ಅಗ್ನಿ ಅನಾಹುತದ ನಂತರ ಸ್ನೇಹವನ್ನು ಬೆಳೆಸುವುದು

2018 ರಲ್ಲಿ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ನಂತರ, ಉಚಿತ ಮನೆಗಳ ಮೂಲಕ ಇಬ್ಬರು ಮಹಿಳೆಯರು ಸಂಪರ್ಕ ಸಾಧಿಸಿದ್ದಾರೆ.
Airbnb ಅವರಿಂದ ಮೇ 7, 2019ರಂದು
4 ನಿಮಿಷ ಓದಲು
ಆಗ 24, 2023 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ನಂತರ, ಹತ್ತಿರದ ಸಮುದಾಯಗಳಲ್ಲಿನ ಜನರು Airbnb ಯ ಓಪನ್ ಹೋಮ್ಸ್ ಕಾರ್ಯಕ್ರಮದ ಮೂಲಕ ತಾತ್ಕಾಲಿಕ ವಸತಿ ಒದಗಿಸಲು ಸೈನ್ ಅಪ್ ಮಾಡಿಕೊಂಡರು

  • ಮೆಲಿಸ್ಸಾ ಮತ್ತು ಅವರ ಕುಟುಂಬವು ಸ್ಯಾಕ್ರಮೆಂಟೊ ಉದ್ಯಮಿ ಸಿಂಡೆ ಅವರಲ್ಲಿ ಆಶ್ರಯ ಪಡೆದಿದೆ

  • ಸಿಂಡೆ ಅವರ ನೆರೆಹೊರೆಯವರು ಮೆಲಿಸ್ಸಾ ಅವರ ಕುಟುಂಬವನ್ನು ಬೆಂಬಲಿಸಲು ಸಹಾಯ ಮಾಡಿದರು ಮತ್ತು ಮಹಿಳೆಯರು ಸ್ನೇಹಿತರಾದರು

ಉಚಿತ ಮನೆಗಳು ಈಗ Airbnb.org ಆಗಿದೆ

Airbnb ಯ ಉಚಿತ ಮನೆಗಳು ಪ್ರೋಗ್ರಾಂ ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ Airbnb.orgಆಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.

ನವೆಂಬರ್ 8, 2018 ರ ಬೆಳಿಗ್ಗೆ, ಮೆಲಿಸ್ಸಾ ಜಾನ್ಸನ್ ಎಂಟಕ್ಕೂ ಹೆಚ್ಚು ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಮಕ್ಕಳು ಶಾಲೆಗೆ ಸಿದ್ಧವಾಗುತ್ತಿದ್ದಂತೆ ಅವರು ನಿದ್ರೆಗೆ ಜಾರಿದರು. ತನ್ನ ಪತಿ ಮತ್ತು ಮಗಳು ಕಿತ್ತಳೆ ಬಣ್ಣದ ಆಕಾಶದ ಬಗ್ಗೆ ಮಾತನಾಡುವುದನ್ನು ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ನೆರೆಹೊರೆಯ ಪಟ್ಟಣದಲ್ಲಿ ಬೆಂಕಿ ಸಂಭವಿಸಿರಬಹುದು ಎಂದು ಯೋಚಿಸುತ್ತಾಳೆ.

ಅರ್ಧ ಘಂಟೆಯ ನಂತರ, ಮೆಲಿಸ್ಸಾ ಅವರ ಮಗಳು ಕರೆ ಮಾಡುತ್ತಾರೆ. "ಶಾಲೆಗೆ ರಜೆ ನೀಡಲಾಗಿದೆ ಎಂದು ಅವರು ಹೇಳಿದರು. ನಾನು ಎದ್ದು, ಆಕಾಶವನ್ನು ನೋಡಿದೆ. ಆಘಾತಕಾರಿಯಾಗಿತ್ತು"ಎಂದು ಮೆಲಿಸ್ಸಾ ಹೇಳುತ್ತಾರೆ. "ಅದು ಕೆಂಪು ಮತ್ತು ಕಿತ್ತಳೆ ಬಣ್ಣದ್ದಾಗಿತ್ತು ಮತ್ತು ಅದು ಪ್ರಳಯದ ದಿನದಂತೆ ಕಾಣುತ್ತಿತ್ತು. ಮತ್ತು ನಂತರ ನನಗೆ ಎಲ್ಲ ಕಡೆ ಬೂದಿ ಕಂಡುಬಂದು."

ಮೆಲಿಸ್ಸಾ ಮತ್ತು ಅವಳ ಪತಿ ಟ್ರೆವರ್ ಕ್ಯಾಲಿಫೋರ್ನಿಯಾದ ಪ್ಯಾರಡೈಸ್‌ನಲ್ಲಿ 14 ವರ್ಷಗಳಿಂದಲೂ ವಾಸಿಸುತ್ತಿದ್ದಾರೆ. ಆದರೆ, ರಾಜ್ಯದ ವಿನಾಶಕಾರಿ ಕಾಡ್ಗಿಚ್ಚಿಗೂ ಒಂದು ವಾರದ ಮೊದಲು ಅವರ ಮನೆಗೆ ಬಂದಿದ್ದರು. ಆ ದಿನ ಬೆಳಿಗ್ಗೆ, "ನನ್ನೊಳಗಿನ ಯಾವುದೋ ಒಂದು ಸಂಗತಿಯು ಹೇಳಿತು, ಸುರಕ್ಷತೆಗಾಗಿ, ಖಾತರಿಗಾಗಿ ನಾವು ಪ್ರತಿಯೊಂದನ್ನೂ ಪ್ಯಾಕ್ ಮಾಡಿಕೊಂಡು ಹೊರಗೆ ಹೋಗಬೇಕು."

ಮೆಲಿಸ್ಸಾ, ಟ್ರೆವರ್ ಮತ್ತು ಅವರ ಇಬ್ಬರು ಮಕ್ಕಳ ಜೊತೆಗೆ, "ಪ್ರತಿಯೊಬ್ಬರೂ" ಎಂಬುದು ಟ್ರೆವರ್ ಅವರ ತಂದೆ, ಇಬ್ಬರು ಗ್ರೇಟ್ ಡೇನ್ಸ್, ಆಟಿಕೆ ಪೂಡ್ಲ್, ಬೆಕ್ಕು ಮತ್ತು ಮೊಲವನ್ನೂ ಒಳಗೊಂಡಿತ್ತು. ಅವರು ಎರಡು ಕಾರುಗಳಲ್ಲಿ ತುಂಬಿಕೊಂಡರು ಮತ್ತು ಮೆಲಿಸ್ಸಾ ತನ್ನ ಮಕ್ಕಳನ್ನು ಕರೆದುಕೊಂಡು ಹೋದರು.

"ಜನರು ಭಯಭೀತರಾಗಿದ್ದರು ಮತ್ತು ಹುಚ್ಚರಂತೆ ವಾಹನ ಓಡಿಸುತ್ತಿದ್ದರು. ಇದು ಸಂಪೂರ್ಣವಾಗಿ ನೀವು ಚಲನಚಿತ್ರದಲ್ಲಿ ನೋಡುವ ಹಾಗೆಯೇ ಇತ್ತು. ನೀವು ಅದು ವಾಸ್ತವದಲ್ಲೂ ನಡೆಯುತ್ತದೆ ಮತ್ತು ಎಷ್ಟು ಭಯಾನಕವಾಗಿರುತ್ತದೆ ಎಂದು ಊಹಿಸಲೂ ಸಾಧ್ಯವಿರಲಿಲ್ಲ. ಬೆಂಕಿಯು ನಿಮ್ಮ ಎಡ, ಬಲ, ಮುಂದೆ, ಹಿಂದೆ ಎಲ್ಲ ಕಡೆಯೂ ಇದೆ. ಒಂದು ಕ್ಷಣ ನಾನು ಬೆಂಕಿಯೊಳಗೇ ಓಡುತ್ತಿರುವಂತೆ ಭಾಸವಾಯಿತು ಮತ್ತು ನಾನು ಯಾವ ಕಡೆಗೆ ಹೋಗಬೇಕೆಂದು ಸರಿಯಾದ ಆಯ್ಕೆ ಮಾಡುತ್ತಿದ್ದೇನೆಯೇ ಎಂದು ಕೂಡಾ ನನಗೆ ತಿಳಿದಿರಲಿಲ್ಲ. ನಾನು ಆ ಸಮಯದಲ್ಲಿ ಅಳುತ್ತಿದ್ದೆ."

