
ಸೂಪರ್‌ಹೋಸ್ಟ್: ಆತಿಥ್ಯದಲ್ಲಿ ಅತ್ಯುತ್ತಮವಾದುದನ್ನು ಗುರುತಿಸುವುದು
ಸೂಪರ್‌ಹೋಸ್ಟ್ ಪ್ರೋಗ್ರಾಂ Airbnb ಯ ಅಗ್ರ-ಶ್ರೇಯಾಂಕಿತ ಮತ್ತು ಅತ್ಯಂತ ಅನುಭವಿ ಹೋಸ್ಟ್‌ಗಳನ್ನು ಗೌರವಿಸುತ್ತದೆ ಮತ್ತು ಪುರಸ್ಕರಿಸುತ್ತದೆ.
ನಿಮ್ಮ ಪ್ರಗತಿಯನ್ನು ಪರಿಶೀಲಿಸಿ
ಸೂಪರ್ ಹೋಸ್ಟ್ ಪ್ರಯೋಜನಗಳು
ಸೂಪರ್‌ಹೋಸ್ಟ್ ಆಗಿ, ನೀವು ಹೆಚ್ಚು ಗೋಚರತೆ, ಗಳಿಸುವ ಸಾಮರ್ಥ್ಯ ಮತ್ತು ಅನನ್ಯ ಪುರಸ್ಕಾರಗಳನ್ನು ಹೊಂದಿರುತ್ತೀರಿ. ಇದು ನಿಮ್ಮ ಅಸಾಧಾರಣ ಆತಿಥ್ಯಕ್ಕೆ ನಾವು ಧನ್ಯವಾದ ಸಲ್ಲಿಸುವ ವಿಧಾನವಾಗಿದೆ.

ಹೆಚ್ಚು ಗೆಸ್ಟ್‌ಗಳನ್ನು ಸ್ವಾಗತಿಸಿ
ಗೆಸ್ಟ್‌ಗಳು ಗಮನ ನೀಡುವುದರಿಂದ ಸೂಪರ್‌ಹೋಸ್ಟ್‌ಗಳಿಗೆ ಇನ್ನಷ್ಟು ಬುಕಿಂಗ್‌ಗಳು ದೊರೆಯಬಹುದು — ಮತ್ತು ಅವರ ಕಿಸೆಗೆ ಇನ್ನಷ್ಟು ಹಣ ಸೇರಬಹುದು.

ವಿಶೇಷ ಮನ್ನಣೆಯನ್ನು ಪಡೆಯಿರಿ
ಸೂಪರ್‌ಹೋಸ್ಟ್‌ಗಳು ಅತ್ಯುತ್ತಮರು ಎಂದು ಗೆಸ್ಟ್‌ಗಳು ನಂಬುತ್ತಾರೆ. ಇನ್ನಷ್ಟು ಎದ್ದುಕಾಣುವಂತೆ ಮಾಡಲು ನಮ್ಮ ಪ್ರಮೋಷನಲ್ ಇಮೇಲ್‌ಗಳು ಮತ್ತು ಸೂಪರ್‌ಹೋಸ್ಟ್ ಬ್ಯಾಡ್ಜ್‌ಗಳು ಸಹಾಯ ಮಾಡುತ್ತವೆ.

ವಿಶೇಷ ಪುರಸ್ಕಾರಗಳನ್ನು ನಿಮ್ಮದಾಗಿಸಿಕೊಳ್ಳಿ
ತಮ್ಮ ಸ್ಟೇಟಸ್ ಉಳಿಸಿಕೊಳ್ಳುವ ಸೂಪರ್‌ಹೋಸ್ಟ್‌ಗಳು ಪ್ರತಿ ವರ್ಷ $100 Airbnb ಕೂಪನ್ ಗಳಿಸುತ್ತಾರೆ. ಮತ್ತು ಹೊಸ ಹೋಸ್ಟ್‌ಗೆ ಸೈನ್ ಅಪ್ ಮಾಡಲು ಅವರು ರೆಫರ್ ಮಾಡಿದಾಗ, ಸಾಮಾನ್ಯ ರೆಫರಲ್ ಬೋನಸ್ ಜೊತೆಗೆ ಸೂಪರ್‌ಹೋಸ್ಟ್‌ಗಳು 20% ಹೆಚ್ಚುವರಿ ಪಡೆಯುತ್ತಾರೆ.
ಸೂಪರ್‌ಹೋಸ್ಟ್ ಆಗುವುದು ಹೇಗೆ
ಪ್ರತಿ 3 ತಿಂಗಳಿಗೊಮ್ಮೆ, ಕಳೆದ ವರ್ಷ ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದ್ದೀರಾ ಎಂದು ನಾವು ಪರೀಕ್ಷಿಸುತ್ತೇವೆ.* ನೀವು ಮಾಡಿದ್ದರೆ, ನೀವು ಸೂಪರ್‌ಹೋಸ್ಟ್ ಸ್ಟೇಟಸ್ ಪಡೆಯುತ್ತೀರಿ ಅಥವಾ ಉಳಿಸಿಕೊಳ್ಳುತ್ತೀರಿ.

