ಪ್ರಯಾಣಕ್ಕೆ ಸುರಕ್ಷಿತವಾಗಿ ಹಿಂತಿರುಗುವಿಕೆ

ಕೋವಿಡ್-19 ಮತ್ತು ಇತರ ಬಿಕ್ಕಟ್ಟುಗಳಸಂದರ್ಭ ಪ್ರಯಾಣ ನಡೆಸುವುದಕ್ಕಾಗಿ ಇತ್ತೀಚಿನ ಸಲಹೆಗಳೊಂದಿಗೆ ಅಪ್‌ ಟು ಡೇಟ್ ಆಗಿರಿ.
ವಿಕಸಿಸುತ್ತಿರುವ ಪ್ರೋಗ್ರಾಂಗಳು ಮತ್ತು ನೀತಿಗಳೊಂದಿಗೆ ನಾವು ನಿಮ್ಮನ್ನು ಹೇಗೆ ಬೆಂಬಲಿಸುತ್ತಿದ್ದೇವೆ ಎಂಬುದನ್ನು ತಿಳಿಯಿರಿ.
ನಿಮ್ಮ ಪ್ರದೇಶ ಅಥವಾ ತಲುಪಬೇಕಾದ ಸ್ಥಳದಲ್ಲಿರುವ ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳ ಮಾರ್ಗಸೂಚಿಗಳನ್ನು ಪರಿಶೀಲಿಸಿ.
ನಿಮ್ಮ ರದ್ದತಿ ಮತ್ತು ಮರುಪಾವತಿ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದು.
ರದ್ದತಿ ಅನುಕೂಲತೆಯೊಂದಿಗೆ ವಾಸ್ತವ್ಯಕ್ಕಾಗಿ ಫಿಲ್ಟರ್ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

ಸುರಕ್ಷತೆಯು ಹಂಚಿಕೆಯ ಜವಾಬ್ದಾರಿಯಾಗಿದೆ

ನಮ್ಮ COVID-19 ಆರೋಗ್ಯ ಮತ್ತು ಸುರಕ್ಷತಾ ಅಭ್ಯಾಸಗಳನ್ನು ಅನುಸರಿಸುವಂತೆ ನಾವು Airbnb ಸಮುದಾಯವನ್ನು ಕೇಳುತ್ತಿದ್ದೇವೆ.

ಮಾಸ್ಕ್ ಧರಿಸುವುದು

ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳು ಸಂವಹನ ನಡೆಸುವಾಗ ಮಾಸ್ಕ್‌ಗಳನ್ನು ಧರಿಸುವುದಕ್ಕೆ ಸಂಬಂಧಿಸಿದ ಸ್ಥಳೀಯ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಸಾಮಾಜಿಕ ಅಂತರ

ಸ್ಥಳೀಯ ಕಾನೂನುಗಳು ಅಥವಾ ಮಾರ್ಗಸೂಚಿಗಳ ಅನುಸಾರ ಅಗತ್ಯವಿರುವಾಗ, ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಪರಸ್ಪರರಿಂದ 6 ಅಡಿ (2 ಮೀಟರ್‌ಗಳು) ದೂರವನ್ನು ಕಾಯ್ದುಕೊಳ್ಳಲು ಒಪ್ಪಿಕೊಳ್ಳಬೇಕು.

ಸುಧಾರಿತ ಶುಚಿಗೊಳಿಸುವಿಕೆ

ಹೋಸ್ಟ್‌ಗಳು ನಮ್ಮ ತಜ್ಞರ ಬೆಂಬಲಿತ, ಐದು-ಹಂತದ ವರ್ಧಿತ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸಬೇಕು.

ಪ್ರತಿ ವಾಸ್ತವ್ಯಕ್ಕೂ ಉನ್ನತ ಮಾನದಂಡಗಳು

ನಮ್ಮ ತಜ್ಞರಿಂದ ಬೆಂಬಲಿತವಾದ, ಐದು ಹಂತಗಳ ಸುಧಾರಿತ ಸ್ವಚ್ಛಗೊಳಿಸುವಿಕೆಯ ಪ್ರಕ್ರಿಯೆಯು ಸಾಮಾನ್ಯ ಸ್ವಚ್ಛಗೊಳಿಸುವಿಕೆಯನ್ನು ಮೀರುವಂತಹದ್ದಾಗಿದೆ ಮತ್ತು ನಮ್ಮ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಲು ಹೋಸ್ಟ್‌ಗಳು ತೆಗೆದುಕೊಳ್ಳಬಹುದಾದ ಪ್ರಮುಖ ಹೆಜ್ಜೆಯಾಗಿದೆ.

ಖಾಸಗಿ ಸ್ಥಳ, ಜನಸಂದಣಿಯಿಂದ ದೂರ

ಖಾಸಗಿ ಮನೆಗಳು. ಸಂಪರ್ಕವಿಲ್ಲದ ಚೆಕ್‌-ಇನ್‌ಗಳು. ವಿಶಾಲವಾದ ಹೊರಾಂಗಣ ಸ್ಥಳಗಳು. ಗಾಳಿಯಾಡುವಂತಹ ಕೋಣೆ. ನಿಮಗೆ ಅತ್ಯಂತ ಅಗತ್ಯವಿರುವ ಸೌಲಭ್ಯಗಳೊಂದಿಗೆ ಉಳಿದುಕೊಳ್ಳುವ ಸ್ಥಳಗಳನ್ನು ಹುಡುಕಿ.

ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ

ಇತರೆ ಸಂಪನ್ಮೂಲಗಳು