದೇಶ-ರಹಿತ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ್ದಾಗಿದೆ.
ಅವು "ಅಸಲು" ಇರಿಸಿಕೊಳ್ಳುವ ಮೂಲಕ (ಈ ಸಂದರ್ಭದಲ್ಲಿ, $ 1 ಶತಕೋಟಿ ಗುರಿ) ಮತ್ತು ಲಭ್ಯವಿರುವಾಗ ಅಸಲು ಮೇಲೆ ಬಡ್ಡಿ ಅಥವಾ ಬೆಳವಣಿಗೆಯ ಹೂಡಿಕೆಗಳನ್ನು ಮಾಡುವ ಮೂಲಕ ದೀರ್ಘಾವಧಿಯ ಬೆಂಬಲವನ್ನು ಅನುಮತಿಸುತ್ತವೆ.
ಒಂದು ಉದಾಹರಣೆ ಇಲ್ಲಿದೆ. ಒಂದು ವಿಶ್ವವಿದ್ಯಾನಿಲಯವು $ 10 ಕೋಟಿ ದತ್ತಿಯನ್ನು ಹೊಂದಿರಬಹುದು, ಇದು ಬಡ್ಡಿಯಿಂದಾಗಿ ವರ್ಷಕ್ಕೆ 5% ರಷ್ಟು ಬೆಳೆಯುತ್ತದೆ. ಇದು ಅಸಲು ಅಥವಾ ಮೂಲ ನಿಧಿಯನ್ನು ಬಳಸದೆಯೇ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿವೇತನಗಳಂತಹ ವಿಷಯಗಳಲ್ಲಿ ಹೂಡಿಕೆ ಮಾಡಲು ವರ್ಷಕ್ಕೆ $ 50 ಲಕ್ಷ ಒದಗಿಸುತ್ತದೆ.
Airbnb ಹೋಸ್ಟ್ ಎಂಡೋಮೆಂಟ್ ಎಂದರೇನು?
Airbnb ಯಶಸ್ವಿಯಾದರೆ, ಹೋಸ್ಟ್‌ಗಳು ಆ ಯಶಸ್ಸಿನ ಒಂದು ಪಾಲನ್ನು ಹೊಂದಿರಬೇಕು. ಹೋಸ್ಟ್ ಎಂಡೋಮೆಂಟ್/ದತ್ತಿ ಎಂಬುದು Airbnb ಯು ಆರಂಭದಲ್ಲಿ Airbnb ಸ್ಟಾಕ್‌ನ 9.2 ಮಿಲಿಯನ್ ಷೇರುಗಳೊಂದಿಗೆ ರಚಿಸುವ ನಿಧಿಯಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದು $1 ಶತಕೋಟಿ ಮೌಲ್ಯವನ್ನು ತಲುಪಿದ ಸಂದರ್ಭದಲ್ಲಿ Airbnb ಯಲ್ಲಿ ಹೋಸ್ಟ್‌ಗಳನ್ನು ಬೆಂಬಲಿಸುವ ಕಾರ್ಯಕ್ರಮಗಳು ಮತ್ತು ಪ್ರಸ್ತಾಪಗಳಿಗೆ ಧನಸಹಾಯ ನೀಡಲು ನಾವು $1 ಶತಕೋಟಿಗಿಂತ ಹೆಚ್ಚಿನ ಮೊತ್ತದ ಬಳಕೆಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ.
ನಾವು ಈ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಿದ ನಂತರ ಹೋಸ್ಟ್‌ಗಳಿಂದ ಸ್ವೀಕರಿಸಿದ ಪ್ರತಿಕ್ರಿಯೆಯ ಪ್ರಮುಖ ಅಂಶ ಎಂದರೆ ಹೊಂದಾಣಿಕೆಗೆ ಅನುಮತಿ ನೀಡುವುದು. ಅದಕ್ಕಾಗಿಯೇ ನಾವು ದತ್ತಿಯನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಹಾಗೆಯೇ ಪ್ರತಿಕ್ರಿಯೆಯ ಆಧಾರದ ಮೇಲೆ ವರ್ಷದಿಂದ ವರ್ಷಕ್ಕೆ ನಾವು ಧನಸಹಾಯ ನೀಡುವ ಕಾರ್ಯಕ್ರಮಗಳು ಏಕೆ ಬದಲಾಗಬಹುದು ಎಂದು ತಿಳಿಯಲು ಹೋಸ್ಟ್ ಸಮುದಾಯದಿಂದ ಹೊಸ ಆಲೋಚನೆಗಳು ಮತ್ತು ಪ್ರತಿಕ್ರಿಯೆಯನ್ನು ಕೋರುತ್ತೇವೆ.
