ನಿರಾಶ್ರಿತರನ್ನು ತಮ್ಮ ಹೊಸ ಮನೆಗೆ ರೋಮ್‌ನ ನೆರೆಹೊರೆಯವರು ಹೇಗೆ ಸ್ವಾಗತಿಸಿದರು

ಮಾಲಿಯಿಂದ ಸ್ಥಳಾಂತರಗೊಂಡ ನಂತರ ಹೋಸ್ಟ್ ಮತ್ತು ಅವಳ ನೆರೆಹೊರೆಯವರು ಹೊಸಬರಿಗೆ ಹೊಂದಿಕೊಳ್ಳಲು ಸಹಾಯ ಮಾಡಿದರು.
Airbnb ಅವರಿಂದ ಜುಲೈ 2, 2018ರಂದು
2 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ರೋಮ್‌ನಲ್ಲಿ ವಾಸಿಸುತ್ತಿರುವ ಬೆಲ್ಜಿಯಂನವರಾಗಿ, ಒಮ್ಮೆ ತಾನು ಪಡೆದ ಇಟಾಲಿಯನ್ ಆತಿಥ್ಯಕ್ಕೆ ಪ್ರತಿಯಾಗಿ ಆತಿಥ್ಯವನ್ನು ನೀಡಲು ಎಲ್ಸ್‌ ಬಯಸಿದ್ದಾರೆ

  • ಇತ್ತೀಚೆಗೆ ನಿರಾಶ್ರಿತರ ಸ್ಥಾನಮಾನವನ್ನು ಪಡೆದ ಯುವಕ ಫೋಡ್ ಅನ್ನು ಹೋಸ್ಟ್ ಮಾಡುವ ಬಗ್ಗೆ Airbnb ಯ ಉಚಿತ ಮನೆಗಳು ಕಾರ್ಯಕ್ರಮದ ಮೂಲಕ ಅವರನ್ನು ಸಂಪರ್ಕಿಸಲಾಯಿತು

  • ಅವರ ವಾಸ್ತವ್ಯದ ಅವಧಿಯಲ್ಲಿ, ಫೋಡ್ ಮತ್ತು ಎಲ್ಸ್ ಅಪರಿಚಿತ ಸ್ಥಿತಿಯಿಂದ ಕುಟುಂಬವಾದರು.

ಉಚಿತ ಮನೆಗಳು ಈಗ Airbnb.org ಆಗಿದೆ

Airbnb ಯ ಉಚಿತ ಮನೆಗಳು ಪ್ರೋಗ್ರಾಂ ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ Airbnb.orgಆಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.

ರೋಮ್‌ನ ಸೂಪರ್‌ಹೋಸ್ಟ್ ಎಲ್ಸ್ ಅವರು Airbnb ಯಲ್ಲಿ ಉಚಿತ ಮನೆಗಳು ಪ್ರೋಗ್ರಾಂ ಬಗ್ಗೆ ಓದಿದಾಗ ಅವರಿಗೆ ಆಸಕ್ತಿ ಮೂಡಿತು ಮತ್ತು ಸೈನ್ ಅಪ್ ಮಾಡಲು ನಿರ್ಧರಿಸಿದರು. ಅವರು ಪ್ರಪಂಚದಾದ್ಯಂತದ ಪ್ರಯಾಣಿಕರನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ, ಆದರೆ ನಿರಾಶ್ರಿತರು ತಮ್ಮ ಹೊಸ ಸಮುದಾಯಗಳಲ್ಲಿ ನೆಲೆಸುವಾಗ ಅವರಿಗೆ ವಾಸ್ತವ್ಯ ಹೂಡಲು ತಾತ್ಕಾಲಿಕ ಸ್ಥಳವನ್ನು ನೀಡುವುದು ವಿಶೇಷ ಹೋಸ್ಟಿಂಗ್ ಅನುಭವವಾಗಿರುತ್ತದೆ ಎಂದು ಅವರು ತಿಳಿದಿದ್ದರು.

ಇತ್ತೀಚೆಗೆ ನಿರಾಶ್ರಿತರ ಸ್ಥಾನಮಾನವನ್ನು ಪಡೆದ ಪಶ್ಚಿಮ ಆಫ್ರಿಕಾದ ಮಾಲಿಯ ಯುವಕ ಫೋಡ್ ಅನ್ನು ಹೋಸ್ಟ್ ಮಾಡುವ ಬಗ್ಗೆ ಎಲ್ಸ್ ಅವರನ್ನು ರೆಫ್ಯೂಜೀಸ್ ವೆಲ್ಕಮ್ ಇಟಲಿಯಾ ಸಂಪರ್ಕಿಸಿದಾಗ ಒಬ್ಬರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಅವಕಾಶದ ಬಗ್ಗೆ ಅವರು ಉತ್ಸುಕರಾಗಿದ್ದರು. ಈ ಅನುಭವವು ಅವರಿಬ್ಬರಿಗೂ ಪರಿವರ್ತನಾತ್ಮಕವಾಯಿತು.