ಕುಟುಂಬವು ಅಂತಿಮವಾಗಿ ಕ್ಯಾಲಿಫೋರ್ನಿಯಾದ ಚಿಕೊಗೆ ತೆರಳಿತು. ಅಲ್ಲಿ ಅವರು ಮೆಲಿಸ್ಸಾ ಅವರ ಸಹೋದರಿಯೊಂದಿಗೆ ವಾಸಿಸಬಹುದಾಗಿತ್ತು. ಆದರೆ ಇದು ನಾಲ್ಕು ಕುಟುಂಬಗಳನ್ನು ಹೋಸ್ಟ್ ಮಾಡುವ ಒಂದು ಮಲಗುವ ಕೋಣೆ ಹೊಂದಿರುವ ಅಪಾರ್ಟ್‌ಮೆಂಟ್ ಆಗಿತ್ತು. "ನಾವು ಒಟ್ಟು 15 ಜನರು ಮತ್ತು 18 ಅಥವಾ 19 ಪ್ರಾಣಿಗಳನ್ನು ಹೊಂದಿದ್ದೆವು" ಎಂದು ಮೆಲಿಸ್ಸಾ ಹೇಳುತ್ತಾರೆ. "ನನ್ನ ತಾಯಿ ತನ್ನ ಡುರಾಂಗೊದಲ್ಲಿ ಮಲಗಿದ್ದಳು. ಬಹುಶಃ 500 ಚದರ ಅಡಿ ಇರಬಹುದಾದ ಆ ಅಪಾರ್ಟ್‌ಮೆಂಟ್ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ನಾನು ಗರ್ಭಿಣಿಯಾಗಿದ್ದುದರಿಂದ, ಅದು ತುಂಬಾ ಅನಾನುಕೂಲವಾಗಿತ್ತು. ಆದ್ದರಿಂದ ನಾವು ಬೇರೆ ಏನನ್ನಾದರೂ ಯೋಚಿಸಬೇಕಾಗಿದೆ ಎಂದು ನನಗೆ ತಿಳಿದಿತ್ತು."

"ಆಲ್ ಇನ್‌" ಹೋಗಿದ್ದು

ಕ್ಯಾಂಪ್ ಫೈರ್ ಪ್ರಾರಂಭವಾದ ಕೆಲವು ದಿನಗಳ ನಂತರ, ಸಿಂಡೆ ಡಾಲ್ಫಿನ್ ಚರ್ಚ್‌ನಲ್ಲಿ ಕುಳಿತು, ತನ್ನ ಪಾದ್ರಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. "ಎರಡೂ ಕಾಲುಗಳಿಂದ ಜಿಗಿದು ನಿಮ್ಮ ಜೀವನವನ್ನು ನಿಜವಾಗಿಯೂ ಮೌಲ್ಯಯುತವಾಗಿಸುತ್ತದೆ ಎಂದು ಅವರು ವಿವರಿಸುತ್ತಿದ್ದರು" ಎಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಉದ್ಯಮಿ ಸಿಂಡೆ ಹೇಳುತ್ತಾರೆ.

ಆಜೀವ ಸ್ವಯಂಸೇವಕರಾಗಿರುವ ಸಿಂಡೆ ಈಗಾಗಲೇ ಚರ್ಚ್ ಯುವ ಗುಂಪುಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ಪೋಷಕರ ಆರೈಕೆಯಲ್ಲಿ ಹದಿಹರೆಯದವರಿಗೆ ಮಾರ್ಗದರ್ಶನ ನೀಡುವುದು ಮತ್ತು ನಿರಾಶ್ರಿತರಿಗೆ ಉಪಾಹಾರಗಳನ್ನು ಆಯೋಜಿಸುವುದು ಇತ್ಯಾದಿಯನ್ನು ಮಾಡುತ್ತಿದ್ದಾರೆ. "ಆದರೆ, ನಾನು ಈ ಮಾತುಗಳನ್ನು ಕೇಳುತ್ತಿರುವಾಗ, ‘ಬಟ್ಟೆ ಕೌಂಟಿಯಲ್ಲಿ, ಈ ಭಯಾನಕ ಅಗ್ನಿ ಅನಾಹುತದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ನಾನು ಸಹಾಯ ಮಾಡುತ್ತಿಲ್ಲ’ ಎಂದು ನನಗೆ ಅನಿಸುತ್ತಿತ್ತು. ಒಂದಷ್ಟು ಬ್ಲಾಂಕೆಟ್‌ಗಳು ಮತ್ತು ಟೀ ಶರ್ಟ್‌ಗಳನ್ನು ಕಳುಹಿಸುವುದು ತುಂಬಾ ಒಳ್ಳೆಯದು. ಆದರೆ ಚೇತರಿಕೆ ಪ್ರಕ್ರಿಯೆಯಲ್ಲಿ ನಾನು ಹೇಗೆ ಭಾಗವಹಿಸಬಹುದು?"

