ಇರಾಕ್‌ನಿಂದ ಬಂದ ನಿರಾಶ್ರಿತ ಕುಟುಂಬವು ಡೆನ್ವರ್‌ನಲ್ಲಿ ಹೇಗೆ ಹೊಂದಿಕೊಂಡಿತು
ವಿಶೇಷ ಆಕರ್ಷಣೆಗಳು
Airbnb ಯ ಉಚಿತ ಮನೆಗಳ ಕಾರ್ಯಕ್ರಮದ ಮೂಲಕ, ಇರಾಕ್‌ನ ನಿರಾಶ್ರಿತರಾದ ಮೌಸಾ ಅವರನ್ನು ಹೋಸ್ಟ್ ಮಾಡುವ ಬಗ್ಗೆ ಸುಸಾನ್ ಅವರನ್ನು ಸಂಪರ್ಕಿಸಲಾಯಿತು
ಸುಸಾನ್ ಮತ್ತು ಅವಳ ಪತಿ ಡೆನ್ವರ್‌ನಲ್ಲಿರುವ ತಮ್ಮ ಮನೆಯಲ್ಲಿ ಮೌಸಾ, ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಸ್ವಾಗತಿಸಿದರು
ಅನುಭವವು ಅಪರಿಚಿತರನ್ನು ಕುಟುಂಬವಾಗಿ ಪರಿವರ್ತಿಸಿತು
ಉಚಿತ ಮನೆಗಳು ಈಗ Airbnb.org ಆಗಿದೆ
Airbnb ಯ ಉಚಿತ ಮನೆಗಳ ಪ್ರೋಗ್ರಾಂ ಹೊಚ್ಚ ಹೊಸ 501(c)(3) ಲಾಭೋದ್ದೇಶ-ರಹಿತ ಸಂಸ್ಥೆಯಾಗಿ Airbnb.org ಆಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ಸೃಷ್ಟಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಿರುವುದು ನಮಗೆ ಖುಷಿ ತಂದಿದೆ.
ಇರಾಕ್‌ನ ನಿರಾಶ್ರಿತರಾದ ಮೌಸಾ ಅವರನ್ನು ಹೋಸ್ಟ್ ಮಾಡುವ ಬಗ್ಗೆ ಅಂತರರಾಷ್ಟ್ರೀಯ ರಕ್ಷಣಾ ಸಮಿತಿಯು ಡೆನ್ವರ್‌ನಲ್ಲಿರುವ ಉಚಿತ ಮನೆಗಳ ಹೋಸ್ಟ್ ಸುಸಾನ್ ಅವರನ್ನು ಸಂಪರ್ಕಿಸಿದಾಗ, ಅವರು ತಕ್ಷಣವೇ ಹೌದು ಎಂದು ಹೇಳಿದರು. ಈ ಅನುಭವವು ಅವರಿಬ್ಬರಿಗೂ ಪರಿವರ್ತನಾತ್ಮಕವಾಗಿತ್ತು.
ಮೌಸಾ ಅವರು ಸಾವಿನ ಬೆದರಿಕೆಗಳನ್ನು ಸ್ವೀಕರಿಸಿದಾಗ ಯುಎಸ್‌ಗೆ ವ್ಯಾಖ್ಯಾನಕಾರರಾಗಿ ಕೆಲಸ ಮಾಡುತ್ತಿದ್ದರು—ಆದ್ದರಿಂದ ಅವರು ಮತ್ತು ಅವರ ಕುಟುಂಬವು ಮುಂದಿನ ಜೀವನ ಹೇಗೆ ಎಂದು ತಿಳಿಯದೇ ಇರಾಕ್‌ನಲ್ಲಿರುವ ತಮ್ಮ ಮನೆಯನ್ನು ತೊರೆದರು. ಹೊಂದಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿತು, ಆದರೆ ಅವರು ಡೆನ್ವರ್‌ನಲ್ಲಿ ಸುಸಾನ್ ಮತ್ತು ಅವರ ಸಮುದಾಯದೊಂದಿಗೆ ಹೊಸ ಕುಟುಂಬ ಬಂಧವನ್ನು ರಚಿಸಿದಾಗ ಅವರ ಭಯವು ಕಣ್ಮರೆಯಾಯಿತು.
"ಒಮ್ಮೆ ನೀವು ಅಪರಿಚಿತರೆಂದು ಭಾವಿಸಿದ ವ್ಯಕ್ತಿಯೊಂದಿಗೆ ಬೆರೆಯಲು ಶುರಮಾಡಿದ ತಕ್ಷಣ, ಎಲ್ಲರೂ ಮನುಷ್ಯರೇ ಎಂದು ನೀವು ತಿಳಿದುಕೊಳ್ಳುತ್ತೀರಿ" ಎಂದು ಹೋಸ್ಟ್ ಸುಸಾನ್ ಹೇಳುತ್ತಾರೆ. "ನಾವು ಹೊಂದಿರುವ ಸಾಮಾನ್ಯತೆಯು ವ್ಯತ್ಯಾಸಗಳಿಗಿಂತ ತುಂಬಾ ಹೆಚ್ಚಾಗಿದೆ."
ಬೆಳೆಯುತ್ತಿರುವ ಸಮುದಾಯಕ್ಕೆ ಸೇರಿಕೊಳ್ಳಿ ಅದು ಅಗತ್ಯದ ಸಮಯದಲ್ಲಿ ಹಂಚಿಕೊಳ್ಳುವ ಶಕ್ತಿಯನ್ನು ಅನಾವರಣ ಮಾಡುತ್ತದೆ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
Airbnb ಯ ಉಚಿತ ಮನೆಗಳ ಕಾರ್ಯಕ್ರಮದ ಮೂಲಕ, ಇರಾಕ್‌ನ ನಿರಾಶ್ರಿತರಾದ ಮೌಸಾ ಅವರನ್ನು ಹೋಸ್ಟ್ ಮಾಡುವ ಬಗ್ಗೆ ಸುಸಾನ್ ಅವರನ್ನು ಸಂಪರ್ಕಿಸಲಾಯಿತು
ಸುಸಾನ್ ಮತ್ತು ಅವಳ ಪತಿ ಡೆನ್ವರ್‌ನಲ್ಲಿರುವ ತಮ್ಮ ಮನೆಯಲ್ಲಿ ಮೌಸಾ, ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಸ್ವಾಗತಿಸಿದರು
ಅನುಭವವು ಅಪರಿಚಿತರನ್ನು ಕುಟುಂಬವಾಗಿ ಪರಿವರ್ತಿಸಿತು