ಎಲ್ಸ್ ಪ್ರಪಂಚದಾದ್ಯಂತದ ಗೆಸ್ಟ್‌ಗಳನ್ನು ಸ್ವಾಗತಿಸಿದ್ದಾರೆ

ಫೋಡ್ ಅನ್ನು ಹೋಸ್ಟ್ ಮಾಡಲು ಎಲ್ಸ್ ಉದ್ವೇಗ ಮತ್ತು ಉತ್ಸುಕರಾಗಿದ್ದರು. ಬೆಲ್ಜಿಯಂನವರಾಗಿ ರೋಮ್‌ನಲ್ಲಿ ವಾಸಿಸುತ್ತಿರುವ ಅವರು ಅಪರಿಚಿತ ಸ್ಥಳದಲ್ಲಿ ಹೊಸ ಜೀವನವನ್ನು ಪ್ರಾರಂಭಿಸುವುದು ಏನೆಂದು ತಿಳಿದಿದ್ದರು ಮತ್ತು ಅವರು ತಾವು ಪಡೆದ ಇಟಾಲಿಯನ್ ಆತಿಥ್ಯವನ್ನು ಮುಂದಕ್ಕೆ ಪಾವತಿಸಲು ಬಯಸಿದ್ದರು. ರೆಫ್ಯೂಜೀಸ್ ವೆಲ್ಕಮ್ ಇಟಲಿಯಾದ ಕೇಸ್ ವರ್ಕರ್ ಸಾರಾ ಅವರ ಸಹಾಯದಿಂದ, ಅವರು ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಸಿದ್ಧರಾಗಿದ್ದರು ಮತ್ತು ಸಾರಾ ಪ್ರತಿ ಹಂತದಲ್ಲೂ ಬೆಂಬಲಕ್ಕಾಗಿ ಇರುತ್ತಾರೆ ಎಂದು ತಿಳಿದಿದ್ದರು.

ಆಲ್ಫ್ರೆಸ್ಕೊ ಡಿನ್ನರ್‌ಗೆ ಫೋಡ್, ಎಲ್ಸ್ ಮತ್ತು ಅವರ ನೆರೆಹೊರೆಯವರನ್ನು ಸೇರಿಕೊಂಡ ರೆಫ್ಯುಜೀಸ್ ವೆಲ್‌ಕಮ್‌ನ ಸಾರಾ

ಎಲ್ಸ್ ಫೋಡ್ ಅನ್ನು ಭೇಟಿಯಾದಾಗ, ಅವರ ಮಧ್ಯೆ ಬಂಧವು ಬೆಳೆಯಿತು. ಎಲ್ಸ್ ಅವರ ಮಗನಷ್ಟೇ ವಯಸ್ಸಿನವರು ಫೋಡ್ ಮತ್ತು ಅವರಿಗೆ "ತಾಯಿಯ ಭಾವ" ಮೂಡಿತು. ಹೀಗಾಗಿ, ಅವರು ತಮ್ಮ ಪ್ರಯಾಣದ ವಿವರಗಳನ್ನು ಹಂಚಿಕೊಂಡರು. ಫೋಡ್ ಅವರ ವಾಸ್ತವ್ಯದ ಅವಧಿಯಲ್ಲಿ, ಅವರು ಅಪರಿಚಿತರಾಗುಳಿಯದೆ ಕುಟುಂಬವಾದರು. ಆಕೆಯ ನೆರೆಹೊರೆಯವರು ಸಹ ಫೋಡ್ ಅವರ ಜೀವನದ ಭಾಗವಾದರು. ಮೊದಲು ಬೆಲ್ಜಿಯಂನಿಂದ ಬಂದಾಗ ಅವರು ಎಲ್ಸ್ ಅವರನ್ನು ಸ್ವಾಗತಿಸಿದಂತೆಯೇ, ಫೋಡ್‌ಗೆ ಅದೇ ಆತಿಥ್ಯ ಮತ್ತು ಪ್ರೀತಿಯನ್ನು ತೋರಿಸಿದರು. ಎಲ್ಸ್ ಸುತ್ತಮುತ್ತ ಇಲ್ಲದಿದ್ದಾಗ, ಫೋಡ್ ಆಗಾಗ್ಗೆ ಮೇಲಿನ ಮನೆಯವರೊಂದಿಗೆ ಸಮಯ ಕಳೆದರು, ಇಟಾಲಿಯನ್ ಭಕ್ಷ್ಯಗಳ ರುಚಿ ನೋಡಿದರು ಮತ್ತು ಪರಸ್ಪರರ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಿದ್ದರು.