ಅವಳು ತನ್ನ ಸ್ಥಳೀಯ ಅಗ್ನಿಶಾಮಕ ಇಲಾಖೆಯನ್ನು ಸಂಪರ್ಕಿಸಿದರು ಮತ್ತು ಅವರು ಓಪನ್ ಹೋಮ್ಸ್ ಅನ್ನು ತೋರಿಸಿದರು. ಸಿಂಡೆ ಎಂದಿಗೂ Airbnb ಗೆಸ್ಟ್‌ಗಳನ್ನು ಹೋಸ್ಟ್‌ ಮಾಡಿರಲಿಲ್ಲ ಮತ್ತು ಅವರು ತಮ್ಮ ಸ್ಯಾಕ್ರಮೆಂಟೊ ಮನೆಯಲ್ಲಿ ಬಾಡಿಗೆದಾರರಾಗಿದ್ದಾರೆ. ಇದರಲ್ಲಿ ಮಾವನ ಗೆಸ್ಟ್ ಹೌಸ್‌ ಕೂಡಾ ಸೇರಿದೆ. ತನ್ನ ಜಮೀನುದಾರರ ಅನುಮತಿಯೊಂದಿಗೆ, ಅವರು ಸ್ಥಳವನ್ನು ಸ್ವಚ್ಛಗೊಳಿಸಿದರು ಮತ್ತು ಅದನ್ನು ಓಪನ್ ಹೋಮ್ಸ್ ವಿಪತ್ತು ಪರಿಹಾರ ಪುಟದಲ್ಲಿ ಪಟ್ಟಿ ಮಾಡಿದರು.

ಸಿಂಡೆ ಹೇಳುತ್ತಾರೆ, "ಒಂದು ಗಂಟೆಯೊಳಗೆ ಅವರು ಮೆಲಿಸ್ಸಾದಿಂದ ಸಂದೇಶವನ್ನು ಸ್ವೀಕರಿಸಿದ್ದಾರೆ". "ಆರಂಭಿಕ ಸಾಲು ಏನೆಂದರೆ, ‘ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂಬುದಾಗಿತ್ತು ಮತ್ತು ನಾನು ಅದನ್ನು ಎಂದಿಗೂ ಮರೆಯುವುದಿಲ್ಲ. ಮತ್ತು ನಂತರ [ಮೆಲಿಸ್ಸಾ] ತನ್ನ ಕುಟುಂಬದ ಬಗ್ಗೆ ವಿವರಿಸಿದರು: 11 ವರ್ಷದ ಮಗ, ಪತಿ, ಅಂಗವಿಕಲರಾಗಿರುವ ಮಾವ. ಅವರು ಹೇಳಿದರು, ‘ನಾವು ಈಗ ಹತಾಶರಾಗಿದ್ದೇವೆ. ಒಂದೆರಡು ನಾಯಿಗಳಿರುವ ಸಣ್ಣ ಕುಟುಂಬ ನಮ್ಮದು. ಇದು ಸ್ವಲ್ಪ ಸಮಸ್ಯೆ ಉಂಟುಮಾಡಬಹುದು ಎಂದು ನಮಗೆ ತಿಳಿದಿದೆ. ಆದರೆ, ನೀವು ಅದಕ್ಕೆ ಮುಕ್ತರಾಗಿದ್ದರೆ, ನಿಮ್ಮ ಸ್ಥಳದಲ್ಲಿ ವಾಸಿಸಲು ನಾವು ಇಷ್ಟಪಡುತ್ತೇವೆ. ಓಹ್, ಮತ್ತು ನಾನು ಗರ್ಭಿಣಿಯಾಗಿದ್ದೇನೆ.’ ಇಡೀ ಸನ್ನಿವೇಶವು ನನ್ನನ್ನು ಹೃದಯಕ್ಕೆ ನಾಟಿತು. ಯಾರಾದರೂ ಇದಕ್ಕೆ ಇಲ್ಲ ಎಂದು ಹೇಳಬಹುದೆಂದು ನನಗೆ ನಂಬಲು ಸಾಧ್ಯವಾಗಲಿಲ್ಲ."