ದತ್ತಿಯನ್ನು ಹೇಗೆ ವಿತರಿಸಲಾಗುತ್ತದೆ?
ದತ್ತಿಯನ್ನು ಹೋಸ್ಟ್‌ಗಳಿಗೆ ಅನುಕೂಲವಾಗುವಂತೆ ರಚಿಸಲಾಗಿದೆ ಮತ್ತು ಒಂದು ನಿರ್ದಿಷ್ಟ ವರ್ಷದಲ್ಲಿ ನಿಧಿಯ ವಿತರಣೆಯು ಹೋಸ್ಟ್ ಪ್ರತಿಕ್ರಿಯೆ ಮತ್ತು ನಮ್ಮ ಹೋಸ್ಟ್ ಸಲಹಾ ಮಂಡಳಿಯಿಂದ ರೂಪಿತವಾಗುತ್ತದೆ. ಇದು ಬೆಂಬಲದ ಅಗತ್ಯವಿರುವ ಅಥವಾ ಒಂದು ನಿರ್ದಿಷ್ಟ ಮೈಲಿಗಲ್ಲನ್ನು ತಲುಪಿರುವ ಅಥವಾ ಎಲ್ಲರಿಗೂ ಪ್ರಯೋಜನವಾಗುವ ಹೊಸ ಉತ್ಪನ್ನದಲ್ಲಿ ಹೂಡಿಕೆ ಮಾಡಿರುವ ಹೋಸ್ಟ್‌ಗಳ ಒಂದು ಸಣ್ಣ ಗುಂಪಿನ ಮೇಲೆ ಕೇಂದ್ರೀಕರಿಸಬಹುದು.
ಹೋಸ್ಟ್ ಕಾರ್ಯಾಗಾರಗಳಲ್ಲಿ ̧ ಮೂಡಿ ಬಂದ ಸಂಭಾವ್ಯ ಕಾರ್ಯಕ್ರಮಗಳ ಉದಾಹರಣೆಗಳಲ್ಲಿ ಇವು ಸೇರಿವೆ:
- ಬಿಕ್ಕಟ್ಟಿನ ಸಮಯದಲ್ಲಿ ಹೋಸ್ಟ್‌ಗಳಿಗೆ ತುರ್ತು ನಿಧಿಗಳು
- ಹೋಸ್ಟ್‌ಗಳ ಯಶಸ್ಸಿಗೆ ಸಹಕಾರಿಯಾಗುವ ಹೊಸ ಉತ್ಪನ್ನಗಳಲ್ಲಿ ಹೂಡಿಕೆ
- Airbnb ಯ ಉದ್ದೇಶವನ್ನು ಈಡೇರಿಸಲು ಬಹಳಷ್ಟು ಶ್ರಮಿಸುವ ಹೋಸ್ಟ್‌ಗಳ ಆಯ್ದ ಗುಂಪಿಗೆ ವಾರ್ಷಿಕ ಹೊರಪಾವತಿ
- ಹೋಸ್ಟ್‌ಗಳು ಮತ್ತು ಅವರ ಕುಟುಂಬಗಳಿಗೆ ಶಿಕ್ಷಣ ವೆಚ್ಚಗಳನ್ನು ಬೆಂಬಲಿಸಲು ಅನುದಾನ ಕಾರ್ಯಕ್ರಮಗಳು
ಈ ಯೋಜನೆಯು ಹೊಂದಿಕೊಳ್ಳುವ ಗುಣಲಕ್ಷಣ ಹೊಂದಿದೆ ಮತ್ತು 2020 ಸೂಪರ್‌ಹೋಸ್ಟ್ ಪರಿಹಾರ ನಿಧಿಯಿಂದ ತಿಳಿದುಬಂದ ಅಂಶಗಳನ್ನು ಆಧರಿಸಿ ಈ ನಿಧಿ ವಿತರಣೆಯಾಗುವ ಪ್ರತಿ ವರ್ಷ ಸಮುದಾಯದಲ್ಲಿ ಅದನ್ನು ಹೇಗೆ ಹೂಡಿಕೆ ಮಾಡಲಾಗುತ್ತದೆ ಎಂಬುದರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೋಸ್ಟ್‌ಗಳು ಹೊಂದಿರುತ್ತಾರೆ.
