ಫ್ರಂಟ್‌ಲೈನ್ ವಾಸ್ತವ್ಯಗಳು 3 COVID - 19 ತುರ್ತು ಪರಿಹಾರ ಸಿಬ್ಬಂದಿಗೆ ಹೇಗೆ ಸಹಾಯ ಮಾಡಿತು
ವಿಶೇಷ ಆಕರ್ಷಣೆಗಳು
ಫ್ರಂಟ್‌ಲೈನ್ ಸ್ಟೇಸ್ ಕಾರ್ಯಕ್ರಮ COVID-19 ಉಳಿಯಲು ಸ್ಥಳವನ್ನು ಕಂಡುಕೊಳ್ಳುವಲ್ಲಿ ತೊಂದರೆ ಅನುಭವಿಸುವ ಪ್ರತಿಸ್ಪಂದಕರಿಗೆ ಸ್ಥಳಗಳನ್ನು ನೀಡುತ್ತದೆ
ತಾವು ಕಂಡುಕೊಂಡ ಮನೆಯು ತಮಗೆ ಪುನಶ್ಚೇತನಗೊಳ್ಳಲು "ಸುರಕ್ಷಿತ ತಾಣ" ಆಗಿತ್ತು ಎಂದು ಇಟಲಿಯ ಒಬ್ಬರು ನರ್ಸ್ ಹೇಳುತ್ತಾರೆ
ಮಿಸ್ಸಿಸ್ಸಿಪ್ಪಿಯಿಂದ ಪ್ರಯಾಣಿಸಿದ ನರ್ಸ್ ಒಬ್ಬರಿಗೆ ಮಿಚಿಗನ್‌ನಲ್ಲಿ ಕೆಲಸ ಮಾಡುವಾಗ ತಮ್ಮ ಹೋಸ್ಟ್‌ನೊಂದಿಗೆ ಸಂಪರ್ಕ ಸಾಧಿಸುವಂತಾಗಿದ್ದು ಖುಷಿ ನೀಡಿತ್ತು
ಉಚಿತ ಮನೆಗಳು ಈಗ Airbnb.org ಆಗಿದೆ
Airbnb ಯ ಉಚಿತ ಮನೆಗಳು ಮತ್ತು ಫ್ರಂಟ್‌ಲೈನ್ ಸ್ಟೇಸ್ ಕಾರ್ಯಕ್ರಮಗಳು Airbnb.org ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ವಿಕಸನಗೊಂಡಿವೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.
ನಮ್ಮ ಫ್ರಂಟ್‌ಲೈನ್ ಸ್ಟೇಸ್ ಕಾರ್ಯಕ್ರಮದ ಮೂಲಕ COVID-19 ಹರಡುವಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ ಮತ್ತು ಮೊದಲ ಪ್ರತಿಸ್ಪಂದಕರಿಗೆ ಅನೇಕ ಹೋಸ್ಟ್‌ಗಳು ವ್ಯಸ್ತವ್ಯಯಕ್ಕೆ ಸ್ಥಳಗಳನ್ನು ನೀಡುತ್ತಿದ್ದಾರೆ. ತಮ್ಮ ನಿರ್ಣಾಯಕ ಕೆಲಸವನ್ನು ನಿರ್ವಹಿಸುವಾಗ ವಾಸಿಸಲು ಮನೆಗಳನ್ನು ಕಂಡುಕೊಂಡ ಮೂವರು COVID-19 ಪ್ರತಿಸ್ಪಂದಕರ ಸ್ಪೂರ್ತಿದಾಯಕ ಕಥೆಗಳು ಇಲ್ಲಿವೆ.