ಸತ್ಯದ ಕ್ಷಣ

ಸಿಂಡೆ ತಕ್ಷಣವೇ ಪ್ರತಿಕ್ರಿಯಿಸಿದರು ಮತ್ತು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಮೆಲಿಸ್ಸಾ ಮತ್ತು ಅವರ ಕುಟುಂಬವು ಸ್ಯಾಕ್ರಮೆಂಟೊಗೆ ಆಗಮಿಸಿತು. ಮೊದಲ ಬಾರಿ ಹೋಸ್ಟ್ ಆಗಿ, ಸಿಂಡೆ ಮಿಶ್ರ ಭಾವನೆಗಳನ್ನು ಹೊಂದಿರುವುದನ್ನು ನೆನಪಿಸಿಕೊಳ್ಳುತ್ತಾರೆ. "ನಾನು ಆತಂಕಕ್ಕೊಳಗಾಗಿದ್ದೆ. ಏಕೆಂದರೆ, ನಾನು ಎಂದಿಗೂ ಅಪರಿಚಿತರಿಗೆ ಮನೆ ನೀಡಿರಲಿಲ್ಲ. ನಾನು ಬಾಗಿಲು ತೆರೆಯುವ ಮೊದಲು, ‘ನಾನು ಸರಿಯಾದ ಕೆಲಸವನ್ನು ಮಾಡುತ್ತಿದ್ದೇನೆ ಎನಿಸುತ್ತಿದೆ' ಎಂದುಕೊಳ್ಳುತ್ತಿದ್ದೆ. ನಾನು ಈ ಮನೆಯಲ್ಲಿ ನಾನು ಒಂಟಿಯಾಗಿ ವಾಸಿಸುತ್ತಿದ್ದೇನೆ ಮತ್ತು ಬಹುಶಃ ಇದು ಸರಿ ಅಲ್ಲ…’ ಆದರೆ, ನಾನು ಬಾಗಿಲು ತೆರೆದು [ಮೆಲಿಸ್ಸಾ] ಅವರನ್ನು ನೋಡಿದಾಗ, ನಾನು ಖಂಡಿತ ಸರಿಯಾದ ಕೆಲಸವನ್ನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿತ್ತು.

ಮೆಲಿಸ್ಸಾ ಕೂಡ ಆತಂಕಗೊಂಡಿರುವುದನ್ನು ನೆನಪಿಸಿಕೊಳ್ಳುತ್ತಾರೆ. "ನೀವು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲ ಮತ್ತು ಅಂತಹ ದೊಡ್ಡ, ದುರಂತದ ಆಘಾತವನ್ನು ಎದುರಿಸಿ ಬರುತ್ತಿರುವುದರಿಂದ, ಎಲ್ಲವನ್ನೂ ಅರಗಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿತ್ತು" ಎಂದು ಅವರು ಹೇಳುತ್ತಾರೆ. "ಆದರೆ ಸಿಂಡೆ ಮತ್ತು ಅವರ ನಗು ಎಲ್ಲವನ್ನೂ ಪ್ರಕಾಶಮಾನಗೊಳಿಸಿತು ಮತ್ತು ನಮಗೆ ಆರಾಮದಾಯಕ ಭಾವವನ್ನು ನೀಡಿತು. ಅವರು ತುಂಬಾ ಒಳ್ಳೆಯ ವ್ಯಕ್ತಿ."