ನಾವು ಸಲಹಾ ಮಂಡಳಿಯ ಮಾರ್ಗದರ್ಶನವನ್ನು ಆರಂಭದಿಂದಲೂ ಬಯಸುತ್ತೇವೆ, ಆದ್ದರಿಂದ ನಮ್ಮ ವಿಧಾನದ ಕುರಿತು ಅವರೊಂದಿಗೆ ಸಮಾಲೋಚಿಸಲು ನಾವು ವರ್ಷದ ಅಂತ್ಯದ ವೇಳೆಗೆ ಅವರನ್ನು ಭೇಟಿಯಾಗುತ್ತೇವೆ.ಹಣವನ್ನು ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ಯಾರು ನಿರ್ಧರಿಸುತ್ತಾರೆ?
ಹೋಸ್ಟ್‌ಗಳಿಗೆ ಪ್ರಯೋಜನ ಕಲ್ಪಿಸುವ ಮತ್ತು ಹೋಸ್ಟ್‌ಗಳ ವಿಚಾರಗಳು ಮತ್ತು ಪ್ರತಿಕ್ರಿಯೆಯಿಂದ ರೂಪಿತವಾಗಿರುವ ದೀರ್ಘಬಾಳಿಕೆಯ ದತ್ತಿನಿಧಿಯನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ. ಫಂಡ್‌ಗಳನ್ನು ಹೇಗೆ ವಿತರಿಸುವುದು ಎನ್ನುವ ಕುರಿತು Airbnb ಅಂತಿಮವಾಗಿ ಸ್ವಂತ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರಲಿದೆಯಾದರೂ, ಹೋಸ್ಟ್ ಸಮುದಾಯದ ಸಲಹೆ ಮತ್ತು ಪ್ರತಿಕ್ರಿಯೆಯೊಂದಿಗೆ ನಾವು ಅದನ್ನು ಮಾಡುತ್ತೇವೆ.
ಹೋಸ್ಟ್ ಸಮುದಾಯದಿಂದ ವಿಚಾರಗಳನ್ನು ಕಂಡುಕೊಳ್ಳಲು ಅಧಿಕೃತ ಸಲಹಾ ಮಂಡಳಿ ಫೋರಮ್‌ಗಳು ಸೇರಿದಂತೆ—ವಿಚಾರಗಳನ್ನು ಮುನ್ನೆಲೆಗೆ ತರಲು ಹೋಸ್ಟ್ ಸಲಹಾ ಮಂಡಳಿಯು Airbnb ಅಧಿಕಾರಿಗಳನ್ನು ನಿಯಮಿತ ಆಧಾರದಲ್ಲಿ ಭೇಟಿಯಾಗಲಿದೆ.
ಹಣವನ್ನು ಎಲ್ಲಿ ವಿನಿಯೋಗಿಸಲಾಗುತ್ತದೆ ಎಂಬ ಕುರಿತು ಕಂಪನಿಯ ನಿರ್ಧಾರವೇ ಅಂತಿಮವಾಗಿದ್ದರೆ, ದತ್ತಿ ನಿಜವಾಗಿಯೂ ಹೋಸ್ಟ್‌ಗಳಿಂದ ರೂಪಿತವಾಗಿದೆಯೇ?
ಈ ಯೋಜನೆಯಿಂದ ಹೋಸ್ಟ್‌ಗಳು ಸಶಕ್ತ ಭಾವನೆ ಹೊಂದಿದರೆ ಅಥವಾ ಅದರಿಂದ ತಮಗೆ ಸಹಾಯವಾಗಿದೆ ಎಂದು ಭಾವಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಈ ಕಾರಣದಿಂದಾಗಿಯೇ ನಾವು ಅದನ್ನು ನಮ್ಮ ವಿಸ್ತಾರವಾದ ಉದ್ದೇಶದ ಒಂದು ಭಾಗ ಎಂದು ಪರಿಗಣಿಸುತ್ತೇವೆ. ಹೋಸ್ಟ್‌ಗಳಿಗೆ ಧ್ವನಿ, ಔಪಚಾರಿಕ ಪ್ರಸ್ತಾವನೆ ಪ್ರಕ್ರಿಯೆ ಮತ್ತು ಕಾಲಾನಂತರದಲ್ಲಿ ಹೋಸ್ಟ್ ಸಮುದಾಯದಲ್ಲಿ ನಾವು ಹೇಗೆ ಹೂಡಿಕೆ ಮಾಡುತ್ತೇವೆ ಎಂಬುದನ್ನು ರೂಪಿಸಲು ಅರ್ಥಪೂರ್ಣ ನಿಧಿಯನ್ನು ನೀಡುವ ಯೋಜನೆಗಳನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ.
