ಸಮುದಾಯದ ಪ್ರತಿಕ್ರಿಯೆ ಈ Airbnb ಅಪ್‌ಡೇಟ್‌ಗಳಿಗೆ ಸ್ಫೂರ್ತಿ ನೀಡಿದೆ
ನಮ್ಮ ಮೇ 2023 ರ ಬಿಡುಗಡೆಯ ನಂತರದಿಂದ, ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳ ಅಗ್ರ ಸಲಹೆಗಳನ್ನು ಆಧರಿಸಿ ನಾವು ಹಲವಾರು ನವೀಕರಣಗಳನ್ನು ಮಾಡಿದ್ದೇವೆ. ಸಿಇಒ ಬ್ರಿಯಾನ್ ಚೆಸ್ಕಿ ಅವರು ಇಂದು ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ. ಹೋಸ್ಟ್‌ಗಳಿಗೆ ಪ್ರಕಟಣೆಯು ಏನನ್ನು ತಿಳಿಸುತ್ತದೆ ಎಂಬುದು ಇಲ್ಲಿದೆ.
ಹುಡುಕಾಟ ಮತ್ತು ಫಿಲ್ಟರ್‌ಗಳು
ಜನಪ್ರಿಯ ದಿನಾಂಕಗಳಲ್ಲಿ ಮನೆಗಳು ಲಭ್ಯವಾಗುವುದು ಕಷ್ಟ ಎಂದು ಗೆಸ್ಟ್‌ಗಳು ಹೇಳಿದ್ದಾರೆ. ಗೆಸ್ಟ್‌ಗಳ ಟ್ರಿಪ್ ಹೊಂದಿಕೊಳ್ಳುವಂತಿದ್ದರೆ ಅವರ ಮಾನದಂಡಗಳನ್ನು ಪೂರೈಸುವ ಹೆಚ್ಚಿನ ಲಿಸ್ಟ್‌ಗಳನ್ನು ಹುಡುಕಾಟ ಫಲಿತಾಂಶಗಳ ಕೆಳಭಾಗದಲ್ಲಿರುವ ಹೊಸ ಕರೋಸೆಲ್ ಸ್ವಯಂಚಾಲಿತವಾಗಿ ತೋರಿಸುತ್ತದೆ. "ಇಂತಹುದೇ ದಿನಾಂಕಗಳಿಗೆ ಲಭ್ಯವಿದೆ" ಎಂಬ ಶೀರ್ಷಿಕೆಯಡಿಯಲ್ಲಿ ಫಲಿತಾಂಶಗಳು ಗೋಚರಿಸುತ್ತವೆ. ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಮೂಲಕ ಆ ಸಮಯದಲ್ಲಿ ಲಭ್ಯತೆ ಇರುವ ಹೋಸ್ಟ್‌ಗಳಿಗೆ ಹೆಚ್ಚಿನ ಬುಕಿಂಗ್‌ಗಳನ್ನು ಪಡೆಯಬಹುದು.
ಹೆಚ್ಚಿನ ವಿನಂತಿಯಂತೆ ಗೆಸ್ಟ್‌ಗಳಿಗೆ ನೆರವಾಗಲು ನಾವು ಕಿಂಗ್-ಸೈಜ್ ಹಾಸಿಗೆಗಳು ಮತ್ತು ಸಾಕುಪ್ರಾಣಿ ಸ್ನೇಹಿ ಮನೆಗಳ ಲಿಸ್ಟಿಂಗ್ ಎಂಬ ಎರಡು ಸರ್ಚ್ ಫಿಲ್ಟರ್‌ಗಳನ್ನು ಸೇರಿಸಿದ್ದೇವೆ. Airbnb ಯಲ್ಲಿನ ಕಾಲು ಭಾಗದಷ್ಟು ಲಿಸ್ಟಿಂಗ್‌ಗಳು ಸಾಕುಪ್ರಾಣಿಗಳನ್ನು ಅನುಮತಿಸುತ್ತವೆ ಮತ್ತು 1 ದಶಲಕ್ಷಕ್ಕೂ ಹೆಚ್ಚು ಜನರು ಕಿಂಗ್-ಸೈಜ್ ಬೆಡ್‌ಗಳನ್ನು ನೀಡುತ್ತಾರೆ. ನಿಮ್ಮ ಸೌಕರ್ಯಗಳಲ್ಲಿ ಸಾಕುಪ್ರಾಣಿಗಳ ಅನುಮತಿ ಅಥವಾ ಕಿಂಗ್-ಸೈಜ್ ಹಾಸಿಗೆಯ ಲಭ್ಯತೆಯನ್ನು ಸೇರಿಸುತ್ತಾ ನಿಮ್ಮ ಮನೆಯ ನಿಯಮಗಳನ್ನು ಅಪ್‌ಡೇಟ್ ಮಾಡುವುದಾರೆ ಈ ವೈಶಿಷ್ಟ್ಯಗಳ ಹುಡುಕಾಟದಲ್ಲಿ ನಿಮ್ಮ ಲಿಸ್ಟಿಂಗ್ ಕಂಡುಬರುತ್ತದೆ
ದರದ ಪಾರದರ್ಶಕತೆ
ಡಿಸೆಂಬರ್ 2022 ರಲ್ಲಿ ನಾವು ಆರಂಭಿಸಿದಾಗಿನಿಂದ ಪಟ್ಟು ದರ ಡಿಸ್‌ಪ್ಲೇಯನ್ನು ಬಳಸಿಕೊಂಡು 8 ಮಿಲಿಯನ್‌ಗೂ ಅಧಿಕ ಗೆಸ್ಟ್‌ಗಳು ಪ್ರಯಾಣವನ್ನು ಬುಕ್ ಮಾಡಿದ್ದಾರೆ. ಒಟ್ಟು ದರಗಳಲ್ಲಿ ಆಯ್ಕೆ ಮಾಡಿರುವ ಟ್ರಿಪ್ ದಿನಾಂಕಗಳಿಗಾಗಿ ರಾತ್ರಿ ವಾಸ್ತವ್ಯದ ದರ ಮತ್ತು ತೆರಿಗೆಗೆ ಮುಂಚಿನ ಎಲ್ಲ ಸೇವಾ ಶುಲ್ಕಗಳು ಸೇರಿರುತ್ತವೆ. (ಸ್ಥಳೀಯ ನಿಬಂಧನೆಗಳಿಂದ ಅಗತ್ಯಪಡಿಸಿರುವಲ್ಲಿ ತೆರಿಗೆಗಳನ್ನು ಸೇರಿಸಲಾಗುತ್ತದೆ.) ಗೆಸ್ಟ್‌ಗಳು ತಮ್ಮ ಟ್ರಿಪ್‌ಗಾಗಿ ಎಷ್ಟು ಪಾವತಿಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ.
ಕೆಲವು ಹೋಸ್ಟ್‌ಗಳು ಬೇಡಿಕೆಯನ್ನು ಪೂರೈಸಲು ತಮ್ಮ ಒಟ್ಟೂ ದರಗಳನ್ನು ಹೊಂದಾಣಿಕೆ ಮಾಡುತ್ತಾರೆ. 2022 ರಲ್ಲಿ ನಾಲ್ಕು ಪಟ್ಟು ನವೀಕರಣಗೊಂಡ ದರಗಳೊಂದಿಗಿನ ಲಿಸ್ಟಿಂಗ್‌ಗಳು ಬದಲಾಗದೆ ಇದ್ದ ಬೆಲೆಗಳೊಂದಿಗಿನ ಲಿಸ್ಟಿಂಗ್‌ಗಳಿಗಿಂತ ಕಳೆದ ವರ್ಷ 30% ಹೆಚ್ಚು ರಾತ್ರಿಗಳ ಬುಕಿಂಗ್ ಪಡೆದುಕೊಂಡವು..*
ಇತ್ತೀಚಿನ Airbnb ಡೇಟಾವು ಇವುಗಳನ್ನೂ ತೋರಿಸುತ್ತಿದೆ:
ಜುಲೈ 2023 ರಲ್ಲಿ Airbnb ಯಲ್ಲಿ ಒಂದು ಬೆಡ್‌ರೂಮ್ ಸ್ಥಳದ ಬೆಲೆಯು ಜುಲೈ 2022 ಕ್ಕಿಂತ 1% ಕಡಿಮೆಯಾಗಿತ್ತು. ವಾಣಿಜ್ಯ ರಿಯಲ್ ಎಸ್ಟೇಟ್ ಮಾಹಿತಿಯನ್ನು ಒದಗಿಸುವ ಪ್ರಮುಖ ಸಂಸ್ಥೆ, CoStar ಪ್ರಕಾರ ಅದೇ ಅವಧಿಯಲ್ಲಿ, ವಿಶ್ವಾದ್ಯಂತ ಹೋಟೆಲ್ ರೂಮ್ ದರಗಳು 10% ಏರಿಕೆಯಾಗಿವೆ.