ರೋಮ್‌ನಲ್ಲಿ ಕೆಲಸ ಮಾಡುವಾಗ ವಾಸ್ತವ್ಯ ಹೂಡಬಹುದಾದ ವಿಶ್ರಾಂತಿ ಸ್ಥಳ
ಚಿಯಾರಾ ಇಟಲಿಯಲ್ಲಿ ನರ್ಸ್ ಆಗಿದ್ದು, ದೇಶದ ಬಿಕ್ಕಟ್ಟಿನ ಸಮಯದಲ್ಲಿ ರೋಮ್‌ಗೆ ತೆರಳಿದರು. ನಗರವು ಬಹುತೇಕ ಖಾಲಿಯಾಗಿರುವುದನ್ನು ನೋಡಿ ಅವರು ಆಶ್ಚರ್ಯಚಕಿತರಾದರು. ಅವರು ಮೊದಲು ಭೇಟಿ ನೀಡಿದಾಗ, ಅದು ಜೀವನದಿಂದ ತುಂಬಿದ ಅಸ್ತವ್ಯಸ್ತಗೊಂಡ ನಗರವಾಗಿತ್ತು - ಮತ್ತು ಈಗ ಅದು ಖಾಲಿ ಹೊಡೆಯುತ್ತಿತ್ತು.
ಆದರೆ ಅವರು ಪ್ರವಾಸಿಗರಾಗಿ ಅಲ್ಲಿಗೆ ಹೋಗಿರಲಿಲ್ಲ-COVID-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಿರ್ಣಾಯಕ ಪಾತ್ರ ವಹಿಸಿದ್ದರು.
ಈ ಕೆಲಸವು ಅವರು ಇದುವರೆಗಿನ ಅನುಭವಿಕ್ಕಿಂತೂ ಭಿನ್ನವಾಗಿತ್ತು ಮತ್ತು ದೀರ್ಘ ಗಂಟೆಗಳ ಕೆಲಸ ಮಾನಸಿಕ ಸುಸ್ತಿಗೆ ಕಾರಣವಾಯಿತು. ಅವರು ಮಾಲಿನ್ಯದ ಬಗ್ಗೆ ಮತ್ತು ರೋಗಿಗಳು ಮತ್ತು ಅವರ ಕುಟುಂಬಗಳ ನಡುವಿನ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಭಾವನಾತ್ಮಕ ಕೆಲಸವನ್ನು ಮಾಡುತ್ತಿರುವಾಗ ರೋಗಿಗಳನ್ನು ನೋಡಿಕೊಳ್ಳುವುದರ ಬಗ್ಗೆ ನಿರಂತರವಾಗಿ ಚಿಂತಿಸುತ್ತಿದ್ದರು.
ಚಿಯಾರಾ ಅವರಿಗೆ ತಮ್ಮ ಸುದೀರ್ಘ ದಿನಗಳ ನಂತರ ವಿಶ್ರಾಂತಿ ಪಡೆಯಲು ಒಂದು ಸ್ಥಳದ ಅಗತ್ಯವಿತ್ತು ಮತ್ತು ಅವರು ಅದನ್ನು Airbnb ನಲ್ಲಿ ಕಂಡುಕೊಂಡರು. "Airbnb ಉಪಕ್ರಮವು ನನಗೆ ಮಾತ್ರವಲ್ಲ, ಈ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುವ ಇತರ ಅನೇಕ ವೃತ್ತಿಪರರಿಗೂ ಸಹಾಯ ಮಾಡಿದೆ" ಎಂದು ಚಿಯಾರಾ ಹೇಳುತ್ತಾರೆ. "ಈ ಸಮಯದಲ್ಲಿ ಮನೆ ಹೊಂದಿರುವುದು ನನಗೆ ಸುರಕ್ಷಿತ ಭಾವನೆ ನೀಡುತ್ತದೆ. ಇದು ಪೂರ್ಣ ದಿನದ ಕಠಿಣ ಪರಿಶ್ರಮದ ನಂತರ ನಾನು ಹಿಂತಿರುಗಬಹುದಾದ ಸ್ಥಳವಾಗಿದೆ."