ಅವರು ಇಟಲಿಗೆ ಬಂದಾಗಿನಿಂದ ಎಲ್ಸ್ ಅವರೊಂದಿಗೆ ವಾಸಿಸುತ್ತಿರುವಾಗಿನ ಕ್ಷಣಗಳು ಅತ್ಯಂತ ಸಂತೋಷಕರವಾಗಿತ್ತು ಎಂದು ಫೋಡ್ ಹೇಳುತ್ತಾರೆ. ಅವರಿಗೆ ಈ ಎಲ್ಲ ಇಟಾಲಿಯನ್ನರು ಕಾಳಜಿ ವಹಿಸುವುದನ್ನು ಕಂಡು ಅಚ್ಚರಿಯಾಯಿತು. ಅವರ ಕಾಳಜಿಯು ಕೇವಲ ತೋರಿಕೆಯದ್ದಾಗಿರಲಿಲ್ಲ. ಬದಲಿಗೆ, ಸಹಜವಾಗಿತ್ತು. ಹೊಸ ಜೀವನವನ್ನು ಪ್ರಾರಂಭಿಸುವುದು ಕಷ್ಟಕವಾಗಿರುತ್ತದೆ. ಆದರೆ ಇತರರು ವಿನಯವನ್ನು ತೋರಿದರೆ ಈ ಪ್ರಕ್ರಿಯೆ ಸುಲಭವಾಗಿರುತ್ತದೆ. ಈ ಅನುಭವವು ಎಲ್ಸ್ ಮತ್ತು ಫೋಡ್ ಅವರ ಜೀವನದ ಮೇಲೆ ಶಾಶ್ವತ ಪರಿಣಾಮವನ್ನು ಬೀರಿದೆ.

ಎಲ್ಸ್ ಮತ್ತು ಫೋಡ್ ತಮ್ಮ ನೆರೆಹೊರೆಯವರೊಂದಿಗೆ ಊಟವನ್ನು ಸಿದ್ಧಪಡಿಸುತ್ತಾರೆ

ಬೆಳೆಯುತ್ತಿರುವ ಸಮುದಾಯಕ್ಕೆ ಸೇರಿಕೊಳ್ಳಿ ಅದು ಅಗತ್ಯವಿರುವ ಸಮಯದಲ್ಲಿ ಹಂಚಿಕೊಳ್ಳುವ ಶಕ್ತಿಯನ್ನು ಅನಾವರಣ ಮಾಡುತ್ತದೆ.

ರೆಫ್ಯುಜೀಸ್ ವೆಲ್‌ಕಮ್‌ ಇಟಲಿಯಾ ಕುರಿತು

ರೆಫ್ಯುಜೀಸ್ ವೆಲ್‌ಕಮ್‌ ಇಟಲಿಯಾ (RWI) ಲಾಭೋದ್ದೇಶರಹಿತ ಸಂಸ್ಥೆಯಾಗಿದ್ದು, ಅದು Airbnb ಯ ಉಚಿತ ಮನೆಗಳು ಪ್ರೋಗ್ರಾಂನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಹೋಸ್ಟ್ ಮಾಡಲು ಬಯಸುವ ಸ್ಥಳೀಯ ಜನರೊಂದಿಗೆ (ಕುಟುಂಬಗಳು, ದಂಪತಿಗಳು, ಅವಿವಾಹಿತರು) ಹೊಂದಿಸಲು ಅಂತರರಾಷ್ಟ್ರೀಯ ರೆಫ್ಯುಜೀಸ್ ವೆಲ್‌ಕಮ್‌ ಜಾಲದ ಭಾಗವಾಗಿ RWI ಅನ್ನು ಡಿಸೆಂಬರ್ 2015 ರಲ್ಲಿ ಸ್ಥಾಪಿಸಲಾಯಿತು.

ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.

ವಿಶೇಷ ಆಕರ್ಷಣೆಗಳು

  • ರೋಮ್‌ನಲ್ಲಿ ವಾಸಿಸುತ್ತಿರುವ ಬೆಲ್ಜಿಯಂನವರಾಗಿ, ಒಮ್ಮೆ ತಾನು ಪಡೆದ ಇಟಾಲಿಯನ್ ಆತಿಥ್ಯಕ್ಕೆ ಪ್ರತಿಯಾಗಿ ಆತಿಥ್ಯವನ್ನು ನೀಡಲು ಎಲ್ಸ್‌ ಬಯಸಿದ್ದಾರೆ

  • ಇತ್ತೀಚೆಗೆ ನಿರಾಶ್ರಿತರ ಸ್ಥಾನಮಾನವನ್ನು ಪಡೆದ ಯುವಕ ಫೋಡ್ ಅನ್ನು ಹೋಸ್ಟ್ ಮಾಡುವ ಬಗ್ಗೆ Airbnb ಯ ಉಚಿತ ಮನೆಗಳು ಕಾರ್ಯಕ್ರಮದ ಮೂಲಕ ಅವರನ್ನು ಸಂಪರ್ಕಿಸಲಾಯಿತು

  • ಅವರ ವಾಸ್ತವ್ಯದ ಅವಧಿಯಲ್ಲಿ, ಫೋಡ್ ಮತ್ತು ಎಲ್ಸ್ ಅಪರಿಚಿತ ಸ್ಥಿತಿಯಿಂದ ಕುಟುಂಬವಾದರು.

Airbnb
ಜುಲೈ 2, 2018
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