4.8+ ಒಟ್ಟಾರೆ ರೇಟಿಂಗ್
ಕಳೆದ ವರ್ಷದಲ್ಲಿ ತಮ್ಮ Airbnb ಗೆಸ್ಟ್‌ಗಳ ವಿಮರ್ಶೆಗಳ ಆಧಾರದಲ್ಲಿ ಸೂಪರ್‌ಹೋಸ್ಟ್‌ಗಳು 4.8 ಅಥವಾ ಹೆಚ್ಚಿನ ಒಟ್ಟಾರೆ ರೇಟಿಂಗ್ ಹೊಂದಿರುತ್ತಾರೆ. ತಮ್ಮ ಹೋಸ್ಟ್‌ಗಳಿಂದ ಅಸಾಧಾರಣ ಆತಿಥ್ಯವನ್ನು ನಿರೀಕ್ಷಿಸಬಹುದು ಎನ್ನುವುದು ಗೆಸ್ಟ್‌ಗಳಿಗೆ ತಿಳಿದಿರುತ್ತದೆ.

10+ ವಾಸ್ತವ್ಯಗಳು
ಸೂಪರ್‌ಹೋಸ್ಟ್‌ಗಳು ಕಳೆದ ವರ್ಷ ಕನಿಷ್ಠ 10 ವಾಸ್ತವ್ಯಗಳನ್ನು ಅಥವಾ ಕನಿಷ್ಠ 3 ಪೂರ್ಣಗೊಳಿಸಿದ ವಾಸ್ತವ್ಯಗಳಲ್ಲಿ 100 ರಾತ್ರಿಗಳನ್ನು ಪೂರೈಸಿರುತ್ತಾರೆ. ಅನುಭವಿ ಹೋಸ್ಟ್‌ನೊಂದಿಗೆ ನಿಮ್ಮ ಗೆಸ್ಟ್‌ಗಳು ವಾಸ್ತವ್ಯ ಹೂಡಲು ಆತ್ಮವಿಶ್ವಾಸಿಯಾಗಿರಬಹುದು.

<1% ರದ್ದತಿ ಶುಲ್ಕ
ಆಕಸ್ಮಿಕ ಪರಿಸ್ಥಿತಿಗಳನ್ನು ಹೊರತುಪಡಿಸಿ, ಸೂಪರ್‌ಹೋಸ್ಟ್‌ಗಳು 1% ಗಿಂತ ಕಡಿಮೆ ಸಮಯ ರದ್ದುಗೊಳಿಸುತ್ತಾರೆ. ಅಂದರೆ ವರ್ಷದಲ್ಲಿ 100 ರಿಸರ್ವೇಶನ್‌ಗಳಿಗಿಂತ ಕಡಿಮೆ ಇರುವ ಹೋಸ್ಟ್‌ಗಳಿಗೆ 0 ರದ್ದತಿಗಳು. ವಿರಳವಾದ ರದ್ದತಿಗಳು ಅಂದರೆ ಗೆಸ್ಟ್‌ಗಳಿಗೆ ನೆಮ್ಮದಿ ಎಂದರ್ಥ.