ಸಿಂಡೆ ಕುಟುಂಬವು ಆರಾಮವಾಗಿರುವುದಕ್ಕೆ ಸಹಾಯವಾಗಲಿ ಎಂದು, ಸ್ವಚ್ಛವಾದ ಟವೆಲ್‌ಗಳು, ಒಂದೆರಡು ಸ್ಪೇಸ್ ಹೀಟರ್‌ಗಳು ಮತ್ತು ಹಾಟ್ ಚಾಕೊಲೇಟ್ ಅನ್ನು ಅತಿಥಿಗೃಹದಲ್ಲಿ ಇರಿಸಲು ಕೆಲವು ಸಿದ್ಧತೆಗಳನ್ನು ಮಾಡಿದ್ದರು. "ನೀವು ಹೊಸ ಸ್ಥಳಕ್ಕೆ ತೆರಳುತ್ತಿರುವಾಗ ನಿಮಗೆ ಏನು ಬೇಕಾಗಬಹುದು ಎಂದು ನಾನು ಊಹಿಸಿದೆ. ‘ನಾನೀಗ ಏನು ಮಾಡಬೇಕು?’ ಎಂದು ಯೋಚಿಸಿದೆ.

ಇಬ್ಬರು ಮಹಿಳೆಯರು ಲಾಜಿಸ್ಟಿಕ್ಸ್ ಬಗ್ಗೆ ಪದೇ ಪದೇ ಸಂದೇಶ ಕಳುಹಿಸುತ್ತಿದ್ದರು. ಹೀಗಾಗಿ, ಮೆಲಿಸ್ಸಾ ಅವರಿಗೆ ಸ್ಥಳದ ಬಗ್ಗೆ ಏನನ್ನು ನಿರೀಕ್ಷಿಸಬಹುದು ಎಂದು ತಿಳಿದಿತ್ತು. "ಇದು ತುಂಬಾ ಇಕ್ಕಟ್ಟಿನ ಸ್ಥಳವಾಗಿರಲಿದೆ ಎಂದು ಸಿಂಡೆ ನಮಗೆ ತಿಳಿಸಿದ್ದರು. ಆದರೆ, ಅವರಿಗೆ ತೊಂದರೆ ಇಲ್ಲದಿದ್ದರೆ ನಮಗೂ ತೊಂದರೆ ಇರಲಿಲ್ಲ. ಮತ್ತು ಖಂಡಿತ, ನಾವು ಯಾವುದಕ್ಕಾದರೂ ಹೊಂದಿಕೊಳ್ಳುತ್ತಿದ್ದೆವು. ಹೆಚ್ಚುವರಿ ಪುಲ್-ಔಟ್ ಹಾಸಿಗೆ, ಅದ್ಭುತವಾದ ಸಣ್ಣ ಶೌಚಾಲಯ ಇತ್ತು. ಇದು ತುಂಬಾ ಸುಂದರವಾಗಿತ್ತು. ಮನೆಯಿಂದ ದೂರದಲ್ಲಿರುವ ಮನೆಯಂತೆ ಭಾಸವಾಯಿತು."

ಫೇಸ್‌ಬುಕ್ ಮೂಲಕ, ಕ್ಯಾಂಪ್‌ ಫೈರ್‌ನಲ್ಲಿ ಎಲ್ಲವನ್ನೂ ಕಳೆದುಕೊಂಡ ಗೆಸ್ಟ್‌ಗಳನ್ನು ನಾನು ಹೋಸ್ಟ್ ಮಾಡಿದ್ದೇನೆ ಎಂದು ಸಿಂಡೆ ತನ್ನ ಸ್ನೇಹಿತರಿಗೆ ತಿಳಿಸಿದರು. ನೆರೆಹೊರೆಯವರು ಅಡುಗೆ ತಯಾರಿಸಿದರು ಮತ್ತು ಪ್ರಯಾಣಿಸುವಾಗ ಮಗುವಿಗೆ ಎಂದು ಡೈಪರ್‌ ಗಳು, ಬಟ್ಟೆ ಮತ್ತು ಪ್ಲೇಪೆನ್ ಅನ್ನು ವಿತರಿಸಿದರು. "ನನ್ನ ಸ್ನೇಹಿತರು ಒಂದಾದ ಮೇಲೆ ಒಂದು ತಂದುಕೊಟ್ಟರು" ಎಂದು ಸಿಂಡೆ ಹೇಳುತ್ತಾರೆ. "ನೀವು ಸಹಾಯ ಮಾಡುತ್ತಿರುವ ನಿಜವಾದ ಕುಟುಂಬದ ಬಗ್ಗೆ ನಿಮಗೆ ತಿಳಿದಿದ್ದರೆ ಅದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಒಂದು ಜೀವಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಜನರಿಗೆ ಮೊದಲೇ ತಿಳಿದಿರಬೇಕು."