ಅವರು ಮನೆಗೆ ಬರುತ್ತಾರೆ, ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಮತ್ತು ರೀಚಾರ್ಜ್ ಆಗುತ್ತಾರೆ. ಆದ್ದರಿಂದ ಅವರು ಮರುದಿನ ಕೆಲಸವನ್ನು ಮಾಡಲು ಹುಮ್ಮಸ್ಸಿನಿಂದ ಹಿಂದಿರುಗಬಹುದು. "ಆರೋಗ್ಯ ವೃತ್ತಿಪರರಿಗೆ ತಮ್ಮ ಬಾಗಿಲು ತೆರೆಯುವ ಬಗ್ಗೆ ಯೋಚಿಸುತ್ತಿರುವ ಜನರಿಗೆ, ನಮಗೆ ನೀವು ಬೇಕಾಗಿರುವುದರಿಂದ ನಾನು ‘ಹಾಗೆ ಮಾಡಿ’ ಎಂದು ಹೇಳುತ್ತೇನೆ. ನಮಗೆ ವಾಸ್ತವ್ಯ ಹೂಡಲು ಸ್ಥಳ ಬೇಕು, ನಮ್ಮ ತಲೆಯ ಮೇಲೆ ಛಾವಣಿಯ ಅಗತ್ಯವಿದೆ-ಇದು ನಿರ್ಣಾಯಕವಾಗಿದೆ."
ಕೆನಡಾದಲ್ಲಿ ಒಂಟಿಯಾಗಿ ಇರುವುದಕ್ಕೆ ಶಾಂತವಾದ ಸ್ಥಳ
ಜಿ ಅವರು ತಮ್ಮ ಮಗಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಅವರ ವಯಸ್ಸಾದ ಹೆತ್ತವರೊಂದಿಗೆ, ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಾರೆ. ಅವರು ತಮ್ಮ ಕುಟುಂಬದಿಂದ ದೂರವಿರಲು ಕೈಗೆಟುಕುವ ವಸತಿ ಆಯ್ಕೆಗಳನ್ನು ಹುಡುಕುತ್ತಾ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ. ಈ ನಿರ್ಧಾರವು ಕಷ್ಟಕರವಾಗಿತ್ತು, ಆದರೆ ಇದು ಸರಿಯಾದ ಕೆಲಸ ಎಂದು ಅವರಿಗೆ ತಿಳಿದಿತ್ತು.
ರೋಗಿಗಳನ್ನು ನೋಡಿಕೊಳ್ಳುವಲ್ಲಿ ಆರೋಗ್ಯ ಕಾರ್ಯಕರ್ತರು ವೃತ್ತಿಪರ ಬಾಧ್ಯತೆಯನ್ನು ಹೊಂದಿದ್ದರೂ, "ಹೆಚ್ಚುವರಿ ಅಪಾಯಗಳಿಗೆ ಒಳಗಾಗಲು ಅವರ ಕುಟುಂಬಗಳು ಯಾವುದೇ ರೀತಿಯಲ್ಲಿ ಬಾಧ್ಯತೆ ಹೊಂದಿಲ್ಲ" ಎಂದು ಜಿ ಹೇಳುತ್ತಾರೆ. ಆದ್ದರಿಂದ ಆಸ್ಪತ್ರೆಯಲ್ಲಿನ ಕಷ್ಟಕರ ಕೆಲಸದ ಜೊತೆಗೆ, ಅವರ ಕುಟುಂಬವು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಅವರಿಂದ, ವಿಶೇಷವಾಗಿ ಅವರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ತಂದೆಯಿಂದ ಹೇಗೆ ದೂರವಿರಬೇಕು ಎಂಬುದರ ಬಗ್ಗೆ ಅವರು ಚಿಂತಿತರಾಗಿದ್ದರು. ಮನೆ ಬಿಟ್ಟು ಹೋಗುವುದು ಉತ್ತಮ ಆಯ್ಕೆಯಾಗಿತ್ತು.
ಅವರು ಹೆಚ್ಚು ಹತಾಶರಾಗಿದ್ದರು ಮತ್ತು ಅವರ ಕಾರಿನಲ್ಲಿಯೇ ವಾಸಿಸುವುದನ್ನು ಪರಿಗಣಿಸುತ್ತಿದ್ದಾಗ Airbnb ಯ ಪ್ರೋಗ್ರಾಂ ಬಗ್ಗೆ ತಿಳಿದುಕೊಂಡರು. ಮುಂಚೂಣಿಯಲ್ಲಿರುವ ನರ್ಸ್ ಆಗಿ ತಮ್ಮ ಸ್ಟೇಟಸ್ ಅನ್ನು ಆಕೆ ಪರಿಶೀಲಿಸಿ ದೃಢೀಕರಿಸಿಕೊಂಡ ಕೂಡಲೇ, ತಾವು ಮನೆ ಎಂದು ಕರೆಯಬಹುದಾದ ಸ್ಥಳವನ್ನು ಅವರು Airbnb ಯಲ್ಲಿ ಕಂಡುಕೊಂಡರು. ಅಗತ್ಯವಿದ್ದರೆ ಅವರಿಗೆ 24/7 ಬೆಂಬಲವನ್ನು ನೀಡುವ ಹೋಸ್ಟ್ ಇದ್ದ ಅವರ ವಸತಿ ಸೌಕರ್ಯಗಳು ಆಸ್ಪತ್ರೆಯ ಸಮೀಪದಲ್ಲಿದ್ದವು.