90% ಪ್ರತಿಕ್ರಿಯೆ ದರ
ಸೂಪರ್‌ಹೋಸ್ಟ್‌ಗಳು 24 ಗಂಟೆಗಳ ಒಳಗೆ 90% ಹೊಸ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಾರೆ. ಗೆಸ್ಟ್‌ಗಳು ನಿಮಗೆ ಪ್ರಶ್ನೆಗಳನ್ನು ಕೇಳಿದಾಗ, ಒಂದು ಸಂದೇಶ ಕಳುಹಿಸುವ ಮೂಲಕ ತ್ವರಿತ ಪ್ರತಿಕ್ರಿಯೆ ನೀಡಬಹುದು ಎನ್ನುವುದು ಅವರಿಗೆ ತಿಳಿದಿರುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ
ತುರ್ತು ಪರಿಸ್ಥಿತಿಯಿಂದಾಗಿ ನಾನು ರದ್ದುಗೊಳಿಸಬೇಕಾದರೆ ಏನು ಮಾಡಬೇಕು?
ತುರ್ತು ಅಥವಾ ಅನಿವಾರ್ಯ ಕಾರಣದಿಂದ ನೀವು ಒಂದು ರಿಸರ್ವೇಶನ್ ರದ್ದುಗೊಳಿಸಬೇಕಾದರೆ, ಕಾರಣವನ್ನು ಒಂದು ಆಕಸ್ಮಿಕ ಪರಿಸ್ಥಿತಿಗಳಡಿ ಒಳಗೊಳ್ಳಲಾಗಿದೆಯೇ ಎಂದು ಪರೀಕ್ಷಿಸಿ. ಒಳಗೊಂಡಿದ್ದರೆ, ಯಾವುದೇ ದಂಡಗಳನ್ನು ವಿನಾಯಿತಿಗೊಳಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ರದ್ದತಿಯು ನಿಮ್ಮ ಸೂಪರ್‌ಹೋಸ್ಟ್ ಅರ್ಹತೆಯ ವಿರುದ್ಧ ಪರಿಗಣಿಸಲ್ಪಡುವುದಿಲ್ಲ.Airbnb ಯ ಆಕಸ್ಮಿಕ ಪರಿಸ್ಥಿತಿಗಳ ನೀತಿಯ ಕುರಿತು ತಿಳಿದುಕೊಳ್ಳಿ.
ನೀವು ರಿಸರ್ವೇಶನ್ ರದ್ದುಗೊಳಿಸಿದ ಬಳಿಕ 14 ದಿನಗಳ ಒಳಗೆ (ಅಥವಾ ನಿಮ್ಮ ಮುಂದಿನ ಗೆಸ್ಟ್ ಆಗಮಿಸುವ ದಿನಕ್ಕಿಂತ ಮುಂಚೆ) ಕ್ಲೇಮ್ ಫೈಲ್ ಮಾಡಲು Airbnb ಸಂಪರ್ಕಿಸುವುದನ್ನು ಖಚಿತಪಡಿಸಿಕೊಳ್ಳಿ. ವಿಮರ್ಶಿಸಲು Airbnb ಗೆ ನೀವು ಡಾಕ್ಯುಮೆಂಟೇಶನ್ ಸಲ್ಲಿಸಬೇಕಾಗಬಹುದು.ಸೂಪರ್‌ಹೋಸ್ಟ್ ಆಗಲು ನಾನು ಕನಿಷ್ಟ ಒಂದು ವರ್ಷ ಹೋಸ್ಟಿಂಗ್ ಮಾಡಬೇಕೇ?
ಸೂಪರ್‌ಹೋಸ್ಟ್ ಆಗಲು ಕನಿಷ್ಟ ಅವಧಿ ಇಲ್ಲ. ಮೌಲ್ಯಮಾಪನದ ಅವಧಿಯಲ್ಲಿ (ಇದನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸಲಾಗುತ್ತದೆ) ನೀವು ಮಾನದಂಡವನ್ನು ಪೂರೈಸುವವರೆಗೆ, ನೀವು ಸೂಪರ್‌ಹೋಸ್ಟ್ ಸ್ಟೇಟಸ್ ಗಳಿಸಬಹುದು
ನೀವು ಸೂಪರ್‌ಹೋಸ್ಟ್ ಮಾನದಂಡವನ್ನು ಪೂರೈಸಿದ್ದೀರಿ ಎಂಬುದನ್ನು ಪ್ರತಿ ಬಾರಿ ನಾವು ಗಮನಿಸಿದಾಗ, ನಿಮ್ಮ ಕಾರ್ಯಕ್ಷಮತೆಯನ್ನು ವಿಮರ್ಶಿಸಲು ನಿಮ್ಮ ಹಿಂದಿನ ವರ್ಷದ ಹೋಸ್ಟಿಂಗ್ ಅನ್ನು ನಾವು ಪರಿಶೀಲಿಸುತ್ತೇವೆ.ನಾನು ಅರ್ಜಿ ಸಲ್ಲಿಸಬೇಕೇ?
ಮೌಲ್ಯಮಾಪನದ ದಿನಾಂಕದಂದು ನೀವು ಪ್ರೋಗ್ರಾಂ ಅಗತ್ಯಗಳನ್ನು ಪೂರೈಸಿದರೆ, ನೀವು ಸ್ವಯಂಚಾಲಿತವಾಗಿ ಸೂಪರ್‌ಹೋಸ್ಟ್ ಆಗುತ್ತೀರಿ—ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ.ಸೂಪರ್‌ಹೋಸ್ಟ್ ಆಗುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಪ್ರತಿ ಮೌಲ್ಯಮಾಪನ ಅವಧಿಯ ಕೊನೆಗೆ ನಾವು ನಿಮಗೆ ಸೂಚನೆ ನೀಡುತ್ತೇವೆ. ನಿಮ್ಮ ಲಿಸ್ಟಿಂಗ್ನಲ್ಲಿ ನಿಮ್ಮ ಸೂಪರ್‌ಹೋಸ್ಟ್ ಬ್ಯಾಡ್ಜ್ ಕಾಣಿಸಲು 1 ವಾರದವರೆಗೆ ತೆಗೆದುಕೊಳ್ಳಬಹುದು.