ಮೆಲಿಸ್ಸಾ ಅವರ ಕುಟುಂಬವು ಇನ್ನಷ್ಟು ಶಾಶ್ವತ ಅಪಾರ್ಟ್‌ಮೆಂಟ್ ಅನ್ನು ಕಂಡುಕೊಳ್ಳುವುದಕ್ಕೂ ಮೊದಲು ಕೇವಲ ಮೂರು ರಾತ್ರಿಗಳ ಕಾಲ ಇದ್ದರೂ, ಸಿಂಡೆ ವಾಸ್ತವ್ಯದಲ್ಲಿ ಅವರು ಕಳೆದ ಸಮಯವು ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಅವರ ಮುಂದಿನ ಹಂತಗಳ ಬಗ್ಗೆ ಯೋಜಿಸಲು ಅವಕಾಶ ಮಾಡಿಕೊಟ್ಟಿತು. "ಅವರು ಕಣ್ಣೀರು ಹಾಕುತ್ತಾರೆ ಮತ್ತು ತುಂಬಾ ಆತಂಕ ಹೊಂದಿರುತ್ತಾರೆ ಎಂದು ನಾನು ಭಾವಿಸಿದ್ದೆ" ಎಂದು ಸಿಂಡೆ ಹೇಳುತ್ತಾರೆ. "ಆದರೆ ವಾಸ್ತವವಾಗಿ ಅವರ ಮನಸ್ಥಿತಿ ಹೀಗಿತ್ತು: ‘ಧನ್ಯವಾದಗಳು. ನಾವು ನಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯವಾಯಿತು. ನಮಗೆ ಹೀಗೆ ನಮ್ಮ ಕಾಲ ಮೇಲೆ ನಿಲ್ಲಲು ಸಹಾಯ ಮಾಡುವುದಕ್ಕೆ ಒಂದು ಸ್ಥಳ ಸಿಕ್ಕಿದ್ದಕ್ಕೆ ನಮಗೆ ಸಂತೋಷವಾಗಿದೆ." [ಇದು] ಅವರು ತಲೆಯೆತ್ತಿ ನಿಲ್ಲಲು, ಒಮ್ಮೆಗೆ ನೀವು ಇದನ್ನು ಎದುರಿಸಲು ಸಾಧ್ಯವಾದರೆ ನೀವು ಇದನ್ನು ಮೀರಬಹುದು ಎಂದು ಅರಿತುಕೊಳ್ಳಲು ಇದು ಒಂದು ಅವಕಾಶವಾಗಿತ್ತು."

ಒಟ್ಟಿಗೆ ಮರುನಿರ್ಮಾಣ ಮಾಡಿದ್ದು

ಇಂದು, ಮೆಲಿಸ್ಸಾ ಅವರ ಕುಟುಂಬವು ಸಿಂಡೆಯಿಂದ ಸುಮಾರು 20 ನಿಮಿಷಗಳ ದೂರದಲ್ಲಿರುವ ಕಾರ್ಮೈಕಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದೆ. ಅವರು ಸ್ಥಳಾಂತರಗೊಂಡ ಐದು ದಿನಗಳ ನಂತರ ಬೇಬಿ ಅನ್ನೆಟ್ ಜನಿಸಿದಳು ಮತ್ತು ಸಿಂಡೆ ಮತ್ತು ಮೆಲಿಸ್ಸಾ ಆಗಾಗ್ಗೆ ಪಠ್ಯ ಸಂದೇಶದ ಮೂಲಕ ಸಂವಹನ ಮಾಡುತ್ತಾರೆ, ಅಪ್‌ಡೇಟ್‌ಗಳನ್ನು ಮತ್ತು ಮಗುವಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ, ಸಿಂಡೆ ತನ್ನ ಸಣ್ಣ ವ್ಯವಹಾರದಲ್ಲಿ ಉತ್ಪನ್ನ ಶಿಕ್ಷಣವನ್ನು ನೀಡಲು ಮೆಲಿಸ್ಸಾ ಅವರನ್ನು ನೇಮಿಸಿಕೊಂಡರು. ಅಲ್ಲಿ ಅವರು ಮಗುವನ್ನು ನೋಡಿಕೊಳ್ಳುವಾಗ ಅರೆಕಾಲಿಕ ಕೆಲಸ ಮಾಡಬಹುದಾಗಿದೆ. ಮೆಲಿಸ್ಸಾ ಅವರು ಹೇಳುತ್ತಾರೆ, ಸಿಂಡೆ "ಒಬ್ಬ ವಿಶೇಷ ವ್ಯಕ್ತಿ. ಅವರು ನನ್ನ ಜೀವನದ ಅವಿಭಾಜ್ಯ ಅಂಗ. ನಾನು ಅವರ ದಯೆಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ನಮ್ಮ ಜೊತೆಗಿರುತ್ತಾರೆ. ಅವರು ಎಂದಿಗೂ ನಮ್ಮ ಜೊತೆಗಿರುತ್ತಾರೆ ಮತ್ತು ನಮಗೆ ಅಗತ್ಯವಿದ್ದಾಗಲೆಲ್ಲಾ ಸಹಾಯ ಮಾಡುತ್ತಾರೆ."