260,000 ಕ್ಕೂ ಹೆಚ್ಚಿನ ಲಿಸ್ಟಿಂಗ್‌ಗಳ ಹೋಸ್ಟ್‌ಗಳು ಜನವರಿ 1, 2023 ರಿಂದ ತಮ್ಮ ಶುಚಿಗೊಳಿಸುವಿಕೆಯ ಸೇವಾ ಶುಲ್ಕಗಳನ್ನು ತೆಗೆದುಹಾಕಿದ್ದಾರೆ ಅಥವಾ ಕಡಿಮೆ ಮಾಡಿದ್ದಾರೆ. ಇದು ಪ್ರಸ್ತುತ Airbnb ಯಲ್ಲಿ ಶುಚಿಗೊಳಿಸುವಿಕೆಯ ಸೇವಾ ಶುಲ್ಕವನ್ನು ಹೊಂದಿಲ್ಲದ 3 ಮಿಲಿಯನ್ ಲಿಸ್ಟಿಂಗ್‌ಗಳಿಗೆ ಹೆಚ್ಚುವರಿಯಾಗಿದೆ.
ನಿಮ್ಮ ಕ್ಯಾಲೆಂಡರ್‌ನಲ್ಲಿನ ದರ ನಿಗದಿ ಟೂಲ್‌ಗಳು ನಿಮ್ಮ ಪ್ರದೇಶದಲ್ಲಿನ ಟ್ರೆಂಡ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಬಲ್ಲವು. ಸಮೀಪದ ಸ್ಥಳಗಳ ಅದೇ ರೀತಿಯ ಲಿಸ್ಟಿಂಗ್‌ಗಳ ಸರಾಸರಿ ದರಗಳನ್ನು ನೀವು ಹೋಲಿಕೆ ಮಾಡಬಹುದು ಮತ್ತು ನೀವು ಬಯಸುವ ಯಾವುದೇ ಸಮಯದಲ್ಲಿ ನಿಮ್ಮ ದರ, ರಿಯಾಯಿತಿಗಳು ಅಥಾವಾ ಶುಚಿಗೊಳಿಸುವಿಕೆಯ ಸೇವಾ ಶುಲ್ಕವನ್ನು ಅಪ್‌ಡೇಟ್ ಮಾಡಬಹುದು.
ನಮ್ಮ ಕಲಿಕಾ ಸರಣಿಗಳಲ್ಲಿ ನಿಮ್ಮ ದರನಿಗದಿ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಸಲಹೆಗಳನ್ನು ಪಡೆಯಿರಿ.
ಗ್ರಾಹಕ ಸೇವೆ
ಸಮುದಾಯ ಬೆಂಬಲಕ್ಕೆ ಕರೆ ಮಾಡುವಾಗ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಕಡಿಮೆ ಕಾಯುವ ಸಮಯ ಮತ್ತು ವೇಗದ ರೆಸಲ್ಯೂಶನ್‌ಗಳನ್ನು ಬಯಸುತ್ತಾರೆ. ನೀವು ಮೊದಲ ಬಾರಿಗೆ ಕರೆ ಮಾಡಿದಾಗ, ವಿಳಂಬವಿಲ್ಲದೆ ಉತ್ತಮ ಗ್ರಾಹಕ ಸೇವೆಯನ್ನು ಸತತವಾಗಿ ನೀಡುವುದು ನಮ್ಮ ಗುರಿಯಾಗಿದೆ.
ಈ ಬೇಸಿಗೆಯಲ್ಲಿ, ನಾವು ಇಂಗ್ಲಿಷ್ ಮತ್ತು ಇತರ ಒಂಬತ್ತು ಭಾಷೆಗಳಲ್ಲಿ ಎರಡು ನಿಮಿಷಗಳಲ್ಲಿ 94% ಕರೆಗಳಿಗೆ ಉತ್ತರಿಸಿದ್ದೇವೆ.** ನವೆಂಬರ್‌ನಿಂದ, ನಿಮ್ಮ ನಿರ್ದಿಷ್ಟ ಸಮಸ್ಯೆಯನ್ನು ವೇಗವಾಗಿ ಪರಿಹರಿಸಲು ನಾವು ನಿಮ್ಮನ್ನು ಉತ್ತಮ ಏಜೆಂಟ್‌ನೊಂದಿಗೆ ಹೊಂದಾಣಿಕೆ ಮಾಡಲು ಪ್ರಾರಂಭಿಸುತ್ತೇವೆ. ನಿಮಗೆ ಬೆಂಬಲ ನೀಡುವವರಿಗೆ ನಿಮ್ಮ ಸಂಪೂರ್ಣ ಕೇಸ್ ಇತಿಹಾಸವನ್ನು ಒದಗಿಸಲಾಗುತ್ತದೆ, ಇದರಿಂದ ನೀವು ಎಲ್ಲಾವನ್ನೂ ಪುನಃ ತಿಳಿಸುವ ಅಗತ್ಯವಿರುವುದಿಲ್ಲ.