"ಅಗತ್ಯ ವಸ್ತುಗಳ ಉತ್ತಮ ಸಂಗ್ರಹವಿರುವ, ಸುರಕ್ಷಿತ ಮತ್ತು ಶಾಂತಿಯುತವಾಗಿರುವ ತಮ್ಮ ಅದ್ಭುತವಾದ ಮನೆಯನ್ನು ಬಳಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನನ್ನ ಹೋಸ್ಟ್‌ಗೆ ನಾನು ಧನ್ಯವಾದ ಹೇಳಿದಷ್ಟೂ ಸಾಲದು," ಎಂದು ಜಿ ಹೇಳುತ್ತಾರೆ. "ನಾನು ನಿಶ್ಚಿಂತೆಯಿಂದ ವಿಶ್ರಾಂತಿ ಪಡೆಯಬಹುದು ಮತ್ತು ನಾನು ಪ್ರೀತಿಸುವವರನ್ನು ರಕ್ಷಿಸಲು ಮತ್ತು ಸಕಾರಾತ್ಮಕ ಭಾವನೆಗಳೊಂದಿಗೆ ಕೆಲಸಕ್ಕೆ ತೆರಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ."
ಮಿಚಿಗನ್‌ನಲ್ಲಿ ಮನೆಯಿಂದ ದೂರದಲ್ಲಿರುವ ಮನೆ
ಬ್ರಾಂಡಿ ಅವರು ಮಿಸ್ಸಿಸ್ಸಿಪ್ಪಿಯಲ್ಲಿ ಔದ್ಯೋಗಿಕ ಥೆರಪಿಸ್ಟ್ ಆಗಿದ್ದಾರೆ. ಸಾಂಕ್ರಾಮಿಕಕ್ಕಿಂತ ಮೊದಲು, ವೈದ್ಯಕೀಯ ಆಘಾತ, ನರ ಸಂಬಂಧಿತ ಅಸ್ವಸ್ಥತೆ ಅಥವಾ ದೀರ್ಘಕಾಲದ ಕಾಯಿಲೆಯಿಂದ ಪುನರ್ವಸತಿ ಪಡೆಯುವಾಗ ರೋಗಿಗಳಿಗೆ ಕ್ರಿಯಾತ್ಮಕ ಸ್ವಾತಂತ್ರ್ಯದ ಸ್ಥಿತಿಯನ್ನು ತಲುಪಲು ಸಹಾಯ ಮಾಡುವತ್ತ ಅವರು ಗಮನ ಹರಿಸಿದ್ದರು.
ಈಗ ಅವರ ಕೆಲಸವು ಅದೇ ರೀತಿಯ ರೋಗಿಗಳಿಗೆ, ಆದರೆ COVID-19 ನಿಂದ ಸಹ ಬಾಧಿತರಾದವರಿಗೆ ಹಾಗೂ ಕಾಯಿಲೆಯ ತೀವ್ರ ಪರಿಣಾಮವನ್ನು ಎದುರಿಸುವ ಅಪಾಯವನ್ನು ಹೊಂದಿದವರಿಗೆ ಸೇವೆಯನ್ನು ಒದಗಿಸುವುದರತ್ತ ಕೇಂದ್ರಿತವಾಗಿದೆ. ಆಕೆ ಆರಂಭಿಕ ಹಂತಗಳಲ್ಲಿ ಅವರ ಚಲನಶೀಲತೆ ಮತ್ತು ಅವರ ಚೇತರಿಕೆಗೆ ಸಹಾಯ ಮಾಡುತ್ತಾರೆ ಮತ್ತು ಅವರ ಪರಿಣತಿ ಎಷ್ಟಿದೆಯೆಂದರೆ ಅವರು ರೋಗಿಗಳಿಗೆ ಸಹಾಯ ಮಾಡಲು ಪ್ರಯಾಣಗಳನ್ನೂ ಕೈಗೊಳ್ಳುತ್ತಾರೆ.