ಎಲ್ಲಾ ಹೂಡಿಕೆಗಳ ಬಗ್ಗೆ Airbnb ಯು ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕನ್ನು ಹೊಂದಿದ್ದರೆ ನಾವು ಹಣ ಒದಗಿಸುವ ಪ್ರಸ್ತಾವನೆಗಳು ನಮ್ಮ ಹೋಸ್ಟ್ ಸಮುದಾಯದಿಂದ ಬರುತ್ತವೆ ಅಥವಾ ಸಮುದಾಯದಿಂದ ರೂಪಿಸಲ್ಪಡುತ್ತದೆ.
ನಿಧಿಯಿಂದ ತೆಗೆದುಕೊಳ್ಳುವ ಮೊದಲು ದತ್ತಿ ನಿಧಿಯು $1 ಬಿಲಿಯನ್ ಮೌಲ್ಯವನ್ನು ತಲುಪುವವರೆಗೆ ನೀವೇಕೆ ಕಾಯುತ್ತಿದ್ದೀರಿ?
ದತ್ತಿಯು ನಮ್ಮ ಹೋಸ್ಟ್‌ಗಳಲ್ಲಿ ದೀರ್ಘಾವಧಿಯ ಹೂಡಿಕೆಯಾಗಿದೆ ಮತ್ತು Airbnb ಇರುವವರೆಗೆ ಅದನ್ನು ಅಸ್ತಿತ್ವದಲ್ಲಿಡಲು ಉದ್ದೇಶಿಸಲಾಗಿದೆ. ಆ ಯಶಸ್ಸು ಇಂದಿನ ಹೋಸ್ಟ್‌ಗಳನ್ನು ಮಾತ್ರವಲ್ಲದೇ, Airbnb ಸಮುದಾಯವನ್ನು ಸೇರುವ ಭವಿಷ್ಯದ ಹೋಸ್ಟ್‌ಗಳನ್ನೂ ಬೆಂಬಲಿಸಲು ಸಮರ್ಥವಾಗಲಿ ಎಂದು ನಾವು ಬಯಸುತ್ತೇವೆ.
ಅವಕಾಶ ನೀಡುವುದು ಭವಿಷ್ಯದಲ್ಲಿ ಹೊಸ ಪ್ರಸ್ತಾಪಗಳು ಮತ್ತು ಕಾರ್ಯಕ್ರಮಗಳಿಗಾಗಿ ಅದರಿಂದ ಹೆಚ್ಚಿನ ಅವಕಾಶಗಳನ್ನು ಪಡೆಯಲು, ಹೋಸ್ಟ್‌ಗಳ ಪ್ರಸ್ತಾಪಗಳಿಗೆ ದೀರ್ಘಕಾಲದವರೆಗೆ ಧನಸಹಾಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಧಿಯ ಮೌಲ್ಯವೇನು ಎಂಬುದರ ಕುರಿತುನಾವು ನಿಮಗೆ ನಿಯಮಿತವಾಗಿ ತಿಳಿಸುತ್ತೇವೆ ಮತ್ತು $1 ಬಿಲಿಯನ್ ಮಿತಿಯನ್ನು ತಲುಪುವ ಮೊದಲು, ನಾವು ಸಮುದಾಯದಿಂದ ಪ್ರತಿಕ್ರಿಯೆ ಮತ್ತು ಪ್ರಸ್ತಾಪಗಳನ್ನು ಸಂಗ್ರಹಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಾವು ಇಂದಿನ ಹಾಗೆ ಅವರಿಗೆ ಹಣವನ್ನು ನೀಡುತ್ತೇವೆ.
ಒಂದು ವೇಳೆ ದತ್ತಿ ನಿಧಿಯ ಮೌಲ್ಯವು ಕಡಿಮೆಯಾದರೆ ಅಥವಾ ಎಂದಿಗೂ $1 ಬಿಲಿಯನ್ ತಲುಪದಿದ್ದರೆ ಏನಾಗುತ್ತದೆ?