ದೃಢೀಕರಿಸಿದ ಲಿಸ್ಟಿಂಗ್‌ಗಳು
ತಾವು ಕಾಯ್ದಿರಿಸಿದ ಬೀಚ್‌ಫ್ರಂಟ್ ಬಂಗಲೆ ವಾಸ್ತವದಲ್ಲಿ ಕಡಲತೀರದಲ್ಲಿಯೇ ಇದೆಯೇ ಎಂದು ಗೆಸ್ಟ್‌ಗಳು ಚಿಂತಿಸಲು ಬಯಸುವುದಿಲ್ಲ. ತಪ್ಪಾದ ಮತ್ತು ನಕಲಿ ಲಿಸ್ಟಿಂಗ್‌ಗಳು Airbnb ಮೇಲಿನ ಭರವಸೆಯನ್ನು ಹಾಳುಮಾಡುತ್ತದೆ ನಮ್ಮ ಇಡೀ ಸಮುದಾಕ್ಕೆ ಧಕ್ಕೆಯನ್ನು ತರುತ್ತದೆ.
ಈ ವರ್ಷದ ಕೊನೆಯಲ್ಲಿ ಯುಎಸ್, ಕೆನಡಾ, ಆಸ್ಟ್ರೇಲಿಯಾ, ಯುಕೆ ಮತ್ತು ಫ್ರಾನ್ಸ್‌ನಲ್ಲಿನ ಪ್ರತಿ ಲಿಸ್ಟಿಂಗ್‌ನ ಸ್ಥಳವನ್ನು ಪರಿಶೀಲಿಸಲು ನಾವು ಪ್ರಾರಂಭಿಸುತ್ತೇವೆ, ನಂತರ ಮುಂದಿನ ಶರತ್ಕಾಲದಲ್ಲಿ ಇನ್ನೂ 30 ದೇಶಗಳನ್ನು ಆವರಿಸುತ್ತೇವೆ. ಫೆಬ್ರವರಿ 2024 ರಿಂದ ಪರಿಶೀಲಿಸಿದ ಲಿಸ್ಟಿಂಗ್‌ಗಳ ಪುಟಗಳಲ್ಲಿ ಬ್ಯಾಡ್ಜ್‌ಗಳು ಗೋಚರಿಸಲು ಪ್ರಾರಂಭಿಸುತ್ತವೆ.
ಹೆಚ್ಚಿನ ಲಿಸ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಈ ಸಮಯದಲ್ಲಿ ಹೋಸ್ಟ್‌ಗಳು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ನಮಗೆ ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದರೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.
ನವೆಂಬರ್‌ನಲ್ಲಿ ಬರಲಿರುವ ಹೆಚ್ಚಿನ ಹೊಸ ವೈಶಿಷ್ಟ್ಯಗಳಿಗಾಗಿ ನಿರೀಕ್ಷಿಸಿ.
*ಈ ಮಾಹಿತಿಯು, 2022ರ ಜನವರಿಯಿಂದ ಡಿಸಂಬರ್‌ವರೆಗೆ ಒಂದು ಅಥವಾ ಹೆಚ್ಚಿನ ರಾತ್ರಿಗಳು ಲಭ್ಯವಿರುವ ಮತ್ತು ಸ್ಮಾರ್ಟ್ ಬೆಲೆಯನ್ನು ಅಳವಡಿಸದ ವಿಶ್ವಾದ್ಯಂತ (ಚೀನಾ, ಬೆಲಾರುಸ್, ರಷ್ಯಾ ಮತ್ತು ಉಕ್ರೇನ್ ಹೊರತುಪಡಿಸಿ) ಲಿಸ್ಟಿಂಗ್‌ಗಳನ್ನು ಆಧರಿಸಿದೆ. ಇನ್ನೂ ಹೆಚ್ಚಿನ ಅಂಶಗಳು ಬುಕ್ ಮಾಡಿದ ರಾತ್ರಿಗಳ ಮೇಲೆ ಪರಿಣಾಮ ಬೀರುತ್ತವೆ.
** ಇತರ ಭಾಷೆಗಳು ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಮ್ಯಾಂಡರಿನ್, ಕೊರಿಯನ್ ಮತ್ತು ಜಪಾನೀಸ್.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.