ಮೆಲಿಸ್ಸಾ ಮತ್ತು ಟ್ರೆವರ್ ಅವರು ಪ್ಯಾರಡೈಸ್‌ನಲ್ಲಿ ಹೇಗೆ ಮತ್ತು ಯಾವಾಗ ಪುನರ್ನಿರ್ಮಾಣ ಮಾಡುವುದು ಎಂದು ಇನ್ನೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ ಹಿಂದಿರುಗುವುದು ಖಂಡಿತವಾಗಿಯೂ ಅವರ ದೀರ್ಘಕಾಲೀನ ಗುರಿಯಾಗಿದೆ. "ನಾನು ಈಗಿನ ಹಾಗೆಯೇ ಅಗ್ನಿ ಅನಾಹುತಕ್ಕೂ ಮೊದಲು ಮನೆಯನ್ನು ನೋಡುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಮೆಲಿಸ್ಸಾ ಹೇಳುತ್ತಾರೆ. "ನನಗೆ ಮನೆ ಎಂಬುದು, ನಿಮ್ಮ ಕುಟುಂಬ ಇರುವ ಸ್ಥಳವಾಗಿದೆ. ನೀವು ಎಲ್ಲಿಯಾದರೂ ಮನೆ ಮಾಡಬಹುದು."

ಅಗತ್ಯವಿರುವ ಸಮಯದಲ್ಲಿ ಹಂಚಿಕೊಳ್ಳುವ ಶಕ್ತಿಯನ್ನು ಅನಾವರಣ ಮಾಡುವ

ಬೆಳೆಯುತ್ತಿರುವ ಸಮುದಾಯಕ್ಕೆಸೇರಿಕೊಳ್ಳಿ.

ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.

ವಿಶೇಷ ಆಕರ್ಷಣೆಗಳು

  • ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ನಂತರ, ಹತ್ತಿರದ ಸಮುದಾಯಗಳಲ್ಲಿನ ಜನರು Airbnb ಯ ಓಪನ್ ಹೋಮ್ಸ್ ಕಾರ್ಯಕ್ರಮದ ಮೂಲಕ ತಾತ್ಕಾಲಿಕ ವಸತಿ ಒದಗಿಸಲು ಸೈನ್ ಅಪ್ ಮಾಡಿಕೊಂಡರು

  • ಮೆಲಿಸ್ಸಾ ಮತ್ತು ಅವರ ಕುಟುಂಬವು ಸ್ಯಾಕ್ರಮೆಂಟೊ ಉದ್ಯಮಿ ಸಿಂಡೆ ಅವರಲ್ಲಿ ಆಶ್ರಯ ಪಡೆದಿದೆ

  • ಸಿಂಡೆ ಅವರ ನೆರೆಹೊರೆಯವರು ಮೆಲಿಸ್ಸಾ ಅವರ ಕುಟುಂಬವನ್ನು ಬೆಂಬಲಿಸಲು ಸಹಾಯ ಮಾಡಿದರು ಮತ್ತು ಮಹಿಳೆಯರು ಸ್ನೇಹಿತರಾದರು

Airbnb
ಮೇ 7, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