ದತ್ತಿ ನಿಧಿಯ ಮೌಲ್ಯವು $1 ಬಿಲಿಯನ್ ತಲುಪುತ್ತದೆ ಎಂದು ನಾವು ಆಶಿಸುತ್ತಿದ್ದೇವೆ ಮತ್ತು ಕಾಲಕ್ರಮೇಣ ದತ್ತಿ ನಿಧಿಗೆ ಕಂಪನಿಯ ಮೌಲ್ಯದ 2% ವರೆಗೆ ಹೆಚ್ಚುವರಿ ಸ್ಟಾಕ್ ದೇಣಿಗೆಗಳನ್ನು ನಾವು ನೀಡಬದು.
ಈ ಮಧ್ಯೆ, ನಮ್ಮ ಹೋಸ್ಟ್ ಸಲಹಾ ಮಂಡಳಿಯ ಸಹಾಯ ಮತ್ತು ಪ್ರಭಾವದೊಂದಿಗೆ, ನಾವು ಇಂದು ಮಾಡುತ್ತಿರುವಂತೆ ಹೋಸ್ಟ್ ಸಮುದಾಯದಿಂದ ಬರುವ ವಿಚಾರಗಳು ಮತ್ತು ಪ್ರಸ್ತಾವನೆಗಳಲ್ಲಿ ಹೂಡಿಕೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ.
Airbnb ಯ ಸಮುದಾಯ ಅನುದಾನ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?
ದತ್ತಿ ನಿಧಿಯು $1 ಬಿಲಿಯನ್ ಮೌಲ್ಯವನ್ನು ತಲುಪುವುದಕ್ಕೆ ಮುಂಚಿತವಾಗಿ, ನಾವು ಪ್ರತಿ ವರ್ಷ ಹೋಸ್ಟ್‌ನ ಸ್ಥಳೀಯ ಸಮುದಾಯಗಳಲ್ಲಿ ಲಾಭರಹಿತ ಸಂಘಟನೆಗಳು ಅಥವಾ ಉಪಕ್ರಮಗಳನ್ನು ಬೆಂಬಲಿಸಲು ನೇರವಾಗಿ Airbnb ಯಿಂದ ಫಂಡ್ ಮಾಡಲಾಗುವ $10 ಮಿಲಿಯನ್ ಅನುದಾನವನ್ನು ನೀಡಲಿದ್ದೇವೆ. ಹೋಸ್ಟ್ ಪ್ರತಿಕ್ರಿಯೆ ಆಧರಿಸಿ ನಾವು ಯಾರನ್ನು ಬೆಂಬಲಿಸುತ್ತೇವೆ ಎನ್ನುವುದರ ಬಗ್ಗೆ ಪ್ರಭಾವ ಬೀರಲು ಹೋಸ್ಟ್ ಸಲಹಾ ಮಂಡಳಿಯು ಸಾಮರ್ಥ್ಯ ಹೊಂದಿರುತ್ತದೆ.
ಹೇಗೆ ಅಭಿವೃದ್ಧಿಪಡಿಸಿದ್ದೀರಿ?
ನಾವು ಈ ಉಪಕ್ರಮಗಳನ್ನು ವ್ಯಾಪಕ ಹೋಸ್ಟ್ ಪ್ರತಿಕ್ರಿಯೆಯೊಂದಿಗೆ ಅಭಿವೃದ್ಧಿಪಡಿಸಿದ್ದೇವೆ. ವ್ಯಾಪಕ ಶ್ರೇಣಿಯ ಹೋಸ್ಟ್‌ಗಳನ್ನು ಹೊಂದಿರುವ ಕಾರ್ಯಾಗಾರಗಳು ಮತ್ತು ಫೋಕಸ್ ಗುಂಪುಗಳ ಸರಣಿಯ ಮೂಲಕ, ನಾವು 2019 ಮತ್ತು 2020ರಲ್ಲಿ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಪ್ರಾರಂಭಿಸಿದ್ದೇವೆ. ಹೋಸ್ಟ್‌ಗಳ ಸಹಭಾಗಿತ್ವದಲ್ಲಿ ಪೂರ್ಣ ವ್ಯಾಪ್ತಿಯನ್ನು ವಿನ್ಯಾಸಗೊಳಿಸಲಾಗುತ್ತದೆ. ಇದು ನಮ್ಮ ದೃಷ್ಟಿಯಲ್ಲಿ ಮಾತ್ರ ನಿಜವಲ್ಲ, ಹೋಸ್ಟ್‌ಗಳೊಂದಿಗಿನ ಕಳೆದ ವರ್ಷದ ನಮ್ಮ ಕಾರ್ಯಾಗಾರಾಗಳ ನೇರ ಫಲಿತಾಂಶವಾಗಿದೆ.