ಅವರು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದ ಮಿಚಿಗನ್‌ನಲ್ಲಿ ಉಳಿಯಲು ಸ್ಥಳವನ್ನು ಹುಡುಕುತ್ತಿದ್ದರು, ಆದರೆ ಫ್ರಂಟ್‌ಲೈನ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ವಸತಿ ನಿರಾಕರಿಸಲ್ಪಟ್ಟ ಆರೋಗ್ಯ ಕಾರ್ಯಕರ್ತರ ಬಗ್ಗೆ ಕೇಳಿದ್ದರು. Airbnb ಯ ಫ್ರಂಟ್‌ಲೈನ್ ಸ್ಟೇಸ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ಹೊಂದಿದ್ದಕ್ಕಾಗಿ ಅವರು ಕೃತಜ್ಞರಾಗಿದ್ದರು, ಅಲ್ಲಿ ಅವರು ತಮಗೆ "ಸ್ವಚ್ಛ ವಾತಾವರಣ ಮತ್ತು ಉಳಿಯಲು ಸುರಕ್ಷಿತ ಸ್ಥಳವನ್ನು" ಒದಗಿಸಿದ ಹೋಸ್ಟ್ ಜಾನ್ ಅವರನ್ನು ಕಂಡುಕೊಂಡರು. "
ಫ್ರಂಟ್‌ಲೈನ್ ಸ್ಟೇಗಳನ್ನು ಬಳಸಲು ಬ್ರಾಂಡಿ ಇತರ ಆರೋಗ್ಯ ವೃತ್ತಿಪರರನ್ನು ಪ್ರೋತ್ಸಾಹಿಸುತ್ತಾರೆ ಏಕೆಂದರೆ "ನಿಮ್ಮ ಸೌಲಭ್ಯಕ್ಕೆ ಹತ್ತಿರವಿರುವ ಅನೇಕ ಆಯ್ಕೆಗಳನ್ನು ನೀವು ಹೊಂದಿದ್ದೀರಿ... ಮತ್ತು ಹೋಸ್ಟ್‌ಗಳು ನಿಮ್ಮನ್ನು ತೆರೆದ ಕೈಗಳಿಂದ ಬರಮಾಡಿಕೊಳ್ಳಲು ಸಿದ್ಧರಿದ್ದಾರೆ."
ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
ಫ್ರಂಟ್‌ಲೈನ್ ಸ್ಟೇಸ್ ಕಾರ್ಯಕ್ರಮ COVID-19 ಉಳಿಯಲು ಸ್ಥಳವನ್ನು ಕಂಡುಕೊಳ್ಳುವಲ್ಲಿ ತೊಂದರೆ ಅನುಭವಿಸುವ ಪ್ರತಿಸ್ಪಂದಕರಿಗೆ ಸ್ಥಳಗಳನ್ನು ನೀಡುತ್ತದೆ
ತಾವು ಕಂಡುಕೊಂಡ ಮನೆಯು ತಮಗೆ ಪುನಶ್ಚೇತನಗೊಳ್ಳಲು "ಸುರಕ್ಷಿತ ತಾಣ" ಆಗಿತ್ತು ಎಂದು ಇಟಲಿಯ ಒಬ್ಬರು ನರ್ಸ್ ಹೇಳುತ್ತಾರೆ
ಮಿಸ್ಸಿಸ್ಸಿಪ್ಪಿಯಿಂದ ಪ್ರಯಾಣಿಸಿದ ನರ್ಸ್ ಒಬ್ಬರಿಗೆ ಮಿಚಿಗನ್‌ನಲ್ಲಿ ಕೆಲಸ ಮಾಡುವಾಗ ತಮ್ಮ ಹೋಸ್ಟ್‌ನೊಂದಿಗೆ ಸಂಪರ್ಕ ಸಾಧಿಸುವಂತಾಗಿದ್ದು ಖುಷಿ ನೀಡಿತ್ತು